BASH/C2/Arithmetic-Comparison/Kannada

From Script | Spoken-Tutorial
Revision as of 12:57, 22 August 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಬ್ಯಾಶ್ ನಲ್ಲಿ Arithmetic Comparison ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:09 * equal to
00:10 not equal to
00:12 less than
00:13 less than equal to
00:15 greater than ಮತ್ತು
00:16 greater than equal to ಕಮಾಂಡ್ ಗಳ ಕುರಿತು ಕಲಿಯುತ್ತೇವೆ.
00:19 ನಾವು ಇವುಗಳನ್ನುಕೆಲವು ಉದಾಹರಣೆಗಳೊಂದಿಗೆ ನೋಡೋಣ.
00:23 ಈ ಪಾಠಕ್ಕಾಗಿ ನಾನು
00:26 *Ubuntu Linux 12.04 OS ಮತ್ತು
00:30 *GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:34 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:39 ನಾನು ಈಗಾಗಲೇ arithmetic operator ನ ಕಾರ್ಯವಿಧಾನದ ಒಂದು ಉದಾಹರಣೆಯನ್ನು ಹೊಂದಿದ್ದೇನೆ.
00:43 ಈಗ ಅದನ್ನು ತೆರೆಯೋಣ.
00:45 ನಾನು ಈ ಫೈಲ್ ಅನ್ನು example1.sh ಎಂದು ಹೆಸರಿಸಿದ್ದೇನೆ.
00:50 ನಿಮಗಿಷ್ಟವಾದ ಯಾವುದಾದರೂ ಎಡಿಟರ್ ಅನ್ನು ತೆರೆದು ಅದರಲ್ಲಿ ಇಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿರಿ.
00:56 ಈಗಾಗಲೇ ಅದನ್ನು ಮಾಡಲು ನೀವು ತಿಳಿದಿದ್ದೀರಿ.
01:00 ಈ ಪ್ರೋಗ್ರಾಮ್ ನಲ್ಲಿ ನಾವು ಕೊಟ್ಟಿರುವ ಫೈಲ್ ಖಾಲಿಯಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇವೆ.
01:06 ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ.
01:08 ಇದು shebang line.
01:10 ಮೊದಲು “Enter filename” ಎಂಬ ಸಂದೇಶ console ನಲ್ಲಿ ಡಿಸ್ಪ್ಲೇ ಆಗುತ್ತದೆ.
01:15 read ಕಮಾಂಡ್ standard input ನಿಂದ ಒಂದು ಸಾಲು ಡಾಟಾವನ್ನು ಪಡೆಯುತ್ತದೆ.
01:20 ಈ ಕಮಾಂಡ್ ಅನ್ನುbackticks ನ ಒಳಗೆ ಬರೆಯಲಾಗಿದೆ.
01:24 Backtick ಒಂದು ವಿಶೇಷವಾದ ಅರ್ಥವನ್ನು ಹೊಂದಿದೆ.
01:27 backtick ನ ನಡುವೆ ಏನು ಬರೆದರೂ ಎಲ್ಲವೂ ಮೌಲ್ಯಮಾಪನಕ್ಕೆ ಒಳಪಡುತ್ತದೆ.
01:32 cat ಕಮಾಂಡ್ ಫೈಲ್ ನಲ್ಲಿರುವ ವಿಷಯವನ್ನು ಡಿಸ್ಪ್ಲೇ ಮಾಡುತ್ತದೆ.
01:37 wc ಹೊಸ ಸಾಲು, ಪದ ಮತ್ತು ಬೈಟ್ ಗಳ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತದೆ.
01:43 - (ಹೈಫನ್) w ಪದಗಳ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತದೆ.
01:47 ಏನಾಗುತ್ತದೆ ಎಂದರೆ,
01:49 * ಮೊದಲು cat ಕಮಾಂಡ್ ಫೈಲ್ ಅನ್ನು ಓದುತ್ತದೆ.
01:53 ಇದು ಇನ್-ಪುಟ್ ಫೈಲ್.
01:55 * ನಂತರ ಇದು wc ಕಮಾಂಡ್ ಗೆ ಕಳುಹಿಸಲ್ಪಡುತ್ತದೆ.
02:00 * ಹಾಗಾಗಿ ಈ ಹೇಳಿಕೆಯು ಕೊಟ್ಟಿರುವ ಫೈಲ್ ನಲ್ಲಿ ಪದಗಳ ಸಂಖ್ಯೆಯನ್ನು ಎಣಿಸುತ್ತದೆ.
02:05 * ಫಲಿತವು x ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ.
02:08 ಇದು if statement
02:10 - (ಹೈಫನ್) eq ಕಮಾಂಡ್ ಪದಗಳ ಸಂಖ್ಯೆ ಸೊನ್ನೆಗೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
02:16 ಕಂಡಿಷನ್ true, ಆಗಿದ್ದರೆ ನಾವು “File has zero words” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.
02:22 fi ಇದು ಮೊದಲ if ಕಂಡಿಷನ್ ನ ಕೊನೆ.
02:26 ಇಲ್ಲಿ ಇನ್ನೊಂದು if ಕಂಡಿಷನ್ ಇದೆ.
02:28 ಇಲ್ಲಿ - (ಹೈಫನ್) ne ಕಮಾಂಡ್ ಪದಗಳ ಸಂಖ್ಯೆ ಸೊನ್ನೆಗೆ ಸಮವಾಗಿಲ್ಲವೇ ಎಂದು ಪರೀಕ್ಷಿಸುತ್ತದೆ.
02:35 ಕಂಡಿಷನ್ true, ಆಗಿದ್ದರೆ ನಾವು “File has so-and-so words”

ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.

02:40 $ (ಡಾಲರ್) x ಪದಗಳ ಸಂಖ್ಯೆಯನ್ನು ಕೊಡುತ್ತದೆ.
02:43 ಇದು ಎರಡನೇ if ಕಂಡಿಷನ್ ನ ಕೊನೆ.
02:46 ಪ್ರೋಗ್ರಾಮ್ ಫೈಲ್ ಅನ್ನು ಸೇವ್ ಮಾಡಿರಿ.
02:48 ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:51 terminal ಅನ್ನು ತೆರೆಯಿರಿ.
02:53 ಮೊದಲು list.txt ಎಂಬ ಫೈಲ್ ಅನ್ನು ರಚಿಸೋಣ.
02:57 touch list.txt ಎಂದು ಟೈಪ್ ಮಾಡಿ.
03:01 ಈ ಫೈಲ್ ಗೆ ಒಂದು ಸಾಲನ್ನು ಸೇರಿಸೋಣ.
03:04 echo ಡಬಲ್ ಕೋಟ್ಸ್ ನಲ್ಲಿ “How are you” ಡಬಲ್ ಕೋಟ್ಸ್ ನ ನಂತರ ಗ್ರೇಟರ್ ದ್ಯಾನ್ ಚಿಹ್ನೆ list.txt ಎಂದು ಟೈಪ್ ಮಾಡಿ.
03:13 ಈಗ ಈ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ.
03:16 chmod ಪ್ಲಸ್ x example1 ಡಾಟ್ sh ಎಂದು ಟೈಪ್ ಮಾಡಿ.
03:21 ಈಗ ಡಾಟ್ ಸ್ಲ್ಯಾಶ್ example1.sh ಎಂದು ಟೈಪ್ ಮಾಡಿ.
03:26 Enter filename ಎಂಬ ಸಂದೇಶ ಡಿಸ್ಪ್ಲೇ ಆಗಿದೆ..
03:28 list.txt ಎಂದು ಟೈಪ್ ಮಾಡಿ.
03:31 ಫಲಿತದಲ್ಲಿ : list.txt has 3 words ಎಂದು ಡಿಸ್ಪ್ಲೇ ಆಗುತ್ತದೆ.
03:36 ಈಗ ಇನ್ನೊಂದು ಜೊತೆ ಆಪರೇಟರ್ಸ್ ಗಳ ಕುರಿತು ಕಲಿಯೋಣ.
03:40 ಇನ್ನೊಂದು ಫೈಲ್ ಅನ್ನು ತೆರೆಯೋಣ.
03:43 ಇದು example2.sh .
03:46 ದಯವಿಟ್ಟು ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ತೆರೆದು ಅದನ್ನು example2.sh ಎಂದು ಹೆಸರಿಸಿ.
03:52 ಈಗ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ example2.sh ಫೈಲ್ ನಲ್ಲಿ ಟೈಪ್ ಮಾಡಿ.
03:58 ಕೋಡ್ ಅನ್ನು ವಿವರಿಸುತ್ತೇನೆ.
04:00 ಈ ಪ್ರೋಗ್ರಾಂ ಪದಗಳ ಸಂಖ್ಯೆ
04:04 * ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆಯೇ
04:07 * ಅಥವಾ ಒಂದು ಮತ್ತು ನೂರರ ನಡುವೆ ಇದೆಯೇ ಅಥವಾ ನೂರಕ್ಕಿಂತ ಹೆಚ್ಚೇ ಎಂದು ಪರೀಕ್ಷಿಸುತ್ತದೆ.
04:11 ಇದು shebang line.
04:14 read ಸ್ಟೇಟ್ಮೆಂgಟ್ ಬಳಕೆದಾರರಿಂದ ಫೈಲ್ ನ ಹೆಸರನ್ನು ಇನ್ ಪುಟ್ ಆಗಿ ಪಡೆಯುತ್ತದೆ.
04:19 ಇಲ್ಲಿ - (ಹೈಫನ್) c ಕಮಾಂಡ್ ಅನ್ನು ಬೈಟ್ ಸಂಖ್ಯೆಯನ್ನು ಪ್ರಿಂಟ್ ಮಾಡಲು ಉಪಯೋಗಿಸಿದ್ದೇವೆ.
04:24 if statement ನಲ್ಲಿ , - (ಹೈಫನ್) lt ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತದೆ.
04:31 ಕಂಡಿಷನ್ true ಆಗಿದ್ದರೆ ಆಗ ನಾವು “No characters present in the file”. ಎಂದು ಪ್ರಿಂಟ್ ಮಾಡುತ್ತೇವೆ.
04:37 fi ಇದು if condition ನ ಕೊನೆ.
04:40 ಮುಂದಿನ if statement ಒಂದು ನೆಸ್ಟೆಡ್ if statement. ಅನ್ನು ಒಳಗೊಂಡಿದೆ.
04:45 ಮೊದಲು - (ಹೈಫನ್) gt ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿಯಿದೆಯೇ ಎಂದು ಪರೀಕ್ಷಿಸುತ್ತದೆ.
04:51 ಹೌದಾಗಿದ್ದರೆ ಆಗ ಈ echo statement ಎಕ್ಸಿಕ್ಯೂಟ್ ಆಗುತ್ತದೆ.
04:56 if statement ನಲ್ಲಿ ಅನೇಕ ಕಂಡಿಷನ್ ಗಳಿವೆ.
05:01 ಇಲ್ಲಿ ಈ if ನಲ್ಲಿ
  • - (ಹೈಫನ್) ge ಕಮಾಂಡ್ ಪದಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಅಥವಾ ಒಂದಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
05:09 * ಮತ್ತು - (ಹೈಫನ್ ) le ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಕಡಿಮೆ ಅಥವಾ ನೂರಕ್ಕೆ ಸಮವಾಗಿದೆಯೇ ಎಂದು ಪರೀಕ್ಷಿಸುತ್ತದೆ.
05:17 ಈ ಎರಡೂ ಕಂಡಿಷನ್ ಗಳೂ ಸರಿಹೊಂದಿದರೆ ಆಗ ಇದು
05:21 Number of characters ranges between 1 and 100. ಎಂದು ಪ್ರಿಂಟ್ ಮಾಡುತ್ತದೆ.
05:25 ದಯವಿಟ್ಟು ಗಮನಿಸಿ, ಈ if condition ಪೂರ್ತಿಯಾಗಿ ಸರಿಹೊಂದಲು ಎರಡೂ ಕಂಡಿಷನ್ ಗಳೂ ಸರಿಯಾಗಿರಲೇ ಬೇಕು.
05:33 ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಎರಡು ಕಂಡಿಷನ್ ಗಳ ನಡುವೆ ಆಂಪ್ರಸೆಂಡ್ ಚಿಹ್ನೆಯನ್ನು ಸೇರಿಸಿದ್ದೇವೆ.
05:39 fi ಇದು if statement ನ ಕೊನೆ.
05:43 ನಂತರ ಮುಂದಿನ if statement ಮೌಲ್ಯ ಮಾಪನಕ್ಕೊಳಪಡುತ್ತದೆ.
05:47 - (ಹೈಫನ್) gt ಕಮಾಂಡ್ ಪದಗಳ ಸಂಖ್ಯೆ ನೂರಕ್ಕಿಂತ ಹೆಚ್ಚಾಗಿದೆಯೇ ಎಂದು ಪರೀಕ್ಷಿಸುತ್ತದೆ.
05:53 ಈ ಕಂಡಿಷನ್ ಸರಿಹೊಂದಿದ್ದರೆ ನಾವು Number of characters is above hundred. ಎಂದು ಪ್ರಿಂಟ್ ಮಾಡುತ್ತೇವೆ.
06:00 fi ಇದು if statement. ನ ಕೊನೆ.
06:04 ಇಲ್ಲಿ ನಾವು ಎರಡನೇ if statement ಅನ್ನು ಕೊನೆಗೊಳಿಸುತ್ತೇವೆ.
06:07 ಈಗ ಟರ್ಮಿನಲ್ ಗೆ ಹಿಂದಿರುಗೋಣ.
06:10 ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:13 chmod ಪ್ಲಸ್ x example2 ಡಾಟ್ sh
06:18 ಡಾಟ್ ಸ್ಲ್ಯಾಶ್ example2 ಡಾಟ್ sh
06:22 list.txt ಎಂದು ಟೈಪ್ ಮಾಡಿ.
06:25 list.txt has more than one character.
06:31 Number of characters ranges between one and hundred ಎಂಬ ಫಲಿತವು ಡಿಸ್ಪ್ಲೇ ಆಗುತ್ತದೆ
06:36 ಈಗ list.txt ಫೈಲ್ ಗೆ ಕೆಲವು ಅಕ್ಷರಗಳನ್ನು ಸೇರಿಸಿ ಅಥವಾ ತೆಗೆಯಿರಿ.
06:40 ನಂತರ ಯಾವ if statement ಎಕ್ಸಿಕ್ಯೂಟ್ ಆಗುವುದೆಂದು ಗಮನಿಸಿ.
06:46 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
06:49 ಈಗ ಸಾರಾಂಶವನ್ನು ನೋಡೋಣ.
06:51 ಈ ಟ್ಯುಟೋರಿಯಲ್ ನಲ್ಲಿ ನಾವು
  • equal to
  • not equal to
  • less than
  • less than equal to
  • greater than ಮತ್ತು
  • greater than equal to ಕಮಾಂಡ್ ಗಳ ಕುರಿತು ಕಲಿತಿದ್ದೇವೆ.
07:03 ಸ್ವಂತ ಅಭ್ಯಾಸಕ್ಕಾಗಿ not equal to ಆಪರೇಟರ್ ನ ಉಪಯೋಗವನ್ನು ತೋರಿಸಲು ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ.
07:09 ಸುಳಿವು : - (ಹೈಫನ್) ne
07:12 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
07:15 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
07:18 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
07:23 The Spoken Tutorial Project Team ಇದು
07:25 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
07:28 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:32 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
07:40 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
07:43 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
07:51 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro
07:56 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
08:02 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
08:06 ಧನ್ಯವಾದಗಳು

Contributors and Content Editors

NaveenBhat, PoojaMoolya, Pratik kamble