LibreOffice-Suite-Draw/C2/Fill-objects-with-color/Kannada
From Script | Spoken-Tutorial
Revision as of 12:52, 28 January 2016 by Vasudeva ahitanal (Talk | contribs)
Time | Narration | ||
00:00 | LibreOffice Drawನಲ್ಲಿ Fill Objects with Color ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
00:06 | ಈ ಟ್ಯುಟೋರಿಯಲ್ ನಲ್ಲಿ, ನೀವು: | ||
00:09 | * objects ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್-ಗಳನ್ನು ತುಂಬುವುದನ್ನು, | ||
00:15 | * ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು, ಮತ್ತು | ||
00:17 | * ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ. | ||
00:20 | ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ. | ||
00:24 | ನೀವು objectಗಳನ್ನು : | ||
00:25 | * ಬಣ್ಣಗಳಿಂದ, | ||
00:26 | * ಗ್ರೇಡಿಯೆಂಟ್-ಗಳಿಂದ, | ||
00:29 | * ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್-ಗಳಿಂದ, | ||
00:32 | * ಮತ್ತು ಚಿತ್ರಗಳಿಂದ ತುಂಬಬಹುದು. | ||
00:33 | ಇಲ್ಲಿ ನಾವು:
| ||
00:42 | ನಾವು 'WaterCycle' ಆಕೃತಿಯಲ್ಲಿ ಬಣ್ಣವನ್ನು ತುಂಬೋಣ. | ||
00:46 | ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬಬಹುದು. | ||
00:54 | ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ. | ||
00:56 | ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ, ಮತ್ತುArea ವನ್ನು ಕ್ಲಿಕ್ ಮಾಡಿ. | ||
01:01 | “Area” ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
01:05 | Area ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತುFill ಆಯ್ಕೆಯ ಕೆಳಗೆ, Color ಅನ್ನು ಆರಿಸಿ. | ||
01:13 | ಸ್ಕ್ರಾಲ್ ಡೌನ್ ಮಾಡಿ ಮತ್ತು white ನ ಮೇಲೆ ಕ್ಲಿಕ್ ಮಾಡಿ. | ||
01:16 | OK ಎಂದು ಕ್ಲಿಕ್ ಮಾಡಿ. | ||
01:19 | ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ. | ||
01:24 | Areaದ ಕೆಳಗೆ , Color ಮತ್ತು White ನ ಮೇಲೆ ರೈಟ್ ಕ್ಲಿಕ್ ಮಾಡಿ. | ||
01:30 | ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ. | ||
01:33 | ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು(ಗುಂಪು ಮಾಡುವುದು). | ||
01:38 | ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು. | ||
01:46 | ಮೊದಲು ಅವುಗಳ ಒಂದು ಗುಂಪು ಮಾಡೋಣ. | ||
01:48 | Shift ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ. | ||
01:54 | context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಎಂದು ಕ್ಲಿಕ್ ಮಾಡಿ. | ||
01:58 | ಮೋಡಗಳು ಗುಂಪಿನಲ್ಲಿ ಸೇರಿದವು. | ||
02:00 | ಮತ್ತೆ, context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ದ ಮೇಲೆ ಕ್ಲಿಕ್ ಮಾಡಿ. | ||
02:07 | “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಕ್ಲಿಕ್ ಮಾಡಿ. Fill ಆಯ್ಕೆಯ ಕೆಳಗೆ, Color ಅನ್ನು ಆರಿಸಿ. ನಂತರ ಸ್ಕ್ರಾಲ್ ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ. | ||
02:23 | OK ಕ್ಲಿಕ್ ಮಾಡಿ. | ||
02:25 | ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ. | ||
02:37 | ಇದೇ ರೀತಿ ಈಗ, ನಾವು ಮತ್ತೆ ಆಯತವನ್ನು “brown 4”ಇಂದ ತುಂಬೋಣ. | ||
02:48 | ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ. | ||
02:58 | ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” (ಟರ್ಕ್ವಾಯಿಸ್ 1) ಎಂಬ ಬಣ್ಣ ತುಂಬೋಣ. | ||
03:05 | ಅವಕ್ಕೆ ಸಮಾನ formattingನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲವಾದರೆ, ಅವುಗಳನ್ನು ಒಂದು ಗುಂಪಾಗಿಸೋಣ. | ||
03:12 | ಅವಕ್ಕೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್ ಕ್ಲಿಕ್, Area, Area ಟ್ಯಾಬ್, Fill, color, turquoise 1 | ||
03:27 | “water” objectನಲ್ಲಿ ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ. | ||
03:35 | ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ. | ||
03:41 | ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Line ಮೇಲೆ ಕ್ಲಿಕ್ ಮಾಡಿ. | ||
03:48 | “Line” ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
03:52 | “Line” ಟ್ಯಾಬ್ ಕ್ಲಿಕ್ ಮಾಡಿ. | ||
03:55 | Line propertiesನಲ್ಲಿ, Style ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತುInvisible ಎಂದು ಆಯ್ಕೆ ಮಾಡಿ. | ||
04:03 | OK ಕ್ಲಿಕ್ ಮಾಡಿ. | ||
04:05 | water objectನ ಬಾಹ್ಯರೇಖೆ ಮರೆಯಾಗುತ್ತದೆ. | ||
04:09 | ಈಗ, ನಾವು ಮರಗಳಿಗೆ ಬಣ್ಣ ತುಂಬೋಣ. | ||
04:14 | ಎಡ ಕೊನೆಯ ಮರವನ್ನು ಆಯ್ಕೆ ಮಾಡೋಣ. | ||
04:16 | context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Enter Group ಮೇಲೆ ಕ್ಲಿಕ್ ಮಾಡಿ | ||
04:23 | ಈಗ, ಮರವನ್ನು ಎಡಿಟ್ ಮಾಡೋಣ (ಸಂಪಾದಿಸೋಣ). | ||
04:26 | ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ. | ||
04:30 | context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು Area ಮೇಲೆ ಕ್ಲಿಕ್ ಮಾಡಿ. | ||
04:36 | Area ಡೈಲಾಗ್ ಬಾಕ್ಸ್ ನಲ್ಲಿ, | ||
04:38 | Area ಟ್ಯಾಬ್ ಅನ್ನು ಕ್ಲಿಕ್ ಮಾಡಿ. | ||
04:40 | Fill ಕೆಳಗೆ, Color ಅನ್ನು ಆಯ್ಕೆ ಮಾಡಿ. | ||
04:44 | ಸ್ಕ್ರಾಲ್ ಡೌನ್ ಮಾಡಿ ಮತ್ತು“Green 5” ನ ಮೇಲೆ ಕ್ಲಿಕ್ ಮಾಡಿ. | ||
04:47 | OK ಕ್ಲಿಕ್ ಮಾಡಿ. | ||
04:49 | ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ. | ||
04:57 | ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ. | ||
05:05 | Y- ಆಕೃತಿಯ arrowವನ್ನು ಆಯ್ಕೆ ಮಾಡಿ, context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು Area ಮೇಲೆ ಕ್ಲಿಕ್ ಮಾಡಿ. | ||
05:08 | Area ಡೈಲಾಗ್ ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ. | ||
05:15 | ಹೀಗಾಗಿ, ನಾವು Color ಅನ್ನು ಆಯ್ಕೆ ಮಾಡೋಣ. | ||
05:18 | ಸ್ಕ್ರಾಲ್ ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ. | ||
05:21 | OK ಕ್ಲಿಕ್ ಮಾಡಿ. | ||
05:23 | ನಾವು ಮರಕ್ಕೆ ಬಣ್ಣ ತುಂಬಿದ್ದೇವೆ ! | ||
05:26 | ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು Exit Group ಆಯ್ಕೆ ಮಾಡಿ. | ||
05:31 | ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು. | ||
05:36 | ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು copy-paste ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು. | ||
05:44 | ಇದು ಇನ್ನೂ ಸರಳವಾದ ರೀತಿ, ಅಲ್ಲವೇ? | ||
05:49 | ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ, ನೆರಳನ್ನು ಸೇರಿಸೋಣ. | ||
05:55 | ಅವುಗಳನ್ನು ಆರಿಸಲು, Drawing ಟೂಲ್ ಬಾರ್ ನಿಂದ Select ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ. | ||
06:03 | ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು context menuವಿಗಾಗಿ ರೈಟ್ ಕ್ಲಿಕ್ ಮಾಡಿ ಹಾಗೂ Area ವನ್ನು ಕ್ಲಿಕ್ ಮಾಡಿ. | ||
06:10 | “Area” ಡೈಲಾಗ್ ಬಾಕ್ಸ್ ನಲ್ಲಿ, Shadow ಟ್ಯಾಬ್ ಅನ್ನು ಕ್ಲಿಕ್ ಮಾಡಿ. | ||
06:15 | Propertiesನಲ್ಲಿ Use Shadow ಬಾಕ್ಸ್ ಅನ್ನು ಚೆಕ್ ಮಾಡಿ. | ||
06:20 | ಬೇರೆ fieldಗಳು ಈಗ ಕ್ರಿಯಾಶೀಲವಾಗುತ್ತವೆ. | ||
06:24 | Positionನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ. | ||
06:29 | “Position” ಎಂಬುದು ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ. | ||
06:33 | Color ಫೀಲ್ಡ್ ನಲ್ಲಿ, Gray ಆಯ್ಕೆ ಮಾಡಿ. | ||
06;36 | OK ಕ್ಲಿಕ್ ಮಾಡಿ. | ||
06:39 | ಪ್ರತಿಯೊಂದು ಬಿಳಿ ಮೋಡದ ಹಿಂದೆ ಒಂದೊಂದು ನೆರಳು ಕಾಣಿಸಿಕೊಳ್ಳುತ್ತದೆ. | ||
06:44 | ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ. | ||
06:48 | ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ. | ||
06:55 | “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. Fill ನಲ್ಲಿ, Gradient ಅನ್ನು ಕ್ಲಿಕ್ ಮಾಡಿ. | ||
07:02 | ಈಗ Gradient1 ಆಯ್ಕೆ ಮಾಡಿ. | ||
07:04 | OK ಕ್ಲಿಕ್ ಮಾಡಿ. | ||
07:06 | ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ! | ||
07:11 . | ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ದ ಮೇಲೆ ಕ್ಲಿಕ್ ಮಾಡಿ. | ||
07:19 | Area ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ. | ||
07:23 | Fill ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ- | ||
07:27 | Colors, Gradient, Hatching ಮತ್ತು Bitmap | ||
07:32 | ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್ ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ. | ||
07:39 | ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ. | ||
07:43 | Colors ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. | ||
07:46 | Properties ನಲ್ಲಿ, ನಾವು Color ಡ್ರಾಪ್ ಡೌನ್ ನಿಂದ Red 3 ಯನ್ನು ಆಯ್ಕೆ ಮಾಡೋಣ. | ||
07:53 | ನಂತರ, RGB ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂವನ್ನು ಕೊಡಿ. | ||
08:01 | 'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿನ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ. | ||
08:08 | ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು enter ಮಾಡೋಣ. | ||
08:16 | ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ. | ||
08:22 | 'RGB' ಫೀಲ್ಡ್ ನ ಮೇಲಿನ preview ಬಾಕ್ಸ್ ಅನ್ನು ನೋಡಿ. | ||
08:28 | ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ. | ||
08:31 | Color ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ. | ||
08:37 | Name ಫೀಲ್ಡ್ ನಲ್ಲಿ, ಇದಕ್ಕೆ ನಾವೊಂದು ಹೆಸರನ್ನು ಟೈಪ್ ಮಾಡೋಣ. | ||
08:41 | “New red” ಎಂದು ಹೆಸರನ್ನು ಬರೆಯೋಣ. | ||
08:44 | Add ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
08:46 | ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು. | ||
08:49 | OK ಕ್ಲಿಕ್ ಮಾಡಿ. | ||
08:51 | ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ! | ||
08:54 | Ctrl ಮತ್ತು Z ಅನ್ನು ಒತ್ತಿ, ಈ ಕಾರ್ಯವನ್ನು undo ಮಾಡೋಣ. | ||
08:59 | ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ. | ||
09:03 | Area ಡೈಲಾಗ್ ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ gradients ಮತ್ತು hatching ಗಳನ್ನು ಕೂಡ ತಯಾರಿಸಬಹುದು. | ||
09:10 | Gradientಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು. | ||
09:14 | ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್(ವರ್ಣಛಾಯೆ). | ||
09:18 | Hatching ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್. | ||
09:24 | ಈಗ, ನಾವು Draw ಗೆ bitmapಅನ್ನು ಹೇಗೆ import ಮಾಡುವುದು ಎನ್ನುವುದನ್ನು ಕಲಿಯೋಣ. | ||
09:28 | Main ಮೆನುವಿನಿಂದ, Format ಅನ್ನು ಆರಿಸಿ ಮತ್ತು Area ವನ್ನು ಕ್ಲಿಕ್ ಮಾಡಿ. | ||
09:33 | ಹಿಂದೆ ನೋಡಿದಂತೆ, Area ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, Bitmaps ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | ||
09:39 | Import ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
09:42 | Import ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
09:45 | ಬ್ರೌಸ್ ಮಾಡಿ(ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ. | ||
09:48 | Open ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
09:50 | Draw , ನಿಮಗೆ Bitmapಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ. | ||
09:55 | ನಾವು “NewBitmap” ಎಂದು ಹೆಸರಿಸೋಣ. | ||
09:58 | OK ಕ್ಲಿಕ್ ಮಾಡಿ. | ||
10:00 | ಈಗ Bitmap, ಡ್ರಾಪ್ ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. | ||
10:04 | ಹೊರಬರಲು OK ಕ್ಲಿಕ್ ಮಾಡಿ. | ||
10:07 | ಮೋಡಗಳನ್ನು ಈಗ ಗಮನಿಸಿ. | ||
10:10 | Ctrl ಮತ್ತು Zಅನ್ನು ಒತ್ತಿ ಇದನ್ನು undo ಮಾಡೋಣ. | ||
10:14 | “water” objectಅನ್ನು ತುಂಬಲು ನಾವು bitmapಅನ್ನು ಉಪಯೋಗಿಸೋಣ. | ||
10:19 | ಈಗ ನಾವು, ನೀರನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ. | ||
10:22 | ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ. | ||
10:26 | ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ. | ||
10:31 | “Area” ಡೈಲಾಗ್-ಬಾಕ್ಸ್ ನಲ್ಲಿ, Bitmaps ಟ್ಯಾಬ್ ಕ್ಲಿಕ್ ಮಾಡಿ. | ||
10:36 | ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರಾಲ್ ಡೌನ್ ಮಾಡಿ ಮತ್ತು Water ಅನ್ನು ಆಯ್ಕೆ ಮಾಡಿ. | ||
10:41 | OK ಕ್ಲಿಕ್ ಮಾಡಿ. | ||
10:43 | ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ! | ||
10:46 | ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ. | ||
10:50 | ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್ ಮ್ಯಾಪ್ ಗಳಿಂದ ತುಂಬಿ. | ||
10:57 | Transparency ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ. | ||
11:02 | ಈಗ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ! | ||
11:06 | ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ. | ||
11:10 | ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ. | ||
11:15 | context menu ಗಾಗಿ ರೈಟ್ ಕ್ಲಿಕ್ ಮಾಡಿ. | ||
11:21 | Page setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
11:25 | Background ಟ್ಯಾಬ್ ಕ್ಲಿಕ್ ಮಾಡಿ ಮತ್ತು Fillನ ಕೆಳಗೆ, Color ಅನ್ನು ಆಯ್ಕೆ ಮಾಡಿ. | ||
11:30 | ನಾವು ಸ್ಕ್ರಾಲ್ ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ. | ||
11:34 | OK ಕ್ಲಿಕ್ ಮಾಡಿ. | ||
11:36 | ಹಿನ್ನೆಲೆ ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು Draw ನಿಮ್ಮನ್ನು ಪ್ರಶ್ನಿಸುತ್ತದೆ. | ||
11:41 | NO ಕ್ಲಿಕ್ ಮಾಡಿ. | ||
11:44 | ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ. | ||
11:48 | ನೀವು object ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು. | ||
11:52 | ನಾವು ಪರ್ವತವನ್ನು ಆಯ್ಕೆ ಮಾಡೋಣ. | ||
11:55 | context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ. | ||
11:59 | Area ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಆಯ್ಕೆ ಮಾಡಿ. | ||
12:04 | Fill ನ ಕೆಳಗೆ, None ಅನ್ನು ಆಯ್ಕೆ ಮಾಡಿ. | ||
12:06 | OK ಕ್ಲಿಕ್ ಮಾಡಿ. | ||
12:08 | objectಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ. | ||
12:15 | ಈ ಕಾರ್ಯವನ್ನು undo ಮಾಡಲು, Ctrl+Z ಕೀಗಳನ್ನು ಒತ್ತಿ. | ||
12:20 | ಈ ಎಲ್ಲಾ ಆಯ್ಕೆಗಳನ್ನು ನೀವು Format ಮೆನುವಿನಿಂದ ಕೂಡ ಪಡೆಯಬಹುದು. | ||
12:25 | ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ Ctrl+S ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ. | ||
12:34 | ಪರ್ಯಾಯವಾಗಿ, Automatic Save ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ. | ||
12:41 | ಇಲ್ಲಿ ನಿಮಗೆ ಇನ್ನೊಂದು ಅಸೈನ್ ಮೆಂಟ್ ಇದೆ. | ||
12:43 | ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ. | ||
12:45 | ಪೇಜ್ ಗೆ ಒಂದು ಹಿನ್ನೆಲೆ ಬಣ್ಣ ಕೊಡಿ. | ||
12:47 | ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ. | ||
12:50 | ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. | ||
12:54 | ಈ ಟ್ಯುಟೋರಿಯಲ್ ನಲ್ಲಿ, ನಾವು ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು: | ||
13:03 | * ಹಿನ್ನೆಲೆಯ ತಯಾರಿಕೆ ಮತ್ತು | ||
13:05 | * ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. | ||
13:07 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial | ||
13:10 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | 13:13 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
13:18 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||
13:20 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. | ||
13:23 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. | ||
13:27 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. | ||
13:33 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. | ||
13:38 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. | ||
13:45 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. | ||
13:56 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |