Geogebra/C3/Mensuration/Kannada

From Script | Spoken-Tutorial
Revision as of 12:41, 24 April 2015 by Sandhya.np14 (Talk | contribs)

Jump to: navigation, search
Time Narration
00:00 ನಮಸ್ಕಾರ. Mensuration in Geogebra (ಮೆನ್ಸುರೇಶನ್ ಇನ್ ಜಿಯೊಜಿಬ್ರಾ) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ವಜ್ರಾಕೃತಿಯ ವಿಸ್ತೀರ್ಣ ಹಾಗೂ ಸುತ್ತಳತೆ
00:12 * ಗೋಳ ಮತ್ತು ಶಂಕುವಿನ ಮೇಲ್ಮೈ ವಿಸ್ತೀರ್ಣ
00:15 * ಗೋಳ ಮತ್ತು ಶಂಕುವಿನ ಘನ ಅಳತೆ, ಇವುಗಳನ್ನು ಕಂಡುಹಿಡಿಯಲು ಕಲಿಯುವೆವು.
00:20 ನಿಮಗೆ ಜಿಯೊಜಿಬ್ರಾದೊಂದಿಗೆ ಕೆಲಸ ಮಾಡಿ ಅಭ್ಯಾಸವಿದೆ ಎಂದು ನಾವು ಭಾವಿಸುತ್ತೇವೆ.
00:24 Geogebra ಗೆ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ,
00:27 ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:31 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
00:33 Ubuntu Linux OS Version 11.10 (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ವರ್ಷನ್ 11.10) ಹಾಗೂ
00:38 Geogebra Version 3.2.47.0 (ಜಿಯೊಜಿಬ್ರಾ ವರ್ಷನ್ 3.2.47.0) ಗಳನ್ನು ಬಳಸುತ್ತಿದ್ದೇನೆ.
00:42 ಈ ಕೆಳಗಿನ ಜಿಯೊಜಿಬ್ರಾ ಟೂಲ್ಗಳನ್ನು ನಾವು ಬಳಸುವೆವು.
00:46 * Segment between two points (ಸೆಗ್ಮೆಂಟ್ ಬಿಟವೀನ್ ಟು ಪಾಯಿಂಟ್ಸ್)
00:48 * Circle with center and radius (ಸರ್ಕಲ್ ವಿತ್ ಸೆಂಟರ್ ಆಂಡ್ ರೇಡಿಯಸ್)
00:51 * Ellipse ( ಎಲಿಪ್ಸ್)
00:52 * Polygon ( ಪಾಲಿಗಾನ್)
00:54 * New point ( ನ್ಯೂ ಪಾಯಿಂಟ್) ಮತ್ತು
00:56 * Insert Text (ಇನ್ಸರ್ಟ್ ಟೆಕ್ಸ್ಟ್)
00:57 ನಾವು ಒಂದು ಹೊಸ Geogebra (ಜಿಯೊಜಿಬ್ರಾ) ವಿಂಡೋವನ್ನು ತೆರೆಯೋಣ.
01:00 ಕ್ರಮವಾಗಿ Dash home >> Media Apps ಗಳ ಮೇಲೆ ಕ್ಲಿಕ್ ಮಾಡಿ. Type ನ ಅಡಿಯಲ್ಲಿ , Education >> ಮತ್ತು Geogebra ಗಳನ್ನು ಆರಿಸಿಕೊಳ್ಳಿ.
01:13 ನಾವು rhombus ನ (ವಜ್ರಾಕೃತಿಯ) ವಿಸ್ತೀರ್ಣವನ್ನು ಕಂಡುಹಿಡಿಯೋಣ.
01:15 ನಾವು ಹಿಂದಿನ ಟ್ಯುಟೋರಿಯಲ್ ನ 'quadrilateral.ggb' (ಕ್ವಾಡ್ರಿಲ್ಯಾಟರಲ್ ಡಾಟ್ ಜಿ ಜಿ ಬಿ) ಎನ್ನುವ ಫೈಲನ್ನು ಉಪಯೋಗಿಸೋಣ.
01:20 ಕ್ರಮವಾಗಿ File, Open ಗಳ ಮೇಲೆ ಕ್ಲಿಕ್ ಮಾಡಿ, 'quadrilateral.ggb' ಯ ಮೇಲೆ ಕ್ಲಿಕ್ ಮಾಡಿ.
01:27 Open ನ ಮೇಲೆ ಕ್ಲಿಕ್ ಮಾಡಿ.
01:29 Area of the Rhombus =1/2 * product of diagonals (ವಜ್ರಾಕೃತಿಯ ವಿಸ್ತೀರ್ಣ = 1/2 * ಕರ್ಣಗಳ ಗುಣಲಬ್ಧ)
01:34 ಇದನ್ನು ಮಾಡಿ ತೋರಿಸಲು,
01:36 Insert Text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:39 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ.
01:44 ಡಬಲ್ ಕೋಟ್ಸ್ ನಲ್ಲಿ “Area of the rhombus =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. ಮುಂದಿನ ಭಾಗವನ್ನು ಜೋಡಿಸಲು '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 1/2 <ಸ್ಪೇಸ್> f < ಸ್ಪೇಸ್ > g ಎಂದು ಟೈಪ್ ಮಾಡಿ ಬ್ರಾಕೆಟ್ ಅನ್ನು ಮುಚ್ಚಿ. 'f' ಹಾಗೂ 'g' ಗಳು ವಜ್ರಾಕೃತಿಯ ಕರ್ಣಗಳಾಗಿವೆ.
02:09 OK ಯ ಮೇಲೆ ಕ್ಲಿಕ್ ಮಾಡಿ.
02:11 ವಜ್ರಾಕೃತಿಯ ವಿಸ್ತೀರ್ಣವನ್ನು, (Area of the rhombus) ‘ಡ್ರಾಯಿಂಗ್ ಪ್ಯಾಡ್’ನ ಮೇಲೆ, ಇಲ್ಲಿ, ತೋರಿಸಲಾಗಿದೆ.
02:14 ನಂತರ, ನಾವು ಸುತ್ತಳತೆಯನ್ನು (ಪೆರಿಮೀಟರ್) ಕಂಡುಹಿಡಿಯೋಣ.
02:17 Insert text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:19 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ.
02:22 ಡಬಲ್ ಕೋಟ್ಸ್ ನಲ್ಲಿ “Perimeter of the rhombus =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 4 <ಸ್ಪೇಸ್> 'a' ಎಂದು ಟೈಪ್ ಮಾಡಿ ಬ್ರಾಕೆಟ್ ಅನ್ನು ಮುಚ್ಚಿ. 'a', ವಜ್ರಾಕೃತಿಯ (rhombus) ಒಂದು ಭುಜವಾಗಿದೆ.
02:44 OK ಯ ಮೇಲೆ ಕ್ಲಿಕ್ ಮಾಡಿ.
02:46 ವಜ್ರಾಕೃತಿಯು ಸುತ್ತಳತೆಯನ್ನು ಇಲ್ಲಿ, ‘ಡ್ರಾಯಿಂಗ್ ಪ್ಯಾಡ್’ನ ಮೇಲೆ, ತೋರಿಸಲಾಗಿದೆ.
02:50 ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ.
02:53 ಕ್ರಮವಾಗಿ File , Save As ಗಳ ಮೇಲೆ ಕ್ಲಿಕ್ ಮಾಡಿ.
02:55 ನಾನು ಫೈಲ್ ನ ಹೆಸರನ್ನು 'rhombus-area-perimeter' ಎಂದು ಟೈಪ್ ಮಾಡುವೆನು.
03:12 Save ನ ಮೇಲೆ ಕ್ಲಿಕ್ ಮಾಡಿ.
03:17 ಒಂದು ಅಸೈನ್ಮೆಂಟ್ ಎಂದು, ನೀವು ವಿಷಮ ಚತುರ್ಭುಜದ (trapezium) ವಿಸ್ತೀರ್ಣ ಹಾಗೂ ಸುತ್ತಳತೆಯನ್ನು ಕಂಡುಹಿಡಿಯಿರಿ.
03:22 'cons-trapezium.ggb' (ಕಾನ್ಸ್- ಟ್ರೆಪೀಝಿಯಂ ಡಾಟ್ ಜಿ ಜಿ ಬಿ) ಎನ್ನುವ ಫೈಲ್ ನ ಔಟ್ಪುಟ್ ಅನ್ನು ಬಳಸಿರಿ.
03:27 ಆಬ್ಜೆಕ್ಟ್ ‘g’ ಯನ್ನು ‘b’ ಎಂದು ರಿ-ನೇಮ್ ಮಾಡಿ.
03:30 ಏರಿಯಾ ಗಾಗಿ ಸೂತ್ರ, ವಿಸ್ತೀರ್ಣ= (ಸಮಾನಂತರ ಭುಜಗಳ ಮೊತ್ತದ ಅರ್ಧ)*(ಎತ್ತರ)= (a+b)/2* h. (area = (half sum of parallel sides) * (vertical height))
03:40 ಸುತ್ತಳತೆಗಾಗಿ ಸೂತ್ರ, ಸುತ್ತಳತೆ = ಭುಜಗಳ ಮೊತ್ತ = (a+b+c+d)
03:49 ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು.
03:54 ಗೋಳವನ್ನು ರಚಿಸಲು ನಾವು ಹೊಸದೊಂದು Geogebra ವಿಂಡೋವನ್ನು ತೆರೆಯೋಣ.
03:58 ಕ್ರಮವಾಗಿ File , New ಗಳ ಮೇಲೆ ಕ್ಲಿಕ್ ಮಾಡಿ.
04:01 ಟೂಲ್-ಬಾರ್ ನಲ್ಲಿಯ Circle with Center and Radius ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:06 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. A ಬಿಂದು ಗುರುತಿಸಲ್ಪಟ್ಟಿದೆ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ.
04:11 ತ್ರಿಜ್ಯಕ್ಕಾಗಿ (radius) 2 ಎಂದು ನಮೂದಿಸಿ.
04:13 OK ಯ ಮೇಲೆ ಕ್ಲಿಕ್ ಮಾಡಿ.
04:15 A, ಮಧ್ಯಬಿಂದು ಇರುವ ಹಾಗೂ 2cm ತ್ರಿಜ್ಯದ ಒಂದು ವರ್ತುಲವು ರಚಿಸಲ್ಪಟ್ಟಿದೆ.
04:19 ಟೂಲ್-ಬಾರ್ ನಿಂದ New point ಎನ್ನುವ ಟೂಲನ್ನು ಆಯ್ಕೆಮಾಡಿ. ವರ್ತುಲದ ಪರಿಧಿಯ ಮೇಲೆ B ಬಿಂದುವನ್ನು ಗುರುತಿಸಿ.
04:26 Segment between two points ಎನ್ನುವ ಟೂಲನ್ನು ಆಯ್ಕೆಮಾಡಿ.
04:29 A ಹಾಗೂ B ಬಿಂದುಗಳನ್ನು ವರ್ತುಲದ ತ್ರಿಜ್ಯದಂತೆ ಸೇರಿಸಿ.
04:34 ವರ್ತುಲದ ಪರಿಧಿಯನ್ನು ಸ್ಪರ್ಶಿಸಲು, ನಾವು ಒಂದು ಅಡ್ಡವಾದ (horizontal) ಎಲಿಪ್ಸ್ CDE ಅನ್ನು ರಚಿಸೋಣ.
04:42 Ellipse ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:45 ಪರಿಧಿಯ ಮೇಲೆ, C ಹಾಗೂ D ಬಿಂದುಗಳನ್ನು ಒಂದಕ್ಕೊಂದು ಅಭಿಮುಖವಾಗಿ ಹಾಗೂ ಮೂರನೆಯ ಬಿಂದು E ಯನ್ನು ವರ್ತುಲದ ಒಳಗಡೆ, ಗುರುತಿಸಿ.
04:56 ಇಲ್ಲಿ, ಒಂದು ಗೋಳವನ್ನು ರಚಿಸಲಾಗಿದೆ.
04:59 ಈಗ ನಾವು ಗೋಳದ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯೋಣ.
05:03 Insert Text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:05 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ.
05:08 ವಿಷೇಶ ಅಕ್ಷರಗಳನ್ನು ದಯವಿಟ್ಟು ಟೆಕ್ಸ್ಟ್ ಬಾಕ್ಸ್ ನಲ್ಲಿಯ ಡ್ರಾಪ್-ಡೌನ್ ಲಿಸ್ಟ್ ನಲ್ಲಿ ಹುಡುಕಿ. ‘π’ (ಪೈ) ಯನ್ನು ಹುಡುಕಲು ಕೆಳಗೆ ಸ್ಕ್ರೋಲ್ ಮಾಡಿ.
05:17 ಡಬಲ್ ಕೋಟ್ಸ್ ನಲ್ಲಿ “Surface area of the sphere =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 4 <ಸ್ಪೇಸ್> π ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> 'a' ಲಿಸ್ಟ್ ನಿಂದ ‘ಸ್ಕ್ವೇರ್’ ಅನ್ನು ಆಯ್ದುಕೊಳ್ಳಿ , ಬ್ರಾಕೆಟ್ ಅನ್ನು ಮುಚ್ಚಿ.
05:45 OK ಯ ಮೇಲೆ ಕ್ಲಿಕ್ ಮಾಡಿ.
05:47 ಗೋಳದ ಮೇಲ್ಮೈ ವಿಸ್ತೀರ್ಣವನ್ನು ಇಲ್ಲಿ ತೋರಿಸಲಾಗಿದೆ.
05:52 ನಾನು ಇದರ ಮೇಲೆ ಕ್ಲಿಕ್ ಮಾಡಿ, ಇದನ್ನು ಎಳೆದು ಕೆಳಗೆ ಇಡುತ್ತೇನೆ.
05:56 ನಂತರ, ನಾವು ಘನ ಅಳತೆಯನ್ನು (volume) ಕಂಡುಹಿಡಿಯೋಣ.
05:59 Insert text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:00 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:03

ಡಬಲ್ ಕೋಟ್ಸ್ ನಲ್ಲಿ “Volume of the sphere =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 4/3 <ಸ್ಪೇಸ್> π ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> 'a' , ಲಿಸ್ಟ್ ನಿಂದ ‘ಕ್ಯೂಬ್’ ಅನ್ನು ಆಯ್ದುಕೊಳ್ಳಿ , ಬ್ರಾಕೆಟ್ ಅನ್ನು ಮುಚ್ಚಿ.

06:31 OK ಯ ಮೇಲೆ ಕ್ಲಿಕ್ ಮಾಡಿ.
06:34 ಗೋಳದ ಘನ ಅಳತೆಯನ್ನು ಇಲ್ಲಿ ತೋರಿಸಲಾಗಿದೆ.
06:36 ನಾನು ಇದರ ಮೇಲೆ ಕ್ಲಿಕ್ ಮಾಡಿ, ಕೆಳಗೆ ಇಡಲು ಇದನ್ನು ಎಳೆಯುತ್ತೇನೆ.
06:40 ನಂತರ, ನಾವು ಒಂದು ಶಂಕುವನ್ನು ರಚಿಸೋಣ.
06:43 Polygon ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:45 'C' , 'D' ಬಿಂದುಗಳ ಮೇಲೆ ಹಾಗೂ ಹೊರಗಿನ ಒಂದು ಬಿಂದು ‘F’ ನ ಮೇಲೆ ಕ್ಲಿಕ್ ಮಾಡಿ, ಮತ್ತೊಮ್ಮೆ 'C' ಮೇಲೆ ಕ್ಲಿಕ್ ಮಾಡಿ.
06:53 Segments between two points ಎನ್ನುವ ಟೂಲನ್ನು ಆಯ್ದುಕೊಳ್ಳಿ. ‘F’ ಹಾಗೂ ‘A’ ಬಿಂದುಗಳನ್ನು ಸೇರಿಸಿ.
06:59 ನಮಗೆ ಶಂಕುವಿನ ಎತ್ತರವು ಸಿಗುತ್ತದೆ.
07:03 ನಾನು ಆಬ್ಜೆಕ್ಟ್ ‘b’ ಯನ್ನು ‘h’ ಎಂದು ರಿ-ನೇಮ್ ಮಾಡುತ್ತೇನೆ, ಇದು ಶಂಕುವಿನ ಎತ್ತರವನ್ನು ಸೂಚಿಸುತ್ತದೆ.
07:08 ಆಬ್ಜೆಕ್ಟ್ ‘b’ ಯ ಮೇಲೆ ರೈಟ್-ಕ್ಲಿಕ್ ಮಾಡಿ.
07:09 Rename ಎನ್ನುವುದರ ಮೇಲೆ ಕ್ಲಿಕ್ ಮಾಡಿ.
07:11 ‘b’ ಅನ್ನು ‘h’ ನಿಂದ ಬದಲಾಯಿಸಿ. OK ಯ ಮೇಲೆ ಕ್ಲಿಕ್ ಮಾಡಿ.
07:15 ನಾನು ಆಬ್ಜೆಕ್ಟ್ 'c_1' ಅನ್ನು ಸಹ ‘s’ ಎಂದು ರಿ-ನೇಮ್ ಮಾಡುತ್ತೇನೆ. ಇದು ಶಂಕುವಿನ ಓರೆ ಎತ್ತರವನ್ನು (slant height) ಸೂಚಿಸುತ್ತದೆ.
07:21 ಆಬ್ಜೆಕ್ಟ್ 'c_1' ದ ಮೇಲೆ ರೈಟ್-ಕ್ಲಿಕ್ ಮಾಡಿ.
07:23 Rename ದ ಮೇಲೆ ಕ್ಲಿಕ್ ಮಾಡಿ.
07:24 'c_1' ಅನ್ನು ‘s’ ನಿಂದ ಬದಲಾಯಿಸಿ.
07:26 OK ಯ ಮೇಲೆ ಕ್ಲಿಕ್ ಮಾಡಿ.
07:28 ಈಗ ನಾವು ಶಂಕುವಿನ ಮೇಲ್ಮೈ ವಿಸ್ತೀರ್ಣ ಹಾಗೂ ಘನ ಅಳತೆಯನ್ನು ಕಂಡುಹಿಡಿಯೋಣ.
07:33 ನಾವು ಟೂಲ್-ಬಾರ್ ನಲ್ಲಿಯ Insert text ಟೂಲನ್ನು ಅಥವಾ Input (ಇನ್ಪುಟ್) ಬಾರನ್ನು ಬಳಸಬಹುದು. ನಾನು Input ಬಾರ್ ಅನ್ನು ಬಳಸುತ್ತೇನೆ.
07:40 ವಿಶಿಷ್ಟ ಅಕ್ಷರಗಳನ್ನು (special characters) ದಯವಿಟ್ಟು Input ಬಾರ್ ನ ಡ್ರಾಪ್-ಡೌನ್ ಲಿಸ್ಟ್ ನಲ್ಲಿ ಹುಡುಕಿ.
07:44 ‘π’ (ಪೈ) ಅನ್ನು ಹುಡುಕಲು ಕೆಳಗೆ ಸ್ಕ್ರೋಲ್ ಮಾಡಿ.
07:48 Input (ಇನ್ಪುಟ್) ಬಾರ್ ನಲ್ಲಿ ಟೈಪ್ ಮಾಡಿ.

Surfacearea = ಬ್ರಾಕೆಟ್ ನಲ್ಲಿ ‘π’ ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> ‘a' <ಸ್ಪೇಸ್> ‘s’ ಪ್ಲಸ್ (+) ‘π’ ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> ‘a' , ಲಿಸ್ಟ್ ನಿಂದ ‘ಸ್ಕ್ವೇರ್’ ಅನ್ನು ಆಯ್ದುಕೊಳ್ಳಿ, ಬ್ರಾಕೆಟ್ ಅನ್ನು ಮುಚ್ಚಿ. Enter ಅನ್ನು ಒತ್ತಿ.

08:15 ಶಂಕುವಿನ ಮೇಲ್ಮೈ ವಿಸ್ತೀರ್ಣವನ್ನು, Algebra view ನಲ್ಲಿ ತೋರಿಸಲಾಗಿದೆ.
08:20 ನಾವು Input ಬಾರ್ ಅನ್ನು ಬಳಸಿದಾಗ, ಉತ್ತರವು Algebra view ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ದಯವಿಟ್ಟು ಗಮನಿಸಿ.
08:26 ನಾವು ಘನ ಅಳತೆಯನ್ನು ಕಂಡುಹಿಡಿಯೋಣ.
08:29 Volume = ಬ್ರಾಕೆಟ್ ನಲ್ಲಿ, 1/3 <ಸ್ಪೇಸ್> ‘π’ ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> ‘a', ಲಿಸ್ಟ್ ನಿಂದ ‘ಸ್ಕ್ವೇರ್’ ಅನ್ನು ಆಯ್ದುಕೊಳ್ಳಿ, <ಸ್ಪೇಸ್> 'h', ಬ್ರಾಕೆಟ್ ಅನ್ನು ಮುಚ್ಚಿ. Enter ಅನ್ನು ಒತ್ತಿ.
08:50 ಶಂಕುವಿನ ಘನ ಅಳತೆಯನ್ನು ಇಲ್ಲಿ, Algebra view ನಲ್ಲಿ, ತೋರಿಸಲಾಗಿದೆ.
08:55 ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. ಕ್ರಮವಾಗಿ File , Save As ಗಳ ಮೇಲೆ ಕ್ಲಿಕ್ ಮಾಡಿ. ನಾನು ಫೈಲ್ ನ ಹೆಸರನ್ನು 'Sphere-cone' ಎಂದು ಟೈಪ್ ಮಾಡುವೆನು.
09:08 Save ನ ಮೇಲೆ ಕ್ಲಿಕ್ ಮಾಡಿ.
09:10 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ.
09:14 ಸಂಕ್ಷಿಪ್ತವಾಗಿ,
09:18 ಈ ಟ್ಯುಟೋರಿಯಲ್ ನಲ್ಲಿ, ನಾವು
09:20 * ವಜ್ರಾಕೃತಿಯು ವಿಸ್ತೀರ್ಣ ಹಾಗೂ ಸುತ್ತಳತೆ
09:24 * ಗೋಳ ಮತ್ತು ಶಂಕುವಿನ ಮೇಲ್ಮೈ ವಿಸ್ತೀರ್ಣ
09:27 * ಗೋಳ ಮತ್ತು ಶಂಕುವಿನ ಘನ ಅಳತೆ, ಇವುಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.
09:30 ನಾವು ಗೋಳ ಮತ್ತು ಶಂಕುವನ್ನು ರಚಿಸಲು ಸಹ ಕಲಿತಿದ್ದೇವೆ.
09:36 ಒಂದು ಅಸೈನ್ಮೆಂಟ್ ಎಂದು, ನೀವು ಸಿಲಿಂಡರ್ ನ ಮೇಲ್ಮೈ ವಿಸ್ತೀರ್ಣ ಹಾಗೂ ಘನಅಳತೆಯನ್ನು ಕಂಡುಹಿಡಿಯಿರಿ.
09:43 ಒಂದರ ಕೆಳಗೆ ಇನ್ನೊಂದರಂತೆ, ಒಂದೇ ಅಳತೆಯ ಎರಡು ಎಲಿಪ್ಸ್ ಗಳನ್ನು (ದೀರ್ಘವೃತ್ತ) ರಚಿಸಿ.
09:47 ಎಲಿಪ್ಸ್ ಗಳ ಅಂಚುಗಳನ್ನು ಜೋಡಿಸಿ.
09:50 Center ಟೂಲನ್ನು ಬಳಸಿ, ಒಂದು ಎಲಿಪ್ಸ್ ನ ಕೇಂದ್ರವನ್ನು ಕಂಡುಹಿಡಿಯಿರಿ.
09:54 ಕೇಂದ್ರಬಿಂದು ಮತ್ತು ಅಂಚನ್ನು ಸೇರಿಸಿ.
09:56 ಆಬ್ಜೆಕ್ಟ್ ‘b' ಅನ್ನು ‘h’ ಎಂದು, ‘e' ಯನ್ನು ‘r' ಎಂದು ರಿ-ನೇಮ್ ಮಾಡಿ.
10:01 Surface area = 2 π r(r + h) (ಮೇಲ್ಮೈ ವಿಸ್ತೀರ್ಣ = 2 π r(r + h))
10:07 Volume = π r^2 h (ಘನ ಅಳತೆ = π r^2 h)
10:13 ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು.
10:19 ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:23 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
10:26 ನಿಮಗೆಒಳ್ಳೆಯ ‘‘ಬ್ಯಾಂಡ್ವಿಡ್ತ್’’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:31 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
10:33 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:36 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:40 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
10:48 “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
10:52 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
10:59 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
11:06 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .

ವಂದನೆಗಳು.

Contributors and Content Editors

PoojaMoolya, Sandhya.np14