BASH/C2/String-and-File-attributes/Kannada

From Script | Spoken-Tutorial
Revision as of 12:53, 26 August 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಬ್ಯಾಶ್ ನಲ್ಲಿ String and File Attributes comparison ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:10 ಈ ಟ್ಯುಟೋರಿಯಲ್ ನಲ್ಲಿ ನಾವು
00:13 * String comparison ಮತ್ತು File attributes comparison ಗಳ ಕುರಿತು ಕಲಿಯುತ್ತೇವೆ.
00:18 ನಾವು ಇದನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ.
00:22 ಈ ಪಾಠಕ್ಕಾಗಿ ನಾನು
00:25 * Ubuntu Linux 12.04 OS ಮತ್ತು
00:30 * GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:34 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:42 ಪರಿಚಯದೊಂದಿಗೆ ಪ್ರಾರಂಭಿಸೋಣ.
00:45 ಬ್ಯಾಶ್ ನಲ್ಲಿ string ಅನ್ನು ಹೋಲಿಕೆ ಮಾಡಲು ಎರಡು ವಿಧಾನಗಳಿವೆ.
00:49 1) ಮೊದಲನೆಯದು : == (ಸಮ ಸಮ ) ಆಪರೇಟರ್ ಅನ್ನು
00:53 ಎರಡು ಸಮವಾಗಿರುವ strings ಅನ್ನು ಹೋಲಿಕೆ ಮಾಡಲು, ಉಪಯೋಗಿಸುತ್ತೇವೆ
00:56 2) ಎರಡನೆಯದು : != (ಅಸಮ ) ಆಪರೇಟರ್
00:59 ಎರಡು ಸಮವಲ್ಲದ string ಗಳನ್ನು ಹೋಲಿಕೆ ಮಾಡಲು ಉಪಯೋಗಿಸುತ್ತೇವೆ.
01:03 ಈಗ ಒಂದು ಉದಾಹರಣೆಯನ್ನು ನೋಡೋಣ.
01:06 ನಾನು ಒಂದು ಸರಳ ಪ್ರೋಗ್ರಾಮ್ ಅನ್ನುಹೊಂದಿದ್ದೇನೆ ಅದು user ID ಯನ್ನು ಪರೀಕ್ಷಿಸುತ್ತದೆ.
01:11 ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ಓಪನ್ ಮಾಡಿ ಅದನ್ನು strcompare ಡಾಟ್ sh ಎಂದು ಸೇವ್ ಮಾಡಿ.
01:19 ಈಗ ನಿಮ್ಮ strcompare ಡಾಟ್ sh ನಲ್ಲಿ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
01:26 ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
01:28 ಇದು shebang line.
01:31 whoami ಕಮಾಂಡ್ ನಿಮಗೆ ಪ್ರಸ್ತುತ userusername ಅನ್ನು ಕೊಡುತ್ತದೆ.
01:36 if ಹೇಳಿಕೆಯು whoami ವೇರಿಯೇಬಲ್ ನ ಫಲಿತವನ್ನು string “root” ನೊಂದಿಗೆ ಹೋಲಿಸಿ ಪರೀಕ್ಷಿಸುತ್ತದೆ.
01:44 ನಾವು ಇಲ್ಲಿ not-equal to ಆಪರೇಟರನ್ನು string ಗಳನ್ನು ಹೋಲಿಸಲು ಬಳಸಿದ್ದೇವೆ.
01:50 ಪ್ರಸ್ತುತ ಬಳಕೆದಾರ root user, ಆಗಿರದಿದ್ದಲ್ಲಿ ಆಗ ಇದು ಈ ಹೇಳಿಕೆಯನ್ನು echo ಮಾಡುತ್ತದೆ-
01:57 “You have no permission to run strcompare ಡಾಟ್ sh as non-root user.”
02:05 ಇಲ್ಲಿ $0 (ಡಾಲರ್ ಸೊನ್ನೆ) ಇದು ಸೊನ್ನೆಯ ಆರ್ಗ್ಯುಮೆಂಟ್ ಅಂದರೆ ಅಂದರೆ ಅದು ಫೈಲ್ ನ ಹೆಸರೇ ಆಗಿರುತ್ತದೆ.
02:13 ಬಳಕೆದಾರನು root user ಆಗಿದ್ದರೆ , ಇದು “Welcome root!” ಎಂಬ ಸಂದೇಶವನ್ನು echo ಮಾಡುತ್ತದೆ.
