GIMP/C2/Resolutions/Kannada

From Script | Spoken-Tutorial
Revision as of 12:16, 10 December 2014 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:23 Meet The GIMP (ಮೀಟ್ ದ ಗಿಂಪ್) ಎನ್ನುವುದಕ್ಕೆ ಸ್ವಾಗತ.
00:25 ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:30 ‘ರೆಸಲ್ಯೂಶನ್ಸ್'ಗಾಗಿ, ಕ್ರಮವಾಗಿ Image, image properties ಗಳಿಗೆ ಹೋಗಿ. ಇಲ್ಲಿ ಈ ಇಮೇಜ್, 508 (ಐದುನೂರ ಎಂಟು) ‘ಪಿಕ್ಸೆಲ್’ಗಳ ಅಗಲವನ್ನು ಮತ್ತು ‘72 by 72’ ‘ಪಿ ಪಿ ಐ’ ಅನ್ನು ಹೊಂದಿದೆ ಎಂದು ನೀವು ನೋಡಬಹುದು.
00:46 ppi (ಪಿ ಪಿ ಐ), ‘ಪಿಕ್ಸೆಲ್ಸ್ ಪರ್ ಇಂಚ್’ಅನ್ನು ಪ್ರತಿನಿಧಿಸುತ್ತದೆ.
00:50 ಹೀಗಾಗಿ, ಇದು, ಇಲ್ಲಿ ನನ್ನ ಸ್ಕ್ರೀನ್ ಮೇಲೆ, ಒಂದು ‘ಇಂಚ್’ಗೆ 72 (ಎಪ್ಪತ್ತೆರಡು) ಪಿಕ್ಸೆಲ್’ಗಳಾಗಿವೆ.
00:56 ppi(ಪಿ ಪಿ ಐ), ಮೂಲತಃ dpi (ಡಿ ಪಿ ಐ-ಡಾಟ್ಸ್ ಪರ್ ಇಂಚ್) ನಂತೆಯೇ ಆಗಿದೆ.
01:03 ಮತ್ತು ‘ಪ್ರಿಂಟಿಂಗ್’ಗಾಗಿ, ಸರಿಯಾದ ರೆಸಲ್ಯೂಶನ್ ಮುಖ್ಯವಾಗಿದೆ.
01:07 ನೀವು ಒಂದು ‘ಇಂಚ್’ ಕಾಗದದ ಮೇಲೆ, ‘ಇಂಕ್’ನ ಎಷ್ಟು ಚುಕ್ಕೆಗಳನ್ನು ಇಡುತ್ತೀರಿ ಎಂದು ಅವರು ಚರ್ಚೆ ಮಾಡುತ್ತಾರೆ.
01:14 ಒಂದು ‘ಇಂಚ್’ ಉದ್ದದ ಗೆರೆಯಲ್ಲಿ ಸುಮಾರು 300 ‘ಡಾಟ್ಸ್ ಪರ್ ಇಂಚ್’ ಇರುತ್ತವೆ ಮತ್ತು ಅವುಗಳು ಎಷ್ಟು ಹತ್ತಿರದಲ್ಲಿ ಪ್ರಿಂಟ್ ಆಗಿವೆ ಎಂದರೆ ನೀವು ಒಂದು ಗೆರೆಯನ್ನು ನೋಡುತ್ತೀರಿ, ಚುಕ್ಕೆಗಳ ಒಂದು ಸಾಲನ್ನು ಅಲ್ಲ.
01:27 ಯಾರಿಗಾದರೂ ಇಮೇಜನ್ನು ಪ್ರಿಂಟ್ ಮಾಡಬೇಕಾಗಿದ್ದರೆ ಆವಾಗ ಅವರು ಇಮೇಜನ್ನು 300 ppi (ಮುನ್ನೂರು ಪಿ ಪಿ ಐ) ನಲ್ಲಿ ಕೇಳಬಹುದು ಅಥವಾ ನಮಗೆ ಈ ಇಮೇಜ್, 150 dpi (ನೂರೈವತ್ತು ಡಿ ಪಿ ಐ) ನಲ್ಲಿ ಬೇಕು ಇಲ್ಲವಾದರೆ ಗುಣಮಟ್ಟವು ಸಾಕಷ್ಟು ಉತ್ತಮವಾಗಿರುವದಿಲ್ಲ ಎಂದು ಅವರು ಹೇಳಬಹುದು..
01:46 ಹೀಗಾಗಿ, ನೀವು ಇದಕ್ಕಾಗಿ ಏನು ಮಾಡಲು ಸಾಧ್ಯವಿದೆ?
01:49 ನೀವು ಇದನ್ನು ಸುಲಭವಾಗಿ ಬದಲಾಯಿಸಬಹುದು.
01:53 ಕ್ರಮವಾಗಿ, Image, Scale Image ಗಳಿಗೆ ಹೋಗಿ.
01:56 ನಾವು ಅನೇಕ ಸಲ ಬಳಸಿರುವ, Width, Height ಗಳನ್ನು ಈ ‘ಡೈಲಾಗ್’ನಲ್ಲಿ ನೀವು ನೋಡಬಹುದು .
02:04 ನೀವು X resolution ಹಾಗೂ Y resolution ಗಳನ್ನು ಸಹ ಇಲ್ಲಿ ನೋಡಬಹುದು ಮತ್ತು ವ್ಯಾಲ್ಯೂ 72 (ಎಪ್ಪತ್ತೆರಡು) ‘ಪಿಕ್ಸೆಲ್ಸ್ ಪರ್ ಇಂಚ್’ ಆಗಿದೆ. ನಾನು ಅದನ್ನು ‘ಪಿಕ್ಸೆಲ್ಸ್ ಪರ್ ಮಿಲೀಮೀಟರ್’ ಅಥವಾ ‘ಪಿಕ್ಸೆಲ್ಸ್’, ಪಾಯಿಂಟ್, ‘ಪಿಕಾ’ ಗೆ ಬದಲಾಯಿಸಬಹುದು.
02:21 ಆದರೆ ಇದನ್ನು ನಾವು ‘ಪಿಕ್ಸೆಲ್ಸ್ ಪರ್ ಇಂಚ್’ನೊಂದಿಗೆ ಇಡೋಣ.
02:26 X resolution ಮತ್ತು Y resolution, 72 (ಎಪ್ಪತ್ತೆರಡು) ppi ಅನ್ನು ವ್ಯಾಲ್ಯೂ ಆಗಿ ಪಡೆದಿವೆ. ನಾನು ಅದನ್ನು 300 ppi (ಮುನ್ನೂರು ಪಿ ಪಿ ಐ) ಗೆ ಬದಲಾಯಿಸುತ್ತೇನೆ.
02:40 ಈಗ, ಇಮೇಜನ್ನು ಸ್ಕೇಲ್ ಮಾಡುತ್ತೇನೆ. ನಾನು image properties ಗೆ ಹೋದಾಗ ಹೊರತುಪಡಿಸಿ, ಇಲ್ಲಿ ಏನೂ ಬದಲಾಗಿಲ್ಲವೆಂದು ನೀವು ನೋಡುತ್ತೀರಿ.
02:49 ಈಗ, ಇಲ್ಲಿ ರೆಸಲ್ಯೂಶನ್, ‘300 by 300 ppi’(ಮುನ್ನೂರು ಬೈ ಮುನ್ನೂರು ಪಿ ಪಿ ಐ) ಗೆ ಬದಲಾಗಿರುವುದನ್ನು ಮತ್ತು ಪ್ರಿಂಟ್ ಸೈಜ್, 3 (ಮೂರು) ದೊಡ್ಡ ‘ಸ್ಟಾಂಪ್’ಗಳಷ್ಟು ಇರುವುದನ್ನು ಇಲ್ಲಿ ನೀವು ನೋಡಬಹುದು.
03:03 ಅದು ಸುಮಾರು ‘4 by 3’ ಸೆಂಟಿಮೀಟರ್ ಗಳಷ್ಟು ಆಗಿದೆ.
03:07 ಇದು ಒಂದು ದೊಡ್ಡ ಸ್ಟಾಂಪ್ ಆಗಿದೆ.
03:09 ‘ಇಮೇಜ್’ನಲ್ಲಿ, ‘ರೆಸಲ್ಯೂಶನ್’ಅನ್ನು ಹೊರತುಪಡಿಸಿ ನಾನು, ಏನನ್ನೂ ಬದಲಾಯಿಸಿಲ್ಲ.
03:17 ಸ್ಕ್ರೀನ್, ಮೇಲೆ ಎನೂ ಬದಲಾಗಿಲ್ಲ, ಅದು ಇನ್ನೂ 72 (ಎಪ್ಪತ್ತೆರಡು) ‘ಪಿಕ್ಸೆಲ್ಸ್ ಪರ್ ಇಂಚ್’ ಆಗಿದೆ.
03:24 ಈ ಸಂಖ್ಯೆಯು ಮೂಲತಃ ಅರ್ಥಹೀನವಾಗಿದೆ.
03:27 300 ‘ಡಾಟ್ಸ್ ಪರ್ ಇಂಚ್’ ಗುಣಮಟ್ಟದ ಇಮೇಜನ್ನು ನಿಮಗೆ ಪ್ರಿಂಟ್ ಮಾಡಬೇಕಾಗಿದೆ ಎಂದು ನಿಮಗೆ ತಿಳಿದರೆ ಅದಕ್ಕೊಂದು ಅರ್ಥ ಸಿಗುತ್ತದೆ. ಅದು, ನಿಜವಾಗಿಯೂ ಉತ್ತಮವಾದ ವ್ಯಾಲ್ಯೂ ಆಗಿದೆ. ನಿಮಗೆ ಒಂದುವೇಳೆ ಇದು ‘10 by 15’ ‘ಇಂಚ್’ಗಳಲ್ಲಿ ಬೇಕಾಗಿದ್ದರೆ ಆಗ ಈ ‘ಪಿಕ್ಸೆಲ್’ಗಳು ಸಾಕಷ್ಟಿಲ್ಲ ಎಂದು ನೀವು ನೋಡುತ್ತೀರಿ.
03:51 ಆದ್ದರಿಂದ ನೀವು ‘ಪಿಕ್ಸೆಲ್’ಗಳನ್ನು ಹೆಚ್ಚಿಸಬೇಕಾಗಿದೆ.
03:55 ಆದರೆ ‘ಪ್ರಿಂಟರ್’ಗಾಗಿ ‘ಇಮೇಜ್’ನ ಗುಣಮಟ್ಟವು, ಸೈಜ್’ನಲ್ಲಿ ಎಷ್ಟು ‘ಪಿಕ್ಸೆಲ್’ಗಳಿವೆ, ಎಷ್ಟು ಉದ್ದ ಅಥವಾ ಎಷ್ಟು ದೊಡ್ಡ ಜಾಗವನ್ನು ನಿಮಗೆ ಪ್ರಿಂಟ್ ಮಾಡಬೇಕಾಗಿದೆ ಎನ್ನುವುದರ ಮೇಲೆ ಅವಲಂಬಿಸಿದೆ.
04:10 ಮತ್ತು ಆ ಗುಣಲಕ್ಷಣವು ‘ಪ್ರಿಂಟರ್’ನಿಂದ ಸೆಟ್ ಮಾಡಲ್ಪಡುತ್ತದೆ. ಇಮೇಜ್ನಲ್ಲಿ ನೀವು ಅದನ್ನು ಸೆಟ್ ಮಾಡಬೇಕೆನ್ನುವುದು ಅಷ್ಟು ಮುಖ್ಯವಲ್ಲ.
04:21 ಆದರೆ ಯಾರಾದರೂ ನಿಮ್ಮನ್ನು ಇಮೇಜನ್ನು 200 (ಇನ್ನೂರು) ರಿಂದ 300 (ಮುನ್ನೂರು) ‘ಡಾಟ್ಸ್ ಪರ್ ಇಂಚ್’ಗೆ ಸೆಟ್ ಮಾಡಲು ಹೇಳಿದರೆ, ಸುಮ್ಮನೆ ಮಾಡಿಬಿಡಿ, ಇದನ್ನು ಚರ್ಚಿಸಬೇಡಿ.
04:32 ಇದರ ಬಗ್ಗೆ ಅರ್ಥಪೂರ್ಣ ಚರ್ಚೆಗಳಿಗೆ ಕೆಲವು ‘ಲಿಂಕ್’ಗಳನ್ನು ‘ಶೋ ನೋಟ್ಸ್’ನಲ್ಲಿ ನಾನು ಹಾಕುತ್ತೇನೆ. ನೀವು ಅವುಗಳನ್ನು ಅಲ್ಲಿ ನೋಡಬಹುದು.
04:39 ನನಗೆ ಈ ಇಮೇಜ್, 'ಬಿಲ್-ಬೋರ್ಡ್ಸ್’ಗಳಿಗೆ ಬೇಕಾಗಿದ್ದರೆ ಆವಾಗ ನಾನು ಇಮೇಜನ್ನು ಸ್ಕೇಲ್ ಮಾಡಬೇಕಾಗುತ್ತದೆ.
04:44 5 ‘ಡಾಟ್ಸ್ ಪರ್ ಇಂಚ್‘, ‘ಬಿಲ್-ಬೋರ್ಡ್’ಗಾಗಿ ಉತ್ತಮ ವ್ಯಾಲ್ಯೂ ಆಗಿದೆ ಎಂದು ನಾನು ಭಾವಿಸುತ್ತೇನೆ.
04:51 ಇಮೇಜನ್ನು ಸ್ಕೇಲ್ ಮಾಡಿ, ಏನೂ ಬದಲಾಯಿಸಿಲ್ಲವೆಂದು ನೀವು ನೋಡಬಹುದು. ಆದರೆ, ಈಗ Image Properties ನಲ್ಲಿ, ಪ್ರಿಂಟ್ ಸೈಜ್, ‘100 by 76’ ಇಂಚ್’ಗಳು ಎಂದರೆ 2 ಮೀಟರ್. 50 ಸೆಂಟಿಮೀಟರ್ ಆಗಿದೆ. ಇಲ್ಲಿಯ ಈ ‘ಇಮೇಜ್’ನೊಂದಿಗೆ ಅದು ಸೊಗಸಾದ ಪೋಸ್ಟರ್ ಆಗುತ್ತದೆ.
05:10 ನೀವು ಸ್ವತಃ ಪ್ರಿಂಟ್ ಮಾಡದಿದ್ದರೆ, ನಮಗೆ ಇಲ್ಲಿ ಈ ರೆಸಲ್ಯೂಶನ್ ಎನ್ನುವುದು ಮೂಲತಃ ಅರ್ಥಹೀನವಾಗಿದೆ.
05:18 ಹೆಚ್ಚಿನ ಮಾಹಿತಿಗಾಗಿ, ಕೆಳಗೆ ತೊರಿಸಿದ ಲಿಂಕ್ ಗೆ ಹೋಗಿ. http://meetthegimp.org ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ.
05:30 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪಕ್ಕಾಗಿ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------------

Contributors and Content Editors

NaveenBhat, Sandhya.np14