GIMP/C2/Selective-Sharpening/Kannada

From Script | Spoken-Tutorial
Revision as of 13:08, 17 December 2014 by Sandhya.np14 (Talk | contribs)

Jump to: navigation, search
Time Narration
00:21 Meet The Gimp (ಮೀಟ್ ದ ಗಿಂಪ್) ನ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:26 ಈದಿನ, ‘ಸೆಲೆಕ್ಟಿವ್ ಶಾರ್ಪನಿಂಗ್’ ನ ಬಗ್ಗೆ ಕಲಿಸಲು ನಾನು ಇಷ್ಟಪಡುತ್ತೇನೆ.
00:31 ಕ್ಯಾಮೆರಾದಿಂದ ಹೊರಬಂದ ಪ್ರತಿಯೊಂದು ‘ಡಿಜಿಟಲ್ ಇಮೇಜ್’ಅನ್ನು ಶಾರ್ಪ್ ಮಾಡುವ ಅಗತ್ಯವಿದೆ, ಏಕೆಂದರೆ ಅವುಗಳು ನಿಚ್ಚಳವಾಗಿರುವುದಿಲ್ಲ, ವಿಶೇಷವಾಗಿ, ಕ್ಯಾಮೆರಾದಲ್ಲಿನ ‘ಪ್ರೊಸೆಸರ್’ಗೆ ಶಾರ್ಪ್ ಮಾಡಲು ಅನುಮತಿಸದೇ ನೀವು ಕಚ್ಚಾ ಇಮೇಜ್ ಗಳನ್ನು ತೆಗೆದಾಗ ಇದು ಅವಶ್ಯವಾಗಿದೆ..
00:48 ಆದರೆ, ‘ಗಿಂಪ್’ಅನ್ನು ಬಳಸಿ ನೀವು ಸ್ವತಃ ಇದನ್ನು ಮಾಡಿದಾಗ, ‘ಶಾರ್ಪನಿಂಗ್’ಅನ್ನು ನಿಯಂತ್ರಿಸಬಹುದು. ಇವತ್ತಿನ ‘ಟ್ಯುಟೋರಿಯಲ್’ನಲ್ಲಿ ಇದನ್ನು ಹೇಗೆ ಮಾಡುವದೆಂದು ನಾನು ತೋರಿಸುತ್ತೇನೆ.
01:02 ನಾವು ಇಲ್ಲಿ,ಈ ‘ಇಮೇಜ್’ನತ್ತ ನೋಡೋಣ.
01:06 ಈ ಇಮೇಜ್ನಲ್ಲಿ, ‘ಬ್ಯಾಕ್‌ಗ್ರೌಂಡ್’ನಲ್ಲಿರುವ ತಂತಿಯ ಜಾಲರಿಯು, ‘ಶಾರ್ಪ್’ ಮಾಡಿರದ ದೊಡ್ಡ ಜಾಗವಾಗಿದೆ ಮತ್ತು ಇಲ್ಲಿರುವ ಹೂವು ಸ್ವಲ್ಪ ‘ಶಾರ್ಪ್’ ಮಾಡಲ್ಪಟ್ಟಿದೆ.
01:17 ಆದ್ದರಿಂದ ನನಗೆ ಈ ಹೂವನ್ನು ಸ್ವಲ್ಪ ಹೆಚ್ಚು ‘ಶಾರ್ಪ್’ ಮಾಡಬೇಕಾಗಿದೆ ಹಾಗೂ ‘ಬ್ಯಾಕ್‌ಗ್ರೌಂಡ್’ಅನ್ನು ಇದ್ದ ಹಾಗೆಯೇ ಇಡಬೇಕಾಗಿದೆ.
01:25 ಆದರೆ, ನನಗೆ ‘ಬ್ಯಾಕ್‌ಗ್ರೌಂಡ್’ಅನ್ನು ಏಕೆ ‘ಶಾರ್ಪ್’ ಮಾಡಬೇಕಾಗಿಲ್ಲ ಎಂದು ಮೊದಲು ನಿಮಗೆ ತೋರಿಸಬೇಕಾಗಿದೆ.
01:31 ಈಗ ಅದು ‘ಶಾರ್ಪ್’ ಮಾಡಲ್ಪಟ್ಟಿಲ್ಲ. ಸ್ವಲ್ಪ ‘ಶಾರ್ಪ್’ ಮಾಡುವುದರಿಂದ ಏನೂ ಹಾನಿಯಾಗಬಾರದು.
01:37 ಆದ್ದರಿಂದ, ‘ಟೂಲ್ ಬಾರ್’ನಲ್ಲಿಯ Filters ನ ಮೇಲೆ ಕ್ಲಿಕ್ ಮಾಡಿ, Sharpen ಟೂಲನ್ನು ಆಯ್ಕೆಮಾಡಿ. ‘ಶಾರ್ಪ್‌ನೆಸ್ ಸ್ಲೈಡರ್’ಅನ್ನು ಮೇಲೆ ಎಳೆಯುತ್ತೇನೆ. ‘ಬ್ಯಾಕ್‌ಗ್ರೌಂಡ್’ನ ಮೂಲಭೂತತೆಯು ನಾಶವಾಗಿದೆ ಎಂದು ನೀವು ನೋಡಬಹುದು.
