GIMP/C2/Triptychs-In-A-New-Way/Kannada
From Script | Spoken-Tutorial
Revision as of 11:03, 12 December 2014 by Sandhya.np14 (Talk | contribs)
Time | Narration |
00:23 | Meet The GIMP (ಮೀಟ್ ದ್ ಗಿಂಪ್) ಗೆ ನಿಮಗೆ ಸ್ವಾಗತ. |
00:25 | ಇದನ್ನು ರೋಲ್ಫ್ ಸ್ಟೆನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ. |
00:30 | ನನಗೆ ನ್ಯೂಯಾರ್ಕ್ ನ ಜೇಸನ್ ಎನ್ನುವವರಿಂದ ಒಂದು ಇ-ಮೇಲ್ ಬಂದಿದೆ. ನಾನು ‘ಟ್ರಿಪ್ಟಿಕ್ಸ್’ಅನ್ನು ಮಾಡಲು ಆರಂಭಿಸುವ ಮೊದಲು, ಅದನ್ನು ಬೇರೆ ವಿಧದಲ್ಲಿ ಮಾಡುವ ವಿಧಾನವನ್ನು ಹುಡುಕಬೇಕೆಂದು ಅವರು ಟ್ರಿಪ್ಟಿಕ್ಸ್ ನ ಕುರಿತು ಇರುವ ಕಾರ್ಯಕ್ರಮವನ್ನು ತಡೆದರು. |
00:45 | ಮತ್ತು ಅವರು ಲೇಯರ್ ಮಾಸ್ಕನ್ನು ಬಳಸಿ ಮಾಡುವ ಬೇರೆ ವಿಧಾನವನ್ನು ಹುಡುಕಿದರು. |
00:50 | ನಾನು ಅದನ್ನು ನಿಮಗೆ ಈ ಟ್ಯುಟೋರಿಯಲ್ ನಲ್ಲಿ ತೋರಿಸಬೇಕೆಂದಿದ್ದೇನೆ. |
00:57 | ಜೇಸನ್ ಅವರು ಟ್ರಿಪ್ಟಿಕ್ಸ್ಅನ್ನು ಮಾಡಲು ಬಳಸಿದ ಇಮೇಜನ್ನು ನಿಮಗೆ ನಾನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅವರು, ಉಚಿತವಾಗಿ ಲಭ್ಯವಿಲ್ಲದ ಇಮೇಜ್ಗಳನ್ನು ಬಳಸಿದರು. ಹೀಗಾಗಿ ನಾನು ಅವುಗಳನ್ನು ಬಳಸಲು ಸಾಧ್ಯವಿಲ್ಲ. |
01:10 | ಟ್ರಿಪ್ಟಿಕ್ಸ್ಅನ್ನು ಮಾಡಲು ಲೇಯರ್ ಮಾಸ್ಕನ್ನು ಬಳಸುವುದು ತುಂಬಾ ಸುಲಭ ಮತ್ತು ಲೇಯರ್ ಮಾಸ್ಕನ್ನು ಬಳಸುವುದರ ಬಗೆಗೆ ಇರುವ ಅವರ ಪರಿಕಲ್ಪನೆಯನ್ನು ನಾನು ಸ್ವಲ್ಪ ಮಾರ್ಪಡಿಸಿದ್ದೇನೆ. |
01:21 | ನನಗೆ ಈ ಆಲೋಚನೆ ಏಕೆ ಬರಲಿಲ್ಲವೆಂದು ಆಶ್ಚರ್ಯವಾಗುತ್ತದೆ. |
01:25 | ನಾನು ಟ್ರಿಪ್ಟಿಕ್ಅನ್ನು ಇಲ್ಲಿಯ ಈ ಮೂರು ಶಾಟ್ ಗಳೊಂದಿಗೆ ಮಾಡಬಯಸುತ್ತೇನೆ. |
01:31 | ನನಗೆ ಈ ಇಮೇಜ್, ಎಡಭಾಗದಲ್ಲಿ ,ಈ ಎರಡನೆಯದ್ದು ಮಧ್ಯದಲ್ಲಿ ಮತ್ತು ಇದು ಬಲಭಾಗದಲ್ಲಿ ಬೇಕಾಗಿದೆ. |
01:42 | ನನಗೆ ಈ ಚಚ್ಚೌಕವಾದ ಫ್ರೇಮ್ಗಳನ್ನು ಈ ಇಮೇಜ್ಗೆ ಹೊಂದುವಂತೆ ಬದಲಾಯಿಸಬೇಕಾಗಿದೆ. |
01:49 | ಇದು ಹೇಗೆ ಆಗುವುದೆಂದು ನಾವು ನೋಡುವೆವು. |
01:53 | ಈಗ ನಾನು ಇಲ್ಲಿಯ ಈ ಇಮೇಜ್ಗಳೊಂದಿಗೆ ಟ್ರಿಪ್ಟಿಕ್ಸ್ಅನ್ನು ಮಾಡಲು ಆರಂಭಿಸಬಹುದು. ಮತ್ತು ನನ್ನ ಟೂಲ್ ಬಾಕ್ಸ ವಿಂಡೋವನ್ನು ಮುಂಭಾಗದಲ್ಲಿ ತರಲು ನಾನು Tab ಅನ್ನು ಒತ್ತುತ್ತೇನೆ. |
02:05 | ಹೊಸ ಇಮೇಜನ್ನು ಕ್ರಿಯೇಟ್ ಮಾಡಲು, File ಎನ್ನುವುದರ ಮೇಲೆ ಕ್ಲಿಕ್ ಮಾಡಿ, New ಎನ್ನುವುದನ್ನು ಆಯ್ಕೆಮಾಡಿ. ಡೀಫಾಲ್ಟ್ ವ್ಯಾಲ್ಯೂಗಳಾಗಿ ಅಗಲವನ್ನು 3400 ಮತ್ತು ಎತ್ತರವನ್ನು 1200 ಎಂದು ನಾವು ಪಡೆಯುತ್ತೇವೆ. |
02:19 | ಆದ್ದರಿಂದ ನಾನು, ಮಧ್ಯದಲ್ಲಿ 100 ಪಿಕ್ಸೆಲ್ಗಳ ಅಂಚು ಇರುವ ‘1000 by 1000’ ಸೈಜ್ ನ, ಮೂರು ಇಮೇಜ್ಗಳನ್ನು ಹೊಂದಿದ್ದೇನೆ. |
02:31 | ಇದು ಹೇಗೆ ಆಗುವುದೆಂದು ನಾವು ನೋಡೋಣ. |
02:36 | ಈ ಇಮೇಜನ್ನು ಹೊಸ ಇಮೇಜ್ನಲ್ಲಿ ಪಡೆಯಲು, ಟೂಲ್ ಬಾಕ್ಸ್ನಿಂದ ಈ ಇಮೇಜ್ನ ಬ್ಯಾಕ್ ಗ್ರೌಂಡ್ ಲೇಯರನ್ನು ನನ್ನ ಇಲ್ಲಿಯ ಹೊಸ ಇಮೇಜ್ಗೆ ಎಳೆಯುತ್ತೇನೆ ಹಾಗೂ ಇಲ್ಲಿ ನೀವು ಬ್ಯಾಕ್ ಗ್ರೌಂಡ್ ಕಾಪಿಯನ್ನು ಪಡೆಯುತ್ತೀರಿ. |
02:54 | ಇದು ನನ್ನ ಎಡತುದಿಯ ಇಮೇಜ್ ಆಗಿತ್ತು, ಹೀಗಾಗಿ ನಾನು ಇದನ್ನು ಪುನಃ ‘left’ ಎಂದು ಹೆಸರಿಡುತ್ತೇನೆ ಮತ್ತು ಟೈಪ್ ಮಾಡಿದ ನಂತರ Return/Enter ಒತ್ತುತ್ತೇನೆ. |
03:04 | ಆದ್ದರಿಂದ ಈ ಇಮೇಜ್, ಎಡಬದಿಗೆ ಇರಬೇಕು. |
03:08 | ಮುಂದಿನ ಈ ಇಮೇಜ್, ಬಲಬದಿಗೆ ಇರಬೇಕು, ಹೀಗಾಗಿ ನಾನು ಇಮೇಜನ್ನು ಅದೇ ರೀತಿಯಲ್ಲಿ ಎಳೆಯುತ್ತೇನೆ ಮತ್ತು ಅದಕ್ಕನುಸಾರವಾಗಿ ‘right’ ಎಂದು ಹೆಸರಿಡುತ್ತೇನೆ. |
03:32 | ಇದು ಮೂರನೆಯ ಇಮೇಜ್ ಆಗಿದೆ ಹಾಗೂ ಇದು ನನ್ನ ಮಧ್ಯದ ವಿಂಡೋ ಆಗುವದು. ಆದ್ದರಿಂದ ನಾನು ಈ ಇಮೇಜನ್ನು ಹೊಸ ಇಮೇಜ್ಗೆ ಎಳೆಯುತ್ತೇನೆ ಹಾಗೂ ಈ ಲೇಯರನ್ನು ‘center’ ಎಂದು ಪುನಃ ಹೆಸರಿಡುತ್ತೇನೆ. |
03:49 | ಬಲಗಡೆ ಹಾಗೂ ಮಧ್ಯದಲ್ಲಿ ಇರುವ ಲೇಯರ್ಗಳನ್ನು ಅದೃಶ್ಯಗೊಳಿಸುತ್ತೇನೆ. ಈಗ ನಾನು ಎಡಗಡೆಯ ಲೇಯರ್ನ ಅಳತೆಯನ್ನು ಸ್ವಲ್ಪ ಕಡಿಮೆ ಮಾಡಬೇಕು (ಸ್ಕೇಲ್ ಡೌನ್). ಸುಮಾರು 10% ಗೆ ನಾನು ಝೂಮ್ ಡೌನ್ ಮಾಡಿದಾಗ ಈ ಲೇಯರ್ನ ಅಂಚುಗಳನ್ನು ನೀವು ನೋಡಬಹುದು ಮತ್ತು ಈಗ ಇಮೇಜ್ನ ಪೂರ್ತಿ ಫ್ರೇಮನ್ನು ಕಾಣಬಹುದು. |
04:16 | ಈಗ ನಾನು Move Tool ಅನ್ನು ಆಯ್ಕೆ ಮಾಡುತ್ತೇನೆ. ಇದರಿಂದ ನಾನು ಇಮೇಜನ್ನು ಕದಲಿಸಲು ಹಾಗೂ ಸ್ವಲ್ಪ ಸರಿಹೊಂದಿಸಲು ಸಾಧ್ಯವಿದೆ. |
04:26 | ಈ ಇಮೇಜ್, ಸರಿಯುತ್ತಿಲ್ಲ ಏಕೆಂದರೆ ನಾನು ಮಧ್ಯದ ಲೇಯರನ್ನು ಆಯ್ಕೆಮಾಡಿದ್ದೇನೆ. |
04:33 | ಆದ್ದರಿಂದ ಈಗ ನಾನು left ಲೇಯರನ್ನು ಆಯ್ಕೆಮಾಡುತ್ತೇನೆ ಮತ್ತು ಬಾಟಲನ್ನು ಸ್ಥಾನದಲ್ಲಿರಿಸಲು ಇದನ್ನು ಸರಿಸುತ್ತೇನೆ. |
04:39 | ನನಗೆ ಈ ಲೇಯರನ್ನು ಸ್ವಲ್ಪ ಸ್ಕೇಲ್ ಡೌನ್ ಮಾಡಬೇಕಾಗಿದೆ. ಆದ್ದರಿಂದ ನಾನು ಟೂಲ್ ಬಾಕ್ಸ್ನಿಂದ Scale Tool ಎನ್ನುವುದನ್ನು ಆಯ್ಕೆಮಾಡಿ, Tool info ಎನ್ನುವಲ್ಲಿಗೆ ಹೋಗಿ Aspect ratio ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ ಹಾಗೂ Preview ಎನ್ನುವಲ್ಲಿ Image ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ. |
04:59 | ಈಗ ಲೇಯರ್ನಲ್ಲಿ ಕ್ಲಿಕ್ ಮಾಡುತ್ತೇನೆ, Info Window ವನ್ನು ಪಕ್ಕಕ್ಕೆ ಎಳೆದು ಇದನ್ನು ಮೂಲೆಯಿಂದ ಕಡಿಮೆ ಮಾಡುತ್ತೇನೆ. |
05:09 | ಹೆಚ್ಚು ಅಥವಾ ಸ್ವಲ್ಪ ಕಡಿಮೆ. |
05:15 | ನಾನು ಈ ಇಮೇಜನ್ನು ಪಡೆದುಕೊಂಡು ನನಗೆ ಬೇಕಾದಲ್ಲಿ ಅದನ್ನು ಇಡಬಹುದು. ನಾನು ಇಲ್ಲಿ ಕೆಲವು ಮಾರ್ಗಸೂಚಿಗಳನ್ನು ಇಡಬೇಕಾಗಿತ್ತು. |
05:30 | ಆದ್ದರಿಂದ ಇಮೇಜ್ನಲ್ಲಿ 100% ನಷ್ಟು ಝೂಮ್-ಇನ್ ಮಾಡಿ, ಮೇಲಿನ ಎಡಮೂಲೆಗೆ ಹೋಗುತ್ತೇನೆ. |
05:38 | ಈಗ ಮಾರ್ಗಸೂಚಿಗಳಿಗಾಗಿ ರೂಲರ್ಸನ್ನು ಕೆಳಗೆ ಎಳೆಯುತ್ತೇನೆ. |
05:43 | ನನಗೆ ರೂಲರನ್ನು ಸರಿಸಲು ಏಕೆ ಸಾಧ್ಯವಾಗಲಿಲ್ಲವೆಂದು ಆಶ್ಚರ್ಯವಾಗಿತ್ತು. ಇಲ್ಲಿ Move the active layer ಎನ್ನುವ ಒಂದು ಆಯ್ಕೆಯಿದೆ. ಇದನ್ನು ಆಯ್ಕೆಮಾಡುವದರಿಂದ ನಾನು ಆಕ್ಟಿವ್ ಲೇಯರನ್ನು ಸರಿಸಬಹುದು. |
06:01 | ಲೇಯರ್ಗಳನ್ನು ರಕ್ಷಿಸಲು ಇದು ಒಳ್ಳೆಯ ಆಯ್ಕೆಯಾಗಿದೆ. ಫ್ರೇಮ್ನ ಸೈಜನ್ನು 100 ಎಂದು ಬಲಗಡೆಗೆ ಆಯ್ಕೆಮಾಡಿ, ಕೆಳಗೆ ಹೋಗಿ 1100 ಎಂದು ಸೆಟ್ ಮಾಡುತ್ತೇನೆ. ಬಲಗಡೆಗೆ 1100 ಎಂದು ಸೆಟ್ ಮಾಡುತ್ತೇನೆ. |
06:31 | ಇದು ನನ್ನ ಇಮೇಜ್ ಗಾಗಿ ಫ್ರೇಮ್ ಆಗಿದೆ. |
06:34 | Shift + Ctrl + E ನನಗೆ ಪೂರ್ತಿ ಇಮೇಜನ್ನು ಕೊಡುತ್ತದೆ. ಈಗ Active Layer ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ. |
06:43 | Zoom ratio ಎನ್ನುವಲ್ಲಿ ನಾನು 10% ಅನ್ನು ಆಯ್ಕೆಮಾಡುತ್ತೇನೆ. |
06:48 | ನಾನು 13% ಅನ್ನು ಆಯ್ಕೆಮಾಡಬೇಕು ಎಂದುಕೊಂಡಿದ್ದೇನೆ, ಅದು ಸಾಕಾಗುತ್ತದೆ. |
06:59 | ನಾನು Scale Tool ಹಾಗೂ Keep aspect ನ ಮೇಲೆ ಕ್ಲಿಕ್ ಮಾಡುತ್ತೇನೆ. ಈ ಸ್ಕೇಲ್ ವಿಂಡೋವನ್ನು ಫ್ರೇಮ್ನ ಹೊರಗೆ ಎಳೆಯುತ್ತೇನೆ. |
07:10 | ಈಗ ನಾನು ಈ ಇಮೇಜನ್ನು ಸ್ಕೇಲ್, ಮಾಡುತ್ತೇನೆ. |
07:14 | ಈ ಇಮೇಜನ್ನು ಎಲ್ಲಿಡಬೇಕೆಂದು ನೋಡಲು ಈಗ ನಾನು ಫ್ರೇಮನ್ನು ಪಡೆದಿದ್ದೇನೆ. |
07:21 | ಇದನ್ನು ಸ್ವಲ್ಪ ಚಿಕ್ಕದು ಮಾಡಬೇಕೆಂದು ಯೋಚಿಸುತ್ತಿದ್ದೇನೆ ಏಕೆಂದರೆ ನನಗೆ ಇಲ್ಲಿ, ಇಮೇಜ್ನಲ್ಲಿ ಗಾಜಿನ ನೆರಳು ಬೇಕಾಗಿದೆ. |
07:40 | ಈಗ ನಾನು Scale ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ನನಗೆ ಸ್ಕೇಲ್ ಮಾಡಲ್ಪಟ್ಟ ಇಮೇಜ್ ಸಿಗುತ್ತದೆ. |
07:49 | ಇಮೇಜ್ನ ಸುತ್ತಲೂ ಫ್ರೇಮ್ಅನ್ನು ಪಡೆಯಲು ನಾನು ಲೇಯರ್ ಮಾಸ್ಕನ್ನು ಸೇರಿಸುತ್ತೇನೆ. |
08:01 | ನಾನು, ನನ್ನ ಲೇಯರ್ ಮಾಸ್ಕನ್ನು Black ಎಂದರೆ full transparency (ಫುಲ್ ಟ್ರಾನ್ಸ್ಪರೆನ್ಸಿ) ಎಂದು ಮಾಡುತ್ತೇನೆ. |
08:07 | ಮತ್ತು Add ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ. |
08:13 | ಈಗ, ಇಲ್ಲಿ,ಅಂಚುಗಳ ಒಳಗಡೆಯಲ್ಲಿ ನಾನು Rectangle ಎನ್ನುವುದನ್ನು ಆಯ್ಕೆಮಾಡಿ ಅದನ್ನು ಬಿಳಿ ಬಣ್ಣದಿಂದ ತುಂಬುತ್ತೇನೆ. |
08:23 | ನಾನು White ಅನ್ನು ಇಲ್ಲಿಗೆ ಎಳೆಯುತ್ತೇನೆ ಹಾಗೂ ಬಾಟಲ್ ಈಗ ಕಾಣಿಸುವುದನ್ನು ನೀವು ನೋಡಬಹುದು. ಇಲ್ಲಿ ಫ್ರೇಮನ್ನು ಪೂರ್ತಿಗೊಳಿಸಲು ನಾನು ಇದರಲ್ಲಿ ಝೂಮ್ ಇನ್ ಮಾಡುತ್ತೇನೆ. |
08:36 | ಲೇಯರ್ ಮಾಸ್ಕ್ನ ಮೇಲೆ ನಾನು ಬಿಳಿ ಬಣ್ಣದ ಅನಿಯಮಿತ ಸ್ಟ್ರೋಕ್ ಗಳಿಂದ ಪೇಂಟ್ ಮಾಡುತ್ತೇನೆ. |
08:44 | ಇದಕ್ಕಾಗಿ ನಾನು Brush Tool ಅನ್ನು ಆಯ್ಕೆಮಾಡಿ, ‘ಡೈಲಾಗ್’ಗೆ ಹೋಗಿ ಇಲ್ಲಿ ‘ಪೇಂಟಿಂಗ್’ಗಾಗಿ ಸಾಫ್ಟ್ ಬ್ರಶ್ ಅನ್ನು ಆಯ್ಕೆಮಾಡುತ್ತೇನೆ. |
09:01 | ಪೇಂಟಿಂಗ್ ಮಾಡುವ ಮೊದಲು, Shift + Ctrl + A ಒತ್ತುವುದರ ಮೂಲಕ ನಾನು ನನ್ನ ಆಯ್ಕೆಯನ್ನು ಡಿ-ಸೆಲೆಕ್ಟ್ ಮಾಡಬೇಕು. ಈಗ ನಾನು ಬಿಳಿ ಬಣ್ಣದಿಂದ ಪೇಂಟ್ ಮಾಡಲು ಸಾಧ್ಯವಿದೆ. |
09:13 | White, ಆಯ್ಕೆಯಾಗಿದೆ. |
09:16 | ಈಗ, ಇಲ್ಲಿ ಸುತ್ತಲೂ ನಾನು ಬಿಳಿ ಬಣ್ಣದಿಂದ ಪೇಂಟ್ ಮಾಡುತ್ತೇನೆ. ಲೇಯರ್ ಮಾಸ್ಕ್ ನ ಮೇಲೆ ಬಿಳಿ ಬಣ್ಣದಿಂದ ಪೇಂಟ್ ಮಾಡುವಾಗ ಕೆಳಗಿರುವ ಇಮೇಜ್ಅನ್ನು ನಾನು ಬಹಿರಂಗಪಡಿಸುತ್ತಿದ್ದೇನೆ. |
09:28 | ಪೇಂಟಿಂಗ್, ಅನಿಯಮಿತವಾಗಿದೆ ಆದರೆ ಪರವಾಗಿಲ್ಲ. |
09:40 | ಈಗ ನಾನು ಬೇರೊಂದು ‘ಬ್ರಶ್’ಅನ್ನು ಆಯ್ಕೆಮಾಡುತ್ತಿದ್ದೇನೆ. ಇದು ಉತ್ತಮವಾಗಿದೆ. |
09:49 | ನನಗೆ ಅಸ್ಪಷ್ಟವಾದ (ಫಜಿ) ಮೂಲೆಯು ಸಿಗುತ್ತದೆ. |
09:52 | ನಾನು ಇಮೇಜ್ನಲ್ಲಿ 100% ಝೂಮ್ ಮಾಡಬೇಕು. ಆಗ ನೀವು ನೋಡಲು ಸಾಧ್ಯವಾಗುವದು. |
10:04 | ನಾನು ಇಲ್ಲಿ ಒಂದು ತೆರದ ಅಸ್ಪಷ್ಟ ಅಂಚನ್ನು ಪಡೆಯುತ್ತೇನೆ ಹಾಗೂ ಅದರ ಮೇಲೆ ಎರಡು ಸಲ ಪೇಂಟ್ ಮಾಡಿ ಒಂದು ಕ್ಷಣದಲ್ಲಿ ಅದನ್ನು ಇನ್ನೂ ಸ್ವಲ್ಪ ಅಸ್ಪಷ್ಟಗೊಳಿಸುತ್ತೇನೆ. |
10:16 | ಅಂಚು ಇನ್ನೂ ಸ್ವಲ್ಪ ಅನಿಯಮಿತವಾಗುತ್ತಿರುವದನ್ನು ಈಗ ನೀವು ನೋಡಬಹುದು. |
10:22 | ಬಹುಶಃ ಇದು ಇಲ್ಲಿ ಸೂಕ್ತವಾದ ಟೂಲ್ ಆಗಿಲ್ಲ, ಆದರೆ ನೀವು ವಿವಿಧ ಟೂಲ್ಗಳನ್ನು ಬಳಸಬಹುದು. ಈಗ ನಾನು ಈ ಇಮೇಜನ್ನು ಶಾರ್ಪ್ ಮಾಡಬಯಸುತ್ತೇನೆ. |
10:35 | ನಾನು ಈಗಲೂ ಲೇಯರ್ ಮಾಸ್ಕನಲ್ಲಿ ಕೆಲಸ ಮಾಡುತ್ತಿರುವದನ್ನು ನೀವು ಪರೀಕ್ಷಿಸಬಹುದು. |
10:41 | ನೀವು ಇದನ್ನು ಇಲ್ಲಿ ಪರಿಶೀಲಿಸಬಹುದು. |
10:43 | ಲೇಯರ್ ಮಾಸ್ಕ್, ಇಲ್ಲಿ White ನೊಂದಿಗೆ ಆಯ್ಕೆಯಾಗಿದೆ. |
10:47 | ಆದ್ದರಿಂದ Filters, Blur, Gaussian blur ಇವುಗಳ ಮೇಲೆ ಕ್ರಮವಾಗಿ ಕ್ಲಿಕ್ ಮಾಡಿ ಇಲ್ಲಿ ನಾನು ಹೆಚ್ಚಿನ ಬ್ಲರ್ ಕೌಂಟನ್ನು ಆಯ್ಕೆಮಾಡುತ್ತೇನೆ. ಇದು ಸರಿಯಾಗಿದೆ ಎಂದುಕೊಂಡಿದ್ದೇನೆ. |
11:03 | ಈಗ ನಾನು ನಿಜವಾಗಿಯೂ ಇಲ್ಲಿ, ಸುತ್ತಲೂ ಅಸ್ಪಷ್ಟ ಅಂಚನ್ನು ಹೊಂದಿದ್ದೇನೆ. |
11:10 | ಆದ್ದರಿಂದ ನಾವು ಪೂರ್ತಿ ಇಮೇಜನ್ನು ನೋಡೋಣ. Shift + Ctrl + E. |
11:17 | ನನ್ನ ‘ಟ್ರಿಪ್ಟಿಕ್ಸ್’ನ ಮೊದಲ ಭಾಗವನ್ನು ನಾನು ಪಡೆದಿದ್ದೇನೆ ಹಾಗೂ ಬೇರೆಯವುಗಳನ್ನು ಇದೇ ರೀತಿಯಲ್ಲಿ ಮಾಡುತ್ತೇನೆ. |
11:26 | ನಾನು ಉಳಿದ ಇಮೇಜ್ಗಳನ್ನು ಮುಗಿಸಿದ್ದೇನೆ. ರೂಲರ್ ಗಳ ಮೇಲೆ ನಾನು ಹೆಚ್ಚು ಪೇಂಟ್ ಮಾಡಿದ್ದೇನೆ ಎಂದು ಇಲ್ಲಿ ನೀವು ನೋಡಬಹುದು. ಅದನ್ನು ಇಲ್ಲಿಯೂ ಮಾಡಲು ಸಾಧ್ಯವಿದೆ. |
11:39 | ಈಗ ನನಗೆ ರೂಲರ್ ಗಳನ್ನು ತೆಗೆಯಬೇಕಾಗಿದೆ. ಇದನ್ನು ಮಾಡುವ ಹೊಸ ವಿಧಾನವೆಂದರೆ, ಕ್ರಮವಾಗಿ Image, Image Guides ಗೆ ಹೋಗಿ. ಇಲ್ಲಿ ನಾನು ಎಲ್ಲ ಗೈಡ್ಸ್ ಅನ್ನು ತೆಗೆದುಹಾಕಬಹುದು. |
11:54 | ಇಲ್ಲಿ ನಾನು New Guide ಎನ್ನುವುದನ್ನು ಮಾಡಿ ಅದರ ಸ್ಥಾನವನ್ನು ಸಂಖ್ಯಾತ್ಮಕವಾಗಿ ಆಯ್ಕೆಮಾಡಲು ಸಾಧ್ಯ ಎಂದು ಕಂಡುಹಿಡಿದಿದ್ದೇನೆ. |
12:03 | ಈ ಆಯ್ಕೆಯನ್ನು ಹೊಂದಿರುವುದು ಅದ್ಭುತವಾಗಿದೆ. |
12:08 | ಗಿಂಪ್ ಎಷ್ಟೊಂದು ಆಯ್ಕೆಗಳನ್ನು ಹೊಂದಿದೆ ಎಂದರೆ ನೀವು ಅವುಗಳೆಲ್ಲವನ್ನು ನೆನಪಿಡಲು ಸಾಧ್ಯವಿಲ್ಲ. |
12:14 | View ಗೆ ಹೋಗಿ ಮತ್ತು Layer Boundary ಆಯ್ಕೆಯನ್ನು ಡಿ-ಸೆಲೆಕ್ಟ್ ಮಾಡಿ. |
12:18 | ನನಗೆ ಈ ಬಾಟಲ್ ಸ್ವಲ್ಪ ಮೇಲೆ, ಮೂಲೆಯಲ್ಲಿ ಬೇಕಾಗಿದೆ. |
12:23 | ನನಗೆನಿಸುವಂತೆ ಇಲ್ಲಿ ಸ್ವಲ್ಪ ಹೆಚ್ಚು ಸ್ಥಳವಿದೆ ಮತ್ತು ಇಲ್ಲಿ ಸ್ವಲ್ಪ ಕಡಿಮೆ. |
12:30 | ಬಲಗಡೆಯ ಹಾಗೂ ಮಧ್ಯದ ಇಮೇಜ್ ಗಳು ಇಲ್ಲಿ ಬಲಮೂಲೆಯಲ್ಲಿ ಇವೆ. |
12:36 | ಆದರೆ ಈ ಬಾಟಲ್ ಅಲ್ಲಿ ಮೇಲೆ ಹೋಗಬೇಕು. |
12:41 | ಹೀಗಾಗಿ ನಾನು ಫುಲ್ ಸ್ಕ್ರೀನ್ ಮೋಡ್ನಿಂದ ಹೊರಗೆ ಬರುತ್ತೇನೆ. |
12:45 | ನಾನು center ಮತ್ತು right ಲೇಯರ್ಗಳನ್ನು ಡಿ-ಸೆಲೆಕ್ಟ್ ಮಾಡುತ್ತೇನೆ ಹಾಗೂ left ಲೇಯರ್ನ ಮೇಲೆ ಗಮನ ಕೊಡುತ್ತೇನೆ. |
12:54 | ಈಗ ನನಗೆ ಮಾರ್ಗದರ್ಶನಕ್ಕೆ ರೂಲರ್ಸ್ ಬೇಕಾಗಿದೆ. |
12:58 | ಹೀಗಾಗಿ, ಕ್ರಮವಾಗಿ Image, Guides, New guide ಇವುಗಳ ಮೇಲೆ ಕ್ಲಿಕ್ ಮಾಡುತ್ತೇನೆ. Horizontal Position ಎನ್ನುವಲ್ಲಿ 100 ಎಂದು ಟೈಪ್ ಮಾಡುತ್ತೇನೆ. |
13:10 | ಮತ್ತೆ ಕ್ರಮವಾಗಿ Image, Guides, New guide ಗೆ ಹೋಗಿ Vertical Position ಅನ್ನು 100 ಎಂದು ಆರಿಸಿಕೊಳ್ಳುತ್ತೇನೆ. |
13:20 | ಈಗ ನನ್ನ Move Tool ಅನ್ನು ಆಯ್ದುಕೊಳ್ಳುತ್ತೇನೆ. ಆಯ್ಕೆಗಳಿಗೆ ಹೋಗಿ Move the active layer ಎನ್ನುವುದನ್ನು ಆಯ್ದುಕೊಳ್ಳುತ್ತೇನೆ ಮತ್ತು ಇದನ್ನು ಇಲ್ಲಿ, ಮೇಲೆ ಸರಿಸುತ್ತೇನೆ. |
13:37 | ನಾನು ಒಂದು ತಪ್ಪು ಮಾಡಿದ್ದೇನೆ. ಆದ್ದರಿಂದ ನಾನು ಈ ಸ್ಟೆಪ್ ಅನ್ನು Ctrl + z ಒತ್ತುವುದರ ಮೂಲಕ Undo ಮಾಡುತ್ತೇನೆ. ಇಲ್ಲಿ ಮಾಸ್ಕ್ ಆಯ್ಕೆಯಾಗಿರುವುದನ್ನು ನೀವು ನೋಡಬಹುದು. |
13:49 | ನನಗೆ ಲೇಯರನ್ನು ಜರುಗಿಸಬೇಕಾಗಿದೆ. |
13:51 | ಆದ್ದರಿಂದ ಈಗ ನಾನು ಇಮೇಜನ್ನು ಆಯ್ಕೆಮಾಡಿ ಅದನ್ನು ಹಾಗೆಯೇ ಮೇಲೆ ಎಳೆಯುತ್ತೇನೆ. ಮಾಸ್ಕ್ ಅದರ ಜೊತೆಗೇ ಸರಿಯುತ್ತದೆ. |
13:58 | ಮಾಸ್ಕನ್ನು ಲಾಕ್ ಮಾಡಲು ನನಗೆ ಯಾವ ಹಾದಿಯೂ ಕಾಣಲಿಲ್ಲ ಆದರೆ ನಾನು ಅದನ್ನು ಸರಿಪಡಿಸಲು ಸಾಧ್ಯವಿದೆ. |
14:04 | ನಾನು layer mask ಅನ್ನು ಆಯ್ಕೆಮಾಡುತ್ತೇನೆ ಮತ್ತು ಅದನ್ನು ಹಿಂದಕ್ಕೆ, ನನ್ನ ಇಲ್ಲಿಯ ಮೂಲೆಗೆ ಎಳೆಯುತ್ತೇನೆ. |
14:13 | ಇದು ಚೆನ್ನಾಗಿ ಕಾಣುತ್ತಿದೆ ಎಂದು ಭಾವಿಸುತ್ತೇನೆ. |
14:19 | ಮತ್ತು 'ನ್ಯೂಯಾರ್ಕ್'ನ ಜೇಸನ್ ಎನ್ನುವವರ ಸಹಾಯದಿಂದ ಈ ಇಮೇಜ್ ಈಗ ಪೂರ್ತಿಯಾಗಿದೆ. |
14:28 | ಇಲ್ಲ, ಈ ಇಮೇಜ್ ಪೂರ್ತಿಯಾಗಿಲ್ಲ. |
14:32 | ಸಾಮಾನ್ಯವಾಗಿ ನಾನು ಯಾವುದನ್ನು ಮರೆಯುವದಿಲ್ಲವೋ ಅದನ್ನು ರೆಕಾರ್ಡ್ ಮಾಡುವಾಗ ಯಾವಾಗಲೂ ಮರೆಯುತ್ತೇನೆ ಏಕೆಂದರೆ ನನ್ನ ಇಮೇಜ್ ತಯಾರಿಸುವದರ ಹೊರತಾಗಿ ನಾನು ಇಂತಹ ಬಹಳಷ್ಟು ವಿಷಯಗಳ ಬಗ್ಗೆ ಯೋಚಿಸಬೇಕಾಗುತ್ತದೆ. |
14:47 | ನಾನು ಸೇವ್ ಮಾಡಲು ಮತ್ತೆ ಮರೆತಿದ್ದೇನೆ. |
14:56 | ಇದನ್ನು jaegermeister.xcf (ಜೇಗರ್ಮಾಸ್ಟರ್.ಎಕ್ಸ್ ಸಿ ಎಫ್ )ಎಂದು ಸೇವ್ ಮಾಡಿರಿ. ‘xcf’ ಎನ್ನುವುದು ಲೇಯರ್ ನ ಎಲ್ಲ ಮಾಹಿತಿಯನ್ನು ಒಳಗೊಂಡಿದೆ ಮತ್ತು ‘ವೆಬ್’ಗಾಗಿ ರಿಸ್ಕೇಲಿಂಗ್ ಮಾಡುವ ಕುರಿತು ಇರುವ ಎಲ್ಲ ವಿಷಯವನ್ನು ನಾನು ತೆಗೆದು ಹಾಕುತ್ತೇನೆ. |
15:08 | ಈ ಫೈಲ್ನ ಲಿಂಕ್, ನಿಮಗೆ ಕೆಳಗೆ ತೋರಿಸಿದ ‘ಲಿಂಕ್’ನ ‘ಶೋ ನೋಟ್ಸ’ನಲ್ಲಿ ಸಿಗುವುದು. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. meetthegimp@org |
15:18 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ. ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………………. |