LibreOffice-Suite-Draw/C2/Introduction/Kannada
From Script | Spoken-Tutorial
Revision as of 12:51, 28 January 2016 by Vasudeva ahitanal (Talk | contribs)
Time | Narration |
00:01 | LibreOffice Draw ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು,
|
00:13 | * context menu ವಿನ ಬಗ್ಗೆ ಕಲಿಯಲಿದ್ದೇವೆ. |
00:15 | ನಾವು:
|
00:25 | * ಮೂಲಭೂತ ಆಕೃತಿಗಳನ್ನು ಸೇರಿಸುವುದು – ಇತ್ಯಾದಿಗಳ ಬಗೆಗೆ ಕಲಿಯಲಿದ್ದೇವೆ. |
00:28 | ನೀವು LibreOffice Suite ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ Synaptic Package Manager ಅನ್ನು ಬಳಸಿ Draw ಅನ್ನು ಇನ್ ಸ್ಟಾಲ್ ಮಾಡಬಹುದು. |
00:35 | 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಜಾಲಪುಟದ Ubuntu Linux ಅನ್ನು ಸಂಪರ್ಕಿಸಿ. |
00:43 | ಮತ್ತು ಈ ಜಾಲಪುಟದ ಸೂಚನೆಗಳನ್ನು ಅನುಸರಿಸಿ LibreOffice Suite ಅನ್ನು ಡೌನ್ ಲೋಡ್ ಮಾಡಿ. |
00:48 | 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. |
00:54 | ನೆನಪಿಡಿ, 'Draw' ಅನ್ನು ಇನ್ ಸ್ಟಾಲ್ ಮಾಡುವಾಗ, 'Complete' ಆಯ್ಕೆಯನ್ನು ಬಳಸಿ. |
00:59 | 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಫ್ಟ್ ವೇರ್ ಆಗಿದೆ. |
01:03 | ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು) ತಯಾರಿಸಲು ಅನುಮತಿಸುತ್ತದೆ. |
01:08 | ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, ಗ್ರಾಫಿಕ್ಸ್ ನ ಎರಡು ಮುಖ್ಯವಾದ ಪ್ರಕಾರಗಳಿವೆ. |
01:13 | 'LibreOffice Draw' ಅನ್ನು ಉಪಯೋಗಿಸಿ Vector graphics ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ. |
01:18 | ಇನ್ನೊಂದು, bitmap ಅಥವಾ raster image ಎಂಬುದಾಗಿದೆ. |
01:21 | 'BMP', 'JPG', 'JPEG' ಮತ್ತು 'PNG' ಇವುಗಳು ಪ್ರಸಿದ್ಧವಾದ ಬಿಟ್ ಮ್ಯಾಪ್ ಫಾರ್ಮೇಟ್ ಗಳು. |
01:30 | ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ. |
01:35 | ಎಡಭಾಗದಲ್ಲಿರುವ ಚಿತ್ರ vector graphic ಆಗಿದೆ. |
01:38 | ಬಲಭಾಗದಲ್ಲಿರುವ ಚಿತ್ರ bitmap ಆಗಿದೆ. |
01:41 | ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ. |
01:45 | ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; ಬಿಟ್ ಮ್ಯಾಪ್ ಚಿತ್ರವು ಅಸ್ಪಷ್ಟವಾಗಿದೆ. |
01:51 | ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ. |
01:58 | ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ. |
02:04 | ಬಿಟ್ ಮ್ಯಾಪ್, pixel ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ. |
02:11 | ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ? |
02:15 | ಇವುಗಳು ಗ್ರಿಡ್ ಗಳು. |
02:17 | ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ. |
02:20 | ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು. |
02:26 | ಏನೇ ಆಗಲಿ, ವೆಕ್ಟರ್ ಗ್ರಾಫಿಕ್ಸ್, ಯಾವ ಆಕಾರದಲ್ಲಿಯಾದರೂ ಇರಬಹುದು. |
02:30 | ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು Draw ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ. |
02:36 | ಇಲ್ಲಿ, ನಾವು :
|
02:46 | ಒಂದು ಹೊಸ Draw ಫೈಲ್ ಅನ್ನು ತೆರೆಯಲು, ಪರದೆಯ ಮೇಲ್ಭಾಗದಲ್ಲಿ ಎಡಮೂಲೆಯಲ್ಲಿರುವ Applications ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
02:54 | ಮತ್ತು Office ಎಂಬಲ್ಲಿ ಕ್ಲಿಕ್ ಮಾಡಿ, ನಂತರ LibreOffice ಎಂಬಲ್ಲಿ ಕ್ಲಿಕ್ ಮಾಡಿ. |
02:59 | ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:03 | Drawing ಎಂಬಲ್ಲಿ ಕ್ಲಿಕ್ ಮಾಡಿ. |
03:05 | ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ. |
03:09 | ನಮ್ಮ 'Draw' ಫೈಲ್ ಅನ್ನು ಹೆಸರಿಸೋಣ. ಮತ್ತು ಸೇವ್ ಮಾಡೋಣ. |
03:12 | ಮುಖ್ಯವಾದ ಮೆನುವಿನಲ್ಲಿ File ನ ಮೇಲೆ ಕ್ಲಿಕ್ ಮಾಡೋಣ. ಮತ್ತು “Save as” ಆಪ್ಷನ್ ಅನ್ನು ಆಯ್ಕೆ ಮಾಡೋಣ. |
03:18 | “Save as” ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
03:21 | File Name ಫೀಲ್ಡ್ ನಲ್ಲಿ, “WaterCycle” ಎಂಬ ಹೆಸರನ್ನು ಟೈಪ್ ಮಾಡೋಣ. |
03:26 | ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ. |
03:31 | dot odg ('.odg') ಎಂಬುದು Draw ಫೈಲ್ ಗಳ ಡಿಫಾಲ್ಟ್ ಫೈಲ್ ಟೈಪ್ ಆಗಿದೆ. |
03:37 | Browse folders ಫೀಲ್ಡ್ ಅನ್ನು ಬಳಸಿ, ನಾವು ಈ ಫೈಲ್ ಅನ್ನು ಡೆಸ್ಕ್ ಟಾಪ್ ನಲ್ಲಿ save ಮಾಡೋಣ. |
03:42 | Save ಎಂಬಲ್ಲಿ ಕ್ಲಿಕ್ ಮಾಡಿ. |
03:44 | “WaterCycle” ಹೆಸರಿನಲ್ಲಿ ಫೈಲ್ ಸೇವ್ ಆಯಿತು. |
03:47 | ಫೈಲ್ ನ ಹೆಸರು ಮತ್ತು extension ಗಳೊಂದಿಗೆ Draw ಫೈಲ್ Title barನಲ್ಲಿ ಪ್ರದರ್ಶಿತವಾಗಿದೆ. |
03:53 | ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ ವಾಟರ್ ಸೈಕಲ್ ಚಿತ್ರವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಕಲಿಯುವೆವು. |
03:59 | ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ. |
04:02 | ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ. |
04:09 | Draw ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ. |
04:17 | ಮೊದಲಿಗೆ, Draw workspace ಅಥವಾ Draw windowದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ. |
04:23 | Drawನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು Main menu ಪಟ್ಟಿ ಮಾಡುತ್ತದೆ. |
04:27 | ಎಡಭಾಗದಲ್ಲಿರುವ Pages ಪ್ಯಾನೆಲ್ 'Draw' ಫೈಲ್ ನಲ್ಲಿರುವ ಎಲ್ಲಾ ಪುಟಗಳನ್ನು ತೋರಿಸುತ್ತದೆ. |
04:32 | ನಾವು ಗ್ರಾಫಿಕ್ಸ್ ಗಳನ್ನು ರಚಿಸುವ ಜಾಗವನ್ನು Page ಎಂದು ಕರೆಯುತ್ತಾರೆ. |
04:37 | ಪ್ರತಿಯೊಂದು ಪೇಜ್ ನಲ್ಲಿಯೂ ಮೂರು layerಗಳಿವೆ. |
04:39 | ಅವು - Layout, Controls ಹಾಗೂ Dimensions Lines. |
04:44 | Layout layer ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ. |
04:47 | ಇಲ್ಲಿಯೇ ನಾವು ಹೆಚ್ಚಿನ ಎಲ್ಲಾ ಗ್ರಾಫಿಕ್ಸ್ ಗಳನ್ನು ರಚಿಸುತ್ತೇವೆ. |
04:51 | ನಾವು Layout layerನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ. |
04:54 | ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ. |
04:59 | ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, Main ಮೆನುವಿಗೆ ಹೋಗಿ ಮತ್ತು View ಮೇಲೆ ಹಾಗೂ ಅನಂತರ Toolbars ಮೇಲೆ ಕ್ಲಿಕ್ ಮಾಡಿ. |
05:07 | ನೀವು ಲಭ್ಯವಿರುವ ಎಲ್ಲಾ ಟೂಲ್ ಗಳ ಪಟ್ಟಿಯನ್ನು ನೋಡುವಿರಿ. |
05:11 | ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ. |
05:15 | ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು Draw windowನಲ್ಲಿ ಕಾಣಸಿಗುತ್ತದೆ. |
05:20 | Standard ಎಂಬುದು ಆಯ್ಕೆಗೊಂಡಿದೆ. |
05:23 | ನೀವು ವಿಂಡೋನ ಮೇಲೆ Standard toolbar ಅನ್ನು ನೋಡಬಲ್ಲಿರಿ. |
05:27 | ನಾವೀಗ, Standard ಟೂಲ್ ಬಾರ್ ಅನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅನ್ ಚೆಕ್ ಮಾಡೋಣ. |
05:32 | Standard ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ. |
05:36 | ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ. |
05:39 | ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು. |
05:44 | ನಾವು ವಾಟರ್ ಸೈಕಲ್ ಚಿತ್ರದ ಮೂಲಭೂತ ಆಕಾರಗಳನ್ನು ಚಿತ್ರಿಸುವ ಮೊದಲು, ಪುಟವನ್ನು Landscape viewಗೆ ಸೆಟ್ ಮಾಡೋಣ. |
05:51 | ಇದನ್ನು ಮಾಡಲು, ಪುಟದ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Page ಆಯ್ಕೆಯನ್ನು ಆರಿಸಿ. |
05:56 | ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. |
05:59 | Page Setup ಆಯ್ಕೆಯನ್ನು ಕ್ಲಿಕ್ ಮಾಡಿ. |
06:02 | Page Setup ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ. |
06:06 | Page Formatನ ಕೆಳಗೆ, ನಾವು Format ಫೀಲ್ಡ್ ಅನ್ನು ನೋಡಬಹುದು. |
06:10 | ಇಲ್ಲಿ, ನಾವು A4ಅನ್ನು ಆರಿಸುತ್ತೇವೆ, ಏಕೆಂದರೆ ಇದು ಪ್ರಿಂಟ್ ಮಾಡಲು ಉಪಯೋಗಿಸುವ ಕಾಗದದ ಅತ್ಯಂತ ಸಾಮಾನ್ಯ ಗಾತ್ರವಾಗಿದೆ. |
06:17 | ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, Width ಮತ್ತು Height ಫೀಲ್ಡ್ ಗಳು ತಾನಾಗಿಯೇ ಡಿಫಾಲ್ಟ್ ಮೂಲ್ಯಗಳೊಂದಿಗೆ ತುಂಬಲ್ಪಡುತ್ತವೆ. |
06:25 | Orientation ಆಯ್ಕೆಯ ಕೆಳಗೆ, ನಾವು Landscape ಅನ್ನು ಆರಿಸೋಣ. |
06:29 | Paper format ಫೀಲ್ಡ್ ಗಳ ಬಲ ಬದಿಗೆ, ನೀವು Draw pageನ ಪುಟ್ಟ ಮುನ್ನೋಟವನ್ನು ನೋಡುವಿರಿ. |
06:36 | OK ಅನ್ನು ಕ್ಲಿಕ್ ಮಾಡಿ. |
06:38 | ನಾವು ಸೂರ್ಯನನ್ನು ಚಿತ್ರಿಸುವುದರಿಂದ ಆರಂಭಿಸೋಣ. |
06:41 | drawing toolbarನ ಮೇಲೆ, Basic Shapesನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ. |
06:47 | Circleನ ಮೇಲೆ ಕ್ಲಿಕ್ ಮಾಡಿ. |
06:49 | ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. |
06:56 | ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು. |
06:59 | ಈಗ, ನಾವು ಸೂರ್ಯನ ಪಕ್ಕ ಒಂದು ಮೋಡವನ್ನು ಚಿತ್ರಿಸೋಣ. |
07:03 | ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು “Symbol Shapes”ಅನ್ನು ಆಯ್ಕೆ ಮಾಡಿ. |
07:08 | “Symbol Shapes”ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜವನ್ನು ಕ್ಲಿಕ್ ಮಾಡಿ ಮತ್ತು Cloud ಅನ್ನು ಆಯ್ಕೆ ಮಾಡಿ. |
07:14 | draw page ನ ಮೇಲೆ, ಸೂರ್ಯನ ಪಕ್ಕ ಕರ್ಸರ್ ಅನ್ನು ಇರಿಸಿ. |
07:18 | ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. |
07:21 | ನೀವು ಮೋಡವನ್ನು ಚಿತ್ರಿಸಿದ್ದೀರಿ! |
07:23 | ನಂತರ, ನಾವು ಪರ್ವತವನ್ನು ಬಿಡಿಸೋಣ. |
07:25 | ನಾವು ಮತ್ತೆ Basic shapes ಅನ್ನು ಆಯ್ಕೆ ಮಾಡಿ Isosceles triangle (ಐಸೊಸೆಲೆಸ್ ಟ್ರ್ಯಾಂಗಲ್) ನ ಮೇಲೆ ಕ್ಲಿಕ್ ಮಾಡೋಣ. |
07:30 | Draw pageನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ. |
07:35 | ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ. |
07:38 | ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ. |
07:42 | ಇದನ್ನು ಮಾಡಲು Ctrl+S ಕೀಗಳನ್ನು ಜೊತೆಗೆ ಒತ್ತಿ. |
07:48 | ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು. |
07:53 | ಇದನ್ನು ಮಾಡಲು, Main ಮೆನುಗೆ ಹೋಗಿ ಮತ್ತು Tools ಅನ್ನು ಆಯ್ಕೆ ಮಾಡಿ. |
07:57 | Toolsನ ಕೆಳಗೆ, Optionsನ ಮೇಲೆ ಕ್ಲಿಕ್ ಮಾಡಿ. |
08:00 | Options ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:03 | Load/Saveನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, General ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >> |
08:11 | ”Save AutoRrecovery information every“ ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ. |
08:17 | ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ. |
08:22 | OK ಕ್ಲಿಕ್ ಮಾಡಿ. |
08:24 | ಈಗ ನಾವು File >> Close ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ) |
08:29 | ಅಸ್ತಿತ್ವದಲ್ಲಿರುವ Draw ಫೈಲನ್ನು ತೆರೆಯಲು, - ಮೇಲ್ಗಡೆ ಮೆನು ಬಾರ್ ನಲ್ಲಿರುವ File ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Open ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
08:38 | ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:41 | ಇಲ್ಲಿ, ನೀವು ನಿಮ್ಮ ಡಾಕ್ಯುಮೆಂಟ್ ಅನ್ನು ಎಲ್ಲಿ ಸೇವ್ ಮಾಡಿದ್ದೀರೋ ಆ ಫೋಲ್ಡರ್ ಅನ್ನು ಹುಡುಕಿ. |
08:46 | ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು Open ಅನ್ನು ಕ್ಲಿಕ್ ಮಾಡಿ. |
08:51 | ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. |
08:53 | ಹೊಸ draw ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ. |
08:57 | page orientation ಅನ್ನು Portrait ಎಂದು ಸೆಟ್ ಮಾಡಿ. |
09:00 | ಒಂದು ಮೋಡ, ನಕ್ಷತ್ರ ಮತ್ತು ಒಂದು ವೃತ್ತವನ್ನು ರಚಿಸಿ. |
09:04 | ಈಗ 'page orientation'ಅನ್ನು Landscapeಆಗಿ ಪರಿವರ್ತಿಸಿ. |
09:07 | ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ. |
09:11 | ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
09:16 | ಈ ಟ್ಯುಟೋರಿಯಲ್ ನಲ್ಲಿ ನಾವು: |
09:19 | * LibreOffice Draw, |
09:21 | * LibreOffice Draw ಕಾರ್ಯಕ್ಷೇತ್ರ ಮತ್ತು |
09:23 | * context menuಗಳ ಬಗ್ಗೆ ತಿಳಿದುಕೊಂಡಿದ್ದೇವೆ. |
09:25 | ನಾವು ಇವನ್ನೂ ಕಲಿತಿದ್ದೇವೆ: |
09:27 | * ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು, |
09:31 | * ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು, |
09:33 | * Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು |
09:35 | * ಮೂಲಭೂತ ಆಕಾರಗಳನ್ನು ಸೇರಿಸುವುದು. |
09:38 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. |
09:42 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
09:45 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
09:49 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
09:52 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
09:55 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
09:59 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
10:05 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
10:09 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
10:17 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. |
10:28 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |