LibreOffice-Suite-Base/C2/Modify-a-simple-form/Kannada

From Script | Spoken-Tutorial
Revision as of 13:49, 26 November 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಲಿಬ್ರೆ ಆಫೀಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಫಾರ್ಮ್ ಅನ್ನು ಮಾರ್ಪಡಿಸುವ ಈ ಟ್ಯುಟೋರಿಯಲ್ ನಲ್ಲಿ, ನಾವು ಒಂದು ಫಾರ್ಮ್ ನಲ್ಲಿ ಡೇಟಾ ಅನ್ನು ಎಂಟರ್ ಮಾಡುವುದು ಮತ್ತು ಮಾರ್ಪಡಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
00:14 ಹಿಂದಿನ ಟ್ಯುಟೋರಿಯಲ್ ನಲ್ಲಿ, ನಾವು ಲಿಬ್ರೆ ಆಫೀಸ್ ಬೇಸ್ ಅನ್ನು ಬಳಸಿ ಫಾರ್ಮ್ ನ ತಯಾರಿಕೆಯನ್ನು ಕಲಿತಿದ್ದೆವು.
00:22 ನಾವು ನಮ್ಮ ಉದಾಹರಣೆಯ Library ಡೇಟಾ ಬೇಸ್ ನಲ್ಲಿ ಒಂದು ಸರಳವಾದ Books data entry ಫಾರ್ಮ್ ಅನ್ನು ತಯಾರಿಸಿದ್ದೆವು.
00:29 ಈ ಫಾರ್ಮ್ ಅನ್ನು ಬಳಸಿ ನಾವು Books ಸೂಚಿಯಲ್ಲಿ ಡೇಟಾ ಅನ್ನು ಹೇಗೆ ಎಂಟರ್ ಮಾಡಬಹುದು ಎನ್ನುವುದನ್ನು ನೋಡೋಣ.
00:39 ಇದು ಈಗಾಗಲೇ ಓಪನ್ ಆಗಿಲ್ಲದಿದ್ದರೆ, ನಾವು ಎಲ್ಲಕ್ಕಿಂತ ಮೊದಲು Libre Office Base program ಅನ್ನು ಆರಂಭಿಸೋಣ.
00:48 ಮತ್ತು ನಮ್ಮ Library ಡೇಟಾ ಬೇಸ್ ಅನ್ನು ತೆರೆಯೋಣ.
00:52 ಬೇಸ್ ಈಗಾಗಲೇ ತೆರೆದಿದ್ದರೆ, ನಾವು File ಮೆನು ನ ಒಳಗೆ Open ನ ಮೇಲೆ ಕ್ಲಿಕ್ ಮಾಡಿ Library ಡೇಟಾ ಬೇಸ್ ಅನ್ನು ಓಪನ್ ಮಾಡಬಹುದು.
01:03 ಅಥವಾ ಈ File ಮೆನು ನ ಒಳಗೆ Recent Documents ನ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಬಹುದು.
01:08 ಈಗ ನಾವು Library ಡೇಟಾ ಬೇಸ್ ನಲ್ಲಿ ಇದ್ದೇವೆ.
01:12 ಎಡಕ್ಕೆ ಇರುವ ಪೆನಲ್ ನ ಮೇಲೆ Database ನ ಸೂಚಿಯಲ್ಲಿ Forms icon ಮೇಲೆ ಕ್ಲಿಕ್ ಮಾಡೋಣ.
01:18 ಈ ವಿಂಡೋದ ಮಧ್ಯದಲ್ಲಿ ಫಾರ್ಮ್ ನ ಕೆಳಗಿರುವ 'Books Data entry form' ಅನ್ನು ಹೈಲೈಟ್ ಮಾಡಲಾಗಿದೆ ಎಂಬುದನ್ನು ಗಮನಿಸಿ.
01:28 ಈ ಫಾರ್ಮ್ ಹೆಸರಿನ ಮೇಲೆ ರೈಟ್ ಕ್ಲಿಕ್ ಮಾಡೋಣ ಮತ್ತು Open ನ ಮೇಲೆ ಕ್ಲಿಕ್ ಮಾಡೋಣ.
01:33 ಈಗ, ನಾವು Books ಸೂಚಿಯ ಫೀಲ್ಡ್ ಗೆ ಸಮನಾದ ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ನೊಂದಿಗೆ ನೀಲಿ ಬ್ಯಾಗ್ರೌಂಡ್ ಹೊಂದಿರುವ ವಿಂಡೋ ಅನ್ನು ನೋಡುತ್ತಿದ್ದೇವೆ.
01:45 ಪ್ರತಿಯೊಂದು ಫೀಲ್ಡ್ ಗೆ ಹೋಗುವುದಕ್ಕಾಗಿ ಟ್ಯಾಬ್ ಕೀ ಮೇಲೆ ಕ್ಲಿಕ್ ಮಾಡೋಣ. ಮತ್ತು ಅದೇ ರೀತಿ ನಾವು ಕೊನೆಯವರೆಗೆ ಹೋದಾಗ, ಬೇಸ್ ಮುಂದಿನ ರೆಕಾರ್ಡ್ ಅನ್ನು ತೆರೆಯುತ್ತದೆ.
01:56 ಈ ರೀತಿಯಲ್ಲಿ ನಾವು ರೆಕಾರ್ಡ್ ನಲ್ಲಿ ಮುಂದುವರೆಯಬಹುದು.
02:00 ಅಥವಾ ರೆಕಾರ್ಡ್ಸ್ ಗಳ ಮಧ್ಯದಲ್ಲಿ ಹೋಗಲು ನಾವು ಕೆಳಗಿನ ಟೂಲ್ ಬಾರ್ ನಲ್ಲಿ ಕಪ್ಪು ಬಣ್ಣದ ತ್ರಿಕೋಣ ಐಕಾನ್ ಗಳನ್ನೂ ಕೂಡ ಬಳಸಬಹುದು.
02:10 ಇನ್ನೊಂದು ರೀತಿಯಲ್ಲಿ, ಒಂದು ನಿರ್ದಿಷ್ಟವಾದ ರೆಕಾರ್ಡ್ ಗೆ ಸಹಜವಾಗಿ ಹೋಗಲು ಬಾಟಮ್ ಟೂಲ್ ಬಾರ್ ನಲ್ಲಿ ರೆಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು enter ಕೀ ಅಥವಾ tab ಕೀ ಅನ್ನು ಒತ್ತಿ.
02:23 ಐದನೆಯದಾದ ಕೊನೆಯ ರೆಕಾರ್ಡ್ ಗೆ ಹೋಗೋಣ.
02:29 ಈಗ ಒಂದು ಹೊಸ ರೆಕಾರ್ಡ್ ಅನ್ನು ಜೋಡಿಸೋಣ.
02:34 ಇದನ್ನು ಮಾಡಲು, New Record ಐಕಾನ್ ಮೇಲೆ ಕ್ಲಿಕ್ ಮಾಡಿರಿ. ಅದು ಬಾಟಮ್ ಟೂಲ್ ಬಾರ್ ನಲ್ಲಿರುವ ಕೊನೆಯ ರೆಕಾರ್ಡ್ ಐಕಾನ್ ನ ಎರಡನೇ ಬಲಕ್ಕಿದೆ.
02:46 ನಾವು ಖಾಲಿಯಾದ ಟೆಕ್ಸ್ಟ್ ಬಾಕ್ಸ್ ಗಳನ್ನು ಮತ್ತು ಕೆಳಗಡೆ ಗೋಚರಿಸುತ್ತಿರುವ ರೆಕಾರ್ಡ್ ಸಂಖ್ಯೆ 6 ಅನ್ನು ನೋಡುತ್ತಿದ್ದೇವೆ ಎಂಬುದನ್ನು ಗಮನಿಸಿ.
02:55 ಈಗ ನಾವು ಒಂದು ಹೊಸ ಪುಸ್ತಕದ ಮಾಹಿತಿಯ ಕುರಿತು ಒಂದು ಹೊಸ ರೆಕಾರ್ಡ್ ಅನ್ನು ಸೇರಿಸಲು ತಯಾರಿದ್ದೇವೆ.
03:03 Title ಟೆಕ್ಸ್ಟ್ ಬಾಕ್ಸ್ ನಲ್ಲಿ 'Paradise Lost' ಅಂತ ಟೈಪ್ ಮಾಡೋಣ. ಮತ್ತು ಮುಂದಿನ ಫೀಲ್ಡ್ ಗೆ ಹೋಗಲು tab ಕೀ ಅನ್ನು ಬಳಸೋಣ.
03:17 author ಎಂಬುದರ ಮುಂದೆ 'John Milton' ಅಂತ ಟೈಪ್ ಮಾಡೋಣ.
03:23 PublishYear ನ ಮುಂದೆ '1975' ಅಂತ ಟೈಪ್ ಮಾಡೋಣ.
03:28 Publisher ನ ಮುಂದೆ 'Oxford'
03:31 ಮತ್ತು price ನ ಮುಂದೆ 200 ಎಂದು ಟೈಪ್ ಮಾಡೋಣ.
03:36 ಇಲ್ಲಿ ನಾವು Books Data Entry Form ಅನ್ನು ಬಳಸಿ ಒಂದು ಹೊಸದಾದ ರೆಕಾರ್ಡ್ ಅನ್ನು Books ಟೇಬಲ್ ನಲ್ಲಿ ಈಗಷ್ಟೇ ಎಂಟರ್ ಮಾಡಿದ್ದೇವೆ.
03:45 ನಾವು ಈ ವಿಂಡೋ ಅನ್ನು ಕ್ಲೋಸ್ ಮಾಡುತ್ತೇವೆ.
03:47 ಈ ರೀತಿಯಾಗಿ ನಾವು ಇನ್ನೂ ಹೆಚ್ಚಿನ ರೆಕಾರ್ಡ್ ಗಳನ್ನು ಅಥವಾ ಡೇಟಾ ಅನ್ನು ಸೇರಿಸಬಹುದು.
03:53 ನಾವು ಈಗಷ್ಟೇ ಎಂಟರ್ ಮಾಡಿದ ಕೊನೆಯ ರೆಕಾರ್ಡ್ ನೊಂದಿಗೆ ಸೇರಿಸಿ Baseಎನ್ನುವುದು Books ಟೇಬಲ್ ಅನ್ನು ಅಪ್ ಡೇಟ್ ಮಾಡಿದೆಯಾ ಎಂಬುದನ್ನು ನೋಡೋಣ.
04:02 ಇದಕ್ಕಾಗಿ, ಲಿಬ್ರೆ ಆಫೀಸ್ ನ ಮುಖ್ಯ ವಿಂಡೋದಲ್ಲಿ, ಬಲ ಪೆನಲ್ ನಲ್ಲಿರುವ Books ಟೇಬಲ್ ಮೇಲೆ ಡಬಲ್ ಕ್ಲಿಕ್ ಮಾಡೋಣ.
04:12 ಇಲ್ಲಿ ನಾವು ಫಾರ್ಮ್ ನ ಮುಖಾಂತರ ಎಂಟರ್ ಮಾಡಿದ ಹೊಸ ರೆಕಾರ್ಡ್ ಅನ್ನು ಗಮನಿಸಿ.
04:18 ಸರಿ, ನಾವು ಈ ವಿಂಡೋ ಅನ್ನು ಕ್ಲೋಸ್ ಮಾಡೋಣ.
04:23 ಮುಂದೆ, ನಮ್ಮ ಫಾರ್ಮ್ ನಲ್ಲಿ ಸರಳವಾದ ಮಾರ್ಪಾಡುಗಳನ್ನು ಹೇಗೆ ಮಾಡುವುದು ಎಂಬುದನ್ನು ಕಲಿಯೋಣ.
04:30 ನಾವು ಎಡಗಡೆಯ ಪೆನಲ್ ನಲ್ಲಿ ಡೇಟಾ ಬೇಸ್ ಸೂಚಿಯಲ್ಲಿರುವ Forms ಐಕಾನ್ ಮೇಲೆ ಕ್ಲಿಕ್ ಮಾಡುತ್ತೇವೆ .
04:37 ಮತ್ತು ಇದರ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ 'edit' ಅನ್ನು ಆಯ್ಕೆ ಮಾಡಿ , ಮಾರ್ಪಾಡು ಮಾಡಲು 'Books Data Entry form' ಅನ್ನು ತೆರೆಯಿರಿ.
04:47 ಈಗ ಒಂದು ಪರಿಚಿತವಾದ ವಿಂಡೋ ತೆರೆದುಕೊಳ್ಳುತ್ತದೆ.
04:51 ಇದರ ಹೊರತಾಗಿ, ನೀವು ಲೇಬಲ್ 'title' ಮೇಲೆ ಕ್ಲಿಕ್ ಮಾಡಿದರೆ, ಲೇಬಲ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳನ್ನು ಮುಚ್ಚುತ್ತಿರುವ ಕೆಲವು ಸಣ್ಣ ಸಣ್ಣ ಹಸಿರಿನ ಬಾಕ್ಸ್ ಗಳನ್ನು ನೋಡುತ್ತೀರಿ.
05:03 ಇದರರ್ಥ ನಾವು design window ಫಾರ್ಮ್ ನಲ್ಲಿ ಇದ್ದೇವೆ.
05:08 ಮತ್ತು ನಾವು ಫಾರ್ಮ್ ನ ರೂಪ ಮತ್ತು ಅದರ ಎಲಿಮೆಂಟ್ಸ್ ಗಳ ಜೊತೆಗೆ ಅದರ ಕಾರ್ಯವಿಧಾನವನ್ನು ಬದಲಾಯಿಸಬಹುದು.
05:17 ಉದಾಹರಣೆಗೆ, ನಾವು ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳ ಸ್ಥಾನವನ್ನು ಮತ್ತು ಆಕಾರವನ್ನು ಬದಲಾಯಿಸಬಹುದು.
05:25 ಇವುಗಳನ್ನು properties ಅಂತಲೂ ಹೇಳುತ್ತಾರೆ.
05:28 ಲೇಬಲ್ ಟೈಟಲ್ ಮೇಲೆ ಡಬಲ್ ಕ್ಲಿಕ್ ಮಾಡಿ.
05:31 ಇದು Properties ಹೆಸರಿನ ಒಂದು ಸಣ್ಣ popup ವಿಂಡೋ ಅನ್ನು ತೆರೆಯುತ್ತದೆ.
05:38 ಇಲ್ಲಿ ಅನೇಕ ಪ್ರಕಾರದ ಎಲಿಮೆಂಟ್ಸ್ ಗಳನ್ನು ಗಮನಿಸಿ.
05:48 ಈಗ ಲೇಬಲ್ 'author' ಮೇಲೆ ಕ್ಲಿಕ್ ಮಾಡೋಣ. Properties ವಿಂಡೋ ರಿಫ್ರೆಶ್ ಆಗುವುದನ್ನು ಮತ್ತು Author ಲೇಬಲ್ ನ ಪ್ರಾಪರ್ಟಿಗಳನ್ನು ತೋರಿಸುವುದನ್ನು ಗಮನಿಸಿ.
06:01 ಹಾಗಾಗಿ, ಅದೇ ರೀತಿ ನಾವು ಫಾರ್ಮ್ ನ ಮೇಲೆ ಅನೇಕ ಪ್ರಕಾರದ ಎಲಿಮೆಂಟ್ಸ್ ಮೇಲೆ ಕ್ಲಿಕ್ ಮಾಡೋಣ. ಆಗ Properties ವಿಂಡೋ ಆಯ್ಕೆಯಾದ ಎಲಿಮೆಂಟ್ ನ ವಿಶೇಷತೆಯನ್ನು ತೋರಿಸಲು ರಿಪ್ರೆಶ್ ಆಗುವುದನ್ನು ಕಾಣುತ್ತೇವೆ.
06:14 ಈಗ, Properties ವಿಂಡೋ ಟೈಟಲ್ Properties MultiSelection ನ ರೀತಿಯಲ್ಲೇ ಓದುತ್ತದೆ.
06:21 ಏಕೆಂದರೆ author ಲೇಬಲ್ ಮತ್ತು ಅದರ ಟೆಕ್ಸ್ಟ್ ಬಾಕ್ಸ್ ಇದರ ಪಕ್ಕದಲ್ಲಿಯೇ ಇದೆ. ಹಸಿರು ಬಾಕ್ಸ್ ಗಳ ಒಂದು ಗುಂಪಿನಲ್ಲಿ ಇಡಲ್ಪಟ್ಟಿದೆ.
06:34 Base ಎನ್ನುವುದು ಸಹಜವಾಗಿ ಫಾರ್ಮ್ ನಲ್ಲಿ ಲೇಬಲ್ಸ್ ಅನ್ನು ಮತ್ತು ಅದಕ್ಕೆ ಅನುಗುಣವಾದ ಟೆಕ್ಸ್ಟ್ ಬಾಕ್ಸ್ ಗಳನ್ನು ಗುಂಪಾಗಿ ವಿಂಗಡಿಸುತ್ತದೆ .

ಇದನ್ನು ನಾವು ಗುಂಪಿನಿಂದ ಬೇರ್ಪಡಿಸಬಹುದು.

06:44 Title ಲೇಬಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ ಕೆಳಗಿರುವ 'Group' ನ ಮೇಲೆ ಕ್ಲಿಕ್ ಮಾಡಿ, ಆಮೇಲೆ 'Ungroup' ನ ಮೇಲೆ ಕ್ಲಿಕ್ ಮಾಡಿ.
06:54 ಈಗ ಲೇಬಲ್, ಟೈಟಲ್ ಮತ್ತು ಅದರ ಟೆಕ್ಸ್ಟ್ ಬಾಕ್ಸ್ ಗುಂಪಿನಿಂದ ಬೇರ್ಪಟ್ಟಿರುವುದನ್ನು ನಾವು ಕಾಣುತ್ತೇವೆ.
07:02 ಈ ರೀತಿಯಾಗಿ, ನಾವು ಫಾರ್ಮ್ ನಲ್ಲಿ ವಿಶಿಷ್ಟವಾದ ಎಲಿಮೆಂಟ್ಸ್ ಗಳ ಪ್ರಾಪರ್ಟಿಗಳನ್ನು ಮಾರ್ಪಡಿಸಬಹುದು.
07:10 ಈಗ ಟೈಟಲ್ ಟೆಕ್ಸ್ಟ್ ಬಾಕ್ಸ್ ನಲ್ಲಿ ಟೂಲ್ ಟಿಪ್ ಅನ್ನು ಸೇರಿಸೋಣ.
07:16 ಈಗ Properties ವಿಂಡೋನಲ್ಲಿ ಕೆಳತನಕ ಸ್ಕ್ರೋಲ್ ಮಾಡೋಣ.
07:22 ಇಲ್ಲಿ 'Help text' ಲೇಬಲ್ ಅನ್ನು ಗಮನಿಸಿ, ಈಗ 'Enter the title of the book here' ಅಂತ ಟೈಪ್ ಮಾಡೋಣ.
07:32 ಈಗ ಮೇಲ್ಭಾಗದಲ್ಲಿ File ಮೆನು ನ ಕೆಳಗೆ Save ಐಕಾನ್ ಮೇಲೆ ಕ್ಲಿಕ್ ಮಾಡಿ ಫಾರ್ಮ್ ಅನ್ನು ಸೇವ್ ಮಾಡೋಣ. ಮತ್ತು ಈ ವಿಂಡೋ ಅನ್ನು ಕ್ಲೋಸ್ ಮಾಡೋಣ.
07:46 ಈಗ ನಮ್ಮ ಫಾರ್ಮ್ ಅನ್ನು ನಾವು ಮಾರ್ಪಡಿಸಿದ ಮೇಲೆ ಹೇಗೆ ಕಾಣುತ್ತದೆಯೆಂದು ನೋಡೋಣ.
07:54 ಇದಕ್ಕಾಗಿ Base ನ ಮುಖ್ಯ ವಿಂಡೋ ಗೆ ಹೋಗೋಣ. ಎಡ ಪೆನಲ್ ನಲ್ಲಿ Forms ಐಕಾನ್ ಮೇಲೆ ಕ್ಲಿಕ್ ಮಾಡಿರಿ.
08:03 ಮತ್ತು ಬಲಗಡೆಯ ಪೆನಲ್ ನಲ್ಲಿ 'Books Data Entry Form' ನ ಮೇಲೆ ಡಬಲ್ ಕ್ಲಿಕ್ ಮಾಡಿರಿ.
08:10 ಮೌಸ್ ಅನ್ನು ಟೈಟಲ್ ಲೇಬಲ್ ಅಥವಾ ಟೆಕ್ಸ್ಟ್ ಬಾಕ್ಸ್ ನ ಮೇಲೆ ತೋರಿಸೋಣ.
08:17 'Enter the title of the book here' ಎಂದು ಹೇಳುವ ಒಂದು ಟೂಲ್ ಟಿಪ್ ಗೋಚರಿಸುವುದನ್ನು ಗಮನಿಸಿ.
08:24 ಈಗ ನಾವು, ನಮ್ಮ ಫಾರ್ಮ್ ನಲ್ಲಿ ಸರಳವಾದ ಮಾರ್ಪಾಡನ್ನು ಮಾಡುವುದು ಹೇಗೆ ಎಂಬುದನ್ನು ಕಲಿತಿದ್ದೇವೆ.
08:31 ಒಂದು ಫಾರ್ಮ್ ನಲ್ಲಿ ಹೆಚ್ಚು ಮಾರ್ಪಾಡನ್ನು ಹೇಗೆ ಮಾಡುವುದು ಎನ್ನುವುದನ್ನು ನಾವು Base ಟ್ಯುಟೋರಿಯಲ್ ನ ಮುಂದಿನ ಭಾಗದಲ್ಲಿ ನೋಡಲಿದ್ದೇವೆ.
08:39 ಇಲ್ಲಿ ಒಂದು ನಿಯತಕಾರ್ಯ (ಅಸೈನ್ ಮೆಂಟ್)ವಿದೆ.
08:41 Members ಟೇಬಲ್ ಗಾಗಿ ಒಂದು ಸರಳವಾದ ಫಾರ್ಮ್ ಅನ್ನು ತಯಾರಿಸಿ.
08:46 ಈಗ ನಾವು ಲಿಬ್ರೆ ಆಫೀಸ್ ಬೇಸ್ ನಲ್ಲಿ, “ಫಾರ್ಮ್ ನಲ್ಲಿ ಮಾರ್ಪಾಡು” ಎಂಬ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
08:52 ಸಂಕ್ಷೇಪವಾಗಿ, ಒಂದು ಫಾರ್ಮ್ ನಲ್ಲಿ ಡೇಟಾ ಅನ್ನು ಎಂಟರ್ ಮಾಡುವುದು ಹೇಗೆ ? ಮತ್ತು ಫಾರ್ಮ್ ನಲ್ಲಿ ಮಾರ್ಪಾಡನ್ನು ಹೇಗೆ ಮಾಡುವುದು ಎಂಬುದನ್ನು ಕಲಿತಿದ್ದೇವೆ.
09:00 ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
09:12 ಈ ಪ್ರೊಜೆಕ್ಟ್ http://spoken-tutorial.org. ಮೂಲಕ ಸಂಯೋಜಿಸಲಾಗಿದೆ.
09:17 ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್-ನಲ್ಲಿ ಸಿಗುತ್ತದೆ.
09:22 ಈ ಟ್ಯುಟೋರಿಯಲ್ ನ ಅನುವಾದಕರು ಡಾ. ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Vasudeva ahitanal