BASH/C2/Command-Line-arguments-and-Quoting/Kannada
From Script | Spoken-Tutorial
Revision as of 22:38, 5 July 2015 by NaveenBhat (Talk | contribs)
Time | Narration |
00:01 | BASHನಲ್ಲಿ Command line arguments and Quoting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:08 | ಇಲ್ಲಿ ನಾವು |
00:11 | * Command line Arguments ಮತ್ತು |
00:13 | * Quoting ಗಳ ಕುರಿತು ಕಲಿಯುತ್ತೇವೆ. |
00:15 | ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು. |
00:20 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:26 | ಈ ಪಾಠಕ್ಕಾಗಿ ನಾನು |
00:29 | * Ubuntu Linux 12.04 OS ಮತ್ತು |
00:33 | * GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:37 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:43 | * Shell script ಕಮಾಂಡ್ ಲೈನ್ ಇಂದ ಕೂಡ ಆರ್ಗ್ಯುಮೆಂಟ್ ಗಳನ್ನು ಸ್ವೀಕರಿಸಬಹುದು. |
00:46 | * ಕಾಲ್ ಮಾಡಲ್ಪಟ್ಟ ಪ್ರೋಗ್ರಾಂ ಗೆ ಆರ್ಗ್ಯುಮೆಂಟ್ ಕಳುಹಿಸಲ್ಪಡುತ್ತದೆ. |
00:52 | * ಒಂದು ಪ್ರೋಗ್ರಾಮ್ ಗೆ ಎಷ್ಟು ಆರ್ಗ್ಯುಮೆಂಟ್ ಗಳನ್ನು ಬೇಕಾದರೂ ಕಳುಹಿಸಬಹುದು. |
00:57 | ಈಗ ನಾವು Ctrl Alt ಮತ್ತು T ಕೀ ಗಳನ್ನುಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡೋಣ. |
01:06 | ನಾನು ಈಗಾಗಲೇ arg.sh ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ. |
01:12 | ಟರ್ಮಿನಲ್ ನಲ್ಲಿ ಈ ಫೈಲ್ ಅನ್ನು ಓಪನ್ ಮಾಡೋಣ. |
01:16 | gedit ಸ್ಪೇಸ್ arg.sh ಸ್ಪೇಸ್ ಆಂಪರ್ಸೆಂಡ್ ಚಿಹ್ನೆಯನ್ನು ಟೈಪ್ ಮಾಡಿ. |
01:23 | ನಾವು ಆಂಪರ್ಸೆಂಡ್ ಚಿಹ್ನೆಯನ್ನು ಪ್ರಾಮ್ಟ್ ಅನ್ನು ಖಾಲಿ ಮಾಡಲು ಉಪಯೋಗಿಸುತ್ತೇವೆ. |
01:27 | Enter ಒತ್ತಿರಿ. |
01:30 | ಟೆಕ್ಸ್ಟ್ ಎಡಿಟರ್ ಓಪನ್ ಆಗಿದೆ. |
01:33 | ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ. |
01:36 | ಇದು shenbang line. |
