BASH/C3/Basics-of-functions/Kannada
From Script | Spoken-Tutorial
Revision as of 13:31, 3 November 2015 by NaveenBhat (Talk | contribs)
Time | Narration |
00.01 | ಬ್ಯಾಶ್ ನಲ್ಲಿ Basics of functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00.08 | ಈ ಟ್ಯುಟೋರಿಯಲ್ ನಲ್ಲಿ ನಾವು |
00.11 | * Function ಗಳ ಪ್ರಾಮುಖ್ಯತೆ, |
00.13 | * function ಅನ್ನು ಡಿಕ್ಲೇರ್ ಮಾಡುವುದು, |
00.15 | * function ಅನ್ನು ಕಾಲ್ ಮಾಡುವುದು, |
00.17 | * function ಗಳ ಕಾರ್ಯವಿಧಾನ |
00.19 | ಇವುಗಳ ಕುರಿತು ಉದಾಹರಣೆಯೊಂದಿಗೆ ಕಲಿಯುತ್ತೇವೆ. |
00.22 | ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು. |
00.28 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. http://www.spoken-tutorial.org |
00.34 | ಈ ಟ್ಯುಟೋರಿಯಲ್ ಗಾಗಿ ನಾನು
|
00.40 | ಇಲ್ಲಿಯ ತನಕ ನಾವು GNU BASH 4.1.10 ಆವೃತ್ತಿಯನ್ನು ಉಪಯೋಗಿಸುತ್ತಿದ್ದೆವು. |
00.46 | ಇಲ್ಲಿಂದ ನಾವು GNU BASH 4.2 ಆವೃತ್ತಿಯನ್ನು ಉಪಯೋಗಿಸುತ್ತೇವೆ. |
00.52 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00.58 | ಈಗ ನಾವು function ಎಂದರೇನು ಮತ್ತುಅದರ ಉಪಯೋಗಗಳೇನು ಎಂದು ತಿಳಿಯೋಣ. |
01.03 | function ಎಂಬುದು ಒಂದು command ಗಳ ಅಥವಾ algorithm ಗಳ ಸಂಗ್ರಹ. |
01.08 | ಇದು ಒಂದು ನಿಗದಿತ ಕಾರ್ಯವನ್ನು ಮಾಡಲು ಉಪಯುಕ್ತ. |
01.12 | ಇದನ್ನು ಒಂದು ಸಂಕೀರ್ಣವಾದ ಪ್ರೋಗ್ರಾಂ ಅನ್ನು ಬೇರೆ ಬೇರೆ ಕಾರ್ಯಗಳಾಗಿ ವಿಂಗಡಿಸಲು ಉಪಯೋಗಿಸುತ್ತಾರೆ. |
01.18 | ಇದು ಸ್ಕ್ರಿಪ್ಟ್ ಅನ್ನು ಓದಲು ಅನುಕೂಲಕರವಾಗುವಂತೆ ಮಾಡಲು ಮತ್ತು ಸುಲಭವಾಗುವಂತೆ ಮಾಡಲು ಸಹಾಯಕ. |
01.24 | function ಅನ್ನು ಡಿಕ್ಲೇರ್ ಮಾಡಲು ಎರಡು ಸಿಂಟ್ಯಾಕ್ಸ್ ಗಳಿವೆ. |
01.28 | ಮೊದಲ ಸಿಂಟ್ಯಾಕ್ಸ್: |
01.29 | function ಸ್ಪೇಸ್ function_name |
01.32 | ಕರ್ಲೀ ಬ್ರ್ಯಾಕೆಟ್ ನ ಒಳಗೆ |
01.34 | ಎಕ್ಸಿಕ್ಯೂಟ್ ಮಾಡಬೇಕಾದ command ಗಳು. |
01.37 | ಎರಡನೆಯ ಸಿಂಟ್ಯಾಕ್ಸ್: |
01.39 | function_name ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ |
01.42 | ಕರ್ಲೀ ಬ್ರ್ಯಾಕೆಟ್ ನ ಒಳಗೆ |
01.44 | ಎಕ್ಸಿಕ್ಯೂಟ್ ಮಾಡಬೇಕಾದ command ಗಳು. |
01.47 | Function call - |
01.48 | ಪ್ರೋಗ್ರಾಂ ನಲ್ಲಿ ಎಲ್ಲಿ ಬೇಕಾದರೂFunction ಗಳನ್ನು ಕಾಲ್ ಮಾಡಬಹುದು. |
01.53 | ಎಲ್ಲಿ ಇದನ್ನು ಕಾಲ್ ಮಾಡಬೇಕೋ ಅಲ್ಲಿ function ನ ಹೆಸರನ್ನು ಟೈಪ್ ಮಾಡಬೇಕು. |
01.58 | ಸಿಂಟ್ಯಾಕ್ಸ್ function_name ಅಷ್ಟೇ. |
02.02 | ಈಗ ಇದನ್ನು ಒಂದು ಸುಲಭ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ. |
02.07 | ನಾನು ಈಗಾಗಲೇ ಕೋಡ್ ಅನ್ನು function.sh ಫೈಲ್ ನಲ್ಲಿ ಟೈಪ್ ಮಾಡಿದ್ದೇನೆ. |
02.12 | ಇದು shebang line. |
02.14 | Function ಅನ್ನು function ಕೀವರ್ಡ್ ನಂತರ function ನ ಹೆಸರನ್ನು ಟೈಪ್ ಮಾಡುವುದರ ಮೂಲಕ ಡಿಕ್ಲೇರ್ ಮಾಡುತ್ತೇವೆ. |
02.21 | ಇಲ್ಲಿ function ನ ಹೆಸರು machine. |
02.26 | ಕರ್ಲೀ ಬ್ರ್ಯಾಕೆಟ್ ನ ಒಳಗಡೆ ಇರುವ ವಿಷಯಗಳನ್ನು function definition ಎನ್ನುತ್ತಾರೆ. |
02.32 | ನಾನು ಮಶಿನ್ ನ ಹಲವು ವಿವರಗಳನ್ನು ಡಿಸ್ಪ್ಲೇ ಮಾಡಿದ್ದೇನೆ. ಅವು- |
02.36 | uname ಹೈಫನ್ a ಮಶಿನ್ ನ ಮಾಹಿತಿಯನ್ನು ನೀಡುತ್ತದೆ. |
02.41 | w ಹೈಫನ್ h ಸಿಸ್ಟಮ್ ನಲ್ಲಿ ಲಾಗ್ ಆನ್ ಆದ ಬಳಕೆದಾರರ ಹೆಸರನ್ನು ಕೊಡುತ್ತದೆ. |
02.46 | uptime ಮಶಿನ್ ಅನ್ನು ಆನ್ ಮಾಡಿದ ನಂತರದ ಸಮಯವನ್ನು ಕೊಡುತ್ತದೆ. |
02.51 | free ಮೆಮೋರಿ ಸ್ಟ್ಯಾಟಸ್ ಅನ್ನು ಕೊಡುತ್ತದೆ. |
02.54 | df ಹೈಫನ್ h ಫೈಲ್ ಸಿಸ್ಟಮ್ ಸ್ಟ್ಯಾಟಸ್ ಅನ್ನು ಕೊಡುತ್ತದೆ. |
02.57 | ಇಲ್ಲಿಂದ ಮೇನ್ ಪ್ರೋಗ್ರಾಂ ಪ್ರಾರಂಭವಾಗುತ್ತದೆ. |
03.01 | ನಾವು “Beginning of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡೋಣ. |
03.06 | ಇಲ್ಲಿ machine ಇದು function call |
03.09 | ನಂತರ ನಾವು “End of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ. |
03.13 | ಈಗ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ. |
03.16 | # bash interpreter function definition ಅನ್ನು ನೋಡಿದಾಗ ಇದು function ಅನ್ನು ಸ್ಕ್ಯಾನ್ ಮಾಡುತ್ತದೆ. |
03.23 | # ಸ್ಕ್ರಿಪ್ಟ್ ನಲ್ಲಿ ಫಂಕ್ಷನ್ ನ ಹೆಸರು ಕಾಣಿಸಿದಾಗ ಮಾತ್ರ function ಕಾಲ್ ಮಾಡಲ್ಪಡುತ್ತದೆ. |
03.28 | # interpreter function ಹೆಸರನ್ನು ಓದಿದಾಗ ಮಾತ್ರ ಅದು function definition ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
03.36 | interpreter function name ಅನ್ನು ಕಮಾಂಡ್ ನಂತೆ ನಡೆಸಿಕೊಳ್ಳುತ್ತದೆ. |
03.41 | ದಯವಿಟ್ಟು ನೆನಪಿಡಿ ನಾವು ಫಂಕ್ಷನ್ ಅನ್ನು ಅದನ್ನು ಕಾಲ್ ಮಾಡುವ ಮೊದಲು ಡಿಫೈನ್ ಮಾಡಿರಬೇಕು. |
03.47 | ಈಗ terminal ಗೆ ಹೋಗಿ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು |
03.52 | chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್ sh ಎಂದು ಟೈಪ್ ಮಾಡಿ. |
03.59 | Enter ಅನ್ನು ಒತ್ತಿರಿ. |
04.01 | ಡಾಟ್ ಸ್ಲ್ಯಾಶ್ function ಡಾಟ್ sh ಎಂದು ಟೈಪ್ ಮಾಡಿ. |
04.05 | Enter ಅನ್ನು ಒತ್ತಿರಿ. |
04.07 | ನನ್ನ ಮಷಿನ್ ನ ವಿವರಗಳನ್ನು ಫಲಿತವಾಗಿ ಟರ್ಮಿನಲ್ ನಲ್ಲಿ ನೋಡಬಹುದು. |
04.14 | ಗಮನಿಸಿ: ಫಲಿತವು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಗೆ ಬದಲಾಗಿರುತ್ತದೆ. |
04.19 | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
04.22 | ಸ್ಲೈಡ್ಸ್ ಗೆ ಹಿಂದಿರುಗೋಣ. |
04.24 | ಸಾರಾಂಶವನ್ನು ನೋಡೋಣ. |
04.25 | ಈ ಟ್ಯುಟೋರಿಯಲ್ ನಲ್ಲಿ ನಾವು, |
04.28 | * function ಗಳ ಉಪಯೋಗ, |
04.30 | * Function ಅನ್ನು ಡಿಕ್ಲೇರ್ ಮಾಡುವುದು, |
04.32 | * Function ಕಾಲ್ ಮಾಡುವುದು |
04.33 | * function ಗಳ ಕಾರ್ಯವಿಧಾನವನ್ನು |
04.35 | ಉದಾಹರಣೆಯೊಂದಿಗೆ ಕಲಿತಿದ್ದೇವೆ. |
04.37 | ಸ್ವಂತ ಅಭ್ಯಾಸಕ್ಕಾಗಿ, |
04.38 | ಎರಡು ಫಂಕ್ಷನ್ ಗಳನ್ನೊಳಗೊಂಡ ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ.. |
04.42 | # ಮೊದಲ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಡಿಸ್ಕ್ ಸ್ಪೇಸ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: df ಹೈಫನ್ h). |
04.51 | # ಎರಡನೇ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಫೈಲ್ ಸಿಸ್ಟಮ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: du ಹೈಫನ್ h). |
05.00 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ |
05.03 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
05.07 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
05.12 | The Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
05.17 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
05.21 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
05.29 | Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ. |
05.33 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
05.41 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
05.47 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
05.52 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
05.56 | ಧನ್ಯವಾದಗಳು. |