LibreOffice-Suite-Draw/C2/Fill-objects-with-color/Kannada

From Script | Spoken-Tutorial
Revision as of 21:38, 23 December 2015 by NHegde (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 LibreOffice Drawನಲ್ಲಿ Fill Objects with Color ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನೀವು:
00:09 * objects ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್-ಗಳನ್ನು ತುಂಬುವುದನ್ನು,
00:15 * ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು, ಮತ್ತು
00:17 * ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
00:20 ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ.
00:24 ನೀವು objectಗಳನ್ನು :
00:25 * ಬಣ್ಣಗಳಿಂದ,
00:26 * ಗ್ರೇಡಿಯೆಂಟ್-ಗಳಿಂದ,
00:29 * ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್-ಗಳಿಂದ,
00:32 * ಮತ್ತು ಚಿತ್ರಗಳಿಂದ ತುಂಬಬಹುದು.
00:33 ಇಲ್ಲಿ ನಾವು:
  • ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
  • LibreOffice Suite3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:42 ನಾವು 'WaterCycle' ಆಕೃತಿಯಲ್ಲಿ ಬಣ್ಣವನ್ನು ತುಂಬೋಣ.
00:46 ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬಬಹುದು.
00:54 ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ.
00:56 ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ, ಮತ್ತುArea ಕ್ಲಿಕ್ ಮಾಡಿ.
01:01 “Area” ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:05 Area ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತುFill ಆಯ್ಕೆಯ ಕೆಳಗೆ, Color ಅನ್ನು ಆರಿಸಿ.
01:13 ಸ್ಕ್ರಾಲ್ ಡೌನ್ ಮಾಡಿ ಮತ್ತು white ಮೇಲೆ ಕ್ಲಿಕ್ ಮಾಡಿ.
01:16 OK ಎಂದು ಕ್ಲಿಕ್ ಮಾಡಿ.
01:19 ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ.
01:24 Areaದ ಕೆಳಗೆ , Color ಮತ್ತು White ಮೇಲೆ ರೈಟ್ ಕ್ಲಿಕ್ ಮಾಡಿ.
01:30 ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ.
01:33 ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು(ಗುಂಪು ಮಾಡುವುದು).
01:38 ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು.
01:46 ಮೊದಲು ಅವುಗಳ ಒಂದು ಗುಂಪು ಮಾಡೋಣ.
01:48 Shift ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ.
01:54 context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಎಂದು ಕ್ಲಿಕ್ ಮಾಡಿ.
01:58 ಮೋಡಗಳು ಗುಂಪಿನಲ್ಲಿ ಸೇರಿದವು.
02:00 ಮತ್ತೆ, context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ಎಂದು ಕ್ಲಿಕ್ ಮಾಡಿ.
02:07 “Area” ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಕ್ಲಿಕ್ ಮಾಡಿ. Fill ಆಯ್ಕೆಯ ಕೆಳಗೆ, Color ಅನ್ನು ಆರಿಸಿ. ನಂತರ ಸ್ಕ್ರಾಲ್ ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
02:23 OK ಕ್ಲಿಕ್ ಮಾಡಿ.
02:25 ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ.
02:37 ಇದೇ ರೀತಿ ಈಗ, ನಾವು ಮತ್ತೆ ಆಯತವನ್ನು “brown 4”ಇಂದ ತುಂಬೋಣ.
02:48 ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ.
02:58 ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” ಬಣ್ಣ ತುಂಬೋಣ.
03:05 ಅವಕ್ಕೆ ಸಮಾನ formattingನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲವಾದರೆ, ಅವುಗಳನ್ನು ಒಂದು ಗುಂಪಾಗಿಸೋಣ.
03:12 ಅವಕ್ಕೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್ ಕ್ಲಿಕ್, Area, Area ಟ್ಯಾಬ್, Fill, color, turquoise 1
03:27 “water” objectನಲ್ಲಿ ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ.
03:35 ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ.
03:41 ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Line ಮೇಲೆ ಕ್ಲಿಕ್ ಮಾಡಿ.
03:48 “Line” ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:52 “Line” ಟ್ಯಾಬ್ ಕ್ಲಿಕ್ ಮಾಡಿ.
03:55 Line propertiesನಲ್ಲಿ, Style ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತುInvisible ಎಂದು ಆಯ್ಕೆ ಮಾಡಿ.
04:03 OK ಕ್ಲಿಕ್ ಮಾಡಿ.
04:05 water objectನ ಬಾಹ್ಯರೇಖೆ ಕಾಣಿಸದಂತಾಗುತ್ತದೆ.
04:09 ಈಗ, ನಾವು ಮರಗಳಿಗೆ ಬಣ್ಣ ತುಂಬೋಣ.
04:14 ಎಡ ಕೊನೆಯ ಮರವನ್ನು ಆಯ್ಕೆ ಮಾಡೋಣ.
04:16 context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Enter Group ಮೇಲೆ ಕ್ಲಿಕ್ ಮಾಡಿ
04:23 ಈಗ, ಮರವನ್ನು ಎಡಿಟ್ ಮಾಡೋಣ (ಸಂಪಾದಿಸೋಣ).
04:26 ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ.
04:30 context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು Area ಮೇಲೆ ಕ್ಲಿಕ್ ಮಾಡಿ.
04:36 Area ಡೈಲಾಗ್ ಬಾಕ್ಸ್ ನಲ್ಲಿ,
04:38 Area ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:40 Fill ಕೆಳಗೆ, Color ಅನ್ನು ಆಯ್ಕೆ ಮಾಡಿ.
04:44 ಸ್ಕ್ರಾಲ್ ಡೌನ್ ಮಾಡಿ ಮತ್ತು“Green 5” ಮೇಲೆ ಕ್ಲಿಕ್ ಮಾಡಿ.
04:47 OK ಕ್ಲಿಕ್ ಮಾಡಿ.
04:49 ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ.
04:57 ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ.
05:05 Y- ಆಕೃತಿಯ arrowವನ್ನು ಆಯ್ಕೆ ಮಾಡಿ, context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು Area ಮೇಲೆ ಕ್ಲಿಕ್ ಮಾಡಿ.
05:08 Area ಡೈಲಾಗ್ ಬಾಕ್ಸ್ ನಲ್ಲಿ (ಹಿಂದಿನ) ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ.
05:15 ಹೀಗಾಗಿ, ನಾವು Color ಆಯ್ಕೆ ಮಾಡೋಣ.
05:18 ಸ್ಕ್ರಾಲ್ ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ.
05:21 OK ಕ್ಲಿಕ್ ಮಾಡಿ.
05:23 ನಾವು ಮರಕ್ಕೆ ಬಣ್ಣ ತುಂಬಿದ್ದೇವೆ !
05:26 ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು Exit Group ಆಯ್ಕೆ ಮಾಡಿ.
05:31 ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು.
05:36 ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು copy-paste ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು.
05:44 ಇದು ಇನ್ನೂ ಸರಳವಾದ ರೀತಿ, ಅಲ್ಲವೇ?
05:49 ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ, ನೆರಳನ್ನು ಸೇರಿಸೋಣ.
05:55 ಅವುಗಳನ್ನು ಆರಿಸಲು, Drawing ಟೂಲ್ ಬಾರ್ ನಿಂದ Select ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
06:03 ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು context menuವಿಗಾಗಿ ರೈಟ್ ಕ್ಲಿಕ್ ಮಾಡಿ ಹಾಗೂ Area ವನ್ನು ಕ್ಲಿಕ್ ಮಾಡಿ.
06:10 “Area” ಡೈಲಾಗ್ ಬಾಕ್ಸ್ ನಲ್ಲಿ, Shadow ಟ್ಯಾಬ್ ಅನ್ನು ಕ್ಲಿಕ್ ಮಾಡಿ.
06:15 Propertiesನಲ್ಲಿ Use Shadow ಬಾಕ್ಸ್ ಅನ್ನು ಚೆಕ್ ಮಾಡಿ.
06:20 ಬೇರೆ fieldಗಳು ಈಗ ಕ್ರಿಯಾಶೀಲವಾಗುತ್ತವೆ.
06:24 Positionನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:29 “Position” – ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ(ವ್ಯಾಖ್ಯಾನಿಸುತ್ತದೆ).
06:33 Color ಫೀಲ್ಡ್ ನಲ್ಲಿ, Gray ಆಯ್ಕೆ ಮಾಡಿ.
06;36 OK ಕ್ಲಿಕ್ ಮಾಡಿ.
06:39 ಪ್ರತಿಯೊಂದು ಬಿಳಿ ಮೋಡದ ಹಿಂದೆ ಒಂದೊಂದು ನೆರಳು ಕಾಣಿಸಿಕೊಳ್ಳುತ್ತದೆ.
06:44 ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ.
06:48 ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Area ಆಯ್ಕೆ ಮಾಡಿ.
06:55 “Area” ಡೈಲಾಗ್ ಬಾಕ್ಸ್ ನಲ್ಲಿ, “Area” ಟ್ಯಾಬ್ ಆಯ್ಕೆ ಮಾಡಿ. Fill ನಲ್ಲಿ, Gradient ಕ್ಲಿಕ್ ಮಾಡಿ.
07:02 ಈಗ Gradient1 ಆಯ್ಕೆ ಮಾಡಿ.
07:04 OK ಕ್ಲಿಕ್ ಮಾಡಿ.
07:06 ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
07:11 . ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ಎಂದು ಕ್ಲಿಕ್ ಮಾಡಿ.
07:19 Area ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
07:23 Fill ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
07:27 Colors, Gradient, Hatching ಮತ್ತು Bitmap
07:32 ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್ ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ.
07:39 ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ.
07:43 Colors ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
07:46 Properties ನಲ್ಲಿ, ನಾವು Color ಡ್ರಾಪ್ ಡೌನ್ ನಿಂದ Red 3 ಯನ್ನು ಆಯ್ಕೆ ಮಾಡೋಣ.
07:53 ನಂತರ, RGB ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂವನ್ನು enter ಮಾಡಿ.
08:01 'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ.
08:08 ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು enter ಮಾಡೋಣ.
08:16 ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ.
08:22 'RGB' ಫೀಲ್ಡ್ ನ ಮೇಲಿನ preview ಬಾಕ್ಸ್ ಅನ್ನು ನೋಡಿ.
08:28 ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ.
08:31 Color ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
08:37 Name ಫೀಲ್ಡ್ ನಲ್ಲಿ, ಇದಕ್ಕೆ ನಾವೊಂದು ಹೆಸರನ್ನು ಟೈಪ್ ಮಾಡೋಣ.
08:41 “New red” ಎಂದು ಹೆಸರನ್ನು ಬರೆಯೋಣ.
08:44 Add ಬಟನ್ ನ ಮೇಲೆ ಕ್ಲಿಕ್ ಮಾಡಿ.
08:46 ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು.
08:49 OK ಕ್ಲಿಕ್ ಮಾಡಿ.
08:51 ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ!
08:54 Ctrl ಮತ್ತು Z ಅನ್ನು ಒತ್ತಿ, ಈ ಕಾರ್ಯವನ್ನು undo ಮಾಡೋಣ.
08:59 ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ.
09:03 Area ಡೈಲಾಗ್ ಬಾಕ್ಸ್ ನಲ್ಲಿರುವ ಟ್ಯಾಬ್ಸ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ gradients ಮತ್ತು hatching ಗಳನ್ನು ಕೂಡ ತಯಾರಿಸಬಹುದು.
09:10 Gradientಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
09:14 ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್(ವರ್ಣಛಾಯೆ).
09:18 Hatching ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್.
09:24 ಈಗ, ನಾವು Draw ಗೆ bitmapಅನ್ನು ಹೇಗೆ import ಮಾಡುವುದು ಎನ್ನುವುದನ್ನು ಕಲಿಯೋಣ.
09:28 Main ಮೆನುವಿನಿಂದ, Format ಅನ್ನು ಆರಿಸಿ ಮತ್ತು Area ಎಂದು ಕ್ಲಿಕ್ ಮಾಡಿ.
09:33 ಹಿಂದೆ ನೋಡಿದಂತೆ, Area ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, Bitmaps ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:39 Import ಬಟನ್ ನ ಮೇಲೆ ಕ್ಲಿಕ್ ಮಾಡಿ.
09:42 Import ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
09:45 ಬ್ರೌಸ್ ಮಾಡಿ(ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
09:48 Open ಬಟನ್ ನ ಮೇಲೆ ಕ್ಲಿಕ್ ಮಾಡಿ.
09:50 Draw , ನಿಮಗೆ Bitmapಗೆ ಒಂದು ಹೆಸರನ್ನು ಎಂಟರ್ ಮಾಡಲು ತಿಳಿಸುತ್ತದೆ.
09:55 ನಾವು “NewBitmap” ಎಂದು ಹೆಸರನ್ನು ಬರೆಯೋಣ.
09:58 OK ಕ್ಲಿಕ್ ಮಾಡಿ.
10:00 ಈಗ Bitmap ಡ್ರಾಪ್ ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
10:04 ಹೊರಬರಲು OK ಕ್ಲಿಕ್ ಮಾಡಿ.
10:07 ಮೋಡಗಳನ್ನು ಈಗ ಗಮನಿಸಿ.
10:10 Ctrl ಮತ್ತು Zಅನ್ನು ಒತ್ತಿ ಇದನ್ನು undo ಮಾಡೋಣ.
10:14 “water” objectಅನ್ನು ತುಂಬಲು ನಾವು bitmapಅನ್ನು ಉಪಯೋಗಿಸೋಣ.
10:19 ಈಗ ನಾವು ನೀರು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ.
10:22 ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ.
10:26 ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ಆಯ್ಕೆ ಮಾಡಿ.
10:31 “Area” ಡೈಲಾಗ್-ಬಾಕ್ಸ್ ನಲ್ಲಿ, Bitmaps ಟ್ಯಾಬ್ ಕ್ಲಿಕ್ ಮಾಡಿ.
10:36 ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರಾಲ್ ಡೌನ್ ಮಾಡಿ ಮತ್ತು Water ಅನ್ನು ಆಯ್ಕೆ ಮಾಡಿ.
10:41 OK ಕ್ಲಿಕ್ ಮಾಡಿ.
10:43 ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ!
10:46 ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ.
10:50 ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್ ಮ್ಯಾಪ್ ಗಳಿಂದ ತುಂಬಿ.
10:57 Transparency ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ.
11:02 ಈಗ್ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ!
11:06 ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ.
11:10 ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ.
11:15 context menu ಗಾಗಿ ರೈಟ್ ಕ್ಲಿಕ್ ಮಾಡಿ.
11:21 Page setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
11:25 Background ಟ್ಯಾಬ್ ಕ್ಲಿಕ್ ಮಾಡಿ ಮತ್ತು Fillನ ಕೆಳಗೆ, Color ಅನ್ನು ಆಯ್ಕೆ ಮಾಡಿ.
11:30 ನಾವು ಸ್ಕ್ರಾಲ್ ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ.
11:34 OK ಕ್ಲಿಕ್ ಮಾಡಿ.
11:36 ಹಿನ್ನೆಲೆ ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು Draw ನಿಮ್ಮನ್ನು ಪ್ರಶ್ನಿಸುತ್ತದೆ.
11:41 NO ಕ್ಲಿಕ್ ಮಾಡಿ.
11:44 ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ.
11:48 ನೀವು objectಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
11:52 ನಾವು ಪರ್ವತವನ್ನು ಆಯ್ಕೆ ಮಾಡೋಣ.
11:55 context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ಆಯ್ಕೆ ಮಾಡಿ.
11:59 Area ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಆಯ್ಕೆ ಮಾಡಿ.
12:04 Fill ನ ಕೆಳಗೆ, None ಅನ್ನು ಆಯ್ಕೆ ಮಾಡಿ.
12:06 OK ಕ್ಲಿಕ್ ಮಾಡಿ.
12:08 objectಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
12:15 ಈ ಕಾರ್ಯವನ್ನು undo ಮಾಡಲು, Ctrl+Z ಕೀಗಳನ್ನು ಒತ್ತಿ.
12:20 ಈ ಎಲ್ಲಾ ಆಯ್ಕೆಗಳನ್ನು ನೀವು Format ಮೆನುವಿನಿಂದ ಕೂಡ ಪಡೆಯಬಹುದು.
12:25 ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ Ctrl+S ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
12:34 ಪರ್ಯಾಯವಾಗಿ, Automatic Save ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ.
12:41 ಇಲ್ಲಿ ನಿಮಗೆ ಇನ್ನೊಂದು ಅಸೈನ್ ಮೆಂಟ್ ಇದೆ.
12:43 ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ.
12:45 ಪೇಜ್ ಗೆ ಒಂದು ಹಿನ್ನೆಲೆ(ಬಣ್ಣ) ಕೊಡಿ.
12:47 ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ.
12:50 ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
12:54 ಈ ಟ್ಯುಟೋರಿಯಲ್ ನಲ್ಲಿ, ನಾವು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು:
13:01 * objectsಗಳನ್ನು (ಬಣ್ಣದಿಂದ) ತುಂಬುವುದನ್ನು,
13:03 * ಹಿನ್ನೆಲೆಯ ತಯಾರಿಕೆಯನ್ನು ಮತ್ತು
13:05 * ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಎಂದು ಕಲಿತಿದ್ದೇವೆ.
13:07 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
13:10 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
13:13 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
13:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
13:20 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
13:23 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
13:27 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
13:33 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
13:38 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
13:45 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
13:56 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal