PERL/C3/Access-Modifiers-in-PERL/Kannada
|
|
00:01 | Access Modifiers in PERL (ಆಕ್ಸೆಸ್ ಮಾಡಿಫೈಯರ್ಸ್ ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
|
00:19 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:32 | ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. |
00:36 | ನಿಮಗೆ ಪರ್ಲ್ (Perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರುವುದು ಅವಶ್ಯಕ. |
00:40 | ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು spoken tutorial ವೆಬ್ಸೈಟ್ ಮೇಲೆ ನೋಡಿ. |
00:47 | ವೇರಿಯೇಬಲ್ ಗಳ ವ್ಯಾಪ್ತಿಯ (scope of variables) ಪರಿಚಯದೊಂದಿಗೆ ನಾವು ಆರಂಭಿಸೋಣ. |
00:51 | ವೇರಿಯೇಬಲ್ ಗಳ ಸ್ಕೋಪ್ (ವ್ಯಾಪ್ತಿ) ಎಂಬುದು ಕೋಡ್ ನ ಒಂದು ಭಾಗವಾಗಿದ್ದು, ಇದರಲ್ಲಿ ಮಾತ್ರ ಆ ವೇರಿಯೇಬಲ್ ಅನ್ನು ಆಕ್ಸೆಸ್ ಮಾಡಬಹುದು (ತಲುಪಬಹುದು). |
00:58 | ಇಲ್ಲಿ ವೇರಿಯೇಬಲ್ ಗಳು ಗೋಚರಿಸುತ್ತವೆ ಎಂದು ಸಹ ಹೇಳಬಹುದು. |
01:03 | ಮೊದಲು ನಾವು, ಪರ್ಲ್ ನಲ್ಲಿಯ ‘my, local’ ಮತ್ತು ‘our’ ಎಂಬ ಮಾಡಿಫೈಯರ್ ಗಳ ಬಗ್ಗೆ ಚರ್ಚಿಸೋಣ. |
01:10 | 'my' ಎಂದರೆ 'Private’ (ಪ್ರೈವೇಟ್) ವೇರಿಯೇಬಲ್ ಗಳು, |
01:13 | 'local' ಎಂದರೆ 'Dynamically scoped’ (ಡೈನಾಮಿಕಲೀ ಸ್ಕೋಪ್ಡ್) ವೇರಿಯೇಬಲ್ ಗಳು, |
01:17 | 'our' ಎಂದರೆ ‘ಗ್ಲೋಬಲ್ ವೇರಿಯೇಬಲ್’ಗಳು. |
01:20 | 'my' ಎಂಬ ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲ್ಪಟ್ಟ ವೇರಿಯೇಬಲ್’ಗಳು, ಅವುಗಳನ್ನು ಡಿಕ್ಲೇರ್ ಮಾಡಿದ ಬ್ಲಾಕ್ ನ ಹೊರಗೆ ತಮ್ಮ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತವೆ. |
01:28 | ನೀವು ವೇರಿಯೇಬಲ್ ಅನ್ನು, ಅದಕ್ಕೆ ಯಾವುದೇ ವ್ಯಾಲ್ಯೂಅನ್ನು ಕೊಡದೇ ಹೀಗೆ ಡಿಕ್ಲೇರ್ ಮಾಡಬಹುದು:
'my $fvalue semicolon ' |
01:37 | ನೀವು ವೇರಿಯೇಬಲ್ ಗೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಿ, ಅದನ್ನು ಹೀಗೆ ಸಹ ಡಿಕ್ಲೇರ್ ಮಾಡಬಹುದು: |
01:43 | 'my $fValue = 1 semicolon' |
01:48 | 'my $fname = within double quotes Rahul semicolon' |
01:55 | ಒಂದೇ 'my' ಸ್ಟೇಟ್ಮೆಂಟ್ ನೊಂದಿಗೆ ಹಲವಾರು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಲು ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
02:02 | 'my ಓಪನ್ ಬ್ರಾಕೆಟ್ $fname ಕಾಮಾ $lname ಕಾಮಾ $age ಕ್ಲೋಸ್ ಬ್ರಾಕೆಟ್ ಸೆಮಿಕೋಲನ್’ |
02:12 | ಉದಾಹರಣೆಗೆ ಒಂದು ಪ್ರೊಗ್ರಾಂಅನ್ನು ಬಳಸಿ, 'private' ವೇರಿಯೇಬಲ್ ಗಳನ್ನು ನಾವು ಅರ್ಥಮಾಡಿಕೊಳ್ಳೋಣ. |
02:17 | ನನ್ನ ಹತ್ತಿರ ಈಗಾಗಲೇ ಒಂದು ಸ್ಯಾಂಪಲ್ ಪ್ರೊಗ್ರಾಂ ಇದೆ. ನಾನು 'gedit' ಟೆಕ್ಸ್ಟ್-ಎಡಿಟರ್ ನಲ್ಲಿ ಇದನ್ನು ಓಪನ್ ಮಾಡುತ್ತೇನೆ. |
02:24 | ಟರ್ಮಿನಲ್ ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ:
'gedit scope hyphen my dot pl ampersand ' ಮತ್ತು 'Enter' ಅನ್ನು ಒತ್ತಿ. |
02:34 | ಈಗ, 'gedit' ನಲ್ಲಿ 'scope hyphen my dot pl' ಎಂಬ ಫೈಲ್ ಓಪನ್ ಆಗಿದೆ. |
02:39 | ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡನ್ನು ಟೈಪ್ ಮಾಡಿ. ಈಗ ನಾನು ಕೋಡನ್ನು ವಿವರಿಸುತ್ತೇನೆ. |
02:46 | ಇಲ್ಲಿ, ನಾನು 'my' ಕೀವರ್ಡ್ ನೊಂದಿಗೆ, '$fname' ಎಂಬ ಒಂದು 'private' ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇನೆ |
02:52 | ಮತ್ತು ಅದಕ್ಕೆ "Raghu" ಎಂಬ ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ. |
02:56 | ಈ ಬ್ಲಾಕ್ ನಲ್ಲಿ, 'ಪ್ರಿಂಟ್ ಸ್ಟೇಟ್ಮೆಂಟ್’, 'fname' ಎಂಬ ವೇರಿಯೇಬಲ್ ನಲ್ಲಿಯ ವ್ಯಾಲ್ಯೂಅನ್ನು, ಎಂದರೆ, "Raghu" ಎಂದು ಪ್ರಿಂಟ್ ಮಾಡುತ್ತದೆ. |
03:04 | ಮುಂದಿನ ಬ್ಲಾಕ್ ನಲ್ಲಿ, ನಾನು ಇದೇ '$fname' ಎಂಬ 'ಪ್ರೈವೇಟ್ ವೇರಿಯೇಬಲ್’ ಗೆ, "Other" ಎಂಬ ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ. |
03:11 | ಹೀಗಾಗಿ, ಈ 'ಪ್ರಿಂಟ್ ಸ್ಟೇಟ್ಮೆಂಟ್’, ಈ ಒಂದು ಬ್ಲಾಕ್ ನ ಒಳಗಡೆ "Other" ಎಂದು ಪ್ರಿಂಟ್ ಮಾಡುತ್ತದೆ. |
03:17 | ಈ ಪ್ರೊಗ್ರಾಂನಲ್ಲಿ, ಕೊನೆಯ 'ಪ್ರಿಂಟ್ ಸ್ಟೇಟ್ಮೆಂಟ್’, ಯಾವ ಔಟ್ಪುಟ್ ಅನ್ನೂ ಪ್ರಿಂಟ್ ಮಾಡುವುದಿಲ್ಲ. |
03:23 | ಏಕೆಂದರೆ, ಮೊದಲು ಡಿಫೈನ್ ಮಾಡಿದ ಬ್ಲಾಕ್ ಗಳ ಸ್ಕೋಪ್ ನ ಹೊರಗೆ, 'fname ', ಅಸೈನ್ ಮಾಡಿದ ಯಾವ ವ್ಯಾಲ್ಯೂಅನ್ನು ಹೊಂದಿರುವುದಿಲ್ಲ. |
