Drupal/C2/User-group-and-Entity-Reference/Kannada

From Script | Spoken-Tutorial
Revision as of 15:58, 4 September 2016 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 User Group and Entity Reference ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
  • User Group Content type ಅನ್ನು ರಚನೆ ಮಾಡುವುದು
00:11 * User Group ಫೀಲ್ಡ್ ಅನ್ನು ಸೇರಿಸುವುದು ಮತ್ತು
  • Content types ಅನ್ನು Entity reference ನ ಜೊತೆ ಸೇರಿಸುವುದನ್ನು ಕುರಿತು ಕಲಿಯುತ್ತೇವೆ.
00:18 ಈ ಟುಟೋರಿಯಲ್ ಗಾಗಿ ನಾನು
  • Ubuntu Operating System
  • Drupal 8 ಮತ್ತು
  • Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.
00:27 ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು
00:32 ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Events Content type ಅನ್ನು ನೆನಪಿಸಿಕೊಳ್ಳಿ.
00:38 ನಾವು ಇಲ್ಲಿ ತೋರಿಸಿದಂತೆ ಮೊದಲ ಐದು field ಗಳನ್ನು ರಚನೆ ಮಾಡಿದ್ದೇವೆ.
00:42 Event Sponsor field ಅನ್ನು ರಚನೆ ಮಾಡಲು ನಾವು ಮೊದಲು User Groups Content type ಅನ್ನು ರಚನೆ ಮಾಡಬೇಕು.
00:48 User Groups ಇದು ಒಂದು ಇವೆಂಟ್ ಅನ್ನು ಒಗ್ಗೂಡಿಸುವ ಜನರ ಸಮೂಹವಾಗಿದೆ.
00:54 ಉದಾಹರಣೆಗೆ - Cincinnati User group, Drupal Mumbai group, Bangalore Drupal group ಮುಂತಾದವು.
01:03 ನಾವು ಮೊದಲು User Groups ಅನ್ನು ಒಂದು ಕಾಗದದ ಮೇಲೆ ವಿನ್ಯಾಸಗೊಳಿಸೋಣ.
01:07 ಒಂದು ಸಮೂಹವು ಒಂದು ವೆಬ್ ಸೈಟ್ ಅನ್ನು , ಸಂಪರ್ಕ ವನ್ನು, ಇ ಮೇಲ್ ಮತ್ತು ಅವರ ಅನುಭವ ಇವುಗಳನ್ನು ಹೊಂದಿರಬಹುದು.
01:15 Drupal ಇದು URL ಮತ್ತು Email ಗಳನ್ನು ಡಿಫಾಲ್ಟ್ ಫೀಲ್ಡ್ ಆಗಿ ಹೊಂದಿದೆ. ಹಾಗಾಗಿ ನಾವು ಈ field type ಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.
01:23 ಒಬ್ಬ ವ್ಯಕ್ತಿಯ ಹೆಸರನ್ನು Name field ನಿಂದ ಪಡೆಯಬಹುದು. ಆದರೆ ನಾವು ಈಗ Text ಅನ್ನು ಉಪಯೋಗಿಸೋಣ.
01:31 ಯೂಸರ್ ಎಕ್ಸ್ಪೀರಿಯೆನ್ಸ್ ಲೆವೆಲ್ "Beginner, Intermediate" ಅಥವಾ"Advanced" ಆಗಿರಬಹುದು.
01:39 ಇದನ್ನು ಅನುಷ್ಟಾನ ಗೊಳಿಸಲು ನಾವು "List (text)" Field Type ಅನ್ನು ಆರಿಸಿಕೊಳ್ಳಬೇಕು.
01:45 ಇಲ್ಲಿನ ಕೊನೆಯ field ಈ ಗ್ರುಪ್ ನಿಂದ ಪ್ರಾಯೋಜಿತವಾದ ಎಲ್ಲ ಇವೆಂಟ್ ಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರವಾಗಿದೆ.
01:51 ಇದಕ್ಕೋಸ್ಕರ ಮೊದಲೇ ಇರುವ Events Content type ಅನ್ನು ಲಿಂಕ್ ಮಾಡಲು Entity reference field ಅನ್ನು ಉಪಯೋಗಿಸಬಹುದು.
02:01 ಈಗ User Groups Content type ಸೆಟ್ ಮಾಡೋಣ.
02:05 Add content type ಅನ್ನು ಕ್ಲಿಕ್ ಮಾಡಿ. ಇದನ್ನು "User Groups" ಎಂದು ಹೆಸರಿಸೋಣ.
02:11 ಗಮನಿಸಿ Machine name ಇದು user ಅಂಡರ್ ಸ್ಕೋರ್ groups ಎಂದಾಗಿದೆ.
02:16 Description ನಲ್ಲಿ "This is where we track the Drupal groups from around the world" ಎಂದು ಟೈಪ್ ಮಾಡಿ.
02:23 ' Title field label ಅನ್ನು "User Group Name" ಎಂದು ಹೆಸರಿಸೋಣ.
02:29 ಈಗ ನಾವು ಇದನ್ನು ನಮ್ಮ Events Content type ನಂತೆಯೇ ಸೆಟ್ ಮಾಡೋಣ.
02:35 Publishing options ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:38 Default options ನಡಿಯಲ್ಲಿ ಇವುಗಳನ್ನು ಆಯ್ಕೆ ಮಾಡಿ:
  • Create new revision
  • Published and
  • Promoted to front page.
02:48 ಈಗ Display settings ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
02:52 Display author and date information ಗೆ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ.
02:58 ಕೊನೆಗೆ Menu settings ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Main navigation ಬಾಕ್ಸ್ ಅನ್ನು ಅನ್ ಚೆಕ್ ಮಾಡಿ.
03:05 ಒಮ್ಮೆ ಇವೆಲ್ಲ ಸೆಟ್ ಆದ ಮೇಲೆ ಕೆಳ ಭಾಗದಲ್ಲಿರುವ Save and manage fields ಬಟನ್ ಮೇಲೆ ಕ್ಲಿಕ್ ಮಾಡಿ.
03:13 ನಾವು Manage fields ಪುಟಕ್ಕೆ ಮರಳುತ್ತೇವೆ.
03:17 ಇಲ್ಲಿ Body Label ಅನ್ನು ಬದಲಾಯಿಸೋಣ.
03:21 Operations ಕಾಲಮ್ ನಡಿಯಲ್ಲಿ Edit ಬಟನ್ ಅನ್ನು ಕ್ಲಿಕ್ ಮಾಡಿ.
03:26 Label field ನಲ್ಲಿ "User Group Description" ಎಂದು ಟೈಪ್ ಮಾಡಿ ಮತ್ತು ಕೆಳಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ.
03:36 ನಾವು ಹಸಿರು ಬಣ್ಣದಲ್ಲಿ ಯಶಸ್ವಿ ಸಂದೇಶವನ್ನು ಮೇಲ್ಭಾಗದಲ್ಲಿ ಕಾಣಬಹುದು.
03:40 Content type, ಗಾಗಿ ನಾವು 5 ಫೀಲ್ಡ್ ಗಳನ್ನು ಸೆಟ್ ಮಾಡಬೇಕು.
03:46 ನಾವು ಈಗಾಗಲೇ ಒಂದು field ಅನ್ನು ರಚನೆ ಮಾಡಬೇಕು. ಈಗ ಇನ್ನೊಂದನ್ನು ರಚನೆ ಮಾಡಬೇಕು.
03:52 Add field ಬಟನ್ ಅನ್ನು ಕ್ಲಿಕ್ ಮಾಡಿ.
03:55 ಇದಕ್ಕಾಗಿ ನಾವು Reuse an existing field ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ ಮಾಡೋಣ.
04:02 Link: field_event_ website ಫೀಲ್ಡ್ ದೊರಕಿರುವುದನ್ನು ಗಮನಿಸಿ.
04:08 ಏಕೆಂದರೆ ನಾವು ಈಗಾಗಲೇ ಇದನ್ನು Event website. ಎಂದು ಹೆಸರಿಸಿದ್ದೇವೆ.
04:13 ಒಂದು ಫೀಲ್ಡ್ ಅನ್ನು ಪುನರುಪಯೋಗಿಸುವುದರಿಂದ ದ್ರುಪಾಲ್ ಡಾಟಾಬೇಸ್ ನಲ್ಲಿ ಒಂದು table ಅನ್ನು ಪುನರುಪಯೋಗಿಸಬಹುದು.
04:20 ಒಂದೇ ಫೀಲ್ಡ್ ಗೆ ಬೇರೆ ಬೇರೆ ಸೆಟ್ಟಿಂಗ್ ಗಳನ್ನು ಕೊಡುವುದರಿಂದ ಇದನ್ನು ಮಾಡಬಹುದು.
04:25 ಇಲ್ಲಿ ಹೊಸ ಫೀಲ್ಡ್ ಅನ್ನು ಸೆಟ್ ಮಾಡುವುದೇ ಅರ್ಥಪೂರ್ಣವಾಗಿದೆ.
04:30 Add a new field ಡ್ರಾಪ್ ಡೌನ್ ನಲ್ಲಿ "Link" field type ಅನ್ನು ಆರಿಸಿಕೊಳ್ಳಿ.
04:35 Label' ನಲ್ಲಿ "Group Website" ಎಂದು ಟೈಪ್ ಮಾಡಿ.
04:39 Save and continue ಅನ್ನು ಕ್ಲಿಕ್ ಮಾಡಿ ಮತ್ತು Save field settings ಅನ್ನು ಕ್ಲಿಕ್ ಮಾಡಿ.
04:45 ಈ ಬಾರಿ ನಾವು Drupalville ಯಲ್ಲಿ ಯಾವುದೇ User Groups ಪೇಜ್ ಅನ್ನುಹೊಂದಿಲ್ಲದೇ ಇರುವುದರಿಂದ External links only ಅನ್ನು ಆಯ್ಕೆ ಮಾಡಿಕೊಳ್ಳೋಣ.
04:54 ಕೆಳ ಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ.
04:57 ಮತ್ತೊಮ್ಮೆ Add field ಅನ್ನು ಕ್ಲಿಕ್ ಮಾಡಿ.
05:01 ಈ ಬಾರಿ ಕಾಂಟ್ಯಾಕ್ಟ್ ಪರ್ಸನ್ ನೇಮ್ ಗೆ Text field ಅನ್ನು ಆರಿಸಿಕೊಳ್ಳೋಣ.
05:07 Add a new field ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು field type "Text (plain)". ಆಯ್ಕೆಮಾಡಿಕೊಳ್ಳಿ.
05:14 ನಾವು ಈಗ Label ಅನ್ನು "Group Contact" ಎಂದು ಹೆಸರಿಸೋಣ.
05:18 Save and continue ಅನ್ನು ಕ್ಲಿಕ್ ಮಾಡಿ ಮತ್ತು ನಂತರ Save field settings ಅನ್ನು ಕ್ಲಿಕ್ ಮಾಡಿ.
05:24 ನಂತರ ಕೆಳಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ.
05:28 ಇನ್ನೊಮ್ಮೆ Add field ಬಟನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ ಡ್ರಾಪ್ ಡೌನ್ ಮೆನುವಿನಿಂದ "Email" ಫೀಲ್ಡ್ ಅನ್ನು ಆರಿಸಿಕೊಳ್ಳೋಣ.
05:37 ನಾವು Label ಅನ್ನು "Contact Email" ಎಂದು ಹೆಸರಿಸೋಣ. Save and continue ಬಟನ್ ಅನ್ನು ಕ್ಲಿಕ್ ಮಾಡಿ.
05:44 Allowed number of values ನಲ್ಲಿ ನಮಗೆ 1 ಬೇಕು. Save field settings ನ ಮೇಲೆ ಕ್ಲಿಕ್ ಮಾಡಿ.
05:52 ಇಲ್ಲಿ ಇನ್ಯಾವುದೇ ಸೆಟ್ಟಿಂಗ್ ಗಳಿಲ್ಲ ಹಾಗಾಗಿ ಕೆಳಭಾಗದಲ್ಲಿರುವ Save settings ಬಟನ್ ಮೇಲೆ ಕ್ಲಿಕ್ ಮಾಡಿ.
05:59 ಇನ್ನೊಮ್ಮೆ Add field ಬಟನ್ ಅನ್ನು ಕ್ಲಿಕ್ ಮಾಡಿ.
06:03 ಈ ಬಾರಿ Field type ಡ್ರಾಪ್ ಡೌನ್ ಮೆನುನಲ್ಲಿ "List (text)" ಆಯ್ಕೆಯನ್ನು ಆರಿಸಿಕೊಳ್ಳಿ.
06:09 Label ಫೀಲ್ಡ್ ನಲ್ಲಿ "Group Experience" ಎಂದು ಟೈಪ್ ಮಾಡಿ ಮತ್ತು Save and continue ಬಟನ್ ಅನ್ನು ಕ್ಲಿಕ್ ಮಾಡಿ.
06:16 Field type ನ ಕುರಿತು ಈ ಸಂದೇಶದಲ್ಲಿರುವ ವಿಷಯವನ್ನು ಗಮನದಲ್ಲಿಡಿ:
06:23 "These settings impact the way the data is stored in the database and cannot be changed once data has been created".
06:32 ಇದಕ್ಕಾಗಿಯೆ ಮೊದಲೇ ತಂತ್ರ ರೂಪಿಸಿಕೊಳ್ಳಬೇಕು.
06:37 ಇಲ್ಲಿ ಬೆಲೆಯನ್ನು ಸೇರಿಸೋಣ - "Beginner, Intermediate, Advanced" ಮತ್ತು "Expert".
06:44 ನಮ್ಮ User Group ಈ ಬೆಲೆಗಳಲ್ಲಿ ಅವಕ್ಕೆ ಸರಿಹೊಂದುವ ಯಾವುದನ್ನಾದರೂ ಪಡೆಯಬಹುದು.
06:51 Allowed number of values ಅನ್ನು Limited ನಿಂದ Unlimited ಗೆ ಬದಲಿಸಿ ಮತ್ತು Save field settings ಅನ್ನು ಕ್ಲಿಕ್ ಮಾಡಿ.
07:01 ಈಗ Save settings. ಅನ್ನು ಕ್ಲಿಕ್ ಮಾಡಿ.
07:04 ನಾವು ಇನ್ನೂ ಒಂದು ಫೀಲ್ಡ್ ಅನ್ನು ಹೊಂದಿದ್ದೇವೆ ಅಂದರೆ Entity reference field.
07:10 ಈಗ ನಾವು Entity Reference ಎಂದರೆ ಏನು ಮತ್ತು ಅದನ್ನು ಹೇಗೆ ರಚನೆ ಮಾಡುವುದೆ ಎಂದು ನೋಡೋಣ.
07:17 ನಾವು ನಮ್ಮ ವೆಬ್ ಸೈಟ್ ನಲ್ಲಿ ಮಾಡಬೇಕಾಗಿರುವುದು ಏನೆಂದರೆ - Events ಗಳು User Groups ಗಳಿಂದ ಪ್ರಾಯೋಜಿಸಲ್ಪಡಬಹುದು ಮತ್ತು User Groups ಗಳು Eventsಗಳನ್ನು ಪ್ರಾಯೋಜಿಸಬಹುದು.
07:28 ಎರಡು ಕಂಟೆಂಟ್ ಗಳನ್ನು ಲಿಂಕ್ ಮಾಡಬೇಕಾದರೆ ವೆಬ್ ಸೈಟ್ ನಲ್ಲಿ ಇದು ಒಂದು ಸಾಮಾನ್ಯ ಸಂಗತಿಯಾಗಿದೆ.
07:35 Events ಗಳು User Groups ಗಳಿಂದ ಪ್ರಾಯೋಜಿಸಲ್ಪಡುತ್ತವೆ ಹಾಗಾಗಿ User Group ನ ಮಾಹಿತಿಗಳು ಎಲ್ಲಾ ಇವೆಂಟ್ ಗಳಿಗೆ ದೊರೆಯುವಂತಿರಬೇಕು.
07:45 ಈಗ ಇದನ್ನು ಸೆಟ್ ಮಾಡೋಣ. Add field ನ ಮೇಲೆ ಕ್ಲಿಕ್ ಮಾಡಿ.
07:49 ನೀವು ಡಾಟಾ ಬೇಸ್ ನಲ್ಲಿರುವ ವ್ಯಕ್ತಿಯಾಗಿದ್ದರೆ ಇವು ಡಾಟಾ ದಲ್ಲಿ many to many relationship ಆಗಿ ಗುರ್ತಿಸಲ್ಪಡುತ್ತವೆ.
07:57 Add a new field ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ Reference ನಡಿಯಲ್ಲಿ Content ಅನ್ನು ಕ್ಲಿಕ್ ಮಾಡಿ.
08:04 Label ಫೀಲ್ಡ್ ನಲ್ಲಿ "Events Sponsored" ಎಂದು ಟೈಪ್ ಮಾಡಿ ಮತ್ತು Save and continue ಬಟನ್ ಅನ್ನು ಕ್ಲಿಕ್ ಮಾಡಿ.
08:12 ನಂತರ ನಾವು Type of item to reference ಅನ್ನು ಆಯ್ಕೆ ಮಾಡಬೇಕು.
08:17 ಇಲ್ಲಿ ಹಲವಾರು ಆಯ್ಕೆಗಳಿರುವುದನ್ನು ನೀವು ನೋಡಬಹುದು.
08:21 ನಾವು ಇದನ್ನು ಸುಲಭವಾಗಿ ಮಾಡೋಣ. Content ಅನ್ನು ಆಯ್ಕೆ ಮಾಡಿಕೊಳ್ಳಿ.
08:26 Allowed number of values ನಲ್ಲಿ Unlimited ಅನ್ನು ಆಯ್ಕೆ ಮಾಡಿಕೊಳ್ಳೋಣ.
08:31 ನಂತರ Save field settings ಅನ್ನು ಕ್ಲಿಕ್ ಮಾಡಿ.
08:34 ಇಲ್ಲಿ Settings ಪುಟದಲ್ಲಿ ನಾವು ಯಾವ Content types User Groups ಗಳಿಂದ ರೆಫರೆನ್ಸ್ ಆಗಿದೆ ಎಂದು ಆರಿಸಿಕೊಳ್ಳಬೇಕು.
08:42 ಇಲ್ಲಿ ನಾವು Events Content type ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ.
08:46 ಇಲ್ಲಿ ನಾವು ಇವೆಂಟ್ ಗಳನ್ನು ಸೇರಿಸುವಾಗ, ನಾನು Events title ಅನ್ನು ಟೈಪ್ ಮಾಡಲು ಪ್ರಾರಂಭಿಸಿದಾಗ ಇವೆಂಟ್ ಗಳು ಮಾತ್ರ ಕಾಣಿಸುತ್ತವೆ.
08:55 ಹಾಗಾಗಿ ನಾವು ಇಲ್ಲಿ ಸರಿಯಾದ Content Type ಅನ್ನು ಆಯ್ಕೆ ಮಾಡಿಕೊಂಡಿದ್ದೇವೆಯೇ ಎಂದು ಧೃಢೀಕರಿಸಿಕೊಳ್ಳಬೇಕು.
09:01 Eventsಅನ್ನು ಆಯ್ಕೆ ಮಾಡಿಕೊಂಡು Save settings ಅನ್ನು ಕ್ಲಿಕ್ ಮಾಡಿ.
09:05 ಈಗ ನಾವು ಇದೇ ರೀತಿಯನ್ನು Events Content type ಗೂ ಅನುಸರಿಸಬೇಕು.
09:10 Structure ನ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ bread crumbs ನಲ್ಲಿ Content typesಅನ್ನು ಕ್ಲಿಕ್ ಮಾಡಿ.
09:16 ನಂತರ Events Content type, ನಲ್ಲಿ Manage fields ಅನ್ನು ಆಯ್ಕೆ ಮಾಡಿಕೊಳ್ಳಿ.
09:21 ಈಗ ಇನ್ನೊಂದು ಫೀಲ್ಡ್ ಅನ್ನು ಆರಿಸಿಕೊಳ್ಳೋಣ. Add a new field ಡ್ರಾಪ್ ಡೌನ್ ನಲ್ಲಿ Content ಅನ್ನು ಆಯ್ಕೆ ಮಾಡಿಕೊಳ್ಳಿ.
09:28 Label ನಲ್ಲಿ "Event Sponsors" ಎಂದು ಟೈಪ್ ಮಾಡಿ.
09:32 Save and continue ನ ಮೇಲೆ ಕ್ಲಿಕ್ ಮಾಡಿ.
09:34 Allowed number of values ನಲ್ಲಿ Unlimited ಅನ್ನು ಆರಿಸಿಕೊಳ್ಳಿ.
09:39 ಏಕೆಂದರೆ ಒಂದಕ್ಕಿಂತ ಹೆಚ್ಚು User Group ಗಳು ಒಂದು ಇವೆಂಟ್ ಅನ್ನು ಪ್ರಾಯೋಜಿಸಬಹುದು. ಈಗ Save field settings. ನ ಮೇಲೆ ಕ್ಲಿಕ್ ಮಾಡಿ.
09:48 ಈ ಬಾರಿ REFERENCE TYPE, ನಡಿಯಲ್ಲಿ User groups ಅನ್ನು ಆರಿಸಿಕೊಳ್ಳಿ.
09:53 ಏಕೆಂದರೆ ನಾವು User Groups ಗಳನ್ನು Events Sponsors ಫೀಲ್ಡ್ ಗೆ ರೆಫರೆನ್ಸ್ ಮಾಡುತ್ತಿದ್ದೇವೆ.
09:59 Save settings ಅನ್ನು ಕ್ಲಿಕ್ ಮಾಡಿ.
10:01 ಈಗ ಇದು ಆ ಎರಡು Content Type' ಗಳನ್ನು ಒಟ್ಟಿಗೆ many to many relationship ನಲ್ಲಿ ಲಿಂಕ್ ಮಾಡುತ್ತಿದೆ.
10:08 ಇವುಗಳು ಇವೆಂಟ್ ಗಳ ಪ್ರಾಯೋಜಕರು ಮತ್ತು ಯಾವ Events ಗಳು ಯಾವ User Groups ಗಳಿಂದ ಪ್ರಾಯೋಜಿತವಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
10:16 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
10:22 ಈ ಟ್ಯುಟೋರಿಯಲ್ ನಲ್ಲಿ ನಾವು:
  • User Group Content type ಅನ್ನು ರಚನೆ ಮಾಡುವುದು,
10:28 * User Group ಫೀಲ್ಡ್ ಅನ್ನು ಸೇರಿಸುವುದು ಮತ್ತು
  • Content types ಅನ್ನು Entity reference ನ ಜೊತೆಗೆ ಸೇರಿಸುವುದನ್ನು ಕಲಿತಿದ್ದೇವೆ.
10:40 ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ
10:51 ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
10:58 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
11:07 Spoken Tutorial Project ಇದು NMEICT, Ministry of Human Resource Development

ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.

11:21 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble, Sandhya.np14