Inkscape/C3/Create-an-A4-Poster/Kannada
From Script | Spoken-Tutorial
Revision as of 11:16, 29 November 2015 by NaveenBhat (Talk | contribs)
Time | Narration |
00.01 | Inkscape ನಲ್ಲಿ “Create an A4 Poster” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00.07 | ಈ ಟ್ಯುಟೋರಿಯಲ್ ನಲ್ಲಿ ನಾವು |
00.10 | * Document properties ಅನ್ನು ಬದಲಾಯಿಸುವುದು, |
00.12 | * A4 poster ಅನ್ನು ವಿನ್ಯಾಸ ಮಾಡುವುದು ಮತ್ತು |
00.14 | * ಪೋಸ್ಟರ್ ಅನ್ನು 'pdf' ನಲ್ಲಿ Save ಮಾಡುವುದು- ಇವುಗಳ ಕುರಿತು ಕಲಿಯುತ್ತೇವೆ. |
00.17 | ಈ ಟ್ಯುಟೋರಿಯಲ್ ಗಾಗಿ ನಾನು |
00.19 | * Ubuntu Linux 12.04 ಆಪರೇಟಿಂಗ್ ಸಿಸ್ಟಮ್ |
00.22 | * Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ |
00.26 | Inkscape ಅನ್ನು ತೆರೆಯಿರಿ. |
00.28 | File ಮೆನ್ಯುಗೆ ಹೋಗಿNew ಮೇಲೆ ಕ್ಲಿಕ್ ಮಾಡಿ. |
00.32 | ಇವುಗಳು ಡಿಫಾಲ್ಟ್ ಆದ ಕ್ಯಾನ್ವಾಸ್ ಗಳ ಅಳತೆ. |
00.37 | ನನ್ನ canvas ನ ಅಳತೆಯು ಡಿಫಾಲ್ಟ್ ಆಗಿ A4 size ನಲ್ಲಿದೆ.. |
00.41 | ಹಾಗಾಗಿ ನಾನು ಅದನ್ನು ಹಾಗೆಯೇ ಬಿಡುತ್ತೇನೆ. |
00.44 | ನಿಮ್ಮ ಮಶಿನ್ ನಲ್ಲಿ ಆ ರೀತಿ ಇರದಿದ್ದರೆ A4 size ಅನ್ನು ಆಯ್ಕೆ ಮಾಡಿಕೊಳ್ಳಿ. |
00.49 | ಕೆಲವು ಸೆಟ್ಟಿಂಗ್ ಗಳನ್ನು ಬದಲಾಯಿಸೋಣ. |
00.51 | File ಗೆ ಹೋಗಿ Document properties ಮೇಲೆ ಕ್ಲಿಕ್ ಮಾಡಿ. |
00.54 | ಹಲವಾರು ಟ್ಯಾಬ್ ಗಳು ಮತ್ತು ಆಯ್ಕೆಗಳನ್ನು ಹೊಂದಿರುವ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
00.59 | ಅವುಗಳ ಕುರಿತು ಒಂದೊಂದಾಗಿ ಕಲಿಯೋಣ. |
1.03 | ಮೊದಲ ಟ್ಯಾಬ್ Page ನಲ್ಲಿ Default units ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. |
1.08 | ನಾನು ಒಂದೊಂದನ್ನು ಕ್ಲಿಕ್ ಮಾಡಿದಾಗಲೂ ruler ನ ಮಾಪಕಗಳ ಬದಲಾವಣೆಯನ್ನು ಗಮನಿಸಿ. |
1.13 | ನಾನು ಅವುಗಳಲ್ಲಿ pixels ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. |
1.16 | Background ಆಯ್ಕೆಯು ಬ್ಯಾಕ್ ಗ್ರೌಂಡ್ ನ ಬಣ್ಣ ಮತ್ತು ಪಾರದರ್ಶಕತೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. |
1.21 | ನಾವು ಅದನ್ನು ಕ್ಲಿಕ್ ಮಾಡಿದಾಗ ಹೊಸ dialog box ಗೋಚರಿಸುತ್ತದೆ. |
1.24 | RGB sliderಅನ್ನು ಎಡಕ್ಕೂ ಬಲಕ್ಕೂ ಸರಿಸಿ. |
1.29 | ಕ್ಯಾನ್ವಾಸ್ ನ ಮೇಲೆ background colour ಕಾಣುವಂತೆ ಮಾಡಲು alpha slider ಅನ್ನು ಬಲಕ್ಕೆ ಸರಿಸಿ. |
1.35 | ಈಗ ಪಾರದರ್ಶಕತೆಯು ಆಯ್ಕೆಮಾಡಿದ 'RGB' ಬೆಲೆಗೆ ಬದಲಾಗುತ್ತದೆ. |
1.40 | Document properties ವಿಂಡೋ ದ ಬ್ಯಾಕ್ ಗ್ರೌಂಡ್ ಆಯ್ಕೆಯಲ್ಲಿ ಬಣ್ಣವು ನಾನು ಸರಿಸಿದಂತೆ ಬದಲಾಗುವುದನ್ನು ಗಮನಿಸಿ. |
1.47 | Alpha ಸ್ಲೈಡರ್ ಅನ್ನು ಪೂರ್ತಿ ಎಡಕ್ಕೆ ಎಳೆದು ಡೈಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
1.52 | Page size ನ ಅಡಿಯಲ್ಲಿ ನಾವು ಬಹಳ ಆಯ್ಕೆಗಳನ್ನು ನೋಡುತ್ತೇವೆ. |
1.55 | ನಾವು ಕ್ಯಾನ್ವಾಸ್ ನ ಅಳತೆಯನ್ನು ಈ ಆಯ್ಕೆಯನ್ನು ಉಪಯೋಗಿಸಿ ಕೂಡ ಬದಲಾಯಿಸಬಹುದು. |
2.00 | ನಾನು ಕ್ಲಿಕ್ ಮಾಡಿದಂತೆ ಕ್ಯಾನ್ವಾಸ್ ನ ಅಳತೆಯಲ್ಲಿ ಬದಲಾವಣೆಯನ್ನು ಗಮನಿಸಿ. |
2.04 | ಪೇಜ್ ನ ಅಳತೆಯನ್ನು A4 ಆಗಿ ಇಡೋಣ. |
2.08 | Orientation ಅನ್ನು Portrait ಅಥವಾ Landscape ಗೆ ಬದಲಾಯಿಸಬಹುದು. |
2.12 | ಆಯ್ಕೆಗಳ ಮೇಲೆ ಕ್ಲಿಕ್ ಮಾಡಿದಾಗ ಕ್ಯಾನ್ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ. |
2.17 | ನಾವು Width ಮತ್ತು Height ಪ್ಯಾರಮೀಟರ್ ಗಳನ್ನು ಉಪಯೋಗಿಸಿ ಕ್ಯಾನ್ವಾಸ್ ನ ಅಗಲ ಮತ್ತು ಉದ್ದವನ್ನು ಬದಲಿಸಬಹುದು. |
2.23 | Units ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಮ್ಮ ಅವಶ್ಯಕತೆಗೆ ತಕ್ಕಂತೆ ನಾವು ಅದನ್ನು ಬದಲಾಯಿಸಿಕೊಳ್ಳಬಹುದು. |
2.31 | ಈಗ ನಾವು ಇದನ್ನು pixels ಗೆ ಬದಲಾಯಿಸೋಣ. |
2.34 | Resize page to content ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
2.37 | ಇದರಲ್ಲಿರುವ ಹಲವಾರು ಆಯ್ಕೆಗಳು ತೆರೆದುಕೊಳ್ಳುತ್ತವೆ. |
2.41 | ನಾವು ಎಲ್ಲಾ ಕಡೆಗಳಿಗೂ ಮಾರ್ಜಿನ್ ಅನ್ನು ಸೆಟ್ ಮಾಡಬಹುದು. |
2.45 | ಮಾರ್ಜಿನ್ ಅನ್ನು ಸೆಟ್ ಮಾಡಿದ ಬಳಿಕ Resize page to drawing or selection ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
2.51 | ಮುಂದಿನದು Border ಆಯ್ಕೆ.ನಾವು ಇಲ್ಲಿ ಮೂರು ಚೆಕ್ ಬಾಕ್ಸ್ ಆಯ್ಕೆಗಳನ್ನು ನೋಡಬಹುದು. |
2.57 | ಈ ಆಯ್ಕೆಗಳನ್ನು ವಿವರಿಸಲು ನಾನು ಮೊದಲು ಈ ರೀತಿಯಾಗಿ ಒಂದು ellipseಅನ್ನು ಚಿತ್ರಿಸಿಕೊಳ್ಳುತ್ತೇನೆ. |
3.03 | ಮೊದಲನೆ ಆಯ್ಕೆ ಪೇಜ್ ಬಾರ್ಡರ್ ಅಂದರೆ ಕ್ಯಾನ್ವಾಸ್ ನ ಅಂಚು. |
3.08 | ಈ ಆಯ್ಕೆಯನ್ನು ಅನ್ ಚೆಕ್ ಮಾಡಿ, ಅಂಚು ಮರೆಯಾಗುವುದನ್ನು ಗಮನಿಸಿ. |
3.13 | ಮತ್ತೆ ಆ ಆಯ್ಕೆಯನ್ನು ಚೆಕ್ ಮಾಡಿ ಮತ್ತು ಅಂಚುಗಳು ಪುನಃ ಕಾಣಿಸುವುದನ್ನು ಗಮನಿಸಿ. |
3.18 | ಎರಡನೇ ಆಯ್ಕೆಯು ಚಿತ್ರದ ಮೇಲೆ ಅಂಚನ್ನು ಜೋಡಿಸುತ್ತದೆ. |
3.25 | ಇನ್ನೊಮ್ಮೆ ಈ ಆಯ್ಕೆಯ ಮೇಲೆ ಚೆಕ್ ಮತ್ತು ಅನ್ ಚೆಕ್ ಮಾಡಿ ಕ್ಯಾನ್ ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ. |
3.31 | ಮೂರನೆ ಆಯ್ಕೆಯು ಕ್ಯಾನ್ವಾಸ್ ನ ನೆರಳನ್ನು ಬಲ ಮತ್ತು ಕೆಳಭಾಗದಲ್ಲಿ ಕಾಣುವಂತೆ ಮಾಡುತ್ತದೆ. |
3.36 | ಇಲ್ಲಿ ಅಂಚು ಬಲ ಮತ್ತು ಕೆಳಭಾಗದಲ್ಲಿ ಉಳಿದೆರಡು ಕಡೆಗಳಿಗಿಂತಲೂ ದಪ್ಪವಾಗಿರುವುದನ್ನು ಗಮನಿಸಿ. |
3.42 | ಮೂರನೇ ಆಯ್ಕೆಯನ್ನು ಅನ್ ಚೆಕ್ ಮಾಡಿ ಮತ್ತು ನೆರಳು ಮರೆಯಾಗುವುದನ್ನುಗಮನಿಸಿ. |
3.47 | ನಾವು ಈ ಎಲ್ಲಾ ಆಯ್ಕೆಗಳನ್ನು ನಮ್ಮ ಅವಶ್ಯಕತೆ ಮತ್ತು ಆದ್ಯತೆಗಳಿಗನುಗುಣವಾಗಿ ಬಳಸಬಹುದು. |
3.52 | Border color ಆಯ್ಕೆಯು ನಮಗೆ ಬೇಕಾದ ಅಂಚಿನ ಬಣ್ಣವನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತದೆ. |
3.57 | ಬಾರ್ಡರ್ ಕಲರ್ ಅನ್ನು ಡಿಫಾಲ್ಟ್ ಆಗಿ ಹೇಗಿದೆಯೋ ಹಾಗೇ ಬಿಡೋಣ. |
4.01 | ನಂತರ Guides ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
4.03 | Guides ಟ್ಯಾಬ್ ಇದು ಅಕ್ಷರಗಳು ಮತ್ತು ಚಿತ್ರಗಳನ್ನು ಕ್ಯಾನ್ವಾಸ್ ನ ಮೇಲೆ ಅಲೈನ್ ಮಾಡಲು ಸಹಾಯ ಮಾಡುತ್ತದೆ. |
4.08 | ಇಲ್ಲಿ ನೀವು ruler guides ಅನ್ನು ರಚಿಸಬಹುದು. |
4.12 | ವರ್ಟಿಕಲ್ ruler ಮೇಲೆ ಕ್ಲಿಕ್ ಮಾಡಿ ಮತ್ತು ಒಂದು guideline ಅನ್ನು ಎಳೆಯಿರಿ. |
4.15 | ಈಗ ಮೊದಲ ಆಯ್ಕೆ Show Guides ಅನ್ನು ಚೆಕ್ -ಅನ್ ಚೆಕ್ ಮಾಡಿ |
4.19 | ಮತ್ತು ಗೈಡ್ ಲೈನ್ ಕ್ಯಾನ್ವಾಸ್ ನ ಮೇಲೆ ಗೋಚರಿಸುವುದು ಮತ್ತು ಮರೆಯಾಗುವುದನ್ನು ಗಮನಿಸಿ. |
4.25 | Guide color ಇದು guideline ನ ಬಣ್ಣ. |
4.28 | Highlight color ಇದು ಗೈಡ್ ಲೈನ್ ಅನ್ನು ಒಂದು ಸ್ಥಾನಕ್ಕೆ ಎಳೆಯುವಾಗ ಅದರ ಬಣ್ಣ. |
4.33 | ಇಲ್ಲಿ guide ಮತ್ತು highlight ನ ಡಿಫಾಲ್ಟ್ ಬಣ್ಣವನ್ನು ತೋರಿಸಿದೆ. |
4.37 | ನಿಮ್ಮ ಆದ್ಯತೆಗೆ ತಕ್ಕಂತೆ ಇದನ್ನು ಬದಲಿಸಿಕೊಳ್ಳಬಹುದು. |
4.41 | ನಾನು ಅವುಗಳ ಬಣ್ಣವನ್ನು ಡಿಫಾಲ್ಟ್ ಆಗೇ ಬಿಡುತ್ತೇನೆ. |
4.44 | Snap guides while dragging ಆಯ್ಕೆಯು ಎಳೆಯುವಾಗ ಒಬ್ಜೆಕ್ಟ್ ಅಥವಾ ಬೌಂಡಿಂಗ್ ಬಾಕ್ಸ್ ಗಳನ್ನುಹತ್ತಿರದ ಗೈಡ್ ಲೈನ್ ಗಳಿಗೆ snap ಮಾಡಲು ಸಹಾಯ ಮಾಡುತ್ತದೆ. |
4.52 | ನಂತರ Grids ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
4.54 | ಈ ಆಯ್ಕೆಯನ್ನು ಉಪಯೋಗಿಸಿ ಕ್ಯಾನ್ವಾಸ್ ನ ಮೇಲೆ ಕಲಾಕೃತಿಗಳ ಹಿಂಭಾಗದಲ್ಲಿ grid ಗಳು ಮೂಡುವಂತೆ ಮಾಡಲು ಸಹಾಯ ಮಾಡುತ್ತದೆ. |
5.00 | Grids ಗಳು ಕ್ಯಾನ್ವಾಸ್ ನ ಮೇಲೆ ಒಬ್ಜೆಕ್ಟ್ ಗಳ ಸ್ಥಾನವನ್ನು ಗೊತ್ತುಪಡಿಸಲು ಸಹಾಯ ಮಾಡುತ್ತದೆ ಮತ್ತು ಅವು ಪ್ರಿಂಟ್ ಆಗುವುದಿಲ್ಲ. |
5.07 | ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ. |
5.09 | Rectangular grid ಮತ್ತು Axonometric grid ಇವುgrid ಗಳ ಎರಡು ವಿಧಗಳು. |
5.16 | Rectangular grid ಅನ್ನು ಆಯ್ಕೆ ಮಾಡಿಕೊಂಡು New ಮೇಲೆ ಕ್ಲಿಕ್ ಮಾಡಿ. |
5.20 | ತತ್ಕ್ಷಣವೇ ಕ್ಯಾನ್ವಾಸ್ ನ ಬ್ಯಾಕ್ ಗ್ರೌಂಡ್ ನಲ್ಲಿ ಒಂದು grid ಮೂಡಿಬರುತ್ತದೆ. |
5.25 | ಇರುವ ಆಯ್ಕೆಗಳನ್ನು ಉಪಯೋಗಿಸಿ ನಮ್ಮ ಅವಶ್ಯಕತೆಗೆ ತಕ್ಕಂತೆ grid ಪ್ರಾಪರ್ಟಿಗಳನ್ನು ಸೆಟ್ ಮಾಡಬಹುದು. |
5.31 | ಕೆಳಗಡೆ ಇರುವ Remove ಬಟ್ಟನ್ ಅನ್ನು ಒತ್ತುವುದರ ಮೂಲಕ grid ಅನ್ನು ತೆಗೆದು ಹಾಕಬಹುದು. |
5.36 | ಇದೇ ರೀತಿಯಲ್ಲಿ Axonometric grid ಆಯ್ಕೆಯನ್ನೂ ಕೂಡ ಪ್ರಯತ್ನಿಸಬಹುದು. |
5.41 | ಮುಂದಿನ ಮೂರು ಟ್ಯಾಬ್ ಗಳಲ್ಲಿರುವ ಆಯ್ಕೆಗಳ ಕುರಿತು ಈ ಸರಣಿಯ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುತ್ತೇವೆ. |
5.47 | ಈಗ ಪೋಸ್ಟರ್ ಅನ್ನು ರಚಿಸುವುದನ್ನು ಪ್ರಾರಂಭಿಸೋಣ. |
5.50 | ಅದಕ್ಕಾಗಿ ಈಗ ಮೊದಲು ellipse ಮತ್ತು guidelineಗಳನ್ನು ಅಳಿಸೋಣ. |
5.53 | ನಮ್ಮ ಪೋಸ್ಟರ್ ಗೆ ಮೊದಲು ಬ್ಯಾಕ್ ಗ್ರೌಂಡ್ ಅನ್ನು ಡಿಸೈನ್ ಮಾಡೋಣ. |
5.58 | Rectangle tool ಮೇಲೆ ಕ್ಲಿಕ್ ಮಾಡಿ. |
6.00 | ಪೂರ್ತಿ canvas ಅನ್ನು ಆವರಿಸುವಂತೆ ಒಂದು ದೊಡ್ಡ ಆಯತಾಕಾರವನ್ನು ರಚಿಸಿ. |
6.06 | ತಿಳಿ ನೀಲಿ ಬಣ್ಣದ ಗ್ರೇಡಿಯೆಂಟ್ ಅನ್ನು ಹಾಕಿ. |
6.08 | ನಂತರ ಕ್ಯಾನ್ವಾಸ್ ನ Bezier tool ಅನ್ನು ಉಪಯೋಗಿಸಿ ಮೇಲ್ಭಾಗದಲ್ಲಿ header area ವನ್ನೂ |
6.16 | ಕ್ಯಾನ್ವಾಸ್ ನ ಕೆಳಭಾಗದಲ್ಲಿ footer area ವನ್ನೂ ಚಿತ್ರಿಸಿ. |
6.23 | ಇದಕ್ಕೆ ನೀಲಿ ಬಣ್ಣವನ್ನು ಹಾಕೋಣ. |
6.25 | ಈಗ Spoken Tutorial logo ವನ್ನು ಇಂಪೋರ್ಟ್ ಮಾಡೋಣ. |
6.28 | ಈ ಲೋಗೋ ನಿಮಗೆ Code Files ಲಿಂಕ್ ನಲ್ಲಿ ದೊರೆಯುತ್ತದೆ. |
6.32 | ಮೊದಲಿಗೆ ಟ್ಯುಟೋರಿಯಲ್ ಗೆ ವಿರಾಮ ಕೊಟ್ಟು, Code Files ಗೆ ಹೋಗಿ ಮತ್ತು zip fileಅನ್ನು ಡೌನ್ ಲೋಡ್ ಮಾಡಿ. |
6.39 | ಈಗ ಫೋಲ್ಡರ್ ಅನ್ನು unzip ಮಾಡಿ ಅದನ್ನು ನಿಮಗೆ ಬೇಕಾದಲ್ಲಿ ಸೇವ್ ಮಾಡಿಕೊಳ್ಳಿ. |
6.45 | ಈಗ ಪುನಃ Inkscape ಡೊಕ್ಯುಮೆಂಟ್ ಗೆ ಹಿಂದಿರುಗಿ. |
6.47 | File ಮೆನ್ಯು ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ. |
6.51 | logo ವನ್ನು ಸೇವ್ ಮಾಡಿದ ಫೋಲ್ಡರ್ ಗೆ ಹೋಗಿ. |
6.54 | Spoken Tutorial logo ವನ್ನು ಆಯ್ಕೆ ಮಾಡಿಕೊಂಡು Open ಮೇಲೆ ಕ್ಲಿಕ್ ಮಾಡಿ. |
6.59 | ಹೊಸ ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ OK ಮೇಲೆ ಕ್ಲಿಕ್ ಮಾಡಿ. |
7.03 | ಈಗ ನಮ್ಮ canvas ನ ಮೇಲೆ ಲೋಗೊ ಇಂಪೋರ್ಟ್ ಆಗಿದೆ. |
7.06 | 100×100 pixels ಗೆ Resize ಮಾಡಿ. |
7.09 | ಇದನ್ನು header area ದ ಮೇಲ್ಭಾಗದ ಎಡ ಮೂಲೆಯಲ್ಲಿ ಇಡಿ. |
7.14 | ಈಗ “Spoken Tutorial” ಎಂದು ಟೈಪ್ ಮಾಡಿ. |
7.18 | ಇದನ್ನು Bold ಮಾಡಿ. |
7.20 | ಫಾಂಟ್ ಸೈಜ್ ಅನ್ನು 48 ಕ್ಕೆ ಬದಲಾಯಿಸಿ. |
7.24 | ಅದನ್ನು logo ದ ಬಲಭಾಗದಲ್ಲಿಡಿ. |
7.27 | ಇದಾದ ನಂತರ “partner with us...help bridge the digital divide” ಎಂದು ಟೈಪ್ ಮಾಡಿ. |
7.35 | ಫಾಂಟ್ ಸೈಜ್ ಅನ್ನು 20 ಕ್ಕೆ ಬದಲಾಯಿಸಿ |
7.39 | ಮುಂದೆ ಕೆಲವು ಪಠ್ಯವನ್ನು ಸೇರಿಸೋಣ. |
7.42 | ನಾನು ಈಗಾಗಲೇ LibreOffice Writer ನಲ್ಲಿ ಪಠ್ಯವನ್ನು ಸೇವ್ ಮಾಡಿಕೊಂಡಿದ್ದೇನೆ. |
7.47 | ಈ ಪಠ್ಯವು ನಿಮಗೆ Code Files ನಲ್ಲಿ ದೊರೆಯುತ್ತದೆ. |
7.51 | ದಯವಿಟ್ಟು ಅದನ್ನು ನಿಮ್ಮ ಫೋಲ್ಡರ್ ನಲ್ಲಿ ಇಟ್ಟುಕೊಳ್ಳಿ. |
7.54 | ಈಗ ಅದನ್ನು copy ಮಾಡಿ ಮತ್ತು ಪೋಸ್ಟರ್ ನಲ್ಲಿ ಖಾಲಿ ಇರುವ ಜಾಗದಲ್ಲಿ paste ಮಾಡಿ. |
8.00 | ಫಾಂಟ್ ಸೈಜ್ ಅನ್ನು 28 ಕ್ಕೆ ಬದಲಾಯಿಸಿ. |
8.04 | ಲೈನ್ ಸ್ಪೇಸಿಂಗ್ ಅನ್ನು ಸೆಟ್ ಮಾಡಿ. |
8.06 | bullet ಗಳನ್ನು ರಚನೆ ಮಾಡಿ ಪ್ರತಿ ವಾಕ್ಯದ ಪ್ರಾರಂಭದಲ್ಲಿ ಇಡಿ. |
8.10 | ಇದರ ಕೆಳಗೆ ಎರಡು ಇಮೇಜ್ ಗಳನ್ನು ಸೇರಿಸೋಣ. |
8.13 | ಮೊದಲಿನಂತೆಯೇ ಅವುಗಳನ್ನು ಒಂದೊಂದಾಗಿ import ಮಾಡಿ. |
8.17 | ನಾನು ಅವುಗಳನ್ನು images ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ. |
8.20 | ನಿಮಗೆ ಈ ಇಮೇಜ್ ಗಳು Code Files ನಲ್ಲಿ ದೊರೆಯುತ್ತದೆ. |
8.24 | ದಯವಿಟ್ಟು ಅವುಗಳನ್ನು ನಿಮ್ಮ ಫೋಲ್ಡರ್ ನಲ್ಲಿ ಸೇವ್ ಮಾಡಿಕೊಳ್ಳಿ. |
8.27 | ಇಮೇಜ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಗಾತ್ರವನ್ನು ಸರಿಪಡಿಸಿಕೊಳ್ಳಿ. |
8.30 | ಅವುಗಳನ್ನು poster ನ ಕೆಳಭಾಗಕ್ಕೆ ಸರಿಸಿ. |
8.33 | ಸಂಪರ್ಕದ ವಿವರವನ್ನು footer area ದಲ್ಲಿ ಬರೆಯೋಣ. |
8.37 | ಇನ್ನೊಮ್ಮೆ LibreOffice Writer ಡಾಕ್ಯುಮೆಂಟ್ ನಿಂದ ಪಠ್ಯವನ್ನು copy ಮಾಡಿ pasteಮಾಡಿ. |
8.42 | ಫಾಂಟ್ ಸೈಜ್ ಅನ್ನು 18 ಕ್ಕೆ ಬದಲಾಯಿಸಿ |
8.45 | ಈಗ ನಮ್ಮ poster ಸಿದ್ಧವಾಗಿದೆ. |
8.47 | ಈಗ ಅದನ್ನು pdf ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವುದು ಹೇಗೆಂದು ನೋಡೋಣ. |
8.51 | File ಮೆನ್ಯುಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ. |
8.55 | ಒಂದು ಡೈಲಾಗ್ ಬಾಕ್ಸ್ ಗೋಚರಿಸುತ್ತದೆ. |
8.58 | ನೀವು ಯಾವ ಫೋಲ್ಡರ್ ನಲ್ಲಿ ಸೇವ್ ಮಾಡಬೇಕೋ ಅದನ್ನು ಆರಿಸಿಕೊಳ್ಳಿ. |
9.00 | ನಾನು Desktop ಅನ್ನು ಆರಿಸಿಕೊಳ್ಳುತ್ತೇನೆ. |
9.02 | ಕೆಳ ಬಲಭಾಗದಲ್ಲಿರುವ ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ ಫಾರ್ಮ್ಯಾಟ್ ಅನ್ನು pdf ಗೆ ಬದಲಾಯಿಸಿ. |
9.09 | ಇಲ್ಲಿ Name ಅಲ್ಲಿ: Spoken-Tutorial-Poster.pdf ಎಂದು ಟೈಪ್ ಮಾಡಿ. |
9.16 | Save ಮೇಲೆ ಕ್ಲಿಕ್ ಮಾಡಿ. |
9.18 | Desktop ನಲ್ಲಿ ನಮ್ಮ ಪೋಸ್ಟರ್ ಸೇವ್ ಆಗಿದೆ. |
9.21 | ಈಗ Desktop ಗೆ ಹೋಗಿ ಪೋಸ್ಟರ್ ಅನ್ನು ಪರೀಕ್ಷಿಸೋಣ. |
9.25 | ನಾವು ಪೋಸ್ಟರ್ ಅನ್ನು pdf ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿದ್ದೇವೆ. |
9.28 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು |
9.32 | * Document properties ಅನ್ನು ಬದಲಾಯಿಸುವುದು, |
9.34 | * A4 poster ವಿನ್ಯಾಸಗೊಳಿಸುವುದು, |
9.36 | * ಪೋಸ್ಟರ್ ಅನ್ನು 'pdf' ನಲ್ಲಿ ಸೇವ್ ಮಾಡುವುದನ್ನು ಕಲಿತಿದ್ದೇವೆ. |
9.38 | ಸ್ವಂತ ಅಭ್ಯಾಸಕ್ಕಾಗಿ ಅಸೈನ್ ಮೆಂಟ್ - |
9.40 | Spoken Tutorial Project ಗೆ ಒಂದು A4 poster ಅನ್ನು ವಿನ್ಯಾಸಗೊಳಿಸಿ. |
9.44 | ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು. |
9.48 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ. |
9.54 | Spoken Tutorial Project Team ಇದು
|
10.01 | ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ. |
10.04 | Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ |
10.10 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ |
10.14 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
10.16 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.. |