BASH/C2/More-on-Arrays/Kannada
From Script | Spoken-Tutorial
Revision as of 16:54, 19 June 2015 by NaveenBhat (Talk | contribs)
Time | Narration |
---|---|
00:02 | More on Arrays in BASH ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | ಅರೇ ಯಿಂದ ಎಲಿಮೆಂಟ್ ಗಳನ್ನು ಹೊರ ತೆಗೆಯುವುದು, |
00:13 | ಅರೇ ಯ ಎಲಿಮೆಂಟ್ ಗಳನ್ನು ಬದಲಾಯಿಸುವುದು, |
00:16 | ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು ಮತ್ತು |
00:19 | ಅರೇ ಯಿಂದ ಎಲಿಮೆಂಟ್ ಅನ್ನು ಅಳಿಸುವುದರ ಕುರಿತು ಕಲಿಯುತ್ತೇವೆ. |
00:22 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ತಿಳಿದಿರಬೇಕು. |
00:28 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
00:34 | ಈ ಟ್ಯುಟೋರಿಯಲ್ ಗಾಗಿ ನಾನು ಉಬಂಟು ಲಿನಕ್ಸ್ 12.04 ಆಪರೇಟಿಂಗ್ ಸಿಸ್ಟಮ್ |
00:41 | ಮತ್ತು ಜಿ.ಎನ್.ಯು ಬ್ಯಾಷ್ ಆವೃತ್ತಿ 4.1.10 ಅನ್ನು ಉಪಯೋಗಿಸುತ್ತೇನೆ. |
00:45 | ಅಭ್ಯಾಸಕ್ಕೆ ಜಿ.ಎನ್.ಯು ಬ್ಯಾಷ್ ಆವೃತ್ತಿ 4 ಅಥವಾ ಮುಂದಿನದ್ದನ್ನುಸೂಚಿಸಲಾಗಿದೆ |
00:50 | ಈಗ ಮೊದಲು ಅರೇ ಯ ಎಲಿಮೆಂಟ್ ಅನ್ನು ಹೇಗೆ ಹೊರತೆಗೆಯುವುದು ಎಂದು ನೋಡೋಣ. |
00:55 | ಅರೇಯ ಎಲಿಮೆಂಟ್ ಗಳನ್ನು ಯಾವ ಸ್ಥಾನದಿಂದ ಬೇಕಾದರೂ ಹೊರತೆಗೆಯಬಹುದು. |
01:00 | ಇಲ್ಲಿ ಇಂಡೆಕ್ಸ್ ಸಂಖ್ಯೆಯು ಅದರ ಸ್ಥಾನ ವಾಗಿದೆ. |
01:04 | ಇಂಡೆಕ್ಸ್ ಸಂಖ್ಯೆಯು ಯಾವಾಗಲೂ ಸೊನ್ನೆಯಿಂದ ಪ್ರಾರಂಭವಾಗುತ್ತದೆ. |
01:09 | ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ: |
01:12 | ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಸೈನ್ (@) ಕೋಲನ್ ಪೊಸಿಶನ್ ಕೋಲನ್ ಹೊರತೆಗೆಯಬೇಕಾದ ಎಲಿಮೆಂಟ್ ಗಳ ಸಂಖ್ಯೆ. |
01:25 | ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ.. |
01:29 | Ctrl Alt ಮತ್ತು T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ. |
01:37 | gedit ಸ್ಪೇಸ್ array2.sh ಸ್ಪೇಸ್ & (ಆಂಪರ್ಸೆಂಡ್) ಸೈನ್ ಟೈಪ್ ಮಾಡಿ Enter ಅನ್ನು ಒತ್ತಿ. |
01:47 | ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ array2.sh ಫೈಲ್ ನಲ್ಲಿ ಟೈಪ್ ಮಾಡಿ. |
01:54 | ಈಗ ಪ್ರೋಗ್ರಾಮ್ ಅನ್ನು ವಿವರಿಸುತ್ತೇನೆ. |
01:56 | ಇದು Shenbang line. |
01:59 | ಈ ಡಿಕ್ಲೇರ್ ಕಮ್ಮಾಂಡ್ Linux ಎಂಬ ಅರೇಯನ್ನು |
02:06 | Debian |
02:07 | Redhat |
02:08 | Ubuntu ಮತ್ತು |
02:09 | Fedora ಎಂಬ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಮಾಡುತ್ತದೆ. |
02:11 | ಈ echo ಕಮ್ಮಾಂಡ್ ಅರೇಯ ಎಲ್ಲ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ. |
02:16 | ಮುಂದಿನ echo ಕಮ್ಮಾಂಡ್ ಹೊರತೆಗೆದ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ. |
02:21 | ${Linux[@]:1:2} ಈ ಕಮ್ಮಾಂಡ್ ಇಂಡೆಕ್ಸ್ ಸಂಖ್ಯೆ ಒಂದರಿಂದ ಅಂದರೆ Redhat ಇಂದ ಪ್ರಾರಂಭಿಸಿ ಎರಡು ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ. |
02:34 | ಈಗ ಟರ್ಮಿನಲ್ ಅನ್ನು ತೆರೆಯಿರಿ. |
