BASH/C2/Conditional-execution/Kannada
From Script | Spoken-Tutorial
Revision as of 13:23, 10 July 2015 by NaveenBhat (Talk | contribs)
Time | Narration |
---|---|
00:01 | ಬ್ಯಾಶ್ ನಲ್ಲಿ Conditional execution ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು |
00:10 | * test ಕಮಾಂಡ್ ನ ಉಪಯೋಗ, |
00:13 | ಮತ್ತು Conditional Statement ಗಳ ಕುರಿತು ಕಲಿಯುತ್ತೇವೆ. |
00:15 | ಇದನ್ನು ನಾವು ಕೆಲವು ಉದಾಹರಣೆಯ ಮೂಲಕ ಕಲಿಯುತ್ತೇವೆ. |
00:19 | ಈ ಪಾಠವನ್ನು ಕಲಿಯಲು ನೀವು |
00:21 | GNU/Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು. |
00:26 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:32 | ಈ ಪಾಠಕ್ಕಾಗಿ ನಾನು |
00:35 | * Ubuntu Linux 12.04 OS ಮತ್ತು |
00:39 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:43 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:49 | test ಕಮಾಂಡ್ ನ ಪರಿಚಯದಿಂದ ಪ್ರಾರಂಭಿಸೋಣ. |
00:52 | * test ಇದೊಂದು ಬಿಲ್ಟ್ ಇನ್ ಕಮಾಂಡ್. ಇದು ಎಕ್ಸಿಟ್ ಸ್ಟೇಟಸ್ ಅನ್ನು ಹಿಂದಿರುಗಿಸುತ್ತದೆ. |
00:57 | * ಇದು True ಗೆ (0)ಸೊನ್ನೆಯನ್ನು ಮತ್ತು False ಗೆ (1) ಒಂದನ್ನೂ ಹಿಂದಿರುಗಿಸುತ್ತದೆ. |
01:02 | Return ನ ಬೆಲೆಯು ಎಕ್ಸ್-ಪ್ರೆಶನ್ ನ ಮೌಲ್ಯ ಮಾಪನವನ್ನು ಅವಲಂಭಿಸಿರುತ್ತದೆ. |
01:07 | * ಡಾಲರ್ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನು ($?) ಟೈಪ್ ಮಾಡುವುದರಿಂದ return ಸ್ಟೇಟಸ್ ಅನ್ನು ಪಡೆಯಬಹುದು. |
01:14 | * ಎಕ್ಸ್-ಪ್ರೆಶನ್ ಅನ್ನು ಎರಡು ರೀತಿಯಲ್ಲಿ ಮೌಲ್ಯಮಾಪನ ಮಾಡಬಹುದು: |
01:18 | # ಮೊದಲನೆಯದು test ಕಮಾಂಡ್ ಅನ್ನು ಉಪಯೋಗಿಸುವುದು, |
01:21 | ಮತ್ತು ಇನ್ನೊಂದು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಕ್ಸ್-ಪ್ರೆಶನ್ ಅನ್ನು ಹಾಕುವುದು. |
01:27 | Ctrl Alt ಮತ್ತು T ಕೀ ಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
01:35 | test ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 4 ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನು ಟೈಪ್ ಮಾಡಿ. Enter ಅನ್ನು ಒತ್ತಿ. |
01:53 | ಇದು ಸೊನ್ನೆಯನ್ನು ಹಿಂದಿರುಗುತ್ತದೆ ಅಂದರೆ true ಎಂದರ್ಥ. |
01:57 | 4 ಸಮ 4. |
02:00 | ನಂತರ |
02:02 | ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 4 ಸ್ಪೇಸ್ ಎಂದು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನು ಟೈಪ್ ಮಾಡಿ. Enter ಅನ್ನು ಒತ್ತಿರಿ. |
02:22 | ಇದು ಸೊನ್ನೆಯನ್ನು ಹಿಂದಿರುಗಿಸುತ್ತದೆ ಅಂದರೆ true. |
02:25 | 4 ಸಮ 4. |
02:28 | ಇನ್ನೊಂದು ಎಕ್ಸ್-ಪ್ರೆಶನ್ ಅನ್ನು ನೋಡೋಣ.
test ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 5 ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಪ್ರಶ್ನಾರ್ಥಕ ಚಿಹ್ನೆ ಯನ್ನು ಟೈಪ್ ಮಾಡಿ. Enter ಅನ್ನು ಒತ್ತಿರಿ. |
02:48 | ಇದು ಒಂದನ್ನು ಹಿಂದಿರುಗಿಸುತ್ತದೆ ಅಂದರೆ false. |
02:52 | ಅಂದರೆ 4 ಇದು 5 ಕ್ಕೆ ಸಮ ಅಲ್ಲ. |
02:56 | ಈಗ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಅದೇ ಎಕ್ಸ್-ಪ್ರೆಶನ್ ಅನ್ನು ಬರೆದು ನೋಡೋಣ. |
03:01 | ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 5 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಪ್ರಶ್ನಾರ್ಥಕ ಚಿಹ್ನೆ ಎಂದು ಟೈಪ್ ಮಾಡಿ. Enter ಅನ್ನು ಒತ್ತಿರಿ. |
03:21 | ಇದು ಕೂಡ ಒಂದನ್ನು ಹಿಂದಿರುಗಿಸುತ್ತದೆ ಅಂದರೆ false. |
03:25 | ಅಂದರೆ 4 ಇದು 5 ಕ್ಕೆ ಸಮ ಅಲ್ಲ. |
03:29 | ಇದನ್ನು ಬೇರೆ ರೀತಿಯ ಟೆಸ್ಟಿಂಗ್ ಗೆ ಕೂಡ ವಿಸ್ತರಿಸಬಹುದು. |
03:33 | man ಸ್ಪೇಸ್ test ಎಂದು ಟೈಪ್ ಮಾಡಿ ಅದರ ಉಪಯೋಗ ವನ್ನು ನೋಡಬಹುದು. |
03:40 | ನಮ್ಮ ಸ್ಲೈಡ್ಸ್ ಗೆ ಹಿಂದಿರುಗಿ. |
03:43 | ಈಗ if statement ನ ಸಿಂಟ್ಯಾಕ್ಸ್ ಅನ್ನು ನೋಡೋಣ. |
03:48 | if ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಸ್ಪೇಸ್ ಎಕ್ಸ್-ಪ್ರೆಶನ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸೆಮಿಕೋಲನ್ ಹಾಕಿ ಸ್ಪೇಸ್ then ಎಂದು ಟೈಪ್ ಮಾಡಿ. |
03:59 | ಮುಂದಿನ ಸಾಲಿನಲ್ಲಿ ಎಕ್ಸಿಕ್ಯೂಟ್ ಮಾಡಬೇಕಾದ command ಅಥವಾ statement ಗಳನ್ನು ಟೈಪ್ ಮಾಡಿ |
04:05 | ಕೊನೆಯಲ್ಲಿ fi ಎಂದು ಟೈಪ್ ಮಾಡಿ if ಅನ್ನು ಮುಗಿಸುತ್ತದೆ. |
04:11 | condition ಸ್ಟೇಟ್-ಮೆಂಟ್ ನ ಮೂಲ ನಿಯಮಗಳು: |
04:14 | ಯಾವಾಗಲೂ ಬ್ರ್ಯಾಕೆಟ್ ಮತ್ತು ಎಕ್ಸ್-ಪ್ರೆಶನ್ ನ ನಡುವೆ ಸ್ಪೇಸ್ ಅನ್ನು ಬಿಟ್ಟಿರಬೇಕು. |
04:19 | then ಕೀವರ್ಡ್ ಗೂ ಮೊದಲು ಸೆಮಿಕೋಲನ್ ಉಪಯೋಗಿಸಿ ಸಾಲನ್ನುಅಂತ್ಯಗೊಳಿಸಿ. |
04:25 | ಸ್ಟೇಟ್ ಮೆಂಟ್ ಅಥವಾ ಎಕ್ಸ್-ಪ್ರೆಶನ್ ಅನ್ನು ಅಂತ್ಯಗೊಳಿಸಲು ಸೆಮಿಕೋಲನ್ ಅನ್ನು ಉಪಯೋಗಿಸುತ್ತೇವೆ. |
04:31 | ಕಂಡಿಶನ್ಸ್ ಗಳಲ್ಲಿ ಸ್ಟ್ರಿಂಗ್ ವೇರಿಯೇಬಲ್ ಅನ್ನು ಉಪಯೋಗಿಸುವಾಗ ಅದ್ದನ್ನು ಕೋಟ್ಸ್ ನಲ್ಲಿ ಬರೆಯಬೇಕು. |
04:38 | ಕಂಡಿಶನ್ ಬ್ಲಾಕ್ ಅನ್ನು fi ನಿಂದ ಮುಗಿಸುವುದನ್ನು ಮರೆಯಬೇಡಿ. |
04:43 | ಈಗ ಒಂದು if ಸ್ಟೇಟ್ ಮೆಂಟ್ ನ ಉದಾಹರಣೆಯನ್ನು ನೋಡೋಣ. |
04:46 | ಟರ್ಮಿನಲ್ ಗೆ ಹಿಂದಿರುಗೋಣ. |
04:49 | ನಾನು ಈಗಾಗಲೇ ಇರುವ simpleif.sh ಎಂಬ ಫೈಲ್ ಅನ್ನು ಓಪನ್ ಮಾಡುತ್ತೇನೆ. |
04:58 | ಈ ಬ್ಯಾಶ್ ಸ್ಕ್ರಿಪ್ಟ್ count ಇದು 100 ಸಮನಾದಾಗ count is 100 ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
05:06 | ಇದು ಬ್ಯಾಶ್ ಸ್ಕ್ರಿಪ್ಟ್ ನ ಮೊದಲ ಸಾಲು shebang line. |
05:12 | count ವೇರಿಯೇಬಲ್ ಗೆ 100 ಎಂಬ ಬೆಲೆಯು ಅಸೈನ್ ಆಗಿದೆ. |
05:17 | ನೆನಪಿಡಿ count,= ಮತ್ತು 100 ರ ನಡುವೆ ಸ್ಪೇಸ್ ನೀಡಬಾರದು. |
05:24 | ಈ ಎಕ್ಸ್-ಪ್ರೆಶನ್ count ನೂರಕ್ಕೆ ಸಮವಾಗಿದೆಯೋ ಇಲ್ಲವೋ ಪರೀಕ್ಷಿಸುತ್ತದೆ. |
05:30 | ಇಲ್ಲಿ –eq ಇದು ಕಂಪೇರಿಸನ್ ಓಪರೇಟರ್ ಆಗಿದೆ. |
05:35 | ಕಂಡಿಷನ್ true ಆಗಿದ್ದರೆ count is 100 ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
05:41 | fi ಇದು ಇಫ್ ಬ್ಲಾಕ್ ನ ಕೊನೆ. |
05:45 | Ctrl ಮತ್ತು s ಕೀ ಗಳನ್ನು ಒತ್ತಿ ಫೈಲ್ ಅನ್ನು ಸೇವ್ ಮಾಡಿ. |
05:49 | ಟರ್ಮಿನಲ್ ಗೆ ಹಿಂದಿರುಗಿ. |
05:51 | ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ simpleif.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
06:04 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
06:06 | ಡಾಟ್ ಸ್ಲ್ಯಾಶ್ simpleif.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
06:14 | ಇಲ್ಲಿ |
06:16 | Count is 100. ಎಂದು ಡಿಸ್ಪ್ಲೇ ಆಗಿದೆ. |
06:18 | count ವೇರಿಯೇಬಲ್ ನ ಬೆಲೆಯನ್ನು ಬದಲಿಸಿ ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ. |
06:24 | ಸ್ಲೈಡ್ಸ್ ಗೆ ಹಿಂದಿರುಗಿ. |
06:26 | if-else ಕಂಡಿಷನ್ ಅನ್ನು ನೋಡೋಣ. |
06:30 | ಸಾಮಾನ್ಯ ಸಿಂಟ್ಯಾಕ್ಸ್: if ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ condition ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸೆಮಿಕೋಲನ್ ಹಾಕಿ then |
06:44 | ಮುಂದಿನ ಸಾಲಿನಲ್ಲಿ ಕಮಾಂಡ್ಗಳನ್ನು ಟೈಪ್ ಮಾಡಿ. |
06:47 | ಮುಂದಿನ ಸಾಲಿನಲ್ಲಿ else ಸ್ಟೇಟ್ ಮೆಂಟ್ ಇದೆ. |
06:51 | ಮತ್ತು ಬೇರೆ ಕಮಾಂಡ್ ಗಳನ್ನು ಟೈಪ್ ಮಾಡಿ. |
06:55 | ಮುಂದಿನ ಸಾಲಿನಲ್ಲಿ ಇಫ್ ಬ್ಲಾಕ್ ಅನ್ನು ಮುಗಿಸಲು fi ಎಂದು ಟೈಪ್ ಮಾಡಿ. |
07:00 | ನಾವು ಈಗ ಪಾಸ್ ವರ್ಡ್ ಪ್ರೊಗ್ರಾಮ್ ನೊಂದಿಗೆ if-else ನ ಉಪಯೋಗವನ್ನು ನೋಡೋಣ. |
07:06 | ಟರ್ಮಿನಲ್ ಗೆ ಹಿಂದಿರುಗಿ. |
07:09 | ನಾನು ifelse.sh ಫೈಲ್ ಅನ್ನು ತೆರೆಯುತ್ತೇನೆ. |
07:14 | ಇದು shebang line' |
07:17 | ಇಲ್ಲಿ PASS ವೇರಿಯೇಬಲ್ ನಲ್ಲಿ abc123 ಸ್ಟೋರ್ ಆಗಿದೆ. |
07:23 | abc123 ಇದು ಸ್ಟ್ರಿಂಗ್ ಆಗಿರುವುದರಿಂದ ಇದನ್ನು ಡಬಲ್ ಕೋಟ್ಸ್ ನಲ್ಲೇ ಬರೆಯಬೇಕು. |
07:29 | read ಕಮಾಂಡ್ ಇದು ಒಂದು ಸಾಲಿನ ಡಾಟಾ ವನ್ನು ಸ್ಟ್ಯಾಂಡರ್ಡ್ ಇನ್ಪುಟ್ ನಿಂದ ಓದುತ್ತದೆ. |
07:35 | ಈ ಸಂದರ್ಭದಲ್ಲಿ ಕೀ ಬೋರ್ಡ್ ಸ್ಟ್ಯಾಂಡರ್ಡ್ ಇನ್-ಪುಟ್ ಆಗಿದೆ. |
07:39 | ಹೈಫನ್ s ಸೈಲಂಟ್ ಮೋಡ್ ಗಾಗಿ. |
07:43 | ಅಂದರೆ ನಾವು ಎಂಟರ್ ಮಾಡಿದ ಪಾಸ್ ವರ್ಡ್ ನಾವು ಟೈಪ್ ಮಾಡಿದಂತೆ ಡಿಸ್ಪ್ಲೇ ಆಗುವುದಿಲ್ಲ. |
07:48 | ನಾವು ನಮ್ಮ ಪಾಸ್ ವರ್ಡ್ ಇನ್ನೊಬ್ಬರು ನೋಡುವುದನ್ನು ಇಚ್ಛಿಸುವುದಿಲ್ಲ. |
07:52 | ಹೈಫನ್ p ಪ್ರಾಮ್ಟ್ ಗಾಗಿ. |
07:55 | ಇದು ಬಳಕೆದಾರರಿಂದ ಇನ್ಪುಟ್ ಪಡೆಯುವ ಮೊದಲು “'Enter password: ” ಎಂಬ ಸ್ಟ್ರಿಂಗ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
08:01 | mypassword ಇದು ಒಂದು ವೇರಿಯೇಬಲ್. |
08:04 | ಇದು ಸ್ಟ್ರಿಂಗ್ ಅನ್ನು ಸ್ಟೋರ್ ಮಾಡುತ್ತದೆ ಅಂದರೆ ಇಲ್ಲಿ ಬಳಕೆದಾರ ನಮೂದಿಸಿದ ಪಾಸ್ ವರ್ಡ್ ಅನ್ನು ಸ್ಟೋರ್ ಮಾಡುತ್ತದೆ. |
08:10 | ಇದು ಬಳಕೆದಾರ ನಮೂದಿಸಿದ ಪಾಸ್ ವರ್ಡ್ ಮತ್ತು PASS ವೇರಿಯೇಬಲ್ ನ ಬೆಲೆಯೂ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸುತ್ತದೆ. |
08:17 | ಇದು mypassword ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ. |
08:21 | ಪಾಸ್ ವರ್ಡ್ ಹೊಂದಿಕೆಯಾದರೆ ಇದು |
08:25 | “Password accepted” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
08:27 | ಇಲ್ಲವಾದರೆ ಇದು '“Access denied” ಎಂದು ಡಿಸ್ಪ್ಲೇ ಮಾಡುತ್ತದೆ. |
08:31 | fi ಇದು ಇಫ್ ಎಲ್ಸ್ ಲೂಪ್ ನ ಕೊನೆ. |
08:34 | Ctrl s ಅನ್ನು ಒತ್ತಿ ಫೈಲ್ ಅನ್ನು ಸೇವ್ ಮಾಡಿ. |
08:38 | ಟರ್ಮಿನಲ್ ಗೆ ಹಿಂದಿರುಗಿ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು,
chmodಸ್ಪೇಸ್ ಪ್ಲಸ್ x ಸ್ಪೇಸ್ ifelse.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:52 | ಡಾಟ್ ಸ್ಲ್ಯಾಶ್ ifelse.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
08:57 | ಇಲ್ಲಿ |
08:59 | Enter password: ಎಂದು ಡಿಸ್ಪ್ಲೇ ಆಗುತ್ತದೆ. |
09:00 | ನಾನು abc ಎಂದು ಟೈಪ್ ಮಾಡಿ Enter ಅನ್ನು ಒತ್ತುತ್ತೇನೆ. |
09:05 | ನಮೂದಿಸಿದ ಪಾಸ್ ವರ್ಡ್ ತಪ್ಪಾಗಿರುವುದರಿಂದ “Access denied” ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
09:11 | ಈಗ ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ. ಆದರೆ ಈಗ ಪಾಸ್ ವರ್ಡ್ ಅನ್ನು abc123 ಎಂದು ನಮೂದಿಸೋಣ. |
09:21 | Password accepted ಎಂದು ಡಿಸ್ಪ್ಲೇ ಆಗುತ್ತದೆ. |
09:25 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
09:28 | ಸ್ಲೈಡ್ಸ್ ಗೆ ಹಿಂದಿರುಗಿ ಸಾರಾಂಶವನ್ನು ನೋಡೋಣ. |
09:31 | ಈ ಟ್ಯುಟೋರಿಯಲ್ ನಲ್ಲಿ ನಾವು test ಕಮಾಂಡ್ ನ ಉಪಯೋಗ, if statement ಮತ್ತು if else statement ಗಳ ಕುರಿತು ಕಲಿತಿದ್ದೇವೆ. |
09:41 | ಸ್ವಂತ ಅಭ್ಯಾಸಕ್ಕಾಗಿ, |
09:43 | # ನಿಮ್ಮ ಹೆಸರನ್ನು ಇನ್ಪುಟ್ ಆಗಿ ಪಡೆದು |
09:46 | #ಅದು ಸಿಸ್ಟಮ್ ನ ಯೂಸರ್ ನೇಮ್ ನೊಂದಿಗೆ ಹೊಂದಿಕೆಯಾಗುವುದೋ ಎಂದು ಪರೀಕ್ಷಿಸುವ ಸ್ಕ್ರಿಪ್ಟ್ ಅನ್ನು ಬರೆಯಿರಿ. |
09:51 | ಯೂಸರ್ ನೇಮ್ ಹೊಂದಿಕೆಯಾದರೆ ಇದು Hello ಎಂದು ನಿಮ್ಮನ್ನು ಸ್ವಾಗತಿಸಬೇಕು |
09:56 | # ಇಲ್ಲವಾದಲ್ಲಿ Try again ಎಂದು ಡಿಸ್ಪ್ಲೇ ಆಗಬೇಕು. |
10:00 | ಸುಳಿವು: ನಿಮ್ಮ ಸಿಸ್ಟಮ್ ಯೂಸರ್ ನೇಮ್ $USER ವೇರಿಯೇಬಲ್ ನಲ್ಲಿ ಸ್ಟೋರ್ ಆಗಿರುತ್ತದೆ. |
10:06 | ವಿಡಿಯೋವನ್ನು ಈ ಜಾಲತಾಣದಲ್ಲಿ ವೀಕ್ಷಿಸಿ. |
10:09 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
10:11 | ನೀವು ಒಳ್ಳೆಯ ಬ್ಯಾಂಡ್ವಿ್ಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋಬಡ್ ಮಾಡಿ ನೋಡಬಹುದು. |
10:16 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು |
10:18 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
10:22 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ. |
10:26 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
10:33 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
10:37 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
10:45 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
10:51 | FOSSEE ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡವು ಈ ಟ್ಯುಟೋರಿಲ್ ಅನ್ನು ತಯಾರಿಸಿದೆ. |
10:56 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ |
11:01 | ಧನ್ಯವಾದಗಳು. |
________________________________________