BASH/C2/Case-statement/Kannada
From Script | Spoken-Tutorial
Revision as of 13:14, 21 September 2015 by NaveenBhat (Talk | contribs)
Time | Narration |
00:01 | ಬ್ಯಾಶ್ ನಲ್ಲಿ Case statement ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
|
00:17 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. |
00:23 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಕೊಡಿ. |
00:29 | ಈ ಟ್ಯುಟೋರಿಯಲ್ ಗಾಗಿ ನಾನು:
|
00:39 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:47 | ಬ್ಯಾಶ್ ಶೆಲ್ ನಲ್ಲಿ ಎರಡು ಬಗೆಯ conditional statement ಗಳಿವೆ. ಅವು - 'if' statement ಮತ್ತು 'case' statement . |
00:56 | Case ಸ್ಟೇಟ್ ಮೆಂಟ್ ಗಳನ್ನು if-else ಸ್ಟೇಟ್ ಮೆಂಟ್ ಗಳ ಬದಲಾಗಿ ಉಪಯೋಗಿಸಬಹುದು. |
01:03 | ತುಂಬಾ ಅಂಶಗಳಿಂದ ಒಂದನ್ನು ಆರಿಸಿಕೊಳ್ಳುವಾಗ ಕೇಸ್ ಸ್ಟೇಟ್ ಮೆಂಟ್ ಅನ್ನು ಆರಿಸಿಕೊಳ್ಳುತ್ತೇವೆ. |
01:09 | ಇದನ್ನು ಸ್ಕ್ರಿಪ್ಟ್ ನಲ್ಲಿ menu ವನ್ನು ತೋರಿಸಲು ಬಳಸುತ್ತೇವೆ. |
01:14 | ಸಿಂಟ್ಯಾಕ್ಸ್ ಅನ್ನು ನೋಡೋಣ. |
01:15 | case ಸ್ಪೇಸ್ $(ಡಾಲರ್) VARIABLE ಸ್ಪೇಸ್ in match_1 ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ command ಅನ್ನು ಟೈಪ್ ಮಾಡಿ ಮತ್ತು ಎರಡು ಸೆಮಿಕೋಲನ್ ಹಾಕಿ. |
01:27 | match_n ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ command ಅನ್ನು ಟೈಪ್ ಮಾಡಿ ಮತ್ತು ಎರಡು ಸೆಮಿಕೋಲನ್ ಹಾಕಿ. ಅಸ್ತೆರಿಕ್ಸ್ ಚಿಹ್ನೆ ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ command_to_execute_by_default ಮತ್ತು ಎರಡು ಸೆಮಿಕೋಲನ್ ಹಾಕಿ esac ಎಂದು ಟೈಪ್ ಮಾಡಿ. |
01:45 | VARIABLE ಇದು match_1 ನೊಂದಿಗೆ ಹೋಲಿಸಲ್ಪಡುತ್ತದೆ. |
01:48 | ಇದು ಹೋಲಿಕೆಯಾಗದಿದ್ದಲ್ಲಿ ಮುಂದಿನ ಕೇಸ್ ಗೆ ಅಂದರೆ match_n ಗೆ ಹೋಗುತ್ತದೆ. |
01:54 | ಇದು ಯಾವುದಾದಾರೂ string VARIABLE ನೊಂದಿಗೆ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸುತ್ತದೆ. |
02:01 | ಹೊಂದಿಕೆಯಾದರೆ ಎರಡು ಸೆಮಿಕೋಲನ್ ವರೆಗಿನ ಎಲ್ಲಾ ಕಮಾಂಡ್ ಗಳೂ ಎಕ್ಸಿಕ್ಯೂಟ್ ಆಗುತ್ತವೆ. |
02:07 | ಯಾವುದೂ VARIABLE ಗೆ ಹೋಲಿಕೆಯಾಗದಿದ್ದಲ್ಲಿ , ಆಸ್ತೆರಿಸ್ಕ್ ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ. |
02:14 | ಇದು ಡಿಫಾಲ್ಟ್ case ಕಂಡಿಷನ್ ಆಗಿದೆ ಏಕೆಂದರೆ ಆಸ್ತೆರಿಸ್ಕ್ ಎಲ್ಲಾ ಸ್ಟ್ರಿಂಗ್ ಗೂ ಹೊಂದಿಕೆಯಾಗುತ್ತದೆ. |
02:21 | esac ಇದು case block ನ ಕೊನೆಯನ್ನು ಸೂಚಿಸುತ್ತದೆ. |
02:26 | ಈಗ ಉದಾಹರಣೆಯೊಂದಿಗೆ case statement ನ ಕುರಿತು ನೋಡೋಣ. |
02:32 | ನಾನು ಈಗಾಗಲೇ ಪ್ರೋಗ್ರಾಂ ಅನ್ನು ಟೈಪ್ ಮಾಡಿದ್ದೇನೆ. ಹಾಗಾಗಿ ನಾನು case.sh ಫೈಲ್ ಅನ್ನು ತೆರೆಯುತ್ತೇನೆ. |
02:38 | ಈ ಪ್ರೋಗ್ರಾಂ ಡಿಸ್ಕ್ ಸ್ಪೇಸ್ ಒಂದು ಮಿತಿಯನ್ನು ತಲುಪಿದಾಗ ಎಚ್ಚರಿಕೆಯ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
02:45 | ಇದು shebang line |
02:47 | Linux ನ ಬೇರೆ ಬೇರೆ ಫ್ಲೇವರ್ ಗಳಾದ CentOS, RedHat ಮುಂತಾದವುಗಳಲ್ಲಿ ಬ್ಯಾಶ್ ನ ಸ್ಥಾನವು ಬೇರೆಯಾಗಿರುತ್ತದೆ. |
02:55 | ಹಿಂದೆ ಉಪಯೋಗಿಸಿದ /bin/bash ಇದು ನೇರವಾಗಿ binary file ಅನ್ನು ಸೂಚಿಸುತ್ತದೆ. |
03:01 | ಇಲ್ಲಿ ಉಪಯೋಗಿಸಿದ env ಇದು ಬ್ಯಾಶ್ ನ ನಿಜವಾದ ಸ್ಥಾನವನ್ನು ಸೂಚಿಸುತ್ತದೆ. |
03:07 | ಈ shebang line ಯಾವುದೇ GNU/Linux ಸಿಸ್ಟಮ್ ನಲ್ಲಿ ಈ ಸ್ಕ್ರಿಪ್ಟ್ ಪೋರ್ಟೇಬಲ್ ಆಗಲು ಸಹಾಯ ಮಾಡುತ್ತದೆ. |
03:16 | df -(ಹೈಫನ್ )h ಇದು disk space ಅನ್ನು ಓದಲು ಸಾಧ್ಯಾವಾಗುವ ರೀತಿಯಲ್ಲಿ ಡಿಸ್ಪ್ಲೇ ಮಾಡುತ್ತದೆ. |
03:22 | output ಅನ್ನು sort -rk5 ಗೆ ಐದನೇ ಸ್ಥಂಬದಲ್ಲಿ ವ್ಯತಿರಿಕ್ತವಾಗಿ ಜೋಡಿಸಲು ಕಳುಹಿಸುತ್ತೇವೆ. |
03:31 | ನಂತರ ಫಲಿತವು awk 'FNR == 2 {print $5}' ಗೆ ಕಳುಹಿಸಲ್ಪಡುತ್ತದೆ. |
03:38 | ಇದು ಎರಡನೇ ಸಾಲಿನ ಐದನೇ field ಅನ್ನು ಹೊರತೆಗೆಯುತ್ತದೆ. |
03:43 | ಅಂತಿಮವಾಗಿ ಫಲಿತವು % ಚಿಹ್ನೆಯನ್ನು ತೆಗೆದು ಹಾಕಲು cut -(ಹೈಫನ್)d “% -(ಹೈಫನ್)f1” ಗೆ ಕಳುಹಿಸಲ್ಪಡುತ್ತದೆ. sign. |
03:55 | ಇದು case statement. ನ ಮೊದಲ ಸಾಲು. |
03:59 | ಇಲ್ಲಿ ನಾವು 0 ಮತ್ತು 69 ರ ನಡುವಿನ space ಅನ್ನು ಹೋಲಿಸುತ್ತೇವೆ. |
04:04 | ಹೋಲಿಕೆಯಾದಲ್ಲಿ "Everything is OK” ಎಂದು ಪ್ರಿಂಟ್ ಆಗುತ್ತದೆ. |
04:08 | ನಂತರ ಇದು , 70 ಮತ್ತು 89 ರ ನಡುವಿನ ಅಥವಾ 91 ರಿಂದ 98 ವರೆಗಿನ space ಅನ್ನು ಹೋಲಿಸುತ್ತದೆ. |
04:17 | ಹೋಲಿಕೆಯಾದಲ್ಲಿ “Clean out. There's a partition that is $(ಡಾಲರ್) space % full.” ಎಂದು ಪ್ರಿಂಟ್ ಆಗುತ್ತದೆ. |
04:27 | ಇಲ್ಲಿ ಇದು space ಅನ್ನು 99 ರೊಂದಿಗೆ ಹೋಲಿಸುತ್ತದೆ. |
04:30 | ಹೋಲಿಕೆಯಾದಲ್ಲಿ “Hurry. There's a partition at $(ಡಾಲರ್) space %!” ಎಂದು ಪ್ರಿಂಟ್ ಆಗುತ್ತದೆ. |
04:39 | ಇದು ಡಿಫಾಲ್ಟ್ case ಕಂಡಿಶನ್ ಏಕೆಂದರೆ ಅಸ್ಟೆರಿಸ್ಕ್ ಎಲ್ಲಾ string ನ ಜೊತೆಗೂ ಹೋಲಿಕೆಯಾಗುತ್ತದೆ. |
04:45 | ಮತ್ತು ಇದು case statement. ನ ಕೊನೆ. |
04:48 | ಈಗ terminal ಗೆ ಹೋಗಿ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಿ. |
04:52 | chmod ಪ್ಲಸ್ x caseಡಾಟ್ sh ಎಂದು ಟೈಪ್ ಮಾಡಿ. |
04:57 | ಡಾಟ್ ಸ್ಲ್ಯಾಶ್ case ಡಾಟ್ sh ಎಂದು ಟೈಪ್ ಮಾಡಿ. |
05:02 | "Everything is OK". ಗಮನಿಸಿ ಫಲಿತವು ನಿಮ್ಮ ಸಿಸ್ಟಮ್ ನ ಡಿಸ್ಕ್ ಸ್ಪೇಸ್ ಗೆ ಅನುಗುಣವಾಗಿ ಬದಲಾಗುತ್ತದೆ. |
05:10 | ನನ್ನ ಸಿಸ್ಟಮ್ ನಲ್ಲಿ 0 ಮತ್ತು 69 ರ ನಡುವೆ ಹೋಲಿಕೆಯಾಗಿರುವುದರಿಂದ "Everything is OK". ಎಂದು ಪ್ರಿಂಟ್ ಆಗಿದೆ. |
05:18 | ನಿಮ್ಮ ಸಿಸ್ಟಮ್ ನಲ್ಲಿ ಪ್ರಿಂಟ್ ಆದ ಸಂದೇಶವನ್ನು ಗಮನಿಸಿ. |
05:20 | ಇದರಿಂದ ನೀವು ಯಾವ case ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗಿದೆ ಎಂದು ತಿಳಿದುಕೊಳ್ಳುವುದು. |
05:27 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಾರಾಂಶವನ್ನು ನೋಡೋಣ. |
05:31 | ಈ ಟ್ಯುಟೋರಿಯಲ್ ನಲ್ಲಿ ನಾವು,
|
05:41 | ಸ್ವಂತ ಅಭ್ಯಾಸಕ್ಕಾಗಿ, |
05:42 | ಗಣಿತದ ಲೆಕ್ಕ ಗಳನ್ನು ಮಾಡಲು ಮೆನು ಇರುವ ಪ್ರೋಗ್ರಾಂ ಅನ್ನು ಬರೆಯಿರಿ. |
05:47 | * ಇದು ಬಳಕೆದಾರರಿಂದ 'a' ಮತ್ತು 'b' ಯನ್ನು ಇನ್ ಪುಟ್ ಆಗಿ ಪಡೆಯಬೇಕು. |
05:51 | * ಇದು ಗಣಿತದ ಮುಖ್ಯ ಕ್ರಿಯೆಗಳಾದ (ಸಂಕಲನ +, ವ್ಯವಕಲನ -, ಭಾಗಾಕಾರ / ಮತ್ತು ಗುಣಾಕಾರ *) ಇವುಗಳಲ್ಲಿ ಒಂದನ್ನು ಬಳಕೆದಾರರಿಂದ ಪಡೆಯಬೇಕು. * ಲೆಕ್ಕವನ್ನು ಮಾಡಿ * ಫಲಿತವನ್ನು ಪ್ರಿಂಟ್ ಮಾಡಿ. |
06:02 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ. |
06:06 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
06:08 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
06:14 | The Spoken Tutorial Project Team ಇದು |
06:16 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
06:23 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
06:31 | Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ. |
06:35 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
06:48 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
06:53 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. ಧನ್ಯವಾದಗಳು. |