Java-Business-Application/C2/Overview-of-Library-Management-System/Kannada

From Script | Spoken-Tutorial
Jump to: navigation, search
Time Narration
00:00 Overview of the Web Application – Library Management System (ಓವರ್ ವ್ಯೂ ಆಫ್ ದ ವೆಬ್ ಅಪ್ಲಿಕೇಶನ್- ಲೈಬ್ರರಿ ಮೆನೇಜ್ಮೆಂಟ್ ಸಿಸ್ಟಂ) ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು ನಿಮಗೆ ಒಂದು ‘ವೆಬ್ ಅಪ್ಪ್ಲಿಕೇಶನ್’ನ (web application) ಪರಿಚಯ ಮಾಡಿಕೊಡುತ್ತೇವೆ.
00:13 ಈ ಸರಣಿಯಲ್ಲಿ, ‘ಬೇಸಿಕ್ ಇನ್ವೆಂಟರೀ ಸಿಸ್ಟಂ’ಅನ್ನು ತಯಾರಿಸುವುದನ್ನು ನಾವು ಮಾಡಿ ತೋರಿಸಿದ್ದೇವೆ.
00:19 ನಾವು 'Library Management System' ನ ಉದಾಹರಣೆಯನ್ನು ಉಪಯೋಗಿಸಿದ್ದೇವೆ.
00:24 ಈ ಸರಣಿಯನ್ನು ಕಲಿಯಲು, ನಿಮಗೆ -
00:27 Netbeans IDE ಯ ಮೂಲಕ Core Java ದ ಪ್ರಯೋಗ ಹಾಗೂ
00:31 HTML ನ ಪ್ರಯೋಗ ಇವುಗಳು ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:38 ಈಗ ನಾವು, Library Management System (ಲೈಬ್ರರೀ ಮ್ಯಾನೇಜ್ಮೆಂಟ್ ಸಿಸ್ಟಂ) ಎಂಬ ಈ ‘ವೆಬ್ ಅಪ್ಪ್ಲಿಕೇಶನ್’ಅನ್ನು ನೋಡೋಣ.
00:43 ‘ಲೈಬ್ರರೀ ಮ್ಯಾನೇಜ್ಮೆಂಟ್ ಸಿಸ್ಟಂ’ - ಇದು
00:46 ಪುಸ್ತಕಗಳನ್ನು ಕೊಡುವುದು ಹಾಗೂ ಮರಳಿ ಪಡೆಯುವುದನ್ನು
00:50 ಮತ್ತು ಲೈಬ್ರರಿಯ ಬಳಕೆದಾರರನ್ನು (users) ನಿಭಾಯಿಸುತ್ತದೆ.
00:54 ಈಗ, ನಮಗೆ 'Library Management System' ನ ಅವಶ್ಯಕತೆ ಏಕೆ ಇದೆ?
00:58 ಇಂತಹ ಒಂದು ಸಿಸ್ಟಂನ (ವ್ಯವಸ್ಥೆ) ಬಳಕೆಯಿಂದ -
01:00 * ಲೈಬ್ರೇರಿಯನ್ ಗೆ (ಗ್ರಂಥಪಾಲಕ), ಲೈಬ್ರರಿಯಲ್ಲಿ ಪುಸ್ತಕಗಳನ್ನು ಸುಲಭವಾಗಿ ನಿರ್ವಹಿಸಲು,
01:05 * ಒಂದು ಕೇಂದ್ರೀಕೃತ ಸರ್ವರ್ ನ ಮೇಲೆ, ಸದಸ್ಯತ್ವದ ಮಾಹಿತಿಯನ್ನು ಕಾಯ್ದುಕೊಳ್ಳಲು,
01:10 * ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸಲು ಹಾಗೂ
01:13 * ಕೆಲಸದ ಹೊರೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
01:15 ಈಗ, ನಾನು ತ್ವರಿತವಾಗಿ ನಿಮಗೆ ಸಿಸ್ಟಂ ಅನ್ನು ತೋರಿಸುತ್ತೇನೆ.
01:17 ಇದಕ್ಕಾಗಿ, ನಾನು 'Netbeans IDE' (ನೆಟ್ ಬೀನ್ಸ್ ಐ-ಡಿ-ಇ) ಗೆ ಬದಲಾಯಿಸುವೆನು.
01:22 ಇಲ್ಲಿ ನಮ್ಮ ಹತ್ತಿರ ಬಹಳ ಸರಳವಾದ ಸಿಸ್ಟಂ (system) ಇದೆ.
01:24 'MyFirstProject' ಎಂಬ ಈ ಪ್ರೊಜೆಕ್ಟ್ ಅನ್ನು ನಾನು ರನ್ ಮಾಡುತ್ತೇನೆ.
01:30 ಬ್ರೌಸರ್ ವಿಂಡೋ ತೆರೆದುಕೊಳ್ಳುತ್ತದೆ.
01:33 ನಾವು Library Management System ನ, Home Page (ಹೋಮ್ ಪೇಜ್) ಅನ್ನು ನೋಡಬಹುದು.
01:38 ಇಲ್ಲಿ ನಾವು ತುಂಬಾ ಸರಳವಾದ ಒಂದು ‘ಲಾಗ್-ಇನ್ ಫಾರ್ಮ್’ ಅನ್ನು ನೋಡಬಹುದು.
01:42 ಇಲ್ಲಿ, Visitor’s Home Page ಎನ್ನುವ ಪೇಜ್ ಗೆ ಒಂದು ಲಿಂಕ್ ಇದೆ.
01:46 ಈ ಲಿಂಕ್ನ ಮೇಲೆ ಕ್ಲಿಕ್ ಮಾಡಿ.
01:48 ಲೈಬ್ರರಿಯಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಲಿಸ್ಟನ್ನು ನಾವು ನೋಡಬಹುದು.
01:53 ಲೈಬ್ರರಿಯು ಅನೇಕ ಸದಸ್ಯರನ್ನು ಹೊಂದಿದೆ.
01:56 ಹೀಗಾಗಿ, ಈಗ ನಾವು ಒಬ್ಬ ಸದಸ್ಯನಂತೆ, ಎಂದರೆ ಈಗಾಗಲೇ ‘ರಿಜಿಸ್ಟರ್’ ಮಾಡಿದ ‘ಯೂಸರ್’ನಂತೆ ‘ಲಾಗ್-ಇನ್’ ಮಾಡೋಣ.
02:03 ನಾನು “mdhusein” ಎಂದು ‘ಲಾಗ್-ಇನ್’ ಮಾಡಿ, ಪಾಸ್ವರ್ಡ್ ಕೊಡುವೆನು ಮತ್ತು Enter ಅನ್ನು ಒತ್ತುವೆನು.
02:10 ನಾವು ಒಂದು Success Greeting Page ಅನ್ನು ನೋಡಬಹುದು.
02:13 ಸಧ್ಯಕ್ಕೆ ‘ಯೂಸರ್’ನಿಂದ (ಬಳಕೆದಾರ) ಎರವಲು ಪಡೆಯಲಾದ ಪುಸ್ತಕಗಳ ಲಿಸ್ಟನ್ನು ಸಹ ನಾವು ಪಡೆದಿದ್ದೇವೆ.
02:18 ಈಗ ನಾವು ‘ಲಾಗ್-ಔಟ್’ ಮಾಡೋಣ.
02:21 ನಂತರ, ನಾವು librarian, ಎಂದರೆ admin ಎಂದು ‘ಲಾಗ್-ಇನ್’ ಮಾಡುವೆವು.
02:26 ನಾವು ‘ಲಾಗ್-ಇನ್’ ಮಾಡಿದ ಕೂಡಲೇ Admin Section page (ಅಡ್ಮಿನ್ ಸೆಕ್ಷನ್ ಪೇಜ್) ಅನ್ನು ನೋಡಬಹುದು.
02:31 ಇಲ್ಲಿ ನಾವು ನಾಲ್ಕು ಆಯ್ಕೆಗಳನ್ನು ನೋಡಬಹುದು.
02:33 ನಾವು ಪ್ರತಿಯೊಂದನ್ನು ಪ್ರಯತ್ನಿಸಿ, ಪರಿಣಾಮವನ್ನು ನೋಡೋಣ.
02:37 ಮೊದಲನೆಯ ಆಯ್ಕೆ, List Books ಎಂದು ಆಗಿದೆ.
02:41 ಇಲ್ಲಿ, ಲೈಬ್ರರಿಯಲ್ಲಿ ಲಭ್ಯವಿರುವ ಎಲ್ಲ ಪುಸ್ತಕಗಳ ಲಿಸ್ಟ್ ನಮಗೆ ಸಿಗುತ್ತದೆ.
02:46 ಆಮೇಲೆ, ಇದು List Borrowed Books ಎಂದು ಇದೆ.
02:50 ಇಲ್ಲಿ, ವಿಭಿನ್ನ ಮೆಂಬರ್ ಗಳಿಗೆ ಒದಗಿಸಲಾದ ಪುಸ್ತಕಗಳ ಲಿಸ್ಟ್
02:54 ಮತ್ತು ಹಿಂತಿರುಗಿಸುವ ದಿನಾಂಕವನ್ನು ಮೀರಿದ ಪುಸ್ತಕಗಳ ಲಿಸ್ಟ್ ನಮಗೆ ಸಿಗುತ್ತದೆ.
02:59 ಆಮೇಲೆ, ನಾವು List Users ಎಂಬ ಆಯ್ಕೆಯನ್ನು ಪಡೆದಿದ್ದೇವೆ.
03.03 ಇಲ್ಲಿ, ಲೈಬ್ರರಿಯಲ್ಲಿ ದಾಖಲಾದ (registered) ಎಲ್ಲ ‘ಯೂಸರ್’ಗಳ ಲಿಸ್ಟ್ ನಮಗೆ ಸಿಗುತ್ತದೆ.
03:08 ಆಮೇಲೆ, ಇಲ್ಲಿ ನಾವು Checkout/Return a Book ಎಂಬ ಆಯ್ಕೆಯನ್ನು ಪಡೆದಿದ್ದೇವೆ.
03:12 ನಾವು ಈ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
03:15 ಇದು, Checkout/Return a Book ಗೆ ಇಂಟರ್ಫೇಸ್ ಆಗಿದೆ.
03:20 ಈಗ, ನಾವು ನಮ್ಮ ‘ಲಾಗ್-ಇನ್’ ಪೇಜ್ ಗೆ ಬರೋಣ.
03:23 ನಮಗೆ, ‘ನ್ಯೂ ಯೂಸರ್’ ಎಂದು ರಿಜಿಸ್ಟರ್ ಮಾಡುವ ಆಯ್ಕೆ ಸಹ ಇದೆ ಎನ್ನುವುದನ್ನು ಗಮನಿಸಿ.
03:28 ರಿಜಿಸ್ಟರ್ ಮಾಡಲು, ‘here’ ನ ಮೇಲೆ ಕ್ಲಿಕ್ ಮಾಡಿ.
03:31 ಇದು, new user (ಹೊಸ ‘ಯೂಸರ್’) ಎಂದು ರಿಜಿಸ್ಟರ್ ಮಾಡಲು ಇರುವ ‘ರಿಜಿಸ್ಟ್ರೇಶನ್ ಫಾರ್ಮ್’ ಆಗಿದೆ.
03:35 ಹೀಗೆ, ಇದು, ಈ ಸರಳ ‘ವೆಬ್-ಅಪ್ಲಿಕೇಶನ್’ನ ಒಂದು ಮೇಲ್ನೋಟವಾಗಿದೆ.
03:39 ಈ ಸರಣಿಯ ಕೊನೆಯಲ್ಲಿ, ಈ ಸುಲಭವಾದ 'Library Management System' ಅನ್ನು ತಯಾರಿಸಲು ನೀವು ಕಲಿಯುವಿರಿ.
03:46 ಇದಕ್ಕೆ, book ಅನ್ನು (ಪುಸ್ತಕವನ್ನು) ಹುಡುಕುವಂತಹ ಹೆಚ್ಚಿನ ಕಾರ್ಯಸೂಚಿಗಳನ್ನು ಸೇರಿಸಲು ಸಹ ನಿಮಗೆ ಸಾಧ್ಯವಾಗುವುದು.
03:53 ಈ ಸರಣಿಯಲ್ಲಿ- ನಾವು ವೆಬ್-ಅಪ್ಲಿಕೇಶನ್ ಅನ್ನು ರಚಿಸಲು (build), JSP (ಜೆ-ಎಸ್-ಪಿ) ಮತ್ತು ‘ಸರ್ವ್ಲೆಟ್’ಗಳನ್ನು(servlet) ಬಳಸುವವರಿದ್ದೇವೆ.
03:59 * ನೀವು MVC architecture ಅನ್ನು ಸಹ ವಿವರವಾಗಿ ಕಲಿಯುವಿರಿ ಮತ್ತು
04:04 * MVC ಪ್ಯಾಟರ್ನ್ ಅನ್ನು ಅನುಸರಿಸುವ ಯಾವುದೇ ವೆಬ್-ಅಪ್ಲಿಕೇಶನ್ ಅನ್ನು ಡೆವಲಪ್ ಮಾಡಲು ನಿಮಗೆ ಸಾಧ್ಯವಾಗುವುದು.
04:10 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
04:13 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.http://spoken-tutorial.org/What_is_a_Spoken_Tutorial
04:16 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
04:20 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
04:24 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
04:26 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
04:29 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
04:32 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
04:38 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
04:42 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
04:49 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
04:52 http://spoken-tutorial.org/NMEICT-Intro
04:59 ಒಂದು ಪ್ರಮುಖ ಸಾಫ್ಟ್ವೇರ್ MNC, ತಮ್ಮ Corporate Social Responsibility programme ನ ಮೂಲಕ ಈ Library Management System ಅನ್ನು ಕೊಡುಗೆಯಾಗಿ ನೀಡಿದ್ದಾರೆ.
05:08 ಈ ಸ್ಪೋಕನ್ ಟ್ಯುಟೋರಿಯಲ್ ಗಾಗಿ, ಅವರು ವಿಷಯವನ್ನು ಸಹ ಮೌಲ್ಯಾಂಕಿತಗೊಳಿಸಿದ್ದಾರೆ (validate).
05:13 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal