Java/C2/Instance-fields/Kannada
From Script | Spoken-Tutorial
Revision as of 19:04, 2 March 2015 by NaveenBhat (Talk | contribs)
Time | Narration |
00:02 | ಜಾವಾದಲ್ಲಿ ಇನ್ಸ್-ಟೆನ್ಸ್ ಫೀಲ್ಡ್ಸ್ ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:08 | ಇನ್ಸ್-ಟೆನ್ಸ್ ಫೀಲ್ಡ್ಸ್ ನ ಕುರಿತು |
00:10 | ಕ್ಲಾಸ್ ನ ಇನ್ಸ್-ಟೆನ್ಸ್ ಫೀಲ್ಡ್ಸ್ ಅನ್ನು ಆಕ್ಸೆಸ್ ಮಾಡಲು, |
00:13 | ಇನ್ಸ್-ಟೆನ್ಸ್ ಫೀಲ್ಡ್ಸ್ ನ ಮಾಡಿಫಯರ್ ಗಳ ಕುರಿತು |
00:15 | ಮತ್ತು ಇನ್ಸ್-ಟೆನ್ಸ್ ಫೀಲ್ಡ್ಸ್ ಅನ್ನು ಯಾಕೆ ಹಾಗೆಂದು ಕರೆಯುತ್ತಾರೆ ಎನ್ನುವುದರ ಕುರಿತು ಕಲಿಯುತ್ತೇವೆ. |
00:18 | ಇಲ್ಲಿ ನಾವು |
00:20 | * Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) |
00:22 | * Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ |
00:24 | * Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ. |
00:27 | ಈ ಟ್ಯುಟೋರಿಯಲ್ ಅನ್ನು ಕಲಿಯಲು |
00:30 | ಎಕ್ಲಿಪ್ಸ್ ನಲ್ಲಿ ಜಾವಾ ಕ್ಲಾಸ್ ಅನ್ನು ರಚಿಸಲು ತಿಳಿದಿರಬೇಕು. |
00:33 | ಮತ್ತು ಕ್ಲಾಸ್ ಗೆ ಒಬ್ಜೆಕ್ಟ್ ಅನ್ನು ರಚನೆ ಮಾಡಲು ಸಹ ತಿಳಿದಿರಬೇಕು. |
00:38 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ಜಾಲತಾಣವನ್ನು ಭೇಟಿ ಮಾಡಿ.
spoken-tutorial.org. |
00:43 | ನಾವು, ಒಬ್ಜೆಕ್ಟ್ ಗಳು ಅವುಗಳ ಸ್ಥಿತಿಗಳನ್ನು ಫೀಲ್ಡ್ಸ್ ಗಳಲ್ಲಿ ಸ್ಟೋರ್ ಮಾಡುತ್ತವೆ ಎಂದು ತಿಳಿದಿದ್ದೇವೆ. |
00:48 | ಈ ಫೀಲ್ಡ್ ಗಳನ್ನು static ಕೀವರ್ಡ್ ಉಪಯೋಗಿಸದೇ ಡಿಕ್ಲೇರ್ ಮಾಡುತ್ತೇವೆ. |
00:51 | ಸ್ಟ್ಯಾಟಿಕ್ ಕೀವರ್ಡ್ ನ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
00:55 | ನಾನ್ ಸ್ಟ್ಯಾಟಿಕ್ ಫೀಲ್ಡ್ ಗಳನ್ನು ಇನ್ಸ್-ಟೆನ್ಸ್ ವೇರಿಯೇಬಲ್ ಅಥವಾ ಇನ್ಸ್-ಟೆನ್ಸ್ ಫೀಲ್ಡ್ ಎಂದು ಕೂಡ ಕರೆಯುತ್ತಾರೆ. |
01:01 | ನಾವು ಈಗ ಮೊದಲೇ ರಚಿಸಿದ Student ಕ್ಲಾಸ್ ಗೆ ಹೋಗೋಣ. |
01:09 | roll_no ಮತ್ತು name ಗಳು ಈ ಕ್ಲಾಸ್ ನ ಇನ್ಸ್-ಟೆನ್ಸ್ ಫೀಲ್ಡ್ ಗಳು |
01:15 | ಈಗ ಈ ಫೀಲ್ಡ್ ಗಳನ್ನು ಹೇಗೆ ಆಕ್ಸೆಸ್ ಮಾಡುವುದು ಎಂದು ಕಲಿಯೋಣ. |
