GIMP/C2/Sketching/Kannada
From Script | Spoken-Tutorial
Revision as of 11:55, 12 December 2014 by Sandhya.np14 (Talk | contribs)
Time | Narration |
00:23 | Meet The GIMP (ಮೀಟ್ ದ್ ಗಿಂಪ್) ಗೆ ನಿಮಗೆ ಸ್ವಾಗತ. ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ. |
00:41 | ಈದಿನ, ನಿಮಗೆ ತೋರಿಸಲು ನನ್ನ ಹತ್ತಿರ ಹೊಸದು ಏನೋ ಇದೆ. |
00:44 | ಇಲ್ಲಿ ಜೊಸೆಫ್ ಅವರ ಒಂದು ಹೊಸ ವೀಡಿಯೋ ಇದೆ ಮತ್ತು ‘ಸ್ಕೆಚ್ ಇಫೆಕ್ಟ್ಸ್’ ಬಳಸಿ ಇಮೇಜ್ಅನ್ನು ಹೇಗೆ ಮಾಡುವುದೆಂದು ಈದಿನ ಅವರು ನಿಮಗೆ ತೋರಿಸುವವರಿದ್ದಾರೆ. |
00:55 | ಹಲೋ !! ನನ್ನ ಹೆಸರು ಜೋಸೆಫ್. ಇವತ್ತು ನಾನು ನಿಮಗೆ ಗಿಂಪ್ 2.4 ನ್ನು ಬಳಸಿ, ‘ಸ್ಕೆಚ್ ಇಫೆಕ್ಟ್’ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ತೋರಿಸುವವನಿದ್ದೇನೆ. |
01:06 | ‘ಸ್ಕೆಚ್ ಇಫೆಕ್ಟ್’ ಅನ್ನು ನಿಮಗೆ ತೋರಿಸಲು ನಾನು ಲೇಯರ್ಸ್ ನೊಂದಿಗೆ ಕೆಲಸ ಮಾಡುವವನಿದ್ದೇನೆ. |
01:14 | ನಾನು ಮಾಡುವ ಮುಂದಿನ ಕೆಲಸ, ಈ ಲೇಯರ್ಗಳಿಗೆ ಪುನಃ ಹೆಸರಿಡುವುದು. ಇದರಿಂದ, ಯಾವ ಲೇಯರ್ನ ಮೇಲೆ ನಾನು ಕೆಲಸ ಮಾಡುತ್ತಿದ್ದೇನೆ ಎನ್ನುವುದರ ಕಲ್ಪನೆ ನನಗೆ ಸಿಗುತ್ತದೆ. |
01:23 | ನಾನು ಮೇಲಿನ ಲೇಯರನ್ನು ಆಯ್ಕೆಮಾಡಿ ಆಮೇಲೆ ಕ್ರಮವಾಗಿ Filters (ಫಿಲ್ಟರ್ಸ್), Blur (ಬ್ಲರ್), Gaussian blur (ಗಾಸಿಯನ್ ಬ್ಲರ್), ಇವುಗಳಿಗೆ ಹೋಗುತ್ತೇನೆ. |
01:36 | ಕೆಲವು ಗೆರೆಗಳನ್ನು ಕಾಣಲು ಸಾಧ್ಯವಿರುವ ಜಾಗವನ್ನು ಪಡೆಯಲು, ನಾನು ‘ಪ್ರಿವ್ಯೂ’ ಎನ್ನುವುದರ ಸಹಾಯದಿಂದ ಇಮೇಜ್ನಲ್ಲಿ ಸುತ್ತಾಡುತ್ತೇನೆ. |
01:45 | Blur Radius (ಬ್ಲರ್ ರೇಡಿಯಸ್) ಎನ್ನುವುದು ಇಲ್ಲಿ ಬಹಳ ಮುಖ್ಯವಾಗಿದೆ. |
01:48 | 30 ‘ಬ್ಲರ್ ರೇಡಿಯಸ್‘ ಮತ್ತು 5 ‘ಬ್ಲರ್ ರೇಡಿಯಸ್‘ ಗಳನ್ನು ಬಳಸುವುದರಿಂದ, ನೀವು ಪಡೆಯುವ ವ್ಯತ್ಯಾಸಗಳನ್ನು ನಿಮಗೆ ತೋರಿಸಲು ನಾನು ಇಲ್ಲಿ ಎರಡು ‘ಪ್ರಿವ್ಯೂ’ ಗಳನ್ನು ಕ್ರಿಯೇಟ್ ಮಾಡಿದ್ದೇನೆ. |
01:59 | ಈ ಇಮೇಜ್ ಗಾಗಿ ನಾನು ‘ಬ್ಲರ್ ರೇಡಿಯಸ್‘ ಅನ್ನು 15 ಎಂದು ಇಟ್ಟು ‘OK’ ಯ ಮೇಲೆ ಕ್ಲಿಕ್ ಮಾಡುವೆನು. |
02:08 | ಈಗ ಮೇಲಿನ ಲೇಯರ್ನ ಮೇಲೆ ನಮಗೆ ಒಳ್ಳೆಯ ‘ಬ್ಲರ್‘, ಸಿಕ್ಕಿದೆ. |
02:12 | ನಾವು ಮಾಡಬೇಕಾದ ಮುಂದಿನ ಕೆಲಸ, ‘ಕಲರ್ಸ್’ ಅನ್ನು ಇನ್ವರ್ಟ್ ಮಾಡುವುದು ಆಗಿದೆ. |
02:18 | ಆದ್ದರಿಂದ Colors, ಆನಂತರ Invert, ಎನ್ನುವಲ್ಲಿಗೆ ಹೋಗಿರಿ. |
02:21 | ಈಗ ನಮ್ಮ ಟೂಲ್ ಬಾಕ್ಸ್ ಗೆ ಮರಳಿ ಹೋಗಿ, ಮೇಲಿನ ಲೇಯರನ್ನು ಆಯ್ಕೆಮಾಡಿ, ಅದರ ‘ಒಪ್ಯಾಸಿಟೀ’ಯನ್ನು 50% ಕ್ಕೆ ಸೆಟ್ ಮಾಡೋಣ. |
02:28 | ನಮಗೆ ಸೊಗಸಾದ ಬೂದುಬಣ್ಣದ ಇಮೇಜ್, ಸಿಗುತ್ತದೆ. |
02:31 | ಈಗ ಮೇಲಿನ ಲೇಯರ್ನ ಮೇಲೆ ರೈಟ್ ಕ್ಲಿಕ್ ಮಾಡಿ, ‘Merge Visible Layer’ ಅನ್ನು ಆಯ್ಕೆಮಾಡಿ ಹಾಗೂ Merge ಎನ್ನುವುದರ ಮೇಲೆ ಕ್ಲಿಕ್ ಮಾಡಿ ನಾವು, ಈ ಎರಡು ಲೇಯರ್ಗಳನ್ನು ಒಟ್ಟಿಗೆ ಮರ್ಜ್ ಮಾಡುವೆವು. |
02:40 | ಇದಾದ ಮೇಲೆ, ನನಗೆ ಇಮೇಜ್ನಲ್ಲಿಯ ಕಾಂಟ್ರಾಸ್ಟನ್ನು ಹೆಚ್ಚಿಸಬೇಕಾಗಿದೆ. ಇದನ್ನು ಮಾಡಲು ನಾನು Levels Tool (ಲೆವೆಲ್ಸ್ ಟೂಲ್) ಎನ್ನುವುದನ್ನು ಆಯ್ಕೆಮಾಡುತ್ತೇನೆ. |
02:48 | ನೀವು ನೋಡುವಂತೆ ಈ ಇಮೇಜ್ನಲ್ಲಿಯ ಅತಿ ಹೆಚ್ಚು ಮಾಹಿತಿಯು ಮಧ್ಯಭಾಗದಲ್ಲಿದೆ. |
02:54 | ನಾನು ಸ್ಲೈಡರ್ಗಳನ್ನು ಆ ವ್ಯಾಲ್ಯೂಗೆ ಜರುಗಿಸಬೇಕು. |
03:01 | ಈಗ, ನಾನು ಮಧ್ಯದ ಸ್ಲೈಡರನ್ನು ಎಡಕ್ಕೆ ಜರುಗಿಸುತ್ತೇನೆ. ಇದರಿಂದ ನನಗೆ ಸ್ವಲ್ಪ ಹೆಚ್ಚು ಬಿಳಿಬಣ್ಣದ ಇಮೇಜ್, ಸಿಗುತ್ತದೆ. |
03:13 | OK ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ. |
03:16 | ಮತ್ತು ಈಗ ಗೆರೆಗಳು ಹೊರಗೆ ಬರಲು ಆರಂಭಿಸಿವೆ, ಆದರೆ ಇಮೇಜ್ನಲ್ಲಿ ಇನ್ನೂ ಕೆಲವು ಬಣ್ಣಗಳಿವೆ ಎಂದು ನೀವು ನೋಡಬಹುದು. |
03:23 | ನಾನು ಕ್ರಮವಾಗಿ Colour, Desaturate ಎನ್ನುವಲ್ಲಿಗೆ ಹೋಗಿ Luminosity ಎನ್ನುವ ಆಯ್ಕೆಯನ್ನು ಆಯ್ದುಕೊಳ್ಳುತ್ತೇನೆ. ಈಗ ನಮಗೆ ಕಪ್ಪು ಮತ್ತು ಬಿಳಿ ಬಣ್ಣದ ಇಮೇಜ್, ಸಿಕ್ಕಿದೆ. |
03:32 | ಈಗ ಮತ್ತೊಮ್ಮೆ ‘Levels Tool’ ಅನ್ನು ಆಯ್ದುಕೊಳ್ಳುತ್ತೇನೆ ಮತ್ತು ಇಮೇಜ್ನಲ್ಲಿ ಹೆಚ್ಚು ಕಾಂಟ್ರಾಸ್ಟನ್ನು ಪಡೆಯಲು ಸ್ಲೈಡರನ್ನು ಹೊಂದಿಸುತ್ತೇನೆ. |
03:47 | ಇಮೇಜ್ನಲ್ಲಿ ನಿಮಗೆ ಒಳ್ಳೆಯ ಕಾಂಟ್ರಾಸ್ಟ, ಸಿಗುವಂತೆ ಸ್ಲೈಡರನ್ನು ಹೊಂದಿಸಿರಿ. |
03:56 | ಇದು ಚೆನ್ನಾಗಿದೆ ಎಂದು ನನ್ನ ಎಣಿಕೆ. |
04:00 | ಹೀಗೆ, ಈಗ ನಮಗೆ ಒಳ್ಳೆಯ ‘ಸ್ಕೆಚ್ ಇಫೆಕ್ಟ್’ ಇರುವ ಇಮೇಜ್ ಸಿಕ್ಕಿದೆ. |
04:07 | ನಾವು ಈ ಇಮೇಜ್ ಗೆ ಒಂದು ಅಂಚನ್ನು ಮಾಡಬೇಕು. |
04:11 | ನಾನು ಹೊಸ ಲೇಯರನ್ನು ಕ್ರಿಯೇಟ್ ಮಾಡುತ್ತೇನೆ, ಅದಕ್ಕೆ white ಎಂದು ಹೆಸರಿಡುತ್ತೇನೆ. Layer Fill Type ನಲ್ಲಿ White ಅನ್ನು ಆಯ್ಕೆಮಾಡುತ್ತೇನೆ. ತಾತ್ಕಾಲಿಕವಾಗಿ ನಾನು ಒಪ್ಯಾಸಿಟೀಯ ವ್ಯಾಲ್ಯೂವನ್ನು ಕಡಿಮೆ ಮಾಡುತ್ತೇನೆ. ಇದರಿಂದ ನಾವು ಇಮೇಜ್ನ ಮೂಲಕ ನೋಡಬಹುದು. |
04:27 | ಈಗ ನಾನು ಟೂಲ್ ಬಾಕ್ಸ್ ನಿಂದ Rectangle Selection Tools ಎನ್ನುವುದನ್ನು ಆಯ್ಕೆಮಾಡುತ್ತೇನೆ ಮತ್ತು ಇಮೇಜ್ನಲ್ಲಿ ಒಂದು ಕಚ್ಚಾ ಆಯತವನ್ನು ಡ್ರಾ ಮಾಡುತ್ತೇನೆ. |
04:38 | ಈ ಆಯತವನ್ನು ಸರಿಹೊಂದಿಸುತ್ತೇನೆ. |
04:42 | ನಾವು ಈ ಆಯತವನ್ನು ಹೊಂದಿಸಿದ ಮೇಲೆ ಕೆಳಗಿನ ಎಡ ಮೂಲೆಗೆ ಹೋಗಿ, Toggle Quick Mask ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇವೆ. ನಮಗೆ ಎಡಿಟ್ ಮಾಡಲು ಸಾಧ್ಯವಿರುವ, ಕಪ್ಪು ಹಾಗೂ ಬಿಳಿ ಬಣ್ಣದ ಅಂಚು ಸಿಗುತ್ತದೆ. |
04:55 | ಕೆಲವು ಆಸಕ್ತಿದಾಯಕ ಪರಿಣಾಮಗಳನ್ನು ಕ್ರಿಯೇಟ್ ಮಾಡಲು ನಾವು ‘ಫಿಲ್ಟರ್’ಗಳನ್ನು ಬಳಸಬಹುದು. ಆದ್ದರಿಂದ ನಾನು ಕ್ರಮವಾಗಿ Filters (ಫಿಲ್ಟರ್ಸ್), Distorts (ಡಿಸ್ಟೊರ್ಟ್ಸ್), Waves (ವೇವ್ಸ್), ಇವುಗಳಿಗೆ ಹೋಗುತ್ತೇನೆ. |
05:06 | ಈ ಬಾಕ್ಸ್ ನಲ್ಲಿ, ಆಕರ್ಷಕ ಬಾರ್ಡರ್ಗಳನ್ನು ತಯಾರಿಸಲು ಅನೇಕ ಆಯ್ಕೆಗಳಿರುವುದನ್ನು ನೀವು ನೋಡಬಹುದು. |
05:18 | ನಾನು ನನಗೆ ಪುಟ್ಟ ‘ವೇವ್’ ಸಿಗುವಂತೆ ಸ್ಲೈಡರ್ಗಳನ್ನು ಹೊಂದಿಸುತ್ತೇನೆ. |
05:30 | ಅದು ಚೆನ್ನಾಗಿ ಕಾಣುತ್ತಿದೆ. |
05:32 | ಈಗ ನನಗೆ ಸ್ವಲ್ಪ ‘ಬ್ಲರ್’ ಅನ್ನು ಸೇರಿಸಬೇಕಾಗಿದೆ. |
05:34 | ಹೀಗಾಗಿ, Filters ಎನ್ನುವಲ್ಲಿಗೆ ಹೋಗಬೇಕು. ಆದರೆ ನಾನು ಬೇರೆ ಯಾವುದೋ ‘ಇಫೆಕ್ಟ್’ ಅನ್ನು ಬಳಸಬೇಕೆಂದಿದ್ದೇನೆ. |
05:41 | ನಾನು Noise ಎನ್ನುವಲ್ಲಿ ಗೆ ಹೋಗುತ್ತೇನೆ ಮತ್ತು Spread ಎನ್ನುವುದನ್ನು ಆರಿಸಿಕೊಳ್ಳುತ್ತೇನೆ. Horizontal ಎನ್ನುವಲ್ಲಿ 22 ಕ್ಕೆ ಸೆಟ್ ಮಾಡುತ್ತೇನೆ. |
06:02 | ಈಗ Toggle Quick Mask ಎನ್ನುವ ಬಟನ್ ಗೆ ಹೋಗಿ ಅದರ ಮೇಲೆ ಕ್ಲಿಕ್ ಮಾಡುತ್ತೇನೆ. |
06:09 | ಇಲ್ಲಿ ಬದಿಗಳಲ್ಲಿ ಜಾಗವಿರುವದನ್ನು ನೀವು ನೋಡಬಹುದು. ನಮಗೆ ಒಂದು ಆಯ್ಕೆ ಸಿಕ್ಕಿದೆ ಎಂದು ಇದರ ಅರ್ಥ. |
06:17 | ಈಗ ನಾನು ಆ ಲೇಯರ್ ಗೆ, ಲೇಯರ್ ಮಾಸ್ಕನ್ನು ಸೇರಿಸುವವನಿದ್ದೇನೆ. ಅದನ್ನು ‘White ಫಾರ್ full opacity’ ಎನ್ನುವುದರಿಂದ ತುಂಬುತ್ತೇನೆ. ಅಲ್ಲಿ ಇಮೇಜ್ನಲ್ಲಿ ಒಂದು ಆಯ್ಕೆಯಿದೆ. ನಾವು ಕಪ್ಪು ಬಣ್ಣವನ್ನು ಆ ಆಯ್ಕೆಯಲ್ಲಿ ಎಳೆದು ತಂದು ಅಲ್ಲಿರುವ ನಮ್ಮ ಏರಿಯಾವನ್ನು ಪೂರ್ತಿಯಾಗಿ ಪಾರದರ್ಶಕವನ್ನಾಗಿ ಮಾಡಬಹುದು. |
06:39 | ನಾನು ಕ್ರಮವಾಗಿ Select, None, ಎನ್ನುವಲ್ಲಿಗೆ ಹೋಗಿ ನಂತರ ನಾವು ತಾತ್ಕಾಲಿಕವಾಗಿ ‘ಟ್ರಾನ್ಸ್ಪರೆಂಟ್’ ಎಂದು ಸೆಟ್ ಮಾಡಿದ ಲೇಯರ್ ಗೆ ಮರಳಿ ಹೋಗುತ್ತೇನೆ ಮತ್ತು ಒಪ್ಯಾಸಿಟೀಯನ್ನು 100% ಕ್ಕೆ ಹೆಚ್ಚಿಸುವೆವು. |
06:53 | ಒಂದುವೇಳೆ, ಆಮೇಲೆ ನಿಮಗೆ ನಿಮ್ಮ ಬಾರ್ಡರ್ ನ ಬಣ್ಣವನ್ನು ಬದಲಾಯಿಸಬೇಕಾದರೆ ನೀವು ಮಾಡಬೇಕಾದದ್ದು ಇಷ್ಟೇ, ಕಲರ್ ಡೈಲಾಗ್ ಗೆ ಹೋಗಿ, ಒಂದು ಬಣ್ಣವನ್ನು ಆಯ್ಕೆಮಾಡಿ ಅದನ್ನು ಲೇಯರ್ನಲ್ಲಿ ಎಳೆದು ತಂದರೆ ನಿಮಗೆ ಬೇರೆ ಬಣ್ಣದ ಲೇಯರ್ ಸಿಗುತ್ತದೆ. |
07:10 | ಅದು ಉತ್ತಮವಾದ ‘ಸ್ಕೆಚ್ ಇಫೆಕ್ಟ್’ ಎನ್ನುವದಾಗಿತ್ತು. ಜೋಸೆಫ್, ನಿಮಗೆ ಈ ವೀಡಿಯೋಗಾಗಿ ಧನ್ಯವಾದಗಳು. |
07:17 | ಈಗ ಅಲ್ಲಿ ಏನಾಗಿದೆ ಎಂದು ನೋಡೋಣ. |
07:22 | ಇಲ್ಲಿ ನಾನು ಒಂದು ಇಮೇಜನ್ನು ತಯಾರಿಸಿದ್ದೇನೆ. ಅಲ್ಲದೆ, ಕಪ್ಪಿನಿಂದ ಬಿಳಿಯವರೆಗಿನ ಬೂದುಬಣ್ಣದ ‘ಗ್ರೇಡಿಯಂಟ್’ಅನ್ನು, ಮತ್ತು ಬಿಳಿ ಹಾಗೂ ಕಪ್ಪುಬಣ್ಣಗಳಿಂದ ತುಂಬಿದ ಒಂದು ಜಾಗವನ್ನು ಪಡೆದಿದ್ದೇನೆ. |
07:37 | ನಾನು ಈಗಾಗಲೇ ಲೇಯರನ್ನು ಎರಡು ಸಲ ಮಾಡಿದ್ದೇನೆ. ಇದು ಮೊದಲನೆಯ ಹಂತವಾಗಿದೆ. |
07:45 | ಈಗ ನನಗೆ ಈ ಇಮೇಜನ್ನು ಇನ್ವರ್ಟ್ ಮಾಡಬೇಕಾಗಿದೆ. ಕ್ರಮವಾಗಿ Colors, Invert ಇವುಗಳಿಗೆ ಹೋಗಿರಿ. |
07:53 | ಈ ಇಮೇಜ್ ಈಗ ತದ್ವಿರುದ್ಧವಾಗಿದೆ ಎಂದು ನೀವು ನೋಡುತ್ತೀರಿ. ನಾನು ಒಪ್ಯಾಸಿಟೀಯನ್ನು 50% ಕ್ಕೆ ಇಳಿಸುತ್ತೇನೆ. |
08:06 | ಪೂರ್ತಿ ಇಮೇಜ್, ಬೂದುಬಣ್ಣದ್ದು ಆಗಿದೆ ಏಕೆಂದರೆ ಅರ್ಧ ಕಪ್ಪುಬಣ್ಣಕ್ಕೆ ಅರ್ಧ ಬಿಳಿಬಣ್ಣವು ಸೇರಿದಾಗ ಬೂದುಬಣ್ಣವನ್ನು ಕೊಡುತ್ತದೆ. |
08:19 | ಮತ್ತು ಇಲ್ಲಿ ಅರ್ಧ ಬಿಳಿಗೆ ಅರ್ಧ ಕಪ್ಪುಬಣ್ಣವು ಸೇರಿದಾಗ ಬೂದುಬಣ್ಣವನ್ನು ಕೊಡುತ್ತದೆ. |
08:28 | ಮುಂದಿನ ಹಂತ, ಈ ಲೇಯರನ್ನು ‘ಬ್ಲರ್’ ಮಾಡುವುದು ಆಗಿದೆ. |
08:33 | ಆದ್ದರಿಂದ, ಕ್ರಮವಾಗಿ Filters, Blur, Gaussian Blur ಇವುಗಳಿಗೆ ಹೋಗಿರಿ. |
08:40 | ನಾನು ಈ ಸರಣಿಯನ್ನು ಇಲ್ಲಿ ‘ಅನ್-ಬ್ಲಾಕ್’ ಮಾಡಿದ್ದೇನೆ. ಇದರಿಂದ ನಾನು ‘Vertical ಬ್ಲರ್’ ಅನ್ನು ಮಾತ್ರ ಬದಲಾಯಿಸಬಹುದು, ‘Horizontal ಬ್ಲರ್’ ಅನ್ನು ಅಲ್ಲ, ಇಲ್ಲದಿದ್ದರೆ ಈ ಇಮೇಜ್ ತುಂಬಾ ಗೊಂದಲಮಯವಾಗುವುದು. |
08:55 | ಇದು ನಾನು ಆಶಿಸಿದ ಪರಿಣಾಮವಾಗಿದೆ. OK ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ. |
09:01 | ಈಗ ನೀವು ಇಲ್ಲಿ ಗಾಢ ಬೂದುಬಣ್ಣ ಹಾಗೂ ತಿಳಿ ಬೂದುಬಣ್ಣದ ಗೆರೆಗಳನ್ನು ನೋಡುತ್ತೀರಿ. |
09:06 | ಇಲ್ಲಿಯ ಈ ಗೆರೆಗಳು, ಫೋರ್‌ಗ್ರೌಂಡ್ಅನ್ನು ಬ್ಲರ್ ಮಾಡಿದ್ದರ ಪರಿಣಾಮವಾಗಿವೆ. |
09:18 | ನಾನು ಇಲ್ಲಿ ಝೂಮ್ ಇನ್ ಮಾಡಿದಾಗ ಹಾಗೂ ಒಪ್ಯಾಸಿಟೀಯನ್ನು ವರ್ಧಿಸಿದಾಗ ನೀವು ಇಲ್ಲಿ ಕಪ್ಪು, ಬಿಳಿ ಹಾಗೂ ಮಧ್ಯದಲ್ಲಿ ಗ್ರೇಡಿಯಂಟ್ ಇರುವುದನ್ನು ನೋಡುತ್ತೀರಿ. |
09:32 | ಬೇರೆ ಲೇಯರ್ನ ಮೇಲೆ ನಾವು ಬಿಳಿ ಮತ್ತು ಕಪ್ಪು ಬಣ್ಣಗಳನ್ನು ಪಡೆದಿದ್ದೇವೆ. ಈಗ ಅದು ತದ್ವಿರುದ್ಧವಾಗಿಲ್ಲ. |
09:44 | ಆದ್ದರಿಂದ ಒಪ್ಯಾಸಿಟೀಯನ್ನು ಕಡಿಮೆಮಾಡಿರಿ. ಈಗ ಒಂದು ಬದಿಯಲ್ಲಿ ಅದು ಗಾಢ ಬೂದುಬಣ್ಣವಿದ್ದು ಮತ್ತೊಂದು ಬದಿಯಲ್ಲಿ ಮಧ್ಯಮ ಬೂದುಬಣ್ಣವಿರುವುದನ್ನು ನೀವು ನೋಡಬಹುದು. |
10:00 | ಇಲ್ಲಿ ಇದು ಮಧ್ಯಮ ಬೂದುಬಣ್ಣವಿದೆ, ಇಲ್ಲಿಯೂ ಸಹ. |
10:05 | ಆದರೆ ಮೊದಲು ನಾವು ಕಣ್ಣಿನ ಯುಕ್ತಿಯನ್ನು ನೋಡೋಣ. |
10:10 | ಇಲ್ಲಿ, ಖಂಡಿತವಾಗಿ ಇಲ್ಲಿಯದಕ್ಕಿಂತ ಹೆಚ್ಚು ಗಾಢವಾಗಿದೆ.ಆದ್ದರಿಂದ ನಾನು Colour Picker ಎನ್ನುವುದನ್ನು ಆಯ್ಕೆಮಾಡುತ್ತೇನೆ. ಇಲ್ಲಿ ಅದು Red, Green ಮತ್ತು Blue ಗಳಿಗಾಗಿ 128, 128, 128 ಆಗಿದೆ ಮತ್ತು 50% ಬೂದುಬಣ್ಣವಿದ್ದು ಇದು ಮಧ್ಯಮ ಬೂದುಬಣ್ಣವಾಗಿದೆ ಮತ್ತು ಇಲ್ಲಿ, ಅದು 127,127,127 ಆಗಿದ್ದು ಇಲ್ಲಿಯೂ ಸಹ 50% ಬೂದುಬಣ್ಣ ಆಗಿದೆ ಎಂದು ನಾವು ನೋಡಬಹುದು. |
10:43 | ಇಲ್ಲಿ, ಮೂಲತಃ ಅದೇ ಬಣ್ಣವಾಗಿದ್ದು ಕಡಿಮೆ ಛಾಯೆಗಳಿವೆ ಮತ್ತು ಈ ಬದಿಯಲ್ಲಿ 127 ಹಾಗೂ ಆ ಬದಿಯಲ್ಲಿ 128 ಇರುತ್ತವೆ. |
10:57 | 255 ನ್ನು 2 ರಿಂದ ಭಾಗಿಸಿದಾಗ, ನಾವು ಫ್ಲೋಟಿಂಗ್ ಪಾಯಂಟ್ ಅನ್ನು ಪಡೆದಿರದಿದ್ದರೆ, ನಮಗೆ 127 ಅಥವಾ 128 ಸಿಗುತ್ತದೆ. |
11:15 | ಈಗ ನಾನು ಈ ಲೇಯರ್ಗಳನ್ನು ಮರ್ಜ್ ಮಾಡಬೇಕು. |
11:19 | ಆದ್ದರಿಂದ ಕ್ರಮವಾಗಿ Layer, Merge Down (ಮರ್ಜ್ ಡೌನ್) ಎನ್ನುವಲ್ಲಿಗೆ ಹೋಗಿ, |
11:29 | ಜೋಸೆಫ್ ಅವರ ಇಮೇಜ್ನಲ್ಲಿದ್ದ ‘ಕಲರ್ ಲೆವೆಲ್’ಅನ್ನು ಇಲ್ಲಿ ಪಡೆಯುತ್ತೇನೆ. ಈಗ ನಾನು ಈ ಸ್ಲೈಡರ್ಗಳನ್ನು ಸುಮ್ಮನೆ ಎಳೆದು ಕಪ್ಪು ಬಣ್ಣವನ್ನು ಗಾಢವಾಗಿಸಿ, ಬೂದುಬಣ್ಣವನ್ನು ಬಿಳಿಯಾಗಿಸಬಹುದು. |
11:56 | ಬದಲಾಗುವ (ವೇರಿಯೇಬಲ್) ದಪ್ಪಳತೆಯನ್ನು ಹೊಂದಿದ ಒಂದು ಗೆರೆಯನ್ನು ನೀವು ನೋಡಬಹುದು. ನಾನು ಈ ಸ್ಲೈಡರ್ಗಳನ್ನು ಎಡಕ್ಕೆ ಎಳೆದರೆ ಗೆರೆಯು ತೆಳುವಾಗುತ್ತ ಹೋಗುತ್ತದೆ. |
12:12 | ನಾವು ಇಡೀ ಇಮೇಜನ್ನು ನೋಡೋಣ, Shift + Ctrl + E ಒತ್ತಿರಿ, ಮೊದಲು ಇದ್ದ ಗ್ರೇಡಿಯಂಟ್ ಮತ್ತು ‘ಕಲರ್ ಫಿಲ್’ ಗಳ ಬದಲಿಗೆ ಇಲ್ಲಿ ನಾನು ಗೆರೆಗಳನ್ನು ಪಡೆದಿರುವುದನ್ನು ನೀವು ನೋಡುತ್ತೀರಿ. |
12:25 | ನಿಮಗೆ ಇದು ತಿಳಿಯುತ್ತದೆ ಎಂದು ನಾನು ಆಶಿಸುತ್ತೇನೆ. ಇದನ್ನು ಮಾಡಲು ನೀವು ಪ್ರಯತ್ನಿಸಬಹುದು. |
12:31 | ಈ ‘ಇಫೆಕ್ಟ್’ನಿಂದ ಕೆಲವು ಇಮೇಜ್ಗಳು ತುಂಬಾ ಚೆನ್ನಾಗಿ ಕಾಣುತ್ತವೆ. |
12:37 | ಮತ್ತು ಜೋಸೆಫ್ ಅವರ ಇಮೇಜ್ ತುಂಬ ಮಜವಾಗಿತ್ತು. ನಾನು ಅದನ್ನು ಇಷ್ಟಪಡುತ್ತೇನೆ. |
12:44 | ಈ ವಾರ Meet The GIMP ನಲ್ಲಿ ನಾನು ಹೊಸ ಭಾಗವನ್ನು ಆರಂಭಿಸುತ್ತೇನೆ. |
12:48 | ನೀವು ‘ಹೋಮ್ ಪೇಜ್’ ಗೆ ಹೋದರೆ, ಅಲ್ಲಿ ಕೆಳಗೆ, ಬಲಗಡೆಗೆ, 23hq.com ನಲ್ಲಿಯ photo group ಎನ್ನುವಲ್ಲಿಗೆ ಹೋಗುವ ರೀತಿ ನಿಮಗೆ ಸಿಗುತ್ತದೆ. |
13:00 | ಅಲ್ಲಿ ನಿಮಗೆ ತೋರಿಸಲು ಬಹಳಷ್ಟು ಇಮೇಜ್ಗಳಿವೆ. ವಾರದಿಂದ ವಾರಕ್ಕೆ ಅವುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಬಗ್ಗೆ ಏನಾದರೂ ಹೇಳುತ್ತೇನೆ.ಇವತ್ತು ಇಲ್ಲಿ, ಇದನ್ನು ತೆಗೆದುಕೊಳ್ಳುತ್ತೇನೆ. |
13:13 | ಇದು ಫೈರ್ ವರ್ಕ್ಸ್ನ ಮೇಲೆ Mainzelmann (ಮ್ಯಾಂಝಿಲಮ್ಯಾನ್) ಅವರಿಂದ ತಯಾರಿಸಲ್ಪಟ್ಟಿದೆ. ಬಿಳಿ ಬಣ್ಣದ ಸಮತೋಲನ ಹಾಗೂ ಈ ಇಮೇಜ್ನಲ್ಲಿಯ ಬಣ್ಣಗಳ ಬಗ್ಗೆ ಅವರು ಕಾಮೆಂಟ್ ಗಾಗಿ ಕೇಳುತ್ತಾರೆ. ಇದು ನೋಡಲು ಯೋಗ್ಯವಾಗಿದೆ ಎಂದು ನನ್ನ ಭಾವನೆ. |
13:28 | ನಾನು ಟೀಕೆಮಾಡಿದ್ದೇನೆ, ಆದರೆ ಅದು ಜರ್ಮನ್ ಭಾಷೆಯಲ್ಲಿ ಮಾತ್ರ ಇತ್ತು. |
13:32 | ಸರಿ, ನಾವು ಒಮ್ಮೆ ನೋಡೋಣ. |
13:35 | ಇದು, ಅವರ ಇಮೇಜ್ ಆಗಿದ್ದು ವೆಬ್ ಸೈಟ್ಟ್ನಿಂದ ಸುಮ್ಮನೆ ಎಳೆದುತಂದು ಟೂಲ್ ಬಾಕ್ಸ್ನ ಮೇಲೆ ಇಡಲಾಗಿದೆ. ಆನಂತರ ಗಿಂಪ್,ವೆಬ್ ನಿಂದ ಇಮೇಜನ್ನು ಓಪನ್ ಮಾಡುತ್ತದೆ. |
13:48 | ಆಕಾಶವು ಸ್ವಲ್ಪ ಹೆಚ್ಚು ಗಾಢವಾಗಬೇಕೆಂದು ನಾನು ಎಣಿಸುತ್ತೇನೆ. |
13:53 | ಇಲ್ಲಿ ಕೆಳಗಿರುವ ಕಟ್ಟಡ ಉತ್ತಮವಾಗಿದೆ. ಇದು ಇಮೇಜ್ನಲ್ಲಿ ಇರಬೇಕು. ಆದರೆ ಇಲ್ಲಿಯ ಮುಗಿಲು ಸುಮಾರು ಕಪ್ಪಾಗಿರಬೇಕು, ಇಂತಹ ನಿಜವಾದ ಕಪ್ಪು ಅಲ್ಲ. ಮತ್ತು ಇಲ್ಲಿಯ ಕೆಲವು ಹೊಗೆಯ ಮೋಡಗಳನ್ನು ಉಳಿಸಬಹುದು. |
14:13 | ಆದ್ದರಿಂದ ನಾನು Curves Tool ಎನ್ನುವುದನ್ನು ಆಯ್ಕೆಮಾಡುತ್ತೇನೆ, ನಾವು ಏನು ಮಾಡಬಹುದೆಂದು ನೋಡೋಣ. |
14:24 | ಈ ಇಮೇಜ್ನಲ್ಲಿ, ಇಲ್ಲಿ, ಬಹಳಷ್ಟು ಬಿಳಿ ಬಣ್ಣವಿರುವುದನ್ನು ನೀವು ನೋಡಬಹುದು. |
14:31 | ಈ ಇಮೇಜ್ನಲ್ಲಿ ‘ಎಕ್ಸ್ಪೋಜರ್’ ತುಂಬಾ ಚೆನ್ನಾಗಿದೆ ಮತ್ತು ವ್ಯಾಲ್ಯೂಗಳು ಹಿಸ್ಟೋಗ್ರಾಮ್ ನಲ್ಲಿ ಸರಿಯಾಗಿ ಹಂಚಲ್ಪಟ್ಟಿವೆ. ಇಲ್ಲಿ ನಾವು ಕಪ್ಪು ಬಣ್ಣವನ್ನು ಹೊಂದಿದ್ದೇವೆ,ಅದು ನಿಜವಾಗಿ ಕಪ್ಪು ಅಲ್ಲವೆಂದು ನೀವು ನೋಡುತ್ತೀರಿ. |
14:48 | ನಾವು ಇದನ್ನು ಇನ್ನೂ ಸ್ವಲ್ಪ ಗಾಢವಾಗಿಸಬಹುದು. |
