Jmol-Application/C2/Create-and-edit-molecular-models/Kannada

From Script | Spoken-Tutorial
Jump to: navigation, search
Time Narration
00:01 Jmol Application (ಜೆ-ಮೋಲ್ ಅಪ್ಲಿಕೇಶನ್) ನಲ್ಲಿಯ Create and Edit molecular models ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎಂಬ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ, ನಾವು:
00:12 ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್-ಮೊಡೆಲ್ ನಲ್ಲಿ ಹೈಡ್ರೋಜನ್ ಪರಮಾಣುವನ್ನು ಸೇರಿಸುವುದು,
00:17 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:20 ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:23 ಮತ್ತು ಕೊಂಟೆಕ್ಷ್ಟುಅಲ್ (contextual) ಮೆನ್ಯು ಅರ್ಥಾತ್ ಪಾಪ್-ಅಪ್ ಮೆನ್ಯುವನ್ನು ಬಳಸುವುದು ಇವುಗಳನ್ನು ಕಲಿಯುವೆವು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು:
00:32 ’Jmol Application’ (ಜೆ-ಮೋಲ್ ಅಪ್ಲಿಕೇಶನ್) ವಿಂಡೊ ಮತ್ತು
00:36 ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’ಮಾಡೆಲ್ ಕಿಟ್’ ( Modelkit) ಎಂಬ ಫಂಕ್ಷನ್ ನ ಬಗ್ಗೆ ತಿಳಿದಿರಬೇಕು.
00:41 ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ.
00:46 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:49 Ubuntu (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ 12.04,
00:53 Jmol (ಜೆಮೋಲ್) ಆವೃತ್ತಿ 12.2.2,
00:57 ಮತ್ತು Java ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ.
01:00 ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು, 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ.
01:05 ಸರ್ಚ್-ಬಾಕ್ಸ್ ನಲ್ಲಿ ’Jmol’ (ಜೆಮೋಲ್) ಎಂದು ಟೈಪ್ ಮಾಡಿ.
01:08 ಸ್ಕ್ರೀನ್ ನ ಮೇಲೆ 'Jmol' (ಜೆಮೋಲ್) ಐಕಾನ್ ಕಾಣಿಸುತ್ತದೆ.
01:11 ಜೆಮೋಲ್ ಅಪ್ಲಿಕೇಶನ್ ವಿಂಡೋವನ್ನು ತೆರೆಯಲು, 'Jmol' (ಜೆಮೋಲ್) ಐಕಾನ್ ಮೇಲೆ ಕ್ಲಿಕ್ ಮಾಡಿ.
01:17 ನಾವು ಈಮೊದಲು ರಚನೆ ಮಾಡಿದ ”Propane” ನ (ಪ್ರೊಪೇನ್) ಮಾಡೆಲ್ ನಿಂದ ಪ್ರಾರಂಭಿಸೋಣ.
01:22 ಫೈಲನ್ನು ಓಪನ್ ಮಾಡಲು, ಟೂಲ್-ಬಾರ್ ಮೇಲಿನ “Open file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:27 ಸ್ಕ್ರೀನ್ ಮೇಲೆ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:30 ನಿಮಗೆ ಬೇಕಾಗಿರುವ ಫೈಲ್ ಅನ್ನು ಇಟ್ಟಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
01:34 ನನ್ನ ಫೈಲ್, ಡೆಸ್ಕ್ಟಾಪ್ ನ ಮೇಲೆ ಇದೆ.
01:37 ಹೀಗಾಗಿ, ನಾನು ಡೆಸ್ಕ್ಟಾಪ್ ಅನ್ನು ಆಯ್ಕೆಮಾಡುವೆನು ಮತ್ತು 'Open' ಬಟನ್ ಮೇಲೆ ಕ್ಲಿಕ್ ಮಾಡುವೆನು.
01:43 “File or URL” ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ಫೈಲ್ನ ಹೆಸರನ್ನು ಟೈಪ್ ಮಾಡಿ.
01:48 ನಂತರ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
01:51 'Propane'ನ (ಪ್ರೊಪೇನ್) ಮಾಡೆಲ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
01:55 ನಾವು 'ಪ್ರೊಪೇನ್' ನಲ್ಲಿಯ ಹೈಡ್ರೋಜನ್ ಗಳ ಬದಲಿಗೆ ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ ಹಾಗೂ ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಾಲೋಜೆನ್ ಗಳನ್ನು ಸೇರಿಸಬಹುದು.
02:07 'ಪ್ರೊಪೇನ್' ಅಣುವನ್ನು 'ಪ್ರೊಪನಾಲ್' ಆಗಿ ಪರಿವರ್ತಿಸಲು, ಅದಕ್ಕೆ ಒಂದು 'ಹೈಡ್ರಾಕ್ಸೀ' ಗ್ರುಪ್ ಅನ್ನು ನಾನು ಸೇರಿಸಬೇಕಾಗಿದೆ.
02:13 ಮೊಡೆಲ್ ಕಿಟ್ ಮೆನ್ಯುವನ್ನು ಒಪನ್ ಮಾಡಿ. ಇಲ್ಲಿ ಫಂಕ್ಶನಲ್ ಗ್ರೂಪ್ ಗಳ ಒಂದು ಲಿಸ್ಟ್, ಸಿಗುತ್ತದೆ.
02:20 'Oxygen'(ಆಕ್ಸಿಜೆನ್) ಪರಮಾಣುವಿನ ಪಕ್ಕದ ಬಾಕ್ಸನ್ನು ಚೆಕ್ ಮಾಡಿ.
02:23 ಮೊದಲನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿರುವ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:28 ಹೈಡ್ರೋಜನ್ ಪರಮಾಣುವಿಗೆ ಬದಲಾಗಿ 'ಹೈಡ್ರಾಕ್ಸೀ' ಗ್ರೂಪ್ ಅನ್ನು ಸೇರಿಸಿರುವುದನ್ನು ಗಮನಿಸಿ. ಇಲ್ಲಿ, 'ಆಕ್ಸಿಜೆನ್' ಪರಮಾಣು, ಕೆಂಪು ಬಣ್ಣದಲ್ಲಿ ಕಾಣುತ್ತಿದೆ.
02:37 ಈಗ 'ಪ್ರೊಪೇನ್', '1-Propanol' ಆಗಿ ಬದಲಾಗಿದೆ.
02:41 ಈಗ ನಾವು 1-Propanol (ವನ್-ಪ್ರೊಪೆನಾಲ್) ಅನ್ನು '2-chloro-1-propanol' (ಟು-ಕ್ಲೋರೊ-ವನ್-ಪ್ರೊಪೆನಾಲ್) ಆಗಿ ಪರಿವರ್ತಿಸಲು ಪ್ರಯತ್ನಿಸೋಣ.
02:47 ಮಾಡೆಲ್ ಕಿಟ್ ಮೆನ್ಯುನಿಂದ, 'Chloro' (ಕ್ಲೋರೊ) ಗ್ರುಪ್ ಅನ್ನು ಆಯ್ಕೆ ಮಾಡಿ.
02:51 ಎರಡನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿದ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:57 ಈಗ ನಮ್ಮ ಹತ್ತಿರ '2-chloro-1-propanol' ನ ಮಾಡೆಲ್ ಇದೆ. ಇಲ್ಲಿ, ಕ್ಲೋರಿನ್ ಹಸಿರು ಬಣ್ಣದಲ್ಲಿ ಕಾಣುತ್ತಿದೆ.
03:04 ನೀವು 'ಎನರ್ಜಿ ಮಿನಿಮೈಜೇಶನ್' ಅನ್ನು ಮಾಡಬಹುದು ಮತ್ತು ಇಮೇಜ್ ಅನ್ನು 'dot mol' ಫೈಲ್ ಎಂದು ಸೇವ್ ಮಾಡಬಹುದು.
03:10 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
03:11 * '3-bromo-1-butanol' (3-ಬ್ರೊಮೊ-1-ಬ್ಯೂಟನಾಲ್) ಮತ್ತು '2-amino-4-chloro-pentane' (2-ಅಮೀನೊ-4-ಕ್ಲೋರೊ-ಪೆಂಟೇನ್) ಎಂಬ ಅಣುಗಳ ಮಾಡೆಲ್ ಗಳನ್ನು ಮಾಡಿ.
03:20 * ಎನರ್ಜಿ-ಮಿನಿಮೈಜೇಶನ್ ಮಾಡಿ ಮತ್ತು ಇಮೇಜ್ ಅನ್ನು 'ಜೆ ಪಿ ಇ ಜಿ ಫಾರ್ಮ್ಯಾಟ್' (JPEG format) ನಲ್ಲಿ ಸೇವ್ ಮಾಡಿ.
03:25 ಇಮೇಜ್ ಅನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು,
03:28 ಟೂಲ್-ಬಾರ್ ನಲ್ಲಿಯ “Save current view as an image” ಎಂಬ ಐಕಾನ್ ಅನ್ನು ಬಳಸಿ.
03:33 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.
03:40 ಈಗ ನಾವು ಜೆಮೋಲ್ ಅಪ್ಲಿಕೇಶನ್ ವಿಂಡೋಗೆ ಹಿಂದಿರುಗೋಣ.
03:45 ಜೆಮೋಲ್ ಅಪ್ಲಿಕೇಶನ್, ಒಂದು ಪಾಪ್-ಅಪ್ (Pop-up) ಮೆನ್ಯುವನ್ನು ಸಹ ಒದಗಿಸುತ್ತದೆ.
03:50 ನೀವು ಪಾಪ್-ಅಪ್ ಮೆನ್ಯುವನ್ನು ಎರಡು ವಿಧಗಳಲ್ಲಿ ಬಳಸಲು ಸಾಧ್ಯವಿದೆ.
03:55 'ಮಾಡೆಲ್ ಕಿಟ್' ಮೆನ್ಯು ಒಪನ್ ಇದ್ದರೆ, ಅದರಿಂದ ಹೊರಗೆ ಬನ್ನಿ.
03:59 'ಮಾಡೆಲ್ ಕಿಟ್' ಮೆನ್ಯುವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು “Exit model kit mode” ನ ಮೇಲೆ ಕ್ಲಿಕ್ ಮಾಡಿ.
04:04 ಪಾಪ್-ಅಪ್ ಮೆನ್ಯುವನ್ನು ಓಪನ್ ಮಾಡಲು, ಪ್ಯಾನೆಲ್ ನ ಮೇಲೆ ಮೌಸ್-ಬಟನ್ ಅನ್ನು ರೈಟ್-ಕ್ಲಿಕ್ ಮಾಡಿ.
04:09 ಪ್ಯಾನೆಲ್ ನ ಮೇಲೆ ಪಾಪ್-ಅಪ್ ಮೆನ್ಯು ಕಾಣಿಸಿಕೊಳ್ಳುತ್ತದೆ.
04:12 ಪರಮಾಣುಗಳ ಪ್ರದರ್ಶನವನ್ನು (display) ಮಾರ್ಪಡಿಸಲು ಪಾಪ್-ಅಪ್ ಮೆನ್ಯು, ಅನೇಕ ಫಂಕ್ಷನ್ ಗಳನ್ನು ಒದಗಿಸುತ್ತದೆ.
04:18 ಇದು ಆಯ್ಕೆಮಾಡಲು ಮತ್ತು ರೆಂಡರ್ ಮಾಡಲು ವಿವಿಧ ಆಯ್ಕೆಗಳನ್ನು ಹೊಂದಿದೆ.
04:22 ಈ ಮೆನ್ಯುನಲ್ಲಿರುವ ಹಲವಾರು ಫಂಕ್ಷನ್ ಗಳು, ಮೆನ್ಯು ಬಾರ್ ನಲ್ಲಿ ಸಹ ಇರುತ್ತವೆ.
04:28 ಪಾಪ್-ಅಪ್ ಮೆನ್ಯುನಲ್ಲಿರುವ ಐಟಂ ಗಳು ಸ್ವ-ವಿವರಣಾತ್ಮಕವಾಗಿವೆ.
04:32 ಅವುಗಳಿಗೆ ವಿಸ್ತಾರವಾದ ವಿವರಣೆಯ ಅವಶ್ಯಕತೆ ಇಲ್ಲ.
04:35 ಪಾಪ್-ಅಪ್ ಮೆನ್ಯುನಿಂದ ಹೊರಗೆ ಬರಲು, 'Jmol' ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
04:39 ಪಾಪ್-ಅಪ್ ಮೆನ್ಯುವನ್ನು ಆಕ್ಸೆಸ್ ಮಾಡುವ ಎರಡನೆಯ ರೀತಿ: 'Jmol' ಲೋಗೋದ ಮೇಲೆ ಕ್ಲಿಕ್ ಮಾಡುವುದು.
04:44 ಅದು 'Jmol' ಪ್ಯಾನೆಲ್ ನ ಕೆಳಗೆ ಬಲಮೂಲೆಯಲ್ಲಿದೆ.
04:49 ಈಗ ನಾವು ಈ ಅಣುವನ್ನು ಎಡಿಟ್ ಮಾಡಿ, ಅದನ್ನು 'Ethane' (ಇಥೇನ್) ಅಣುವಿಗೆ ಹೇಗೆ ಪರಿವರ್ತನೆ ಮಾಡುವುದೆಂದು ನೋಡೋಣ.
04:55 ಇದಕ್ಕಾಗಿ, ನಾವು ಹೈಡ್ರಾಕ್ಸೀ ಗ್ರೂಪ್, 'ಕ್ಲೋರಿನ್' ಗ್ರೂಪ್, 'ಕಾರ್ಬನ್' ಮತ್ತು ಎರಡು 'ಹೈಡ್ರೋಜನ್' ಪರಮಾಣುಗಳನ್ನು ಡಿಲೀಟ್ ಮಾಡೋಣ.
05:05 ಮಾಡೆಲ್-ಕಿಟ್ ಮೆನ್ಯುವನ್ನು ಒಪನ್ ಮಾಡಿ.
05:08 “delete atom” ನ ಬದಿಯಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ.
05:12 ನೀವು ಡಿಲೀಟ್ ಮಾಡಬೇಕೆಂದಿರುವ
05:15 'ಆಕ್ಸೀಜನ್, ಕ್ಲೋರಿನ್' ಮತ್ತು 'ಕಾರ್ಬನ್' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
05:21 'ಇಥೇನ್' ಅಣುವನ್ನು ರಚಿಸಲು, ನಾವು ಹೈಡ್ರೋಜನ್ ಗಳನ್ನು ಈ ಅಣುವಿಗೆ ಸೇರಿಸಬೇಕು.
05:26 'ಮಾಡೆಲ್-ಕಿಟ್' ಮೆನ್ಯುವಿನ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:32 ಎರಡು 'ಹೈಡ್ರೋಜನ್' ಪರಮಾಣುಗಳನ್ನು ಈ ಅಣುವಿಗೆ ಸೇರಿಸಲಾಗಿದೆ.
05:36 ಈಗ, ನಮ್ಮ ಹತ್ತಿರ ಸ್ಕ್ರೀನ್ ನ ಮೇಲೆ ಇಥೇನ್ ನ ಮಾಡೆಲ್ ಇದೆ.
05:40 ನಾವು 'ಅಲ್ಕೀನ್ಸ್' ಮತ್ತು 'ಅಲ್ಕೈನ್ಸ್'ಗಳನ್ನು ರಚಿಸುವುನ್ನು ಕಲಿಯೋಣ.
05:45 ಅಣುವಿನಲ್ಲಿ ಡಬಲ್-ಬಾಂಡ್ ಅನ್ನು ಸೇರಿಸಲು, 'ಮಾಡೆಲ್ ಕಿಟ್' ಮೆನ್ಯುವನ್ನು ಒಪನ್ ಮಾಡಿ.
05:50 'double' (ಡಬಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ.
05:53 ಇಥೇನ್ ಅಣುವಿನಲ್ಲಿಯ ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕರ್ಸರನ್ನು ಇಡಿ.
05:58 'ಕಾರ್ಬನ್' ಅಣುಗಳ ಸುತ್ತ, ಕೆಂಪು ಬಣ್ಣದ ರಿಂಗ್ ಗಳು ಕಾಣುತ್ತವೆ.
06:01 ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
06:05 ಸಿಂಗಲ್ ಬಾಂಡ್, ಡಬಲ್ ಬಾಂಡ್ ಆಗಿ ಬದಲಾಯಿಸಿರುವುದನ್ನು ಗಮನಿಸಿ.
06:09 ಈಗ ನಮ್ಮ ಹತ್ತಿರ, ಪ್ಯಾನೆಲ್ ನ ಮೇಲೆ 'ಇಥೀನ್'ನ ಮಾಡೆಲ್ ಇದೆ.
06:13 ನಾವೀಗ ಇಥೀನ್ ಅನ್ನು ಇಥೈನ್ ಆಗಿ ಬದಲಾಯಿಸೋಣ.
06:16 'ಮಾಡೆಲ್ ಕಿಟ್' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple' (ಟ್ರಿಪಲ್) ಎಂಬ ಆಯ್ಕೆಯನ್ನು ಚೆಕ್ ಮಾಡಿ.
06:21 'ಇಥೀನ್' ಅಣುವಿನಲ್ಲಿ, ಡಬಲ್-ಬಾಂಡ್ ನ ಮೇಲೆ ಕರ್ಸರನ್ನು ಇಟ್ಟು ಅದರ ಮೇಲೆ ಕ್ಲಿಕ್ ಮಾಡಿ.
06:28 ಡಬಲ್-ಬಾಂಡ್, ಈಗ ಟ್ರಿಪಲ್-ಬಾಂಡ್ ಆಗಿ ಬದಲಾಯಿಸಿದೆ.
06:31 ಇದು ಇಥೈನ್ (Ethyne) ನ ಮಾಡೆಲ್ ಆಗಿದೆ.
06:34 ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಪಡೆಯಲು, ಎನರ್ಜಿ-ಮಿನಿಮೈಸೇಶನ್ ಮಾಡಿ ಮತ್ತು ಸೇವ್ ಮಾಡಿ.
06:40 ಈಗ ನಾವು ಸಾರಾಂಶಗೊಳಿಸೋಣ.
06:41 ಈ ಟ್ಯುಟೋರಿಯಲ್ ನಲ್ಲಿ, ನಾವು:
06:43 ಅಲ್ಕೇನ್ ಗಳಲ್ಲಿಯ ಹೈಡ್ರೋಜನ್ ಪರಮಾಣುವನ್ನು ಫಂಕ್ಶನಲ್ ಗ್ರೂಪ್ ನಿಂದ ಬದಲಾಯಿಸುವುದು,
06:48 ಅಲ್ಕೇನ್ ಗಳನ್ನು, ಅಲ್ಕೀನ್ ಗಳು ಮತ್ತು ಅಲ್ಕೈನ್ ಗಳನ್ನಾಗಿ ಬದಲಾಯಿಸಲು ಬಾಂಡ್ ಗಳನ್ನು ಸೇರಿಸುವುದು,
06:52 ಪರಮಾಣುಗಳನ್ನು ಸೇರಿಸುವುದು ಹಾಗೂ ತೆಗೆದುಹಾಕುವುದು ಮತ್ತು
06:54 ಪಾಪ್–ಅಪ್ ಮೆನ್ಯುವನ್ನು ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
06:58 ಅಸೈನ್ಮೆಂಟ್ ಗಾಗಿ:
06:59 '2-fluoro-1,3-butadiene' (ಟು ಫ್ಲೋರೊ ವನ್ ಥ್ರೀ ಬ್ಯೂಟಾಡೈನ್) ಮತ್ತು '2-pentyne' (ಟು ಪೆಂಟೈನ್) ಗಳ ಮಾಡೆಲ್ ಗಳನ್ನು ರಚಿಸಿ.
07:06 ಮಾಡೆಲ್ ನ ಡಿಸ್ಪ್ಲೇಯನ್ನು 'wireframe' (ವೈರ್ ಫ್ರೇಮ್) ಗೆ ಬದಲಾಯಿಸಲು, ಪಾಪ್-ಅಪ್ ಮೆನ್ಯುವನ್ನು ಉಪಯೋಗಿಸಿ.
07:10 ಎನರ್ಜಿ ಮಿನಿಮೈಸೇಶನ್ ಅನ್ನು ಮಾಡಿ ಮತ್ತು ಇಮೇಜ್ ಅನ್ನು 'PDF' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
07:16 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗಿನಂತೆ ಕಾಣಬೇಕು.
07:24 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ:

http://spoken-tutorial.org/What_is_a_Spoken_Tutorial

07:27 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
07:31 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:36 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್:
07:38 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:41 * ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
07:45 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

07:52 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ.
07:57 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
08:04 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

08:08 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14