GIMP/C2/Colours-And-Dialogs/Kannada

From Script | Spoken-Tutorial
Revision as of 10:34, 20 September 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:23 Meet The GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ. ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:32 ಇದು ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ಕಲರ್ ಡೈಲಾಗ್ ಆಗಿದೆ. ನೀವು ಬಣ್ಣಗಳನ್ನು 6 ವಿಭಿನ್ನ ರೀತಿಗಳಲ್ಲಿ ಆಯ್ಕೆಮಾಡಬಹುದು.
00:47 ಮೊದಲನೆಯ ವಿಧದಲ್ಲಿ, H, S, V, R, G, B ಎನ್ನುವ ಕೆಲವು ಸ್ಲೈಡರ್ ಗಳನ್ನು ನೀವು ನೋಡಬಹುದು ಮತ್ತು ಅವುಗಳು ಕ್ರಮವಾಗಿ Hue (ಹ್ಯೂ), Saturation (ಸ್ಯಾಚುರೇಶನ್), Value (ವ್ಯಾಲ್ಯೂ), Red (ರೆಡ್), Green (ಗ್ರೀನ್), Blue (ಬ್ಲೂ) ಎಂದು ಆಗಿವೆ.
01:04 ಇಲ್ಲಿ ನಾನು ಕಪ್ಪುಬಣ್ಣವನ್ನು ನನ್ನ ‘ಫೋರ್ಗ್ರೌಂಡ್ ಕಲರ್’ ಎಂದು ಆಯ್ಕೆಮಾಡುತ್ತೇನೆ. ಹ್ಯೂ, ಸ್ಯಾಚುರೇಶನ್, ವ್ಯಾಲ್ಯೂ, ರೆಡ್, ಗ್ರೀನ್, ಬ್ಲೂ ಇವೆಲ್ಲದರ ವ್ಯಾಲ್ಯೂ ಸೊನ್ನೆ ಆಗಿದೆ ಎಂದು ನೀವು ನೋಡಬಹುದು.
01:20 ನಾನು ‘ಹ್ಯೂ’ ದ ವ್ಯಾಲ್ಯೂವನ್ನು ಹೆಚ್ಚಿಸಿದಾಗ ಏನೂ ಬದಲಾಗುವುದಿಲ್ಲ.
01:28 ಕಪ್ಪುಬಣ್ಣವು ಕಪ್ಪಾಗಿಯೇ ಉಳಿಯುತ್ತದೆ ಏಕೆಂದರೆ ವ್ಯಾಲ್ಯೂ, ಸೊನ್ನೆ ಆಗಿದೆ ಮತ್ತು ನಾನು ವ್ಯಾಲ್ಯೂವನ್ನು ಹೆಚ್ಚಿಸಿದಾಗ ನನಗೆ ಬೂದುಬಣ್ಣದ ಬೇರೆ ಛಾಯೆ ಸಿಗುತ್ತದೆ.
01:41 ‘ವ್ಯಾಲ್ಯೂ’ ಸೊನ್ನೆ ಇರುವಾಗ ನಾನು ಸ್ಯಾಚುರೇಶನ್ ಅನ್ನು ಹೆಚ್ಚಿಸಲು ಸಾಧ್ಯವಿದೆ ಮತ್ತು ಏನೂ ಬದಲಾಗುವುದಿಲ್ಲ.
01:50 ಆದರೆ ನಾನು ಸ್ಯಾಚುರೇಶನ್ ಅನ್ನು ಹೆಚ್ಚಿಸಿದಾಗ, ಬೇರೆ ಸ್ಲೈಡರ್ ಗಳಲ್ಲಿ ಬಣ್ಣವು ಸ್ವಲ್ಪ ಬದಲಾಗುವುದನ್ನು ನೀವು ನೋಡಬಹುದು.
01:59 ನಾನು ‘ಹ್ಯೂ’ಅನ್ನು ಎಳೆದರೆ ಏನೂ ಆಗುವುದಿಲ್ಲ ಆದರೆ ನಾನು ‘ಸ್ಯಾಚುರೇಶನ್’ಅನ್ನು ಎಳೆದಾಗ ‘ವ್ಯಾಲ್ಯೂ’ದ ಬಣ್ಣವು ಒಂದು ತೆರದ ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ.
02:12 ನಿಮಗೆ HSV (ಎಚ್ ಎಸ್ ವಿ) ಸಿಸ್ಟಿಮ್ ನಿಂದ ಬಣ್ಣವನ್ನು ಆಯ್ಕೆಮಾಡಬೇಕಾಗಿದ್ದರೆ ಆಗ ಕೇವಲ ‘ಸ್ಯಾಚುರೇಶನ್’ ಮತ್ತು ‘ವ್ಯಾಲ್ಯೂ’ದ ಸ್ಲೈಡರ್ ಗಳನ್ನು ಮೇಲೆ ಎಳೆಯಿರಿ. ನಿಮಗೆ ‘ಹ್ಯೂ’ ದ ಸ್ಲೈಡರ್ ನಲ್ಲಿ ಕಾಮನಬಿಲ್ಲಿನ ವಿವಿಧ ಬಣ್ಣಗಳು ಸಿಗುತ್ತವೆ ಮತ್ತು ನೀವು ಈ ಬಣ್ಣಗಳಿಂದ ಆಯ್ಕೆಮಾಡಬಹುದು.
02:48 ಇಲ್ಲಿ, ರೆಡ್, ಗ್ರೀನ್ ಮತ್ತು ಬ್ಲೂ ಸ್ಲೈಡರ್ ಗಳಲ್ಲಿಯ ಬಣ್ಣಗಳು HSV ಸ್ಲೈಡರ್ ಗಳಿಗೆ ಅನುಗುಣವಾಗಿ ಬದಲಾಯಿಸುವುದನ್ನು ನೀವು ನೋಡಬಹುದು ಮತ್ತು ಇದರಿಂದ ಬಣ್ಣವನ್ನು ಆಯ್ಕೆಮಾಡಲು ಸುಲಭವಾಗುವುದು.
03:03 ನಿಮಗೆ ತಿಳಿಯಾದ ಬಣ್ಣವು ಬೇಕಾಗಿದ್ದರೆ ‘ಸ್ಯಾಚುರೇಶನ್’ ಸ್ಲೈಡರ್ ಅನ್ನು ಸರಿಹೊಂದಿಸಿರಿ ಮತ್ತು ನಿಮಗೆ ಗಾಢ ವರ್ಣಗಳ ಒಳ್ಳೆಯ ಮಿಶ್ರಣ ಬೇಕಾಗಿದ್ದರೆ ಅದಕ್ಕೆ ತಕ್ಕಂತೆ ‘ವ್ಯಾಲ್ಯೂ’ದ ಸ್ಲೈಡರ್ ಅನ್ನು ಜರುಗಿಸಿರಿ ಮತ್ತು ರೆಡ್, ಗ್ರೀನ್ ಅಥವಾ ಬ್ಲೂ ಸ್ಲೈಡರ್ ಗಳಲ್ಲಿಯ ಪ್ರಮಾಣವನ್ನು ಆಯ್ಕೆಮಾಡಿರಿ.
03:23 ‘ಹ್ಯೂ’, ‘ಸ್ಯಾಚುರೇಶನ್’ ಮತ್ತು ‘ವ್ಯಾಲ್ಯೂ’ ,ಇವುಗಳು ತಿಳಿದುಕೊಳ್ಳಲು ಬಹಳ ಸುಲಭವಾಗಿಲ್ಲ ಆದರೆ ಇದು ಬಣ್ಣಗಳನ್ನು ಆಯ್ಕೆಮಾಡಲು ಒಳ್ಳೆಯ ವಿಧಾನಗಳಾಗಿವೆ.
03:44 ನಿರ್ದಿಷ್ಟವಾದ ಬಣ್ಣವನ್ನು ಸೆಟ್ ಮಾಡುವಾಗ ಮಾತ್ರ ನಾನು ಈ ಡೈಲಾಗನ್ನು ಬಳಸುತ್ತೇನೆ.
03:51 ಉದಾಹರಣೆಗೆ, ಒಂದು ವೇಳೆ ನನಗೆ ನಿಖರವಾದ ಮಧ್ಯಮ ಬೂದುಬಣ್ಣ ಬೇಕಾಗಿದ್ದರೆ ಆವಾಗ ನಾನು ‘ವ್ಯಾಲ್ಯೂ’ ಸ್ಲೈಡರನ್ನು 50 ರ ವರೆಗೆ ಎಳೆಯುತ್ತೇನೆ. ಹೀಗಾಗಿ ವ್ಯಾಲ್ಯೂ, 0% ಮತ್ತು 100% ಗಳ ನಡುವೆ ವಿಭಾಗಿಸಲ್ಪಟ್ಟಿದೆ. ಮತ್ತು RGB (ಆರ್ ಜಿ ಬಿ) ಸ್ಲೈಡರ್ ನಲ್ಲಿ, ನಾನು ಸಂಖ್ಯೆಗಳನ್ನು 127 ಎಂದು ಸೆಟ್ ಮಾಡುತ್ತೇನೆ. ನಿಮಗೆ ನಿಖರವಾದ ಮಧ್ಯಮ ಬೂದುಬಣ್ಣ ಸಿಗುತ್ತದೆ.
04:28 ಈಗ ನಾವು ಬೇರೆ ಡೈಲಾಗ್ ಗಳತ್ತ ನೋಡೋಣ.
04:33 ಈ ಡೈಲಾಗ್, ‘HSV ಕಲರ್ ಮಾಡೆಲ್’ಅನ್ನು ಆಧರಿಸಿದೆ. ಮೊದಲು ನೀವು, ನಿಮಗೆ ಬೇಕಾಗಿರುವ ಬಣ್ಣವನ್ನು ವರ್ತುಲದಲ್ಲಿ ಆಯ್ಕೆಮಾಡಿ.
04:50 ಆಮೇಲೆ ತ್ರಿಕೋನದಲ್ಲಿಯ Value ಮತ್ತು Saturation, ಇವುಗಳನ್ನು ಆಯ್ಕೆಮಾಡಿ.
05:02 ‘ಹ್ಯೂ’ ಅನ್ನು ಆಯ್ಕೆಮಾಡಿದಾಗ ಇಲ್ಲಿ, ತ್ರಿಕೋನದಲ್ಲಿ ನಿಮಗೆ ಒಂದೇ ‘ಹ್ಯೂ’ಗೆ, ‘ವ್ಯಾಲ್ಯೂ’ ಮತ್ತು ‘ಸ್ಯಾಚುರೇಶನ್’ಗಳ ವಿಭಿನ್ನ ವ್ಯಾಲ್ಯೂಗಳು ಸಿಗುತ್ತವೆ.
05:22 ಮುಂದಿನ ಡೈಲಾಗ್, ಇಲ್ಲಿ, ಇದರಂತೆಯೇ ಇರುತ್ತದೆ.
05:27 ಈ ಡೈಲಾಗ್ ನಲ್ಲಿ, ‘ಹ್ಯೂ’ಅನ್ನು ಆಯ್ಕೆಮಾಡಲು ನಿಮಗೆ ಒಂದು ಪಟ್ಟಿ ಸಿಗುತ್ತದೆ. ಈ ಚೌಕದಲ್ಲಿ, ತ್ರಿಕೋನದಲ್ಲಿರುವ ಬಣ್ಣವೇ ನಿಮಗೆ ಸಿಗುತ್ತದೆ. ಈಗ ನೀವು, ನಿಮ್ಮ ಬಣ್ಣವನ್ನು ಇಲ್ಲಿ, ಈ ಜಾಗದಿಂದ ಆಯ್ಕೆಮಾಡಬಹುದು ಅಥವಾ ಇಲ್ಲಿ ‘ಹ್ಯೂ’ಅನ್ನು ಬದಲಾಯಿಸಬಹುದು ಮತ್ತು ಹೊಸ ಬಣ್ಣವನ್ನು ಆಯ್ಕೆಮಾಡಬಹುದು.
05:58 ಇಲ್ಲಿ ನೀವು ‘ಸ್ಯಾಚುರೇಶನ್’ಗೆ ಸಹ ಬದಲಾಯಿಸಬಹುದು.
06:02 ‘ವ್ಯಾಲ್ಯೂ’ ಹಾಗೂ ‘ಹ್ಯೂ’ಗಳನ್ನು ಈ ರೀತಿ ಜರುಗಿಸುವದರಿಂದ ಆದ ಸಂಯೋಜನೆಯನ್ನು ಆಯ್ಕೆಮಾಡಿರಿ.
06:12 ಇಲ್ಲಿ, ಬಲವಾದ ಬಣ್ಣವನ್ನು ಪಡೆಯಲು ನೀವು ವ್ಯಾಲ್ಯೂವನ್ನು ಸೆಟ್ ಮಾಡಬಹುದು ಮತ್ತು ಅದಕ್ಕೆ ತಕ್ಕಂತೆ ‘ಸ್ಯಾಚುರೇಶನ್’ ಹಾಗೂ ‘ಹ್ಯೂ’ ಗಳನ್ನು ಬದಲಾಯಿಸಬಹುದು.
06:33 ಅದೇ ರೀತಿಯಲ್ಲಿ, Red,Green ಮತ್ತು Blue ಗಳಿಗಾಗಿ ಇದು ಕೆಲಸ ಮಾಡುತ್ತದೆ.
06:40 ನನಗೆ ಬೇಕಾಗಿರುವ ಬಣ್ಣಗಳಲ್ಲಿ ನಾನು ನೀಲಿ ಬಣ್ಣದ ಪ್ರಮಾಣವನ್ನು ಬದಲಾಯಿಸಬಹುದು. ಆನಂತರ ಕೆಂಪು ಮತ್ತು ಹಸಿರು ಬಣ್ಣಗಳ ಪ್ರಮಾಣವನ್ನು ಸಹ ಅದೇ ರೀತಿಯಲ್ಲಿ ಬದಲಾಯಿಸಬಹುದು.
06:55 ಈ ಡೈಲಾಗ್, ಹಿಂದಿನ ‘ಡೈಲಾಗ್’ನಷ್ಟು ವಿನೂತನವಾಗಿಲ್ಲ.
07:01 ಮುಂದಿನ ಡೈಲಾಗ್, ‘ವಾಟರ್ ಕಲರ್ ಮಿಕ್ಸ್ ಅಪ್’ ಎನ್ನುವುದು ಆಗಿದೆ.
07:10 ಇಲ್ಲಿ, ಈ ಸ್ಲೈಡರ್, ‘ಕಲರ್ ಪಾಟ್ಸ್’ ನಲ್ಲಿ ‘ಟಿಪ್ಪಿಂಗ್’ ನ ತೀವ್ರತೆಯನ್ನು ಹೊಂದಿಸುತ್ತದೆ.
07:18 ನೀವು ಈ ಬಾಕ್ಸ್ ನಿಂದ ಬಣ್ಣವನ್ನು ಆಯ್ಕೆಮಾಡಬಹುದು.
07:32 ಇಲ್ಲಿ, ಇದು ಫಲಿತ ಬಣ್ಣವಾಗಿದೆ.
07:37 ನೀವು ಒಂದು ಬಣ್ಣವನ್ನು ಆಯ್ಕೆಮಾಡಬಹುದು, ಈ ಹಳದಿ ಬಣ್ಣವನ್ನು, ಎಂದು ತಿಳಿಯೋಣ. ಈಗ ನಾನು ಇದಕ್ಕೆ ಸ್ವಲ್ಪ ನೀಲಿಯನ್ನು ಸೇರಿಸಬಹುದು ಹಾಗೂ ಸ್ವಲ್ಪ ಕೆಂಪು ಬಣ್ಣವನ್ನು ಸಹ. ಇದರ ಪರಿಣಾಮವಾಗಿ ನಿಮಗೆ ಸಿಗುವ ಬಣ್ಣ ಮಸುಕಾಗಿದೆ.
07:56 ನಾನು ಈ ಡೈಲಾಗ್ ಅನ್ನು ಪದೇಪದೇ ಉಪಯೋಗಿಸುವದಿಲ್ಲ.
08:02 ಈ ಡೈಲಾಗ್, ‘ಆಕ್ಟಿವ್ ಪ್ಯಾಲೆಟ್’ಅನ್ನು ತೋರಿಸುತ್ತದೆ ಮತ್ತು ಪ್ಯಾಲೆಟ್’ಅನ್ನು ಬೇರೆ ಎಲ್ಲಿಯಾದರೂ ನೀವು ಸೆಟ್ ಮಾಡಬಹುದು.
08:10 ಇದು ‘ಗ್ರಾಫಿಕ್ ಡಿಸೈನಿಂಗ್’ ಮತ್ತು ‘ವೆಬ್ ಡಿಸೈನಿಂಗ್’ಗಳಿಗೆ ಮಾತ್ರ ಉಪಯುಕ್ತವಾಗಿದೆ. ನಾನು ಈ ‘ಡೈಲಾಗ್’ನೊಂದಿಗೆ ನಿಜವಾಗಿಯೂ ಹೆಚ್ಚು ಕೆಲಸ ಮಾಡಿಲ್ಲ.
08:20 ಇನ್ನೊಂದು ವಿಷಯವನ್ನು ವಿವರಿಸುವುದು ಉಳಿದಿದೆ, ಅದು ಇಲ್ಲಿಯ ‘ಪ್ರಿಂಟರ್ ಕಲರ್ಸ್’ ಎನ್ನುವುದು ಆಗಿದೆ.
08:31 ಈ ಡೈಲಾಗ್, ವೃತ್ತಿಪರ ಪ್ರಿಂಟರ್ ಗಳಿಗೆ ಮಾತ್ರ ಉಪಯುಕ್ತವಾಗಿದೆ ಎಂದು ನನ್ನ ಭಾವನೆ. ಪ್ರಿಂಟರ್ ಗಳು, ರೆಡ್,ಗ್ರೀನ್ ಮತ್ತು ಬ್ಲೂ ಗಳ ಬದಲಿಗೆ ಸಯಾನ್, ಮಜೆಂಟಾ ಮತ್ತು ಹಳದಿ ಬಣ್ಣಗಳನ್ನು ಬಳಸುತ್ತವೆ ಏಕೆಂದರೆ ಅವು ಬಣ್ಣಗಳನ್ನು ಸಬ್ಸ್ಟ್ರ್ಯಾಕ್ಟ್ (substract) ಮಾಡುತ್ತವೆ.
08:54 ರೆಡ್, ಗ್ರೀನ್ ಹಾಗೂ ಬ್ಲೂ ಗಳು ಬೆರೆತು ಬಿಳಿ ಬಣ್ಣವಾಗುತ್ತವೆ. ‘ಪ್ರಿಂಟಿಂಗ್’ ಜೊತೆಗೆ ಸಯಾನ್, ಮಜೆಂಟಾ ಮತ್ತು ಹಳದಿ ಬಣ್ಣಗಳನ್ನು ನಾನು ಸೊನ್ನೆಗೆ ಸೆಟ್ ಮಾಡಿದರೆ ಸುಮ್ಮನೆ ಬಿಳಿ ಬಣ್ಣದ ಪೇಪರ್ ಪ್ರಿಂಟ್ ಆಗುತ್ತದೆ.
09:11 ನನಗೆ ಕಪ್ಪುಬಣ್ಣವನ್ನು ಪ್ರಿಂಟ್ ಮಾಡಬೇಕಾಗಿದ್ದರೆ ಆವಾಗ ನಾನು ಸಯಾನ್, ಮಜೆಂಟಾ ಮತ್ತು ಹಳದಿ ಬಣ್ಣಗಳನ್ನು 100 ಕ್ಕೆ ಸೆಟ್ ಮಾಡಬಹುದು ಮತ್ತು ನನಗೆ ಸಂಪೂರ್ಣ ಕಪ್ಪಾಗಿರುವ ಪೇಪರ್ ಸಿಗುತ್ತದೆ.
09:37 ಈ ಬಣ್ಣಗಳು, ಈ ‘ಡೈ’ಗಳು ಲೈಟ್ ನಿಂದ ಸಬ್ಸ್ಟ್ರ್ಯಾಕ್ಟ್ ಆಗುತ್ತವೆ ಮತ್ತು ‘ಸಯಾನ್’ ಮಾತ್ರ ಪ್ರತಿಫಲಿಸುತ್ತದೆ.
09:46 ಮತ್ತು ಅವುಗಳನ್ನು ಬೆರೆಸುವದರಿಂದ ನೀವು ಲೈಟ್ ನಿಂದ ಇನ್ನೂ ಹೆಚ್ಚು ಸಬ್ಸ್ಟ್ರ್ಯಾಕ್ಟ್ ಮಾಡಬಹುದು ಹಾಗೂ ನೀವು ಪ್ರಿಂಟ್ ಮಾಡಲು ಸಾಧ್ಯವಿರುವ ಎಲ್ಲ ಬಣ್ಣಗಳನ್ನು ಪಡೆಯಬಹುದು.
09:58 ಇಲ್ಲಿ ಕಾಣುತ್ತಿರುವ ಕೆಲವು ಬಣ್ಣಗಳನ್ನು ಪ್ರಿಂಟ್ ಮಾಡಲು ಸಾಧ್ಯವಿಲ್ಲ, ಹೀಗಾಗಿ ನಿಮ್ಮ ಫಲಿತಾಂಶವು ಬದಲಾಗುತ್ತದೆ.
10:35 ನಾಲ್ಕನೆಯ ಸ್ಲೈಡರ್, K ಎನ್ನುವುದಾಗಿದೆ, ಇದು ಕಪ್ಪು ಬಣ್ಣವನ್ನು ಪ್ರತಿನಿಧಿಸುತ್ತದೆ.
10:41 ಬ್ಲೂ ನೊಂದಿಗೆ ‘ಮಿಸ್ಮ್ಯಾಚ್’ ಆಗುವುದನ್ನು ತಪ್ಪಿಸಲು Black (ಬ್ಲಾಕ್) ಗಾಗಿ ‘K’ ಎಂದು ಸೆಟ್ ಮಾಡಲಾಗಿದೆ.
10:51 ನನ್ನ ‘ಬ್ಯಾಕ್ಗ್ರೌಂಡ್ ಕಲರ್’ ಆಗಿರುವ ಬಿಳಿ ಬಣ್ಣದ ಮೇಲೆ ನಾನು ಕ್ಲಿಕ್ ಮಾಡಿದಾಗ ಎನೂ ಬದಲಾಗಿಲ್ಲವೆಂದು ನೀವು ನೋಡಬಹುದು.
11:08 ಬಣ್ಣಗಳು ಹಾಗೆಯೇ ಇದ್ದು ‘ಸಯಾನ್’ದ ಸ್ಲೈಡರ್, ಕೆಳಗೆ ಹೋಗಿದೆ ಮತ್ತು ‘K’ ದ ಸ್ಲೈಡರ್, ಮೇಲೆ ಹೋಗಿದೆ.
11:18 ನಾವು ಇದನ್ನು ಮತ್ತೆ ಮಾಡೋಣ.
11:20 Y ಸ್ಲೈಡರ್ ಅನ್ನು 40 ಕ್ಕೆ, M ಅನ್ನು 80 ಕ್ಕೆ ಹಾಗೂ C ಅನ್ನು 20 ಕ್ಕೆ ಜರುಗಿಸಿರಿ.
11:29 ಈಗ ನಾನು ಬಣ್ಣವನ್ನು ಆಯ್ಕೆಮಾಡಿದಾಗ ನಿಮಗೆ M ಸ್ಲೈಡರ್ ಗೆ 75 ಎಂದು, Y ಸ್ಲೈಡರ್ ಗೆ 26 ಎಂದು ಹಾಗೂ K ಸ್ಲೈಡರ್ ಗೆ 20 ಎಂದು ಸಿಗುತ್ತದೆ.
11:41 ಆದ್ದರಿಂದ,ಬಣ್ಣವು ಬದಲಾಯಿಸಿಲ್ಲವೆಂದು ನೀವು ನೋಡಬಹುದು. ಆದರೆ ಇಮೇಜ್ನಲ್ಲಿ ಮೊದಲು ಇದ್ದ ಸಯಾನ್, ಮಜೆಂಟಾ ಮತ್ತು ಹಳದಿ ಬಣ್ಣಗಳ ಮಿಶ್ರಣವು ಮಜೆಂಟಾ, ಹಳದಿ ಮತ್ತು ಕಪ್ಪು ಬಣ್ಣಗಳ ಮಿಶ್ರಣವಾಗಿ ಬದಲಾಗಿದೆ.
11:59 ಕಪ್ಪು ಬಣ್ಣದ ‘ಇಂಕ್’ ಸ್ವಲ್ಪ ಅಗ್ಗವಾಗಿದೆ. ಆದ್ದರಿಂದ ಇಲ್ಲಿ ಸ್ಟ್ಯಾಟಿಕ್ ಪಾಯಿಂಟ್ಗಾಗಿ ಸಯಾನ್, ಮಜೆಂಟಾ ಮತ್ತು ಹಳದಿ ಬಣ್ಣಗಳ ಮಸುಕಾದ ಮಿಶ್ರಣದ ಬದಲಿಗೆ ಮಜೆಂಟಾ ಹಳದಿ ಮತ್ತು ಕಪ್ಪುಬಣ್ಣಗಳ ಮಿಶ್ರಣವನ್ನು ಬಳಸಲಾಗಿದೆ.
12:22 ಹೀಗೆ, ಬಣ್ಣಗಳ ಆಯ್ಕೆಯ ಆರು ಡೈಲಾಗ್ ಗಳನ್ನು ಈಗ ನಾವು ಮುಗಿಸಿದ್ದೇವೆ.
12:28 ಆದರೆ ಈ ಎರಡು ‘ಕಲರ್ ಸ್ವಾಪ್’ಗಳು ಉಳಿದಿವೆ.
12:32 ಮುಂಭಾಗದ ಬಣ್ಣವು ನನ್ನ ‘ಫೋರ್ಗ್ರೌಂಡ್ ಕಲರ್’ ಆಗಿದ್ದು ಇನ್ನೊಂದು ನನ್ನ ‘ಬ್ಯಾಕ್ಗ್ರೌಂಡ್ ಕಲರ್’ ಆಗಿದೆ. ನಾನು ಅದರ ಮೇಲೆ ಕ್ಲಿಕ್ ಮಾಡಿದಾಗ, ಇಲ್ಲಿ, ಬಣ್ಣವನ್ನು ಸೆಟ್ ಮಾಡಬಹುದು.
12:46 ನಿಮಗೆ ಈ ಬಣ್ಣಗಳು ನಿಮ್ಮ ಇಮೇಜ್ನಲ್ಲಿ ಅಥವಾ ನಿಮ್ಮ ಆಯ್ಕೆಯಲ್ಲಿ ಬೇಕಾಗಿದ್ದರೆ ಆವಾಗ ಈ ಬಣ್ಣಗಳನ್ನು ಆ ಜಾಗದಲ್ಲಿ ಸುಮ್ಮನೆ ಎಳೆಯಿರಿ, ಅದು ಈ ಬಣ್ಣದಿಂದ ತುಂಬಿಸಲ್ಪಡುವದು.
13:02 ನೀವು ಈ ‘ಕಲರ್ ಸ್ವಾಪ್’ಗಳನ್ನು ನಿಮ್ಮ ಟೂಲ್ ಬಾಕ್ಸ್ ನಲ್ಲಿ ಪಡೆಯಬಹುದು.
13:14 ಕ್ರಮವಾಗಿ File, Preferences ನಂತರ Tool box ಎನ್ನುವಲ್ಲಿಗೆ ಹೋಗಿರಿ. ಇಲ್ಲಿ ನೀವು ‘ಫೋರ್ಗ್ರೌಂಡ್ ಬ್ಯಾಕ್ಗ್ರೌಂಡ್ ಕಲರ್’ , ‘ಬ್ರಶ್’ ಮತ್ತು ‘ಆಕ್ಟಿವ್ ಇಮೇಜ’ ಎನ್ನುವುದನ್ನು ಸಹ ನೋಡಬಹುದು.
13:37 ಆಮೇಲೆ ಇದನ್ನು ನಾನು ಸ್ವಿಚ್ ಆಫ್ ಮಾಡುವೆನು ಏಕೆಂದರೆ ಇದು ನನ್ನ ಟೂಲ್ ಬಾಕ್ಸ್ನಲ್ಲಿ ತುಂಬಾ ಸ್ಥಳವನ್ನು ತೆಗೆದುಕೊಳ್ಳುತ್ತದೆ.
13:46 ‘ಕಲರ್ ಸ್ವಾಪ್ಸ್’ನ ಬಲಗಡೆಯ ಮೇಲಿನ ಮೂಲೆಯಲ್ಲಿರುವ ಈ ಐಕಾನ್, ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ಕಲರ್ ಗಳನ್ನು ಅದಲುಬದಲು ಮಾಡಲು ಇರುತ್ತದೆ.
13:56 'X' ಕೀಯನ್ನು ಒತ್ತುವದರಿಂದ ಸಹ ಇದನ್ನೇ ಮಾಡಬಹುದು.
14:03 ಕೆಳಗಿನ ಎಡಮೂಲೆಯಲ್ಲಿರುವ ಈ ಐಕಾನ್, ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ಕಲರ್ ಗಳನ್ನು ಕಪ್ಪು ಮತ್ತು ಬಿಳಿಬಣ್ಣಗಳಿಗೆ ಸೆಟ್ ಮಾಡಲು ಇರುತ್ತದೆ.
14:14 ಇದೊಂದು ಉತ್ತಮವಾದ, ಹೊಸ ವೈಶಿಷ್ಟ್ಯ ಆಗಿದೆ. ಇದು ‘ಕಲರ್ ಪಿಕ್ಕರ್’ ಆಗಿದ್ದು ನೀವು, ನಿಮಗೆ ಬೇಕಾದ ಬಣ್ಣವನ್ನು ಸ್ಕ್ರೀನ್ ನಿಂದ ಅಥವಾ ವೆಬ್ ಸೈಟ್ನಿಂದ ಸಹ ಆರಿಸಿಕೊಳ್ಳಬಹುದು.
14:31 ಕೊನೆಯದಾಗಿ, ಬಣ್ಣಗಳನ್ನು ‘ಡಿಫೈನ್’ ಮಾಡಲು, ‘ಹೆಕ್ಸ್ ಕೋಡ್’ ಇರುವ ಫೀಲ್ಡನ್ನು ನೀವು ನೋಡಬಹುದು.
14:45 ನಾನು ಬಣ್ಣವನ್ನು ಬದಲಾಯಿಸಿದಾಗ ಕೋಡ್ ಹೇಗೆ ಬದಲಾಗುವುದೆಂದು ನೀವು ನೋಡಬಹುದು. ನಾನು ‘ಹೆಕ್ಸ್ ಕೋಡ್’ ನಲ್ಲಿ ಟೈಪ್ ಮಾಡಿ ಬಣ್ಣವನ್ನು ಪಡೆಯಬಹುದು ಅಥವಾ ನೀವು ಬಣ್ಣದ ಹೆಸರನ್ನು ಟೈಪ್ ಸಹ ಮಾಡಬಹುದು.
15:06 ಉದಾಹರಣೆಗೆ,ನಾನು 'L' ಎಂದು ಟೈಪ್ ಮಾಡುತ್ತೇನೆ, ನಿಮಗೆ ಎಲ್ಲ ಬಣ್ಣಗಳು ಸಿಗುತ್ತವೆ. ಲಾನ್ ಗ್ರೀನ್, ಇದು ಲಾನ್ ಗ್ರೀನ್ ಆಗಿದೆ. ಹೀಗೆ, ಇದು ಸವಿಸ್ತಾರವಾದ ಕಲರ್ ಡೈಲಾಗ್ ಆಗಿತ್ತು.
15:19 ನಾನು ಬಹಳ ಮಾತನಾಡಿದೆನೆಂದು ಭಾವಿಸುತ್ತೇನೆ.
15:23 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Contributors and Content Editors

NaveenBhat, Sandhya.np14