14:56 | ಆದ್ದರಿಂದ ಈ ಕಪ್ಪು ಬಿಂದುವನ್ನು ಮೇಲೆ, ಇಲ್ಲಿಯವರೆಗೆ ನಾನು ಎಳೆಯಬಹುದು. |
15:01 | ಈ ಕಪ್ಪು ಬಿಂದು, ಕಪ್ಪು ಬಣ್ಣದ ವ್ಯಾಖ್ಯಾನವಾಗಿದೆ ಮತ್ತು ಇದು ಕಪ್ಪು ಎಂದು ಈಗ ನಾನು ಹೇಳಬಹುದು. |
15:12 | ಹೀಗೆ, ಪಟಾಕಿಗಳು ಸ್ವಲ್ಪ ಹೆಚ್ಚು ಎದ್ದುಕಾಣುತ್ತಿವೆ ಎಂದು ನೀವು ನೋಡಬಹುದು ಮತ್ತು ನನಗೆ ಹಿಸ್ಟೋಗ್ರಾಮ್ ನ ಈ ಭಾಗವನ್ನು ಸ್ವಲ್ಪ ಗಾಢಗೊಳಿಸಬೇಕಾಗಿದೆ. |
15:26 | ಆದ್ದರಿಂದ ನಾನು ಇಲ್ಲಿ ಒಂದು ಪಾಯಿಂಟನ್ನು ಇಟ್ಟು, ಕೇವಲ ‘ಕರ್ವ್’ಅನ್ನು ಕೆಳಗೆ ಎಳೆಯುತ್ತೇನೆ. |
15:33 | ಕಟ್ಟಡಕ್ಕಾಗಿ ನಾನು ಇಲ್ಲಿ ಸ್ವಲ್ಪ ಸ್ಥಳವನ್ನು ಬಿಡಬೇಕು. |
15:41 | ಇದು ಕಟ್ಟಡದ ಮುಖ್ಯ ಭಾಗವಾಗಿದೆ ಎಂದು ನನ್ನ ಭಾವನೆ. |
15:52 | ಹೀಗಾಗಿ ನಾನು ಈ ‘ಕರ್ವ್’ಅನ್ನು ಕೆಳಗೆ ಇಲ್ಲಿ ಎಳೆಯುತ್ತೇನೆ ಮತ್ತು ಕಟ್ಟಡವು ಇನ್ನೂ ಅಲ್ಲಿಯೇ ಇರುವದನ್ನು ನಾನು ನೋಡಬಹುದು. |
16:07 | ಈಗ ಈ ಭಾಗವು ಗಾಢವಾಗಿದೆ ಮತ್ತು ಈ ಬಿಳಿ ಬಣ್ಣವು ಬಹುಶಃ ಸ್ವಲ್ಪ ಹೆಚ್ಚು ಬಿಳಿಯಾಗಿದೆ. ಆದ್ದರಿಂದ ಇದನ್ನು ಕೆಳಗೆ ಎಳೆಯುತ್ತೇನೆ. |
16:25 | ನಾವು ಬೇರೆ ಏನನ್ನಾದರೂ ಪ್ರಯತ್ನಿಸೋಣ. |
16:32 | ಇಲ್ಲ, ಅದು ಕೆಲಸ ಮಾಡುವದಿಲ್ಲ. |
16:35 | ಪಾಯಿಂಟ್ಗಳನ್ನು ಸುಮ್ಮನೆ ಹೊರಗೆ ಎಳೆಯಿರಿ. |
16:39 | ನಾನು ಇದನ್ನು ಮೊದಲು ಪ್ರಯತ್ನಿಸಿಲ್ಲ, ಹೀಗಾಗಿ ಸ್ವಲ್ಪ ಪ್ರಯೋಗ ಮಾಡುತ್ತಿದ್ದೇನೆ. |
16:51 | ಇದು ಆಗುತ್ತದೆ ಎಂದು ನನ್ನ ಎಣಿಕೆ. |
16:54 | ಮೊದಲು ಇಮೇಜನ್ನು ನೋಡಿದಾಗ ಅದನ್ನು ಸ್ವಲ್ಪ ‘ವಾರ್ಮ್’ ಮಾಡಬೇಕೆಂದಿದ್ದೆ. ಆದರೆ ಈಗ ಬಣ್ಣಗಳು ತುಂಬಾ ಚೆನ್ನಾಗಿ ಬಂದಿವೆ. |
17:03 | ಈ ಇಮೇಜ್ ಗಾಗಿ ಇಷ್ಟು ಸಾಕು ಎಂದುಕೊಳ್ಳುತ್ತೇನೆ. |
17:07 | ಹೆಚ್ಚಿನ ಮಾಹಿತಿಗಾಗಿ ಇಲ್ಲಿ ತೋರಿಸಿದ ಲಿಂಕ್ ಗೆ ಹೋಗಿರಿ. http://meetthegimp dot org ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆದು ತಿಳಿಸಿರಿ. info @ meetthegimp dot org
ಧನ್ಯವಾದಗಳು. |
17:22 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………………. |