PERL/C3/Access-Modifiers-in-PERL/Kannada

From Script | Spoken-Tutorial
Jump to: navigation, search
Time
Narration
00:01 Access Modifiers in PERL (ಆಕ್ಸೆಸ್ ಮಾಡಿಫೈಯರ್ಸ್ ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
  • ವೇರಿಯೇಬಲ್ ಗಳ ಸ್ಕೋಪ್ (ವ್ಯಾಪ್ತಿ)
  • 'Private' (ಪ್ರೈವೇಟ್) ವೇರಿಯೇಬಲ್ ಗಳು
  • 'Dynamically scoped' (ಡೈನಾಮಿಕಲೀ ಸ್ಕೋಪ್ಡ್) ವೇರಿಯೇಬಲ್ ಗಳು
  • 'ಗ್ಲೋಬಲ್ ವೇರಿಯೇಬಲ್’ ಗಳು - ಇವುಗಳ ಬಗ್ಗೆ ಕಲಿಯುವೆವು.
00:19 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Linux 12.04 ಆಪರೇಟಿಂಗ್ ಸಿಸ್ಟಂ
  • Perl 5.14.2 ಮತ್ತು
  • gedit ಟೆಕ್ಸ್ಟ್-ಎಡಿಟರ್ ಗಳನ್ನು ಬಳಸುತ್ತಿದ್ದೇನೆ.
00:32 ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
00:36 ನಿಮಗೆ ಪರ್ಲ್ (Perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರುವುದು ಅವಶ್ಯಕ.
00:40 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು spoken tutorial ವೆಬ್ಸೈಟ್ ಮೇಲೆ ನೋಡಿ.
00:47 ವೇರಿಯೇಬಲ್ ಗಳ ವ್ಯಾಪ್ತಿಯ (scope of variables) ಪರಿಚಯದೊಂದಿಗೆ ನಾವು ಆರಂಭಿಸೋಣ.
00:51 ವೇರಿಯೇಬಲ್ ಗಳ ಸ್ಕೋಪ್ (ವ್ಯಾಪ್ತಿ) ಎಂಬುದು ಕೋಡ್ ನ ಒಂದು ಭಾಗವಾಗಿದ್ದು, ಇದರಲ್ಲಿ ಮಾತ್ರ ಆ ವೇರಿಯೇಬಲ್ ಅನ್ನು ಆಕ್ಸೆಸ್ ಮಾಡಬಹುದು (ತಲುಪಬಹುದು).
00:58 ಇಲ್ಲಿ ವೇರಿಯೇಬಲ್ ಗಳು ಗೋಚರಿಸುತ್ತವೆ ಎಂದು ಸಹ ಹೇಳಬಹುದು.
01:03 ಮೊದಲು ನಾವು, ಪರ್ಲ್ ನಲ್ಲಿಯ ‘my, local’ ಮತ್ತು ‘our’ ಎಂಬ ಮಾಡಿಫೈಯರ್ ಗಳ (modifiers) ಬಗ್ಗೆ ಚರ್ಚಿಸೋಣ.
01:10 'my' ಎಂದರೆ 'Private’ (ಪ್ರೈವೇಟ್) ವೇರಿಯೇಬಲ್ ಗಳು,
01:13 'local' ಎಂದರೆ 'Dynamically scoped’ (ಡೈನಾಮಿಕಲೀ ಸ್ಕೋಪ್ಡ್) ವೇರಿಯೇಬಲ್ ಗಳು,
01:17 'our' ಎಂದರೆ ‘ಗ್ಲೋಬಲ್ ವೇರಿಯೇಬಲ್’ಗಳು.
01:20 'my' ಎಂಬ ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲ್ಪಟ್ಟ ವೇರಿಯೇಬಲ್’ಗಳು, ಅವುಗಳನ್ನು ಡಿಕ್ಲೇರ್ ಮಾಡಿದ ಬ್ಲಾಕ್ ನ ಹೊರಗೆ ತಮ್ಮ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತವೆ.
01:28 ನೀವು ವೇರಿಯೇಬಲ್ ಅನ್ನು, ಅದಕ್ಕೆ ಯಾವುದೇ ವ್ಯಾಲ್ಯೂಅನ್ನು ಕೊಡದೇ ಹೀಗೆ ಡಿಕ್ಲೇರ್ ಮಾಡಬಹುದು:

'my $fvalue semicolon '

01:37 ನೀವು ವೇರಿಯೇಬಲ್ ಗೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಿ, ಅದನ್ನು ಹೀಗೆ ಸಹ ಡಿಕ್ಲೇರ್ ಮಾಡಬಹುದು:
01:43 'my $fValue = 1 semicolon'
01:48 'my $fname = within double quotes Rahul semicolon'
01:55 ಒಂದೇ 'my' ಸ್ಟೇಟ್ಮೆಂಟ್ ನೊಂದಿಗೆ ಹಲವಾರು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಲು ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
02:02 'my ಓಪನ್ ಬ್ರಾಕೆಟ್ $fname ಕಾಮಾ $lname ಕಾಮಾ $age ಕ್ಲೋಸ್ ಬ್ರಾಕೆಟ್ ಸೆಮಿಕೋಲನ್’
02:12 ಉದಾಹರಣೆಗೆ ಒಂದು ಪ್ರೊಗ್ರಾಂಅನ್ನು ಬಳಸಿ, 'private' ವೇರಿಯೇಬಲ್ ಗಳನ್ನು ನಾವು ಅರ್ಥಮಾಡಿಕೊಳ್ಳೋಣ.
02:17 ನನ್ನ ಹತ್ತಿರ ಈಗಾಗಲೇ ಒಂದು ಸ್ಯಾಂಪಲ್ ಪ್ರೊಗ್ರಾಂ ಇದೆ. ನಾನು 'gedit' ಟೆಕ್ಸ್ಟ್-ಎಡಿಟರ್ ನಲ್ಲಿ ಇದನ್ನು ಓಪನ್ ಮಾಡುತ್ತೇನೆ.
02:24 ಟರ್ಮಿನಲ್ ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ:

'gedit scope hyphen my dot pl ampersand ' ಮತ್ತು 'Enter' ಅನ್ನು ಒತ್ತಿ.

02:34 ಈಗ, 'gedit' ನಲ್ಲಿ 'scope hyphen my dot pl' ಎಂಬ ಫೈಲ್ ಓಪನ್ ಆಗಿದೆ.
02:39 ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡನ್ನು ಟೈಪ್ ಮಾಡಿ. ಈಗ ನಾನು ಕೋಡನ್ನು ವಿವರಿಸುತ್ತೇನೆ.
02:46 ಇಲ್ಲಿ, ನಾನು 'my' ಕೀವರ್ಡ್ ನೊಂದಿಗೆ, '$fname' ಎಂಬ ಒಂದು 'private' ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇನೆ
02:52 ಮತ್ತು ಅದಕ್ಕೆ "Raghu" ಎಂಬ ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ.
02:56 ಈ ಬ್ಲಾಕ್ ನಲ್ಲಿ, 'ಪ್ರಿಂಟ್ ಸ್ಟೇಟ್ಮೆಂಟ್’, 'fname' ಎಂಬ ವೇರಿಯೇಬಲ್ ನಲ್ಲಿಯ ವ್ಯಾಲ್ಯೂಅನ್ನು, ಎಂದರೆ, "Raghu" ಎಂದು ಪ್ರಿಂಟ್ ಮಾಡುತ್ತದೆ.
03:04 ಮುಂದಿನ ಬ್ಲಾಕ್ ನಲ್ಲಿ, ನಾನು ಇದೇ '$fname' ಎಂಬ 'ಪ್ರೈವೇಟ್ ವೇರಿಯೇಬಲ್’ ಗೆ, "Other" ಎಂಬ ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ.
03:11 ಹೀಗಾಗಿ, ಈ 'ಪ್ರಿಂಟ್ ಸ್ಟೇಟ್ಮೆಂಟ್’, ಈ ಒಂದು ಬ್ಲಾಕ್ ನ ಒಳಗಡೆ "Other" ಎಂದು ಪ್ರಿಂಟ್ ಮಾಡುತ್ತದೆ.
03:17 ಈ ಪ್ರೊಗ್ರಾಂನಲ್ಲಿ, ಕೊನೆಯ 'ಪ್ರಿಂಟ್ ಸ್ಟೇಟ್ಮೆಂಟ್’, ಯಾವ ಔಟ್ಪುಟ್ ಅನ್ನೂ ಪ್ರಿಂಟ್ ಮಾಡುವುದಿಲ್ಲ.
03:23 ಏಕೆಂದರೆ, ಮೊದಲು ಡಿಫೈನ್ ಮಾಡಿದ ಬ್ಲಾಕ್ ಗಳ ಸ್ಕೋಪ್ ನ ಹೊರಗೆ, 'fname ', ಅಸೈನ್ ಮಾಡಿದ ಯಾವ ವ್ಯಾಲ್ಯೂಅನ್ನು ಹೊಂದಿರುವುದಿಲ್ಲ.
03:32 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
03:37 ನಾವು ಈಗ ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
03:40 ಮತ್ತೆ ಟರ್ಮಿನಲ್ ಗೆ ಬದಲಾಯಿಸಿ, ಹೀಗೆ ಟೈಪ್ ಮಾಡಿ:

'perl scope hyphen my dot pl' ಮತ್ತು 'Enter' ಅನ್ನು ಒತ್ತಿ.

03:49 ಔಟ್ಪುಟ್ ಹೀಗೆ ಕಾಣುತ್ತದೆ:

Block 1: Raghu

Block 2: Other

Outside Block: ಇಲ್ಲಿ ಯಾವ ಔಟ್ಪುಟ್ ಇಲ್ಲ.

03:59 ಹೀಗೆ, 'my' ವೇರಿಯೇಬಲ್ ನ ಸ್ಕೋಪ್ ಅನ್ನು, ಕೋಡ್ ನ ಒಂದು ನಿರ್ದಿಷ್ಟ ಬ್ಲಾಕ್ ನ ಒಳಗಡೆ ಮಾತ್ರ ಆಕ್ಸೆಸ್ ಮಾಡಲಾಗುತ್ತದೆ.
04:06 ಈಗ, ಈ ಪ್ರೊಗ್ರಾಮನ್ನು ಸ್ವಲ್ಪ ಬದಲಾಯಿಸೋಣ.
04:10 ಬ್ಲಾಕ್ ಗಳ ಹೊರಗೆ, ಕೊನೆಯ ಪ್ರಿಂಟ್ ಸ್ಟೇಟ್ಮೆಂಟ್ ನ ಮೊದಲು, ನಾವು ಹೀಗೆ ಸೇರಿಸೋಣ:

'my $fname = within double quotes John semicolon'. ಬದಲಾವಣೆಗಳನ್ನು ಸೇವ್ ಮಾಡಿ.

04:23 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹಿಂದೆ ಮಾಡಿದಂತೆ ಎಕ್ಸೀಕ್ಯೂಟ್ ಮಾಡಿ.
04:28 ಇಲ್ಲಿ ತೋರಿಸಲಾದ ಔಟ್ಪುಟ್ ಅನ್ನು ವಿಶ್ಲೇಷಿಸಿ.
04:32 ಬ್ಲಾಕ್ ನ ಒಳಗೆ ಮತ್ತು ಹೊರಗೆ, 'my' ವೇರಿಯೇಬಲ್ ಅನ್ನು ಬಳಸುವ ವ್ಯಾಪ್ತಿಯನ್ನು (scope) ನಿಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಭಾವಿಸುತ್ತೇನೆ.
04:41 ಇನ್ನುಮುಂದೆ, ನಾವು ಪರ್ಲ್ ನಲ್ಲಿ ‘ಡೈನಾಮಿಕಲೀ ಸ್ಕೋಪ್ಡ್ ವೇರಿಯೇಬಲ್’ (dynamically scoped variable) ಎಂಬುದರ ಬಗ್ಗೆ ನೋಡೋಣ.
04:47 'Local' ಎಂಬ ಕೀವರ್ಡ್, ‘ಗ್ಲೋಬಲ್ ವೇರಿಯೇಬಲ್’ ಗೆ ತಾತ್ಕಾಲಿಕ ಸ್ಕೋಪನ್ನು ಕೊಡುತ್ತದೆ.
04:52 ಮೂಲ (original) ಬ್ಲಾಕ್ ನಿಂದ ಕಾಲ್ ಮಾಡಲ್ಪಟ್ಟ ಯಾವುದೇ ಫಂಕ್ಷನ್ ಗೆ, ಈ ವೇರಿಯೇಬಲ್, ಗೋಚರಿಸುತ್ತದೆ.
04:58 ಲೋಕಲ್ ವೇರಿಯೇಬಲ್ ಅನ್ನು ನೀವು ಹೀಗೆ ಡಿಕ್ಲೇರ್ ಮಾಡಬಹುದು:

‘local $fValue = 100 ಸೆಮಿಕೋಲನ್’ ‘local $fname = within double quotes “Rakesh” ಸೆಮಿಕೋಲನ್’

05:13 ಒಂದು ಸ್ಯಾಂಪಲ್ ಪ್ರೊಗ್ರಾಮನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ.
05:17 ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:

'gedit scope hyphen local dot pl ampersand' ಮತ್ತು 'Enter' ಅನ್ನು ಒತ್ತಿ.

05:27 ಇದು, 'gedit' ನಲ್ಲಿ 'scope hyphen local dot pl' ಎಂಬ ಫೈಲನ್ನು ಓಪನ್ ಮಾಡುತ್ತದೆ.
05:33 ಈ ಕೆಳಗಿನ ಕೋಡನ್ನು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. ಈಗ ನಾನು ಕೋಡನ್ನು ವಿವರಿಸುತ್ತೇನೆ.
05:40 ಇಲ್ಲಿ, ನಾವು ಮೊದಲನೆಯ ಪಂಕ್ತಿಯಲ್ಲಿ, '$fname ' ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿ ಅದನ್ನು ಇನಿಶಿಯಲೈಸ್ ಮಾಡಿದ್ದೇವೆ.
05:47 'Welcome()' ಎಂಬ ಫಂಕ್ಷನ್ ನ ಒಳಗೆ, ನಾವು ಇದೇ '$fname ' ಎಂಬ ಹೆಸರಿನ ಒಂದು ಲೋಕಲ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
05:54 ವೇರಿಯೇಬಲ್ ನ ಹೆಸರಿನ ಮೊದಲು ಇರುವ 'local' ಎಂಬ ಕೀವರ್ಡ್ ಅನ್ನು ಗಮನಿಸಿ
05:59 ಮತ್ತು ಈ ವೇರಿಯೇಬಲ್ ಗೆ ನಾವು "Rakesh" ಎಂಬ ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇವೆ.
06:03 ಹೀಗಾಗಿ, ಮೂಲತಃ 'Welcome()’ ಫಂಕ್ಷನ್ ನ ಒಳಗೆ, ‘$fname' ಅನ್ನು ಒಂದು ಹೊಸ, ತಾತ್ಕಾಲಿಕ ‘ಲೋಕಲ್ ವೇರಿಯೇಬಲ್’ ಅನ್ನಾಗಿ ಬದಲಾಯಿಸಲಾಗಿದೆ.

ನಂತರ, ಫಂಕ್ಷನ್ 'Hello()' ಅನ್ನು ಕಾಲ್ ಮಾಡಲಾಗಿದೆ.

06:15 ಇಲ್ಲಿ, 'Hello()' ಎಂಬ ಫಂಕ್ಷನ್ ನ ವ್ಯಾಖ್ಯಾನವಿದೆ (definition).
06:18 ಪ್ರೊಗ್ರಾಂನ ಕೊನೆಗೆ, ನಾವು 'Welcome()' ಮತ್ತು 'Hello()' ಈ ಎರಡೂ ಫಂಕ್ಷನ್ ಗಳನ್ನು ಕಾಲ್ ಮಾಡುತ್ತಿದ್ದೇವೆ.
06:25 ಈಗ, ಪ್ರೊಗ್ರಾಮ್ ಅನ್ನು ಸೇವ್ ಮಾಡಲು 'Ctrl + S' ಅನ್ನು ಒತ್ತಿ.
06:29 ನಾವು ಪ್ರೊಗ್ರಾಮ್ ಅನ್ನು ಎಕ್ಸೀಕ್ಯೂಟ್ ಮಾಡೋಣ.
06:31 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:

'perl scope hyphen local.pl' ಮತ್ತು 'Enter' ಅನ್ನು ಒತ್ತಿ.

06:41 ಔಟ್ಪುಟ್ ಅನ್ನು ಹೀಗೆ ತೋರಿಸಲಾಗಿದೆ:

"Hello, Rakesh"! "Hello, Welcome to Spoken tutorials!"

06:48 ನಾವು ಔಟ್ಪುಟ್ ಅನ್ನು ಅರ್ಥಮಾಡಿಕೊಳ್ಳೋಣ.
06:51 'Welcome()' ಎಂಬ ಫಂಕ್ಷನ್ ಅನ್ನು ಕಾಲ್ ಮಾಡಿದಾಗ, ಅದರ ಒಳಗಿರುವ 'Hello()' ಎಂಬ ಫಂಕ್ಷನ್, ಲೋಕಲ್ ವೇರಿಯೇಬಲ್ ಅನ್ನು ಆಕ್ಸೆಸ್ ಮಾಡುತ್ತದೆ.
06:59 'Welcome()’ ನ ಒಳಗೆ, ‘$fname', "Rakesh" ಎಂಬ ವ್ಯಾಲ್ಯೂಅನ್ನು ಹೊಂದಿದೆ.
07:04 ಇದಾದ ನಂತರ, 'Hello()' ಎಂಬ ಫಂಕ್ಷನ್, '$fname' ವೇರಿಯೇಬಲ್ ಅನ್ನು ಇನ್ನೊಮ್ಮೆ ಆಕ್ಸೆಸ್ ಮಾಡುತ್ತದೆ.
07:11 ಆದರೆ ಈ ಬಾರಿ, ಈ '$fname' ಎಂಬ ವೇರಿಯೇಬಲ್ ಅನ್ನು, "Welcome to spoken tutorials" ಎಂದು ಇನಿಶಿಯಲೈಸ್ ಮಾಡಲಾಗಿತ್ತು.
07:19 ಇದು, '$fname ' ಎಂಬ ಲೋಕಲ್ ವೇರಿಯೇಬಲ್ ಅನ್ನು 'Welcome()' ಫಂಕ್ಷನ್ ನ ಒಳಗೆ ಆಕ್ಸೆಸ್ ಮಾಡುತ್ತಿಲ್ಲ.
07:25 ಎಂದರೆ, 'Welcome()' ಬ್ಲಾಕ್ ಅನ್ನು ಬಿಟ್ಟ ನಂತರ, ಲೋಕಲ್ ವೇರಿಯೇಬಲ್, ಸ್ಕೋಪನ್ನು ಮರಳಿ ಸ್ಥಾಪಿಸುತ್ತದೆ.
07:32 ಇನ್ನುಮುಂದೆ, ನಾವು ಪರ್ಲ್ ನಲ್ಲಿ ‘ಗ್ಲೋಬಲ್ ವೇರಿಯೇಬಲ್’ ಗಳನ್ನು ನೋಡುವೆವು.
07:38 ಪ್ರೊಗ್ರಾಂನಲ್ಲಿ, ‘ಗ್ಲೋಬಲ್ ವೇರಿಯೇಬಲ್’ಅನ್ನು ಎಲ್ಲಿಯಾದರೂ ಆಕ್ಸೆಸ್ ಮಾಡಬಹುದು.
07:43 ‘ಗ್ಲೋಬಲ್ ವೇರಿಯೇಬಲ್’ಗಳನ್ನು 'our' ಎಂಬ ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲಾಗುವುದು.
07:47 ಇಲ್ಲಿ ಕೆಲವು ಉದಾಹರಣೆಗಳಿವೆ.

'our $fvalue = 100 semicolon </nowiki>' 'our $fname =within double quotes Priya semicolon'

08:01 ಈಗ, ನಾವು ‘ಗ್ಲೋಬಲ್ ವೇರಿಯೇಬಲ್’ಗಳ ಒಂದು ಉದಾಹರಣೆಯನ್ನು ನೋಡೋಣ.
08:06 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:

'gedit scope hyphen our dot pl ampersand' ಮತ್ತು 'Enter' ಅನ್ನು ಒತ್ತಿ.

08:16 ಇದು, 'gedit' ನಲ್ಲಿ 'scope hyphen our.pl' ಎಂಬ ಫೈಲನ್ನು ಓಪನ್ ಮಾಡುವುದು.
08:22 ನಾನು ಬರೆದಿರುವ ಸ್ಯಾಂಪಲ್ ಪ್ರೊಗ್ರಾಮನ್ನು ವಿವರಿಸುತ್ತೇನೆ.
08:27 'package main' ಮತ್ತು 'our $i ' ಎಂಬ ಗ್ಲೋಬಲ್ ವೇರಿಯೇಬಲ್ ಅನ್ನು ನಾನು ಡಿಕ್ಲೇರ್ ಮಾಡಿದ್ದೇನೆ ಹಾಗೂ ಅದನ್ನು '100' ಎಂದು ಇನಿಶಿಯಲೈಸ್ ಮಾಡಿದ್ದೇನೆ.
08:37 'package First' ಎಂಬ ಡಿಕ್ಲೆರೇಶನ್ ಅನ್ನು ಗಮನಿಸಿ.
08:40 'package' ಎಂಬುದು, ತನ್ನದೇ ಆದ 'ನೇಮ್ ಸ್ಪೇಸ್' ಅನ್ನು ಹೊಂದಿರುವ ಕೋಡ್ ನ ಸಂಗ್ರಹವಾಗಿದೆ.
08:46 'ನೇಮ್-ಸ್ಪೇಸ್' ಎಂಬುದು, 'ಪ್ಯಾಕೇಜ್' ಗಳ ನಡುವಿನ 'ವೇರಿಯೇಬಲ್ ನೇಮ್ ಕೊಲೀಜನ್ಸ್'ಅನ್ನು (ವೇರಿಯೇಬಲ್ ಗಳ ಹೆಸರಿನ ಘರ್ಷಣೆ) ತಡೆಗಟ್ಟುತ್ತದೆ.
08:51 ನಾವು 'ಪ್ಯಾಕೇಜ್' ಮತ್ತು 'ನೇಮ್-ಸ್ಪೇಸ್'ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಇನ್ನೂ ಹೆಚ್ಚು ತಿಳಿಯುವೆವು.
08:56 'package First' ನ ಒಳಗೆ, "i" ಎಂಬ ಗ್ಲೋಬಲ್ ವೇರಿಯೇಬಲ್, ವ್ಯಾಲ್ಯೂ 10 ಅನ್ನು ಪಡೆದಿರುತ್ತದೆ.
09:02 'package Second'ನಲ್ಲಿ, "i" ಎಂಬ ಗ್ಲೋಬಲ್ ವೇರಿಯೇಬಲ್ ಗೆ ವ್ಯಾಲ್ಯೂ 20 ಅನ್ನು ಅಸೈನ್ ಮಾಡಲಾಗಿದೆ.
09:08 'main package' (ಮೇನ್ ಪ್ಯಾಕೇಜ್), 'package First’ ವೇರಿಯೇಬಲ್ ಮತ್ತು 'package Second’ ವೇರಿಯೇಬಲ್ ಎರಡನ್ನೂ ಬಳಸುತ್ತದೆ.
09:15 ನನ್ನ ಪ್ರೊಗ್ರಾಂನಲ್ಲಿ, ಎಲ್ಲ ಪ್ಯಾಕೇಜ್ ಗಳಲ್ಲಿ ನಾನು ಅದೇ ವೇರಿಯೇಬಲ್ "i" ಯನ್ನು ಡಿಕ್ಲೇರ್ ಮಾಡಿದ್ದೇನೆ.
09:21 ‘ಪ್ಯಾಕೇಜ್ ವೇರಿಯೇಬಲ್’, ಹೀಗೆ ಸೂಚಿಸಲ್ಪಡುತ್ತದೆ:

'package name colon colon variable name'.

09:29 ನಮ್ಮ ಉದಾಹರಣೆಯಲ್ಲಿ, ಇದು ಹೀಗಿದೆ:

'$First colon colon i, $Second colon colon i'.

09:39 ಒಂದೇ ಫೈಲ್ ನಲ್ಲಿ ನಾವು ಅನೇಕ ಪ್ಯಾಕೇಜ್ ಗಳನ್ನು ಹೊಂದಿದ್ದೇವೆ ಮತ್ತು ಗ್ಲೋಬಲ್ ವೇರಿಯೇಬಲ್ ಅನ್ನು ಎಲ್ಲ ಪ್ಯಾಕೇಜ್ ಗಳಿಂದ ಆಕ್ಸೆಸ್ ಮಾಡಲಾಗುತ್ತದೆ.
09:47 ಈಗ, ಫೈಲನ್ನು ಸೇವ್ ಮಾಡಿ ಮತ್ತು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡಿ.
09:51 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:

'perl scope hyphen our dot pl' ಮತ್ತು 'Enter' ಅನ್ನು ಒತ್ತಿ.

09:59 ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ.
10:03 'ವೇರಿಯೇಬಲ್ i ' ಗೆ ಹೇಗೆ ಅಸೈನ್ ಮಾಡಲಾಗಿದೆ ಎಂಬುದನ್ನು ತಿಳಿಯಲು, ಔಟ್ಪುಟ್ ಅನ್ನು ನಿಮ್ಮಷ್ಟಕ್ಕೆ ನೀವೇ ವಿಶ್ಲೇಷಿಸಿ.
10:11 ಈಗ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
10:16 ಈ ಟ್ಯುಟೋರಿಯಲ್ ನಲ್ಲಿ,
  • ವೇರಿಯೇಬಲ್ ಗಳ ಸ್ಕೋಪ್
  • 'ಪ್ರೈವೇಟ್ ವೇರಿಯೇಬಲ್’ ಗಳನ್ನು ಡಿಕ್ಲೇರ್ ಮಾಡುವುದು
  • ' ಡೈನಾಮಿಕಲೀ ಸ್ಕೋಪ್ಡ್ ವೇರಿಯೇಬಲ್ಸ್' ಹಾಗೂ
  • 'ಗ್ಲೋಬಲ್ ವೇರಿಯೇಬಲ್'ಗಳನ್ನು ಉದಾಹರಣೆಗಳೊಂದಿಗೆ ನಾವು ಕಲಿತಿದ್ದೇವೆ.
10:29 ಕಂಪೈಲೇಶನ್ ಬೇಗನೆ ಆಗುವುದೆಂದು 'local' ನ ಬದಲಾಗಿ 'my' ಬಳಸುವುದಕ್ಕೆ ಆದ್ಯತೆಯನ್ನು ನೀಡಲಾಗಿದೆ.
10:35 ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ.
10:37 ಈ ಕೆಳಗಿನ ಅಸೈನ್ಮೆಂಟ್ ಗೆ ಕೋಡ್ ಅನ್ನು ಬರೆದು ಅದನ್ನು ಎಕ್ಸೀಕ್ಯೂಟ್ ಮಾಡಿ.
10:42 'FirstModule' ಎಂಬ ಒಂದು 'ಪ್ಯಾಕೇಜ್ 'ಅನ್ನು ಡಿಕ್ಲೇರ್ ಮಾಡಿ.
10:46 '$age' ಎಂಬ ಒಂದು ವೇರಿಯೇಬಲ್ ಅನ್ನು 'our' ಎಂದು ಡಿಕ್ಲೇರ್ ಮಾಡಿ ಮತ್ತು ಅದಕ್ಕೆ '42' ಎಂದು ವ್ಯಾಲ್ಯೂಅನ್ನು ಅಸೈನ್ ಮಾಡಿ.
10:52 'SecondModule' ಎಂಬ ಇನ್ನೊಂದು 'ಪ್ಯಾಕೇಜ್ 'ಅನ್ನು ಡಿಕ್ಲೇರ್ ಮಾಡಿ.
10:56 '$ageword' ಎಂಬ ವೇರಿಯೇಬಲ್ ಅನ್ನು 'our' ಎಂದು ಡಿಕ್ಲೇರ್ ಮಾಡಿ ಮತ್ತು ಡಬಲ್ ಕೋಟ್ಸ್ ನ ಒಳಗೆ "Forty-Two" ಎಂದು ವ್ಯಾಲ್ಯೂಅನ್ನು ಅಸೈನ್ ಮಾಡಿ.
11:05 ' First()' ಎಂಬ ಒಂದು ಸಬ್-ರುಟೀನ್ ಅನ್ನು ಡಿಕ್ಲೇರ್ ಮಾಡಿ.
11:08 ಕೆಳಗೆ ತೋರಿಸಿದಂತೆ, ಸಬ್-ರುಟೀನ್ ನ ಒಳಗೆ, 'local' ಹಾಗೂ 'my' ಕೀವರ್ಡ್ ಗಳೊಂದಿಗೆ ಎರಡು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿ:
11:16 'local $age = 52' ಸೆಮಿಕೋಲನ್
11:20 'my $ageword' = within double quotes 'Fifty-two’ ಸೆಮಿಕೋಲನ್
11:27 ಇನ್ನೊಂದು ಸಬ್-ರುಟೀನ್ ಅನ್ನು 'Result()' ಎಂದು ಕರೆಯಿರಿ.
11:31 ಈ ಫಂಕ್ಷನ್ ನ ಒಳಗೆ, '$age' ಮತ್ತು '$ageword' ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಿ.
11:37 ಈ ಸಬ್-ರುಟೀನ್ ಅನ್ನು end ಮಾಡಿ.
11:39 'Result()' ಎಂಬ ಸಬ್-ರುಟೀನ್ ಅನ್ನು ಡಿಕ್ಲೇರ್ ಮಾಡಿ.
11:42 '$age' (ಡಾಲರ್ ಏಜ್) ಮತ್ತು '$ageword' ಗಳ ವ್ಯಾಲ್ಯೂಗಳನ್ನು ಮತ್ತೊಮ್ಮೆ ಪ್ರಿಂಟ್ ಮಾಡಿ.
11:47 ಈ ಸಬ್-ರುಟೀನ್ ಅನ್ನು end ಮಾಡಿ.
11:49 'First()' ಎಂಬ ಫಂಕ್ಷನ್ ಅನ್ನು ಕಾಲ್ ಮಾಡಿ.
11:51 'Package First' ಮತ್ತು 'Package Second' ಗಳನ್ನು ಕೆಳಗಿನಂತೆ ಪ್ರಿಂಟ್ ಮಾಡಿ.
11:57 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:05 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

12:18 ಇದು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro.

12:31 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14