03:32 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
03:37 | ನಾವು ಈಗ ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ. |
03:40 | ಮತ್ತೆ ಟರ್ಮಿನಲ್ ಗೆ ಬದಲಾಯಿಸಿ, ಹೀಗೆ ಟೈಪ್ ಮಾಡಿ:
'perl scope hyphen my dot pl' ಮತ್ತು 'Enter' ಅನ್ನು ಒತ್ತಿ. |
03:49 | ಔಟ್ಪುಟ್ ಹೀಗೆ ಕಾಣುತ್ತದೆ:
Block 1: Raghu Block 2: Other Outside Block: ಇಲ್ಲಿ ಯಾವ ಔಟ್ಪುಟ್ ಇಲ್ಲ. |
03:59 | ಹೀಗೆ, 'my' ವೇರಿಯೇಬಲ್ ನ ಸ್ಕೋಪ್ ಅನ್ನು, ಕೋಡ್ ನ ಒಂದು ನಿರ್ದಿಷ್ಟ ಬ್ಲಾಕ್ ನ ಒಳಗಡೆ ಮಾತ್ರ ಆಕ್ಸೆಸ್ ಮಾಡಲಾಗುತ್ತದೆ. |
04:06 | ಈಗ, ಈ ಪ್ರೊಗ್ರಾಮನ್ನು ಸ್ವಲ್ಪ ಬದಲಾಯಿಸೋಣ. |
04:10 | ಬ್ಲಾಕ್ ಗಳ ಹೊರಗೆ, ಕೊನೆಯ ಪ್ರಿಂಟ್ ಸ್ಟೇಟ್ಮೆಂಟ್ ನ ಮೊದಲು, ನಾವು ಹೀಗೆ ಸೇರಿಸೋಣ:
'my $fname = within double quotes John semicolon'. ಬದಲಾವಣೆಗಳನ್ನು ಸೇವ್ ಮಾಡಿ. |
04:23 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹಿಂದೆ ಮಾಡಿದಂತೆ ಎಕ್ಸೀಕ್ಯೂಟ್ ಮಾಡಿ. |
04:28 | ಇಲ್ಲಿ ತೋರಿಸಲಾದ ಔಟ್ಪುಟ್ ಅನ್ನು ವಿಶ್ಲೇಷಿಸಿ. |
04:32 | ಬ್ಲಾಕ್ ನ ಒಳಗೆ ಮತ್ತು ಹೊರಗೆ, 'my' ವೇರಿಯೇಬಲ್ ಅನ್ನು ಬಳಸುವ ವ್ಯಾಪ್ತಿಯನ್ನು (scope) ನಿಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಭಾವಿಸುತ್ತೇನೆ. |
04:41 | ಇನ್ನುಮುಂದೆ, ನಾವು ಪರ್ಲ್ ನಲ್ಲಿ ‘ಡೈನಾಮಿಕಲೀ ಸ್ಕೋಪ್ಡ್ ವೇರಿಯೇಬಲ್’ (dynamically scoped variable) ಎಂಬುದರ ಬಗ್ಗೆ ನೋಡೋಣ. |
04:47 | 'Local' ಎಂಬ ಕೀವರ್ಡ್, ‘ಗ್ಲೋಬಲ್ ವೇರಿಯೇಬಲ್’ ಗೆ ತಾತ್ಕಾಲಿಕ ಸ್ಕೋಪನ್ನು ಕೊಡುತ್ತದೆ. |
04:52 | ಮೂಲ (original) ಬ್ಲಾಕ್ ನಿಂದ ಕಾಲ್ ಮಾಡಲ್ಪಟ್ಟ ಯಾವುದೇ ಫಂಕ್ಷನ್ ಗೆ, ಈ ವೇರಿಯೇಬಲ್, ಗೋಚರಿಸುತ್ತದೆ. |
04:58 | ಲೋಕಲ್ ವೇರಿಯೇಬಲ್ ಅನ್ನು ನೀವು ಹೀಗೆ ಡಿಕ್ಲೇರ್ ಮಾಡಬಹುದು:
‘local $fValue = 100 ಸೆಮಿಕೋಲನ್’ ‘local $fname = within double quotes “Rakesh” ಸೆಮಿಕೋಲನ್’ |
05:13 | ಒಂದು ಸ್ಯಾಂಪಲ್ ಪ್ರೊಗ್ರಾಮನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ. |
05:17 | ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
'gedit scope hyphen local dot pl ampersand' ಮತ್ತು 'Enter' ಅನ್ನು ಒತ್ತಿ. |
05:27 | ಇದು, 'gedit' ನಲ್ಲಿ 'scope hyphen local dot pl' ಎಂಬ ಫೈಲನ್ನು ಓಪನ್ ಮಾಡುತ್ತದೆ. |
05:33 | ಈ ಕೆಳಗಿನ ಕೋಡನ್ನು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. ಈಗ ನಾನು ಕೋಡನ್ನು ವಿವರಿಸುತ್ತೇನೆ. |
05:40 | ಇಲ್ಲಿ, ನಾವು ಮೊದಲನೆಯ ಪಂಕ್ತಿಯಲ್ಲಿ, '$fname ' ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿ ಅದನ್ನು ಇನಿಶಿಯಲೈಸ್ ಮಾಡಿದ್ದೇವೆ. |
05:47 | 'Welcome()' ಎಂಬ ಫಂಕ್ಷನ್ ನ ಒಳಗೆ, ನಾವು ಇದೇ '$fname ' ಎಂಬ ಹೆಸರಿನ ಒಂದು ಲೋಕಲ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
05:54 | ವೇರಿಯೇಬಲ್ ನ ಹೆಸರಿನ ಮೊದಲು ಇರುವ 'local' ಎಂಬ ಕೀವರ್ಡ್ ಅನ್ನು ಗಮನಿಸಿ |
05:59 | ಮತ್ತು ಈ ವೇರಿಯೇಬಲ್ ಗೆ ನಾವು "Rakesh" ಎಂಬ ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇವೆ. |
06:03 | ಹೀಗಾಗಿ, ಮೂಲತಃ 'Welcome()’ ಫಂಕ್ಷನ್ ನ ಒಳಗೆ, ‘$fname' ಅನ್ನು ಒಂದು ಹೊಸ, ತಾತ್ಕಾಲಿಕ ‘ಲೋಕಲ್ ವೇರಿಯೇಬಲ್’ ಅನ್ನಾಗಿ ಬದಲಾಯಿಸಲಾಗಿದೆ.
ನಂತರ, ಫಂಕ್ಷನ್ 'Hello()' ಅನ್ನು ಕಾಲ್ ಮಾಡಲಾಗಿದೆ. |
06:15 | ಇಲ್ಲಿ, 'Hello()' ಎಂಬ ಫಂಕ್ಷನ್ ನ ವ್ಯಾಖ್ಯಾನವಿದೆ (definition). |
06:18 | ಪ್ರೊಗ್ರಾಂನ ಕೊನೆಗೆ, ನಾವು 'Welcome()' ಮತ್ತು 'Hello()' ಈ ಎರಡೂ ಫಂಕ್ಷನ್ ಗಳನ್ನು ಕಾಲ್ ಮಾಡುತ್ತಿದ್ದೇವೆ. |
06:25 | ಈಗ, ಪ್ರೊಗ್ರಾಮ್ ಅನ್ನು ಸೇವ್ ಮಾಡಲು 'Ctrl + S' ಅನ್ನು ಒತ್ತಿ. |
06:29 | ನಾವು ಪ್ರೊಗ್ರಾಮ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
06:31 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
'perl scope hyphen local.pl' ಮತ್ತು 'Enter' ಅನ್ನು ಒತ್ತಿ. |
06:41 | ಔಟ್ಪುಟ್ ಅನ್ನು ಹೀಗೆ ತೋರಿಸಲಾಗಿದೆ:
"Hello, Rakesh"! "Hello, Welcome to Spoken tutorials!" |
06:48 | ನಾವು ಔಟ್ಪುಟ್ ಅನ್ನು ಅರ್ಥಮಾಡಿಕೊಳ್ಳೋಣ. |
06:51 | 'Welcome()' ಎಂಬ ಫಂಕ್ಷನ್ ಅನ್ನು ಕಾಲ್ ಮಾಡಿದಾಗ, ಅದರ ಒಳಗಿರುವ 'Hello()' ಎಂಬ ಫಂಕ್ಷನ್, ಲೋಕಲ್ ವೇರಿಯೇಬಲ್ ಅನ್ನು ಆಕ್ಸೆಸ್ ಮಾಡುತ್ತದೆ. |
06:59 | 'Welcome()’ ನ ಒಳಗೆ, ‘$fname', "Rakesh" ಎಂಬ ವ್ಯಾಲ್ಯೂಅನ್ನು ಹೊಂದಿದೆ. |
07:04 | ಇದಾದ ನಂತರ, 'Hello()' ಎಂಬ ಫಂಕ್ಷನ್, '$fname' ವೇರಿಯೇಬಲ್ ಅನ್ನು ಇನ್ನೊಮ್ಮೆ ಆಕ್ಸೆಸ್ ಮಾಡುತ್ತದೆ. |
07:11 | ಆದರೆ ಈ ಬಾರಿ, ಈ '$fname' ಎಂಬ ವೇರಿಯೇಬಲ್ ಅನ್ನು, "Welcome to spoken tutorials" ಎಂದು ಇನಿಶಿಯಲೈಸ್ ಮಾಡಲಾಗಿತ್ತು. |
07:19 | ಇದು, '$fname ' ಎಂಬ ಲೋಕಲ್ ವೇರಿಯೇಬಲ್ ಅನ್ನು 'Welcome()' ಫಂಕ್ಷನ್ ನ ಒಳಗೆ ಆಕ್ಸೆಸ್ ಮಾಡುತ್ತಿಲ್ಲ. |
07:25 | ಎಂದರೆ, 'Welcome()' ಬ್ಲಾಕ್ ಅನ್ನು ಬಿಟ್ಟ ನಂತರ, ಲೋಕಲ್ ವೇರಿಯೇಬಲ್, ಸ್ಕೋಪನ್ನು ಮರಳಿ ಸ್ಥಾಪಿಸುತ್ತದೆ. |
07:32 | ಇನ್ನುಮುಂದೆ, ನಾವು ಪರ್ಲ್ ನಲ್ಲಿ ‘ಗ್ಲೋಬಲ್ ವೇರಿಯೇಬಲ್’ ಗಳನ್ನು ನೋಡುವೆವು. |
07:38 | ಪ್ರೊಗ್ರಾಂನಲ್ಲಿ, ‘ಗ್ಲೋಬಲ್ ವೇರಿಯೇಬಲ್’ಅನ್ನು ಎಲ್ಲಿಯಾದರೂ ಆಕ್ಸೆಸ್ ಮಾಡಬಹುದು. |
07:43 | ‘ಗ್ಲೋಬಲ್ ವೇರಿಯೇಬಲ್’ಗಳನ್ನು 'our' ಎಂಬ ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲಾಗುವುದು. |
07:47 | ಇಲ್ಲಿ ಕೆಲವು ಉದಾಹರಣೆಗಳಿವೆ.
'our $fvalue = 100 semicolon </nowiki>' 'our $fname =within double quotes Priya semicolon' |
08:01 | ಈಗ, ನಾವು ‘ಗ್ಲೋಬಲ್ ವೇರಿಯೇಬಲ್’ಗಳ ಒಂದು ಉದಾಹರಣೆಯನ್ನು ನೋಡೋಣ. |
08:06 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
'gedit scope hyphen our dot pl ampersand' ಮತ್ತು 'Enter' ಅನ್ನು ಒತ್ತಿ. |
08:16 | ಇದು, 'gedit' ನಲ್ಲಿ 'scope hyphen our.pl' ಎಂಬ ಫೈಲನ್ನು ಓಪನ್ ಮಾಡುವುದು. |
08:22 | ನಾನು ಬರೆದಿರುವ ಸ್ಯಾಂಪಲ್ ಪ್ರೊಗ್ರಾಮನ್ನು ವಿವರಿಸುತ್ತೇನೆ. |
08:27 | 'package main' ಮತ್ತು 'our $i ' ಎಂಬ ಗ್ಲೋಬಲ್ ವೇರಿಯೇಬಲ್ ಅನ್ನು ನಾನು ಡಿಕ್ಲೇರ್ ಮಾಡಿದ್ದೇನೆ ಹಾಗೂ ಅದನ್ನು '100' ಎಂದು ಇನಿಶಿಯಲೈಸ್ ಮಾಡಿದ್ದೇನೆ. |
08:37 | 'package First' ಎಂಬ ಡಿಕ್ಲೆರೇಶನ್ ಅನ್ನು ಗಮನಿಸಿ. |
08:40 | 'package' ಎಂಬುದು, ತನ್ನದೇ ಆದ 'ನೇಮ್ ಸ್ಪೇಸ್' ಅನ್ನು ಹೊಂದಿರುವ ಕೋಡ್ ನ ಸಂಗ್ರಹವಾಗಿದೆ. |
08:46 | 'ನೇಮ್-ಸ್ಪೇಸ್' ಎಂಬುದು, 'ಪ್ಯಾಕೇಜ್' ಗಳ ನಡುವಿನ 'ವೇರಿಯೇಬಲ್ ನೇಮ್ ಕೊಲೀಜನ್ಸ್'ಅನ್ನು (ವೇರಿಯೇಬಲ್ ಗಳ ಹೆಸರಿನ ಘರ್ಷಣೆ) ತಡೆಗಟ್ಟುತ್ತದೆ. |
08:51 | ನಾವು 'ಪ್ಯಾಕೇಜ್' ಮತ್ತು 'ನೇಮ್-ಸ್ಪೇಸ್'ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಇನ್ನೂ ಹೆಚ್ಚು ತಿಳಿಯುವೆವು. |
08:56 | 'package First' ನ ಒಳಗೆ, "i" ಎಂಬ ಗ್ಲೋಬಲ್ ವೇರಿಯೇಬಲ್, ವ್ಯಾಲ್ಯೂ 10 ಅನ್ನು ಪಡೆದಿರುತ್ತದೆ. |
09:02 | 'package Second'ನಲ್ಲಿ, "i" ಎಂಬ ಗ್ಲೋಬಲ್ ವೇರಿಯೇಬಲ್ ಗೆ ವ್ಯಾಲ್ಯೂ 20 ಅನ್ನು ಅಸೈನ್ ಮಾಡಲಾಗಿದೆ. |
09:08 | 'main package' (ಮೇನ್ ಪ್ಯಾಕೇಜ್), 'package First’ ವೇರಿಯೇಬಲ್ ಮತ್ತು 'package Second’ ವೇರಿಯೇಬಲ್ ಎರಡನ್ನೂ ಬಳಸುತ್ತದೆ. |
09:15 | ನನ್ನ ಪ್ರೊಗ್ರಾಂನಲ್ಲಿ, ಎಲ್ಲ ಪ್ಯಾಕೇಜ್ ಗಳಲ್ಲಿ ನಾನು ಅದೇ ವೇರಿಯೇಬಲ್ "i" ಯನ್ನು ಡಿಕ್ಲೇರ್ ಮಾಡಿದ್ದೇನೆ. |
09:21 | ‘ಪ್ಯಾಕೇಜ್ ವೇರಿಯೇಬಲ್’, ಹೀಗೆ ಸೂಚಿಸಲ್ಪಡುತ್ತದೆ:
'package name colon colon variable name'. |
09:29 | ನಮ್ಮ ಉದಾಹರಣೆಯಲ್ಲಿ, ಇದು ಹೀಗಿದೆ:
'$First colon colon i, $Second colon colon i'. |
09:39 | ಒಂದೇ ಫೈಲ್ ನಲ್ಲಿ ನಾವು ಅನೇಕ ಪ್ಯಾಕೇಜ್ ಗಳನ್ನು ಹೊಂದಿದ್ದೇವೆ ಮತ್ತು ಗ್ಲೋಬಲ್ ವೇರಿಯೇಬಲ್ ಅನ್ನು ಎಲ್ಲ ಪ್ಯಾಕೇಜ್ ಗಳಿಂದ ಆಕ್ಸೆಸ್ ಮಾಡಲಾಗುತ್ತದೆ. |
09:47 | ಈಗ, ಫೈಲನ್ನು ಸೇವ್ ಮಾಡಿ ಮತ್ತು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡಿ. |
09:51 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
'perl scope hyphen our dot pl' ಮತ್ತು 'Enter' ಅನ್ನು ಒತ್ತಿ. |
09:59 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ. |
10:03 | 'ವೇರಿಯೇಬಲ್ i ' ಗೆ ಹೇಗೆ ಅಸೈನ್ ಮಾಡಲಾಗಿದೆ ಎಂಬುದನ್ನು ತಿಳಿಯಲು, ಔಟ್ಪುಟ್ ಅನ್ನು ನಿಮ್ಮಷ್ಟಕ್ಕೆ ನೀವೇ ವಿಶ್ಲೇಷಿಸಿ. |
10:11 | ಈಗ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, |
10:16 | ಈ ಟ್ಯುಟೋರಿಯಲ್ ನಲ್ಲಿ,
|
10:29 | ಕಂಪೈಲೇಶನ್ ಬೇಗನೆ ಆಗುವುದೆಂದು 'local' ನ ಬದಲಾಗಿ 'my' ಬಳಸುವುದಕ್ಕೆ ಆದ್ಯತೆಯನ್ನು ನೀಡಲಾಗಿದೆ. |
10:35 | ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
10:37 | ಈ ಕೆಳಗಿನ ಅಸೈನ್ಮೆಂಟ್ ಗೆ ಕೋಡ್ ಅನ್ನು ಬರೆದು ಅದನ್ನು ಎಕ್ಸೀಕ್ಯೂಟ್ ಮಾಡಿ. |
10:42 | 'FirstModule' ಎಂಬ ಒಂದು 'ಪ್ಯಾಕೇಜ್ 'ಅನ್ನು ಡಿಕ್ಲೇರ್ ಮಾಡಿ. |
10:46 | '$age' ಎಂಬ ಒಂದು ವೇರಿಯೇಬಲ್ ಅನ್ನು 'our' ಎಂದು ಡಿಕ್ಲೇರ್ ಮಾಡಿ ಮತ್ತು ಅದಕ್ಕೆ '42' ಎಂದು ವ್ಯಾಲ್ಯೂಅನ್ನು ಅಸೈನ್ ಮಾಡಿ. |
10:52 | 'SecondModule' ಎಂಬ ಇನ್ನೊಂದು 'ಪ್ಯಾಕೇಜ್ 'ಅನ್ನು ಡಿಕ್ಲೇರ್ ಮಾಡಿ. |
10:56 | '$ageword' ಎಂಬ ವೇರಿಯೇಬಲ್ ಅನ್ನು 'our' ಎಂದು ಡಿಕ್ಲೇರ್ ಮಾಡಿ ಮತ್ತು ಡಬಲ್ ಕೋಟ್ಸ್ ನ ಒಳಗೆ "Forty-Two" ಎಂದು ವ್ಯಾಲ್ಯೂಅನ್ನು ಅಸೈನ್ ಮಾಡಿ. |
11:05 | ' First()' ಎಂಬ ಒಂದು ಸಬ್-ರುಟೀನ್ ಅನ್ನು ಡಿಕ್ಲೇರ್ ಮಾಡಿ. |
11:08 | ಕೆಳಗೆ ತೋರಿಸಿದಂತೆ, ಸಬ್-ರುಟೀನ್ ನ ಒಳಗೆ, 'local' ಹಾಗೂ 'my' ಕೀವರ್ಡ್ ಗಳೊಂದಿಗೆ ಎರಡು ವೇರಿಯೇಬಲ್ ಗಳ್ಅನ್ನು ಡಿಕ್ಲೇರ್ ಮಾಡಿ: |
11:16 | 'local $age = 52' ಸೆಮಿಕೋಲನ್ |
11:20 | 'my $ageword' = within double quotes 'Fifty-two’ ಸೆಮಿಕೋಲನ್ |
11:27 | ಇನ್ನೊಂದು ಸಬ್-ರುಟೀನ್ ಅನ್ನು 'Result()' ಎಂದು ಕರೆಯಿರಿ. |
11:31 | ಈ ಫಂಕ್ಷನ್ ನ ಒಳಗೆ, '$age' ಮತ್ತು '$ageword' ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಿ. |
11:37 | ಈ ಸಬ್-ರುಟೀನ್ ಅನ್ನು end ಮಾಡಿ. |
11:39 | 'Result()' ಎಂಬ ಸಬ್-ರುಟೀನ್ ಅನ್ನು ಡಿಕ್ಲೇರ್ ಮಾಡಿ. |
11:42 | '$age' ಮತ್ತು '$ageword' ಗಳ ವ್ಯಾಲ್ಯೂಗಳನ್ನು ಮತ್ತೊಮ್ಮೆ ಪ್ರಿಂಟ್ ಮಾಡಿ. |
11:47 | ಈ ಸಬ್-ರುಟೀನ್ ಅನ್ನು end ಮಾಡಿ. |
11:49 | 'First()' ಎಂಬ ಫಂಕ್ಷನ್ ಅನ್ನು ಕಾಲ್ ಮಾಡಿ. |
11:51 | 'Package First' ಮತ್ತು 'Package Second' ಗಳನ್ನು ಕೆಳಗಿನಂತೆ ಪ್ರಿಂಟ್ ಮಾಡಿ. |
11:57 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:05 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
12:18 | ಇದು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro. |
12:31 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ವಂದನೆಗಳು. |