Java/C2/do-while/Kannada

From Script | Spoken-Tutorial
Revision as of 19:29, 4 February 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಜಾವಾದಲ್ಲಿ do-while Loop ಕುರಿತಾದ ಪಾಠಕ್ಕೆ ಸ್ವಾಗತ .
00:06 ಈ ಟ್ಯುಟೊರಿಯಲ್ ನಲ್ಲಿ ನಾವು
  • do-while loop ' ಕುರಿತು
  • ಮತ್ತದರ ಉಪಯೋಗದ ಕುರಿತು

ತಿಳಿಯಲು ಪ್ರಯತ್ನಿಸುತ್ತೇವೆ.

00:12 ಇಲ್ಲಿ ನಾವು

Ubuntu 11.10, JDK 1.6 ಮತ್ತು Eclipse 3.7 ಗಳನ್ನು ಉಪಯೋಗಿಸುತ್ತೇವೆ.

00:20 ಈ ಪಾಠವನ್ನು ಕಲಿಯಲು ನೀವು, ಜಾವಾದಲ್ಲಿ while loop ನ ಬಗ್ಗೆತಿಳಿದಿರಬೇಕು.
00:25 ತಿಳಿದಿಲ್ಲವಾದಲ್ಲಿ ಸಂಬಂಧಿತ ಪಾಠಕ್ಕಾಗಿ ಕೆಳಕಂಡ ಅಂತರ್ಜಾಲತಾಣವನ್ನು ಭೇಟಿಮಾಡಿ .
00:32 ಇಲ್ಲಿdo-while loop ನ ಸ್ವರೂಪವನ್ನು ಕೊಡಲಾಗಿದೆ.
00:37 ಇದು while loop ನಂತೆಯೇ ಇದೆ ಎಂಬುದನ್ನು ನೀವು ಕಾಣಬಹುದು.
00:40 ಇದಕ್ಕೆ ಎರಡು ಭಾಗಗಳಿವೆ.
00:42 ಮೊದಲನೆಯದು ಲೂಪ್ ನ running conditionಆಗಿದೆ. ಮತ್ತು ಎರಡನೆಯದು ಲೂಪ್ ನ variable ಆಗಿದೆ.
00:51 ವ್ಯತ್ಯಾಸವೇನೆಂದರೆ condition ಅನ್ನು do ಬ್ಲಾಕ್ ನ ನಂತರ ಬರೆಯಲಾಗಿದೆ.
00:58 ಹಾಗಾಗಿ ಕಂಡೀಶನ್ ಇದು do block ನ ಒಳಗಿರುವ ಸ್ಟೆಟ್-ಮೆಂಟ್ ಎಕ್ಸಿಕ್ಯೂಟ್ ಆದ ನಂತರ ಪರೀಕ್ಷಿಸಲ್ಪಡುತ್ತದೆ.
01:05 ಈಗ ನಾವು ಒಂದು ಉದಾಹರಣೆಯನ್ನು ನೋಡೋಣ..
01:07 ಅದಕ್ಕಾಗಿ ಎಕ್ಲಿಪ್ಸ್ ಗೆ ಬನ್ನಿ.
01:11 ಇಲ್ಲಿ ನಾವು Eclipse IDE ಯನ್ನು ಮತ್ತು ಉಳಿದ ಕೋಡ್ ಗೆ ಬೇಕಾದ ಸ್ಥೂಲರಚನೆಯನ್ನು ಹೊಂದಿದ್ದೇವೆ.
01:17 ನಾವು DoWhileDemo ಎಂಬ ಕ್ಲಾಸ್ ಅನ್ನು ರಚಿಸಿದ್ದೇವೆ ಮತ್ತುmain method ಒಂದನ್ನು ಇದಕ್ಕೆ ಸೇರಿಸಿದ್ದೇವೆ..
01:22 ನಾವು do-while loop ಅನ್ನು ಉಪಯೋಗಿಸಿ 1 ರಿಂದ 10ರವರೆಗಿನ ಸಂಖ್ಯೆಗಳನ್ನು ಮುದ್ರಿಸುತ್ತಿದ್ದೇವೆ..
01:27 ಹೀಗೆ ಟೈಪ್ ಮಾಡಿ,,
01:29 int n ಸಮ 1
01:32 n ಇದು ಲೂಪ್ ನ variable ಆಗುತ್ತದೆ..
01:36 ನಂತರ do ಎಂದು ಟೈಪ್ ಮಾಡಿ
01:40 braces ಅನ್ನು ತೆರೆದು ಮುಚ್ಚಿರಿ..
01:44 braces ನ ಒಳಗಡೆ System.out.println(n); ಎಂದು ಟೈಪ್ ಮಾಡಿ..