02:36 | ಮೊದಲು ಈ ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ array2.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
02:50 | ಡಾಟ್ ಸ್ಲ್ಯಾಷ್ array2.sh ಎಂದು ಟೈಪ್ ಮಾಡಿ Enter ಒತ್ತಿ. |
02:56 | ನಾವು Original elements in an array Linux: Debian Redhat Ubuntu and Fedora ಮತ್ತು |
03:06 | The two elements starting from index one(Redhat): Redhat and Ubuntu ಎಂಬ ಫಲಿತಗಳನ್ನು ಪಡೆಯುತ್ತೇವೆ. |
03:12 | ಸ್ಲೈಡ್ಸ್ ಗೆ ಹಿಂತಿರುಗೋಣ. |
03:15 | ಈಗ ಅರೇಯ ಎಲಿಮೆಂಟ್ ಅನ್ನು ಹೇಗೆ ಬದಲಿಸುವುದು ಎಂದು ನೋಡೋಣ. |
03:19 | ಅರೇಯಲ್ಲಿರುವ ಎಲಿಮೆಂಟ್ ಅನ್ನು ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ ಬದಲಾಯಿಸಬಹುದು. |
03:25 | ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ n ಸಮ ಸಿಂಗಲ್ ಕೋಟ್ ನಲ್ಲಿ NewWord ಅನ್ನು ಟೈಪ್ ಮಾಡಿ. |
03:34 | ಇಲ್ಲಿ n ಇಂಡೆಕ್ಸ್ ಸಂಖ್ಯೆ ಅಥವಾ ಎಲಿಮೆಂಟ್ ಸಂಖ್ಯೆ. |
03:38 | ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ. |
03:41 | Linux[2]='Mandriva’ |
03:45 | ಈ ಕಮ್ಮಾಂಡ್ ಅರೇಯ ಮೂರನೇ ಎಲಿಮೆಂಟ್ ಆದUbuntu ವನ್ನು Mandriva ಎಂದು ಬದಲಿಸುತ್ತದೆ. |
03:51 | ಈ echo ಕಮ್ಮಾಂಡ್ ಬದಲಾವಣೆಯ ನಂತರ Linux ಅರೇಯ ಎಲ್ಲ ಎಲಿಮೆಂಟ್ ಗಳನ್ನು ತೋರಿಸುತ್ತದೆ. |
03:58 | ಈಗ ಟರ್ಮಿನಲ್ ಗೆ ಹಿಂದಿರುಗೋಣ. |
04:01 | ಪುನಃ ಎಕ್ಸಿಕ್ಯೂಟ್ ಮಾಡೋಣ. |
04:04 | ಇದು all elements after replacement : Debian Redhat Mandriva and Fedora ಎಂದು ತೋರಿಸುತ್ತದೆ. |
04:12 | ಸ್ಲೈಡ್ಸ್ ಗೆ ಹಿಂತಿರುಗೋಣ. |
04:14 | ಈಗ ಅರೇ ಗೆ ಎಲಿಮೆಂಟ್ ಅನ್ನು ಹೇಗೆ ಸೇರಿಸುವುದು ಎಂದು ನೋಡೋಣ. |
04:18 | ArrayName ಸಮ ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಡಬಲ್ ಕೋಟ್ ನಲ್ಲಿ ಡಾಲರ್ ಸೈನ್ ಕರ್ಲೀ ಬ್ರ್ಯಾಕೆಟ್ ಅನ್ನು ತೆರೆದು ArrayName ಅನ್ನು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಎಟ್ ಸೈನ್ ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ , ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ ಡಬಲ್ ಕೋಟ್ ನಲ್ಲಿ New_Word_1 ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ New_Word_2 ಟೈಪ್ ಮಾಡಿ ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿರಿ. |
04:45 | ಈಗ ಇದನ್ನು ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ.. |
04:50 | ಕೋಡ್ ಫೈಲ್ ಗೆ ಹಿಂದಿರುಗಿ. |
04:52 | ಇಲ್ಲಿ ಗುರುತಿಸಿದ ಕಮ್ಮಾಂಡ್ Linux ಅರೇಗೆ ಹೊಸ ಎಲಿಮೆಂಟ್ ಆದ Suse ಅನ್ನು ಸೇರಿಸುತ್ತದೆ. |
04:59 | ಈಗ Suse ಎಲಿಮೆಂಟ್ ಅನ್ನು ಸೇರಿಸಿದ ನಂತರ ಎಲ್ಲ ಎಲಿಮೆಂಟ್ ಗಳನ್ನು echo ಮಾಡೋಣ. |
05:05 | ಟರ್ಮಿನಲ್ ಗೆ ಹಿಂದಿರುಗಿ. |
05:07 | ಪ್ರಾಮ್ಟ್ ಅನ್ನು ಖಾಲಿ ಮಾಡಿಕೊಳ್ಳೋಣ. |
05:09 | ಪುನಃ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
05:12 | all elements after appending Suse : Debian Redhat Mandriva Fedora and Suse. ಎಂಬ ಫಲಿತವನ್ನು ಪಡೆಯುತ್ತೇವೆ. |
05:22 | ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ. |
05:24 | ಅರೇ ಯ ಎಲಿಮೆಂಟ್ ಗಳನ್ನು ಅಳಿಸುವುದು ಹೇಗೆಂದು ನೋಡೋಣ. |
05:29 | ಅರೇ ಯ ಎಲಿಮೆಂಟ್ ಗಳನ್ನು ಅಳಿಸಲು ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸುತ್ತೇವೆ. |
05:35 | Unset ಸ್ಪೇಸ್ ArrayName ಸ್ಕ್ವೇರ್ ಬ್ರ್ಯಾಕೆಟ್ ತೆರೆದು index number ಅನ್ನು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿರಿ. |
05:44 | ಈಗ ಕೋಡ್ ಫೈಲ್ ಗೆ ಹಿಂದಿರುಗಿ. |
05:46 | ಇಲ್ಲಿ ನಾವು unset ಕಮ್ಮಾಂಡ್ ಅನ್ನು ಉಪಯೋಗಿಸೋಣ. |
05:50 | ಮತ್ತು Linux ಅರೇಯ ಮೂರನೇ ಎಲಿಮೆಂಟ್ ಆದ Mandriva ಅನ್ನು ಅಳಿಸೋಣ. |
05:56 | ಈಗ Mandriva ಅನ್ನು ಅಳಿಸಿದ ನಂತರ ಫಲಿತವನ್ನು ನೋಡೋಣ. |
06:02 | ಟರ್ಮಿನಲ್ ಗೆ ಹಿಂದಿರುಗಿ |
06:04 | ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:07 | Mandriva ಅನ್ನು ಅಳಿಸಿದ ನಂತರ ಅರೇ ಎಲಿಮೆಂಟ್ ಗಳು ಈ ರೀತಿಯಾಗಿರುತ್ತವೆ. |
06:12 | Debian Redhat Fedora ಮತ್ತು Suse |
06:16 | ಇಲ್ಲಿ ಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
06:19 | ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ. |
06:21 | ಸಾರಾಂಶವನ್ನು ನೋಡೋಣ. |
06:23 | ಈ ಟ್ಯುಟೋರಿಯಲ್ ನಲ್ಲಿ ನಾವು |
06:25 | ಅರೇಯ ಎಲಿಮೆಂಟ್ ಗಳನ್ನು ಹೊರತೆಗೆಯುವುದು, |
06:28 | * ಅರೇಯ ಎಲಿಮೆಂಟ್ ಗಳನ್ನು ಬದಲಾಯಿಸುವುದು |
06:30 | ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು, |
06:32 | ಅರೇಯ ಎಲಿಮೆಂಟ್ ಗಳನ್ನು ಅಳಿಸುವುದು. |
06:36 | ಸ್ವಂತ ಅಭ್ಯಾಸಕ್ಕಾಗಿ |
06:37 | 7 ಎಲಿಮೆಂಟ್ ಗಳಿರುವ ಒಂದು ಅರೇಯ ಎಲಿಮೆಂಟ್ ಗಳನ್ನು ಡಿಕ್ಲೇರ್ ಮಾಡಿ ಕೆಳಗಿನ ಕ್ರಿಯೆಗಳನ್ನು ಮಾಡಿ. |
06:44 | ಎರಡನೇ ಇಂಡೆಕ್ಸ್ ನಿಂದ ಪ್ರಾರಂಭಿಸಿ ಮೂರು ಎಲಿಮೆಂಟ್ ಗಳನ್ನು ಹೊರತೆಗೆಯಿರಿ. |
06:48 | ಮೂರನೇ ಎಲಿಮೆಂಟ್ ಅನ್ನು Debian ಎಂದು ಬದಲಾಯಿಸಿ ಮತ್ತು ಪ್ರಿಂಟ್ ಮಾಡಿ. |
06:55 | ಅರೇಯ ಕೊನೆಯಲ್ಲಿ ಒಂದು ಹೊಸ ಎಲಿಮೆಂಟ್ ಅನ್ನು ಸೇರಿಸಿ. |
06:58 | ವಿಡಿಯೋವನ್ನು ಈ ಜಾಲತಾಣದಲ್ಲಿ ವೀಕ್ಷಿಸಿ. |
07:01 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
07:04 | ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ್ಡ್ ಮಾಡಿ ನೋಡಬಹುದು. |
07:09 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು |
07:12 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
07:15 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ. |
07:19 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
07:27 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
07:31 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
07:38 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
07:44 | FOSSEE ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡವು ಈ ಟ್ಯುಟೋರಿಲ್ ಅನ್ನು ತಯಾರಿಸಿದೆ. |
07:50 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ |
07:55 | ಧನ್ಯವಾದಗಳು. |