GIMP/C2/Using-Layers-Healing-Cloning-Tools/Kannada
From Script | Spoken-Tutorial
Revision as of 16:39, 20 September 2015 by NaveenBhat (Talk | contribs)
Time | Narration |
00:21 | Meet The GIMP (ಮೀಟ್ ದ ಗಿಂಪ್) ನ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:25 | ಹಿಂದಿನ ‘ಟ್ಯುಟೋರಿಯಲ್’ನಲ್ಲಿ ನಾನು ನಿಮ್ಮನ್ನು ಈ ಇಮೇಜ್ನೊಂದಿಗೆ ಬಿಟ್ಟಿದ್ದೆ. |
00:30 | ಈ ಇಮೇಜ್ನಲ್ಲಿ ನನಗೆ ಹಡಗನ್ನು ಸ್ವಲ್ಪ ಗಾಢವಾಗಿಸಬೇಕಾಗಿದೆ. |
00:34 | ಮತ್ತು ಇದಕ್ಕಾಗಿ ಅತ್ಯುತ್ತಮ ವಿಧಾನವೆಂದರೆ ‘ಲೇಯರ್ಸ್’ನೊಂದಿಗೆ ಕೆಲಸ ಮಾಡುವುದು ಆಗಿದೆ. |
00:40 | ಆದ್ದರಿಂದ, ಮೊದಲು ನಾನು ಇಮೇಜ್ನ ಒಳಗೆ, ಹಡಗು ಇರುವಲ್ಲಿ ಝೂಮ್ ಮಾಡುತ್ತೇನೆ. |
00:52 | Adding a new layer ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತೇನೆ ಹಾಗೂ ಸುಮ್ಮನೆ ಒಂದು ಹೊಸ ಲೇಯರನ್ನು ಸೇರಿಸುತ್ತೇನೆ. |
01:01 | ಈ ಲೇಯರನ್ನು ship ಎಂದು ಹೆಸರಿಸುತ್ತೇನೆ ಮತ್ತು Layer Fill Type ಎನ್ನುವಲ್ಲಿ Transparency (ಟ್ರಾನ್ಸ್ಪರೆನ್ಸಿ) ಎನ್ನುವುದನ್ನು ಆರಿಸಿಕೊಳ್ಳುತ್ತೇನೆ. |
01:11 | ಈಗ ಮುಂದಿನ ಹಂತ, ಮೂರೂ ಕಲರ್ ಚಾನೆಲ್ಗಳ ತೇಜಸ್ಸನ್ನು ಕಡಿಮೆ ಮಾಡುವುದು. ಅದನ್ನು ಮಾಡಲು ನಾನು Multiply ಮೋಡನ್ನು ಬಳಸಬೇಕಾಗುವುದು. |
01:22 | ಈ ಸಲ ಇಲ್ಲಿರುವ ಬೇರೆ ಬಣ್ಣಗಳೊಂದಿಗೆ ಗುಣಿಸಿಕೊಳ್ಳಲು ನಾನು ಬೂದುಬಣ್ಣವನ್ನು ಉಪಯೋಗಿಸುತ್ತೇನೆ ಏಕೆಂದರೆ ಅದು ಇಮೇಜ್ನಲ್ಲಿ ಗಾಢವಾದ ಹಡಗನ್ನು ಪಡೆಯಲು ಸಹಾಯ ಮಾಡುತ್ತದೆ. |
01:34 | ಆದ್ದರಿಂದ, Colour Selection ‘ಮೋಡ್’ನ ಆಯ್ಕೆಗೆ ಹೋಗಿ, ನನಗೆ ಸೊಗಸಾದ ಬೂದುಬಣ್ಣದ ಛಾಯೆ ಸಿಗುವವರೆಗೆ ಸ್ಲೈಡರನ್ನು ಕೆಳಗೆ ಎಳೆಯುತ್ತ, ಬೂದುಬಣ್ಣದ ವ್ಯಾಲ್ಯೂವನ್ನು ಕಡಿಮೆಮಾಡುತ್ತೇನೆ. |
01:52 | ಈಗ ಬೂದುಬಣ್ಣವನ್ನು ಇಮೇಜ್ನಲ್ಲಿ ಎಳೆದು ತನ್ನಿ, ನಿಮಗೆ ಗಾಢವಾದ ಹಡಗಿನೊಂದಿಗೆ ಹೆಚ್ಚು ಗಾಢವಾದ ಇಮೇಜ್ ಸಿಗುವದು. |
02:02 | ಮರಳಿ ಲೇಯರ್ ಡೈಲಾಗ್ ನಲ್ಲಿ, ನಾನು ಬೂದುಬಣ್ಣದ ತೀವ್ರತೆಯನ್ನು ಒಪ್ಯಾಸಿಟೀ ಸ್ಲೈಡರ್ನ ಸಹಾಯದಿಂದ ಹಾಗೂ ಬೂದುಬಣ್ಣದ ಲೇಯರನ್ನು ‘ಆನ್’ ಹಾಗೂ ‘ಆಫ್’ ಮಾಡುವದರಿಂದ ನಿಯಂತ್ರಿಸಬಹುದು. |
02:18 | ಆದರೆ ಲೇಯರ್ ನ ಪರಿಣಾಮವನ್ನು ಇಡೀ ಇಮೇಜ್ ಗೆ ಅನ್ವಯಿಸಲಾಗುತ್ತದೆ. ನನಗೆ ಈ ಪರಿಣಾಮವು ಹಡಗಿನ ಸ್ಥಳಕ್ಕೆ ಮಾತ್ರ ಸೀಮಿತವಾಗಿರಬೇಕಾಗಿದೆ. |
02:28 | ಅದನ್ನು ಮಾಡಲು ನಾನು ಲೇಯರ್ ಮಾಸ್ಕನ್ನು ಉಪಯೋಗಿಸುತ್ತೇನೆ. |
02:31 | ಲೇಯರ್ ಮಾಸ್ಕ್ ಎನ್ನುವುದು ಲೇಯರ್, ಎಲ್ಲಿ ಕಾಣಿಸಬೇಕು ಮತ್ತು ಎಲ್ಲಿ ಅದೃಶ್ಯವಾಗಿರಬೇಕು ಎನ್ನುವುದನ್ನು ಡಿಫೈನ್ ಮಾಡುತ್ತದೆ. |
02:38 | ನಾನು ship ಎನ್ನುವ ಲೇಯರ್ ಗೆ ಹೋಗಿ ಅದರ ಮೇಲೆ ರೈಟ್ ಕ್ಲಿಕ್ ಮಾಡುತ್ತೇನೆ ಮತ್ತು Add Layer Mask ಎನ್ನುವ ಆಯ್ಕೆಯನ್ನು ಆಯ್ಕೆಮಾಡುತ್ತೇನೆ. Initialize Layer Mask ಎನ್ನುವದರಲ್ಲಿ Black ಅನ್ನು ಆಯ್ಕೆಮಾಡುತ್ತೇನೆ ಏಕೆಂದರೆ Black ಎಲ್ಲ ಲೇಯರ್ಗಳನ್ನು ಅಡಗಿಸಲು ಮತ್ತು White ಎಲ್ಲ ಲೇಯರ್ಗಳನ್ನು ತೋರಿಸಲು ಸಹಾಯಮಾಡುತ್ತವೆ. |
02:58 | ಈ ಬೇರೆ ಆಯ್ಕೆಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸುವೆನು. Add ಎನ್ನುವುದರ ಮೇಲೆ ಕ್ಲಿಕ್ ಮಾಡಿರಿ. |
03:08 | ಲೇಯರ್ ನ ಮೇಲೆ ಏನೂ ಪರಿಣಾಮವಾಗುವದಿಲ್ಲ ಎಂಬುದನ್ನು ನೀವು ನೋಡಬಹುದು. |
03:11 | ನಾನು ಲೇಯರನ್ನು ‘ಆನ್/ಆಫ್’ ಸ್ವಿಚ್ ಮಾಡಬಹುದು. ಆದರೆ ಲೇಯರ್ ಮಾಸ್ಕನ್ನು ಸೇರಿಸಿದ ಮೇಲೆ ಏನೂ ಪರಿಣಾಮವಾಗುವದಿಲ್ಲ. |
03:18 | ಆದರೆ ಲೇಯರ್ ಮಾಸ್ಕನಲ್ಲಿ ನಾನು ಪೇಂಟ್ ಮಾಡಬಹುದು ಅಥವಾ ಬೇರೆ ಕೆಲವು ಎಡಿಟ್ ಟೂಲ್ಗಳನ್ನು ಬಳಸಬಹುದು. |
03:24 | ಮತ್ತು ನಾನು ಪೇಂಟ್ ಮಾಡಿದಾಗ ಅಥವಾ ಟೂಲ್ಗಳನ್ನು ಬಳಸಿದಾಗ ಅದರ ಪರಿಣಾಮವು ಇಮೇಜ್ ನಲ್ಲಿ ಕಾಣುವುದು. |
03:31 | ಲೇಯರ್ನಲ್ಲಿ ಪೇಂಟ್ ಮಾಡಲು ನಾನು ‘White ಫೋರ್ಗ್ರೌಂಡ್’ ಮತ್ತು ‘Black ಬ್ಯಾಕ್ಗ್ರೌಂಡ್ ಕಲರ್’ಅನ್ನು ಉಪಯೋಗಿಸುತ್ತೇನೆ. |
03:41 | ನಾನು Brush ಟೂಲ್ನ ಮೇಲೆ ಕ್ಲಿಕ್ ಮಾಡಿ, ‘option dialog’ ಗೆ ಹೋಗುತ್ತೇನೆ ಮತ್ತು ವರ್ತುಲದಲ್ಲಿ 19 ಪಿಕ್ಸೆಲ್ಗಳಿರುವ ‘ಬ್ರಶ್’ಅನ್ನು ಆಯ್ಕೆಮಾಡುತ್ತೇನೆ. |
03:54 | ಲೇಯರ್ ಮಾಸ್ಕ್, ಆಯ್ಕೆಯಾಗಿದೆಯೋ ಹೇಗೆ ಎಂದು ಪರಿಶೀಲಿಸಲು ನಾನು ಮತ್ತೆ ಲೇಯರ್ಸ್ ಡೈಲಾಗ್ ಗೆ ಹೋಗುತ್ತೇನೆ ಏಕೆಂದರೆ ನನಗೆ ಲೇಯರ್ ಮಾಸ್ಕನ್ನು ಪೇಂಟ್ ಮಾಡಬೇಕಾಗಿದೆ, ಲೇಯರನ್ನು ಅಲ್ಲ. |
04:06 | ಪರಿಣಾಮವನ್ನು ನಿಮಗೆ ನಾನು ತೋರಿಸುತ್ತೇನೆ. |
04:09 | ಲೇಯರ್ ಮೋಡನ್ನು Normal Layer Mode ಗೆ ಬದಲಾಯಿಸುತ್ತೇನೆ ಮತ್ತು ನೀವು ನೋಡುವಂತೆ ಇಮೇಜ್ನಲ್ಲಿ ಮುಂದಿನ ಲೇಯರ್, ಅದೃಶ್ಯವಾಗಿದೆ. |
04:18 | ಇಲ್ಲಿ ನಾನು ಒಂದು ಬ್ರಶ್ ಅನ್ನು ಆಯ್ಕೆಮಾಡುತ್ತೇನೆ ಹಾಗೂ ಹಡಗಿನ ಒಂದು ಭಾಗದ ಮೇಲೆ ಪೇಂಟ್ ಮಾಡಲು ಆರಂಭಿಸುತ್ತೇನೆ. ಒಂದು ಬೂದುಬಣ್ಣದ ಲೇಯರ್ ಕಾಣುತ್ತಿರುವದನ್ನು ನೀವು ನೋಡಬಹುದು. |
04:30 | ಈಗ ನಾನು ಲೇಯರನ್ನೇ ಆಯ್ಕೆಮಾಡಿ ಪೇಂಟ್ ಮಾಡಿದಾಗ ಲೇಯರ್, ಬಿಳಿ ಬಣ್ಣದಲ್ಲಿ ಪೇಂಟ್ ಆಗಿದೆ, ಬೂದುಬಣ್ಣದಲ್ಲಿ ಅಲ್ಲ ಎನ್ನುವುದನ್ನು ನೀವು ನೋಡಬಹುದು. |
04:41 | ಮತ್ತೊಮ್ಮೆ ನಾನು ಲೇಯರ್ ಮಾಸ್ಕನ್ನು ಆಯ್ಕೆಮಾಡುತ್ತೇನೆ. ‘ಫೋರ್ಗ್ರೌಂಡ್’ನ ಬಣ್ಣವನ್ನು ಕಪ್ಪು ಹಾಗೂ ‘ಬ್ಯಾಕ್ಗ್ರೌಂಡ್’ ಬಣ್ಣವನ್ನು ಬಿಳಿ ಬಣ್ಣಕ್ಕೆ ಬದಲಾಯಿಸಲು ‘x’ ಕೀಯನ್ನು ಒತ್ತುತ್ತೇನೆ. |
