Java/C2/Default-constructor/Kannada

From Script | Spoken-Tutorial
Revision as of 15:39, 20 October 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಜಾವಾದಲ್ಲಿ default constructor ( ಡಿಫಾಲ್ಟ್ ಕನ್ಸ್-ಟ್ರಕ್ಟರ್)'’ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:10 default constructor (ಡಿಫಾಲ್ಟ್ ಕನ್ಸ್-ಟ್ರಕ್ಟರ್) ನ ಕುರಿತು,
00:12 ಮತ್ತು ಕನ್ಸ್-ಟ್ರಕ್ಟರ್ ರಚನೆ ಮಾಡುವುದನ್ನು ಕಲಿಯುತ್ತೇವೆ.
00:15 ಇಲ್ಲಿ ನಾವು
  • Ubuntu version 11.10 ( ಉಬಂಟು ವರ್ಶನ್ ೧೧.೧೦)
  • Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬)
ಹಾಗೂ 
  • Eclipse 3.7.0 (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ.
00:26 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು
00:29 ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕ್ಲಾಸ್ ಮತ್ತು ಕ್ಲಾಸ್ ನ ಒಬ್ಜೆಕ್ಟ್ ಗಳನ್ನು ರಚನೆ ಮಾಡಲು ತಿಳಿದಿರಬೇಕು.
00:34 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.

(http://www.spoken-tutorial.org)

00:42 ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ಇನಿಷಿಯಲೈಜ್ ಮಾಡಲು ಕನ್ಸ್-ಟ್ರಕ್ಟರ್ ಗಳನ್ನು ಉಪಯೋಗಿಸುತ್ತಾರೆ.
00:46 ಹೊಸ ಒಬ್ಜೆಕ್ಟ್ ಗಳು ರಚನೆಯಾದಾಗ ಕನ್ಸ್-ಟ್ರಕ್ಟರ್ ಗಳು ಕಾಲ್ ಆಗುತ್ತದೆ.
00:50 ಈಗ ನಾವು ಕನ್ಸ್-ಟ್ರಕ್ಟರ್ ಗಳು ಜಾವಾದಲ್ಲಿ ಹೇಗೆ ಡಿಫೈನ್ ಆಗುವುದೆಂದು ನೋಡೋಣ.
00:55 ಎಕ್ಲಿಪ್ಸ್ ನಲ್ಲಿ ಮೊದಲೇ ರಚಿಸಿರುವ Student.java ಎಂಬ ಜಾವಾ ಪೈಲ್ ಅನ್ನು ತೆರೆಯೋಣ.
01:02 Student ಕ್ಲಾಸ್ ನಲ್ಲಿ ಎರಡು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡೋಣ.
01:07 ಅದಕ್ಕಾಗಿ int roll_number ಸೆಮಿಕೋಲನ್ ಮತ್ತು String name ಸೆಮಿಕೋಲನ್ ಎಂದು ಟೈಪ್ ಮಾಡಿ.
01:20 ಈಗ ಒಂದು ಮೆಥಡ್ ಅನ್ನು ರಚನೆ ಮಾಡೋಣ.
01:22 ಅದಕ್ಕಾಗಿ void studentDetail() ಎಂದು ಟೈಪ್ ಮಾಡಿ.
01:33 ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ roll_number ಎಂದು ಟೈಪ್ ಮಾಡಿ.
01:50 ನಂತರ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ name ಎಂದು ಟೈಪ್ ಮಾಡಿ.
02:03 ಈಗ ಮೇನ್ ಮೆಥಡ್ ನಲ್ಲಿ ಈ ಮೆಥಡ್ ಅನ್ನು ಕಾಲ್ ಮಾಡೋಣ.
02:08 ಹಾಗಾಗಿ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಿ ಮೆಥಡ್ ಅನ್ನು ಕಾಲ್ ಮಾಡೋಣ.
02:14 Student ಸ್ಪೇಸ್ ಒಬ್ಜೆಕ್ಟ್ ನೇಮ್ stu ಸಮ new Student ಎಂದು ಟೈಪ್ ಮಾಡಿ.
02:28 ನಂತರ stu ಡಾಟ್ ಮೆಥಡ್ ನೇಮ್ ಅಂದರೆ studentDetail ಎಂದು ಟೈಪ್ ಮಾಡಿ.
02:41 ಸೇವ್ ಮಾಡಿ ರನ್ ಮಾಡಿರಿ.
02:46 ನಾವು zero ಮತ್ತು null ಎಂಬ ಫಲಿತವನ್ನು ಪಡೆಯುತ್ತೇವೆ.
02:49 int ವೇರಿಯೇಬಲ್ roll_number ಅದರ ಡಿಫಾಲ್ಟ್ ಬೆಲೆ ಸೊನ್ನೆಗೆ ಇನಿಷಿಯಲೈಜ್ ಆಗಿದೆ.
02:56 ಮತ್ತು String name ಅದರ ಡಿಫಾಲ್ಟ್ ಬೆಲೆ null ಗೆ ಇನಿಷಿಯಲೈಜ್ ಆಗಿದೆ.
03:02 ನಾವು ಯಾವುದೇ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡದಿದ್ದಲ್ಲಿ ಡಿಫಾಲ್ಟ್ ಕನ್ಸ್-ಟ್ರಕ್ಟರ್ ರಚನೆಯಾಗುತ್ತದೆ.
03:08 ಡಿಫಾಲ್ಟ್ ಕನ್ಸ್-ಟ್ರಕ್ಟರ್ ಯಾವುದೇ ಪ್ಯಾರಾಮೀಟರ್ ಗಳನ್ನು ಹೊಂದಿರುವುದಿಲ್ಲ.
03:11 ಅದು ಇನ್ಸಟೆನ್ಸ್ ವೇರಿಯೇಬಲ್ ಗಳನ್ನು ಅವುಗಳ ಡಿಫಾಲ್ಟ್ ಬೆಲೆಗಳಿಗೆ ಇನಿಷಿಯಲೈಜ್ ಮಾಡುತ್ತದೆ.
03:16 ಈಗ ಒಂದು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ.
03:18 Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿರಿ. ಕರ್ಲೀ ಬ್ರ್ಯಾಕೆಟ್ ತೆರೆದು ಮುಚ್ಚಿರಿ.
03:30 ನೆನಪಿಡಿ, ಕನ್ಸ್-ಟ್ರಕ್ಟರ್ ಗಳು ಅವುಗಳು ಯಾವ ಕ್ಲಾಸ್ ಗೇ ಸೇರಿರುತ್ತವೋ ಅದೇ ಹೆಸರನ್ನು ಹೊಂದಿರುತ್ತವೆ.
03:38 ಕನ್ಸ್-ಟ್ರಕ್ಟರ್ ಗಳು ಮೆಥಡ್ ಗಳನ್ನು ಹೋಲುತ್ತವೆ ಆದರೆ ಕೆಲವು ವ್ಯತ್ಯಾಸಗಳೂ ಇವೆ.
03:44 ಸೇವ್ ಮಾಡಿ ರನ್ ಮಾಡಿರಿ.
03:48 ನಾವು ಮೊದಲಿನ ಫಲಿತಾಂಶವನ್ನೇ ಪಡೆಯುತ್ತೇವೆ.
03:51 ಏಕೆಂದರೆ ನಾವು ಡಿಫೈನ್ ಮಾಡಿದ ಕನ್ಸ್-ಟ್ರಕ್ಟರ್, ಕನ್ಸ್-ಟ್ರಕ್ಟರ್ ಇಲ್ಲದಿರುವುದಕ್ಕೆ ಸಮ.
03:58 ಆದರೆ ಇಲ್ಲಿ ನಾವು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಿರುವುದರಿಂದ ಡಿಫಾಲ್ಟ್ ಕನ್ಸ್-ಟ್ರಕ್ಟರ್ ರಚನೆ ಆಗುವುದಿಲ್ಲ.
04:06 ಈಗ ವೇರಿಯೇಬಲ್ ಗಳಿಗೆ ಬೆಲೆಗಳನ್ನು ಕೊಡೋಣ.
04:11 ಅದಕ್ಕಾಗಿ ಕನ್ಸ್-ಟ್ರಕ್ಟರ್ ನ ಒಳಗೆ roll_number ಸಮ 10 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
04:25 ಮತ್ತು name ಸಮ ಡಬಲ್ ಕೋಟ್ಸ್ ನಲ್ಲಿ Raman ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
04:35 ಸೇವ್ ಮಾಡಿ ರನ್ ಮಾಡಿರಿ.
04:43 ನಾವು ಫಲಿತದಲ್ಲಿ roll_number ನ ಬೆಲೆ ಹತ್ತು ಮತ್ತು name' ನ ಬೆಲೆ Raman ಆಗಿರುವುದನ್ನು ನೋಡುತ್ತೇವೆ.
04:50 ಕನ್ಸ್-ಟ್ರಕ್ಟರ್ ಇನ್ಸ್-ಟೆನ್ಸ್ ಫೀಲ್ಡ್ ಅನ್ನು ಇನಿಷಿಯಲೈಜ್ ಮಾಡಿದೆ.
04:55 ಈಗ ಮೆಥಡ್ ಹಾಗೂ ಕನ್ಸ್-ಟ್ರಕ್ಟರ್ ಗಳ ನಡುವಿನ ವ್ಯತ್ಯಾಸಗಳನ್ನು ನೋಡೋಣ.
05:01 ಕನ್ಸ್-ಟ್ರಕ್ಟರ್ ಗಳು ರಿಟರ್ನ್ ಟೈಪ್ ಅನ್ನು ಹೊಂದಿರುವುದಿಲ್ಲ.
05:05 ಆದರೆ ಮೆಥಡ್ ಗಳು ರಿಟರ್ನ್ ಟೈಪ್ ಅನ್ನು ಹೊಂದಿರುತ್ತದೆ.
05:10 ಕನ್ಸ್-ಟ್ರಕ್ಟರ್ ಗಳು 'new ಆಪರೇಟರ್ ಗಳನ್ನು ಬಳಸಿ ಕಾಲ್ ಆಗುತ್ತವೆ.
05:16 ಆದರೆ ಮೆಥಡ್ ಗಳು ಡಾಟ್ ಆಪರೇಟರ್ ಗಳನ್ನು ಬಳಸಿ ಕಾಲ್ ಆಗುತ್ತವೆ.
05:21 ಇವು ಮೆಥಡ್ ಹಾಗೂ ಕನ್ಸ್-ಟ್ರಕ್ಟರ್ ಗಳ ನಡುವಿನ ಕೆಲವು ವ್ಯತ್ಯಾಸಗಳು.
05:29 ಈ ಟ್ಯುಟೋರಿಯಲ್ ನಲ್ಲಿ ನಾವು
05:32 ಡಿಫಾಲ್ಟ್ ಕನ್ಸ್-ಟ್ರಕ್ಟರ್ ನ ಕುರಿತು
05:34 ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಲು ಮತ್ತು
05:36 ಮೆಥಡ್ ಹಾಗೂ ಕನ್ಸ್-ಟ್ರಕ್ಟರ್ ಗಳ ನಡುವಿನ ವ್ಯತ್ಯಾಸಗಳನ್ನು ಕಲಿತಿದ್ದೇವೆ.
05:41 ಸ್ವಂತ ಅಭ್ಯಾಸಕ್ಕಾಗಿ
05:42 Employee ಎಂಬ ಕ್ಲಾಸ್ ಅನ್ನು , ವೇರಿಯೇಬಲ್ ಗಳನ್ನು ಮತ್ತು ಆ ವೇರಿಯೇಬಲ್ ಗಳನ್ನು ಫಲಿತದಲ್ಲಿ ತೋರಿಸಲು ಮೆಥಡ್ ಗಳನ್ನು ರಚನೆ ಮಾಡಿ.
05:47 ಮತ್ತು ಈ ಕ್ಲಾಸ್ ಗೆ ಒಂದು ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಿ
05:52 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
05:54 ಮತ್ತು ವೀಡಿಯೋಗಾಗಿ [1] ಎಂಬ ಅಂತರ್ಜಾಲ ತಾಣವನ್ನು ಭೇಟಿಕೊಡಿ.
06:00 ಇದು ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ತಿಳಿಸುತ್ತದೆ.
06:03 ನೀವು ಒಳ್ಳೆಯ ಬ್ಯಾಂಡ್ವಿಯಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋrಡ್ ಮಾಡಿ ಕೂಡಾ ನೋಡಬಹುದು.
06:06 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
06:08 ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
06:11 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ.
06:14 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
06:20 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
06:24 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
06:29 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
http://spoken-tutorial.org/NMEICT-Intro 
06:38 ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
06:40 ಧನ್ಯವಾದಗಳು..
06:42 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

PoojaMoolya, Pratik kamble, Vasudeva ahitanal