ExpEYES/C2/Conductivity-of-ionic-solutions/Kannada
From Script | Spoken-Tutorial
Revision as of 08:32, 14 October 2016 by Sandhya.np14 (Talk | contribs)
Time | Narration |
00:01 | ನಮಸ್ಕಾರ. Conductivity of ionic solutions ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
ಕಲಿಯುವೆವು. |
00:15 | ಇಲ್ಲಿ ನಾನು:
|
00:23 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು:
ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:35 | ಮೊದಲು, ನಾವು ದ್ರಾವಣದ ‘ಕಂಡಕ್ಟಿವಿಟಿ’ಯನ್ನು (ವಿದ್ಯುತ್ ವಾಹಕತ್ವ) ವ್ಯಾಖ್ಯಾನಿಸೋಣ. |
00:38 | ದ್ರಾವಣದ ‘ಕಂಡಕ್ಟಿವಿಟಿ’ ಯು ಅದು ತನ್ನ ಮೂಲಕ ವಿದ್ಯುತ್ತನ್ನು ಹರಿಸುವ ಸಾಮರ್ಥ್ಯದ ಅಳತೆಯಾಗಿದೆ. |
00:44 | ನೀರಿನ ‘ಕಂಡಕ್ಟಿವಿಟಿ’ಯು ಅದರಲ್ಲಿ ಕರಗಿದ ಅಯಾನುಗಳ ಸಾಂದ್ರತೆಗೆ ನೇರವಾಗಿ ಸಂಬಂಧಿಸಿದೆ. |
00:51 | ಈಗ ನಾವು ನಳದ ನೀರಿನ ‘ಕಂಡಕ್ಟಿವಿಟಿ’ಯನ್ನು (ವಾಹಕತ್ವ) ತೋರಿಸುತ್ತೇವೆ. |
00:56 | ನಾನು ಸರ್ಕೀಟ್ ಕನೆಕ್ಷನ್ ಗಳನ್ನು ವಿವರಿಸುವೆನು. A1 ಅನ್ನು SINEಗೆ ಜೋಡಿಸಲಾಗಿದೆ. |
01:02 | SINE ಹಾಗೂ A2 ಗಳ ತಂತಿಗಳನ್ನು (wires) ನಳದ ನೀರನ್ನು ಹೊಂದಿರುವ ಗಾಜಿನ ಲೋಟದಲ್ಲಿ ಮುಳುಗಿಸಲಾಗಿದೆ. |
01:08 | ಒಂದು 10K ರೆಜಿಸ್ಟರನ್ನು A2 ಹಾಗೂ GND ಗಳ ನಡುವೆ ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
01:16 | ನಾವು ಪರಿಣಾಮವನ್ನು 'ಪ್ಲಾಟ್ ವಿಂಡೋ'ದ ಮೇಲೆ ನೋಡೋಣ. |
01:20 | 'ಪ್ಲಾಟ್ ವಿಂಡೋ'ದಲ್ಲಿ, A1 ನ ಮೇಲೆ ಕ್ಲಿಕ್ ಮಾಡಿ ಮತ್ತು CH1 ಗೆ ಎಳೆಯಿರಿ. A1 ಅನ್ನು CH ಗೆ ನಿಗದಿಪಡಿಸಲಾಗಿದೆ. |
01:28 | A2 ದ ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆಯಿರಿ.
A2 ಅನ್ನು CH2 ಗೆ ಅಸೈನ್ ಮಾಡಲಾಗಿದೆ (ನಿಗದಿಪಡಿಸಲಾಗಿದೆ). |
01:35 | ತರಂಗಗಳನ್ನು ಸರಿಹೊಂದಿಸಲು mSec/div ಎಂಬ ಸ್ಲೈಡರನ್ನು ಬಳಸಿ. ಎರಡು sine ಅಲೆಗಳನ್ನು ರಚಿಸಲಾಗಿದೆ. |
01:43 | ಕಪ್ಪು ಬಣ್ಣದ್ದು ಮೂಲ sine ತರಂಗವಾಗಿದ್ದು, ಕೆಂಪು ಬಣ್ಣದ ತರಂಗವು ನಳದ ನೀರಿನ ‘ಕಂಡಕ್ಟಿವಿಟಿ’ ಯಾಗಿದೆ. |
01:50 | CH1 ಮೇಲೆ ಕ್ಲಿಕ್ ಮಾಡಿ ಹಾಗೂ FIT ಗೆ ಎಳೆಯಿರಿ. CH2ಮೇಲೆ ಕ್ಲಿಕ್ ಮಾಡಿ ಹಾಗೂ FIT ಗೆ ಎಳೆಯಿರಿ. |
01:56 | ವಿಂಡೋದ ಬಲಭಾಗದಲ್ಲಿ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ವ್ಯಾಲ್ಯೂಗಳನ್ನು ನೋಡಿ. 'ಇನ್ಪುಟ್ ವೋಲ್ಟೇಜ್' ಗೆ ಹೋಲಿಸಿದರೆ ನಳದ ನೀರಿನ ವೋಲ್ಟೇಜ್, ಅತ್ಯಂತ ಕಡಿಮೆಯಿರುವುದನ್ನು ಗಮನಿಸಿ. |
02:08 | ವೋಲ್ಟೇಜ್ ಗಳನ್ನು ಮತ್ತು ಅಂಶಗಳಲ್ಲಿ 'ಫೇಜ್ ಡಿಫರನ್ಸ್' ಅನ್ನು (Phase difference) ನೋಡಲು CH1 ಮೇಲೆ ರೈಟ್-ಕ್ಲಿಕ್ ಮಾಡಿ. |
02:15 | ಈಗ, ನಾವು ತಾಮ್ರದ ಸಲ್ಫೇಟ್ ದ್ರಾವಣದ ‘ಕಂಡಕ್ಟಿವಿಟಿ’ಯನ್ನು ಅಳೆಯುವೆವು. ದ್ರಾವಣವನ್ನು ತಯಾರಿಸಲು, ಒಂದು ಚಮಚ ತಾಮ್ರದ ಸಲ್ಫೇಟ್ ಅನ್ನು 100 ಮಿ.ಲೀ. ನೀರಿನಲ್ಲಿ ಕರಗಿಸಲಾಗಿದೆ. |
02:27 | ಇದೇ ಕನೆಕ್ಷನ್ ನಲ್ಲಿ, SINE ಹಾಗೂ A2 ಗಳಿಂದ ಬರುವ ವೈರ್ ಗಳನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಲಾಗಿದೆ. |
02:34 | 'ಪ್ಲಾಟ್ ವಿಂಡೋ' ದಲ್ಲಿ ನಾವು ‘ಕಂಡಕ್ಟಿವಿಟಿ’ ಕರ್ವ್ ಅನ್ನು ನೋಡಬಹುದು. |
02:38 | ಕೆಂಪು ಬಣ್ಣದಲ್ಲಿರುವುದು ತಾಮ್ರದ ಸಲ್ಫೇಟ್ ದ್ರಾವಣದ ‘ಕಂಡಕ್ಟಿವಿಟಿ’ ಆಗಿದೆ. |
02:42 | ಹೆಚ್ಚಿದ ‘ಕಂಡಕ್ಟಿವಿಟಿ’ ಗೆ ಕಾರಣ ದ್ರಾವಣದಲ್ಲಿ ಇರುವ ತಾಮ್ರ (copper) ಹಾಗೂ 'ಸಲ್ಫೇಟ್' ಅಯಾನುಗಳು ಆಗಿವೆ. |
02:48 | ಬಲಭಾಗದಲ್ಲಿ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ವ್ಯಾಲ್ಯೂಗಳನ್ನು ಗಮನಿಸಿ. |
02:52 | ವೋಲ್ಟೇಜ್ ಮತ್ತು ಫೇಜ್ ಡಿಫರನ್ಸ್ ವ್ಯಾಲ್ಯೂಗಳನ್ನು ನೋಡಲು CH1 ಮೇಲೆ ರೈಟ್-ಕ್ಲಿಕ್ ಮಾಡಿ. |
02:59 | ಈಗ, ನಾವು ದುರ್ಬಲ ಗಂಧಕಾಮ್ಲ ದ್ರಾವಣದ ವಾಹಕತ್ವವನ್ನು (ಕಂಡಕ್ಟಿವಿಟಿ) ಅಳೆಯುವೆವು. ದುರ್ಬಲ ಗಂಧಕಾಮ್ಲದ ಕೆಲವು ಹನಿಗಳನ್ನು ನೀರಿಗೆ ಸೇರಿಸಲಾಗಿದೆ. |
03:09 | ತಂತಿಗಳನ್ನು ಗಂಧಕಾಮ್ಲದ ದ್ರಾವಣದಲ್ಲಿ ಮುಳುಗಿಸಲಾಗಿದೆ. ‘ಪ್ಲಾಟ್ ವಿಂಡೋ’ದ ಮೇಲೆ ನಾವು ಫಲಿತಾಂಶವನ್ನು ನೋಡೋಣ. |
03:17 | ಕಪ್ಪು ಮತ್ತು ಕೆಂಪು ಬಣ್ಣದ ತರಂಗಗಳು ಬಹುತೇಕ ಒಂದುಗೂಡುತ್ತಿರುವುದನ್ನು ಗಮನಿಸಿ. |
03:23 | ದುರ್ಬಲ ಗಂಧಕಾಮ್ಲದ ಕೆಲವು ಹನಿಗಳನ್ನು ಸೇರಿಸಿದ್ದರಿಂದ ನಳದ ನೀರಿನ ವಾಹಕತ್ವವು ಹೆಚ್ಚಾಗಿದೆ. |
03:30 | ಬಲಭಾಗದಲ್ಲಿ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ವ್ಯಾಲ್ಯೂಗಳನ್ನು ನೋಡಿ. |
03:34 | ವೋಲ್ಟೇಜ್ ಗಳನ್ನು ಮತ್ತು ಅಂಶಗಳಲ್ಲಿ ಫೇಜ್ ಡಿಫರನ್ಸ್ ಅನ್ನು ನೋಡಲು CH1 ಮೇಲೆ ರೈಟ್-ಕ್ಲಿಕ್ ಮಾಡಿ. |
03:41 | ನಾವು ದುರ್ಬಲ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣದ ‘ಕಂಡಕ್ಟಿವಿಟಿ’ಯನ್ನು ಅಳೆಯುವೆವು. ದುರ್ಬಲ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣದ ಕೆಲವು ಹನಿಗಳನ್ನು ನೀರಿಗೆ ಸೇರಿಸಲಾಗಿದೆ. |
03:52 | ಕಪ್ಪು ಮತ್ತು ಕೆಂಪು ಬಣ್ಣದ ತರಂಗಗಳು ಬಹುತೇಕ ಒಂದುಗೂಡುತ್ತಿರುವುದನ್ನು ನಾವು ನೋಡಬಹುದು. |
03:58 | ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣದ ಕೆಲವು ಹನಿಗಳನ್ನು ಸೇರಿಸಿದ್ದರಿಂದ ಹೆಚ್ಚಾಗಿರುವ ನಳದ ನೀರಿನ ‘ಕಂಡಕ್ಟಿವಿಟಿ’ಯನ್ನು ಗಮನಿಸಿ. |
04:05 | ವಿಂಡೋದ ಬಲಭಾಗದಲ್ಲಿ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ವ್ಯಾಲ್ಯೂಗಳನ್ನು ಗಮನಿಸಿ. |
04:11 | ವೋಲ್ಟೇಜ್ ಗಳನ್ನು ಮತ್ತು ಅಂಶಗಳಲ್ಲಿ ಫೇಜ್ ಡಿಫರನ್ಸ್ ಅನ್ನು ನೋಡಲು CH1 ಮೇಲೆ ರೈಟ್-ಕ್ಲಿಕ್ ಮಾಡಿ. |
04:18 | ವೋಲ್ಟೇಜ್ ವ್ಯಾಲ್ಯೂಗಳನ್ನು ಬಳಸಿ ನಾವು ಅಯಾನಿಕ್ ದ್ರಾವಣಗಳ ರೆಜಿಸ್ಟನ್ಸ್ ಅನ್ನು ಕಂಡುಹಿಡಿದಿದ್ದೇವೆ ಮತ್ತು ಫಲಿತಾಂಶಗಳನ್ನು ಪಟ್ಟಿಮಾಡಿದ್ದೇವೆ. |
04:27 | ನಳದ ನೀರಿನ ರಿಜಿಸ್ಟನ್ಸ್ ವ್ಯಾಲ್ಯೂ 7.7 KOhm (ಕಿಲೋ ಓಂ) ಮತ್ತು
ತಾಮ್ರದ ಸಲ್ಫೇಟ್ ದ್ರಾವಣದ ರಿಜಿಸ್ಟನ್ಸ್ ನ ವ್ಯಾಲ್ಯೂ, 1.2 KOhm ಆಗಿವೆ. |
04:38 | ಗಂಧಕಾಮ್ಲ ದ್ರಾವಣವು 0.17 KOhm ಮತ್ತು ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣವು 0.14 KOhm ಆಗಿರುತ್ತವೆ.
ಅಯಾನಿಕ್ ಸಾಂದ್ರತೆಯು ಹೆಚ್ಚಾದಂತೆ ರಿಜಿಸ್ಟನ್ಸ್ ನ ವ್ಯಾಲ್ಯೂಗಳು ಕಡಿಮೆಯಾಗಿರುವುದನ್ನು ಗಮನಿಸಿ. |
04:55 | ಸಂಕ್ಷಿಪ್ತವಾಗಿ, |
04:57 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
05:06 | ಒಂದು ಅಸೈನ್ಮೆಂಟ್ -
|
05:18 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
05:26 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
05:32 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
05:39 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
ವಂದನೆಗಳು. |