02:18 ನಂತರ ಪ್ರೋಗ್ರಾಮ್ ಗೆ exit ಸ್ಟೇಟ್ ಮೆಂಟ್ ಅನ್ನು ಹೊಂದಿದ್ದೇವೆ.
02:23 ಮತ್ತು ಇಲ್ಲಿ fi ನಿಂದ if statement ಅನ್ನು ಮುಗಿಸುತ್ತೇವೆ.
02:28 ನಾವು ಈಗ ಪುನ ಸ್ಲೈಡ್ಸ್ ಗೆ ಹಿಂದುರಿಗಿ exit statement. ನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
02:34 ಪ್ರತಿಯೊಂದೂ ಪ್ರೋಗ್ರಾಮ್ exit status ಅನ್ನುಹಿಂದಿರುಗಿಸುತ್ತದೆ.
02:38 ಯಶಸ್ವಿ ಕಮಾಂಡ್ 0 (ಸೊನ್ನೆ) ಯನ್ನು ಹಿಂದಿರುಗಿಸುತ್ತದೆ.
02:42 ತಪ್ಪಾದ ಕಮಾಂಡ್ non-zero ಬೆಲೆಯನ್ನು ಹಿಂದಿರುಗಿಸುತ್ತದೆ.
02:47 ಇದನ್ನು error code ಎಂದು ಅರ್ಥೈಸಬಹುದು.
02:51 ನಾವು exit statement ನ ಬೆಲೆಯನ್ನು ಒಗ್ಗಿಸಿಕೊಳ್ಳಬಹುದು.
02:56 ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:58 Ctrl Alt ಮತ್ತು T ಕೀಲಿಗಳನ್ನು ಒಟ್ಟಿಗೆ ಒತ್ತಿ ನಿಮ್ಮ ಟರ್ಮಿನಲ್ ಅನ್ನು ಓಪನ್ ಮಾಡಿ.
03:08 ಮೊದಲು ಸಿಸ್ಟಮ್ ನ ಪ್ರಸ್ತುತ ಬಳಕೆದಾರರನ್ನು ಕಂಡುಹಿಡಿಯೋಣ.
03:12 whoami ಎಂದು ಟೈಪ್ ಮಾಡಿ.
03:15 Enter ಅನ್ನು ಒತ್ತಿ.
03:17 ಇದು ಪ್ರಸ್ತುತ ಬಳಕೆದಾರನ ಹೆಸರನ್ನು ಫಲಿತವನ್ನಾಗಿ ನೀಡುತ್ತದೆ.
03:21 ಈಗ ನಮ್ಮ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
03:25 chmod ಪ್ಲಸ್ x strcompare ಡಾಟ್ sh ಎಂದು ಟೈಪ್ ಮಾಡಿ.
03:32 ಡಾಟ್ ಸ್ಲ್ಯಾಶ್ strcompare ಡಾಟ್ sh ಎಂದು ಟೈಪ್ ಮಾಡಿ.
03:37 ಫಲಿತವು
03:39 You have no permission to run ಡಾಟ್ ಸ್ಲ್ಯಾಶ್ strcompare ಡಾಟ್ sh as non-root user. ಎಂದು ಡಿಸ್ಪ್ಲೇ ಆಗುತ್ತದೆ.
03:47 ಈಗ ಅದೇ ಪ್ರೋಗ್ರಾಮ್ ಅನ್ನು root user. ಆಗಿ ಎಕ್ಸಿಕ್ಯೂಟ್ ಮಾಡೋಣ.
03:52 sudo ಡಾಟ್ ಸ್ಲ್ಯಾಶ್ strcompare ಡಾಟ್ sh ಎಂದು ಟೈಪ್ ಮಾಡಿ.
03:58 ಇದು ಪಾಸ್ ವರ್ಡ್ ಅನ್ನು ಕೇಳುತ್ತದೆ.
04:01 ಇಲ್ಲಿ ನಿಮ್ಮ ಪಾಸ್ ವರ್ಡ್ ಅನ್ನು ಕೊಡಿ.
04:04 ಫಲಿತವು Welcome root! ಎಂದು ಡಿಸ್ಪ್ಲೇ ಆಗುತ್ತದೆ.
04:08 ಈಗ file attribute ಗಳ ಹೋಲಿಕೆಯನ್ನು ಕಲಿಯೋಣ.
04:13 ನಾನು ಈಗಾಗಲೇ ಇದರ ಉದಾಹರಣೆಯ ಕೋಡ್ ಅನ್ನು ಹೊಂದಿದ್ದೇನೆ.
04:17 ಈ ಪ್ರೋಗ್ರಾಂ ನಲ್ಲಿ ನಾವು ಕೊಟ್ಟಿರುವ ಫೈಲ್ ಇದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತೇವೆ.
04:23 file1 ಇದು ನಾವು ಫೈಲ್ ನ ಪಥವನ್ನು ಸೇವ್ ಮಾಡಿಕೊಳ್ಳಲು ಡಿಕ್ಲೇರ್ ಮಾಡಿರುವ ಒಂದು ವೇರಿಯೇಬಲ್.
04:29 -(ಹೈಫನ್) f ಕಮಾಂಡ್ ಇದು ಫೈಲ್ ಇದೆಯೇ ಅಥವಾ ಇಲ್ಲವೇ
04:33 ಮತ್ತು ಇದು ಒಂದು ಸಾಮಾನ್ಯ ಫೈಲೇ ಎಂದು ಪರೀಕ್ಷಿಸುತ್ತದೆ.
04:37 ಕಂಡಿಶನ್ true ಆಗಿದ್ದರೆ ಇದು File exists and is a normal file ಎಂದು ಡಿಸ್ಪ್ಲೇ ಮಾಡುತ್ತದೆ.
04:44 ಇಲ್ಲವಾದಲ್ಲಿ ಇದು File does not exis ಎಂದು ಡಿಸ್ಪ್ಲೇ ಮಾಡುತ್ತದೆ.
04:48 ಟರ್ಮಿನಲ್ ಗೆ ಹಿಂದಿರುಗಿ ನಮ್ಮ ಫೈಲ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:53 chmod ಪ್ಲಸ್ x fileattrib ಡಾಟ್ sh ಎಂದು ಟೈಪ್ ಮಾಡಿ.
05:00 ಡಾಟ್ ಸ್ಲ್ಯಾಶ್ fileattrib ಡಾಟ್ sh ಎಂದು ಟೈಪ್ ಮಾಡಿ.
05:05 ಫಲಿತವು
05:07 File exists and is a normal file ಎಂದು ಡಿಸ್ಪ್ಲೇ ಆಗುತ್ತದೆ.
05:11 ನಾವು ಈಗ ಫೈಲ್ ಖಾಲಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸೋಣ.
05:16 ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು ನಾನು empty ಡಾಟ್ sh ಎಂಬ ಖಾಲಿ ಫೈಲ್ ಅನ್ನು ರಚನೆ ಮಾಡುತ್ತೇನೆ.
05:24 gedit empty ಡಾಟ್ sh ಆಂಪ್ರಸೆಂಡ್ ಚಿಹ್ನೆ ಯನ್ನು ಟೈಪ್ ಮಾಡಿ.
05:31 Save ಮೇಲೆ ಕ್ಲಿಕ್ ಮಾಡಿ ಫೈಲ್ ಅನ್ನು ಕ್ಲೋಸ್ ಮಾಡಿರಿ.
05:35 - (ಹೈಫನ್) f ಅನ್ನು - (ಹೈಫನ್) s ಎಂದು ಬದಲಾಯಿಸಿ.
05:41 ಇಲ್ಲಿ ಫೈಲ್ ನ ಹೆಸರನ್ನು ಕೂಡ ಬದಲಿಸಿ
05:45 empty ಡಾಟ್ sh ಎಂದು ಟೈಪ್ ಮಾಡಿ
05:47 ಈಗ ಮೊದಲ echo statement ಅನ್ನು
05:51 “File exists and is not empty” ಎಂದು ಬದಲಾಯಿಸಿ.
05:54 ಮತ್ತು ಎರಡನೆಯ echo statement ಅನ್ನು
05:57 “File is empty” ಎಂದು ಬದಲಿಸಿ
05:59 Save ಮೇಲೆ ಕ್ಲಿಕ್ ಮಾಡಿ.
06:01 ಟರ್ಮಿನಲ್ ಗೆ ಹಿಂದಿರುಗಿ.
06:03 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
06:06 ಈಗ ಎಕ್ಸಿಕ್ಯೂಟ್ ಮಾಡೋಣ.
06:08 ಡಾಟ್ ಸ್ಲ್ಯಾಶ್ fileattrib ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
06:13 ಫಲಿತವು File is empty ಆಗಿರುತ್ತದೆ.
06:17 ಈಗ ನಾವು ಇನ್ನೊಂದು ಫೈಲ್ ಅಟ್ಟ್ರಿಬ್ಯೂಟ್ ಅನ್ನು ನೋಡೋಣ, ಇದು ಯಾವುದೇ ಫೈಲ್ ನ write premission ಅನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.
06:24 ನಮ್ಮ ಪ್ರೋಗ್ರಾಂ ಗೆ ಹಿಂದಿರುಗಿ.
06:26 - (ಹೈಫನ್) s ಅನ್ನು - (hyphen) w ಎಂದು ಬದಲಾಯಿಸಿ.
06:32 ಈಗ ಮೊದಲ echo statement ಅನ್ನು
06:36 “User has write permission to this file” ಎಂದು ಬದಲಾಯಿಸಿ.
06:40 ಮತ್ತು ಎರಡನೇ echo statement ಅನ್ನು
06:43 “User doesn't have write permission to this file” ಎಂದು ಬದಲಾಯಿಸಿ.
06:47 Save ಮೇಲೆ ಕ್ಲಿಕ್ ಮಾಡಿ.
06:49 ನಾನು ಈ ಉದಾಹರಣೆ ಗಾಗಿ ಬೇರೆ ಬೇರೆ ಫೈಲ್ ಅನ್ನು ತೆಗೆದುಕೊಳ್ಳುತ್ತೇನೆ.
06:53 ನಾವು ಒಂದು ಓದಲಾಗದ ಅಥವಾ write permission ಅನ್ನು ಹೊಂದಿರದ ಫೈಲ್ ಅನ್ನು ತೆಗೆದುಕೊಳ್ಳೋಣ.
07:01 ನಾನು ಈಗ filepath ಅನ್ನು
07:04 “ಸ್ಲ್ಯಾಶ್ etc ಸ್ಲ್ಯಾಶ್ mysql ಸ್ಲ್ಯಾಶ್ debian ಡಾಟ್ cnf” ಎಂದು ಬದಲಿಸುತ್ತೇನೆ.
07:10 Save ಮೇಲೆ ಕ್ಲಿಕ್ ಮಾಡಿ.
07:12 ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
07:15 up-arrow key ಯನ್ನು ಒತ್ತಿEnter ಅನ್ನು ಒತ್ತಿರಿ.
07:19 ನಾವು ಫಲಿತವು
07:21 User doesn't have write permission to this file. ಎಂದು ಡಿಸ್ಪ್ಲೇ ಆಗುವುದನ್ನು ನೋಡುತ್ತೇವೆ.
07:26 ಈಗ ಫೈಲ್ ಅಟ್ಟ್ರಿಬ್ಯೂಟ್ ನ ಕುರಿತು ಇನ್ನೊಂದು ಉದಾಹರಣೆಯನ್ನು ನೋಡೋಣ.
07:31 ಈ ಉದಾಹರಣೆಯಲ್ಲಿ ನಾವು file1 ಇದು file2 ಗಿಂತ ಹೊಸದೇ ಎಂದು ಪರೀಕ್ಷಿಸುತ್ತದೆ.
07:38 ಈಗ ಪ್ರೋಗ್ರಾಮ್ ಅನ್ನು ನೋಡೋಣ.
07:40 ಗಮನಿಸಿ ನಮ್ಮ ಫೈಲ್ ನ ಹೆಸರು fileattrib2 ಡಾಟ್ sh.
07:46 ಈಗ ಕೋಡ್ ಅನ್ನು ನೋಡೋಣ.
07:48 ಇಲ್ಲಿ ನಾವು file1 ಮತ್ತು file2 ಎಂಬ ಎರಡು ವೇರಿಯೇಬಲ್ ಗಳನ್ನು ಹೊಂದಿದ್ದೇವೆ.
07:53 ಎರಡು ಫೈಲ್ ಗಳು ಈಗಾಗಲೇ ರಚನೆಯಾಗಿವೆ ಮತ್ತು ಅವು ಖಾಲಿಯಾಗಿವೆ.
07:58 ಇಲ್ಲಿ ನಾವು file1 ಇದು file2 ಗಿಂತ ಹೊಸದೇ ಎಂದು ಪರೀಕ್ಷಿಸುತ್ತೇವೆ.
08:04 ಕಂಡಿಶನ್ true ಆಗಿದ್ದರೆ ನಾವು file1 is newer than file2 ಎಂದು ಪ್ರಿಂಟ್ ಮಾಡುತ್ತೇವೆ.
08:09 ಇಲ್ಲವಾದಲ್ಲಿ file2 is newer than file1 ಎಂದು ಪ್ರಿಂಟ್ ಮಾಡುತ್ತೇವೆ.
08:14 ಇದು ಇನ್ನೊಂದು if statement.
08:16 ಇಲ್ಲಿ ನಾವು file1 ಇದು file2 ಗಿಂತ ಹಳೆಯದೇ ಎಂದು ಪರೀಕ್ಷಿಸುತ್ತದೆ.
08:21 condition true ಆಗಿದ್ದರೆ ನಾವು file1 is older than file2 ಎಂದು ಪ್ರಿಂಟ್ ಮಾಡುತ್ತೇವೆ.
08:27 ಇಲ್ಲವಾದಲ್ಲಿ file2 is older than file1. ಎಂದು ಪ್ರಿಂಟ್ ಮಾಡುತ್ತೇವೆ.
08:32 terminal ಗೆ ಹಿಂದಿರುಗೋಣ.
08:35 ಮೊದಲು empty1 ಡಾಟ್ sh ಫೈಲ್ ಅನ್ನು ಎಡಿಟ್ ಮಾಡೋಣ.
08:39 ನಾನು ಅದರಲ್ಲಿ echo statement ಅನ್ನು ಸೇರಿಸುತ್ತೇನೆ.
08:42 echo ಡಬಲ್ ಕೋಟ್ಸ್ ನಲ್ಲಿ Hiii ಎಂದು ಟೈಪ್ ಮಾಡಿ, ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ empty1 ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
08:53 ಈಗ ನಮ್ಮ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
08:57 chmod ಪ್ಲಸ್ x fileattrib2 ಡಾಟ್ sh ಎಂದು ಟೈಪ್ ಮಾಡಿ
09:03 ಡಾಟ್ ಸ್ಲ್ಯಾಶ್ fileattrib2 ಡಾಟ್ sh ಎಂದು ಟೈಪ್ ಮಾಡಿ
09:09 ನಾವು ಫಲಿತವನ್ನು
09:11 file1 is newer than file2 ಮತ್ತು
09:15 file2 is older than file1 ಎಂದು ನೋಡಬಹುದು.
09:19 ಈಗ empty2 ಡಾಟ್ sh ಫೈಲ್ ಅನ್ನು ಎಡಿಟ್ ಮಾಡೋಣ.
09:23 ಇಲ್ಲಿ ಕೂಡ ನಾನು ಒಂದು echo statement. ಅನ್ನು ಸೇರಿಸುತ್ತೇನೆ.
09:27 echo ಡಬಲ್ ಕೋಟ್ಸ್ ನಲ್ಲಿ How are you ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ >empty2 ಡಾಟ್ sh ಎಂದು ಟೈಪ್ ಮಾಡಿ.
09:38 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
09:41 ಈಗ ಸ್ಕ್ರಿಪ್ಟ್ ಅನ್ನು ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ.
09:45 up-arrow key ಯನ್ನು ಒತ್ತಿ.
09:47 ಡಾಟ್ ಸ್ಲ್ಯಾಶ್ fileattrib2 ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
09:53 ಈಗ ಫಲಿತವು
09:55 file2 is newer than file1
09:59 ಮತ್ತು file1 is older than file2 ಎಂದು ಡಿಸ್ಪ್ಲೇ ಆಗುತ್ತದೆ.
10:03 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
10:06 ಸಾರಾಂಶವನ್ನು ನೋಡೋಣ.
10:08 ಈ ಟ್ಯುಟೋರಿಯಲ್ ನಲ್ಲಿ ನಾವು
10:11 String comparison
10:12 file attributes
10:14 ==(ಸಮ )
10:16 != (ಅಸಮ)
10:17 -f (ಹೈಫನ್ f)
10:18 -s(ಹೈಫನ್ s)
10:19 -w(ಹೈಫನ್ w)
10:21 -nt(ಹೈಫನ್ nt)
10:22 ಮತ್ತು -ot (ಹೈಫನ್ ot) ಅಟ್ಟ್ರಿಬ್ಯೂಟ್ ಗಳ ಕುರಿತು ಕಲಿತಿದ್ದೇವೆ.
10:25 ಸ್ವಂತ ಅಭ್ಯಾಸಕ್ಕಾಗಿ
10:26 ಇನ್ನು ಕೆಲವು ಅಟ್ಟ್ರಿಬ್ಯೂಟ್ ಗಳ ಕುರಿತು ತಿಳಿಯಿರಿ.
10:29 ಉದಾ : -r

-x

ಮತ್ತು -o

10:33 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
10:36 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
10:40 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
10:45 The Spoken Tutorial Project Team ಇದು
10:47 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
10:51 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:55 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
11:02 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
11:06 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
11:14 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro
11:19 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
11:25 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
11:29 ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble