LibreOffice-Suite-Draw/C2/Introduction/Kannada

From Script | Spoken-Tutorial
Jump to: navigation, search
Time Narration
00:01 LibreOffice Draw ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,

LibreOffice Draw LibreOffice Draw Workspace ಮತ್ತು

00:13 context menu ವಿನ ಬಗ್ಗೆ ಕಲಿಯಲಿದ್ದೇವೆ.
00:15 ನಾವು:

Draw fileಅನ್ನು ರಚಿಸುವುದು, ಸೇವ್ ಮಾಡುವುದು, ಕ್ಲೋಸ್ ಮಾಡುವುದು(ಮುಚ್ಚುವುದು) ಮತ್ತು ತೆರೆಯುವುದು, ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು, Draw page ಅನ್ನು ಸೆಟ್ ಮಾಡುವುದು ಮತ್ತು

00:25 ಮೂಲಭೂತ ಆಕೃತಿಗಳನ್ನು ಸೇರಿಸುವುದು – ಇತ್ಯಾದಿಗಳ ಬಗೆಗೆ ಕಲಿಯಲಿದ್ದೇವೆ.
00:28 ನೀವು LibreOffice Suite ಅನ್ನು ಇನ್ ಸ್ಟಾಲ್ ಮಾಡಿಲ್ಲದಿದ್ದರೆ Synaptic Package Manager ಅನ್ನು ಬಳಸಿ Draw ಅನ್ನು ಇನ್ ಸ್ಟಾಲ್ ಮಾಡಬಹುದು.
00:35 'Synaptic Package Manager' ಬಗೆಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಜಾಲಪುಟದ Ubuntu Linux ಅನ್ನು ಸಂಪರ್ಕಿಸಿ.
00:43 ಮತ್ತು ಈ ಜಾಲಪುಟದ ಸೂಚನೆಗಳನ್ನು ಅನುಸರಿಸಿ LibreOffice Suite ಅನ್ನು ಡೌನ್ ಲೋಡ್ ಮಾಡಿ.
00:48 'LibreOffice suit' ನ ಮೊದಲನೆಯ ಟ್ಯುಟೋರಿಯಲ್ ನಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ.
00:54 ನೆನಪಿಡಿ, 'Draw' ಅನ್ನು ಇನ್ ಸ್ಟಾಲ್ ಮಾಡುವಾಗ, 'Complete' ಆಯ್ಕೆಯನ್ನು ಬಳಸಿ.
00:59 'LibreOffice Draw' ಎನ್ನುವುದು ಒಂದು ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಫ್ಟ್ ವೇರ್ ಆಗಿದೆ.
01:03 ಇದು ನಿಮಗೆ ವೆಕ್ಟರ್ ಗ್ರಾಫಿಕ್ಸ್ ನ ಒಂದು ವಿಸ್ತೃತವಾದ ಸರಪಳಿಯನ್ನು (ವ್ಯಾಪ್ತಿಯನ್ನು) ತಯಾರಿಸಲು ಅನುಮತಿಸುತ್ತದೆ.
01:08 ಇಲ್ಲಿ, ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಮತ್ತು ಬಿಟ್ ಮ್ಯಾಪ್ಸ್ ಎಂಬ, ಗ್ರಾಫಿಕ್ಸ್ ನ ಎರಡು ಮುಖ್ಯವಾದ ಪ್ರಕಾರಗಳಿವೆ.
01:13 'LibreOffice Draw' ಅನ್ನು ಉಪಯೋಗಿಸಿ Vector graphics ಅನ್ನು ತಯಾರಿಸಲಾಗಿದೆ ಮತ್ತು ಸಂಪಾದಿಸಲಾಗಿದೆ.
01:18 ಇನ್ನೊಂದು, bitmap ಅಥವಾ raster image ಎಂಬುದಾಗಿದೆ.
01:21 'BMP', 'JPG', 'JPEG' ಮತ್ತು 'PNG' ಇವುಗಳು ಪ್ರಸಿದ್ಧವಾದ ಬಿಟ್ ಮ್ಯಾಪ್ ಫಾರ್ಮೇಟ್ ಗಳು.
01:30 ಇಮೇಜ್ ಫಾರ್ಮೇಟ್ ಅನ್ನು ಹೋಲಿಸುವುದರ ಮೂಲಕ ಎರಡು ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ತಿಳಿಯೋಣ.
01:35 ಎಡಭಾಗದಲ್ಲಿರುವ ಚಿತ್ರ vector graphic ಆಗಿದೆ.
01:38 ಬಲಭಾಗದಲ್ಲಿರುವ ಚಿತ್ರ bitmap ಆಗಿದೆ.
01:41 ಚಿತ್ರಗಳು ದೊಡ್ಡದಾದಾಗ ಏನಾಗುತ್ತದೆ ಎಂದು ಗಮನಿಸಿ.
01:45 ವೆಕ್ಟರ್ ಗ್ರಾಫಿಕ್ಸ್ ಸ್ಪಷ್ಟವಾಗಿದೆ ; ಬಿಟ್ ಮ್ಯಾಪ್ ಚಿತ್ರವು ಅಸ್ಪಷ್ಟವಾಗಿದೆ.
01:51 ವೆಕ್ಟರ್ ಆಧಾರಿತ ಗ್ರಾಫಿಕ್ಸ್ ಸಾಪ್ಟ್ ವೇರ್, ಗಣಿತದ ಸೂತ್ರಗಳ ರೇಖೆ ಮತ್ತು ವಕ್ರರೇಖೆಗಳನ್ನು ಬಳಸಿ ಇಮೇಜನ್ನು ಸಂಗ್ರಹಿಸುತ್ತದೆ.
01:58 ಹಾಗಾಗಿ, ಚಿತ್ರಗಳ ಗಾತ್ರದ ಪರಿವರ್ತನೆ ಚಿತ್ರದ ಗುಣಮಟ್ಟದ ಮೇಲೆ ಪ್ರಭಾವವನ್ನು ಬೀರುವುದಿಲ್ಲ.
02:04 ಬಿಟ್ ಮ್ಯಾಪ್, pixel ಗಳನ್ನು ಅಥವಾ ಬಣ್ಣಗಳ ಅತ್ಯಂತ ಸೂಕ್ಷ್ಮ ಬಿಂದುಗಳ ಸಾಲನ್ನು ಗ್ರಿಡ್ ಅಥವಾ ಚೌಕದ ರೀತಿಯಲ್ಲಿ ಉಪಯೋಗಿಸುತ್ತದೆ.
02:11 ನಾವು ಚಿತ್ರವನ್ನು ವಿಸ್ತಾರ ಮಾಡಿದಂತೆ ನೀವು ಸಣ್ಣ ಸಣ್ಣ ಚೌಕಗಳನ್ನು ಕಾಣಬಲ್ಲಿರಾ ?
02:15 ಇವುಗಳು ಗ್ರಿಡ್ ಗಳು.
02:17 ಈ ಚಿಕ್ಕ ಕಣಗಳು ಪ್ರತಿಯೊಂದು ಗ್ರಿಡ್ ನಲ್ಲಿಯೂ ಬಣ್ಣವನ್ನು ತುಂಬುತ್ತವೆ.
02:20 ನೀವು ಇನ್ನೊಂದು ವ್ಯತ್ಯಾಸವನ್ನು ಗಮನಿಸಿರಬಹುದು, ಅದೇನೆಂದರೆ ಬಿಟ್ ಮ್ಯಾಪ್ಸ್ ಆಕಾರದಲ್ಲಿ ಆಯತಾಕಾರವಾಗಿರುವುದು.
02:26 ಏನೇ ಆಗಲಿ, ವೆಕ್ಟರ್ ಗ್ರಾಫಿಕ್ಸ್, ಯಾವ ಆಕಾರದಲ್ಲಿಯಾದರೂ ಇರಬಹುದು.
02:30 ಈಗ ವೆಕ್ಟರ್ ಗ್ರಾಫಿಕ್ಸ್ ಬಗ್ಗೆ ನಮಗೆ ತಿಳಿದಿದೆ. ನಾವು Draw ಅನ್ನು ಬಳಸಿ ಅವುಗಳನ್ನು ಹೇಗೆ ತಯಾರಿಸುವುದೆಂಬುದನ್ನು ಕಲಿಯೋಣ.
02:36 ಇಲ್ಲಿ, ನಾವು :

ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಉಬಂಟು ಲಿನಕ್ಸ್ 10.04 ಮತ್ತು ( Ubuntu Linux version 10.04) ಹಾಗೂ ಲಿಬ್ರೆ ಆಫೀಸ್ ಸ್ಯೂಟ್ 3.3.4( LibreOffice Suite version 3.3.4) ಅನ್ನು ಬಳಸುತ್ತಿದ್ದೇವೆ.

02:46 ಒಂದು ಹೊಸ Draw ಫೈಲ್ ಅನ್ನು ತೆರೆಯಲು, ಪರದೆಯ ಮೇಲ್ಭಾಗದಲ್ಲಿ ಎಡಮೂಲೆಯಲ್ಲಿರುವ Applications ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
02:54 ಮತ್ತು Office ಎಂಬಲ್ಲಿ ಕ್ಲಿಕ್ ಮಾಡಿ, ನಂತರ LibreOffice ಎಂಬಲ್ಲಿ ಕ್ಲಿಕ್ ಮಾಡಿ.
02:59 ಲಿಬ್ರೆ ಆಫೀಸ್ ನ ವಿವಿಧ ಘಟಕಗಳನ್ನು ಹೊಂದಿದ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:03 Drawing ಎಂಬಲ್ಲಿ ಕ್ಲಿಕ್ ಮಾಡಿ.
03:05 ಇದು ಒಂದು ಖಾಲಿ Draw ಫೈಲ್ ಅನ್ನು ತೆರೆಯುತ್ತದೆ.
03:09 ನಮ್ಮ 'Draw' ಫೈಲ್ ಅನ್ನು ಹೆಸರಿಸೋಣ. ಮತ್ತು ಸೇವ್ ಮಾಡೋಣ.
03:12 ಮುಖ್ಯವಾದ ಮೆನುವಿನಲ್ಲಿ File ನ ಮೇಲೆ ಕ್ಲಿಕ್ ಮಾಡೋಣ. ಮತ್ತು “Save as” ಆಪ್ಷನ್ ಅನ್ನು ಆಯ್ಕೆ ಮಾಡೋಣ.
03:18 “Save as” ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
03:21 File Name ಫೀಲ್ಡ್ ನಲ್ಲಿ, “WaterCycle” ಎಂಬ ಹೆಸರನ್ನು ಟೈಪ್ ಮಾಡೋಣ.
03:26 ಡ್ರಾಯಿಂಗ್ ಗೆ ಸಂಬಂಧಿಸಿದ ಹೆಸರನ್ನು ಕೊಡುವುದು ಒಂದು ಒಳ್ಳೆಯ ಅಭ್ಯಾಸ.
03:31 dot odg ('.odg') ಎಂಬುದು Draw ಫೈಲ್ ಗಳ ಡಿಫಾಲ್ಟ್ ಫೈಲ್ ಟೈಪ್ ಆಗಿದೆ.
03:37 Browse folders ಫೀಲ್ಡ್ ಅನ್ನು ಬಳಸಿ, ನಾವು ಈ ಫೈಲ್ ಅನ್ನು ಡೆಸ್ಕ್ ಟಾಪ್ ನಲ್ಲಿ save ಮಾಡೋಣ.
03:42 Save ಎಂಬಲ್ಲಿ ಕ್ಲಿಕ್ ಮಾಡಿ.
03:44 “WaterCycle” ಹೆಸರಿನಲ್ಲಿ ಫೈಲ್ ಸೇವ್ ಆಯಿತು.
03:47 ಫೈಲ್ ನ ಹೆಸರು ಮತ್ತು extension ಗಳೊಂದಿಗೆ Draw ಫೈಲ್ Title barನಲ್ಲಿ ಪ್ರದರ್ಶಿತವಾಗಿದೆ.
03:53 ಈ ಸ್ಲೈಡ್ ನಲ್ಲಿ ತೋರಿಸಿದ ಹಾಗೆ ವಾಟರ್ ಸೈಕಲ್ ಚಿತ್ರವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಕಲಿಯುವೆವು.
03:59 ನಾವು ಈ ಚಿತ್ರವನ್ನು ಹಂತಹಂತವಾಗಿ ಪೂರ್ಣಗೊಳಿಸೋಣ.
04:02 ಪ್ರತಿಯೊಂದು ಆರಂಭಿಕ ಮಟ್ಟದ ಟ್ಯುಟೋರಿಯಲ್ - ನೀವು ಈ ಚಿತ್ರದ ಬೇರೆ ಬೇರೆ ಅಂಶಗಳನ್ನು ಹೇಗೆ ರಚಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ.
04:09 Draw ಟ್ಯುಟೋರಿಯಲ್ ನ ಆರಂಭಿಕ ಪಾಠವಾದ ಮೇಲೆ, ನೀವು ಇದೇ ರೀತಿಯಾದ ಚಿತ್ರವನ್ನು ಸ್ವಯಂ ರಚಿಸಲು ಸಮರ್ಥರಾಗುತ್ತೀರಿ.
04:17 ಮೊದಲಿಗೆ, Draw workspace ಅಥವಾ Draw windowದೊಂದಿಗೆ ನಮ್ಮನ್ನು ನಾವು ಪರಿಚಯಿಸಿಕೊಳ್ಳೋಣ.
04:23 Drawನಲ್ಲಿ ನಾವು ಉಪಯೋಗಿಸಬಹುದಾದ ಎಲ್ಲಾ ಆಯ್ಕೆಗಳನ್ನು Main menu ಪಟ್ಟಿ ಮಾಡುತ್ತದೆ.
04:27 ಎಡಭಾಗದಲ್ಲಿರುವ Pages ಪ್ಯಾನೆಲ್ 'Draw' ಫೈಲ್ ನಲ್ಲಿರುವ ಎಲ್ಲಾ ಪುಟಗಳನ್ನು ತೋರಿಸುತ್ತದೆ.
04:32 ನಾವು ಗ್ರಾಫಿಕ್ಸ್ ಗಳನ್ನು ರಚಿಸುವ ಜಾಗವನ್ನು Page ಎಂದು ಕರೆಯುತ್ತಾರೆ.
04:37 ಪ್ರತಿಯೊಂದು ಪೇಜ್ ನಲ್ಲಿಯೂ ಮೂರು layerಗಳಿವೆ.
04:39 ಅವು - Layout, Controls ಹಾಗೂ Dimensions Lines.
04:44 Layout layer ಡಿಫಾಲ್ಟ್ ಆಗಿ ಪ್ರದರ್ಶಿತಗೊಳ್ಳುತ್ತದೆ.
04:47 ಇಲ್ಲಿಯೇ ನಾವು ಹೆಚ್ಚಿನ ಎಲ್ಲಾ ಗ್ರಾಫಿಕ್ಸ್ ಗಳನ್ನು ರಚಿಸುತ್ತೇವೆ.
04:51 ನಾವು Layout layerನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತೇವೆ.
04:54 ಈಗ, 'LibreOffice Draw'ನಲ್ಲಿ ಲಭ್ಯವಿರುವ ವಿವಿಧ ಟೂಲ್ ಬಾರ್ ಗಳನ್ನು ನಾವು ಪರಿಶೀಲಿಸೋಣ.
04:59 ಡ್ರಾ ನಲ್ಲಿ ಲಭ್ಯವಿರುವ ಟೂಲ್ ಬಾರ್ ಗಳನ್ನು ನೋಡಲು, Main ಮೆನುವಿಗೆ ಹೋಗಿ ಮತ್ತು View ಮೇಲೆ ಹಾಗೂ ಅನಂತರ Toolbars ಮೇಲೆ ಕ್ಲಿಕ್ ಮಾಡಿ.
05:07 ನೀವು ಲಭ್ಯವಿರುವ ಎಲ್ಲಾ ಟೂಲ್ ಗಳ ಪಟ್ಟಿಯನ್ನು ನೋಡುವಿರಿ.
05:11 ಕೆಲವು ಟೂಲ್ ಬಾರ್ ಗಳ ಎಡಕ್ಕೆ ಒಂದು ಚೆಕ್ ಮಾರ್ಕ್ ಇದೆ.
05:15 ಇದರರ್ಥ - ಆ ಟೂಲ್ ಬಾರ್ ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ಅದು Draw windowನಲ್ಲಿ ಕಾಣಸಿಗುತ್ತದೆ.
05:20 Standard ಎಂಬುದು ಆಯ್ಕೆಗೊಂಡಿದೆ.
05:23 ನೀವು ವಿಂಡೋನ ಮೇಲೆ Standard toolbar ಅನ್ನು ನೋಡಬಲ್ಲಿರಿ.
05:27 ನಾವೀಗ, Standard ಟೂಲ್ ಬಾರ್ ಅನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅನ್ ಚೆಕ್ ಮಾಡೋಣ.
05:32 Standard ಟೂಲ್ ಬಾರ್ ಈಗ ಕಾಣದಂತಾಗಿದೆ ಎಂಬುದನ್ನು ನೀವು ನೋಡುವಿರಿ.
05:36 ನಾವು ಇದನ್ನು ಮತ್ತೆ ಕಾಣುವಂತೆ ಮಾಡೋಣ.
05:39 ಇದೇ ರೀತಿ, ನೀವು ಬೇರೆ ಟೂಲ್ ಬಾರ್ ಗಳನ್ನು ಕೂಡ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
05:44 ನಾವು ವಾಟರ್ ಸೈಕಲ್ ಚಿತ್ರದ ಮೂಲಭೂತ ಆಕಾರಗಳನ್ನು ಚಿತ್ರಿಸುವ ಮೊದಲು, ಪುಟವನ್ನು Landscape viewಗೆ ಸೆಟ್ ಮಾಡೋಣ.
05:51 ಇದನ್ನು ಮಾಡಲು, ಪುಟದ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Page ಆಯ್ಕೆಯನ್ನು ಆರಿಸಿ.
05:56 ವಿವಿಧ ಉಪ-ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
05:59 Page Setup ಆಯ್ಕೆಯನ್ನು ಕ್ಲಿಕ್ ಮಾಡಿ.
06:02 Page Setup ಡೈಲಾಗ್ ಬಾಕ್ಸ್ ಪ್ರದರ್ಶಿತಗೊಳ್ಳುತ್ತದೆ.
06:06 Page Formatನ ಕೆಳಗೆ, ನಾವು Format ಫೀಲ್ಡ್ ಅನ್ನು ನೋಡಬಹುದು.
06:10 ಇಲ್ಲಿ, ನಾವು A4ಅನ್ನು ಆರಿಸುತ್ತೇವೆ, ಏಕೆಂದರೆ ಇದು ಪ್ರಿಂಟ್ ಮಾಡಲು ಉಪಯೋಗಿಸುವ ಕಾಗದದ ಅತ್ಯಂತ ಸಾಮಾನ್ಯ ಗಾತ್ರವಾಗಿದೆ.
06:17 ನೀವು ಫಾರ್ಮ್ಯಾಟ್ ಅನ್ನು ಆರಿಸಿದಾಗ, Width ಮತ್ತು Height ಫೀಲ್ಡ್ ಗಳು ತಾನಾಗಿಯೇ ಡಿಫಾಲ್ಟ್ ಮೂಲ್ಯಗಳೊಂದಿಗೆ ತುಂಬಲ್ಪಡುತ್ತವೆ.
06:25 Orientation ಆಯ್ಕೆಯ ಕೆಳಗೆ, ನಾವು Landscape ಅನ್ನು ಆರಿಸೋಣ.
06:29 Paper format ಫೀಲ್ಡ್ ಗಳ ಬಲ ಬದಿಗೆ, ನೀವು Draw pageನ ಪುಟ್ಟ ಮುನ್ನೋಟವನ್ನು ನೋಡುವಿರಿ.
06:36 OK ಅನ್ನು ಕ್ಲಿಕ್ ಮಾಡಿ.
06:38 ನಾವು ಸೂರ್ಯನನ್ನು ಚಿತ್ರಿಸುವುದರಿಂದ ಆರಂಭಿಸೋಣ.
06:41 drawing toolbarನ ಮೇಲೆ, Basic Shapesನ ಪಕ್ಕದಲ್ಲಿರುವ ಚಿಕ್ಕ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
06:47 Circleನ ಮೇಲೆ ಕ್ಲಿಕ್ ಮಾಡಿ.
06:49 ಈಗ ಕರ್ಸರ್ ಅನ್ನು ಪುಟಕ್ಕೆ ತನ್ನಿ >> ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
06:56 ಪುಟದ ಮೇಲೆ ಒಂದು ವೃತ್ತ ಚಿತ್ರಿಸಲ್ಪಟ್ಟಿತು.
06:59 ಈಗ, ನಾವು ಸೂರ್ಯನ ಪಕ್ಕ ಒಂದು ಮೋಡವನ್ನು ಚಿತ್ರಿಸೋಣ.
07:03 ಇದನ್ನು ಮಾಡಲು, ಡ್ರಾಯಿಂಗ್ ಟೂಲ್ ಬಾರ್ ಗೆ ಹೋಗಿ ಮತ್ತು “Symbol Shapes”ಅನ್ನು ಆಯ್ಕೆ ಮಾಡಿ.
07:08 “Symbol Shapes”ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜವನ್ನು ಕ್ಲಿಕ್ ಮಾಡಿ ಮತ್ತು Cloud ಅನ್ನು ಆಯ್ಕೆ ಮಾಡಿ.
07:14 draw page ನ ಮೇಲೆ, ಸೂರ್ಯನ ಪಕ್ಕ ಕರ್ಸರ್ ಅನ್ನು ಇರಿಸಿ.
07:18 ಮೌಸ್ ನ ಎಡ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
07:21 ನೀವು ಮೋಡವನ್ನು ಚಿತ್ರಿಸಿದ್ದೀರಿ!
07:23 ನಂತರ, ನಾವು ಪರ್ವತವನ್ನು ಬಿಡಿಸೋಣ.
07:25 ನಾವು ಮತ್ತೆ Basic shapes ಅನ್ನು ಆಯ್ಕೆ ಮಾಡಿ Isosceles triangle (ಐಸೊಸೆಲೆಸ್ ಟ್ರ್ಯಾಂಗಲ್) ನ ಮೇಲೆ ಕ್ಲಿಕ್ ಮಾಡೋಣ.
07:30 Draw pageನಲ್ಲಿ ಒಂದು ತ್ರಿಭುಜವನ್ನು ನಾವು ಹಿಂದೆ ಮಾಡಿದಂತೆಯೇ ಸೇರಿಸೋಣ.
07:35 ಈಗ, ನಾವು ಮೂರು ಆಕೃತಿಗಳನ್ನು ಇರಿಸಿದ್ದೇವೆ.
07:38 ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ ನಿಮ್ಮ ಫೈಲ್ ಅನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
07:42 ಇದನ್ನು ಮಾಡಲು Ctrl+S ಕೀಗಳನ್ನು ಜೊತೆಗೆ ಒತ್ತಿ.
07:48 ತಾನಾಗಿಯೇ ಬದಲಾವಣೆಗಳನ್ನು ಸೇವ್ ಮಾಡಲು ನೀವು ಒಂದು ಮಧ್ಯಂತರ ಸಮಯವನ್ನು ಕೂಡ ನಿಗದಿಪಡಿಸಬಹುದು.
07:53 ಇದನ್ನು ಮಾಡಲು, Main ಮೆನುಗೆ ಹೋಗಿ ಮತ್ತು Tools ಅನ್ನು ಆಯ್ಕೆ ಮಾಡಿ.
07:57 Toolsನ ಕೆಳಗೆ, Optionsನ ಮೇಲೆ ಕ್ಲಿಕ್ ಮಾಡಿ.
08:00 Options ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:03 Load/Saveನ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಅನಂತರ, General ನ ಮೇಲೆ ಕ್ಲಿಕ್ ಮಾಡಿ >> ಬಲಭಾಗದಲ್ಲಿರುವ ಚೆಕ್ ಬಾಕ್ಸ್ ಗಳಲ್ಲಿ, >>
08:11 ”Save AutoRrecovery information every“ ಅನ್ನು ಚೆಕ್ ಮಾಡಿ ಮತ್ತು “2” ಎಂದು ಟೈಪ್ ಮಾಡಿ.
08:17 ಇದರರ್ಥ - ಪ್ರತಿ ಎರಡು ನಿಮಿಷಗಳಿಗೆ ಫೈಲ್ ತಾನೇ ತಾನಾಗಿ ಸೇವ್ ಆಗುತ್ತದೆ.
08:22 OK ಕ್ಲಿಕ್ ಮಾಡಿ.
08:24 ಈಗ ನಾವು File >> Close ನ ಮೇಲೆ ಕ್ಲಿಕ್ ಮಾಡುವುದರಿಂದ ಫೈಲ್ ಅನ್ನು ಮುಚ್ಚೋಣ (ಕ್ಲೋಸ್ ಮಾಡೋಣ)
08:29 ಅಸ್ತಿತ್ವದಲ್ಲಿರುವ Draw ಫೈಲನ್ನು ತೆರೆಯಲು, - ಮೇಲ್ಗಡೆ ಮೆನು ಬಾರ್ ನಲ್ಲಿರುವ File ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Open ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
08:38 ತೆರೆಯ ಮೇಲೆ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:41 ಇಲ್ಲಿ, ನೀವು ನಿಮ್ಮ ಡಾಕ್ಯುಮೆಂಟ್ ಅನ್ನು ಎಲ್ಲಿ ಸೇವ್ ಮಾಡಿದ್ದೀರೋ ಆ ಫೋಲ್ಡರ್ ಅನ್ನು ಹುಡುಕಿ.
08:46 ನೀವು ತೆರೆಯಲಿಚ್ಛಿಸುವ ಫೈಲನ್ನು ಆಯ್ಕೆ ಮಾಡಿ ಮತ್ತು Open ಅನ್ನು ಕ್ಲಿಕ್ ಮಾಡಿ.
08:51 ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ.
08:53 ಹೊಸ draw ಫೈಲ್ ಒಂದನ್ನು ರಚಿಸಿ ಮತ್ತು ಅದನ್ನು “MyWaterCycle” ಎಂದು ಸೇವ್ ಮಾಡಿ.
08:57 page orientation ಅನ್ನು Portrait ಎಂದು ಸೆಟ್ ಮಾಡಿ.
09:00 ಒಂದು ಮೋಡ, ನಕ್ಷತ್ರ ಮತ್ತು ಒಂದು ವೃತ್ತವನ್ನು ರಚಿಸಿ.
09:04 ಈಗ 'page orientation'ಅನ್ನು Landscapeಆಗಿ ಪರಿವರ್ತಿಸಿ.
09:07 ಚಿತ್ರದಲ್ಲಿನ ವಸ್ತುಗಳ ಸ್ಥಾನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ.
09:11 ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:16 ಈ ಟ್ಯುಟೋರಿಯಲ್ ನಲ್ಲಿ ನಾವು:
09:19 LibreOffice Draw,
09:21 LibreOffice Draw ಕಾರ್ಯಕ್ಷೇತ್ರ ಮತ್ತು
09:23 context menuಗಳ ಬಗ್ಗೆ ತಿಳಿದುಕೊಂಡಿದ್ದೇವೆ.
09:25 ನಾವು ಇವನ್ನೂ ಕಲಿತಿದ್ದೇವೆ:
09:27 * ಒಂದು ಡ್ರಾ ಫೈಲ್ ಅನ್ನು ರಚಿಸುವುದು, ಸೇವ್ ಮಾಡುವುದು, ಮುಚ್ಚುವುದು ಮತ್ತು ತೆರೆಯುವುದು,
09:31 * ಟೂಲ್ ಬಾರ್ ಗಳನ್ನು ಸಕ್ರಿಯಗೊಳಿಸುವುದು,
09:33 * Draw ಪೇಜ್ ಅನ್ನು ಸೆಟ್ ಮಾಡುವುದು ಮತ್ತು
09:35 * ಮೂಲಭೂತ ಆಕಾರಗಳನ್ನು ಸೇರಿಸುವುದು.
09:38 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ.
09:42 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
09:45 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
09:49 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
09:52 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
09:55 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
09:59 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
10:05 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
10:09 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
10:17 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
10:28 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

NHegde, Pratik kamble, Vasudeva ahitanal