01:52 ಆದರೆ ನೀವು ಇಲ್ಲಿ ನೋಡಿ, ನಾನು Sharpen ಟೂಲನ್ನು ಇಲ್ಲಿಗೆ ತೆಗೆದುಕೊಂಡು ಹೋಗಿ, ಸ್ಲೈಡರನ್ನು ಕಟ್ಟಕಡೆಯ ‘ವ್ಯಾಲ್ಯೂ’ಗೆ ಎಳೆದಾಗ, ಚಿತ್ರವು ಕರಗಿಹೋಗುತ್ತದೆ.
02:03 ‘ಶಾರ್ಪ್’ ಮಾಡದೇ ಇರುವ ಅಥವಾ ವಿವರಗಳಿಲ್ಲದ ಹಾಗೂ ಬಣ್ಣಗಳಿಂದ ತುಂಬಲ್ಪಟ್ಟ ಜಾಗಗಳನ್ನು ‘ಶಾರ್ಪ್’ ಮಾಡುವುದರಿಂದ ಇಮೇಜ್, ಕೆಡುತ್ತದೆ. ಏಕೆಂದರೆ, ಇಮೇಜ್ನಲ್ಲಿ ‘ಶಾರ್ಪ್’ ಮಾಡುವ ಅವಶ್ಯಕತೆಯಿಲ್ಲದ ಬಣ್ಣಗಳು, ‘ಶಾರ್ಪ್’ ಮಾಡಲ್ಪಡುವುದರಿಂದ ಹೀಗಾಗುತ್ತದೆ.
02:21 ಆದ್ದರಿಂದ, ‘ಸೆಲೆಕ್ಟಿವ್ ಶಾರ್ಪನಿಂಗ್’ ಎನ್ನುವ ವಿಧಾನವನ್ನು ನಿಮಗೆ ಹೇಳುವೆನು. ಇದು ಇಮೇಜನ್ನು ನಾಶಮಾಡುವುದಿಲ್ಲ.
02:29 ‘ಸೆಲೆಕ್ಟಿವ್ ಶಾರ್ಪನಿಂಗ್’ ಮಾಡಲು ನಾನು ‘ಲೇಯರ್’ಗಳೊಂದಿಗೆ ಕೆಲಸ ಮಾಡುವೆನು.
02:35 ಈ ಸಲ ನಾನು, Background ‘ಲೇಯರ್’ನ ‘ಕಾಪಿ’ ಮಾಡಿ, ಅದನ್ನು sharpen (ಶಾರ್ಪನ್) ಎಂದು ಕರೆಯುತ್ತೇನೆ.
02:43 ಈಗ sharpen ‘ಲೇಯರ್’ಗೆ, ಒಂದು ‘ಲೇಯರ್ ಮಾಸ್ಕ್’ಅನ್ನು ಸೇರಿಸಿ, Grayscale copy of layer ಅನ್ನು ‘ಲೇಯರ್ ಮಾಸ್ಕ್’ ಎಂದು ಆಯ್ಕೆಮಾಡುತ್ತೇನೆ. Add ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತೇನೆ. ಏನೂ ಬದಲಾವಣೆಯಾಗಿಲ್ಲ ಎಂದು ನೀವು ನೋಡುತ್ತೀರಿ ಏಕೆಂದರೆ ಲೇಯರ್ ಮೋಡ್, Normal ಎಂದು ಆಗಿದೆ.
03.07 ಆದರೆ, ನಾನು ಮೊದಲಿನ Background ‘ಲೇಯರ್’ಅನ್ನು ಡೀ-ಸೆಲೆಕ್ಟ್ ಮಾಡಿದಾಗ,ಇಮೇಜ್ನಲ್ಲಿಯ ಹೊಳೆಯುವ ಭಾಗಗಳು ಮಾತ್ರ ಕಾಣುತ್ತಿವೆ ಎಂದು ನೀವು ನೋಡಬಹುದು.
03:19 ‘ಲೇಯರ್ ಮಾಸ್ಕ್’ನಲ್ಲಿ, ಬಿಳಿಬಣ್ಣವು ಹೊಳೆಯುವ ಭಾಗಗಳನ್ನು ತೋರಿಸುತ್ತದೆ ಹಾಗೂ ಕಪ್ಪುಬಣ್ಣವು ಅಡಗಿಸುತ್ತದೆ ಎನ್ನುವುದು ನಿಮಗೆ ನೆನಪಿದ್ದರೆ,ಇಲ್ಲಿ ‘ಲೇಯರ್ ಮಾಸ್ಕ್’ನ ಹೆಚ್ಚಿನ ಭಾಗವು ಕಪ್ಪಾಗಿದೆ, ಆದ್ದರಿಂದ ಅವು ಅಡಗಿಸಲ್ಪಟ್ಟಿವೆ ಮತ್ತು ಇಲ್ಲಿಯ ಹೊಳೆಯುವದು ಮಾತ್ರ ಕಾಣುತ್ತಿದೆ ಎಂದು ನೀವು ನೋಡಬಹುದು.
03:36 ಈಗ ನಾನು ‘ಲೇಯರ್ ಮಾಸ್ಕ್’ನ ಮೇಲೆ ‘ಶಾರ್ಪನಿಂಗ್ ಅಲ್ಗೊರಿದಮ್’ಅನ್ನು ಬಳಸಿದಾಗ, ಈ ಹೂವು ಮಾತ್ರ ‘ಶಾರ್ಪ್’ ಮಾಡಲ್ಪಡುವುದು.
03:43 ನನಗೆ ಎಲೆಯ ಭಾಗವನ್ನು ಸಹ ‘ಶಾರ್ಪ್’ ಮಾಡಬೇಕಾಗಿದೆ.
03:48 sharpen ನ ಇಮೇಜ್ನಲ್ಲಿ, ನನಗೆ, ಹೂವಿನಲ್ಲಿ ಬಿಳಿಬಣ್ಣದ ಜಾಗಗಳು ಬೇಕಾಗಿಲ್ಲ, ಸೂಕ್ಷ್ಮ ವಿವರಗಳು ಮಾತ್ರ ನನಗೆ ಬೇಕಾಗಿದೆ.
03:57 ಇದನ್ನು ಮಾಡಲು, ನಾನು Edge Detect (ಎಡ್ಜ್ ಡಿಟೆಕ್ಟ್) ಎನ್ನುವ ಎರಡನೆಯ ‘ಫಿಲ್ಟರ್’ಅನ್ನು ಬಳಸುತ್ತೇನೆ.
04:04 ಈ ಅಲ್ಗೋರಿದಮ್, ಇಮೇಜ್ನಲ್ಲಿ, ಹೊಳೆಯುವ ಮತ್ತು ಮಂಕಾದ ಭಾಗಗಳ ನಡುವಿನ ಅಂಚುಗಳನ್ನು ಹುಡುಕಲು ಸಹಾಯಮಾಡುತ್ತದೆ ಹಾಗೂ ಅಲ್ಲಿ ಬಿಳಿಬಣ್ಣದ ಗೆರೆಯನ್ನು ಮಾಡಿ ಅವುಗಳನ್ನು ಹೆಚ್ಚಿಸುತ್ತದೆ.
04:20 ಇಲ್ಲಿರುವ ಈ ಆಯ್ಕೆಗಳನ್ನು ನೀವು ಹಾಗೆಯೇ ಬಿಟ್ಟುಬಿಡಬಹುದು ಏಕೆಂದರೆ ಈ ‘ಅಲ್ಗೋರಿದಮ್’ಗಳ ನಡುವೆ ಬಹಳ ವ್ಯತ್ಯಾಸವಿಲ್ಲ. ಆದರೆ ನಾನು ಪ್ರಮಾಣದ ವ್ಯಾಲ್ಯೂವನ್ನು 4 ಕ್ಕೆ ಹೆಚ್ಚಿಸಿ ‘ಪ್ರಿವ್ಯೂ’ನಲ್ಲಿ ನೋಡುತ್ತೇನೆ.
04:41 ‘ಬ್ಯಾಕ್‌ಗ್ರೌಂಡ್’ನಲ್ಲಿ ಸ್ವಲ್ಪ ರಚನೆ ಇದೆ ಹಾಗೂ ಹೊಳೆಯುವ ಭಾಗದಲ್ಲಿ ದಪ್ಪವಾದ ಬಿಳಿಯ ಗೆರೆಗಳಿವೆ ಎಂದು ಇಲ್ಲಿ ನೀವು ನೋಡಬಹುದು.
04:54 ನಾನು OK ಯ ಮೇಲೆ ಕ್ಲಿಕ್ ಮಾಡಿ, ‘ಇಮೇಜ್’ಗೆ ಅನ್ವಯಿಸಲು ‘ಅಲ್ಗೊರಿದಮ್’ಗಾಗಿ ಕಾಯುತ್ತೇನೆ.
05:06 ಇದು ಕೆಲಸಮಾಡುತ್ತದೆ. ಈಗ ಎಲ್ಲ ಅಂಚುಗಳ ಒಂದು ಬಿಳಿಯ ಪೇಂಟಿಂಗ್ ನನಗೆ ಸಿಗುತ್ತದೆ.
05:14 1 ಅನ್ನು (ಒಂದನ್ನು) ಒತ್ತಿ, ನಾನು ಇಮೇಜ್ನಲ್ಲಿ ಝೂಮ್ ಮಾಡುತ್ತೇನೆ. ಎಲ್ಲ ಹೊಳೆಯುವ ಭಾಗಗಳು ಬಿಳಿ ಅಂಚನ್ನು, ಬಿಳಿ ಗೆರೆಯನ್ನು ಹೊಂದಿವೆ ಹಾಗೂ ಬೇರೆ ಎಲ್ಲ ಜಾಗಗಳು ಹೆಚ್ಚುಕಡಿಮೆ ಕಪ್ಪಾಗಿವೆ ಎಂದು ಇಲ್ಲಿ ನೀವು ನೋಡಬಹುದು.
05:43 ನಾನು ‘ಲೇಯರ್ ಮಾಸ್ಕ್’ ಹಾಗೂ Background ‘ಲೇಯರ್’ಗಳನ್ನು ಸ್ವಿಚ್-ಆಫ್ ಮಾಡಿದಾಗ, ನೀವು ಹೂವಿನ ಅಂಚನ್ನು ಮಾತ್ರ ಎಂದರೆ ಹೊಳೆಯುವ ಭಾಗವು ಕಾಣುವುದನ್ನು ನೋಡಬಹುದು.
05:57 ‘ಬ್ಯಾಕ್‌ಗ್ರೌಂಡ್’ನಲ್ಲಿಯ ಹಾಗೂ ಹೂವಿನ ಬಣ್ಣಗಳ ಮೇಲೆ ಪರಿಣಾಮ ಬೀರದೆಯೇ ಈಗ,ಹೂವಿನ ಅಂಚನ್ನು ನಾನು ‘ಶಾರ್ಪ್’ ಮಾಡಬಹುದು.
06:08 ಆದರೆ ಇದು, ಮಸುಕಾದ ‘ಬ್ಯಾಕ್‌ಗ್ರೌಂಡ್’ನಲ್ಲಿ ಸ್ಪಷ್ಟವಾದ ಗೆರೆಯಂತಹ ಆಶ್ಚರ್ಯಕರ ಪರಿಣಾಮವನ್ನು ಕೊಡುತ್ತದೆ.
06:20 ಅದನ್ನು ತಪ್ಪಿಸಲು, ನಾನು ಈ ‘ಲೇಯರ್’ನ ಮೇಲೆ, Blur ಎನ್ನುವ ಇನ್ನೊಂದು ‘ಫಿಲ್ಟರ್’ಅನ್ನು ಬಳಸುತ್ತೇನೆ.
06:28 ಈ ಬಿಳಿ ಗೆರೆಯನ್ನು ಸ್ವಲ್ಪ ನಾಶಮಾಡಲು, ನಾನು, Layer Mask ಅನ್ನು ಆಯ್ಕೆಮಾಡಿ Gaussian Blur (ಗಾಸಿಯನ್ ಬ್ಲರ್) ಎನ್ನುವುದನ್ನು ಬಳಸುತ್ತೇನೆ. Horizontal Blur Radius ಎನ್ನುವಲ್ಲಿ ವ್ಯಾಲ್ಯೂವನ್ನು 8 ಕ್ಕೆ ಏರಿಸುತ್ತೇನೆ ಮತ್ತು OK ಯ ಮೇಲೆ ಕ್ಲಿಕ್ ಮಾಡುತ್ತೇನೆ.
06:46 ಫಿಲ್ಟರ್ ಪೂರ್ಣಗೊಳ್ಳುವವರೆಗೆ ಕಾಯುತ್ತೇನೆ. ಈಗ ಹೂವಿನ ಅಂಚು ಸ್ವಲ್ಪ ಹೆಚ್ಚು ನಯವಾಗಿದೆ ಎಂದು ನೀವು ನೋಡಬಹುದು. ನನಗೆ ಇಮೇಜ್ನಲ್ಲಿ ಇನ್ನೂ ಸ್ವಲ್ಪ ಕಾಂಟ್ರಾಸ್ಟ್ ನ ಅಗತ್ಯವಿದೆ.
06:59 ಆದ್ದರಿಂದ, ‘ಕರ್ವ್’ಗಳನ್ನು ಪಡೆಯಲು, Curve Tool ಅನ್ನು ಆಯ್ಕೆಮಾಡಿ ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ. ಗಾಢವಿರುವುದನ್ನು ಇನ್ನೂ ಗಾಢಗೊಳಿಸಲು, ‘ಕರ್ವ್’ಅನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ ಹಾಗೂ ಹೊಳಪಿನ ಭಾಗವನ್ನು ಮೇಲೆ ಎಳೆದು, ಬಿಳಿಯನ್ನು ಹೆಚ್ಚು ಬಿಳಿಯನ್ನಾಗಿ ಪಡೆಯುತ್ತೇನೆ.
07:15 OK ಯ ಮೇಲೆ ಕ್ಲಿಕ್ ಮಾಡುತ್ತೇನೆ. ಈಗ ನನ್ನ ಹತ್ತಿರ, ‘ಶಾರ್ಪ್’ ಮಾಡುವ ಅಗತ್ಯವಿರುವಲ್ಲಿ ದಪ್ಪನೆಯ ಬಿಳಿ ಗೆರೆಗಳಿದ್ದು. ಕಪ್ಪು ಭಾಗವಿರುವಲ್ಲಿ ‘ಶಾರ್ಪ್ನಿಂಗ್’ ಮಾಡುವುದು ಬೇಕಾಗಿಲ್ಲ.
07:30 ಕಪ್ಪು ಭಾಗದ ಮೇಲೆ ನಾನು ಕೆಲಸ ಮಾಡಬಹುದಿತ್ತು ಆದರೆ ಅದು ಯಾವುದೇ ಪರಿಣಾಮವನ್ನು ತೋರಿಸುವುದಿಲ್ಲ.
07:37 ಈಗ ನಾನು Layer Maskಅನ್ನು ಇಲ್ಲಿ ನಿಷ್ಕ್ರಿಯಗೊಳಿಸುತ್ತೇನೆ. ಪೂರ್ತಿ ಇಮೇಜನ್ನು ನೋಡಲು Shift + Ctrl + E ಯನ್ನು ಒತ್ತುತ್ತೇನೆ.
07:47 ಪೂರ್ತಿ ಇಮೇಜನ್ನು ನೋಡಲು Shift + Ctrl + E, ಎಂದು ನಿಮಗೆ ಈಗ ಗೊತ್ತಿದೆ.
07:51 ನಾನು ಮೊದಲಿನ Background ‘ಲೇಯರ್’ಅನ್ನು ನಿಷ್ಕ್ರಿಯಗೊಳಿಸಿದಾಗ, ನನಗೆ ಇಮೇಜ್ನಲ್ಲಿ ಹೆಚ್ಚುಕಡಿಮೆ ಏನನ್ನೂ ನೋಡಲು ಸಾಧ್ಯವಿಲ್ಲ.
07:57 White Layer Fill Type ನ ಜೊತೆಗೆ ಒಂದು ಹೊಸ ‘ಲೇಯರ್’ಅನ್ನು ಸೇರಿಸಿ OK ಒತ್ತುವದರಿಂದ, ಅಲ್ಲಿ ಏನಾಗುತ್ತಿದೆ ಎಂದು ನಿಮಗೆ ನಾನು ವಿವರಿಸುತ್ತೇನೆ.
08.06 ಈಗ, ಶಾರ್ಪ್ ಮಾಡಬೇಕಾಗಿರುವ ಜಾಗಗಳನ್ನು ನೀವು ನೋಡುತ್ತೀರಿ.
08:10 ಈಗ, ನಾವು ಈ ಇಮೇಜನ್ನು ಶಾರ್ಪ್ ಮಾಡೋಣ. ನಾನು ಕ್ರಮವಾಗಿ ‘ಟೂಲ್ ಬಾರ್’ನಲ್ಲಿಯ Filters, Enhance, ಎನ್ನುವುದರ ಮೇಲೆ ಕ್ಲಿಕ್ ಮಾಡಿ sharpen ಅನ್ನು ಆಯ್ಕೆಮಾಡುತ್ತೇನೆ.
08:25 ಹೂವಿನಲ್ಲಿ ‘ಶಾರ್ಪನಿಂಗ್’ ಮಾಡಬೇಕಾಗಿರುವ ಜಾಗಕ್ಕೆ ಹೋಗಿ. sharpen ಲೇಯರ್, ಆಯ್ಕೆಯಾಗಿರುವಂತೆ ನೋಡಿಕೊಳ್ಳಿ. ಏಕೆಂದರೆ white ‘ಲೇಯರ್’ನಲ್ಲಿ ‘ಶಾರ್ಪ್’ ಮಾಡಬೇಕಾದದ್ದು ಏನೂ ಇಲ್ಲ.
08:37 ಆದ್ದರಿಂದ, ಕ್ರಮವಾಗಿ sharpen ಲೇಯರ್, Filter, ಮತ್ತು Re-show Sharpen ಗಳನ್ನು ಆಯ್ಕೆಮಾಡುತ್ತೇನೆ.. ಇಲ್ಲಿ ನೀವು ಹೂವನ್ನು ನೋಡುತ್ತೀರಿ. ಈಗ, ಚೆನ್ನಾಗಿ ಶಾರ್ಪ್ ಮಾಡಲ್ಪಟ್ಟ ಇಮೇಜನ್ನು ಪಡೆಯುವವರೆಗೆ ನಾನು ‘ಶಾರ್ಪ್‌ನೆಸ್ ಸ್ಲೈಡರ್’ಅನ್ನು ಮೇಲೆ ಎಳೆಯಬಹುದು. ಆಮೇಲೆ OK ಯ ಮೇಲೆ ಒತ್ತಿ, ಅಲ್ಗೋರಿದಮ್ ಕೆಲಸ ಮಾಡಲು ಕಾಯುತ್ತೇನೆ.
09:01 ಇದು ಕೆಲಸ ಮಾಡುತ್ತದೆ.
09:04 ಗೆರೆಯು ಹೆಚ್ಚು ಲಕ್ಷಣವನ್ನು ಹೊಂದಿದೆ ಎಂದು ಈಗ ನೀವು ನೋಡಬಹುದು.
09:09 ಈ White ಲೇಯರನ್ನು ‘ಸ್ವಿಚ್ ಆಫ್’ ಮಾಡಿ ಪೂರ್ತಿ ಇಮೇಜನ್ನು ನೋಡೋಣ.
09:16 sharpen ಲೇಯರನ್ನು ‘ಸ್ವಿಚ್ ಆಫ್’ ಮಾಡಿ. ಆದರೆ ಈ ವರ್ಧನೆಯಲ್ಲಿ ಏನೂ ಬದಲಾವಣೆಗಳು ಗೋಚರಿಸುತ್ತಿಲ್ಲ.
09:23 ಆದ್ದರಿಂದ, ಇಮೇಜ್ನಲ್ಲಿ ಝೂಮ್ ಮಾಡುತ್ತೇನೆ.
09:27 ಪರಿಣಾಮವನ್ನು ನೀವು ಸರಿಯಾಗಿ ನೋಡಬೇಕು.
09:31 sharpen ಲೇಯರನ್ನು ‘ಆನ್’ ಮಾಡಿದಾಗ ನೀವು ‘ಶಾರ್ಪ್’ ಮಾಡಲ್ಪಟ್ಟ ಇಮೇಜನ್ನು ನೋಡುತ್ತೀರಿ. ಹಾಗೂ ಅದನ್ನು ‘ಆಫ್’ ಮಾಡಿದಾಗ ಇಮೇಜ್, ‘ಶಾರ್ಪ್’ ಗೊಳಿಸಲ್ಪಟ್ಟಿಲ್ಲ.
09:40 ‘ಓಪ್ಯಾಸಿಟೀ ಸ್ಲೈಡರ್’ನ ಸಹಾಯದಿಂದ ನಾನು ಪರಿಣಾಮದ ಪ್ರಮಾಣವನ್ನು ನಿಯಂತ್ರಿಸಬಹುದು.
09:47 ಈಗ ಬ್ಯಾಕ್‌ಗ್ರೌಂಡ್ ಅನ್ನು ಪರಿಶೀಲಿಸುತ್ತೇನೆ. ನಾನು ಅದನ್ನು ನಷ್ಟಗೊಳಿಸಿಲ್ಲವೆಂದು ನೀವು ನೋಡಬಹುದು.
09:54 ಈಗ ನಾನು ಸ್ವಲ್ಪ ಚೆನ್ನಾದ ಟ್ಯೂನಿಂಗ್ ಮಾಡುವೆನು.
10:10 ನಾನು ಇಮೇಜ್ನಲ್ಲಿ, ಹೆಚ್ಚು ‘ಶಾರ್ಪ್’ ಮಾಡಲ್ಪಟ್ಟ ಜಾಗಗಳಿಗಾಗಿ ಮತ್ತು ಸಾಕಷ್ಟು ಚೆನ್ನಾಗಿ ‘ಶಾರ್ಪ್’ ಮಾಡದೇ ಇರುವ ವಿಷಯಗಳಿಗಾಗಿ ನೋಡುತ್ತೇನೆ.
10:20 ಹೂವು ಮತ್ತು ಬ್ಯಾಕ್‌ಗ್ರೌಂಡ್ ಗಳ ನಡುವಿನ ಅಂಚು, add effects ಗಳಿಲ್ಲದೇ ಚೆನ್ನಾಗಿ ‘ಶಾರ್ಪ್’ ಮಾಡಲ್ಪಟ್ಟಿದೆ.
10:30 ಆದರೆ ನಾನು ಹೂವಿನಲ್ಲಿ ಹೋದಾಗ, ಈ ಭಾಗವು ಸ್ವಲ್ಪ ಕೃತಕವಾಗಿ ಕಾಣಿಸುತ್ತದೆ. ಇಲ್ಲಿಯ ಈ ಭಾಗವು ಖಂಡಿತವಾಗಿ ಹೆಚ್ಚು ‘ಶಾರ್ಪ್’ ಮಾಡಲ್ಪಟ್ಟಿದೆ.
10:41 ಇಲ್ಲಿಯ ಈ ಹೂವಿನ ಮೊಗ್ಗು ಸಾಕಷ್ಟು ಶಾರ್ಪ್ ಆಗಿಲ್ಲ. ಏಕೆಂದರೆ, ‘ಎಡ್ಜ್ ಡಿಟೆಕ್ಟ್ ಅಲ್ಗೊರಿದಮ್’ಗೆ ಅಂಚುಗಳು ಸಿಗಲಿಲ್ಲ.
10:52 ಆದರೆ ನೀವು ನೋಡುವಂತೆ ಅಲ್ಲಿ ಕೆಲವು ಅಂಚುಗಳಿವೆ. ಲೆವೆಲ್ಸ್ ಟೂಲ್ನ ಅಥವಾ ಕರ್ವ್ಸ್ ಟೂಲ್ ನ ಸಹಾಯದಿಂದ ನಾನು ಈ ಭಾಗಕ್ಕೆ ಸ್ವಲ್ಪ ಹೆಚ್ಚು ಒತ್ತು ಕೊಡಬೇಕಾಗಿತ್ತು.
11:06 ನಿಮ್ಮ ಕೆಲಸದ ಹರಿವಿನಲ್ಲಿ ಶಾರ್ಪನಿಂಗ್, ಯಾವಾಗಲೂ ಕೊನೆಯ ಹಂತವಾಗಿರಬೇಕು.
11:11 ಸರಿ, ನಾನು ಅಲ್ಲಿಗೆ ಆಮೇಲೆ ಬರುವೆನು.
11:16 ಈಗ, ನಾನು ಈ ಭಾಗದ ‘ಶಾರ್ಪ್‌ನೆಸ್’ಅನ್ನು ಕಡಿಮೆ ಮಾಡಬೇಕು.
11:21 ಇದು ಸುಲಭವಾಗಿದೆ. ನೀವು sharpen ಲೇಯರನ್ನು ಆಯ್ಕೆಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. Brush Tool ಅನ್ನು ಆರಿಸಿಕೊಳ್ಳಿ.
11:30 ನಯವಾದ ಅಂಚುಗಳನ್ನುಳ್ಳ ‘ಬ್ರಶ್’ಅನ್ನು ಆರಿಸಿಕೊಳ್ಳಿ. ಸ್ಕೇಲ್ ಸ್ಲೈಡರನ್ನು ಎಳೆದು, ‘ಬ್ರಶ್’ಅನ್ನು ಈ ಕೆಲಸಕ್ಕೆ ಬೇಕಾಗಿರುವಷ್ಟು ದೊಡ್ಡದು ಮಾಡಿಕೊಳ್ಳಿ. ಈಗ, Black ಬಣ್ಣವನ್ನು ಆರಿಸಿಕೊಳ್ಳಿ ಏಕೆಂದರೆ, ಕಪ್ಪುಬಣ್ಣವು ಅಡಗಿಸುತ್ತದೆ ಮತ್ತು ಬಿಳಿ ಬಹಿರಂಗಪಡಿಸುತ್ತದೆ.
11:53 ನಿಮ್ಮ ‘ಬ್ರಶ್’ನ ‘ಓಪ್ಯಾಸಿಟೀ ಸ್ಲೈಡರ್’ಅನ್ನು 20% (ಇಪ್ಪತ್ತು ಪ್ರತಿಶತ) ಕ್ಕೆ ಎಳೆಯಿರಿ.
12:03 ಇಲ್ಲಿ ನಾನು ‘ಬ್ರಶ್’ಅನ್ನು ಕದಲಿಸಿ ಪೇಂಟ್ ಮಾಡಲು ಆರಂಭಿಸಿದಾಗ, ಶಾರ್ಪನಿಂಗ್, ಕಡಿಮೆಯಾಗಿರುವುದನ್ನು ನೀವು ನೋಡಬಹುದು.
12:14 ‘ಲೇಯರ್ ಮಾಸ್ಕ್’ನ ಸಹಾಯದೊಂದಿಗೆ ಇಲ್ಲಿ ಏನಾಗುತ್ತದೆ ಎಂದು ನಾನು ಖಚಿತವಾಗಿ ತೋರಿಸಲು ಸಾಧ್ಯವಿದೆ.
12:21 ಲೇಯರ್ ಮಾಸ್ಕನ್ನು ‘ಆನ್’ ಮಾಡುತ್ತೇನೆ. ನಾನು ಬಿಳಿ ಭಾಗದ ಮೇಲೆ ಪೇಂಟ್ ಮಾಡಿದಾಗ ಅದು ಕಪ್ಪಾಗುತ್ತದೆ.
12:36 ಆದರೆ ಲೇಯರ್ ಮಾಸ್ಕನ್ನು ‘ಆಫ್’ ಮಾಡಿದಾಗ, ನಾನು ಇಮೇಜನ್ನು ಹಾಗೂ ನನ್ನ ಕಾರ್ಯಾಚರಣೆಯ ಪರಿಣಾಮವನ್ನು ನೋಡಬಹುದು.
12:47 ವಿವರಗಳನ್ನು ನಾನು ಆಮೇಲೆ ನೋಡುತ್ತೇನೆ.
12:52 ಈಗ ಇಲ್ಲಿ, ಈ ಭಾಗಕ್ಕೆ ನಾನು ಹೆಚ್ಚು ಶಾರ್ಪನಿಂಗ್ ಮಾಡಬೇಕು.
12:58 ನಾನು ‘X’ ಕೀಯನ್ನು ಬಳಸಿ ಬಣ್ಣಗಳನ್ನು ಸ್ವಿಚ್ ಮಾಡಿ ಪೇಂಟ್ ಮಾಡಲು ಆರಂಭಿಸುತ್ತೇನೆ.
13:06 ನೀವು ನೋಡುತ್ತಿರುವಂತೆ ಈ ಭಾಗವು ಹೆಚ್ಚು ಶಾರ್ಪ್ ಮತ್ತು ಗಾಢವಾಗುತ್ತದೆ.
13:13 ಇದು ಸಾಕಷ್ಟು ಉತ್ತಮವಾಗಿದೆ. ನನ್ನ ಕೆಲಸವನ್ನು ಪರಿಶೀಲಿಸಲು ಲೇಯರ್ ಮಾಸ್ಕನ್ನು ‘ಸ್ವಿಚ್ ಆನ್’ ಮಾಡುತ್ತೇನೆ. ನಾನು ಪೇಂಟ್ ಮಾಡಿರುವುದು ಬಿಳಿಯ ಭಾಗವನ್ನು ಮತ್ತು ಅದನ್ನು ಸ್ವಲ್ಪ ಹೆಚ್ಚಾಗಿಯೇ ಮಾಡಿದ್ದೇನೆಂದು ನೀವು ನೋಡಬಹುದು.
13:31 ಆದ್ದರಿಂದ, ನಾನು Layer ಗೆ ಮರಳಿ ಹೋಗಿ, X ಕೀಯನ್ನು ಒತ್ತುವುದರಿಂದ ಬಣ್ಣವನ್ನು ಬದಲಾಯಿಸುತ್ತೇನೆ ಮತ್ತು ನಾನು ಮಾಡಿದ ಕೆಲಸವನ್ನು ಪುನಃ ಮಾಡುತ್ತೇನೆ.
13:43 ಇಲ್ಲಿ, ಲೇಯರ್ಸ್ ಜೊತೆಗೆ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಯಾವುದೇ ಡೇಟಾ,ಅನ್ನು ಕಳೆದುಕೊಳ್ಳುವ ಅಪಾಯವಿಲ್ಲ.
13:51 ಫಿಲ್ಟರ್’ನಿಂದ ನಿರ್ಮಿಸಲಾದ ‘ಎಡ್ಜ್ ಡೇಟಾ’ ಒಂದನ್ನು ಮಾತ್ರ ನಾನು ಈಗ ನಾಶಮಾಡಬಹುದಾಗಿದೆ.
14:00 ಆದರೆ ಅದನ್ನು ಸುಲಭವಾಗಿ ಮತ್ತೆ ಮಾಡಬಹುದು.
14:03 ಇಲ್ಲಿ, ಶಾರ್ಪನಿಂಗ್ ಮಾಡಬೇಕಾಗಿರುವ ಹೂವಿನ ಅಂಚಿನಲ್ಲಿ ನಾನು ಝೂಮ್ ಮಾಡಿದ್ದೇನೆ.
14:12 ನೀವು ನೋಡುವಂತೆ, ಅಂಚು ಇಲ್ಲಿ ಶಾರ್ಪ್ ಮಾಡಲ್ಪಟ್ಟಿದೆ.
14:18 ‘ಶಾರ್ಪನಿಂಗ್’, ಈ ಎರಡು ಬಣ್ಣಗಳ ಮಧ್ಯದಲ್ಲಿ, ಗಾಢ ಮತ್ತು ಹೊಳಪಾಗಿರುವ ಅಂಚಿನ ಭಾಗಗಳ ನಡುವೆ, ಹೊಳಪುಳ್ಳ ಮತ್ತು ಗಾಢವಾದ ಗೆರೆಯನ್ನು, ಪಡೆಯಲು ಸಹಾಯಮಾಡುತ್ತದೆ.
14:30 ಗಾಢವಾದ ಭಾಗದ ಅಂಚು ಗಾಢಗೊಳಿಸಲ್ಪಟ್ಟಿದೆ ಹಾಗೂ ಹೊಳಪಾದ ಭಾಗವು ಬೆಳಗಿಸಲ್ಪಟ್ಟಿದೆ.
14:37 ಮಾಸ್ಕನ್ನು ಬಳಸುವದರಿಂದ, ನಿಮಗೆ ಬೇಕಾದ ಜಾಗಕ್ಕೆ ಮಾತ್ರ ನೀವು ಈ ಪರಿಣಾಮವನ್ನು ಇಡಬಹುದು.
14:50 ನಾನು ‘ಶಾರ್ಪನಿಂಗ್’ ಬಗ್ಗೆ ಹೆಚ್ಚು ವಿವರವಾದ ಸಂಪನ್ಮೂಲಗಳನ್ನು ನಿಮಗೆ ತೋರಿಸುತ್ತೇನೆ.
14:56 ಕ್ರಿಸ್ ಮಾಕ್ವಾ’ಸ್ ಬ್ರಾಡ್‌ಕಾಸ್ಟ್ ನ ಸೈಟ್, tips from the top floor.(dot)com (ಟಿಪ್ಸ್ ಫ್ರಾಮ್ ದ ಟಾಪ್ ಫ್ಲೋರ್ ಡಾಟ್ ಕಾಮ್)ಗೆ ಹೋಗಿ, ಅಲ್ಲಿ, ಎಡಗಡೆಯಲ್ಲಿ ಫೋಟೋಶಾಪ್ ಕಾರ್ನರ್’ಅನ್ನು ನೀವು ನೋಡುವಿರಿ.
15:12 ಅಲ್ಲಿ, ಅವರ ಹತ್ತಿರ ‘ಗಿಂಪ್’ಗಾಗಿ ಸಹ ಬಳಸಲು ಸಾಧ್ಯವಿರುವ ಫೋಟೋಶಾಪ್’ನ ಬಗ್ಗೆ ಪ್ರಸಾರವಿದೆ. ಪ್ರಸಾರದಲ್ಲಿ ಅವರು ಹೇಳುವದನ್ನು ಬರಹದ ವಿಷಯದಂತೆ ಪ್ರಯತ್ನಿಸಿದ್ದಾರೆ ಹಾಗೂ ಅದರ ಕೆಲವು ಚಿತ್ರಗಳನ್ನು ಮಾಡಿದ್ದಾರೆ. ನಾನು ಅಲ್ಲಿಂದ ಸ್ವಲ್ಪ ಮುಖ್ಯವಾಗಿರುವುದನ್ನು ತೆಗೆದುಕೊಳ್ಳುವೆನು. ಅದರಿಂದ ನಾನು ಇಲ್ಲಿ ‘ಸೋರ್ಸ್’ಗೆ ನೇರವಾಗಿ ತೋರಿಸಬಹುದು.
15:44 ಈ ಟ್ಯುಟೋರಿಯಲ್’ನಲ್ಲಿ ನಾನು ಚರ್ಚಿಸಿದ ‘ಶಾರ್ಪನಿಂಗ್ ಎಫೆಕ್ಟ್’ ನ ಬಗ್ಗೆ ಇಲ್ಲಿ ನೀವು ನೋಡಬಹುದು.
15:52 ಅವರು Unsharp mask ಎನ್ನುವುದನ್ನು ಹಾಗೂ ‘ಹ್ಯಾಲೋ’ಗಳನ್ನು ತಡೆಗಟ್ಟುವ ಪ್ರಕ್ರಿಯೆಯನ್ನು ಸಹ ವಿಸ್ತಾರವಾಗಿ ವಿವರಿಸಿದ್ದಾರೆ.
16:00 ಇಮೇಜನ್ನು ಶಾರ್ಪ್ ಮಾಡಲು ಅನೇಕ ವಿಧದ ತಂತ್ರಗಳನ್ನು ತೋರಿಸುತ್ತಾರೆ.
16:05 ಆದರೆ ನಾನು ನಿಮಗೆ ತೋರಿಸಿರುವುದು ಇಲ್ಲಿ, ಈ ಸೈಟ್ ನ ಮೇಲೆ ಇಲ್ಲ.
16:12 ಅಂದಹಾಗೆ, ನೀವು ಈ ‘ಸೈಟ್’ನ ಮೇಲಿರುವಾಗ ವರ್ಕ್ ಶಾಪ್ ಗಳನ್ನು ನೋಡಿ ಕಲಿಯಲು, ಇನ್ನೂ ಕೆಲವು ಸ್ಥಳಗಳಿಗಾಗಿ ಪರಿಶೀಲಿಸಿ.
16:23 ಇದು ಈ ವಾರಕ್ಕಾಗಿ ಇತ್ತು. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆದು ತಿಳಿಸಿ. info@meetthegimp.org
16:35 ಹೆಚ್ಚಿನ ಮಾಹಿತಿಯು ಕೆಳಗೆ ಕಾಣಿಸಿದ ಲಿಂಕ್ ನ ಮೇಲೆ ಲಭ್ಯವಿದೆ. http://meetthegimp.org
16:40 ನಿಮಗೆ ಏನು ಇಷ್ಟವಾಯಿತು, ನಾನು ಯಾವುದನ್ನು ಉತ್ತಮಗೊಳಿಸಬಹುದಿತ್ತು, ಇನ್ನುಮುಂದೆ ನೀವು ಏನನ್ನು ನೋಡಬಯಸುವಿರಿ ಎನ್ನುವುದನ್ನು ನನಗೆ ತಿಳಿಸಿರಿ. ನಾನು ನಿಮ್ಮಿಂದ ಕೇಳಲಿಚ್ಛಿಸುತ್ತೇನೆ.
16:51 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….

Contributors and Content Editors

NaveenBhat, Pratik kamble, Sandhya.np14