01:18 | ಅದಕ್ಕಾಗಿ ನಾವು ಮೊದಲೇ ರಚನೆ ಮಾಡಿದ TestStudent ಕ್ಲಾಸ್ ಅನ್ನು ತೆರೆಯೋಣ. |
01:27 | ಎರಡನೇ ಒಬ್ಜೆಕ್ಟ್ ರಚನೆ ಮಾಡುವ ಹೇಳಿಕೆಯನ್ನು ಅಳಿಸೋಣ. |
01:33 | println ಹೇಳಿಕೆಯನ್ನೂ ಅಳಿಸೋಣ. |
01:41 | ಈಗ ನಾವು student ಕ್ಲಾಸ್ ನ roll_no ಮತ್ತು name ಫೀಲ್ಡ್ ಗಳನ್ನು stud1 ಮತ್ತು ಡಾಟ್ ಆಪರೇಟರ್ ಗಳನ್ನು ಉಪಯೋಗಿಸಿ ಆಕ್ಸೆಸ್ ಮಾಡೋಣ. |
01:49 | System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The roll number is ಎಂದು ಟೈಪ್ ಮಾಡಿ ನಂತರ ಪ್ಲಸ್ stud1 ಡಾಟ್ ಕೊಟ್ಟಿರುವ ಆಯ್ಕೆಗಳಲ್ಲಿ roll_no ಆಯ್ಕೆಮಾಡಿಕೊಂಡು Enter ಒತ್ತಿ ಸೆಮಿಕೋಲನ್ ಹಾಕಿ. |
02:15 | ಮುಂದಿನ ಸಾಲಿನಲ್ಲಿ System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is ಎಂದು ಟೈಪ್ ಮಾಡಿ ನಂತರ ಪ್ಲಸ್ stud1ಡಾಟ್ ಕೊಟ್ಟಿರುವ ಆಯ್ಕೆಗಳಲ್ಲಿ name ಆಯ್ಕೆಮಾಡಿಕೊಂಡು Enter ಒತ್ತಿ ಸೆಮಿಕೋಲನ್ ಹಾಕಿ. |
02:39 | TestStudent.java ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl S ಮತ್ತು Ctrl F11 ಅನ್ನು ಒತ್ತಿರಿ. |
02:48 | ನಾವು ಕೆಳಗಿನ ಫಲಿತವನ್ನು ಪಡೆಯುತ್ತೇವೆ.. |
02:51 | The roll number is 0. |
02:53 | 'The name is null. |
03:00 | ಏಕೆಂದರೆ ನಾವು ವೇರಿಯೇಬಲ್ ಗಳಿಗೆ ಯಾವುದೇ ಬೆಲೆಯನ್ನು ಇನಿಷಿಯಲೈಜ್ ಮಾಡಿಲ್ಲ. |
03:05 | ಜಾವಾದಲ್ಲಿ ಫೀಲ್ಡ್ ಗಳು ಮನಬಂದ ಬೆಲೆಗಳನ್ನು ತೆಗೆದುಕೊಳ್ಳುವುದಿಲ್ಲ. |
03:09 | ಒಬ್ಜೆಕ್ಟ್ ಗೆ ಮೆಮೊರಿಯನ್ನು ಹಂಚಿದ ಮೇಲೆ ಫೀಲ್ಡ್ ಗಳು null ಅಥವಾ zero ಗೆ ಇನಿಷಿಯಲೈಜ್ ಆಗುತ್ತದೆ. |
03:15 | ಈ ಕೆಲಸವು ಕನ್ಸ್-ಟ್ರಕ್ಟರ್ ನಿಂದ ಮಾಡಲ್ಪಡುತ್ತದೆ. |
03:18 | ನಾವು ಕನ್ಸ್-ಟ್ರಕ್ಟರ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ. |
03:21 | ಈಗ ನಾವು ಫೀಲ್ಡ್ ಗಳನ್ನು ಇನಿಷಿಯಲೈಜ್ ಮಾಡಿ ಫಲಿತವನ್ನು ನೋಡೋಣ. |
03:27 | ಹಾಗಾಗಿ int roll_no ಸಮ 50 ಮುಂದಿನ ಸಾಲಿನಲ್ಲಿ string name ಸಮ ಡಬಲ್ ಕೋಟ್ಸ್ ನಲ್ಲಿ Raju ಎಂದು ಟೈಪ್ ಮಾಡಿ. |
03:42 | ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl S ಮತ್ತು Ctrl F11 ಅನ್ನು ಒತ್ತಿರಿ. |
03:50 | ನಾವು ಅಂದುಕೊಂಡಂತೆ ಫಲಿತವನ್ನು ಪಡೆಯುತ್ತೇವೆ ಅಂದರೆ The roll number is 50. |
03:54 | The name is Raju. |
03:56 | ಏಕೆಂದರೆ ನಾವು Student ಕ್ಲಾಸ್ ನಲ್ಲಿ ವೇರಿಯೇಬಲ್ ಗಳನ್ನು ಸ್ಪಷ್ಟವಾಗಿ ಇನಿಷಿಯಲೈಜ್ ಮಾಡಿದ್ದೇವೆ. |
04:04 | ಇಲ್ಲಿ ನಾವು ಫೀಲ್ಡ್ ಗಳು ಯಾವುದೇ ಮಾಡಿಫಯರ್ ಅಥವಾ ಡಿಫಾಲ್ಟ್ ಮಾಡಿಫಯರ್ ಅನ್ನು ಹೊಂದಿರದಿರುವುದನ್ನು ನೋಡಬಹುದು. |
04:10 | ಕ್ಲಾಸ್ ಗಳ ರಚನೆಯಲ್ಲಿ ಕಲಿತ ಮಾಡಿಫಯರ್ ಗಳ ಕುರಿತು ನೆನಪಿಸಿಕೊಳ್ಳಿ. |
04:14 | Student.java ಮತ್ತು TestStudent.java ಗಳು ಒಂದೇ ಪ್ಯಾಕೇಜ್ ನಲ್ಲಿರುವುದರಿಂದ ನಾವು ಫೀಲ್ಡ್ ಗಳನ್ನು ಆಕ್ಸೆಸ್ ಮಾಡಬಹುದು. |
04:22 | ಅವುಗಳು ಒಂದೇ default package ನಲ್ಲಿರುವುದನ್ನು ನೋಡಬಹುದು |
04:30 | ಪ್ಯಾಕೇಜ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. |
04:34 | ನಾವು ಮಾಡಿಫಯರ್ ಅನ್ನು private ಎಂದು ಬದಲಿಸೋಣ. |
04:37 | ಫೀಲ್ಡ್ ಗಳ ಡಿಕ್ಲೇರ್ ಗೂ ಮೊದಲು private ಎಂದು ಟೈಪ್ ಮಾಡಿ ಅಂದರೆ private int roll no=50 ಎಂದು ಟೈಪ್ ಮಾಡಿ. |
04:48 | ಮುಂದಿನ ಸಾಲಿನಲ್ಲಿ private string name = “Raju” ಎಂದು ಟೈಪ್ ಮಾಡಿ. |
04:53 | Student.java ಫೈಲ್ ಅನ್ನು ಸೇವ್ ಮಾಡಿ. |
05:00 | TestStudent.java ದಲ್ಲಿ ದೋಷವನ್ನು ನೋಡಬಹುದು. |
05:05 | ಎರರ್ ಸಿಂಬಲ್ ಮೇಲೆ ಮೌಸ್ ಅನ್ನು ಸರಿಸಿ. |
05:08 | ಅದು The field Student ಡಾಟ್ roll number is not visible |
05:12 | ಮತ್ತು The field Student ಡಾಟ್ name is not visible ಎಂಬ ದೋಷಗಳನ್ನು ತೋರಿಸುತ್ತದೆ. |
05:16 | ಏಕೆಂದರೆ ಪ್ರೈವೇಟ್ ಫೀಲ್ಡ್ ಗಳನ್ನು ಆ ಕ್ಲಾಸ್ ನಲ್ಲಿ ಮಾತ್ರ ಉಪಯೋಗಿಸಬಹುದು. |
05:23 | Student ಕ್ಲಾಸ್ ನ roll_no ಮತ್ತು name ಫೀಲ್ಡ್ ಗಳನ್ನು ಆಕ್ಸೆಸ್ ಮಾಡಲು ಪ್ರಯತ್ನ ಪಡಬಹುದು. |
05:27 | ದೋಷವಿಲ್ಲದೇ ಆಕ್ಸೆಸ್ ಮಾಡಬಹುದು ಎಂದು ನೋಡಬಹುದು. |
05:32 | ಮಾಡಿಫಯರ್ ಅನ್ನು protected ಎಂದು ಬದಲಾಯಿಸಿ. |
05:52 | ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ. |
06:00 | ಕನ್ಸೋಲ್ ನಲ್ಲಿ ಈ ಫಲಿತವನ್ನು ನೋಡಬಹುದು - The Roll no is 50 . The name is Raju. |
06:07 | ಏಕೆಂದರೆ ಪ್ರೊಟೆಕ್ಟೆಡ್ ಫೀಲ್ಡ್ ಗಳನ್ನು ಅದೇ ಪ್ಯಾಕೇಜ್ ನಲ್ಲಿ ಆಕ್ಸೆಸ್ ಮಾಡಬಹುದು. |
06:17 | ಈಗ ನಾವು ಇನ್ಸ್-ಟೆನ್ಸ್ ಫೀಲ್ಡ್ ಗಳು ಯಾಕೆ ಹಾಗೆ ಕರೆಯಲ್ಪಡುತ್ತವೆ ಎಂದು ನೋಡೋಣ. |
06:22 | ಇನ್ಸ್-ಟೆನ್ಸ್ ಫೀಲ್ಡ್ ಗಳ ಬೆಲೆಯು ಕ್ಲಾಸ್ ನ ಪ್ರತಿಯೊಂದು ಇನ್ಸ್-ಟೆನ್ಸ್ ಗೂ ಬೇರೆ ಬೇರೆಯಾಗಿರುವುದರಿಂದ ಹಾಗೆ ಕರೆಯಲ್ಪಡುತ್ತವೆ. |
06:29 | ಅಂದರೆ ಕ್ಲಾಸ್ ನ ಪ್ರತಿಯೊಂದೂ ಒಬ್ಜೆಕ್ಟ್ ಕೂಡ ಬೇರೆ ಬೇರೆ ಬೆಲೆಯನ್ನು ಹೊಂದಿರುತ್ತದೆ. |
06:34 | TestStudent ಕ್ಲಾಸ್ ಗೆ ಹೋಗೋಣ. |
06:43 | ಇಲ್ಲಿ ನಾವು Student ಕ್ಲಾಸ್ ನ ಇನ್ನೊಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ. |
06:50 | ಅದಕ್ಕಾಗಿ ಮುಂದಿನ ಸಾಲಿನಲ್ಲಿ Student ಸ್ಪೇಸ್ stud2 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ. |
07:06 | ಈಗ ನಾವು ಎರಡೂ ಒಬ್ಜೆಕ್ಟ್ ಗಳನ್ನೂ TestStudent ಕ್ಲಾಸ್ ನಲ್ಲಿ ಇನಿಷಿಯಲೈಜ್ ಮಾಡೋಣ. |
07:18 | ಮುಂದಿನ ಸಾಲಿನಲ್ಲಿ stud1ಡಾಟ್ roll_no ಅನ್ನು ಆರಿಸಿಕೊಂಡು Enter ಒತ್ತಿ, ಸಮ 20 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
07:32 | ಮುಂದಿನ ಸಾಲಿನಲ್ಲಿ stud1ಡಾಟ್ name ಅನ್ನು ಆರಿಸಿಕೊಂಡು Enter ಒತ್ತಿ, ಸಮ ಡಬಲ್ ಕೋಟ್ಸ್ ನಲ್ಲಿ Ramu ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. Enter ಒತ್ತಿ. |
07:54 | ಹೀಗೆ ನಾವು ಮೊದಲನೇ ಒಬ್ಜೆಕ್ಟ್ ನ ಫೀಲ್ಡ್ ಗಳನ್ನು ಇನಿಷಿಯಲೈಜ್ ಮಾಡಿದ್ದೇವೆ. |
07:58 | ಈಗ ಎರಡನೇ ಒಬ್ಜೆಕ್ಟ್ ನ ಫೀಲ್ಡ್ ಗಳನ್ನು ಇನಿಷಿಯಲೈಜ್ ಮಾಡೋಣ. |
08:02 | ಹಾಗಾಗಿ stud2 ಡಾಟ್ roll_no ಅನ್ನು ಆರಿಸಿಕೊಂಡು, ಸಮ 30 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
08:15 | ಮುಂದಿನ ಸಾಲಿನಲ್ಲಿ stud2 ಡಾಟ್ name ಅನ್ನು ಆರಿಸಿಕೊಂಡು Enter ಒತ್ತಿ, ಸಮ ಡಬಲ್ ಕೋಟ್ಸ್ ನಲ್ಲಿ Shyamu ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. Enter ಒತ್ತಿ. |
08:34 | ಈಗ println ಹೇಳಿಕೆಯ ನಂತರ Systemಡಾಟ್ outಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe roll number is ಎಂದು ಟೈಪ್ ಮಾಡಿ, ಪ್ಲಸ್ stud2 ಡಾಟ್ roll_no ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ. |
09:03 | Systemಡಾಟ್ outಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is ಎಂದು ಟೈಪ್ ಮಾಡಿ, ಪ್ಲಸ್ stud2 ಡಾಟ್ name ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ. |
09:28 | ಈಗ ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl s ಮತ್ತು Ctrl F11 ಕೀಗಳನ್ನು ಒತ್ತಿ. |
09:38 | ನಾವು ಈಗ The roll_no is 20 .The name is Ramu. The roll_no is 30, The name is Shyamu ಎಂಬ ಫಲಿತವನ್ನು ಕಾಣುತ್ತೇವೆ. |
09:47 | stud1 ಮತ್ತು stud2 ಗಳು ಎರಡು ಬೇರೆ ಬೇರೆ ಒಬ್ಜೆಕ್ಟ್ ಗಳನ್ನು ಸೂಚಿಸುತ್ತವೆ. |
09:52 | ಅಂದರೆ ಎರಡೂ ಒಬ್ಜೆಕ್ಟ್ ಗಳೂ ಬೇರೆ ಬೇರೆ ಬೆಲೆಗಳನ್ನು ಹೊಂದಿರುತ್ತವೆ. |
09:56 | ನಾವು ಅದನ್ನು ಇಲ್ಲಿ ನೋಡಬಹುದು. |
09:57 | ಮೊದಲನೇ ಒಬ್ಜೆಕ್ಟ್ 20 ಮತ್ತು Ramu ಎಂಬ ಬೆಲೆಗಳನ್ನು ಹೊಂದಿದೆ. |
10:02 | ಎರಡನೇ ಒಬ್ಜೆಕ್ಟ್ 30 ಮತ್ತು Shyamu ಎಂಬ ಬೆಲೆಗಳನ್ನು ಹೊಂದಿದೆ. |
10:09 | ಈಗ ಇನ್ನೊಂದು ಒಬ್ಜೆಕ್ಟ್ ಅನ್ನು ರಚಿಸೋಣ. |
10:13 | ಅದಕ್ಕಾಗಿ Student ಸ್ಪೇಸ್ stud3 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ. ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ. |
10:36 | ಈಗ ಮೂರನೇ ಒಬ್ಜೆಕ್ಟ್ ನ ಬೆಲೆಗಳನ್ನು ಪ್ರಿಂಟ್ ಮಾಡೋಣ. |
10:44 | ಅದಕ್ಕಾಗಿ System ಡಾಟ್out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The roll_no is ಎಂದು ಟೈಪ್ ಮಾಡಿ, ಪ್ಲಸ್ stud3 ಡಾಟ್ roll_no ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ. |
11:09 | ಮುಂದಿನ System ಡಾಟ್out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is ಎಂದು ಟೈಪ್ ಮಾಡಿ, ಪ್ಲಸ್ stud3 ಡಾಟ್ name ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ |
11:29 | ಈಗ ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl s ಮತ್ತು Ctrl F11 ಕೀಗಳನ್ನು ಒತ್ತಿ. |
11:36 | ನಾವು ಮೂರನೇ ಒಬ್ಜೆಕ್ಟ್ 50 ಮತ್ತು Raju ಎಂಬ ಬೆಲೆಗಳನ್ನು ಹೊಂದಿರುವುದನ್ನು ನೋಡಬಹುದು. |
11:46 | ಏಕೆಂದರೆ ನಾವು Student ಕ್ಲಾಸ್ ನ ಫೀಲ್ಡ್ ಗಳನ್ನು 50 ಮತ್ತು Raju ಎಂದು ಸ್ಪಷ್ಟವಾಗಿ ಇನಿಷಿಯಲೈಜ್ ಮಾಡಿದ್ದೇವೆ. |
11:54 | ಈ ಫೀಲ್ಡ್ ಗಳನ್ನು ಡಿ-ಇನಿಷಿಯಲೈಜ್ ಮಾಡಿ ಪ್ರಯತ್ನಿಸಿ ಮೂರನೇ ಒಬ್ಜೆಕ್ಟ್ ನ ಫಲಿತವನ್ನು ನೋಡಿ. |
12:02 | ಈ ಟ್ಯುಟೋರಿಯಲ್ ನಲ್ಲಿ ನಾವು |
12:05 | ಇನ್ಸ್-ಟೆನ್ಸ್ ಫೀಲ್ಡ್ ನ ಕುರಿತು, |
12:07 | ಡಾಟ್ ಆಪರೇಟರ್ ಅನ್ನು ಉಪಯೋಗಿಸಿ ಫೀಲ್ಡ್ ಗಳನ್ನು ಆಕ್ಸೆಸ್ ಮಾಡಲು ಕಲಿತಿದ್ದೇವೆ. |
12:11 | ಸ್ವಂತ ಅಭ್ಯಾಸಕ್ಕಾಗಿ |
12:13 | ಮೊದಲೇ ರಚಿಸಿದ TestEmployee ಕ್ಲಾಸ್ ಗೆ emp2 ಎಂಬ ಒಬ್ಜೆಕ್ಟ್ ಅನ್ನು ರಚನೆ ಮಾಡಿ. |
12:18 | ನಂತ ಎರಡು ಒಬ್ಜೆಕ್ಟಗಳಿಗೂ ಡಾಟ್ ಆಪರೇಟರ್ ಅನ್ನು ಉಪಯೋಗಿಸಿ ಬೆಲೆಗಳನ್ನು ಇನಿಷಿಯಲೈಜ್ ಮಾಡಿರಿ. |
12:23 | ಮೊದಲನೇ ಒಬ್ಜೆಕ್ಟ್ ಗೆ 55 ಮತ್ತು Priya ಎಂಬ ಬೆಲೆಯನ್ನು ನೀಡಿ. |
12:27 | ಎರಡನೇ ಒಬ್ಜೆಕ್ಟ್ ಗೆ 45 ಮತ್ತು Sandeep ಎಂಬ ಬೆಲೆಯನ್ನು ನೀಡಿ. |
12:31 | ಎರಡು ಒಬ್ಜೆಕ್ಟ್ ಗಳ ಬೆಲೆಗಳನ್ನು ಫಲಿತದಲ್ಲಿ ತೋರಿಸಿ. |
12:34 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
12:37 | ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
12:40 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
12:43 | ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋhಡ್ ಮಾಡಿ ನೋಡಬಹುದು. |
12:47 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
12:49 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
12:52 | ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
12:56 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
13:01 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
13:05 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
13:11 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
13:09 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
13:22 | ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. |