Jmol-Application/C2/Create-and-edit-molecular-models/Kannada
From Script | Spoken-Tutorial
Revision as of 16:10, 2 March 2016 by Sandhya.np14 (Talk | contribs)
Time | Narration |
00:01 | Jmol Application (ಜೆಮೋಲ್ ಅಪ್ಲಿಕೇಶನ್) ನಲ್ಲಿಯ Create and Edit molecular models ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎನ್ನುವ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸುಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:12 | * ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್-ಮೊಡೆಲ್ ನಲ್ಲಿ “hydrogen”(ಹೈಡ್ರೋಜನ್) ಅಣುವನ್ನು ಸೇರಿಸುವುದು |
00:17 | * ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು |
00:20 | * ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು |
00:23 | * ಮತ್ತು ಕೊಂಟೆಕ್ಷ್ಟುಅಲ್ (contextual) ಮೆನ್ಯು ಅರ್ಥಾತ್ ಪಾಪ್-ಅಪ್ ಮೆನ್ಯುವನ್ನು ಬಳಸುವುದನ್ನು ಕಲಿಯುವೆವು. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು: |
00:32 | * ’Jmol Application’ (ಜೆಮೋಲ್ ಅಪ್ಲಿಕೇಶನ್) ವಿಂಡೊ ಮತ್ತು |
00:36 | * ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’Modelkit’ (ಮಾಡೆಲ್ ಕಿಟ್) ಎಂಬ ಫಂಕ್ಷನ್ ಬಗ್ಗೆ ತಿಳಿದಿರಬೇಕು. |
00:41 | ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ. |
00:46 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:49 | * Ubuntu (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ 12.04 |
00:53 | * “Jmol” (ಜೆಮೋಲ್) ಆವೃತ್ತಿ 12.2.2 |
00:57 | * ಮತ್ತು 'Java ' ಆವೃತ್ತಿ 7 ಬಳಸುತ್ತಿದ್ದೇನೆ. |
01:00 | ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ. |
01:05 | ಸರ್ಚ್-ಬಾಕ್ಸ್ ನಲ್ಲಿ ’Jmol’ (ಜೆಮೋಲ್) ಎಂದು ಟೈಪ್ ಮಾಡಿ. |
01:08 | ಸ್ಕ್ರೀನ್ ನ ಮೇಲೆ 'Jmol' (ಜೆಮೋಲ್) ಐಕಾನ್ ಕಾಣಿಸುತ್ತದೆ. |
01:11 | ಜೆಮೋಲ್ ಅಪ್ಲಿಕೇಶನ್ ವಿಂಡೋವನ್ನು ತೆರೆಯಲು, 'Jmol' (ಜೆಮೋಲ್) ಐಕಾನ್ ಮೇಲೆ ಕ್ಲಿಕ್ ಮಾಡಿ. |
01:17 | ನಾವು ಮೊದಲು ರಚನೆ ಮಾಡಿದ ”Propane” ನ (ಪ್ರೊಪೇನ್) ಮಾಡೆಲ್ ನಿಂದ ಪ್ರಾರಂಭಿಸೋಣ. |
01:22 | ಫೈಲನ್ನು ಓಪನ್ ಮಾಡಲು, ಟೂಲ್-ಬಾರ್ ಮೇಲಿನ “Open file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:27 | ಸ್ಕ್ರೀನ್ ಮೇಲೆ ಒಂದು ಡೈಲಾಗ್-ಬಾಕ್ಸ್ ಕಾಣಿಸುತ್ತದೆ. |
01:30 | ನಿಮಗೆ ಬೇಕಾದ ಫೈಲ್ ಅನ್ನು ಇಟ್ಟಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
01:34 | ನನ್ನ ಫೈಲ್, ಡೆಸ್ಕ್ಟಾಪ್ ನ ಮೇಲೆ ಇದೆ. |
01:37 | ಹೀಗಾಗಿ, ನಾನು ಡೆಸ್ಕ್ಟಾಪ್ ಅನ್ನು ಆಯ್ಕೆಮಾಡುವೆನು ಮತ್ತು 'Open' ಬಟನ್ ಮೇಲೆ ಕ್ಲಿಕ್ ಮಾಡುವೆನು. |
01:43 | “File or URL” ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ಫೈಲ್ ಹೆಸರನ್ನು ಟೈಪ್ ಮಾಡಿ. |
01:48 | ನಂತರ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:51 | 'Propane'ನ (ಪ್ರೊಪೇನ್) ಮಾಡೆಲ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
01:55 | ನಾವು ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ, ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಾಲೋಜೆನ್ ಗಳನ್ನು ಹೊಂದಿದ 'ಪ್ರೊಪೇನ್' ನಲ್ಲಿ, ಹೈಡ್ರೋಜನ್ ಗಳನ್ನು ಸೇರಿಸಬಹುದು. |
02:07 | 'ಪ್ರೊಪೇನ್' ಅಣುವನ್ನು 'ಪ್ರೊಪನಾಲ್' ಆಗಿ ಪರಿವರ್ತಿಸಲು, ಅದಕ್ಕೆ ಒಂದು 'hydroxy' ಗ್ರುಪ್ ಅನ್ನು ನಾನು ಸೇರಿಸಬೇಕಾಗಿದೆ. |
02:13 | 'model kit' (ಮೊಡೆಲ್ ಕಿಟ್) ಮೆನ್ಯುವನ್ನು ಒಪನ್ ಮಾಡಿ. ಫಂಕ್ಶನಲ್ ಗ್ರೂಪ್ ಗಳ ಒಂದು ಲಿಸ್ಟ್, ಇಲ್ಲಿ ಸಿಗುತ್ತದೆ. |
02:20 | 'Oxygen'(ಆಕ್ಸಿಜೆನ್) ಪರಮಾಣುವಿನ ಪಕ್ಕದ ಬಾಕ್ಸನ್ನು ಚೆಕ್ ಮಾಡಿ. |
02:23 | ಮೊದಲನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿರುವ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
02:28 | ಹೈಡ್ರೋಜನ್ ಪರಮಾಣುವಿಗೆ ಬದಲಾಗಿ 'ಹೈಡ್ರಾಕ್ಸೀ' ಗ್ರೂಪ್ ಅನ್ನು ಸೇರಿಸಿರುವುದನ್ನು ಗಮನಿಸಿ. ಇಲ್ಲಿ, 'ಆಕ್ಸಿಜೆನ್' ಪರಮಾಣು, ಕೆಂಪು ಬಣ್ಣದಲ್ಲಿ ಕಾಣುತ್ತಿದೆ. |
02:37 | ಈಗ 'ಪ್ರೊಪೇನ್', '1-Propanol' ಆಗಿ ಬದಲಾಗಿದೆ. |
02:41 | ಈಗ ನಾವು 1-Propanol (1-ಪ್ರೊಪೆನಾಲ್) ಅನ್ನು '2-chloro-1-propanol' (2-ಕ್ಲೋರೊ-1-ಪ್ರೊಪೆನಾಲ್) ಆಗಿ ಪರಿವರ್ತಿಸಲು ಪ್ರಯತ್ನಿಸೋಣ. |
02:47 | 'model kit' (ಮಾಡೆಲ್ ಕಿಟ್) ಮೆನ್ಯುನಿಂದ, 'Chloro' (ಕ್ಲೋರೊ) ಗ್ರುಪ್ ಅನ್ನು ಆಯ್ಕೆ ಮಾಡಿ. |
02:51 | ಎರಡನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿದ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
02:57 | ಈಗ ನಮ್ಮ ಹತ್ತಿರ '2-chloro-1-propanol' ನ ಮಾಡೆಲ್ ಇದೆ. ಇಲ್ಲಿ, ಕ್ಲೋರಿನ್ ಹಸಿರು ಬಣ್ಣದಲ್ಲಿ ಕಾಣುತ್ತಿದೆ. |
03:04 | ನೀವು 'ಎನರ್ಜಿ ಮಿನಿಮೈಜೇಶನ್' ಅನ್ನು ಮಾಡಬಹುದು ಮತ್ತು ಇಮೇಜ್ ಅನ್ನು 'dot mol' ಫೈಲ್ ಎಂದು ಸೇವ್ ಮಾಡಬಹುದು. |
03:10 | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
03:11 | * '3-bromo-1-butanol' (3-ಬ್ರೊಮೊ-1-ಬ್ಯೂಟನಾಲ್) ಮತ್ತು '2-amino-4-chloro-pentane' (2-ಅಮೀನೊ-4-ಕ್ಲೋರೊ-ಪೆಂಟೇನ್) ಎಂಬ ಅಣುಗಳ ಮಾಡೆಲ್ ಗಳನ್ನು ಮಾಡಿ. |
03:20 | * ಎನರ್ಜಿ ಮಿನಿಮೈಜೇಶನ್ ಮಾಡಿ ಮತ್ತು ಇಮೇಜ್ ಅನ್ನು ಜೆ ಪಿ ಇ ಜಿ ಫಾರ್ಮ್ಯಾಟ್ (JPEG format) ನಲ್ಲಿ ಸೇವ್ ಮಾಡಿ. |
03:25 | ಇಮೇಜ್ ಅನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು, |
03:28 | ಟೂಲ್-ಬಾರ್ ನಲ್ಲಿಯ “Save current view as an image” ಎಂಬ ಐಕಾನ್ ಅನ್ನು ಬಳಸಿ. |
03:33 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು. |
03:40 | ಈಗ ನಾವು ಜೆಮೋಲ್ ಅಪ್ಲಿಕೇಶನ್ ವಿಂಡೋಗೆ ಹಿಂದಿರುಗೋಣ. |
03:45 | ಜೆಮೋಲ್ ಅಪ್ಲಿಕೇಶನ್, ಒಂದು ಪಾಪ್-ಅಪ್ (Pop-up) ಮೆನ್ಯುವನ್ನು ಸಹ ಒದಗಿಸುತ್ತದೆ. |
03:50 | ಪಾಪ್-ಅಪ್ ಮೆನ್ಯುವನ್ನು ಎರಡು ವಿಧಗಳಲ್ಲಿ ಬಳಸಲು ಸಾಧ್ಯವಿದೆ. |
03:55 | 'model kit' ಮೆನ್ಯು ಒಪನ್ ಇದ್ದರೆ, ಅದರಿಂದ ಹೊರಗೆ ಬನ್ನಿ. |
03:59 | 'model kit' ಮೆನ್ಯುವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು “exit model kit mode” ನ ಮೇಲೆ ಕ್ಲಿಕ್ ಮಾಡಿ. |
04:04 | ಪಾಪ್-ಅಪ್ ಮೆನ್ಯುವನ್ನು ತೆರೆಯಲು, ಪ್ಯಾನೆಲ್ ನ ಮೇಲೆ ಮೌಸ್-ಬಟನ್ ಅನ್ನು ರೈಟ್-ಕ್ಲಿಕ್ ಮಾಡಿ. |
04:09 | ಪಾಪ್-ಅಪ್ ಮೆನ್ಯು, ಪ್ಯಾನೆಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
04:12 | ಪಾಪ್-ಅಪ್ ಮೆನ್ಯು, ಪರಮಾಣುಗಳ ಪ್ರದರ್ಶನವನ್ನು (display) ಮಾರ್ಪಡಿಸಲು ಅನೇಕ ಫಂಕ್ಷನ್ ಗಳನ್ನು ಒದಗಿಸುತ್ತದೆ. |
04:18 | ಇದು ಆರಿಸಿಕೊಳ್ಳಲು ಮತ್ತು ರೆಂಡರ್ ಮಾಡಲು ವಿವಿಧ ಆಯ್ಕೆಗಳನ್ನು ಹೊಂದಿದೆ. |
04:22 | ಈ ಮೆನ್ಯುನಲ್ಲಿರುವ ಹಲವಾರು ಫಂಕ್ಷನ್ ಗಳು, ಮೆನ್ಯು ಬಾರ್ ನಲ್ಲಿ ಸಹ ಇರುತ್ತವೆ. |
04:28 | ಪಾಪ್-ಅಪ್ ಮೆನ್ಯುನಲ್ಲಿರುವ ಐಟಂ ಗಳು ಸ್ವ-ವಿವರಣಾತ್ಮಕವಾಗಿವೆ. |
04:32 | ಅವುಗಳಿಗೆ ವಿಸ್ತಾರವಾದ ವಿವರಣೆಯ ಅವಶ್ಯಕತೆ ಇಲ್ಲ. |
04:35 | ಪಾಪ್-ಅಪ್ ಮೆನ್ಯುನಿಂದ ಹೊರಗೆ ಬರಲು, 'Jmol' ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ. |
04:39 | ಪಾಪ್-ಅಪ್ ಮೆನ್ಯುವನ್ನು ಆಕ್ಸೆಸ್ ಮಾಡುವ ಇನ್ನೊಂದು ರೀತಿ: 'Jmol' ಲೋಗೋದ ಮೇಲೆ ಕ್ಲಿಕ್ ಮಾಡುವುದು. |
04:44 | ಅದು 'Jmol' ಪ್ಯಾನೆಲ್ ನ ಕೆಳಗೆ ಬಲಮೂಲೆಯಲ್ಲಿದೆ. |
04:49 | ಈಗ ನಾವು ಈ ಅಣುವನ್ನು ಎಡಿಟ್ ಮಾಡಿ, ಅದನ್ನು 'Ethane' (ಇಥೇನ್) ಅಣುವಿಗೆ ಹೇಗೆ ಪರಿವರ್ತನೆ ಮಾಡುವುದೆಂದು ನೋಡೋಣ. |
04:55 | ಇದಕ್ಕಾಗಿ ನಾವು ಹೈಡ್ರಾಕ್ಸೀ ಗ್ರೂಪ್, 'ಕ್ಲೋರಿನ್' ಗ್ರೂಪ್, 'ಕಾರ್ಬನ್' ಮತ್ತು ಎರಡು 'ಹೈಡ್ರೋಜನ್' ಪರಮಾಣುಗಳನ್ನು ಡಿಲೀಟ್ ಮಾಡೋಣ. |
05:05 | 'model kit' (ಮಾಡೆಲ್ ಕಿಟ್) ಮೆನ್ಯುವನ್ನು ಒಪನ್ ಮಾಡಿ. |
05:08 | “delete atom” ನ ಬದಿಯಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ. |
05:12 | ನೀವು ಡಿಲೀಟ್ ಮಾಡಬೇಕೆಂದಿರುವ |
05:15 | 'ಆಕ್ಸೀಜನ್, ಕ್ಲೋರಿನ್' ಮತ್ತು 'ಕಾರ್ಬನ್' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
05:21 | 'ಇಥೇನ್' ಅಣುವನ್ನು ರಚಿಸಲು, ನಾವು ಹೈಡ್ರೋಜನ್ ಗಳನ್ನು ಈ ಅಣುವಿಗೆ ಸೇರಿಸಬೇಕು. |
05:26 | 'model kit' ಮೆನ್ಯುವಿನ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:32 | ಎರಡು 'ಹೈಡ್ರೋಜನ್' ಪರಮಾಣುಗಳನ್ನು ಈ ಅಣುವಿಗೆ ಸೇರಿಸಲಾಯಿತು. |
05:36 | ಈಗ, ನಮ್ಮ ಹತ್ತಿರ ಸ್ಕ್ರೀನ್ ನ ಮೇಲೆ ಇಥೇನ್ ನ ಮಾಡೆಲ್ ಇದೆ. |
05:40 | ನಾವು 'ಅಲ್ಕೀನ್ಸ್' ಮತ್ತು 'ಅಲ್ಕೈನ್ಸ್'ಗಳನ್ನು ರಚಿಸುವುನ್ನು ಕಲಿಯೋಣ. |
05:45 | ಪರಮಾಣುವಿನಲ್ಲಿ ಡಬಲ್-ಬಾಂಡ್ ಅನ್ನು ಸೇರಿಸಲು, 'ಮಾಡೆಲ್ ಕಿಟ್' ಮೆನ್ಯುವನ್ನು ಒಪನ್ ಮಾಡಿ. |
05:50 | 'double' (ಡಬಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ. |
05:53 | 'Ethane' (ಇಥೇನ್) ಅಣುವಿನಲ್ಲಿಯ ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕರ್ಸರನ್ನು ಇಡಿ. |
05:58 | 'ಕಾರ್ಬನ್' ಅಣುವಿನ ಸುತ್ತ, ಕೆಂಪು ಬಣ್ಣದ ರಿಂಗ್ ಗಳು ಕಾಣುತ್ತವೆ. |
06:01 | ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
06:05 | ಸಿಂಗಲ್ ಬಾಂಡ್, ಡಬಲ್ ಬಾಂಡ್ ಆಗಿ ಬದಲಾಯಿಸಿರುವುದನ್ನು ಗಮನಿಸಿ. |
06:09 | ಈಗ ನಮ್ಮ ಹತ್ತಿರ, 'ಇಥೀನ್'ನ ಮಾಡೆಲ್, ಪ್ಯಾನೆಲ್ ನ ಮೇಲಿದೆ. |
06:13 | ನಾವೀಗ ಇಥೀನ್ ಅನ್ನು ಇಥೈನ್ ಆಗಿ ಬದಲಾಯಿಸೋಣ. |
06:16 | 'ಮಾಡೆಲ್ ಕಿಟ್' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple' (ಟ್ರಿಪಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ. |
06:21 | 'ಇಥೀನ್' ಅಣುವಿನಲ್ಲಿ, ಡಬಲ್-ಬಾಂಡ್ ನ ಮೇಲೆ ಕರ್ಸರನ್ನು ಇಟ್ಟು ಕ್ಲಿಕ್ ಮಾಡಿ. |
06:28 | ಡಬಲ್-ಬಾಂಡ್ ಈಗ ಟ್ರಿಪಲ್-ಬಾಂಡ್ ಆಗಿ ಬದಲಾಯಿಸಿದೆ. |
06:31 | ಇದು ಇಥೈನ್ (Ethyne) ನ ಮಾಡೆಲ್ ಆಗಿದೆ. |
06:34 | ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಪಡೆಯಲು, ಎನರ್ಜಿ ಮಿನಿಮೈಸೇಶನ್ ಮಾಡಿ ಮತ್ತು ಸೇವ್ ಮಾಡಿ. |
06:40 | ಈಗ ನಾವು ಸಾರಾಂಶಗೊಳಿಸೋಣ. |
06:41 | ಈ ಟ್ಯುಟೋರಿಯಲ್ ನಲ್ಲಿ, ನಾವು: |
06:43 | * ಅಲ್ಕೇನ್ ಗಳಲ್ಲಿಯ ಹೈಡ್ರೋಜನ್ ಪರಮಾಣುವನ್ನು ಒಂದು ಫಂಕ್ಶನಲ್ ಗ್ರೂಪ್ ನಿಂದಬದಲಾಯಿಸುವುದು |
06:48 | * ಅಲ್ಕೇನ್ ಗಳನ್ನು, ಅಲ್ಕೀನ್ ಗಳು ಮತ್ತು ಅಲ್ಕೈನ್ ಗಳನ್ನಾಗಿ ಬದಲಾಯಿಸಲು ಬಾಂಡ್ ಗಳನ್ನು ಸೇರಿಸುವುದು |
06:52 | * ಪರಮಾಣುಗಳನ್ನು ಸೇರಿಸುವುದು ಹಾಗೂ ತೆಗೆದುಹಾಕುವುದು ಮತ್ತು |
06:54 | * ಪಾಪ್–ಅಪ್ ಮೆನ್ಯುವನ್ನು ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
06:58 | ಅಸೈನ್ಮೆಂಟ್ ಗಾಗಿ: |
06:59 | # '2-fluoro-1,3-butadiene' (ಟು ಫ್ಲೋರೊ ವನ್ ಥ್ರೀ ಬ್ಯೂಟಾಡೈನ್) ಮತ್ತು '2-pentyne' (ಟು ಪೆಂಟೈನ್) ಗಳ ಮಾಡೆಲ್ ಗಳನ್ನು ರಚಿಸಿ. |
07:06 | # ಮಾಡೆಲ್ ನ ಡಿಸ್ಪ್ಲೇಯನ್ನು 'wireframe' (ವೈರ್ ಫ್ರೇಮ್) ಗೆ ಬದಲಾಯಿಸಲು, ಪಾಪ್-ಅಪ್ ಮೆನ್ಯುವನ್ನು ಉಪಯೋಗಿಸಿ. |
07:10 | # ಎನರ್ಜಿ ಮಿನಿಮೈಸೇಶನ್ ಅನ್ನು ಮಾಡಿ ಮತ್ತು ಇಮೇಜ್ ಅನ್ನು 'PDF' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. |
07:16 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗಿನಂತೆ ಕಾಣಬೇಕು. |
07:24 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ: |
07:27 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
07:31 | ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:36 | ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್: |
07:38 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:41 | * ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
07:45 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
07:52 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ. |
07:57 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
08:04 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
08:08 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….
ವಂದನೆಗಳು. |