Drupal/C2/Creating-New-Content-Types/Kannada
From Script | Spoken-Tutorial
Revision as of 12:48, 7 October 2016 by Pratik kamble (Talk | contribs)
Time | Narration |
00:01 | Creating New Content Types ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು
ಹೊಸ Content type ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕುರಿತು ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾನು:
Ubuntu ಆಪರೇಟಿಂಗ್ ಸಿಸ್ಟಂ Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:29 | ಈಗ, ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ. |
00:34 | ನಾವು built-in Content types ಎಂದರೇನು ಎಂದು ತಿಳಿದಿದ್ದೇವೆ. ಈಗ ಕೆಲವು ಕಸ್ಟಮ್ Content type ಗಳನ್ನು ರಚನೆ ಮಾಡೋಣ. |
00:41 | Content type ಗಳ ಪರಿಚಯವನ್ನು ನೆನಪಿಸಿಕೊಳ್ಳಿ. |
00:45 | ನಾವು ಎಲ್ಲವನ್ನೂ body ಯಲ್ಲಿ ಸೇರಿಸಬಾರದು ಎಂಬುದನ್ನು ಕಲಿತಿದ್ದೇವೆ. |
00:49 | ಈಗ ನಾವು custom Content type ಗಳನ್ನು ಹೇಗೆ ರಚನೆ ಮಾಡಬಹುದು ಎಂದು ಕಲಿಯೋಣ. |
00:55 | ನಾವು 'ದ್ರುಪಲ್' ನ ಎಲ್ಲಾ 'ಇವೆಂಟ್' ಗಳನ್ನು ಪ್ರಪಂಚದಾದ್ಯಂತ ಟ್ರ್ಯಾಕ್ ಮಾಡಬಲ್ಲ ಒಂದು Events Content type ಅನ್ನು ರಚನೆ ಮಾಡೋಣ. |
01:02 | ಮೊದಲಿಗೆ, ಈ Content type ಗೆ ಬೇಕಾಗುವ ಎಲ್ಲಾ 'ಫೀಲ್ಡ್' ಗಳನ್ನು ಕಾಗದದಲ್ಲಿ ಡಿಸೈನ್ ಮಾಡಿಕೊಳ್ಳೋಣ. |
01:09 | 'ದ್ರುಪಲ್' ನಲ್ಲಿ ಹೊಸ Content types ರಚನೆ ಮಾಡುವ ಮೊದಲು ಈ ರೀತಿ ಮಾಡಿಕೊಳ್ಳುವುದು ಉತ್ತಮ ಅಭ್ಯಾಸ. |
01:16 | Field Name, Field Type ಮತ್ತು Purpose ಎಂಬ ಕಾಲಮ್ ಗಳುಳ್ಳ ಟೇಬಲ್ ಅನ್ನು ರಚನೆ ಮಾಡಿ. |
01:23 | ಎಲ್ಲ 'ದ್ರುಪಲ್ ನೋಡ್' ಗಳು ಡಿಫಾಲ್ಟ್ ಆಗಿ Title ಮತ್ತು Body ಫೀಲ್ಡ್ ಗಳನ್ನು ಹೊಂದಿರುತ್ತವೆ. |
01:29 | 'ಇವೆಂಟ್' ಅನ್ನು ಗುರ್ತಿಸಲು Title ಫೀಲ್ಡ್ ನಲ್ಲಿ Event Name ಅನ್ನು ಕೊಡಬಹುದು. |
