Java-Business-Application/C2/Overview-of-Library-Management-System/Kannada
From Script | Spoken-Tutorial
Revision as of 10:49, 3 August 2015 by Sandhya.np14 (Talk | contribs)
Time | Narration |
00:00 | Overview of the Web Application – Library Management System (ಓವರ್ ವ್ಯೂ ಆಫ್ ದ ವೆಬ್ ಅಪ್ಲಿಕೇಶನ್- ಲೈಬ್ರರಿ ಮೆನೇಜ್ಮೆಂಟ್ ಸಿಸ್ಟಂ) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು ನಿಮಗೆ ಒಂದು ‘ವೆಬ್ ಅಪ್ಪ್ಲಿಕೇಶನ್’ನ (web application) ಪರಿಚಯ ಮಾಡಿಕೊಡುತ್ತೇವೆ. |
00:13 | ಈ ಸರಣಿಯಲ್ಲಿ, ‘ಬೇಸಿಕ್ ಇನ್ವೆಂಟರೀ ಸಿಸ್ಟಂ’ಅನ್ನು ತಯಾರಿಸುವುದನ್ನು ನಾವು ಮಾಡಿತೋರಿಸಿದ್ದೇವೆ. |
00:19 | ನಾವು 'Library Management System' ನ ಉದಾಹರಣೆಯನ್ನು ಉಪಯೋಗಿಸಿದ್ದೇವೆ. |
00:24 | ಈ ಸರಣಿಯನ್ನು ಕಲಿಯಲು, ನಿಮಗೆ - |
00:27 | Netbeans IDE ಯನ್ನು ಬಳಸಿ Core Java ಹಾಗೂ |
00:31 | HTML ಇವುಗಳು ತಿಳಿದಿರಬೇಕು. |
00:32 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:38 | ಈಗ ನಾವು, Library Management System (ಲೈಬ್ರರೀ ಮ್ಯಾನೇಜ್ಮೆಂಟ್ ಸಿಸ್ಟಂ) ಎಂಬ ಈ ‘ವೆಬ್ ಅಪ್ಪ್ಲಿಕೇಶನ್’ಅನ್ನು ನೋಡೋಣ. |
00:43 | ‘ಲೈಬ್ರರೀ ಮ್ಯಾನೇಜ್ಮೆಂಟ್ ಸಿಸ್ಟಂ’ - ಇದು |
00:46 | ಪುಸ್ತಕಗಳನ್ನು ಕೊಡುವುದು ಹಾಗೂ ಮರಳಿ ಪಡೆಯುವುದನ್ನು |
00:50 | ಮತ್ತು ಲೈಬ್ರರಿಯ ಬಳಕೆದಾರರನ್ನು (users) ನಿಭಾಯಿಸುತ್ತದೆ. |
00:54 | ಈಗ, ನಮಗೆ 'Library Management System' ನ ಅವಶ್ಯಕತೆ ಏಕೆ ಇದೆ? |
00:58 | ಇಂತಹ ಒಂದು ಸಿಸ್ಟಂನ (ವ್ಯವಸ್ಥೆ) ಬಳಕೆಯಿಂದ - |
01:00 | * ಲೈಬ್ರೇರಿಯನ್ ನಿಗೆ (ಗ್ರಂಥಪಾಲಕ), ಲೈಬ್ರರಿಯಲ್ಲಿ ಪುಸ್ತಕಗಳನ್ನು ಸುಲಭವಾಗಿ ನಿರ್ವಹಿಸಲು |
01:05 | * ಒಂದು ಕೇಂದ್ರೀಕೃತ ಸರ್ವರ್ ನ ಮೇಲೆ, ಸದಸ್ಯತ್ವದ ಮಾಹಿತಿಯನ್ನು ಕಾಯ್ದುಕೊಳ್ಳಲು |
01:10 | * ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸಲು ಹಾಗೂ |
01:13 | * ಕೆಲಸದ ಹೊರೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. |
01:15 | ಈಗ, ನಾನು ತ್ವರಿತವಾಗಿ ನಿಮಗೆ ಸಿಸ್ಟಂಅನ್ನು ತೋರಿಸುತ್ತೇನೆ. |
01:17 | ಇದಕ್ಕಾಗಿ, ನಾನು 'Netbeans IDE' (ನೆಟ್ ಬೀನ್ಸ್ ಐ-ಡಿ-ಇ) ಗೆ ಬದಲಾಯಿಸುವೆನು. |
01:22 | ಇಲ್ಲಿ ನಮ್ಮ ಹತ್ತಿರ ಬಹಳ ಸರಳವಾದ ಸಿಸ್ಟಂ (system) ಇದೆ. |
01:24 | 'MyFirstProject' ಎಂಬ ಈ ಪ್ರೊಜೆಕ್ಟ್ ಅನ್ನು ನಾನು ರನ್ ಮಾಡುತ್ತೇನೆ. |
01:30 | ಬ್ರೌಸರ್ ವಿಂಡೋ ತೆರೆದುಕೊಳ್ಳುತ್ತದೆ. |
01:33 | ನಾವು Library Management System ನ, Home Page (ಹೋಮ್ ಪೇಜ್)ಅನ್ನು ನೋಡಬಹುದು. |
01:38 | ಇಲ್ಲಿ ನಾವು ತುಂಬಾ ಸರಳವಾದ ಒಂದು ‘ಲಾಗ್-ಇನ್ ಫಾರ್ಮ್’ ಅನ್ನು ನೋಡಬಹುದು. |
01:42 | ಇಲ್ಲಿ, Visitor’s Home Page ಎನ್ನುವ ಪೇಜ್ ಗೆ ಒಂದು ಲಿಂಕ್ ಇದೆ. |
01:46 | ಈ ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
01:48 | ಲೈಬ್ರರಿಯಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಲಿಸ್ಟನ್ನು ನಾವು ನೋಡಬಹುದು. |
01:53 | ಲೈಬ್ರರಿಯು ಅನೇಕ ಸದಸ್ಯರನ್ನು ಹೊಂದಿದೆ. |
01:56 | ಹೀಗಾಗಿ, ಈಗ ನಾವು ಒಬ್ಬ ಸದಸ್ಯನಂತೆ, ಎಂದರೆ ಈಗಾಗಲೇ ‘ರಿಜಿಸ್ಟರ್’ ಮಾಡಿದ ‘ಯೂಸರ್’ನಂತೆ ‘ಲಾಗ್-ಇನ್’ ಮಾಡೋಣ. |
02:03 | ನಾನು “mdhusein” ಎಂದು ‘ಲಾಗ್-ಇನ್’ ಮಾಡಿ, ಪಾಸ್ವರ್ಡ್ ಕೊಡುವೆನು ಮತ್ತು Enter ಅನ್ನು ಒತ್ತುವೆನು. |
02:10 | ನಾವು ಒಂದು Success Greeting Page ಅನ್ನು ನೋಡಬಹುದು. |
02:13 | ಸಧ್ಯಕ್ಕೆ ‘ಯೂಸರ್’ನಿಂದ (ಬಳಕೆದಾರ) ಎರವಲು ಪಡೆಯಲಾದ ಪುಸ್ತಕಗಳ ಲಿಸ್ಟನ್ನು ಸಹ ನಾವು ಪಡೆದಿದ್ದೇವೆ. |
02:18 | ಈಗ ನಾವು ‘ಲಾಗ್-ಔಟ್’ ಮಾಡೋಣ. |
02:21 | ನಂತರ, ನಾವು librarian, ಎಂದರೆ admin ಎಂದು ‘ಲಾಗ್-ಇನ್’ ಮಾಡುವೆವು. |
02:26 | ನಾವು ‘ಲಾಗ್-ಇನ್’ ಮಾಡಿದ ಕೂಡಲೇ Admin Section page (ಅಡ್ಮಿನ್ ಸೆಕ್ಷನ್ ಪೇಜ್) ಅನ್ನು ನೋಡಬಹುದು. |
02:31 | ಇಲ್ಲಿ ನಾವು ನಾಲ್ಕು ಆಯ್ಕೆಗಳನ್ನು ನೋಡಬಹುದು. |
02:33 | ನಾವು ಪ್ರತಿಯೊಂದನ್ನು ಪ್ರಯತ್ನಿಸಿ, ಪರಿಣಾಮವನ್ನು ನೋಡೋಣ. |
02:37 | ಮೊದಲನೆಯ ಆಯ್ಕೆ, List Books ಎಂದು ಆಗಿದೆ. |
02:41 | ಇಲ್ಲಿ, ಲೈಬ್ರರಿಯಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಲಿಸ್ಟ್ ನಮಗೆ ಸಿಗುತ್ತದೆ. |
02:46 | ಆಮೇಲೆ, ಇದು List Borrowed Books ಎಂದು ಇದೆ. |
02:50 | ಇಲ್ಲಿ, ವಿಭಿನ್ನ ಮೆಂಬರ್ ಗಳಿಗೆ ಒದಗಿಸಲಾದ ಪುಸ್ತಕಗಳ ಲಿಸ್ಟ್ |
02:54 | ಮತ್ತು ಹಿಂತಿರುಗಿಸುವ ದಿನಾಂಕವನ್ನು ಮೀರಿದ ಪುಸ್ತಕಗಳ ಲಿಸ್ಟ್ ನಮಗೆ ಸಿಗುತ್ತದೆ. |
02:59 | ಆಮೇಲೆ, ನಾವು List Users ಎಂಬ ಆಯ್ಕೆಯನ್ನು ಪಡೆದಿದ್ದೇವೆ. |
03.03 | ಇಲ್ಲಿ, ಲೈಬ್ರರಿಯಲ್ಲಿ ದಾಖಲಾದ (registered) ಎಲ್ಲ ‘ಯೂಸರ್’ಗಳ ಲಿಸ್ಟ್ ನಮಗೆ ಸಿಗುತ್ತದೆ. |
03:08 | ಆಮೇಲೆ, ಇಲ್ಲಿ ನಾವು Checkout/Return a Book ಎಂಬ ಆಯ್ಕೆಯನ್ನು ಪಡೆದಿದ್ದೇವೆ. |
03:12 | ನಾವು ಈ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
03:15 | ಇದು, Checkout/Return a Book ಗೆ ಇಂಟರ್ಫೇಸ್ ಆಗಿದೆ. |
03:20 | ಈಗ, ನಾವು ನಮ್ಮ ‘ಲಾಗ್-ಇನ್’ ಪೇಜ್ ಗೆ ಬರೋಣ. |
03:23 | ನಮಗೆ, ‘ನ್ಯೂ ಯೂಸರ್’ ಎಂದು ರಿಜಿಸ್ಟರ್ ಮಾಡುವ ಆಯ್ಕೆ ಸಹ ಇದೆ ಎನ್ನುವುದನ್ನು ಗಮನಿಸಿ. |
03:28 | ರಿಜಿಸ್ಟರ್ ಮಾಡಲು, ‘here’ ನ ಮೇಲೆ ಕ್ಲಿಕ್ ಮಾಡಿ. |
03:31 | ಇದು, new user (ಹೊಸ ‘ಯೂಸರ್’) ಎಂದು ರಿಜಿಸ್ಟರ್ ಮಾಡಲು ಇರುವ ‘ರಿಜಿಸ್ಟ್ರೇಶನ್ ಫಾರ್ಮ್’ ಆಗಿದೆ. |
03:35 | ಹೀಗೆ, ಇದು, ಈ ಸರಳ ‘ವೆಬ್-ಅಪ್ಲಿಕೇಶನ್’ನ ಒಂದು ಮೇಲ್ನೋಟವಾಗಿದೆ. |
03:39 | ಈ ಸರಣಿಯ ಕೊನೆಯಲ್ಲಿ, ಈ ಸುಲಭವಾದ 'Library Management System' ಅನ್ನು ತಯಾರಿಸಲು ನೀವು ಕಲಿಯುವಿರಿ. |
03:46 | ಇದಕ್ಕೆ, book ಅನ್ನು (ಪುಸ್ತಕವನ್ನು) ಹುಡುಕುವಂತಹ ಹೆಚ್ಚಿನ ಕಾರ್ಯಸೂಚಿಗಳನ್ನು ಸೇರಿಸಲು ಸಹ ನಿಮಗೆ ಸಾಧ್ಯವಾಗುವುದು. |
03:53 | ಈ ಸರಣಿಯಲ್ಲಿ- |
03:54 | * ನಾವು ವೆಬ್-ಅಪ್ಲಿಕೇಶನ್ ಅನ್ನು ರಚಿಸಲು (build), JSP (ಜೆ-ಎಸ್-ಪಿ) ಮತ್ತು ‘ಸರ್ವ್ಲೆಟ್’ಗಳನ್ನು(servlet) ಬಳಸುವವರಿದ್ದೇವೆ. |
03:59 | * ನೀವು MVC architecture ಅನ್ನು ಸಹ ವಿವರವಾಗಿ ಕಲಿಯುವಿರಿ ಮತ್ತು |
04:04 | * MVC ಪ್ಯಾಟರ್ನ್ ಅನ್ನು ಅನುಸರಿಸುವ ಯಾವುದೇ ವೆಬ್-ಅಪ್ಲಿಕೇಶನ್ ಅನ್ನು ಡೆವಲಪ್ ಮಾಡಲು ನಿಮಗೆ ಸಾಧ್ಯವಾಗುವುದು. |
04:10 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
04:13 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
04:16 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
04:20 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
04:24 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
04:26 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
04:29 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
04:32 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
04:38 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
04:42 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
04:49 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
04:52 | http://spoken-tutorial.org/NMEICT-Intro |
04:59 | ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ. |
05:08 | ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ ಊರ್ಜಿತಗೊಳಿಸಿದ್ದಾರೆ (validate). |
05:13 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….
ವಂದನೆಗಳು. |