01:55 ನಾವು n ನ ಬೆಲೆಯನ್ನು ಮುದ್ರಿಸೋಣ ಮತ್ತು ಹೆಚ್ಚುಮಾಡುತ್ತಾ ಹೋಗೋಣ n ಸಮ n ಪ್ಲಸ್ 1;
02:05 ಇದನ್ನು ನಾವು ,
02:08 n ಕಡಿಮೆ ಅಥವಾ ಸಮ 10 ಇಲ್ಲಿಯವರೆಗೆ ಮಾಡೊಣ.
02:10 braces ನ ಹೊರಗಡೆ while ಪೆರಂಥಿಸಿಸ್ ನ ಒಳಗಡೆ n ಕಡಿಮೆ ಅಥವಾ ಸಮ 10) ಎಂದು ಟೈಪ್ ಮಾಡಿ.
02:20 do-while ಅನ್ನು ಸೆಮಿಕೊಲನ್ ಉಪಯೋಗಿಸಿ ಮುಚ್ಚಿರಿ.
02:25 code ನ ಕಾರ್ಯವನ್ನು ನೋಡೋಣ.
02:28 Save ಮಾಡಿ Run ಮಾಡಿರಿ.
02:37 1 ರಿಂದ 10 ರವರೆಗಿನ ಸಂಖ್ಯೆಯನ್ನು ನಾವು ಕಾಣುತ್ತಿದ್ದೇವೆ.
02:42 code ಹೇಗೆ ಕಾರ್ಯ ನಿರ್ವಹಿಸುತ್ತದೆಂದು ನೋಡೋಣ...
02:47 ಮೊದಲು, n ನ ಮೂಲ್ಯ 1 ಮುದ್ರಿಸಲ್ಪಡುತ್ತದೆ ನಂತರ n ಇದರ ಮೂಲ್ಯ 2 ಆಗುತ್ತದೆ.
02:52 ನಂತರ ಕಂಡೀಶನ್ ಪರೀಕ್ಷಿಸಲ್ಪಡುತ್ತದೆ..
02:55 ಅದು ಸರಿ ಇರುವದರಿಂದ , ಪುನಃ 2 ಎಂದು ಮುದ್ರಿಸಲ್ಪಟ್ಟು , ನಂತರ nನ ಬೆಲೆ 3 ಎಂದಾಗುತ್ತದೆ.
03:00 ಇದು 10ರ ವರೆಗಿನ ಸಂಖ್ಯೆ ಮುದ್ರಿಸಲ್ಪಡುವವರೆಗೆ ಮುಂದುವರಿಯುತ್ತದೆಮತ್ತ್ n ನ ಬೆಲೆ 11 ಎಂದಾಗುತ್ತದೆ..
03:06 ಯಾವಾಗ n = 11 ಎಂದಾಗುತ್ತದೆಯೋ, ಅವಾಗ ಕಂಡೀಶನ್ ತಪ್ಪಾಗಿ ಲೂಪ್ ನಿಲ್ಲುತ್ತದೆ..
03:11 ಈಗ ನಾವು 50 ರಿಂದ 40 ರವರೆಗಿನ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಸೋಣ..
03:17 50ರಿಂದ ಪ್ರಾರಂಭಿಸೋಣ.
03:19 n = 1 ನ್ನು n = 50 ಎಂದು ಬದಲಿಸಿ..
03:23 ನಾವು ದೊಡ್ಡ ಸಂಖ್ಯೆಯಿಂದ ಚಿಕ್ಕ ಸಂಖ್ಯೆಗೆ ಲೂಪ್ ಮಾಡುತ್ತಿರುವದರಿಂದ,,
03:29 n = n + 1 ಅನ್ನು n = n - 1 ಎಂದು ಬದಲಿಸಿ.
03:34 ನಾವು n ದೊಡ್ಡದು ಅಥವಾ ಸಮ 40 ಎಂದಾಗುವವರೆಗೂ ಲೂಪ್ ಮಾಡುತ್ತೇವೆ...
03:40 ಅದಕ್ಕಾಗಿ ಕಂಡೀಶನ್ ಅನ್ನು n >= 40 ಎಂದು ಬದಲಿಸಿ..
03:48 ಔಟ್-ಪುಟ್ ಅನ್ನು ನೋಡೋಣ..
03:50 Save ಮಾಡಿ Run ಮಾಡಿರಿ.
03:57 ನಾವು 50 ರಿಂದ 40 ರವರೆಗಿನ ಸಂಖ್ಯೆಯನ್ನು ಕಾಣುತ್ತಿದ್ದೇವೆ.
04:02 ಈಗ ನಾವು do-while loop ಅನ್ನು ಉಪಯೋಗಿಸಿ ಮತ್ತೊಂದು ಲೊಜಿಕ್ ಅನ್ನು ಪ್ರಯತ್ನಿಸೋಣ.
04:10 ಒಂದು ಸಂಖ್ಯೆಯನ್ನುಕೊಟ್ಟಿದೆ, ಇದು ಪೂರ್ಣವರ್ಗಸಂಖ್ಯೆಯೋ ಅಲ್ಲವೋ ಎಂದು ಕಂಡುಹಿಡಿಯೋಣ..
04:15 ಮೊದಲು ಮೇನ್ ಮೆಥಡ್ ಅನ್ನು ಅಳಿಸೋಣ..
04:19 ನಂತರ int n = 25; ಎಂದು ಟೈಪ್ ಮಾಡಿ..
04:25 ನಾವು n ನಲ್ಲಿ ಇರುವ ಸಂಖ್ಯೆಯು ಪೂರ್ಣವರ್ಗವೋ ಅಲ್ಲವೋ ನೋಡೋಣ..
04:32 ನಂತರ int x = 0; ಎಂದು ಟೈಪ್ ಮಾಡಿ.
04:37 ನಾವು x ಅನ್ನು , ಕೊಟ್ಟಿರುವ ಸಂಖ್ಯೆ ಪೂರ್ಣವರ್ಗವಾದರೆ ಅದರ ವರ್ಗಮೂಲವನ್ನು ಸ್ಟೋರ್ ಮಾಡಲು ಬಳಸೋಣ.
04:44 do ಎಂದು ಟೈಪ್ ಮಾಡಿ
04:46 ಬ್ರೆಸೆಸ್ ಗಳನ್ನು ತೆರೆದು ಮುಚ್ಚಿರಿ..
04:49 ಬ್ರೆಸೆಸ್ ನ ಒಳಗೆ x ಸಮx ಧನಚಿಹ್ನೆ 1 ಎಂದು ಟೈಪ್ ಮಾಡಿ..
04:55 ಮತ್ತು ಬ್ರೆಸೆಸ್ ನ ಹೊರಗಡೆ..
04:58 ಆರದೆ ಪೆರೆನ್ಥಿಸಿಸ್ ನ ಒಳಗಡೆ (x into x < n)
05:06 ಮತ್ತು ಸೆಮಿಕೊಲನ್ ಗಳಿಂದ do-while ಅನ್ನು ಕೊನೆಗೊಳಿಸಿ..
05:10 ಎಲ್ಲಿಯವರೆಗೆ x into x ಕಡಿಮೆnಗಿಂತ,ಆಗಿರುತ್ತದೆಯೋ ನಾವು x ನ ಬೆಲೆಯನ್ನು ಹೆಚ್ಚಿಸುತ್ತಾ ಹೋಗುತ್ತೇವೆ..
05:16 ಯಾವಾಗ ಲೂಪ್ ನಿಲ್ಲುತ್ತದೆಯೋ ಆಗ ಅದರ ವಿಲೋಮಸ್ಥಿತಿ ಸರಿಯಾಗಿರುತ್ತದೆ..
05:22 ಅಂದರೆ x into x ಸಮ n ಆಗಬೇಕು ಅಥವಾ.
05:26 ಅದು n ಗಿಂತ ದೊಡ್ಡದಾಗಿರಬೇಕು.
05:28 ಒಂದುವೇಳೆ x into x ಸಮ n ಎಂದಾದರೆ, ಕೊಟ್ಟ ಸಂಖ್ಯೆಯು ಪೂರ್ಣವರ್ಗಸಂಖ್ಯೆ...
05:32 ಸಮವಲ್ಲದಿದ್ದರೆ ಸಂಖ್ಯೆಯು ಪೂರ್ಣವರ್ಗವಲ್ಲ.
05:37 ಅದಕ್ಕಾಗಿ ಕಂಡೀಶನ್ ಬರೆಯೋಣ.
05:47 System.out.println(x * x == n);
05:55 ಕೋಡ್ ನ ಕ್ರಿಯೆಯನ್ನು ನೋಡೋಣ.
05:59 Save ಮತ್ತು Run ಮಾಡಿ. ನಾವು ಔಟ್-ಪುಟ್ true ಎಂದು ಕಾಣುತ್ತಿದ್ದೇವೆ..
06:07 ಮತ್ತೊಂದು ಪೂರ್ಣವರ್ಗವನ್ನು ಪರೀಕ್ಷಿಸೋಣ...
06:10 n = 25 ಅನ್ನು n = 49 ಎಂದು ಬದಲಿಸಿ..
06:15 Save ಮಾಡಿ Run ಮಾಡಿ..
06:20 ಮತ್ತೆ ನಾವು true ಎಂಬ ಫಲಿತವನ್ನು ಕಾಣುತ್ತಿದ್ದೇವೆ..
06:23 ಈಗ ಪೂರ್ಣವರ್ಗವಲ್ಲದ ಸಂಖ್ಯೆಯನ್ನು ಪರೀಕ್ಷಿಸೋಣ...
06:26 49 ಅನ್ನು 23 ಎಂದು ಬದಲಿಸಿ, Save ಮಾಡಿ Run ಮಾಡಿರಿ..
06:34 ನಾವು ನಿರೀಕ್ಷೆಯೆಂತೆ false ಅನ್ನು ಉತ್ತರವಾಗಿ ಪಡೆದಿದ್ದೇವೆ...
06:37 n ನ ಬೆಲೆಯು 0 ಆದರೆ ಏನಾಗುತ್ತದೆಂದು ನೋಡೋಣ.
06:42 n = 23 ಇದನ್ನು n = 0 ಎಂದು ಬದಲಿಸಿ. 0 ಇದು ಸ್ವಾಭಾವಿಕ ಸಂಖ್ಯೆ ಅಲ್ಲದ್ದರಿಂದ false ಎಂಬ ಉತ್ತರವನ್ನು ಪಡೆಯಬೇಕು..
06:52 ರನ್ ಮಾಡೋಣ...
06:54 Save ಮಾಡಿ Run ಮಾಡಿರಿ.
07:00 ನಾವು ನಿರೀಕ್ಷೆಯಂತೆ false ಎಂಬ ಉತ್ತರವನ್ನು ಪಡೆದಿದ್ದೇವೆ...
07:05 ಇದು ಕೆಳಗಿನ ಕಂಡೀಶನ್ ಪರೀಕ್ಷಿಸಲ್ಪಡುವವರೆಗೆಯೇ ಆಗುತ್ತದೆ.
07:08 x into x ಕಡಿಮೆn ಗಿಂತ. xನ ಬೆಲೆಯು ಹೆಚ್ಚಾಗುತ್ತದೆ ಮತ್ತದು1 ಎಂದಾಗುತ್ತದೆ..
07:16 ಲೂಪ್ ನ ಕಂಡೀಶನ್ ಸರಿಹೊಂದದ ಕಾರಣ ಲೂಪ್ ರನ್ ಆಗುವದಿಲ್ಲ..
07:20 ಈ ರೀತಿಯಲ್ಲಿ,, do-while loop ಅನ್ನು ಉಪಯೋಗಿಸಿ, 0 ಇದು ಪೂರ್ಣವರ್ಗವಲ್ಲ ಎಂದು ನಿರ್ಧರಿಸುತ್ತೇವೆ.
07:26 ಈ ರೀತಿಯಲ್ಲಿ, do-while loop ಅನ್ನು ಸಮಸ್ಯೆಗಳ ಪರಿಹಾರಕ್ಕೆ ಉಪಯೋಗಿಸುತ್ತೇವೆ..
07:31 ವಿಶೇಷವಾಗಿ, ಲೂಪ್ ಕಡಿಮೆ ಎಂದರೆ ಒಂದುಸಾರಿಯಾದರೂ ಉಪಯೋಗಿಸಲ್ಪಡಲೇಬೇಕು..
07:37 ನಾವು ಪಾಠದ ಕೊನೆಗೆ ಬಂದೆವು..
07:40 ಈ ಟ್ಯುಟೋರಿಯಲ್ ನಲ್ಲಿ ನಾವು,
07:42 do-while loop ಮತ್ತು ಅದರ ಉಪಯೋಗವನ್ನು ಕಲಿತೆವು.
07:46 ಸ್ವಂತ ಅಭ್ಯಾಸಕ್ಕಾಗಿ,ಈ ಕೆಳಗಿನ ಸಮಸ್ಯೆಯನ್ನು ಬಗೆಹರಿಸಿ.
07:50 ಒಂದು ಬೈನರಿಸಂಖ್ಯೆಯನ್ನು ಕೊಟ್ಟಿದೆ,ಅದರ ದಶಮಾನಪದ್ಧತಿಯ ಸಮಾನಸಂಖ್ಯೆಯನ್ನು ಕಂಡುಹಿಡಿಯಿರಿ.. ಉದಾಹರಣೆಗೆ11010 => 26
07:56 Spoken Tutorialಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೊಟ್ಟಿರುವ ಲಿಂಕ್-ನಲ್ಲಿರುವ ವಿಡಿಯೋ ನೋಡಿ...
08:01 ಇದು spoken-tutorial ನ ಕುರಿತು ತಿಳಿಸುತ್ತದೆ, ನೀವು ಒಳ್ಳೆಯ ಬ್ಯಾಂಡ್ವಿರಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ1ಡ್ ಮಾಡಿ ಕೂಡಾ ನೋಡಬಹುದು.
08:06 ಸ್ಪೋಕನ್ ಟ್ಯುಟೋರಿಯಲ್ ಯೋಜನಾ ತಂಡವು
08:10 ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಓನ್ಲೈುನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
08:16 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
08:22 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
08:32 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
08:36 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

NaveenBhat, Pratik kamble