01:36 | Body ಫೀಲ್ಡ್ ನಲ್ಲಿ ಸಣ್ಣ ವಿವರಣೆಯುಳ್ಳ Event Description ಅನ್ನು ಕೊಡುವುದು ಒಳ್ಳೆಯದು. |
01:43 | 'ಇವೆಂಟ್' ನ ಲೋಗೋವನ್ನು ಡಿಸ್ಪ್ಲೇ ಮಾಡಲು 'ಇವೆಂಟ್' ಗೆ ಸಂಬಂಧಿಸಿದ ಇಮೇಜ್ ಅನ್ನು Event Logo ಫೀಲ್ಡ್ ನಲ್ಲಿ ಕೊಡಬಹುದು. |
01:50 | Event Date- ಇದು Date ಟೈಪ್ ನದ್ದಾಗಿದ್ದು 'ಇವೆಂಟ್' ನ ಪ್ರಾರಂಭದ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ನೀಡಲು ಅವಶ್ಯಕ. |
01:58 | Event ಅದರದ್ದೇ ಆದ Event Website ಅನ್ನು ಹೊಂದಿರಬಹುದು ಮತ್ತು ಅದು ಈ Content type ನಲ್ಲಿ ಡಿಸ್ಪ್ಲೇ ಆಗುವ ಒಂದು URL ಆಗಿದೆ. |
02:07 | ನಾವು ಈ ಟ್ಯುಟೋರಿಯಲ್ ನಲ್ಲಿ ಈ ಐದು ಫೀಲ್ಡ್ ಗಳನ್ನು ಕಲಿಯುತ್ತೇವೆ. ನಂತರ ಇನ್ನೂ ಎರಡು ಫೀಲ್ಡ್ ಗಳ ಕುರಿತು ಕಲಿಯುತ್ತೇವೆ. |
02:17 | ಪ್ರತಿಯೊಂದು 'ಇವೆಂಟ್' ಕೂಡ User Group ನಿಂದ ಪ್ರಾಯೋಜಿತವಾಗಿರುತ್ತದೆ. User Group ಇನ್ನೊಂದು Content type, ಇದನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ. |
02:27 | 'ದ್ರುಪಲ್' ನಲ್ಲಿ ಎರಡು ಬೇರೆ ಬೇರೆ ಕಂಟೆಂಟ್ ಟೈಪ್ ಗಳ ಎರಡು 'ನೋಡ್' ಗಳನ್ನು Entity Reference field ಅನ್ನು ಉಪಯೋಗಿಸಿ ಲಿಂಕ್ ಮಾಡಲಾಗುತ್ತದೆ. |
02:35 | Event Topic ಇದೊಂದು Taxonomy ಫೀಲ್ಡ್. ಇದನ್ನು, 'ಇವೆಂಟ್' ಗಳನ್ನು ವಿವಿಧ keyword ಗಳಡಿಯಲ್ಲಿ ವಿಭಾಗಿಸಲು ಉಪಯೋಗಿಸುತ್ತೇವೆ. |
02:44 | ಈಗ Structure ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Content types ನ ಮೇಲೆ ಕ್ಲಿಕ್ ಮಾಡಿ. |
02:50 | ಇವುಗಳು ಎರಡು ಸಾಮಾನ್ಯ ' Content type ಗಳು. |
02:53 | Add content type ನೀಲಿ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:57 | ನಾವು ನಮ್ಮ ಹೊಸ Content type ಅನ್ನು Events ಎಂದು ಕರೆಯೋಣ. |
03:02 | ಮತ್ತು Description, ನಲ್ಲಿ- "This is where we track all the Drupal events from around the world" ಎಂದು ಟೈಪ್ ಮಾಡೋಣ. |
03:11 | ಇಲ್ಲಿ ನಮಗೆ ಬೇಕಾದುದನ್ನು ಟೈಪ್ ಮಾಡಿಕೊಳ್ಳಬಹುದು. |
03:15 | ಈ Description, Content type ಪುಟದಲ್ಲಿ ಕಾಣಿಸುತ್ತದೆ. |
03:20 | ನಾವು, 'ದ್ರುಪಲ್' ಇದಕ್ಕೆ Machine name ಕೊಟ್ಟಿರುವುದನ್ನು ಗಮನಿಸಬಹುದು. ಇಲ್ಲಿ ಇದು events ಎಂದು ಹೆಸರಿಸಲ್ಪಟ್ಟಿದೆ. |
03:28 | Machine name- ಇದು 'ದ್ರುಪಲ್' ಕಂಟೆಂಟ್ ಅನ್ನು ಅಸೈನ್ ಮಾಡಿದ ಡಾಟಾಬೇಸ್ ನಲ್ಲಿನ ಟೇಬಲ್ ನ ಹೆಸರು. |
03:36 | Submission form settings ನಲ್ಲಿ Title ಅನ್ನು Event Name ಆಗಿ ಬದಲಿಸಿ. |
03:43 | Publishing options, ನಲ್ಲಿ Create new revision ನ ಮೇಲೆ ಒಂದು ಚೆಕ್ ಮಾರ್ಕ್ ಅನ್ನು ಹಾಕಿ. |
03:49 | ಅಂದರೆ ಪ್ರತಿಸಲ ಒಂದು ನೋಡ್ ಅನ್ನು ಎಡಿಟ್ ಮಾಡಿದಾಗ ಹೊಸ ಆವೃತ್ತಿಯ ರಚನೆ ಆಗುತ್ತದೆ. |
03:55 | ಉಳಿದ ಸೆಟ್ಟಿಂಗ್ ಗಳನ್ನು ಹಾಗೇ ಬಿಡಿ. Display author and date information ಅನ್ನು ಆಫ್ ಮಾಡಿ. |
04:02 | ಇದು ಇದಕ್ಕೆ ಮುಖ್ಯವಲ್ಲ. ಆದರೆ ಇದನ್ನು ಎಲ್ಲಾ Content type ಗೂ ಮಾಡುವುದು ಒಳ್ಳೆಯದು. |
04:09 | Menu settings ಮೇಲೆ ಕ್ಲಿಕ್ ಮಾಡಿ. Available menus ನಡಿಯಲ್ಲಿ ಎಲ್ಲಾ ಮೆನುಗಳನ್ನು ಅನ್-ಚೆಕ್ ಮಾಡಿ. |
04:17 | ಇದು content editor, ನಮ್ಮ menu structure ಗೆ ಸಾವಿರಾರು 'ಇವೆಂಟ್' ಗಳನ್ನು ಸೇರಿಸುವುದನ್ನು ತಪ್ಪಿಸುತ್ತದೆ. |
04:24 | ಇದು, ಬೇರೆಯವರು ನಮ್ಮ ಮೆನು ಗೆ 'ಇವೆಂಟ್' ಗಳನ್ನು ಸೇರಿಸುವುದಕ್ಕೆ ಒಪ್ಪಿಗೆ ಇಲ್ಲವೆಂದು ಖಚಿತ ಪಡಿಸುತ್ತದೆ. |
04:31 | ಮುಂದೆ ನಾವೇ 'ಇವೆಂಟ್' ಅನ್ನು ಸೇರಿಸಬಯಸಿದರೆ ನಾವು ಮಾಡಬಹುದು. |
04:37 | Save and manage fields ಮೇಲೆ ಕ್ಲಿಕ್ ಮಾಡಿ. |
04:40 | ಒಮ್ಮೆ ನಮ್ಮ Events Content type ಸೇವ್ ಆದರೆ ನಾವು Body ಫೀಲ್ಡ್ ಅನ್ನು ಕಾಣಬಹುದು. |
04:45 | ಬಲ ಭಾಗದಲ್ಲಿರುವ Edit ಮೇಲೆ ಕ್ಲಿಕ್ ಮಾಡಿ ಮತ್ತು Label ಅನ್ನು Event Description ಗೆ ಬದಲಾಯಿಸಿ. |
04:55 | ಕೆಳಭಾಗದಲ್ಲಿರುವ Save settings ಬಟನ್ ಮೇಲೆ ಕ್ಲಿಕ್ ಮಾಡಿ. |
04:59 | ನಾವು ಈಗ ತಾನೇ ದ್ರುಪಲ್ ನಲ್ಲಿ ನಮ್ಮ ಹೊಸ Custom Content type ಅನ್ನು ರಚನೆ ಮಾಡಿದ್ದೇವೆ. |
05:04 | ಪ್ರಸ್ತುತವಾಗಿ ಇದು ಮಿತಿಯಲ್ಲಿದೆ. Title ಮತ್ತು Body ಗಳು basic pageಗೆ ಸಮನಾಗಿವೆ. |
05:13 | ಮುಂದೆ ನಾವು ಕಾಗದದಲ್ಲಿ ಡಿಸೈನ್ ಮಾಡಿರುವಂತೆ ಅನೇಕ ಫೀಲ್ಡ್ ಗಳನ್ನು ಸೇರಿಸುತ್ತೇವೆ ಮತ್ತು ಇದು ತುಂಬಾ ಉಪಯುಕ್ತವಾಗಿದೆ. |
05:23 | ಮೇಲ್ಭಾಗದಲ್ಲಿರುವ Add field ಬಟನ್ ಮೇಲೆ ಕ್ಲಿಕ್ ಮಾಡಿ. |
05:27 | Select a field type ಡ್ರಾಪ್ ಡೌನ್ ನಲ್ಲಿ Image ಎಂದು ಬದಲಿಸಿ ಮತ್ತು Label field ನಲ್ಲಿ "Event Logo" ಎಂದು ಟೈಪ್ ಮಾಡಿ. |
05:36 | Save and continue. ಅನ್ನು ಕ್ಲಿಕ್ ಮಾಡಿ. |
05:39 | ಅವಶ್ಯವಿದ್ದಲ್ಲಿ Choose file ಬಟನ್ ಅನ್ನು ಕ್ಲಿಕ್ ಮಾಡಿ ನಾವು ಬೇಕಾದ ಇಮೇಜ್ ಅನ್ನು ಅಪ್ಲೋಡ್ ಮಾಡಬಹುದು. |
05:48 | ಅವಶ್ಯವಿದ್ದಲ್ಲಿ ನಾವು ಡಿಫಾಲ್ಟ್ Alternative text ಅನ್ನೂ ಸೇರಿಸಬಹುದು. |
05:54 | ನಾವು ಪ್ರತಿಯೊಂದು 'ಇವೆಂಟ್' ಗೂ ಒಂದು ಲೋಗೋ ಎಂಬ ಮಿತಿಯನ್ನು ಇಟ್ಟುಕೊಳ್ಳೋಣ. Save field settings ಅನ್ನು ಕ್ಲಿಕ್ ಮಾಡಿ. |
06:02 | ನಾವು ಈಗ Event logo field ಗೆ ಸೆಟ್ಟಿಂಗ್ ಗಳನ್ನು ಮಾಡಬೇಕು. |
06:07 | ಇವೆಲ್ಲವೂ ಸಂದರ್ಭೋಚಿತವಾಗಿದೆ ಮತ್ತು field type ಅನ್ನು ಅವಲಂಬಿಸಿದೆ. |
06:11 | ನಾವು ಇಲ್ಲಿ ನಮ್ಮ content editor ಗಳಿಗೆ ಸಹಾಯವನ್ನು ಅಥವಾ ಮಾಹಿತಿಯನ್ನು ಸೇರಿಸಬಹುದು. |
06:18 | ನಾವು ಇಲ್ಲಿ Required field ಬಾಕ್ಸ್ ಅನ್ನು ಚೆಕ್ ಮಾಡಬಹುದು. ಹಾಗೆ ಮಾಡಿದರೆ content item ಅಥವಾ ನೋಡ್ ಅನ್ನು 'ಇವೆಂಟ್' ಲೋಗೊ ವನ್ನು ಸೇರಿಸುವವರೆಗೂ ಸೇವ್ ಮಾಡಲು ಆಗುವುದಿಲ್ಲ. |
06:30 | ನಾವು ಇಲ್ಲಿ ಸೇರಿಸಬಹುದಾದ file extension ಅನ್ನು ಬದಲಿಸಬಹುದು. ಇಲ್ಲಿ bitmap ಅನ್ನು ಸೇರಿಸುವುದನ್ನು ಶಿಫಾರಸು ಮಾಡಿಲ್ಲ. |
06:38 | ಫೈಲ್ ಡೈರಕ್ಟರಿಯು ಡಿಫಾಲ್ಟ್ ಆಗಿ ವರ್ಷ ಮತ್ತು ತಿಂಗಳುಗಳಿಂದ ತುಂಬಿರುತ್ತದೆ. ಅವಶ್ಯವಿದ್ದಲ್ಲಿ ನಾವು ಇದನ್ನು ಬದಲಿಸಬಹುದು. |
06:47 | ಉದಾಹರಣೆಗೆ, ನೀವು ಇಮೇಜ್ ನೊಂದಿಗೆ ಹಲವಾರು Content type ಗಳನ್ನು ಹೊಂದಿರಬಹುದು. |
06:53 | ನಂತರ ನೀವು events ಎಂಬ ಪ್ರಿಫಿಕ್ಸ್ ಅನ್ನು ಸೇರಿಸಬಹುದು. ಹಾಗಾಗಿ, Events Content type ನ ಎಲ್ಲಾ ಇಮೇಜ್ ಗಳೂ ಒಂದೇ ಫೈಲ್ ಡೈರಕ್ಟರಿಯಲ್ಲಿರಬಹುದು. |
07:04 | 'ದ್ರುಪಲ್' ನಮಗೆ ಬೇಕಾದ ಹೆಸರಿಡಲು ಅವಕಾಶ ಕೊಟ್ಟಿದೆ. ಆದರೆ ಹೆಸರಿಡುವಾಗ ಜೋಪಾನವಾಗಿರಿ ಏಕೆಂದರೆ ನಾವು ನಂತರ ಇದನ್ನು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ. |
07:14 | ನಾವು Maximum ಮತ್ತು Minimum image resolution ಅನ್ನೂ ಮತ್ತು Maximum upload size ಅನ್ನೂ ಸೆಟ್ ಮಾಡಬಹುದು. |
07:21 | ಇಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ನಿಧಾನವಾಗಿ ಯೋಚಿಸಿ. ನೀವು 2 ಅಥವಾ 3 ಮೆಗಾಪಿಕ್ಸೆಲ್ ನ ಇಮೇಜ್ ಅನ್ನು ಅಪ್ಲೋಡ್ ಮಾಡುತ್ತೀರೆಂದು ಊಹಿಸಿಕೊಳ್ಳಿ. |
07:28 | ನೀವು ನಿಮ್ಮ wysiwyg editor ಅನ್ನು ಉಪಯೋಗಿಸುತ್ತಿದ್ದೀರಿ. ಇದನ್ನು ಕೆಲವು ನೂರು ಪಿಕ್ಸಲ್ ಗೆ ಕುಗ್ಗಿಸಿ. |
07:35 | ದ್ರುಪಲ್ ಈಗಲೂ 2 ಮೆಗಾ ಪಿಕ್ಸಲ್ ಇಮೇಜ್ ಅನ್ನೇ ಅಪ್ಲೋಡ್ ಮಾಡುತ್ತದೆ. ಇದು ನಿಜವಾಗಿಯೂ ನಿರಾಶಾದಯಕ. |
07:41 | ಅವರು ಮೊಬೈಲ್ ಅನ್ನು ಉಪಯೋಗಿಸುತ್ತಿದ್ದರೆ ತುಂಬ ಕಷ್ಟ ಮತ್ತು ಅವಶ್ಯವಿಲ್ಲದಿದ್ದರೂ ಡಾಟಾ ಪ್ಲ್ಯಾನ್ ನಲ್ಲಿ 2 ಮೆಗಾಬೈಟ್ ವ್ಯಯವಾಗುತ್ತದೆ. |
07:51 | ಹಾಗಾಗಿ ಅಪ್ಲೋಡ್ ಮಾಡುವ ಮೊದಲು ನಾವು ನಮ್ಮ ಇಮೇಜ್ ಸರಿಯಾಗಿ ಸೆಟ್ ಆಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. |
07:57 | ಇಮೇಜ್ ನ ಗರಿಷ್ಟ ಗಾತ್ರ ಮತ್ತು ಕನಿಷ್ಟ ಗಾತ್ರ ಎಷ್ಟಿರಬೇಕು ಎಂದು ತಿಳಿದಿರಬೇಕು. |
08:03 | Minimum Image resolution, ತುಂಬ ಪ್ರಮುಖವಾದದ್ದು. |
08:08 | ಈ ಫೀಲ್ಡ್, ನೀವು ಡಿಸ್ಪ್ಲೇ ಮಾಡುವ ಇಮೇಜ್ ನ ಗರಿಷ್ಠ ಗಾತ್ರಕ್ಕಿಂತ ಚಿಕ್ಕದಾಗಿರಬಾರದು. |
08:14 | ಇದು ದ್ರುಪಾಲ್ ಅನ್ನು ಇಮೇಜ್ ನ ನೈಜ ಗಾತ್ರದಿಂದ 'ಸ್ಕೇಲಿಂಗ್' ಮಾಡುವುದನ್ನು ಮತ್ತು ಪಿಕ್ಸಲೇಟೆಡ್ ಮಾಡುವುದನ್ನೂ ತಪ್ಪಿಸುತ್ತದೆ. |
08:21 | ನಿಮ್ಮ Maximum Image resolution ಅನ್ನು 1000 x 1000 ಗೆ ಸೆಟ್ ಮಾಡಿ. |
08:26 | ನಿಮ್ಮ Minimum Image resolution ಅನ್ನು 100 x 100 ಕ್ಕೆ ಸೆಟ್ ಮಾಡಿ. |
08:31 | Maximum upload size ಅನ್ನು 80 KB ಎಂದು ಮಾಡಿ. |
08:36 | ದ್ರುಪಾಲ್ ಏನು ಮಾಡುತ್ತದೆ ಎಂದರೆ ಇಮೇಜ್ ಅನ್ನು 1000 ಬೈ 1000 ಕ್ಕೆ ಕುಗ್ಗಿಸುತ್ತದೆ ಮತ್ತು ಇದನ್ನು 80 ಕಿಲೊ ಬೈಟ್ಸ್ ಮಾಡುತ್ತದೆ. |
08:44 | ಮತ್ತು ಇದು ಸಾಧ್ಯವಾಗದಿದ್ದಲ್ಲಿ ದ್ರುಪಲ್ ಇಮೇಜ್ ಅನ್ನು ತಿರಸ್ಕರಿಸುತ್ತದೆ. |
08:48 | ಈ ಇಮೇಜ್ ಅನ್ನು 600 ಬೈ 600 ಪಿಕ್ಸಲ್ ಆಗಿ ಮಾಡುವುದು ಉತ್ತಮ. |
08:56 | Enable Alt field ಮತ್ತು Alt field required ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡೋಣ. |
09:02 | ನಂತರ Save settings ಅನ್ನು ಕ್ಲಿಕ್ ಮಾಡಿ. |
09:05 | ಈಗ ನಾವು ನಮ್ಮ Content type ಗೆ ಒಂದು Event Logo ಫೀಲ್ಡ್ ಅನ್ನು ಹೊಂದಿದ್ದೇವೆ. |
09:09 | ಈಗ Add fieldಅನ್ನು ಕ್ಲಿಕ್ ಮಾಡಿ ಇನ್ನೊಂದು ಹೊಸ ಫೀಲ್ಡ್ ಅನ್ನು ಸೇರಿಸೋಣ. |
09:12 | Add a new field ಡ್ರಾಪ್ ಡೌನ್ ನಲ್ಲಿ Link ಅನ್ನು ಸೇರಿಸಿ. Label field ನಲ್ಲಿ "Event Website" ಎಂದು ಟೈಪ್ ಮಾಡೋಣ. |
09:22 | Save and continue. ಅನ್ನು ಕ್ಲಿಕ್ ಮಾಡಿ. |
09:25 | ತಕ್ಷಣವೇ ನಾವು Allowed number of values ನಮೂದಿಸಲು ಕೇಳಲ್ಪಡುತ್ತೇವೆ. ಇಲ್ಲಿ ನಾವು 1 ಅನ್ನು ಹೊಂದಿದ್ದೇವೆ. |
09:34 | Save Field Setting ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ ಈ ಪರದೆಯು ನಮಗೆ ನಮ್ಮ Link ಫೀಲ್ಡ್ ಗೆ ಸಂದರ್ಭೋಚಿತ ಸೆಟ್ಟಿಂಗ್ಸ್ ಗಳನ್ನು ಕೊಡುತ್ತದೆ. |
09:43 | Allowed Link type ನಡಿಯಲ್ಲಿ, ನಾವು -
Internal links only External links only ಮತ್ತು Both internal and external links ಎಂಬ ಆಯ್ಕೆಗಳನ್ನು ಹೊಂದಿದ್ದೇವೆ. |
09:54 | ನಂತರ ನಾವು Allow link text ಅನ್ನು Disabled, Optional ಅಥವಾ Required ಎಂದು ಸೂಚಿಸಬಹುದು. |
10:04 | ನಾವು ಈಗ ಇದನ್ನು Optional ಎಂದು ಬಿಟ್ಟು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡೋಣ. |
10:09 | ಮುಂದೆ ಹೋಗಿ Save settings ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ Add field ಅನ್ನು ಕ್ಲಿಕ್ ಮಾಡಿ. |
10:15 | ಈ ಬಾರಿ ನಾವು Date field ಅನ್ನು ಆರಿಸಿಕೊಳ್ಳಲಿದ್ದೇವೆ. |
10:20 | Label ಅನ್ನು Event Date ಎಂದು ಟೈಪ್ ಮಾಡಿ. |
10:24 | Save and continue. ಅನ್ನು ಕ್ಲಿಕ್ ಮಾಡಿ. |
10:26 | value ವನ್ನು 1 ಎಂದು ಬಿಡೋಣ. Date type ಡ್ರಾಪ್ ಡೌನ್ ನಲ್ಲಿ, Date only ಆಯ್ಕೆಯನ್ನು ಆರಿಸಿಕೊಳ್ಳೋಣ. |
10:34 | Save field settings ಕ್ಲಿಕ್ ಮಾಡಿ. ಇನ್ನೊಮ್ಮೆ ಸಂದರ್ಭೋಚಿತ ಸೆಟ್ಟಿಂಗ್ ಪೇಜ್ ಅನ್ನು ಪಡೆಯುತ್ತೇವೆ. ಪುನಃ ನಾವು contextual settings page ಅನ್ನು ಪಡೆಯುತ್ತೇವೆ. |
10:43 | ಇಲ್ಲಿ Default date ಅನ್ನು Current date ಗೆ ಬದಲಿಸಿ. |
10:47 | Save settings ಅನ್ನು ಕ್ಲಿಕ್ ಮಾಡಿ. |
10:49 | ಈಗ ಇಲ್ಲಿ ಇನ್ನೂ ಎರಡು ಫೀಲ್ಡ್ ಗಳು ಸೇರಿಸಲಿಕ್ಕಿವೆ. ಆದರೆ ನಾವು ಈಗ ಅದನ್ನು ಸೇರಿಸಲಾಗುವುದಿಲ್ಲ. |
10:55 | ಇವುಗಳನ್ನು ನಾವು ನಮ್ಮ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
11:03 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಹೊಸ Content type ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿತಿದ್ದೇವೆ. |
11:28 | ಈ ವೀಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ. |
11:39 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:46 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
11:55 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್- ಇದು NMEICT, Ministry of Human Resource Development
ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
12:09 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |