Introduction-to-Computers/C2/Printer-Connection/Kannada

From Script | Spoken-Tutorial
Revision as of 10:58, 14 December 2015 by Vasudeva ahitanal (Talk | contribs)

Jump to: navigation, search

Digital Divide - Printer Connection

Time Narration
ನಮಸ್ಕಾರ. Printer Connection ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ.
ಈ ಟ್ಯುಟೋರಿಯಲ್ ನಲ್ಲಿ ನಾವು, ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಜೋಡಿಸುವುದನ್ನು (connect) ಕಲಿಯುವೆವು.
ಈ ಟ್ಯುಟೋರಿಯಲ್ ಗಾಗಿ, ನಾನು
* Ubuntu Linux 12.10 OS ಮತ್ತು
* Cannon printer ಇವುಗಳನ್ನು ಬಳಸುತ್ತಿದ್ದೇನೆ.
ನಾನು ಸಂಕ್ಷಿಪ್ತವಾಗಿ ಕಂಪ್ಯೂಟರ್ ನ ವಿವಿಧ ಘಟಕಗಳನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇನೆ.
ಇದು CPU (ಸಿ-ಪಿ-ಯು),
ಮಾನಿಟರ್,
ಕೀಬೋರ್ಡ್,
ಮೌಸ್,
ಮತ್ತು ಪ್ರಿಂಟರ್.
ನಾವು CPU ನತ್ತ ನೋಡೋಣ.
ಬಹಳಷ್ಟು CPU ಗಳಲ್ಲಿ, ಕೆಲವು USB ಪೋರ್ಟ್ ಗಳು ಮುಂಭಾಗದಲ್ಲಿ
ಮತ್ತು ಕೆಲವು ಹಿಂಭಾಗದಲ್ಲಿ ಇರುತ್ತವೆ.
ಈಗ, ನಾವು ಪ್ರಿಂಟರ್ ನತ್ತ ನೋಡೋಣ.
ಸಾಮಾನ್ಯವಾಗಿ, ಪ್ರಿಂಟರ್ ನ ಮುಂಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಒಂದು ‘ಪವರ್ ಸ್ವಿಚ್’ ಇರುತ್ತದೆ.
ಮತ್ತು ಪ್ರಿಂಟರ್ ನ ಹಿಂಭಾಗದಲ್ಲಿ ಒಂದು ‘ಪವರ್ ಸ್ಲಾಟ್’ ಹಾಗೂ ಒಂದು USB ಪೋರ್ಟ್ ಇರುತ್ತವೆ.
ಒಂದು ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಕನೆಕ್ಟ್ ಮಾಡಲು, ನಾವು 'USB ಕೇಬಲ್' ಅನ್ನು ಉಪಯೋಗಿಸಬೇಕು.
ನಾವು 'USB ಕೇಬಲ್' ಅನ್ನು ‘ಪ್ರಿಂಟರ್’ಗೆ ಕನೆಕ್ಟ್ ಮಾಡೋಣ.
ಈಗ, ಕೇಬಲ್ ನ ಇನ್ನೊಂದು ಕೊನೆಯನ್ನು 'CPU' ನ 'USB ಪೋರ್ಟ್'ಗೆ ಸೇರಿಸೋಣ.
ಈಗ, ನಮ್ಮ ‘ಪ್ರಿಂಟರ್’, ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿದೆ.
‘ಪ್ರಿಂಟರ್’ನ ಮೇಲಿರುವ ‘ಪವರ್ ಬಟನ್’ಅನ್ನು ಸ್ವಿಚ್-ಆನ್ ಮಾಡಿ.
ಈಗ, ನಮ್ಮ ಕಂಪ್ಯೂಟರ್ ಅನ್ನು ಬಳಸಿ, ನಾವು ಪ್ರಿಂಟರ್ ಅನ್ನು ಕಾನ್ಫಿಗರ್ ಮಾಡೋಣ.
ನಾವು ಡೆಸ್ಕ್ಟಾಪ್ ಗೆ ಹೋಗೋಣ.
‘ಲಾಂಚರ್ ಬಾರ್’ನ ಮೇಲ್ಗಡೆ ಎಡಭಾಗದಲ್ಲಿ ಇರುವ 'Dash Home' (ಡ್ಯಾಶ್ ಹೋಮ್) ಐಕಾನ್ ಮೇಲೆ ಕ್ಲಿಕ್ ಮಾಡಿ.
‘ಸರ್ಚ್ ಬಾರ್’ನಲ್ಲಿ, “Printing” ಎಂದು ಟೈಪ್ ಮಾಡಿ.
ಪ್ರಿಂಟರ್ ಐಕಾನ್ ಕಾಣಿಸಿಕೊಳ್ಳುವುದು.
ಅದರ ಮೇಲೆ ಕ್ಲಿಕ್ ಮಾಡಿ.
Ubuntu ನ ಹಳೆಯ ಆವೃತ್ತಿಗಳಲ್ಲಿ, ಇವುಗಳ ಮೇಲೆ ಕ್ಲಿಕ್ ಮಾಡಿ-
'System' (ಸಿಸ್ಟಂ),
'Administration' (ಅಡ್ಮಿನಿಸ್ಟ್ರೇಶನ್),
ಮತ್ತು 'Printing' (ಪ್ರಿಂಟಿಂಗ್).
ಈಗ, 'Printing' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
ಇದು - 'There are no printers configured yet' ಎಂದು ಹೇಳುತ್ತದೆ.
ಮೇಲ್ಗಡೆ ಎಡಭಾಗದಲ್ಲಿ, ಹಸಿರು ಬಣ್ಣದ ‘Plus’ ಚಿಹ್ನೆಯನ್ನು ಹೊಂದಿದ 'Add' ಎಂಬ ಹೆಸರಿನ ಒಂದು ಬಟನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ.
ಇದು, ‘New Printer’ ಎಂಬ ಡೈಲಾಗ್-ಬಾಕ್ಸ್ ಅನ್ನು ಓಪನ್ ಮಾಡುವುದು.
ಎಡಭಾಗದಲ್ಲಿ, ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾದ ಪ್ರಿಂಟರ್ ಸಾಧನಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು.
ಇಲ್ಲಿ, ನಾವು ನಮ್ಮ ಪ್ರಿಂಟರ್ ಅನ್ನು, ಎಂದರೆ, 'Cannon Printer' ಅನ್ನು ಆಯ್ಕೆಮಾಡಿ ನಂತರ 'Forward'ನ ಮೇಲೆ ಕ್ಲಿಕ್ ಮಾಡೋಣ.
ಆಗ, ಅದು ತನ್ನಷ್ಟಕ್ಕೆ ತಾನೇ ‘ಡ್ರೈವರ್’ಗಳಿಗಾಗಿ ಹುಡುಕಲು ಆರಂಭಿಸುವುದು. ನಾನು 'Cancel' ನ ಮೇಲೆ ಕ್ಲಿಕ್ ಮಾಡುವೆನು.
ಈಗ, 'Choose Driver' ಎಂಬ ಡೈಲಾಗ್-ಬಾಕ್ಸ್ ಕಾಣಿಸುವುದು.
ಬಹಳಷ್ಟು ಸಂದರ್ಭಗಳಲ್ಲಿ 'Default' ಆಯ್ಕೆಯು ಕೆಲಸ ಮಾಡುವುದು.
ನನ್ನ ಹತ್ತಿರ 'Canon Printer' ಇರುವುದರಿಂದ, ಇಲ್ಲಿ ಈ ಲಿಸ್ಟ್ ನಲ್ಲಿ, ಇದು ಡೀಫಾಲ್ಟ್ ಆಗಿ ಆಯ್ಕೆಯಾಗಿದೆ.
ಈಗ 'Forward' ನ ಮೇಲೆ ಕ್ಲಿಕ್ ಮಾಡಿ.
'Model' ಪೇಜ್ ನಲ್ಲಿ, ನನ್ನ ಪ್ರಿಂಟರ್ ನ ಮಾಡೆಲ್ ತನ್ನಷ್ಟಕ್ಕೆ ತಾನೇ ಪತ್ತೆಯಾಗುವುದು.
ಇದನ್ನು ಬ್ರಾಕೆಟ್ಸ್ ನಲ್ಲಿ 'Recommended' ಎಂದು ತೋರಿಸಲಾಗಿದೆ.
ಅಲ್ಲದೇ, 'Drivers ' ವಿಭಾಗದಲ್ಲಿ, ಇದು ನನ್ನ ಪ್ರಿಂಟರ್ ಗೆ ಯೋಗ್ಯವಾದ ‘ಡ್ರೈವರ್’ಅನ್ನು ತೋರಿಸುತ್ತದೆ.
ಈಗ, 'Forward ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
ಈಗ, ನಮ್ಮ ಪ್ರಿಂಟರ್ ಅನ್ನು ವಿವರಿಸಲು ನಮಗೆ ಸೂಚಿಸಲಾಗಿದೆ - 'printer name' ಮತ್ತು ಅದರ 'location'.
ನಾನು ಇದನ್ನು 'Default' ಗೆ ಇಟ್ಟು 'Apply' ದ ಮೇಲೆ ಕ್ಲಿಕ್ ಮಾಡುವೆನು.
ನಮ್ಮ ಪ್ರಿಂಟರ್, ಯಶಸ್ವಿಯಾಗಿ ನಮ್ಮ ಕಂಪ್ಯೂಟರ್ ಗೆ ಸೇರಿಸಲ್ಪಟ್ಟಿದೆ.
“Would you like to print a test page? ” ಎಂಬ ಒಂದು ಮೆಸೇಜ್ (ಸಂದೇಶ) ಕಾಣಿಸಿಕೊಳ್ಳುತ್ತದೆ.
'Print Test Page ' ಎಂಬ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ.
ಈ ಕೆಳಗಿನ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು:
“Submitted – Test Page submitted as job ...” ಮತ್ತು ಅದರ ನಂಬರ್.
'OK' ಯ ಮೇಲೆ ಕ್ಲಿಕ್ ಮಾಡಿ.
'Printer Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'OK' ಯ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
ಇದು, ನಮ್ಮ ಪ್ರಿಂಟರ್ ನಿಂದ ನಮ್ಮ ಟೆಸ್ಟ್ ಪ್ರಿಂಟ್ ಆಗಿದೆ.
ನಮ್ಮ ಪ್ರಿಂಟರ್, ಈಗ ಡಾಕ್ಯೂಮೆಂಟ್ ಗಳನ್ನು ಪ್ರಿಂಟ್ ಮಾಡಲು ಸಿದ್ಧವಾಗಿದೆ.
ನಾವು 'Printer' ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
ನಾನೀಗ ಡಾಕ್ಯೂಮೆಂಟ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ತೋರಿಸುತ್ತೇನೆ.
ನಾವು ಒಂದು ಡಾಕ್ಯೂಮೆಂಟ್ ಅನ್ನು ಓಪನ್ ಮಾಡೋಣ.
ಆಮೇಲೆ, 'Ctrl' ಮತ್ತು 'P' ಕೀಗಳನ್ನು ಒಟ್ಟಿಗೇ ಒತ್ತಿ.
'Print ' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
ಕನೆಕ್ಟ್ ಮಾಡಲಾದ ಪ್ರಿಂಟರ್, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ ಎಂಬುದನ್ನು ಗಮನಿಸಿ.
ಈ ಡೈಲಾಗ್-ಬಾಕ್ಸ್ ನಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ.
'Range', ಪ್ರಿಂಟ್ ಮಾಡಬೇಕಾಗಿರುವ ಪುಟಗಳ ಶ್ರೇಣಿಯನ್ನು (range) ಆಯ್ಕೆಮಾಡಲು ನಮಗೆ ಅನುಮತಿಸುತ್ತದೆ.
'Range' ನ ಅಡಿಯಲ್ಲಿ ಕೆಲವು ಆಯ್ಕೆಗಳು ಲಭ್ಯವಾಗಿರುತ್ತವೆ:
* 'All pages' ಎಂಬ ಆಯ್ಕೆಯು, ಡಾಕ್ಯೂಮೆಂಟ್ ನಲ್ಲಿಯ ಎಲ್ಲ ಪುಟಗಳನ್ನು ಪ್ರಿಂಟ್ ಮಾಡುತ್ತದೆ.
* 'Current page' ಎಂಬ ಆಯ್ಕೆಯು, ಈಗ ಆಯ್ಕೆ ಮಾಡಿದ ಪುಟವನ್ನು ಮಾತ್ರ ಪ್ರಿಂಟ್ ಮಾಡುತ್ತದೆ.
* 'Pages' ಎಂಬ ಆಯ್ಕೆಯು, ನಮ್ಮ ಸೂಚನೆಯಂತೆ ಪುಟಗಳನ್ನು ಪ್ರಿಂಟ್ ಮಾಡುತ್ತದೆ.

ಉದಾಹರಣೆಗೆ, 3-4.

ನಂತರ, 'Copies'ನ ಅಡಿಯಲ್ಲಿ ಲಭ್ಯವಿರುವ ಆಯ್ಕೆಗಳನ್ನು ನೋಡೋಣ.
'Copies' ಎಂಬ ಆಯ್ಕೆಯಲ್ಲಿ, ನಮಗೆ ಪ್ರಿಂಟ್ ಮಾಡಬೇಕಾಗಿರುವ ಪ್ರತಿಗಳ ಸಂಖ್ಯೆಯನ್ನು ನಾವು ಆರಿಸಿಕೊಳ್ಳುತ್ತೇವೆ.
ಒಂದುವೇಳೆ, 'Copies' ಅನ್ನು ನಾವು '2' ಕ್ಕೆ ಬದಲಾಯಿಸಿದರೆ, ಆಗ ಆಯ್ಕೆಯಾದ ಪುಟಗಳ '2' ಪ್ರತಿಗಳು ಪ್ರಿಂಟ್ ಆಗುತ್ತವೆ.
ಈಗ, 'Print' ಬಟನ್ ನ ಮೇಲೆ ಕ್ಲಿಕ್ ಮಾಡಿ.
ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಡಾಕ್ಯೂಮೆಂಟ್ ಪ್ರಿಂಟ್ ಆಗಲು ಆರಂಭಿಸುವುದು.
ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ . ಈ ಟ್ಯುಟೋರಿಯಲ್ ನಲ್ಲಿ,
* ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಹೇಗೆ ಜೋಡಿಸುವುದು
* ‘ಪ್ರಿಂಟರ್’ನ ‘ಸೆಟ್ಟಿಂಗ್’ಗಳನ್ನು ಕಾನ್ಫಿಗರ್ ಮಾಡುವುದು ಮತ್ತು
* ‘ಡಾಕ್ಯೂಮೆಂಟ್’ಅನ್ನು ಪ್ರಿಂಟ್ ಮಾಡುವುದು, ಇವುಗಳನ್ನು ನಾವು ಕಲಿತಿದ್ದೇವೆ,
ಮತ್ತು ಲಭ್ಯವಿರುವ ವಿವಿಧ ‘ಪ್ರಿಂಟ್’ ಆಯ್ಕೆಗಳನ್ನು ಸಹ ನಾವು ಕಲಿತಿದ್ದೇವೆ.
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿತ್ತು ಎಂದು ನಾವು ಆಶಿಸುತ್ತೇವೆ.
ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
  • ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org

"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.

ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro.

ವಂದನೆಗಳು.
ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ.
IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .

Contributors and Content Editors

Pratik kamble, Sandhya.np14, Vasudeva ahitanal