LibreOffice-Suite-Base/C2/Modify-a-simple-form/Kannada
From Script | Spoken-Tutorial
Time | Narration |
00:00 | ಲಿಬ್ರೆ ಆಫೀಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಫಾರ್ಮ್ ಅನ್ನು ಮಾರ್ಪಡಿಸುವ ಈ ಟ್ಯುಟೋರಿಯಲ್ ನಲ್ಲಿ, ನಾವು ಒಂದು ಫಾರ್ಮ್ ನಲ್ಲಿ ಡೇಟಾ ಅನ್ನು ಎಂಟರ್ ಮಾಡುವುದು ಮತ್ತು ಮಾರ್ಪಡಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
00:14 | ಹಿಂದಿನ ಟ್ಯುಟೋರಿಯಲ್ ನಲ್ಲಿ, ನಾವು ಲಿಬ್ರೆ ಆಫೀಸ್ ಬೇಸ್ ಅನ್ನು ಬಳಸಿ ಫಾರ್ಮ್ ನ ತಯಾರಿಕೆಯನ್ನು ಕಲಿತಿದ್ದೆವು. |
00:22 | ನಾವು ನಮ್ಮ ಉದಾಹರಣೆಯ Library ಡೇಟಾ ಬೇಸ್ ನಲ್ಲಿ ಒಂದು ಸರಳವಾದ Books data entry ಫಾರ್ಮ್ ಅನ್ನು ತಯಾರಿಸಿದ್ದೆವು. |
00:29 | ಈ ಫಾರ್ಮ್ ಅನ್ನು ಬಳಸಿ ನಾವು Books ಸೂಚಿಯಲ್ಲಿ ಡೇಟಾ ಅನ್ನು ಹೇಗೆ ಎಂಟರ್ ಮಾಡಬಹುದು ಎನ್ನುವುದನ್ನು ನೋಡೋಣ. |
00:39 | ಇದು ಈಗಾಗಲೇ ಓಪನ್ ಆಗಿಲ್ಲದಿದ್ದರೆ, ನಾವು ಎಲ್ಲಕ್ಕಿಂತ ಮೊದಲು Libre Office Base program ಅನ್ನು ಆರಂಭಿಸೋಣ. |
00:48 | ಮತ್ತು ನಮ್ಮ Library ಡೇಟಾ ಬೇಸ್ ಅನ್ನು ತೆರೆಯೋಣ. |
00:52 | ಬೇಸ್ ಈಗಾಗಲೇ ತೆರೆದಿದ್ದರೆ, ನಾವು File ಮೆನು ನ ಒಳಗೆ Open ನ ಮೇಲೆ ಕ್ಲಿಕ್ ಮಾಡಿ Library ಡೇಟಾ ಬೇಸ್ ಅನ್ನು ಓಪನ್ ಮಾಡಬಹುದು. |
01:03 | ಅಥವಾ ಈ File ಮೆನು ನ ಒಳಗೆ Recent Documents ನ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಬಹುದು. |
01:08 | ಈಗ ನಾವು Library ಡೇಟಾ ಬೇಸ್ ನಲ್ಲಿ ಇದ್ದೇವೆ. |
01:12 | ಎಡಕ್ಕೆ ಇರುವ ಪೆನಲ್ ನ ಮೇಲೆ Database ನ ಸೂಚಿಯಲ್ಲಿ Forms icon ಮೇಲೆ ಕ್ಲಿಕ್ ಮಾಡೋಣ. |
01:18 | ಈ ವಿಂಡೋದ ಮಧ್ಯದಲ್ಲಿ ಫಾರ್ಮ್ ನ ಕೆಳಗಿರುವ 'Books Data entry form' ಅನ್ನು ಹೈಲೈಟ್ ಮಾಡಲಾಗಿದೆ ಎಂಬುದನ್ನು ಗಮನಿಸಿ. |
01:28 | ಈ ಫಾರ್ಮ್ ಹೆಸರಿನ ಮೇಲೆ ರೈಟ್ ಕ್ಲಿಕ್ ಮಾಡೋಣ ಮತ್ತು Open ನ ಮೇಲೆ ಕ್ಲಿಕ್ ಮಾಡೋಣ. |
01:33 | ಈಗ, ನಾವು Books ಸೂಚಿಯ ಫೀಲ್ಡ್ ಗೆ ಸಮನಾದ ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ನೊಂದಿಗೆ ನೀಲಿ ಬ್ಯಾಗ್ರೌಂಡ್ ಹೊಂದಿರುವ ವಿಂಡೋ ಅನ್ನು ನೋಡುತ್ತಿದ್ದೇವೆ. |
01:45 | ಪ್ರತಿಯೊಂದು ಫೀಲ್ಡ್ ಗೆ ಹೋಗುವುದಕ್ಕಾಗಿ ಟ್ಯಾಬ್ ಕೀ ಮೇಲೆ ಕ್ಲಿಕ್ ಮಾಡೋಣ. ಮತ್ತು ಅದೇ ರೀತಿ ನಾವು ಕೊನೆಯವರೆಗೆ ಹೋದಾಗ, ಬೇಸ್ ಮುಂದಿನ ರೆಕಾರ್ಡ್ ಅನ್ನು ತೆರೆಯುತ್ತದೆ. |
01:56 | ಈ ರೀತಿಯಲ್ಲಿ ನಾವು ರೆಕಾರ್ಡ್ ನಲ್ಲಿ ಮುಂದುವರೆಯಬಹುದು. |
02:00 | ಅಥವಾ ರೆಕಾರ್ಡ್ಸ್ ಗಳ ಮಧ್ಯದಲ್ಲಿ ಹೋಗಲು ನಾವು ಕೆಳಗಿನ ಟೂಲ್ ಬಾರ್ ನಲ್ಲಿ ಕಪ್ಪು ಬಣ್ಣದ ತ್ರಿಕೋಣ ಐಕಾನ್ ಗಳನ್ನೂ ಕೂಡ ಬಳಸಬಹುದು. |
02:10 | ಇನ್ನೊಂದು ರೀತಿಯಲ್ಲಿ, ಒಂದು ನಿರ್ದಿಷ್ಟವಾದ ರೆಕಾರ್ಡ್ ಗೆ ಸಹಜವಾಗಿ ಹೋಗಲು ಬಾಟಮ್ ಟೂಲ್ ಬಾರ್ ನಲ್ಲಿ ರೆಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು enter ಕೀ ಅಥವಾ tab ಕೀ ಅನ್ನು ಒತ್ತಿ. |
02:23 | ಐದನೆಯದಾದ ಕೊನೆಯ ರೆಕಾರ್ಡ್ ಗೆ ಹೋಗೋಣ. |
02:29 | ಈಗ ಒಂದು ಹೊಸ ರೆಕಾರ್ಡ್ ಅನ್ನು ಜೋಡಿಸೋಣ. |
02:34 | ಇದನ್ನು ಮಾಡಲು, New Record ಐಕಾನ್ ಮೇಲೆ ಕ್ಲಿಕ್ ಮಾಡಿರಿ. ಅದು ಬಾಟಮ್ ಟೂಲ್ ಬಾರ್ ನಲ್ಲಿರುವ ಕೊನೆಯ ರೆಕಾರ್ಡ್ ಐಕಾನ್ ನ ಎರಡನೇ ಬಲಕ್ಕಿದೆ. |
02:46 | ನಾವು ಖಾಲಿಯಾದ ಟೆಕ್ಸ್ಟ್ ಬಾಕ್ಸ್ ಗಳನ್ನು ಮತ್ತು ಕೆಳಗಡೆ ಗೋಚರಿಸುತ್ತಿರುವ ರೆಕಾರ್ಡ್ ಸಂಖ್ಯೆ 6 ಅನ್ನು ನೋಡುತ್ತಿದ್ದೇವೆ ಎಂಬುದನ್ನು ಗಮನಿಸಿ. |
02:55 | ಈಗ ನಾವು ಒಂದು ಹೊಸ ಪುಸ್ತಕದ ಮಾಹಿತಿಯ ಕುರಿತು ಒಂದು ಹೊಸ ರೆಕಾರ್ಡ್ ಅನ್ನು ಸೇರಿಸಲು ತಯಾರಿದ್ದೇವೆ. |
03:03 | Title ಟೆಕ್ಸ್ಟ್ ಬಾಕ್ಸ್ ನಲ್ಲಿ 'Paradise Lost' ಅಂತ ಟೈಪ್ ಮಾಡೋಣ. ಮತ್ತು ಮುಂದಿನ ಫೀಲ್ಡ್ ಗೆ ಹೋಗಲು tab ಕೀ ಅನ್ನು ಬಳಸೋಣ. |
03:17 | author ಎಂಬುದರ ಮುಂದೆ 'John Milton' ಅಂತ ಟೈಪ್ ಮಾಡೋಣ. |
03:23 | PublishYear ನ ಮುಂದೆ '1975' ಅಂತ ಟೈಪ್ ಮಾಡೋಣ. |
03:28 | Publisher ನ ಮುಂದೆ 'Oxford' |
03:31 | ಮತ್ತು price ನ ಮುಂದೆ 200 ಎಂದು ಟೈಪ್ ಮಾಡೋಣ. |
03:36 | ಇಲ್ಲಿ ನಾವು Books Data Entry Form ಅನ್ನು ಬಳಸಿ ಒಂದು ಹೊಸದಾದ ರೆಕಾರ್ಡ್ ಅನ್ನು Books ಟೇಬಲ್ ನಲ್ಲಿ ಈಗಷ್ಟೇ ಎಂಟರ್ ಮಾಡಿದ್ದೇವೆ. |
03:45 | ನಾವು ಈ ವಿಂಡೋ ಅನ್ನು ಕ್ಲೋಸ್ ಮಾಡುತ್ತೇವೆ. |
03:47 | ಈ ರೀತಿಯಾಗಿ ನಾವು ಇನ್ನೂ ಹೆಚ್ಚಿನ ರೆಕಾರ್ಡ್ ಗಳನ್ನು ಅಥವಾ ಡೇಟಾ ಅನ್ನು ಸೇರಿಸಬಹುದು. |
03:53 | ನಾವು ಈಗಷ್ಟೇ ಎಂಟರ್ ಮಾಡಿದ ಕೊನೆಯ ರೆಕಾರ್ಡ್ ನೊಂದಿಗೆ ಸೇರಿಸಿ Baseಎನ್ನುವುದು Books ಟೇಬಲ್ ಅನ್ನು ಅಪ್ ಡೇಟ್ ಮಾಡಿದೆಯಾ ಎಂಬುದನ್ನು ನೋಡೋಣ. |
04:02 | ಇದಕ್ಕಾಗಿ, ಲಿಬ್ರೆ ಆಫೀಸ್ ನ ಮುಖ್ಯ ವಿಂಡೋದಲ್ಲಿ, ಬಲ ಪೆನಲ್ ನಲ್ಲಿರುವ Books ಟೇಬಲ್ ಮೇಲೆ ಡಬಲ್ ಕ್ಲಿಕ್ ಮಾಡೋಣ. |
04:12 | ಇಲ್ಲಿ ನಾವು ಫಾರ್ಮ್ ನ ಮುಖಾಂತರ ಎಂಟರ್ ಮಾಡಿದ ಹೊಸ ರೆಕಾರ್ಡ್ ಅನ್ನು ಗಮನಿಸಿ. |
04:18 | ಸರಿ, ನಾವು ಈ ವಿಂಡೋ ಅನ್ನು ಕ್ಲೋಸ್ ಮಾಡೋಣ. |
04:23 | ಮುಂದೆ, ನಮ್ಮ ಫಾರ್ಮ್ ನಲ್ಲಿ ಸರಳವಾದ ಮಾರ್ಪಾಡುಗಳನ್ನು ಹೇಗೆ ಮಾಡುವುದು ಎಂಬುದನ್ನು ಕಲಿಯೋಣ. |
04:30 | ನಾವು ಎಡಗಡೆಯ ಪೆನಲ್ ನಲ್ಲಿ ಡೇಟಾ ಬೇಸ್ ಸೂಚಿಯಲ್ಲಿರುವ Forms ಐಕಾನ್ ಮೇಲೆ ಕ್ಲಿಕ್ ಮಾಡುತ್ತೇವೆ . |
04:37 | ಮತ್ತು ಇದರ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ 'edit' ಅನ್ನು ಆಯ್ಕೆ ಮಾಡಿ , ಮಾರ್ಪಾಡು ಮಾಡಲು 'Books Data Entry form' ಅನ್ನು ತೆರೆಯಿರಿ. |
04:47 | ಈಗ ಒಂದು ಪರಿಚಿತವಾದ ವಿಂಡೋ ತೆರೆದುಕೊಳ್ಳುತ್ತದೆ. |
04:51 | ಇದರ ಹೊರತಾಗಿ, ನೀವು ಲೇಬಲ್ 'title' ಮೇಲೆ ಕ್ಲಿಕ್ ಮಾಡಿದರೆ, ಲೇಬಲ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳನ್ನು ಮುಚ್ಚುತ್ತಿರುವ ಕೆಲವು ಸಣ್ಣ ಸಣ್ಣ ಹಸಿರಿನ ಬಾಕ್ಸ್ ಗಳನ್ನು ನೋಡುತ್ತೀರಿ. |
05:03 | ಇದರರ್ಥ ನಾವು design window ಫಾರ್ಮ್ ನಲ್ಲಿ ಇದ್ದೇವೆ. |
05:08 | ಮತ್ತು ನಾವು ಫಾರ್ಮ್ ನ ರೂಪ ಮತ್ತು ಅದರ ಎಲಿಮೆಂಟ್ಸ್ ಗಳ ಜೊತೆಗೆ ಅದರ ಕಾರ್ಯವಿಧಾನವನ್ನು ಬದಲಾಯಿಸಬಹುದು. |
05:17 | ಉದಾಹರಣೆಗೆ, ನಾವು ಲೇಬಲ್ಸ್ ಮತ್ತು ಟೆಕ್ಸ್ಟ್ ಬಾಕ್ಸ್ ಗಳ ಸ್ಥಾನವನ್ನು ಮತ್ತು ಆಕಾರವನ್ನು ಬದಲಾಯಿಸಬಹುದು. |
05:25 | ಇವುಗಳನ್ನು properties ಅಂತಲೂ ಹೇಳುತ್ತಾರೆ. |
05:28 | ಲೇಬಲ್ ಟೈಟಲ್ ಮೇಲೆ ಡಬಲ್ ಕ್ಲಿಕ್ ಮಾಡಿ. |
05:31 | ಇದು Properties ಹೆಸರಿನ ಒಂದು ಸಣ್ಣ popup ವಿಂಡೋ ಅನ್ನು ತೆರೆಯುತ್ತದೆ. |
05:38 | ಇಲ್ಲಿ ಅನೇಕ ಪ್ರಕಾರದ ಎಲಿಮೆಂಟ್ಸ್ ಗಳನ್ನು ಗಮನಿಸಿ. |
05:48 | ಈಗ ಲೇಬಲ್ 'author' ಮೇಲೆ ಕ್ಲಿಕ್ ಮಾಡೋಣ. Properties ವಿಂಡೋ ರಿಫ್ರೆಶ್ ಆಗುವುದನ್ನು ಮತ್ತು Author ಲೇಬಲ್ ನ ಪ್ರಾಪರ್ಟಿಗಳನ್ನು ತೋರಿಸುವುದನ್ನು ಗಮನಿಸಿ. |
06:01 | ಹಾಗಾಗಿ, ಅದೇ ರೀತಿ ನಾವು ಫಾರ್ಮ್ ನ ಮೇಲೆ ಅನೇಕ ಪ್ರಕಾರದ ಎಲಿಮೆಂಟ್ಸ್ ಮೇಲೆ ಕ್ಲಿಕ್ ಮಾಡೋಣ. ಆಗ Properties ವಿಂಡೋ ಆಯ್ಕೆಯಾದ ಎಲಿಮೆಂಟ್ ನ ವಿಶೇಷತೆಯನ್ನು ತೋರಿಸಲು ರಿಪ್ರೆಶ್ ಆಗುವುದನ್ನು ಕಾಣುತ್ತೇವೆ. |
06:14 | ಈಗ, Properties ವಿಂಡೋ ಟೈಟಲ್ Properties MultiSelection ನ ರೀತಿಯಲ್ಲೇ ಓದುತ್ತದೆ. |
06:21 | ಏಕೆಂದರೆ author ಲೇಬಲ್ ಮತ್ತು ಅದರ ಟೆಕ್ಸ್ಟ್ ಬಾಕ್ಸ್ ಇದರ ಪಕ್ಕದಲ್ಲಿಯೇ ಇದೆ. ಹಸಿರು ಬಾಕ್ಸ್ ಗಳ ಒಂದು ಗುಂಪಿನಲ್ಲಿ ಇಡಲ್ಪಟ್ಟಿದೆ. |
06:34 | Base ಎನ್ನುವುದು ಸಹಜವಾಗಿ ಫಾರ್ಮ್ ನಲ್ಲಿ ಲೇಬಲ್ಸ್ ಅನ್ನು ಮತ್ತು ಅದಕ್ಕೆ ಅನುಗುಣವಾದ ಟೆಕ್ಸ್ಟ್ ಬಾಕ್ಸ್ ಗಳನ್ನು ಗುಂಪಾಗಿ ವಿಂಗಡಿಸುತ್ತದೆ .
ಇದನ್ನು ನಾವು ಗುಂಪಿನಿಂದ ಬೇರ್ಪಡಿಸಬಹುದು. |
06:44 | Title ಲೇಬಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ ಕೆಳಗಿರುವ 'Group' ನ ಮೇಲೆ ಕ್ಲಿಕ್ ಮಾಡಿ, ಆಮೇಲೆ 'Ungroup' ನ ಮೇಲೆ ಕ್ಲಿಕ್ ಮಾಡಿ. |
06:54 | ಈಗ ಲೇಬಲ್, ಟೈಟಲ್ ಮತ್ತು ಅದರ ಟೆಕ್ಸ್ಟ್ ಬಾಕ್ಸ್ ಗುಂಪಿನಿಂದ ಬೇರ್ಪಟ್ಟಿರುವುದನ್ನು ನಾವು ಕಾಣುತ್ತೇವೆ. |
07:02 | ಈ ರೀತಿಯಾಗಿ, ನಾವು ಫಾರ್ಮ್ ನಲ್ಲಿ ವಿಶಿಷ್ಟವಾದ ಎಲಿಮೆಂಟ್ಸ್ ಗಳ ಪ್ರಾಪರ್ಟಿಗಳನ್ನು ಮಾರ್ಪಡಿಸಬಹುದು. |
07:10 | ಈಗ ಟೈಟಲ್ ಟೆಕ್ಸ್ಟ್ ಬಾಕ್ಸ್ ನಲ್ಲಿ ಟೂಲ್ ಟಿಪ್ ಅನ್ನು ಸೇರಿಸೋಣ. |
07:16 | ಈಗ Properties ವಿಂಡೋನಲ್ಲಿ ಕೆಳತನಕ ಸ್ಕ್ರೋಲ್ ಮಾಡೋಣ. |
07:22 | ಇಲ್ಲಿ 'Help text' ಲೇಬಲ್ ಅನ್ನು ಗಮನಿಸಿ, ಈಗ 'Enter the title of the book here' ಅಂತ ಟೈಪ್ ಮಾಡೋಣ. |
07:32 | ಈಗ ಮೇಲ್ಭಾಗದಲ್ಲಿ File ಮೆನು ನ ಕೆಳಗೆ Save ಐಕಾನ್ ಮೇಲೆ ಕ್ಲಿಕ್ ಮಾಡಿ ಫಾರ್ಮ್ ಅನ್ನು ಸೇವ್ ಮಾಡೋಣ. ಮತ್ತು ಈ ವಿಂಡೋ ಅನ್ನು ಕ್ಲೋಸ್ ಮಾಡೋಣ. |
07:46 | ಈಗ ನಮ್ಮ ಫಾರ್ಮ್ ಅನ್ನು ನಾವು ಮಾರ್ಪಡಿಸಿದ ಮೇಲೆ ಹೇಗೆ ಕಾಣುತ್ತದೆಯೆಂದು ನೋಡೋಣ. |
07:54 | ಇದಕ್ಕಾಗಿ Base ನ ಮುಖ್ಯ ವಿಂಡೋ ಗೆ ಹೋಗೋಣ. ಎಡ ಪೆನಲ್ ನಲ್ಲಿ Forms ಐಕಾನ್ ಮೇಲೆ ಕ್ಲಿಕ್ ಮಾಡಿರಿ. |
08:03 | ಮತ್ತು ಬಲಗಡೆಯ ಪೆನಲ್ ನಲ್ಲಿ 'Books Data Entry Form' ನ ಮೇಲೆ ಡಬಲ್ ಕ್ಲಿಕ್ ಮಾಡಿರಿ. |
08:10 | ಮೌಸ್ ಅನ್ನು ಟೈಟಲ್ ಲೇಬಲ್ ಅಥವಾ ಟೆಕ್ಸ್ಟ್ ಬಾಕ್ಸ್ ನ ಮೇಲೆ ತೋರಿಸೋಣ. |
08:17 | 'Enter the title of the book here' ಎಂದು ಹೇಳುವ ಒಂದು ಟೂಲ್ ಟಿಪ್ ಗೋಚರಿಸುವುದನ್ನು ಗಮನಿಸಿ. |
08:24 | ಈಗ ನಾವು, ನಮ್ಮ ಫಾರ್ಮ್ ನಲ್ಲಿ ಸರಳವಾದ ಮಾರ್ಪಾಡನ್ನು ಮಾಡುವುದು ಹೇಗೆ ಎಂಬುದನ್ನು ಕಲಿತಿದ್ದೇವೆ. |
08:31 | ಒಂದು ಫಾರ್ಮ್ ನಲ್ಲಿ ಹೆಚ್ಚು ಮಾರ್ಪಾಡನ್ನು ಹೇಗೆ ಮಾಡುವುದು ಎನ್ನುವುದನ್ನು ನಾವು Base ಟ್ಯುಟೋರಿಯಲ್ ನ ಮುಂದಿನ ಭಾಗದಲ್ಲಿ ನೋಡಲಿದ್ದೇವೆ. |
08:39 | ಇಲ್ಲಿ ಒಂದು ನಿಯತಕಾರ್ಯ (ಅಸೈನ್ ಮೆಂಟ್)ವಿದೆ. |
08:41 | Members ಟೇಬಲ್ ಗಾಗಿ ಒಂದು ಸರಳವಾದ ಫಾರ್ಮ್ ಅನ್ನು ತಯಾರಿಸಿ. |
08:46 | ಈಗ ನಾವು ಲಿಬ್ರೆ ಆಫೀಸ್ ಬೇಸ್ ನಲ್ಲಿ, “ಫಾರ್ಮ್ ನಲ್ಲಿ ಮಾರ್ಪಾಡು” ಎಂಬ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
08:52 | ಸಂಕ್ಷೇಪವಾಗಿ, ಒಂದು ಫಾರ್ಮ್ ನಲ್ಲಿ ಡೇಟಾ ಅನ್ನು ಎಂಟರ್ ಮಾಡುವುದು ಹೇಗೆ ? ಮತ್ತು ಫಾರ್ಮ್ ನಲ್ಲಿ ಮಾರ್ಪಾಡನ್ನು ಹೇಗೆ ಮಾಡುವುದು ಎಂಬುದನ್ನು ಕಲಿತಿದ್ದೇವೆ. |
09:00 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
09:12 | ಈ ಪ್ರೊಜೆಕ್ಟ್ http://spoken-tutorial.org. ಮೂಲಕ ಸಂಯೋಜಿಸಲಾಗಿದೆ. |
09:17 | ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್-ನಲ್ಲಿ ಸಿಗುತ್ತದೆ. |
09:22 | ಈ ಟ್ಯುಟೋರಿಯಲ್ ನ ಅನುವಾದಕರು ಡಾ. ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. |