01:39 | ಈ ಸಾಲು Zeroth ಆರ್ಗ್ಯುಮೆಂಟ್ ಅನ್ನು ಪ್ರಿಂಟ್ ಮಾಡುತ್ತದೆ. |
01:43 | ಇಲ್ಲಿ $0 (ಡಾಲರ್ ಸೊನ್ನೆ) shell script ನ ಹೆಸರನ್ನು ಪ್ರಿಂಟ್ ಮಾಡುತ್ತದೆ. |
01:48 | ಅಂದರೆ ಸೊನ್ನೆ ಆರ್ಗ್ಯುಮೆಂಟ್ ಪ್ರೋಗ್ರಾಮ್ ನ ಹೆಸರೇ ಆಗಿರುತ್ತದೆ. |
01:55 | ನಾವು ಈಗ ಪ್ರೋಗ್ರಾಂ ಅನ್ನುಎಕ್ಸಿಕ್ಯೂಟ್ ಮಾಡಿ ನೋಡೋಣ. |
01:59 | ಟರ್ಮಿನಲ್ ಗೆ ಹಿಂದಿರುಗೋಣ. |
02:01 | ಮೊದಲು ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. |
02:05 | ಅದಕ್ಕಾಗಿ chmod ಸ್ಪೇಸ್ ಪ್ಲಸ್ x ಸ್ಪೇಸ್ arg.sh ಎಂದು ಟೈಪ್ ಮಾಡಿ. |
02:12 | Enter ಒತ್ತಿರಿ. |
02:14 | ಈಗ ಡಾಟ್ ಸ್ಲ್ಯಾಶ್ arg.sh ಎಂದು ಟೈಪ್ ಮಾಡಿ. |
02:18 | Enter ಒತ್ತಿರಿ. |
02:19 | Zeroth argument is arg.sh ಎಂಬ ಫಲಿತ ಡಿಸ್ಪ್ಲೇ ಆಗುತ್ತದೆ. |
02:26 | ಈಗ ಎಡಿಟರ್ ಗೆ ಹಿಂದಿರುಗಿ, ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
02:33 | $1 (ಡಾಲರ್ ಒಂದು) ಕಮಾಂಡ್ ಲೈನ್ ನಿಂದ ಪ್ರೋಗ್ರಾಮ್ ಗೆ ಕಳುಹಿಸಿದ ಮೊದಲನೇ ಆರ್ಗ್ಯುಮೆಂಟ್ ಅನ್ನು ಪ್ರತಿನಿಧಿಸುತ್ತದೆ. |
02:40 | $2(ಡಾಲರ್ ಎರಡು) ಪ್ರೋಗ್ರಾಮ್ ಗೆ ಕಳುಹಿಸಿದ ಎರಡನೇ ಆರ್ಗ್ಯುಮೆಂಟ್ ಅನ್ನು ಪ್ರತಿನಿಧಿಸುತ್ತದೆ. |
02:44 | ಮತ್ತು $3 (ಡಾಲರ್ ಮೂರು) ಪ್ರೋಗ್ರಾಮ್ ಗೆ ಕಳುಹಿಸಿದ ಮೂರನೇ ಆರ್ಗ್ಯುಮೆಂಟ್ ಅನ್ನು ಪ್ರತಿನಿಧಿಸುತ್ತದೆ. |
02:48 | Save ಮೇಲೆ ಕ್ಲಿಕ್ ಮಾಡಿ. |
02:49 | ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಿ ನೋಡೋಣ. |
02:52 | uparrow key ಯನ್ನು ಒತ್ತಿರಿ 'Enter ಅನ್ನು ಒತ್ತಿರಿ. |
02:57 | ನಾವು ಈಗ ಸೊನ್ನೆ ಯ ಆರ್ಗ್ಯುಮೆಂಟ್ ಅನ್ನು ನೋಡುತ್ತೇವೆ. |
03:00 | ಆದರೆ ಮೊದಲನೇ, ಎರಡನೇ ಮತ್ತು ಮೂರನೆ ಆರ್ಗ್ಯುಮೆಂಟ್ ಗಳು ಖಾಲಿಯಾಗಿವೆ. |
03:05 | ಏಕೆಂದರೆ ಕಮಾಂಡ್ ಲೈನ್ ಆರ್ಗ್ಯುಮೆಂಟ್ ಗಳು ಎಕ್ಸಿಕ್ಯೂಶನ್ ಸಮಯದಲ್ಲಿ ಕೊಡಲ್ಪಡುತ್ತದೆ. |
03:11 | ಹಾಗಾಗಿ uparrow key ಯನ್ನು ಒತ್ತಿ ಮತ್ತುsunday monday ಮತ್ತು Tuesday ಎಂದು ಟೈಪ್ ಮಾಡಿ. |
03:18 | Enter ಒತ್ತಿರಿ. |
03:21 | ನೀವು ಮೊದಲನೇ , ಎರಡನೇ ಮತ್ತು ಮೂರನೇ ಆರ್ಗ್ಯುಮೆಂಟ್ಸ್ ಗಳು ಕ್ರಮವಾಗಿ Sunday Monday ಮತ್ತು Tuesday ಆಗಿರುವುದನ್ನು ನೋಡಬಹುದು. |
03:28 | editor ಗೆ ಹಿಂದಿರುಗಿ Enter ಅನ್ನು ಒತ್ತಿರಿ. |
03:33 | ಇಲ್ಲಿ ತೋರಿಸಿರುವ ಸಾಲುಗಳನ್ನು ಟೈಪ್ ಮಾಡಿ. |
03:37 | $12 (ಡಾಲರ್ ಹನ್ನೆರಡು) ಪ್ರೋಗ್ರಾಮ್ ಗೆ ಕಳುಹಿಸಿದ ಹನ್ನೆರಡನೇ ಆರ್ಗ್ಯುಮೆಂಟ್ ಅನ್ನು ಪ್ರತಿನಿಧಿಸುತ್ತದೆ. |
03:41 | 9 ರ ನಂತರದ ಆರ್ಗ್ಯುಮೆಂಟ್ ಅನ್ನು ಸೂಚಿಸಲು ನಾವು ಕರ್ಲೀ ಬ್ರ್ಯಾಕೆಟ್ ಅನ್ನು ಉಪಯೋಗಿಸಬೇಕು |
03:46 | ಇಲ್ಲವಾದಲ್ಲಿ ಬ್ಯಾಶ್ , ದಶಕದ ಸ್ಥಾನದಲ್ಲಿರುವ ಅಂಕಿಯ ಆರ್ಗ್ಯುಮೆಂಟ್ ಅನ್ನು ತೆಗೆದುಕೊಳ್ಳುತ್ತದೆ. |
03:53 | ಮತ್ತು ನಾವು ಅಂದುಕೊಂಡ ಫಲಿತವನ್ನು ಪಡೆಯುವುದಿಲ್ಲ. |
03:57 | Save ಮೇಲೆ ಕ್ಲಿಕ್ ಮಾಡಿ. |
03:59 | ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:01 | ಟರ್ಮಿನಲ್ ಗೆ ಹಿಂದಿರುಗಿ. |
04:04 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
04:07 | ಈಗ ನಾವು ಪ್ರೋಗ್ರಾಮ್ ಗೆ 12 ಅಥವಾ 13 ಆರ್ಗ್ಯುಮೆಂಟ್ ಗಳನ್ನು ನೀಡಬೇಕು. |
04:12 | ಅದಕ್ಕಾಗಿ ಡಾಟ್ ಸ್ಲ್ಯಾಶ್ arg.sh ಸ್ಪೇಸ್ 1 ರಿಂದ 13 ರವರೆಗೆ ಟೈಪ್ ಮಾಡಿ enter ಅನ್ನು ಒತ್ತಿರಿ. |
04:23 | ನೀವು ಇಲ್ಲಿ 12ನೇ ಆರ್ಗ್ಯುಮೆಂಟ್ 12 ಆಗಿರುವುದನ್ನು ನೋಡಬಹುದು. |
04:27 | ಎಡಿಟರ್ ಗೆ ಹಿಂದಿರುಗೋಣ. |
04:30 | ಮತ್ತು ಇಲ್ಲಿ ತೋರಿಸಿರುವ ಸಾಲುಗಳನ್ನು ಟೈಪ್ ಮಾಡಿ. |
04:34 | $# (ಡಾಲರ್ ಹ್ಯಾಶ್) ಪ್ರೋಗ್ರಾಮ್ ಗೆ ಕಳುಹಿಸಿದ ಎಲ್ಲ ಆರ್ಗ್ಯುಮೆಂಟ್ ಗಳ ಮೊತ್ತವನ್ನು ನೀಡುತ್ತದೆ. |
04:40 | Save ಅನ್ನು ಕ್ಲಿಕ್ ಮಾಡಿ. |
04:43 | ಈಗ ಎಕ್ಸಿಕ್ಯೂಟ್ ಮಾಡೋಣ. |
04:44 | ಟರ್ಮಿನಲ್ ಗೆ ಹಿಂದಿರುಗಿ. |
04:46 | ಎಕ್ಸಿಕ್ಯೂಟ್ ಮಾಡಲು uparrow key ಯನ್ನು ಒತ್ತಿ ಮತ್ತುEnter ಒತ್ತಿರಿ. |
04:52 | ನಾವು ಒಟ್ಟು ಆರ್ಗ್ಯುಮೆಂಟ್ ಗಳ ಸಂಖ್ಯೆ 13 ಆಗಿರುವುದನ್ನು ನೋಡಬಹುದು. |
04:57 | ಎಡಿಟರ್ ಗೆ ಹಿಂದಿರುಗಿ. |
05:00 | Enter ಅನ್ನು ಒತ್ತಿ ಮತ್ತು ಇಲ್ಲಿ ತೋರಿಸಿರುವ ಸಾಲುಗಳನ್ನು ಟೈಪ್ ಮಾಡಿ. |
05:04 | $* (ಡಾಲರ್ ಅಸ್ಟೆರಿಕ್ಸ್) ಎಲ್ಲ ಆರ್ಗ್ಯುಮೆಂಟ್ ಗಳನ್ನು ಒಂದೇ ಸಾಲಿನಲ್ಲಿ ಪ್ರಿಂಟ್ ಮಾಡುತ್ತದೆ. |
05:10 | ಇದನ್ನು ಒಂದು ಸುಲಭ ಫಾರ್ ಲೂಪ್ ಉಪಯೋಗಿಸಿ ನೋಡೋಣ. |
05:14 | ಫಾರ್ ಲೂಪ್ ಅನ್ನು ಎಕ್ಸಿಕ್ಯೂಷನ್ ಸಮಯದಲ್ಲಿ ವಿಶ್ಲೇಷಿಸೋಣ. |
05:18 | Save ಮೇಲೆ ಕ್ಲಿಕ್ ಮಾಡಿ.ಟರ್ಮಿನಲ್ ಗೆ ಹಿಂದಿರುಗಿ. |
05:22 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
05:26 | ಡಾಟ್ ಸ್ಲ್ಯಾಶ್ arg.sh ಸ್ಪೇಸ್ sunday monday ಮತ್ತು Tuesday ಎಂದು ಟೈಪ್ ಮಾಡಿ. |
05:35 | Enter ಒತ್ತಿರಿ. |
05:38 | ಇಲ್ಲಿ ಆರ್ಗ್ಯುಮೆಂಟ್ ಗಳ ಸಂಖ್ಯೆಯ ಮೊತ್ತ 3 ಏಕೆಂದರೆ ನಾವು ಪ್ರೋಗ್ರಾಮ್ ಗೆ 3 ಆರ್ಗ್ಯುಮೆಂಟ್ ಗಳನ್ನು ಕಳಿಸಿದ್ದೇವೆ. |
05:46 | ಆಗಲೇ ಹೇಳಿದಂತೆ $* ಇದು ಎಲ್ಲ ಆರ್ಗ್ಯುಮೆಂಟ್ ಗಳನ್ನು ಒಂದೇ ಸಾಲಿನಲ್ಲಿ ಪ್ರಿಂಟ್ ಮಾಡುತ್ತದೆ. |
05:54 | ಮತ್ತು ಇದು ಫಾರ್ ಲೂಪ್ ನ ಫಲಿತ. |
05:57 | ನಾವು ಇಲ್ಲಿ ಎಲ್ಲ ಆರ್ಗ್ಯುಮೆಂಟ್ ಗಳು ಒಂದೇ ಸಾಲಿನಲ್ಲಿ ಪ್ರಿಂಟ್ ಆಗಿರುವುದನ್ನು ನೋಡಬಹುದು. |
06:02 | ಪ್ರೋಗ್ರಾಮ್ ಗೆ ಹಿಂದಿರುಗಿ ಇಲ್ಲಿ ತೋರಿಸಿರುವ ಸಾಲುಗಳನ್ನು ಟೈಪ್ ಮಾಡಿ. |
06:09 | $@ (ಡಾಲರ್ ಎಟ್) ಕೂಡ ಎಲ್ಲಾ ಆರ್ಗ್ಯುಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ. |
06:13 | ಆದರೆ ಈ ಬಾರಿ ಪ್ರತಿಯೊಂದು ಆರ್ಗ್ಯುಮೆಂಟ್ ಬೇರೆ ಬೇರೆ ಸಾಲಿನಲ್ಲಿ ಪ್ರಿಂಟ್ ಆಗುತ್ತದೆ. |
06:20 | ಇದು ಪ್ರತಿಯೊಂದು ಆರ್ಗ್ಯುಮೆಂಟ್ ಅನ್ನು ಬೇರೆ ಬೇರೆ ಸಾಲಿನಲ್ಲಿ ಪ್ರಿಂಟ್ ಮಾಡುವ ಇನ್ನೊಂದು ಫಾರ್ ಲೂಪ್. |
06:26 | ಹೇಗೆಂದು ನೋಡೋಣ. Save ಮೇಲೆ ಕ್ಲಿಕ್ ಮಾಡಿ. |
06:29 | ಟರ್ಮಿನಲ್ ಗೆ ಹಿಂದಿರುಗಿ. |
06:32 | uparrow key ಯನ್ನು ಒತ್ತಿರಿ. |
06:34 | Enter ಅನ್ನು ಒತ್ತಿರಿ. ಈಗ ವ್ಯತ್ಯಾಸವನ್ನು ನೋಡೋಣ. |
06:39 | ಈ ಆರ್ಗ್ಯುಮೆಂಟ್ ಗಳು $@ ನಿಂದ ಪ್ರಿಂಟ್ ಮಾಡಲ್ಪಟ್ಟವು. |
06:43 | $@ ಪ್ರತಿಯೊಂದು ಆರ್ಗ್ಯುಮೆಂಟ್ ಅನ್ನು ಬೇರೆ ಸಾಲಿನಲ್ಲಿ ಪ್ರಿಂಟ್ ಮಾಡುತ್ತದೆ. |
06:47 | ಇದು ಎರಡನೇ ಫಾರ್ ಲೂಪ್ ನ ಫಲಿತ. |
06:52 | ಈಗ BASH ನಲ್ಲಿ quoting ನ ಕುರಿತು ತಿಳಿದುಕೊಳ್ಳೋಣ. |
06:55 | ಸ್ಲೈಡ್ಸ್ ಗೆ ಹಿಂದಿರುಗೋಣ. |
06:57 | ಮೂರು ವಿಧದ quotes ಗಳಿವೆ. |
06:59 | Double quote |
07:00 | Single quote |
07:02 | Backslash |
07:03 | * Double quote ವೇರಿಯೇಬಲ್ ಗಳ ಮತ್ತು ಕಮಾಂಡ್ ಗಳ ಬೆಲೆಯನ್ನು ಡಿಸ್ಪ್ಲೇ ಮಾಡುತ್ತದೆ. |
07:09 | * ಉದಾಹರಣೆಗೆ echo “Username is $USER” |
07:13 | * ಇದು ನಿಮ್ಮ ಸಿಸ್ಟಮ್ ನ ಯೂಸರ್ ನೇಮ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
07:17 | ಟರ್ಮಿನಲ್ ಗೆ ಹಿಂದಿರುಗಿ. |
07:20 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
07:23 | echoಸ್ಪೇಸ್ ಡಬಲ್ ಕೋಟ್ ನಲ್ಲಿ Username is ಸ್ಪೇಸ್ ಡಾಲರ್ (ಕ್ಯಾಪಿಟಲ್ ನಲ್ಲಿ) USER ಎಂದು ಟೈಪ್ ಮಾಡಿ. |
07:34 | Enter ಒತ್ತಿರಿ. |
07:35 | ಸಿಸ್ಟಮ್ ನ ಯೂಸರ್ ನೇಮ್ ಪ್ರಿಂಟ್ ಆಗುತ್ತದೆ. |
07:39 | ಫಲಿತವು ಸಿಸ್ಟಮ್ ಗೆ ಅನುಸಾರವಾಗಿ ಬದಲಾಗುತ್ತದೆ. |
07:42 | ಈಗ ಸ್ಲೈಡ್ಸ್ ಗೆ ಹಿಂದಿರುಗಿ. |
07:46 | Single quotes: ಕೊಟ್ಟಿರುವ ಸ್ಟ್ರಿಂಗ್ ನ ಪ್ರತಿಯೊಂದು ಅಕ್ಷರವನ್ನೂ ಯಥಾವತ್ ಕಾಯ್ದುಕೊಳ್ಳುತ್ತದೆ. |
07:53 | ಎಲ್ಲ ಅಕ್ಷರ ಗಳ ವಿಶೇಷ ಅರ್ಥವನ್ನು ತೆಗೆದು ಹಾಕಲು ಇದನ್ನು ಉಪಯೋಗಿಸುತ್ತೇವೆ. |
07:58 | ಟರ್ಮಿನಲ್ ಗೆ ಹಿಂದಿರುಗಿ. |
08:01 | echoಸ್ಪೇಸ್ ಸಿಂಗಲ್ ಕೋಟ್ ನಲ್ಲಿ Username is ಡಾಲರ್ ಕ್ಯಾಪಿಟಲ್ ನಲ್ಲಿ USER ಎಂದು ಟೈಪ್ ಮಾಡಿ. |
08:10 | Enter ಒತ್ತಿರಿ. |
08:12 | ಫಲಿತವು Username is $USER ಎಂದಾಗಿರುತ್ತದೆ. |
08:16 | ಈ ಉದಾಹರಣೆಯಲ್ಲಿ ಇದು ಸಿಂಗಲ್ ಕೋಟ್ ನಲ್ಲಿಇರುವ ಎಲ್ಲಾ ಅಕ್ಷರಗಳನ್ನು ಪ್ರಿಂಟ್ ಮಾಡುತ್ತದೆ. |
08:23 | ಇದು $USER ವೇರಿಯೇಬಲ್ ನ ಬೆಲೆಯನ್ನು ತೋರಿಸುವುದಿಲ್ಲ. |
08:28 | ಸ್ಲೈಡ್ಸ್ ಗೆ ಹಿಂದಿರುಗಿ. |
08:31 | *Backslash: ಇದು ಒಂದು ಅಕ್ಷರದಿಂದ ಅದರ ವಿಶೇಷ ಅರ್ಥವನ್ನು ತೆಗೆದು ಹಾಕುತ್ತದೆ. |
08:37 | * ಇದು BASH ನಲ್ಲಿ ಎಸ್ಕೇಪ್ ಕ್ಯಾರೆಕ್ಟರ್ ಆಗಿ ಉಪಯೋಗಿಸಲ್ಪಡುತ್ತದೆ. |
08:42 | ಟರ್ಮಿನಲ್ ಗೆ ಹಿಂದಿರುಗಿ. |
08:44 | echoಡಬಲ್ ಕೋಟ್ಸ್ ನಲ್ಲಿ “Username is ಬ್ಯಾಕ್ ಸ್ಲ್ಯಾಶ್ ಡಾಲರ್ (ಕ್ಯಾಪಿಟಲ್ ನಲ್ಲಿ) USER” ಎಂದು ಟೈಪ್ ಮಾಡಿ. |
08:55 | ನಾವು ಡಬಲ್ ಕೋಟ್ಸ್ ಹಾಕಿರುವುದರಿಂದ echo ಕಮಾಂಡ್ ಯೂಸರ್ ನೇಮ್ ಅನ್ನು ಡಿಸ್ಪ್ಲೇ ಮಾಡುತ್ತದೆ ಎಂದು ನಿರೀಕ್ಷಿಸುತ್ತೇವೆ. |
09:02 | ಈ ಕಮಾಂಡ್ ಅನ್ನು ಪರೀಕ್ಷಿಸಲು Enter ಅನ್ನು ಒತ್ತಿರಿ. |
09:06 | ಫಲಿತವು Username is $USERಆಗಿರುತ್ತದೆ. |
09:10 | ಈ ಉದಾಹರಣೆಯಲ್ಲಿ ಬ್ಯಾಕ್ ಸ್ಲ್ಯಾಶ್ (ಡಾಲರ್ ) $ ಚಿಹ್ನೆಯ ವಿಶೇಷ ಅರ್ಥವನ್ನು ತೆಗೆದು ಹಾಕುತ್ತದೆ. |
09:16 | ಇಲ್ಲಿ $USER ಯಾವುದೇ ವಿಶೇಷತೆಗಳಿಲ್ಲದ ಕೇವಲ ಒಂದು ಸ್ಟ್ರಿಂಗ್ ಆಗಿರುತ್ತದೆ. |
09:22 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
09:25 | ಸ್ಲೈಡ್ಸ್ ಗೆ ಹಿಂದಿರುಗಿ. |
09:27 | ಸಾರಾಂಶವನ್ನು ನೋಡೋಣ. |
09:28 | ಈ ಟ್ಯುಟೋರಿಯಲ್ನಲ್ಲಿ ನಾವು |
09:31 | * ಕಮಾಂಡ್ ಲೈನ್ ಆರ್ಗ್ಯುಮೆಂಟ್ ಗಳ ಕುರಿತು, |
09:33 | * ಡಬಲ್ ಕೋಟ್, ಸಿಂಗಲ್ ಕೋಟ್ ಮತ್ತು ಬ್ಯಾಕ್ ಸ್ಲ್ಯಾಶ್ ಗಳ ಕಾರ್ಯವನ್ನು ಕಲಿತಿದ್ದೇವೆ. |
09:39 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
09:42 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
09:45 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
09:51 | Spoken Tutorial Project Team ಇದು,
spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
09:56 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:00 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
10:07 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
10:10 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
10:24 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
10:30 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |