LibreOffice-Suite-Draw/C2/Fill-objects-with-color/Kannada
From Script | Spoken-Tutorial
Revision as of 22:01, 28 January 2016 by Sandhya.np14 (Talk | contribs)
Time | Narration |
00:00 | LibreOffice Drawನಲ್ಲಿ Fill Objects with Color ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನೀವು: |
00:09 | * object ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು ತುಂಬುವುದನ್ನು |
00:15 | * ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು ಮತ್ತು |
00:17 | * ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ. |
00:20 | ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ. |
00:24 | ನೀವು object ಗಳನ್ನು: |
00:25 | * ಬಣ್ಣಗಳಿಂದ |
00:26 | * ಗ್ರೇಡಿಯೆಂಟ್ ಗಳಿಂದ |
00:29 | * ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್ ಗಳಿಂದ ಮತ್ತು |
00:32 | * ಚಿತ್ರಗಳಿಂದ ತುಂಬಬಹುದು. |
00:33 | ಇಲ್ಲಿ ನಾವು:
|
00:42 | ನಾವು 'WaterCycle' ಚಿತ್ರದಲ್ಲಿ ಬಣ್ಣವನ್ನು ತುಂಬೋಣ. |
00:46 | ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬುತ್ತೇವೆ. |
00:54 | ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ. |
00:56 | ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ' ವನ್ನು ಕ್ಲಿಕ್ ಮಾಡಿ. |
01:01 | “Area” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
01:05 | 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು 'Fill' ಎಂಬ ಆಯ್ಕೆಯ ಕೆಳಗೆ 'Color' ಅನ್ನು ಆರಿಸಿ. |
01:13 | ಸ್ಕ್ರೋಲ್-ಡೌನ್ ಮಾಡಿ ಮತ್ತು 'White' ನ ಮೇಲೆ ಕ್ಲಿಕ್ ಮಾಡಿ. |
01:16 | 'OK' ಎಂದು ಕ್ಲಿಕ್ ಮಾಡಿ. |
01:19 | ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ. |
01:24 | 'Area' ದ ಕೆಳಗೆ, 'Color' ಮತ್ತು 'White' ನ ಮೇಲೆ ರೈಟ್-ಕ್ಲಿಕ್ ಮಾಡಿ. |
01:30 | ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ. |
01:33 | ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು (ಗುಂಪು ಮಾಡುವುದು). |
01:38 | ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು. |
01:46 | ಮೊದಲು ಅವುಗಳ ಒಂದು ಗುಂಪು ಮಾಡೋಣ. |
01:48 | 'Shift' ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ. |
01:54 | 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Group' ಎಂದು ಕ್ಲಿಕ್ ಮಾಡಿ. |
01:58 | ಮೋಡಗಳು ಗುಂಪಿನಲ್ಲಿ ಸೇರಿದವು. |
02:00 | ಮತ್ತೆ, 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ'ದ ಮೇಲೆ ಕ್ಲಿಕ್ ಮಾಡಿ. |
02:07 | “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. 'Fill' ಎಂಬ ಆಯ್ಕೆಯ ಕೆಳಗೆ, 'Color' ಅನ್ನು ಆರಿಸಿ. ನಂತರ ಸ್ಕ್ರೋಲ್-ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ. |
02:23 | 'OK'ಯನ್ನು ಕ್ಲಿಕ್ ಮಾಡಿ. |
02:25 | ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ. |
02:37 | ಈಗ, ಹೀಗೆಯೇ ನಾವು ಮತ್ತೆ ಆಯತವನ್ನು “brown 4”ನಿಂದ ತುಂಬೋಣ. |
02:48 | ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ. |
02:58 | ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” (ಟರ್ಕ್ವಾಯಿಸ್ 1) ಎಂಬ ಬಣ್ಣ ತುಂಬೋಣ. |
03:05 | ಅವುಗಳಿಗೆ ಒಂದೇ ರೀತಿಯ ಫಾರ್ಮ್ಯಾಟಿಂಗ್ (formatting) ನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲದಿದ್ದರೆ, ಅವುಗಳನ್ನು ಒಂದು ಗುಂಪಾಗಿಸೋಣ. |
03:12 | ಅವುಗಳಿಗೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್-ಕ್ಲಿಕ್, 'Area -> Area ಟ್ಯಾಬ್ -> Fill -> color -> turquoise 1' |
03:27 | “water” ಎಂಬ ಆಬ್ಜೆಕ್ಟ್ ನಲ್ಲಿ, ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ. |
03:35 | ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ. |
03:41 | ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Line' ಮೇಲೆ ಕ್ಲಿಕ್ ಮಾಡಿ. |
03:48 | “Line” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
03:52 | “Line” ಟ್ಯಾಬ್ ಕ್ಲಿಕ್ ಮಾಡಿ. |
03:55 | 'Line properties' ನಲ್ಲಿ, 'Style' ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು 'Invisible' ಎಂದು ಆಯ್ಕೆ ಮಾಡಿ. |
04:03 | 'OK'ಯನ್ನು ಕ್ಲಿಕ್ ಮಾಡಿ. |
04:05 | 'water' ಆಬ್ಜೆಕ್ಟ್ ನ ಬಾಹ್ಯರೇಖೆ ಮರೆಯಾಗುತ್ತದೆ. |
04:09 | ಈಗ, ನಾವು ಮರಗಳಿಗೆ ಬಣ್ಣ ತುಂಬೋಣ. |
04:14 | ಎಡಭಾಗದ ಕೊನೆಯ ಮರವನ್ನು ಆಯ್ಕೆ ಮಾಡೋಣ. |
04:16 | 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Enter Group'ನ ಮೇಲೆ ಕ್ಲಿಕ್ ಮಾಡಿ. |
04:23 | ಈಗ, ನಾವು ಮರವನ್ನು ಎಡಿಟ್ ಮಾಡೋಣ. |
04:26 | ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ. |
04:30 | 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area'ದ ಮೇಲೆ ಕ್ಲಿಕ್ ಮಾಡಿ. |
04:36 | 'Area' ಎಂಬ ಡೈಲಾಗ್-ಬಾಕ್ಸ್ ನಲ್ಲಿ, |
04:38 | 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:40 | 'Fill'ನ ಕೆಳಗೆ, 'Color' ಅನ್ನು ಆಯ್ಕೆ ಮಾಡಿ. |
04:44 | ಸ್ಕ್ರೋಲ್-ಡೌನ್ ಮಾಡಿ ಮತ್ತು “Green 5” ನ ಮೇಲೆ ಕ್ಲಿಕ್ ಮಾಡಿ. |
04:47 | 'OK'ಯನ್ನು ಕ್ಲಿಕ್ ಮಾಡಿ. |
04:49 | ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ. |
04:57 | ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ. |
05:05 | Y-ಆಕೃತಿಯ arrow ವನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ಮೇಲೆ ಕ್ಲಿಕ್ ಮಾಡಿ. |
05:08 | 'Area' ಡೈಲಾಗ್-ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ. |
05:15 | ಹೀಗಾಗಿ, ನಾವು 'Color' ಅನ್ನು ಆಯ್ಕೆ ಮಾಡೋಣ. |
05:18 | ಸ್ಕ್ರೋಲ್-ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ. |
05:21 | 'OK'ಯನ್ನು ಕ್ಲಿಕ್ ಮಾಡಿ. |
05:23 | ನಾವು ಮರಕ್ಕೆ ಬಣ್ಣ ತುಂಬಿದ್ದೇವೆ! |
05:26 | ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು 'Exit Group' ಆಯ್ಕೆಮಾಡಿ. |
05:31 | ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು. |
05:36 | ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು 'ಕಾಪಿ-ಪೇಸ್ಟ್' ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು. |
05:44 | ಇದು ಇನ್ನೂ ಸರಳವಾದ ರೀತಿ, ಅಲ್ಲವೇ? |
05:49 | ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ ನೆರಳನ್ನು ಸೇರಿಸೋಣ. |
05:55 | ಅವುಗಳನ್ನು ಆರಿಸಲು, 'Drawing' ಟೂಲ್-ಬಾರ್ ನಿಂದ 'Select' ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ. |
06:03 | ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಹಾಗೂ 'Area' ವನ್ನು ಕ್ಲಿಕ್ ಮಾಡಿ. |
06:10 | “Area” ಡೈಲಾಗ್ ಬಾಕ್ಸ್ ನಲ್ಲಿ, 'Shadow' ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
06:15 | 'Properties'ನಲ್ಲಿ 'Use Shadow' ಬಾಕ್ಸ್ ಅನ್ನು ಚೆಕ್ ಮಾಡಿ. |
06:20 | ಬೇರೆ 'ಫೀಲ್ಡ್'ಗಳು ಈಗ ಕ್ರಿಯಾಶೀಲವಾಗುತ್ತವೆ. |
06:24 | 'Position' ನಲ್ಲಿ 'bottom-right corner' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:29 | “Position” ಎಂಬುದು ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ. |
06:33 | 'Color' ಫೀಲ್ಡ್ ನಲ್ಲಿ 'Gray' ಎಂಬುದನ್ನು ಆಯ್ಕೆ ಮಾಡಿ. |
06;36 | 'OK' ಯ ಮೇಲೆ ಕ್ಲಿಕ್ ಮಾಡಿ. |
06:39 | ಪ್ರತಿಯೊಂದು ಬಿಳಿ ಮೋಡದ ಹಿಂದೆ ಒಂದೊಂದು ನೆರಳು ಕಾಣಿಸಿಕೊಳ್ಳುತ್ತದೆ. |
06:44 | ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ. |
06:48 | ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Area' ವನ್ನು ಆಯ್ಕೆ ಮಾಡಿ. |
06:55 | “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. 'Fill' ನಲ್ಲಿ, 'Gradient' ಅನ್ನು ಕ್ಲಿಕ್ ಮಾಡಿ. |
07:02 | ಈಗ 'Gradient1' ಅನ್ನು ಆಯ್ಕೆ ಮಾಡಿ. |
07:04 | 'OK'ಯನ್ನು ಕ್ಲಿಕ್ ಮಾಡಿ. |
07:06 | ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ! |
07:11 . | ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ದ ಮೇಲೆ ಕ್ಲಿಕ್ ಮಾಡಿ. |
07:19 | 'Area' ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ. |
07:23 | 'Fill' ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ- |
07:27 | 'Colors, Gradient, Hatching' ಮತ್ತು 'Bitmap'. |
07:32 | ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್-ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ. |
07:39 | ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ. |
07:43 | 'Colors' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. |
07:46 | 'Properties' ನಲ್ಲಿ, ನಾವು 'Color' ಡ್ರಾಪ್-ಡೌನ್ ನಿಂದ 'Red 3' ಯನ್ನು ಆಯ್ಕೆ ಮಾಡೋಣ. |
07:53 | ನಂತರ, 'RGB' ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂಗಳನ್ನು ಕೊಡಿ. |
08:01 | 'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿನ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ. |
08:08 | ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು ನಮೂದಿಸೋಣ. |
08:16 | ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ. |
08:22 | 'RGB' ಫೀಲ್ಡ್ ನ ಮೇಲಿನ 'preview' ಬಾಕ್ಸ್ ಅನ್ನು ನೋಡಿ. |
08:28 | ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ. |
08:31 | 'Color' ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ. |
08:37 | 'Name' ಫೀಲ್ಡ್ ನಲ್ಲಿ, ನಾವು ಇದಕ್ಕೆ ಒಂದು ಹೆಸರನ್ನು ಟೈಪ್ ಮಾಡೋಣ. |
08:41 | “New red” ಎಂದು ಹೆಸರನ್ನು ಬರೆಯೋಣ. |
08:44 | 'Add' ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:46 | ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು. |
08:49 | 'OK'ಯನ್ನು ಕ್ಲಿಕ್ ಮಾಡಿ. |
08:51 | ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ! |
08:54 | 'Ctrl' ಮತ್ತು 'Z' ಅನ್ನು ಒತ್ತಿ, ಈ ಕಾರ್ಯವನ್ನು 'undo' ಮಾಡೋಣ. |
08:59 | ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ. |
09:03 | 'Area' ಡೈಲಾಗ್-ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ ಗ್ರೇಡಿಯಂಟ್ಸ್ ಮತ್ತು ಹ್ಯಾಚಿಂಗ್ ಗಳನ್ನು ಕೂಡ ತಯಾರಿಸಬಹುದು. |
09:10 | 'Gradient'ಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು. |
09:14 | ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್ (ವರ್ಣಛಾಯೆ). |
09:18 | 'Hatching' ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್. |
09:24 | ಈಗ, ನಾವು 'Draw' ನಲ್ಲಿ 'bitmap'ಅನ್ನು ಹೇಗೆ 'ಇಂಪೋರ್ಟ್' ಮಾಡುವುದು ಎನ್ನುವುದನ್ನು ಕಲಿಯೋಣ. |
09:28 | Main ಮೆನುವಿನಿಂದ, 'Format' ಅನ್ನು ಆರಿಸಿ ಮತ್ತು 'Area' ವನ್ನು ಕ್ಲಿಕ್ ಮಾಡಿ. |
09:33 | ಹಿಂದೆ ನೋಡಿದಂತೆ, 'Area' ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ, 'Bitmaps' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
09:39 | 'Import' ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:42 | 'Import' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
09:45 | ಬ್ರೌಸ್ ಮಾಡಿ (ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ. |
09:48 | 'Open' ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:50 | 'Draw' , ನಿಮಗೆ 'Bitmap' ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ. |
09:55 | ನಾವು “NewBitmap” ಎಂದು ಹೆಸರಿಸೋಣ. |
09:58 | 'OK'ಯನ್ನು ಕ್ಲಿಕ್ ಮಾಡಿ. |
10:00 | ಈಗ 'Bitmap', ಡ್ರಾಪ್-ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. |
10:04 | ಹೊರಬರಲು 'OK'ಯನ್ನು ಕ್ಲಿಕ್ ಮಾಡಿ. |
10:07 | ಮೋಡಗಳನ್ನು ಈಗ ಗಮನಿಸಿ. |
10:10 | 'Ctrl' ಮತ್ತು 'Z'ಅನ್ನು ಒತ್ತಿ ಇದನ್ನು 'undo' ಮಾಡೋಣ. |
10:14 | “water” ಆಬ್ಜೆಕ್ಟ್ ಅನ್ನು ತುಂಬಲು, ನಾವು 'bitmap' ಅನ್ನು ಉಪಯೋಗಿಸೋಣ. |
10:19 | ಈಗ ನಾವು, ನೀರನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ. |
10:22 | ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ. |
10:26 | ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ವನ್ನು ಆಯ್ಕೆ ಮಾಡಿ. |
10:31 | “Area” ಡೈಲಾಗ್-ಬಾಕ್ಸ್ ನಲ್ಲಿ, 'Bitmaps' ಟ್ಯಾಬ್ ಕ್ಲಿಕ್ ಮಾಡಿ. |
10:36 | ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರೋಲ್-ಡೌನ್ ಮಾಡಿ ಮತ್ತು 'Water' ಅನ್ನು ಆಯ್ಕೆ ಮಾಡಿ. |
10:41 | 'OK'ಯನ್ನು ಕ್ಲಿಕ್ ಮಾಡಿ. |
10:43 | ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ! |
10:46 | ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ. |
10:50 | ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ತುಂಬಿ. |
10:57 | 'Transparency' ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ. |
11:02 | ಈಗ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ! |
11:06 | ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ. |
11:10 | ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ. |
11:15 | 'ಕಾಂಟೆಕ್ಸ್ಟ್ ಮೆನ್ಯೂ' ಗಾಗಿ ರೈಟ್-ಕ್ಲಿಕ್ ಮಾಡಿ. |
11:21 | 'Page setup' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
11:25 | 'Background' ಟ್ಯಾಬ್ ಕ್ಲಿಕ್ ಮಾಡಿ ಮತ್ತು 'Fill'ನ ಕೆಳಗೆ, 'Color' ಅನ್ನು ಆಯ್ಕೆ ಮಾಡಿ. |
11:30 | ನಾವು ಸ್ಕ್ರೋಲ್-ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ. |
11:34 | 'OK'ಯನ್ನು ಕ್ಲಿಕ್ ಮಾಡಿ. |
11:36 | ಈ ಹಿನ್ನೆಲೆ (background) ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು 'Draw' ನಿಮ್ಮನ್ನು ಪ್ರಶ್ನಿಸುತ್ತದೆ. |
11:41 | 'NO' ಅನ್ನು ಕ್ಲಿಕ್ ಮಾಡಿ. |
11:44 | ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ. |
11:48 | ನೀವು ಆಬ್ಜೆಕ್ಟ್ ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು. |
11:52 | ನಾವು ಪರ್ವತವನ್ನು ಆಯ್ಕೆ ಮಾಡೋಣ. |
11:55 | 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ವನ್ನು ಆಯ್ಕೆ ಮಾಡಿ. |
11:59 | 'Area' ಡೈಲಾಗ್ ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಆಯ್ಕೆ ಮಾಡಿ. |
12:04 | 'Fill' ನ ಕೆಳಗೆ, 'None' ಅನ್ನು ಆಯ್ಕೆ ಮಾಡಿ. |
12:06 | 'OK'ಯನ್ನು ಕ್ಲಿಕ್ ಮಾಡಿ. |
12:08 | ಆಬ್ಜೆಕ್ಟ್ ಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲ ಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ. |
12:15 | ಈ ಕಾರ್ಯವನ್ನು 'undo' ಮಾಡಲು, 'Ctrl+Z' ಕೀಗಳನ್ನು ಒತ್ತಿ. |
12:20 | ಈ ಎಲ್ಲಾ ಆಯ್ಕೆಗಳನ್ನು ನೀವು 'Format' ಮೆನುವಿನಿಂದ ಕೂಡ ಪಡೆಯಬಹುದು. |
12:25 | ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ 'Ctrl+S' ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ. |
12:34 | ಪರ್ಯಾಯವಾಗಿ, 'Automatic Save' ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ. |
12:41 | ಇಲ್ಲಿ ನಿಮಗೆ ಇನ್ನೊಂದು ಅಸೈನ್ಮೆಂಟ್ ಇದೆ. |
12:43 | ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ. |
12:45 | ಪೇಜ್ ಗೆ ಒಂದು ಹಿನ್ನೆಲೆ ಬಣ್ಣ ಕೊಡಿ. |
12:47 | ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ. |
12:50 | ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
12:54 | ಈ ಟ್ಯುಟೋರಿಯಲ್ ನಲ್ಲಿ, ನಾವು: * ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು |
13:03 | * ಹಿನ್ನೆಲೆಯ (background) ತಯಾರಿಕೆ ಮತ್ತು |
13:05 | * ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
13:07 | ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ. http://spoken-tutorial.org/What_is_a_Spoken-Tutorial |
13:10 | ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
13:13 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
13:18 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್: |
13:20 | * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
13:23 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
13:27 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
13:33 | 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
13:38 | ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ. |
13:45 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro. |
13:56 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |