GIMP/C2/Setting-Up-GIMP/Kannada
From Script | Spoken-Tutorial
Revision as of 10:27, 10 November 2014 by Vasudeva ahitanal (Talk | contribs)
Time | Narration |
00:21 | ಮೀಟ್ ದ್ ಗಿಂಪ್ ಟ್ಯುಟೋರಿಯಲ್ ನಲ್ಲಿಯ Setting up the Gimp ಎನ್ನುವುದಕ್ಕೆ ನಿಮಗೆ ಸ್ವಾಗತ. |
00:25 | ನೀವು ಮೊದಲನೆ ಸಲ GIMP ಅನ್ನು ಉಪಯೋಗಿಸುವಾಗ ಅದನ್ನು ಹೇಗೆ ಸೆಟ್ ಅಪ್ ಮಾಡುವುದೆಂದು ನನಗೆ ಇಂದು ತೋರಿಸಬೇಕಾಗಿದೆ. |
00:30 | ಗಿಂಪ್ ಎನ್ನುವುದು, ಉಳಿದ Windows ಮತ್ತು Macintosh ಪ್ರೋಗ್ರಾಂಗಳಂತೆ, ಒಂದು ದೊಡ್ಡ ವಿಂಡೋದ ಬದಲಿಗೆ ಬಹಳಷ್ಟು ಚಿಕ್ಕ ವಿಂಡೋಗಳನ್ನು ಉಪಯೋಗಿಸುತ್ತದೆ. |
00:39 | ಇದು Unix ಜಗತ್ತಿನ ಇತಿಹಾಸವಾಗಿದೆ ಮತ್ತು Unix ಜನ ಸ್ಕ್ರೀನ್ ಮೇಲೆಲ್ಲ ವಿಂಡೋಗಳನ್ನು ಹರಡಿಕೊಂಡಿರುವುದನ್ನು ಹಾಗೂ ಒಂದೇ ವೇಳೆಯಲ್ಲಿ ಅನೇಕ ಪ್ರೋಗ್ರಾಂಗಳು ರನ್ ಆಗುತ್ತಿರುವುದನ್ನು ಇಷ್ಟಪಡುತ್ತಾರೆ. |
00:49 | ಒಂದು ವೇಳೆ ನೀವು ಈ ವಿಭಿನ್ನ ವಿಂಡೋಗಳೊಂದಿಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಆಗ ನೀವು GIMPshop ಎನ್ನುವುದನ್ನು ನೋಡಬೇಕು. |
00:57 | ಅದು GIMP ಅನ್ನು ಬಳಸುವ ಮತ್ತು ಫೋಟೋಶಾಪ್ಅನ್ನು ಹೋಲುವಂತೆ ಮಾಡಲು ಒಂದು ಹೊಸ ಯೂಸರ್ ಇಂಟರ್ಫೇಸ್ ಹಾಕಿರುವ ಒಂದು ಪ್ರೋಗ್ರಾಂ ಆಗಿದೆ. |
01:05 | ನಾನು ಗಿಂಪ್ ಅನ್ನು ಉಪಯೋಗಿಸಲು ಬಯಸುತ್ತೇನೆ ಏಕೆಂದರೆ ಎಲ್ಲ ಹೊಸ ಹಾಗೂ ಉತ್ತಮವಾದ ಟೂಲ್ ಗಳು ಅದರಲ್ಲಿವೆ. |
01:12 | ಇದು ಉಪಯುಕ್ತ ಮಾಹಿತಿ ಹಾಗೂ ಸೂಚನೆಗಳನ್ನು ಕೊಡುವ ಇಂದಿನ ಸಲಹೆಯಾಗಿದೆ. |
01:17 | ಸಧ್ಯಕ್ಕೆ, Undo ಎನ್ನುವ ಆಯ್ಕೆಯ ಕುರಿತು ಒಂದು ಸಲಹೆ ಇದೆ. ಇದರಿಂದ ನೀವು ಕೆಲವು ಸ್ಟೆಪ್ ಗಳನ್ನು ಮಾಡಬಹುದು ಮತ್ತು Undo ಎನ್ನುವುದನ್ನು ಬಳಸಿ ಅವುಗಳನ್ನು ಮತ್ತೆ ಮೊದಲಿದ್ದ ಹಾಗೇ ಬದಲಾಯಿಸಬಹುದು. |
01:26 | ಇದು ಬಹಳಷ್ಟು ಸಲ ಕೆಲಸ ಮಾಡುತ್ತದೆ. |
01:28 | ನೀವು ಬಹಳೇ ವಿಭಿನ್ನವಾದ ಕೆಲಸ ಮಾಡುವ ಮೊದಲು ನಿಮ್ಮ ಕೆಲಸವನ್ನು ಸೇವ್ ಮಾಡುವದು ಒಳ್ಳೆಯದು. |
01:33 | ಈಗ, ನಾವು ಬೇರೆ ಟೂಲ್ ಗಳತ್ತ ನೋಡೋಣ. |
01:36 | ಇಲ್ಲಿ Command Central ಎನ್ನುವ ಗಿಂಪ್ ನ ಮುಖ್ಯವಾದ ವಿಂಡೋ ಇರುತ್ತದೆ. |
01:41 | ಮತ್ತು ಇಲ್ಲಿ, ಮೇಲ್ಗಡೆಯಲ್ಲಿ ಇರುವದು ಟೂಲ್ ಬಾಕ್ಸ್ ಆಗಿದೆ. |
01:45 | ಆಮೇಲೆ ಬಣ್ಣಗಳನ್ನು ಆಯ್ಕೆ ಮಾಡಲು Color box ನ್ನು ಪಡೆದಿದ್ದೇವೆ ಮತ್ತು ಕೆಳಗೆ ಟೂಲ್ ಬಾಕ್ಸ್ ನಲ್ಲಿಯ ನಮ್ಮ ಟೂಲ್ ಗಳಿಗಾಗಿ ವಿವಿಧ ಆಯ್ಕೆಗಳಿವೆ. |
01:53 | ನಾವು ಇದನ್ನು ಸ್ವಲ್ಪ ವಿಸ್ತರಿಸೋಣ. |
01:56 | ಇಲ್ಲಿ ನಾವು Layers, Channels, Color Channels, Path ಮತ್ತು Undo History, ಇವುಗಳಿಗಾಗಿ ಡೈಲಾಗ್ ಬಾಕ್ಸ್ ಗಳನ್ನು ಪಡೆದಿದ್ದೇವೆ. |
02:09 | ಇದರ ಕೆಳಗೆ ಇರುವ Colour Selection ಎನ್ನುವ ಡೈಲಾಗ್ ನಲ್ಲಿ ನೀವು ವಿವಿಧ ಬಣ್ಣಗಳನ್ನು ಆಯ್ಕೆ ಮಾಡಬಹುದು. |
02:15 | ಇಲ್ಲಿ Brushes, Patterns, Gradient ಮುಂತಾದ ಅನೇಕ ಡೈಲಾಗ್ ಗಳಿವೆ. |
02:21 | ಇವುಗಳಲ್ಲಿ ಕೆಲವು ಡೈಲಾಗ್ ಗಳನ್ನು ನನಗೆ ಟೂಲ್ ಬಾಕ್ಸ್ ನಲ್ಲಿ ಸೇರಿಸಬೇಕಾಗಿದೆ.ಅದನ್ನು ಮಾಡುವದು ತುಂಬಾ ಸುಲಭ. |
02:28 | ಡೈಲಾಗ್ ನ ಟೈಟಲ್ ನಲ್ಲಿ, Layers ಎನ್ನುವ ಶಬ್ದದ ಮೇಲೆ ಕ್ಲಿಕ್ ಮಾಡಿರಿ ಮತ್ತು ಅದನ್ನು ಇಲ್ಲಿ, ಟೂಲ್ ಬಾಕ್ಸ್ನ ಕೆಳಗಿರುವ Color Picker ಎನ್ನುವ ಶಬ್ದದ ಮೇಲೆ ಎಳೆದು ತನ್ನಿ. |
02:39 | ಮತ್ತು ನಾನು ಈ ರೀತಿ ಟ್ಯಾಬ್ ಗಳಿರುವ ಡೈಲಾಗನ್ನು ಪಡೆಯುತ್ತೇನೆ. |
02:43 | ನಾನು ಇದನ್ನು Channels ಎನ್ನುವುದರೊಂದಿಗೆ ಮಾಡುವೆನು. |
02:46 | ನಾನು ಇದನ್ನು Paths ಜೊತೆಗೆ ಮಾಡುವೆನು. |
02:52 | ಮತ್ತು ನಾನು ಇದನ್ನು Undo History ಯೊಂದಿಗೆ ಮಾಡುವೆನು. |
02:54 | ನನಗೆ Brushes ಎನ್ನುವ ಟೂಲ್ ನ ಅವಶ್ಯಕತೆಯಿದೆ ಎಂದು ನಾನು ಭಾವಿಸುತ್ತಿಲ್ಲ ಏಕೆಂದರೆ, ಒಂದುವೇಳೆ ಟೂಲ್, ಬ್ರಶ್ ಅನ್ನು ಹೊಂದಿದ್ದರೆ ಅದು ಇಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ನಾನು ಅದನ್ನು ಆಯ್ಕೆ ಮಾಡಬಹುದು. |
03:09 | ಆದರೆ ನನಗೆ Colours ಎನ್ನುವುದು ಬೇಕಾಗಿದೆ ಆದ್ದರಿಂದ ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು Undo History ಎನ್ನುವುದರ ಬದಿಗೆ ಎಳೆದು ತರುತ್ತೇನೆ. |
03:16 | ಮತ್ತು ಇಲ್ಲಿಯ ಈ ವಿಂಡೋವನ್ನು ಕ್ಲೋಸ್ ಮಾಡಬಹುದು. |
03:23 | ನಾನು ಎಲ್ಲ ಡೈಲಾಗ್ ಬಾಕ್ಸ್ ಗಳನ್ನು File >> Dialogs ಮೂಲಕ ಆಕ್ಸೆಸ್ ಮಾಡಬಹುದು. |
03:30 | ನಮ್ಮ ಟೂಲ್ ಬಾಕ್ಸ್ ನಲ್ಲಿ ಇಲ್ಲದಿರುವ ಕೆಲವು ಡೈಲಾಗ್ ಗಳು ಇಲ್ಲಿ ಇರುವುದನ್ನು ನೀವು ನೋಡಬಹುದು ಮತ್ತು ಅವುಗಳಲ್ಲಿಯ Tools ಎನ್ನುವುದು ನಮಗೆ ಬೇಕಾಗಿದೆ. |
03:38 | ನಾನು ಯಾವಾಗಲೂ ಬಳಸದಿರುವ ಕೆಲವು ಟೂಲ್ ಗಳನ್ನು ನನ್ನ ಟೂಲ್ ಬಾಕ್ಸ್ ಒಳಗೊಂಡಿದೆ ಮತ್ತು ಅವುಗಳ ಬದಲಿಗೆ ನಾನು ಬಳಸಬೇಕೆಂದಿರುವ ಟೂಲ್ ಗಳನ್ನು ಅಲ್ಲಿ ಸೇರಿಸಬೇಕೆಂದಿದ್ದೇನೆ. |
03:48 | ನನಗೆ ಬೇಕೆಂದಿರುವ ಟೂಲ್ ಗಳೊಂದಿಗೆ ನಾವು ಆರಂಭಿಸೋಣ. |
03:51 | ನನಗೆ Curves, Levels, Threshold. Brightness ಮತ್ತು Contrast, ಇವುಗಳು ಬೇಕಾಗಿವೆ. ನನಗೆ ಆರಿಸಬೇಕಾಗಿಲ್ಲ. |
03:58 | Perspective Clone ಎನ್ನುವುದು ನನಗೆ ಅಗತ್ಯವಿಲ್ಲ, Ink ಅಥವಾ Airbrush, ಇವುಗಳೂ ನನಗೆ ಅಗತ್ಯವಿಲ್ಲ. |
04:05 | ಮತ್ತು ನನಗೆ ಉಳಿದೆಲ್ಲ ಟೂಲ್ ಗಳ ಅಗತ್ಯವಿದೆ. |
04:08 | ಎಷ್ಟು ಸ್ಥಳ ಉಳಿದಿದೆ ಎಂದು ತಿಳಿದ ಮೇಲೆ ನಾನು ಇದರತ್ತ ನೋಡುವೆನು. |
04:16 | ಈಗ ನಾನು File ನಲ್ಲಿಯ Preferences ಎನ್ನುವಲ್ಲಿಗೆ ಹೋಗುತ್ತೇನೆ. |
04:26 | ನಾನು Environment ಎನ್ನುವುದನ್ನು ಇದ್ದ ಹಾಗೆಯೇ ಇಡುತ್ತೇನೆ ಮತ್ತು Interface ಎನ್ನುವುದನ್ನು ಸಹ. |
04:32 | Theme ಎನ್ನುವುದರಲ್ಲಿ ನಾನು Small ಅನ್ನು ಆಯ್ಕೆಮಾಡುತ್ತೇನೆ. |
04:35 | ಮತ್ತು ನಾನು ಈ ವಿಂಡೋವನ್ನು ಪಕ್ಕಕ್ಕೆ ಎಳೆದಾಗ ಎಲ್ಲ ಐಕಾನ್ ಗಳು ಕುಗ್ಗಿದ್ದನ್ನು ನೀವು ನೋಡುತ್ತೀರಿ ಮತ್ತು ಅಲ್ಲಿ ಟೂಲ್ ಗಳ ಮಾಹಿತಿಗಾಗಿ ಹೆಚ್ಚು ಸ್ಥಳ ಸಿಗುತ್ತದೆ. |
04:45 | Tool options ಎನ್ನುವುದಕ್ಕೆ ಹೋಗಿರಿ ಮತ್ತು Default Interpolation ಎನ್ನುವುದನ್ನು SINC ಎನ್ನುವುದಕ್ಕೆ ಬದಲಾಯಿಸಿರಿ, ರಿಸೈಜ್ ಅಥವಾ ರೊಟೇಟ್ ಇತ್ಯಾದಿಗಳನ್ನು ಮಾಡುವಾಗ ಪಿಕ್ಸೆಲ್ ಗಳನ್ನು ಲೆಕ್ಕಹಾಕಲು ಇದು ಅತ್ಯುತ್ತಮ ಇಂಟರ್ಪೊಲೇಷನ್ ಆಗಿದೆ. |
05:00 | ಬೇರೆ ಆಯ್ಕೆಗಳನ್ನು ಇದ್ದ ಹಾಗೆಯೇ ಬಿಟ್ಟುಬಿಡಿ. |
05:03 | Toolbox ಎನ್ನುವುದಕ್ಕೆ ಹೋಗಿರಿ ಮತ್ತು ಈ ಆಯ್ಕೆಗಳು ನಿಮಗೆ ಬೇಕಾಗಿದ್ದರೆ ಆಯ್ಕೆಮಾಡಿ ಇಲ್ಲವಾದರೆ ಆಯ್ಕೆಮಾಡಬೇಡಿ. |
05:12 | ಫೋರ್ಗ್ರೌಂಡ್ ಹಾಗೂ ಬ್ಯಾಕ್ಗ್ರೌಂಡ್ ಗಳ ಬಣ್ಣವನ್ನು ತ್ವರಿತವಾಗಿ ಬದಲಾಯಿಸಬಲ್ಲ Colors ಎನ್ನುವುದನ್ನು ನೀವು ಇಟ್ಟುಕೊಳ್ಳಬಹುದು. |
05:19 | ನೀವು Brush ಮತ್ತು Gradient ಎನ್ನುವ ಟೂಲ್ ಗಳನ್ನು ಪಡೆಯಬಹುದು, ಇಲ್ಲಿ ನೀವು ಒಂದು ಚಿಕ್ಕ ಇಮೇಜನ್ನು ಅಥವಾ ಆಕ್ಟಿವ್ ಇಮೇಜ್ ನ ಕಿರುನೋಟವನ್ನು (ಥಂಬ್ನೇಲ್) ಇಟ್ಟುಕೊಳ್ಳಬಹುದು. |
05:29 | ನನಗೆ ಇದು ಬೇಕಾಗಿಲ್ಲ ಹೀಗಾಗಿ ನಾನು ಇದನ್ನು ಆಯ್ಕೆ ಮಾಡುವದಿಲ್ಲ. ನಿಮಗೆ ಬೇಕು ಅಥವಾ ಬೇಡ ಎನ್ನುವುದು ನಿಮಗೇ ಬಿಟ್ಟಿದೆ. |
05:36 | Default image, Default grid ಮತ್ತು Default image window, ಇವು ಗಳನ್ನು ನೀವು ಹಾಗೆಯೇ ಬಿಟ್ಟುಬಿಡಬಹುದು. |
05:42 | ನಾನು ಎಲ್ಲ ಪ್ರಿಫರೆನ್ಸಸ್ ಗಳನ್ನು ಮುಗಿಸಿದ್ದೇನೆ. |
05:45 | ಮತ್ತು |
05:47 | ನಾನು Path ಎನ್ನುವುದನ್ನು ಬದಲಾಯಿಸಿಲ್ಲ ಹೀಗಾಗಿ ನಾನು ಇದನ್ನು ಇಲ್ಲಿ ಬಳಸಬಹುದು. |
05:52 | ಈಗ ಹೆಚ್ಚು ಸ್ಥಳವನ್ನು ಪಡೆಯಲು ನಾನು ಇಲ್ಲಿ ಒಂದೇ ಒಂದು ಟೂಲ್ಅನ್ನು ತೆಗೆದುಹಾಕಬೇಕಾಗಿದೆ. ಆದರೆ ಮೊದಲು ನಾನು ಇದನ್ನು ಸ್ವಲ್ಪ ವಿಸ್ತರಿಸುತ್ತೇನೆ. |
06:01 | ಟೂಲ್ ಬಾಕ್ಸ್ ನ ಡೈಲಾಗ್ ತುಂಬಾ ಕುಗ್ಗಿರುವುದನ್ನು ನೀವು ನೋಡಬಹುದು. |
06:06 | ಅದನ್ನು ಇಲ್ಲಿಗೆ ಎಳೆದು ತನ್ನಿ. |
06:08 | ಇಲ್ಲಿ ಹೊಸ ಸಾಲನ್ನು ಪಡೆಯದೆಯೇ ಇನ್ನೂ ಮೂರು ಟೂಲ್ ಗಳನ್ನು ಸೇರಿಸಬಹುದೆಂದು ನಾನು ಭಾವಿಸುತ್ತೇನೆ. |
06:19 | ಹೀಗಾಗಿ Brightness, Hue-Saturation(ಹ್ಯು-ಸ್ಯಾಚುರೇಶನ್) ಮತ್ತು Color Balance, ಇವುಗಳನ್ನು ನಾನು ಸೇರಿಸುವೆನು. |
06:24 | ಇಲ್ಲಿ ತೋರಿಸದೇ ಇರುವ ಎಲ್ಲ ಟೂಲ್ ಗಳನ್ನು File ಮತ್ತು Dialogs ಗಳನ್ನು ಕ್ಲಿಕ್ ಮಾಡಿ ಪಡೆಯಬಹುದು. |
06:39 | ಮತ್ತು ಈಗ ನಾವು ನಮ್ಮ ಕೆಲಸವನ್ನು ಮಾಡಲು ಸಜ್ಜಾಗಿದ್ದೇವೆ. |
06:42 | ನೀವು ಗಿಂಪನ್ನು ಕ್ಲೋಸ್ ಮಾಡುವಾಗ ಎಲ್ಲ ಆಯ್ಕೆಗಳು ತಾನಾಗಿಯೇ ಸೇವ್ ಆಗುತ್ತವೆ ಹಾಗೂ ನೀವು ಕ್ಲೋಸ್ ಮಾಡುವಾಗ ಇದ್ದ ರೀತಿಯಲ್ಲಿಯೇ ಮತ್ತೆ ಆರಂಭವಾಗುತ್ತವೆ. |
06:52 | ಅಂದಹಾಗೆ ನಾನು ಡೆವಲಪ್ಮೆಂಟ್ ವರ್ಷನ್ GIMP 2.3.18 ಅನ್ನು ಬಳಸುತ್ತಿದ್ದೇನೆ, ಇದು ಅನ್ಸ್ಟೇಬಲ್ ವರ್ಷನ್ ಆಗಿದೆ. |
07:02 | 2.3.19 ಇವತ್ತು ಬಿಡುಗಡೆಯಾಗಿರುವುದನ್ನು ನಾನು ಈಗಷ್ಟೇ ನೋಡಿದೆ. |
07:07 | ಇದನ್ನು ಅನ್ಸ್ಟೇಬಲ್ ಎನ್ನಲಾಗಿದೆ, ಆದರೆ ಇದು ಈ ವರ್ಷ ಮಾರ್ಕೆಟ್ನಲ್ಲಿಯ ಯಾವುದೇ ಸಾಫ್ಟ್ವೇರ್ ನಷ್ಟೇ ಸ್ಟೇಬಲ್ ಆಗಿದೆ. GIMP 2.4 ಮುಂದೆ ಬರಲಿರುವ ಸ್ಟೇಬಲ್ ವರ್ಷನ್ ಆಗಿದೆ. |
07:22 | ಇದು GIMP ಎನ್ನುವುದನ್ನು ಅಳವಡಿಸುವದರ ಕುರಿತು ಆಗಿತ್ತು. |
07:25 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ ಅನುವಾದಕಿ ಮತ್ತು ಪ್ರವಾಚಕಿ ಸಂಧ್ಯಾ ಪುಣೇಕರ್. ಧನ್ಯವಾದಗಳು. |