04:51 | ಮತ್ತು ನನ್ನ ಲೇಯರ್ ಮಾಸ್ಕನಲ್ಲಿ ಬಿಳಿ ಬಣ್ಣದಿಂದ ಪೇಂಟ್ ಮಾಡಲು ಆರಂಭಿಸುತ್ತೇನೆ. |
04:55 | ಕಪ್ಪು ಬಣ್ಣದಿಂದಾಗಿ ಇಮೇಜ್, ಅಡಗಿಸಲ್ಪಟ್ಟಿದೆ. |
05:04 | ctrl + z, ಮಾತ್ರ ಒತ್ತಿ ನಾನು ಬೇಡವಾದ ಪರಿಣಾಮಗಳನ್ನು Undo ಮಾಡಲು ಸಾಧ್ಯವಿದೆ. ಇಲ್ಲಿ ನಾವು ಹಡಗಿನ ಲೇಯರ್ ಮಾಸ್ಕನ್ನು ಪೇಂಟ್ ಮಾಡಲು ಮರಳಿದ್ದೇವೆ. |
05:14 | ಈಗ ನಾನು ‘ಬ್ಯಾಕ್ಗ್ರೌಂಡ್’ನ ಬಣ್ಣವನ್ನು ಕಪ್ಪು ಹಾಗೂ ‘ಫೋರ್ಗ್ರೌಂಡ್’ನ ಬಣ್ಣವನ್ನು ಬಿಳಿಬಣ್ಣಕ್ಕೆ ಬದಲಾಯಿಸುತ್ತೇನೆ. ಹಡಗಿನ ಆಕಾರವನ್ನು ತುಂಬಲು ಆರಂಭಿಸುತ್ತೇನೆ. |
05:29 | Normal ಮೋಡ್ನಲ್ಲಿ ಪೇಂಟ್ ಮಾಡುವದು ತುಂಬಾ ಸುಲಭ. |
05:34 | Normal ಮೋಡ್ನಲ್ಲಿ ಪೇಂಟ್ ಮಾಡಿದ ಮೇಲೆ ನಾವು ಬೂದುಬಣ್ಣದ ಹಡಗನ್ನು ಪಡೆಯುವದರಿಂದ ಹಿನ್ನೆಲೆಯಿಂದ ಪ್ರತ್ಯೇಕಿಸುವದು, Multiply Layer Mode ನಲ್ಲಿಯದಕ್ಕಿಂತ, ಬಹಳ ಸುಲಭವಾಗಿದೆ. |
05:55 | ಹಡಗಿನ ಸೂಕ್ಷ್ಮವಾದ ಅಂಚುಗಳಲ್ಲಿ ಪೇಂಟ್ ಮಾಡಲು ನಾನು ಬ್ರಶ್ ನ ಸೈಜನ್ನು ಕಡಿಮೆ ಮಾಡುತ್ತೇನೆ. |
06:01 | ಸಣ್ಣ ಬ್ರಶ್ ಅನ್ನು ನೀವು ಮೂರು ವಿಭಿನ್ನ ರೀತಿಗಳಲ್ಲಿ ಆಯ್ಕೆಮಾಡಬಹುದು. |
06:06 | ಮೊದಲನೆಯದಾಗಿ, ಬ್ರಶ್ ನ ಸೈಜನ್ನು ಕಡಿಮೆ ಮಾಡಲು ಸ್ಕೇಲನ್ನು ಬಳಸುವುದು. |
06:12 | ಎರಡನೆಯ ವಿಧಾನವೆಂದರೆ, ಇಲ್ಲಿಯ ಈ ಪುಟ್ಟ ನೀಲಿ ತ್ರಿಕೋನವನ್ನು ಕ್ಲಿಕ್ ಮಾಡಿ ಯಾವುದೇ ಸೈಜ್ನ ‘ಬ್ರಶ್’ಅನ್ನು ಆಯ್ಕೆಮಾಡುವುದು, ಇಲ್ಲದಿದ್ದರೆ ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಟೈಪ್ ಮಾಡಿ ಅದನ್ನು ಮಾಡಬಹುದು. |
06:27 | ತೆರೆದ ಸ್ಕ್ವೇರ್ ಬ್ರ್ಯಾಕೆಟ್, ಬ್ರಶ್ ನ ಸೈಜನ್ನು ಕಡಿಮೆ ಮಾಡುತ್ತದೆ ಹಾಗೂ ಮುಚ್ಚಿದ ಸ್ಕ್ವೇರ್ ಬ್ರ್ಯಾಕೆಟ್, ಬ್ರಶ್ ನ ಸೈಜನ್ನು ಹೆಚ್ಚಿಸುತ್ತದೆ. |
06:40 | ನನಗೆ ವಿವರಗಳಿಗಾಗಿ ಚಿಕ್ಕ ಬ್ರಶ್ ಅನ್ನು ಉಪಯೋಗಿಸಬೇಕಾಗಿದೆ. ಆದ್ದರಿಂದ ನಾನು ‘ಓಪನ್ ಸ್ಕ್ವೇರ್ ಬ್ರ್ಯಾಕೆಟ್’ ಅನ್ನು ಒತ್ತುತ್ತೇನೆ. |
06:47 | ಆದರೆ ನಾನು ಇಲ್ಲಿ ಏನು ಮಾಡಬೇಕೆಂಬುದನ್ನು ನೀವು ಊಹಿಸಬಹುದು. ಇಡೀ ಹಡಗನ್ನು ಪೇಂಟ್ ಮಾಡಲು ನೀವು ನನ್ನನ್ನು ಗಮನಿಸಬೇಕಾಗಿಲ್ಲ. |
07:00 | ಈಗ ನಾನು ಇಡೀ ಹಡಗನ್ನು ಬೂದುಬಣ್ಣದ ಲೇಯರ್ನಿಂದ ಪೇಂಟ್ ಮಾಡುವುದನ್ನು ಮುಗಿಸಿದ್ದೇನೆ. |
07:05 | ನಾನು ಅತಿ ಹೆಚ್ಚು ಪೇಂಟ್ ಮಾಡಿದ ಅಂಚು ಗಳಿರುವ ಸ್ಥಳಗಳಿಗಾಗಿ ಪರಿಶೀಲಿಸಬೇಕಾಗುವುದು. |
07:11 | ಆದ್ದರಿಂದ ನಾನು Layer Modeಅನ್ನು Multiply Mode ಗೆ ಬದಲಾಯಿಸುತ್ತೇನೆ ಮತ್ತು ಒಪ್ಯಾಸಿಟೀ ಸ್ಲೈಡರನ್ನು ಸ್ವಲ್ಪ ಕಡಿಮೆ ಮಾಡುತ್ತೇನೆ. |
07:19 | ಇಮೇಜ್ನಲ್ಲಿ ನಿಮಗೆ ಗಾಢವಾದ ಹಡಗು ಸಿಗುವ ಹಾಗೆ ಒಪ್ಯಾಸಿಟೀ ಸ್ಲೈಡರನ್ನು ಹೊಂದಿಸಿರಿ. |
07:26 | ನಾನು ತಕ್ಕಮಟ್ಟಿಗೆ ಉತ್ತಮವಾದ ಕೆಲಸ ಮಾಡಿದ್ದೇನೆ. |
07:30 | ಆದರೆ ಹಡಗಿನ ಮುಂಭಾಗದ ನದಿಯ ಮೇಲ್ಮೈ ಬಗೆಗೆ ನನಗೆ ಅಷ್ಟು ಸಂತೋಷವಾಗಿಲ್ಲ. |
07:37 | ನಾನು ಅದನ್ನು ಸ್ವಲ್ಪ ಹೆಚ್ಚು ಹೊಳೆಯುವಂತೆ ಮಾಡಬೇಕು. |
07:42 | ಆದ್ದರಿಂದ, x ಕೀಯನ್ನು ಒತ್ತುವದರ ಮೂಲಕ ನಾನು ‘ಫೋರ್ಗ್ರೌಂಡ್’ನ ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸುತ್ತೇನೆ. ಹಡಗಿನ ಮುಂದಿನ ನದಿಯ ಮೇಲ್ಮೈಯನ್ನು ಹಡಗಿಗಿಂತ ಕಡಿಮೆ ಗಾಢವಾಗಿಸಲು, ಅದನ್ನು ಕಪ್ಪು ಬಣ್ಣದಿಂದ ಪೇಂಟ್ ಮಾಡಲು ಆರಂಭಿಸುತ್ತೇನೆ. |
08:04 | ಈ ಇಮೇಜ್ನ ಮೇಲೆ ಕೆಲಸಮಾಡುವುದನ್ನು ಮುಗಿಸಿದ ನಂತರ ನಾನು ಈ ಪರಿಣಾಮವನ್ನು ಪರಿಶೀಲಿಸಬೇಕು ಮತ್ತು ಅದಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಬೇಕು. |
08:13 | ಈಗ ನಾನು ಮಾಡಿದ ಕೆಲಸವನ್ನು ನಾವು ಪರಿಶೀಲಿಸೋಣ. |
08:17 | ನಾನು ಝೂಮ್ ಮೋಡನ್ನು ಬಳಸಿ ಇಮೇಜ್ನಲ್ಲಿ ಝೂಮ್ ಇನ್ ಮಾಡುತ್ತೇನೆ ಮತ್ತು ಕೇವಲ ಒಪ್ಯಾಸಿಟೀ ಸ್ಲೈಡರನ್ನು ಜರುಗಿಸುವದರಿಂದ ಹಡಗನ್ನು ಸ್ವಲ್ಪ ಹೆಚ್ಚು ಗಾಢವಾಗಿ ಹಾಗೂ ಹೊಳೆಯುವಂತೆ ಮಾಡಬಹುದು. |
08:29 | ಇದು ಚೆನ್ನಾಗಿ ಕಾಣುತ್ತದೆ. ಲೇಯರನ್ನು ಮಾಸ್ಕ್ ಮಾಡಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ. |
08:38 | ಆದರೆ ಹಡಗಿನ ಬಣ್ಣವು ಸ್ವಲ್ಪ ಮಂಕಾಗಿದೆ ಎಂದೆನಿಸುತ್ತಿದೆ. ಇದು ಸಾಧ್ಯ, ಏಕೆಂದರೆ ship ಲೇಯರ್, Colour correction ಎನ್ನುವ ‘ಲೇಯರ್’ಗಳ ಮೇಲಿದೆ ಮತ್ತು ಅವುಗಳು ship ಲೇಯರ್ ಗಿಂತ ಮೊದಲು ಕೆಲಸ ಮಾಡುತ್ತಿವೆ ಆದ್ದರಿಂದ ನಾನು ship ಲೇಯರನ್ನು Colour correction ‘ಲೇಯರ್’ಗಳ ಕೆಳಗೆ ಇಡುತ್ತೇನೆ. |
08:59 | ನೀವು ಬದಲಾವಣೆಯನ್ನು ನೋಡಬಹುದು, ಈಗ ಹಡಗಿನ ಬಣ್ಣವು ತಟಸ್ಥವಾಗಿದೆ. |
09:06 | ಈಗ ನಾನು ಪೂರ್ತಿ ಇಮೇಜನ್ನು ನೋಡುತ್ತೇನೆ ಮತ್ತು Shift+ Ctrl +E, ಶಾರ್ಟ್ಕಟ್ ಕೀ ಆಗಿದೆ. |
09:14 | ಹಿನ್ನೆಲೆಯ ಬಣ್ಣ, ಹಕ್ಕಿಗಳು ಮತ್ತು ಹಡಗಿನ ಮಧ್ಯೆ ಇದು ತಕ್ಕಮಟ್ಟಿಗೆ ಒಳ್ಳೆಯ ಸಮತೋಲನವಾಗಿದೆ ಎಂದು ನನ್ನ ಭಾವನೆ. ಬಹುಶಃ ನಾನು ಹಡಗಿನ ತೀವ್ರತೆಯನ್ನು ಸ್ವಲ್ಪ ಕೆಳಗಿಳಿಸಬೇಕು. |
09:28 | ಇದು ಚೆನ್ನಾಗಿ ಕಾಣುತ್ತಿದೆ. |
09:38 | ಇದು ಅತ್ಯುತ್ತಮವಾಗಿದೆ ಎಂದು ನನ್ನ ಭಾವನೆ. |
09:45 | ಗಾಢಗೊಳಿಸದೆ ಇರುವಾಗ ಮತ್ತು ship ಲೇಯರ್ ಇರುವಾಗ ಪಡೆದ ಇಮೇಜಗಳನ್ನು ನಾನು ಹೋಲಿಸಿದಾಗ, ship ಲೇಯರ್ನಲ್ಲಿ ಹಕ್ಕಿಗಳು ಮತ್ತು ಹಡಗು ತಕ್ಕಮಟ್ಟಿಗೆ ಗಾಢವಾಗಿವೆ. ಈ ಇಮೇಜ್ ಗಾಗಿ ಲೇಯರ್ ಮಾಸ್ಕನ್ನು ಬಳಸಿ ಉತ್ತಮವಾದ ಫಲಿತಾಂಶವನ್ನು ಪಡೆದಿದ್ದೇನೆಂದು ನಾನು ಭಾವಿಸುತ್ತೇನೆ. |
10:00 | ಎಲ್ಲ ಲೇಯರ್ ಟೂಲ್ಗಳ ಸಹಾಯದಿಂದ ನಾನು ಪರಿಣಾಮಗಳನ್ನು ಯಾವಾಗಲಾದರೂ ಬದಲಾಯಿಸಬಹುದು. |
10:08 | ಲೇಯರ್ ಮಾಸ್ಕನ್ನು ನಾನು ಬಹಳ ಚೂಪಾದ ತುದಿಯಿಂದ ಪೇಂಟ್ ಮಾಡಿದ್ದೆ ಎನ್ನುವುದು ಬಹುಮಟ್ಟಿಗೆ ಮರೆತುಬಿಟ್ಟಿದ್ದೆ. ನಾನು ಇಮೇಜ್ನಲ್ಲಿ ಝೂಮ್ ಇನ್ ಮಾಡಿದಾಗ ಅಲ್ಲಿ ಗಡುಸಾದ ಅಂಚು ಇರುವದನ್ನು ನೀವು ನೋಡಬಹುದು ಮತ್ತು ನನಗೆ ಅದು ಸ್ವಲ್ಪ ನಯವಾದದ್ದು ಬೇಕಾಗಿದೆ. |
10:27 | ಏಕೆಂದರೆ ಇದು ಸ್ವಲ್ಪ ಕೃತಕವಾಗಿ, ವಿಶೇಷವಾಗಿ ಮಬ್ಬಾದ ದೃಶ್ಯದಲ್ಲಿ, ಕಾಣಬಹುದು. |
10:36 | ಅದಕ್ಕಾಗಿ, ಇದನ್ನು ಸ್ವಲ್ಪ ಎಡಿಟ್ ಮಾಡಲು ನಾನು ಲೇಯರ್ ಮಾಸ್ಕನ್ನು ಆಯ್ಕೆಮಾಡುತ್ತೇನೆ, ಟೂಲ್ ಬಾರ್ ನಿಂದ Filter ಎನ್ನುವುದನ್ನು ಆರಿಸಿಕೊಳ್ಳುತ್ತೇನೆ ಮತ್ತು ಅದರಲ್ಲಿ Blur ಎನ್ನುವುದನ್ನು ಆಯ್ಕೆಮಾಡುತ್ತೇನೆ. |
10:49 | Blur ನಲ್ಲಿ ನಾನು Gaussian Blur ಎನ್ನುವುದನ್ನು ಆರಿಸಿಕೊಳ್ಳುತ್ತೇನೆ ಮತ್ತು ಹಡಗಿನ ಈ ಭಾಗದಲ್ಲಿ ಹೋಗುತ್ತೇನೆ. Horizontal Radius ಎನ್ನುವುದರ ವ್ಯಾಲ್ಯೂವನ್ನು 4 ಕ್ಕೆ ಇಳಿಸುತ್ತೇನೆ ಮತ್ತು OK ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ ಹಾಗೂ ಲೇಯರ್ ಮಾಸ್ಕನ್ನು ಅಸ್ಪಷ್ಟಗೊಳಿಸುತ್ತೇನೆ. ಇದರ ಪರಿಣಾಮವಾಗಿ ಹಡಗಿನ ಗಡುಸಾದ ಅಂಚು ಹೋಗಿ ಈಗ ಇದು ಚೆನ್ನಾಗಿ ಕಾಣುತ್ತಿರುವದನ್ನು ನೀವು ನೋಡಬಹುದು. |
11:16 | ಈಗ ನಾನು ಇಮೇಜನೊಂದಿಗೆ ಕೆಲವು ಸರಿಪಡಿಸುವ ಕೆಲಸಗಳನ್ನು ಮಾಡಲು ಸಿದ್ಧನಾಗಿದ್ದೇನೆ. |
11:22 | ನೀವು ಇಮೇಜನ್ನು ನೋಡಿದಾಗ, ಇಲ್ಲಿ, ನೀರಿನಲ್ಲಿ ಮರದ ತುಂಡೊಂದನ್ನು ಮತ್ತು ಎಡಭಾಗದಲ್ಲಿ ಅಂಚಿನ ಹತ್ತಿರ ಕತ್ತರಿಸಲ್ಪಟ್ಟ ಹಕ್ಕಿಯ ಅರ್ಧಭಾಗವನ್ನು ಕಾಣಬಹುದು. ನಾನು ಅವುಗಳನ್ನು ಕ್ಲೋನ್ ಮಾಡಬಯಸುತ್ತೇನೆ. |
11:40 | ಆದ್ದರಿಂದ ನಾನು ಮತ್ತೆ Zoom Tool ಅನ್ನು ಆರಿಸಿಕೊಳ್ಳುತ್ತೇನೆ ಮತ್ತು ಮರದ ತುಂಡು ಇರುವ ಭಾಗದಲ್ಲಿ ಝೂಮ್ ಇನ್ ಮಾಡುತ್ತೇನೆ. ಈಗ Healing Tool ಎನ್ನುವುದನ್ನು ಆರಿಸಿಕೊಳ್ಳುತ್ತೇನೆ. |
11:51 | ಹೀಲಿಂಗ್ ಟೂಲ್, ಸ್ವಲ್ಪ ಕ್ಲೋನ್ ಟೂಲ್ನ ಹಾಗೇ ಇದೆ ಆದರೆ ಈ ಸಂದರ್ಭದಲ್ಲಿ ಅದು ಇನ್ನೂ ಚೆನ್ನಾಗಿ ಕೆಲಸ ಮಾಡುತ್ತದೆ. |
12:00 | ಹೀಲಿಂಗ್ ಟೂಲ್ಅನ್ನು ಆಯ್ಕೆಮಾಡಿದಾಗ ನನಗೆ ಮೌಸ್ ಪಾಯಿಂಟ್ ಇರುವ ಒಂದು ವರ್ತುಲವು ಸಿಗುತ್ತದೆ. ಆದರೆ ನನಗೆ ಇಮೇಜ್ನಲ್ಲಿ ಕ್ಲಿಕ್ ಮಾಡಲು ಸಾಧ್ಯವಿಲ್ಲ ಮತ್ತು ಮೌಸ್ ಪಾಯಿಂಟ್ನಲ್ಲಿ ನಿಷೇಧಿತ ಚಿನ್ಹೆಯಿದೆ. |
12:12 | ನಿಷೇಧಿತ ಚಿನ್ಹೆಯಿರುವ ಕಾರಣವೇನೆಂದರೆ ನಾನು ಹೀಲ್ ಸೋರ್ಸನ್ನು ಆಯ್ಕೆಮಾಡಿಲ್ಲ. ಇದನ್ನು ನಾನು Ctrl ಮತ್ತು ಕ್ಲಿಕ್ ನೊಂದಿಗೆ ಮಾಡಬಹುದು. |
12:22 | ನಾನು ಒಂದು ಒಳ್ಳೆಯ ಹೀಲ್ ಸೋರ್ಸನ್ನು ಆಯ್ಕೆಮಾಡಬೇಕು, ನಂತರ Ctrl ಮತ್ತು ಕ್ಲಿಕ್ ಅನ್ನು ಒತ್ತಬೇಕು. ಇದು ಹೀಲ್ ಸೋರ್ಸಗಾಗಿ ಉತ್ತಮವಾದ ಸ್ಥಳವೆಂದು ನನ್ನ ಭಾವನೆ. ಈಗ ಮರದ ಭಾಗದ ಮೇಲೆ ಕ್ಲಿಕ್ ಮಾಡುತ್ತೇನೆ. |
12:38 | ಇಲ್ಲಿ ಒಂದು ಸಮಸ್ಯೆ ಆಗಿದೆ. |
12:40 | ಮತ್ತು ಇಲ್ಲಿಯ ಸಮಸ್ಯೆ ಏನೆಂದರೆ ನಾನು ತಪ್ಪು ಲೇಯರ್ನಲ್ಲಿ ಕೆಲಸ ಮಾಡುತ್ತಿದ್ದೇನೆ. |
12:45 | ನಾನು ಬ್ಯಾಕಗ್ರೌಂಡ್ ಲೇಯರ್ನಲ್ಲಿ ಕೆಲಸ ಮಾಡಬೇಕು ಮತ್ತು ನಾನು ಲೇಯರ್ ಮಾಸ್ಕ್ಅನ್ನು ಎಡಿಟ್ ಮಾಡಲು ಪ್ರಯತ್ನಿಸುತ್ತಿದ್ದೆ. |
12:51 | ನಾನು ಬ್ಯಾಕಗ್ರೌಂಡ್ ಲೇಯರನ್ನು ಖಂಡಿತವಾಗಿಯೂ ಆರಿಸಿಕೊಳ್ಳಬೇಕು ಮತ್ತು ಆ ಲೇಯರ್ನ ಒಂದು ‘ಕಾಪಿ’ಯನ್ನು ಮಾಡಬೇಕು. ಏಕೆಂದರೆ ನನಗೆ ಮೂಲ ಬ್ಯಾಕಗ್ರೌಂಡ್ ಲೇಯರನ್ನು ಮಾರ್ಪಡಿಸುವದು ಬೇಕಾಗಿಲ್ಲ. |
13:01 | ಈಗ ನಾವು ಹೀಲಿಂಗ್ ಟೂಲನ್ನು ಮತ್ತೆ ಪ್ರಯತ್ನಿಸೋಣ. |
13:05 | ಈಗ ನಾನು ಇನ್ನೊಂದು ತಪ್ಪು ಮಾಡಿದ್ದೇನೆ. |
13:09 | ಮೇಲಿನ ಈ ಬೂದುಬಣ್ಣದ ಲೇಯರ್, ನನ್ನ ಸೋರ್ಸ್ ಆಗಿತ್ತು. |
13:13 | ನಾನು ಇದನ್ನು ಖಂಡಿತವಾಗಿಯೂ Undo ಮಾಡುತ್ತೇನೆ ಹಾಗೂ ಇಲ್ಲಿ ಒಂದು ಹೊಸ ಸೋರ್ಸ್ಅನ್ನು ಆಯ್ಕೆಮಾಡುತ್ತೇನೆ. ಸರಿ, ಅದನ್ನು ಇಲ್ಲಿ ತರುತ್ತೇನೆ ಹಾಗೂ ಇಲ್ಲಿ ಕ್ಲಿಕ್ ಮಾಡುತ್ತೇನೆ. ಅದು ಹೋಗಿಬಿಟ್ಟಿದೆ. |
13:25 | ಈ ಭಾಗಕ್ಕಾಗಿ, ನಾನು ಈ ಭಾಗವನ್ನು ಸೋರ್ಸ್ ಎಂದು ಆರಿಸಿಕೊಳ್ಳುತ್ತೇನೆ ಹಾಗೂ ಕ್ಲಿಕ್ ಮಾಡುತ್ತೇನೆ ಮತ್ತು ಅದು ಹೋಗಿದ್ದನ್ನು ನೀವು ನೋಡಬಹುದು. |
13:36 | ನಾವು ಇಮೇಜನ್ನು 100% ಮೋಡ್ನಲ್ಲಿ ನೋಡೋಣ. |
13:40 | ಇದು ಸಾಕಷ್ಟು ಚೆನ್ನಾಗಿ ಕಾಣುತ್ತದೆ. ಬಹುಶಃ ನಾನು ಇದನ್ನು ಇನ್ನೂ ಸ್ವಲ್ಪ ದೊಡ್ಡ ಬ್ರಶ್ ನಿಂದ ಮಾಡಬೇಕಾಗಿತ್ತು. ಏಕೆಂದರೆ ಈ ಚುಕ್ಕೆಗಳು ಈಗಲೂ ಒಟ್ಟಿಗೆ ಇರುತ್ತವೆ. |
13:53 | ಆದ್ದರಿಂದ ನಾನು ಮತ್ತೆ Healing Tool ಎನ್ನುವುದನ್ನು ಆಯ್ಕೆಮಾಡುತ್ತೇನೆ ಮತ್ತು ಸೋರ್ಸನ್ನು ಆಯ್ಕೆಮಾಡುತ್ತೇನೆ ಹಾಗೂ ಆ ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿದ್ದೇನೆ. |
14:05 | ಅದು ಕೆಲಸ ಮಾಡಿದೆ ಎಂದು ನನ್ನ ಭಾವನೆ. |
14:09 | ಈಗ ಎಡಭಾಗದಲ್ಲಿರುವ ಈ ಅರ್ಧ ಕತ್ತರಿಸಲ್ಪಟ್ಟ ಹಕ್ಕಿಯನ್ನು ನಾನು ಕಣ್ಮರೆಯಾಗಿಸಬೇಕು. |
14:15 | ಇದಕ್ಕಾಗಿ, ಇಲ್ಲಿ, ಇಮೇಜ್ನಲ್ಲಿ ಮತ್ತೆ ನಾನು ಝೂಮ್ ಮಾಡುತ್ತೇನೆ ಮತ್ತು Clone Tool ಎನ್ನುವುದನ್ನು ಆಯ್ಕೆಮಾಡುತ್ತೇನೆ. |
14:23 | ಕ್ಲೋನಿಂಗ್ ಟೂಲ್, ಹೀಲಿಂಗ್ ಟೂಲ್ನಂತೆ ಜಟಿಲವಾಗಿಲ್ಲ. ಈ ಟೂಲ್, ಗಿಂಪ್ ನಲ್ಲಿ ಹೊಸದಾಗಿರುವದರಿಂದ ನನಗೆ ಇದನ್ನು ಬಳಸುವಲ್ಲಿ ನಿಜವಾಗಿಯೂ ಸಾಕಷ್ಟು ಅನುಭವ ಇಲ್ಲ. |
14:36 | ಹೀಗಾಗಿ ನಾನು ಹೀಲಿಂಗ್ ಟೂಲ್ಗಾಗಿ ಬಳಸುವ ವಿಧಾನವನ್ನೇ ಅನುಸರಿಸಬೇಕು. ನಾನು ಇಲ್ಲಿ ‘ಸೋರ್ಸ್’ಗಾಗಿ ಕ್ಲಿಕ್ ಮಾಡುತ್ತೇನೆ, ಇಲ್ಲಿ ಹಕ್ಕಿಯ ಮೇಲೆ ಕ್ಲಿಕ್ ಮಾಡುತ್ತೇನೆ. ಇದು ಕೆಲಸ ಮಾಡುತ್ತದೆ ಎಂದು ನನ್ನ ಭಾವನೆ. |
14:49 | ಮರಳಿ 100% ಕ್ಕೆ. ಪರಿಪೂರ್ಣವಾಗಿದೆ ,ಈ ಹಕ್ಕಿ ಹೋಗಿಬಿಟ್ಟಿದೆ. |
14:55 | ನನಗೆನಿಸುವಂತೆ ಈ ಇಮೇಜ್ ಈಗ ತಯಾರಾಗಿದೆ. |
15:00 | ಮೊದಲು ನನಗೆ ಈ ಇಮೇಜನ್ನು ಸ್ವಲ್ಪ ಹೆಚ್ಚು ಹೊಳೆಯುವಂತೆ ಮಾಡಬೇಕಾಗಿತ್ತು. ಆದರೆ ಅದನ್ನು ಕೊನೆಯ ‘ಸ್ಟೆಪ್’ನಂತೆ ಮಾಡಬೇಕೆಂಬುದು ನನ್ನ ವಿಚಾರ. ಈಗ ಇರುವಂತೆಯೇ ಅದು ಕೆಲಸ ಮಾಡುತ್ತದೆ ಎಂದು ನನ್ನ ಎಣಿಕೆ. |
15:13 | ಈ ಇಮೇಜ್ ನಿಂದ ಪೋಸ್ಟರ್ ಅನ್ನು ಪಡೆಯಲು ನನಗೆ ಅದನ್ನು ಪ್ರಿಂಟ್ ಮಾಡಲು ಕೊಡಬೇಕಾಗಿದೆ. |
15:19 | ಪ್ರಿಂಟರ್, 3:2 ಅನ್ನು ಆಸ್ಪೆಕ್ಟ್ ರೇಶಿಯೋ ಆಗಿ ಉಪಯೋಗಿಸುತ್ತದೆ ಹಾಗೂ ಈ ಇಮೇಜ್, 2:1 ಅನ್ನು ಆಸ್ಪೆಕ್ಟ್ ರೇಶಿಯೋ ಆಗಿ ಪಡೆದಿದೆ. ಹೀಗಾಗಿ ಈಗ ನಾನು ಅದನ್ನು ಬದಲಾಯಿಸಬೇಕು. |
15.33 | ನಾನು ಇದನ್ನು Canvas Size ನ ಸಹಾಯದಿಂದ ಮಾಡಬಹುದು. ಇದು ಟೂಲ್ ಬಾರ್ ನ Image ಎನ್ನುವುದರಲ್ಲಿ ಇರುತ್ತದೆ. |
15:40 | ನಾನು Canvas Size ಅನ್ನು ಆಯ್ಕೆಮಾಡುತ್ತೇನೆ. ಇಮೇಜ್, 1868 ಪಿಕ್ಸೆಲ್ ಗಳಷ್ಟು ಅಗಲವಾಗಿದೆ ಹಾಗೂ ಎತ್ತರ 945 ಆಗಿದೆ ಎಂದು ನೋಡುತ್ತೇನೆ. ರೇಶಿಯೋವನ್ನು ಕಂಡುಹಿಡಿಯಲು ನಾನು ನನ್ನ ಕ್ಯಾಲ್ಕುಲೇಟರನ್ನು ಬಳಸುತ್ತೇನೆ. |
15:58 | ಆದ್ದರಿಂದ ನಾನು 1868 ನ್ನು 3 ರಿಂದ ಭಾಗಿಸುತ್ತೇನೆ, ನಂತರ 2 ರಿಂದ ಗುಣಿಸುತ್ತೇನೆ. ಇದು ನನಗೆ 1245 ಅನ್ನು ಕೊಡುತ್ತದೆ. |
16:15 | ಇಲ್ಲಿ ಇದನ್ನು ನಾನು ‘ಅನ್-ಚೈನ್’ ಮಾಡಬೇಕು. ಇಲ್ಲವಾದರೆ ಅಗಲವೂ ಸಹ ಬದಲಾಯಿಸುವದು. Height ಎನ್ನುವಲ್ಲಿ 1245 ಎಂದು ಟೈಪ್ ಮಾಡಬೇಕು. |
16:27 | ಈಗ ಇಮೇಜ್, ಸರಿಯಾಗಿದೆ. |
16:30 | ಇದು ಮೇಲೆ ಸರಿಹೊಂದುವುದು ಮತ್ತು ಕೆಳಗೆ ಒಂದು ಬಿಳಿ ಬಣ್ಣದ ಪಟ್ಟಿಯನ್ನು ಬಿಡುವುದು. ನಾನು ಲೇಯರ್ಗಳನ್ನು ರಿಸೈಜ್ ಮಾಡುವದಿಲ್ಲ. OK ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ. ಈಗ ನಾನು ಕೆಳಗಡೆ ಏನೂ ಇಲ್ಲದಿರುವ ಇಮೇಜನ್ನು ಪಡೆದಿದ್ದೇನೆ. |
16:46 | ನಾನು ಕೆಳಗಿನ ಭಾಗವನ್ನು ತುಂಬಬೇಕು ಮತ್ತು ಇದಕ್ಕಾಗಿ ನಾನು Layer Fill Type ಎನ್ನುವದರಲ್ಲಿ White ಅನ್ನು ಹೊಂದಿದ ಹೊಸ ಲೇಯರನ್ನು ಆರಿಸಿಕೊಳ್ಳುತ್ತೆನೆ. ಈ ಲೇಯರನ್ನು ಅತ್ಯಂತ ಕೆಳಗಿನ ಲೇಯರ್ ಎಂದು ಉಪಯೋಗಿಸುತ್ತೇನೆ. |
17:06 | ಕೆಳಗಿನ ಈ ಬಿಳಿ ಬಣ್ಣದ ಭಾಗವು ಆನಂತರ ತೆಗೆದುಹಾಕಲ್ಪಡುವುದು. |
17:10 | ಆದರೆ ಪ್ರಿಂಟರ್ ಗಾಗಿ ಇದನ್ನು ನಾನು ಸುಳಿವಿನಂತೆ ಬಳಸಬಹುದು. |
17:15 | ಪ್ರಿಂಟರ್ ಎನ್ನುವುದು ಹಿಂದುಗಡೆ ಪ್ರಿಂಟ್ ಎಂಜಿನ್ ಹೊಂದಿದ ಒಂದು ಕಂಪ್ಯೂಟರ್ ಆಗಿರುತ್ತದೆ. ಇದನ್ನು ಹೇಗೆ ನಿರ್ವಹಿಸಬೇಕೆಂಬ ಸೂಚನೆಗಳನ್ನು ಪಡೆಯಲು ಪರೀಕ್ಷಿಸಿರಿ. |
17:25 | ಈ ಇಮೇಜ್, ಇಲ್ಲಿ ತುಂಬಾ ಅಸಹಜವಾಗಿದೆ, ಇದು ಹೆಚ್ಚೂಕಮ್ಮಿ ಕಪ್ಪು ಬಿಳುಪು ಆಗಿದೆ ಮತ್ತು ಸಾಕಷ್ಟು ಕಾಂಟ್ರಾಸ್ಟ್ಅನ್ನು ಹೊಂದಿಲ್ಲ. |
17:36 | ನಾನು ಇಲ್ಲಿ, ಪೂರ್ತಿ ಇಮೇಜ್ನ ಮೇಲೆ, Rectangle ಅನ್ನು ಆಯ್ಕೆಮಾಡುತ್ತೇನೆ. Blend Tool ಅನ್ನು ಆಯ್ಕೆಮಾಡುತ್ತೇನೆ, ತುಂಬಿದ Gradient ಅನ್ನು, ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ, ಸೆಟ್ ಮಾಡುತ್ತೇನೆ. |
17:52 | ಈಗ, ಇಲ್ಲಿ, ಇದನ್ನು ನಾನು ಗ್ರೇಡಿಯಂಟ್ ನಿಂದ ತುಂಬುತ್ತೇನೆ. |
17:57 | ಸುಮ್ಮನೆ ಕ್ಲಿಕ್ ಮಾಡಿ ಒಂದು ಗೆರೆಯನ್ನು ಡ್ರಾ ಮಾಡುತ್ತೇನೆ. ಈಗ ನಾನು ಈ ಆಯತಾಕಾರದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದಿಂದ ಪೂರ್ತಿ ಬಣ್ಣದ ಶ್ರೇಣಿಯನ್ನು ಪಡೆದಿದ್ದೇನೆ. |
18:08 | ನಾನು ಇಲ್ಲಿ ಕಪ್ಪಿನಿಂದ ಪೂರ್ತಿ ಬಿಳಿ ಬಣ್ಣದ ಜಾಗವನ್ನು ಪಡೆದಿದ್ದೇನೆ. |
18:13 | ನಾನು ಇದನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ. |
18:24 | Blend ಟೂಲ್ಅನ್ನು ಇಲ್ಲಿ ಆರಿಸಿಕೊಳ್ಳುತ್ತಿದ್ದೇನೆ. ಈ ಬಾರಿ ನಾನು ಎಲ್ಲ ಬಣ್ಣಗಳ ಶ್ರೇಣಿಯನ್ನು ಹೊಂದಿರುವ, Full saturation ಎನ್ನುವ ಒಂದು ವಿಶೇಷ ಗ್ರೇಡಿಯಂಟ್ ಅನ್ನು ಬಳಸುತ್ತೇನೆ. |
18:42 | ಮತ್ತೊಮ್ಮೆ ಈ ಗ್ರೇಡಿಯಂಟ್ಅನ್ನು ತುಂಬುತ್ತೇನೆ, ಈಗ, ‘ಪ್ರಿಂಟರ್’ಗಾಗಿ ಇಮೇಜನ್ನು ಹೇಗೆ ಜೋಪಾನ ಮಾಡಬೇಕೆಂಬ ಸುಳಿವು ನನಗೆ ಸಿಕ್ಕಿದೆ. ಬಣ್ಣಗಳು ಮಾಸಿದರೆ ಇದು ಕೆಂಪು ಮತ್ತು ಇದು ಹಸಿರು ಬಣ್ಣವಾಗಿರಬಹುದು ಎಂದು ನಾನು ಯಾವಾಗಲೂ ಇಲ್ಲಿ ಹೇಳಬಹುದು. |
19:02 | ಇವತ್ತಿಗೆ ಇಷ್ಟು ಸಾಕು ಎಂದು ನಾನು ಭಾವಿಸುತ್ತೇನೆ. |
19:06 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ‘ಲಿಂಕ್’ಗೆ ಹೋಗಿರಿ info@meetthegimp.org ಅಥವಾ ಈ ಕೆಳಗಿನ ‘ಲಿಂಕ್’ನಲ್ಲಿ ಸಿಗುವ ಬ್ಲಾಗ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ meetthegimp.org ಅಥವಾ ಕೆಳಗೆ ತೋರಿಸಿದ ವೇದಿಕೆಗೆ ಬನ್ನಿರಿ. tips from the top floor |
19:26 | ನಿಮಗೆ ಏನು ಇಷ್ಟವಾಯಿತು, ನಾನು ಏನನ್ನು ಸುಧಾರಿಸಬಹುದಿತ್ತು, ನೀವು ಭವಿಷ್ಯದಲ್ಲಿ ಏನನ್ನು ನೋಡಬಯಸುವಿರಿ ಎನ್ನುವುದನ್ನು ನನಗೆ ತಿಳಿಸಿರಿ. |
19:33 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ.. |