Java/C2/Default-constructor/Kannada
From Script | Spoken-Tutorial
Time | Narration |
00:02 | ಜಾವಾದಲ್ಲಿ default constructor ( ಡಿಫಾಲ್ಟ್ ಕನ್ಸ್-ಟ್ರಕ್ಟರ್)’ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:10 | default constructor (ಡಿಫಾಲ್ಟ್ ಕನ್ಸ್-ಟ್ರಕ್ಟರ್) ನ ಕುರಿತು, |
00:12 | ಮತ್ತು ಕನ್ಸ್-ಟ್ರಕ್ಟರ್ ರಚನೆ ಮಾಡುವುದನ್ನು ಕಲಿಯುತ್ತೇವೆ. |
00:15 | ಇಲ್ಲಿ ನಾವು
Ubuntu version 11.10 ( ಉಬಂಟು ವರ್ಶನ್ ೧೧.೧೦) Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ Eclipse 3.7.0 (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ. |
00:26 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು |
00:29 | ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕ್ಲಾಸ್ ಮತ್ತು ಕ್ಲಾಸ್ ನ ಒಬ್ಜೆಕ್ಟ್ ಗಳನ್ನು ರಚನೆ ಮಾಡಲು ತಿಳಿದಿರಬೇಕು. |
00:34 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
00:42 | ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ಇನಿಷಿಯಲೈಜ್ ಮಾಡಲು ಕನ್ಸ್-ಟ್ರಕ್ಟರ್ ಗಳನ್ನು ಉಪಯೋಗಿಸುತ್ತಾರೆ. |
00:46 | ಹೊಸ ಒಬ್ಜೆಕ್ಟ್ ಗಳು ರಚನೆಯಾದಾಗ ಕನ್ಸ್-ಟ್ರಕ್ಟರ್ ಗಳು ಕಾಲ್ ಆಗುತ್ತದೆ. |
00:50 | ಈಗ ನಾವು ಕನ್ಸ್-ಟ್ರಕ್ಟರ್ ಗಳು ಜಾವಾದಲ್ಲಿ ಹೇಗೆ ಡಿಫೈನ್ ಆಗುವುದೆಂದು ನೋಡೋಣ. |
00:55 | ಎಕ್ಲಿಪ್ಸ್ ನಲ್ಲಿ ಮೊದಲೇ ರಚಿಸಿರುವ Student.java ಎಂಬ ಜಾವಾ ಪೈಲ್ ಅನ್ನು ತೆರೆಯೋಣ. |
01:02 | Student ಕ್ಲಾಸ್ ನಲ್ಲಿ ಎರಡು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡೋಣ. |
01:07 | ಅದಕ್ಕಾಗಿ int roll_number ಸೆಮಿಕೋಲನ್ ಮತ್ತು String name ಸೆಮಿಕೋಲನ್ ಎಂದು ಟೈಪ್ ಮಾಡಿ. |
01:20 | ಈಗ ಒಂದು ಮೆಥಡ್ ಅನ್ನು ರಚನೆ ಮಾಡೋಣ. |
01:22 | ಅದಕ್ಕಾಗಿ void studentDetail() ಎಂದು ಟೈಪ್ ಮಾಡಿ. |
01:33 | ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ roll_number ಎಂದು ಟೈಪ್ ಮಾಡಿ. |
01:50 | ನಂತರ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ name ಎಂದು ಟೈಪ್ ಮಾಡಿ. |
02:03 | ಈಗ ಮೇನ್ ಮೆಥಡ್ ನಲ್ಲಿ ಈ ಮೆಥಡ್ ಅನ್ನು ಕಾಲ್ ಮಾಡೋಣ. |
02:08 | ಹಾಗಾಗಿ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಿ ಮೆಥಡ್ ಅನ್ನು ಕಾಲ್ ಮಾಡೋಣ. |
02:14 | Student ಸ್ಪೇಸ್ ಒಬ್ಜೆಕ್ಟ್ ನೇಮ್ stu ಸಮ new Student ಎಂದು ಟೈಪ್ ಮಾಡಿ. |
02:28 | ನಂತರ stu ಡಾಟ್ ಮೆಥಡ್ ನೇಮ್ ಅಂದರೆ studentDetail ಎಂದು ಟೈಪ್ ಮಾಡಿ. |
02:41 | ಸೇವ್ ಮಾಡಿ ರನ್ ಮಾಡಿರಿ. |
02:46 | ನಾವು zero ಮತ್ತು null ಎಂಬ ಫಲಿತವನ್ನು ಪಡೆಯುತ್ತೇವೆ. |
02:49 | int ವೇರಿಯೇಬಲ್ roll_number ಅದರ ಡಿಫಾಲ್ಟ್ ಬೆಲೆ ಸೊನ್ನೆಗೆ ಇನಿಷಿಯಲೈಜ್ ಆಗಿದೆ. |
02:56 | ಮತ್ತು String name ಅದರ ಡಿಫಾಲ್ಟ್ ಬೆಲೆ null ಗೆ ಇನಿಷಿಯಲೈಜ್ ಆಗಿದೆ. |
03:02 | ನಾವು ಯಾವುದೇ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡದಿದ್ದಲ್ಲಿ ಡಿಫಾಲ್ಟ್ ಕನ್ಸ್-ಟ್ರಕ್ಟರ್ ರಚನೆಯಾಗುತ್ತದೆ. |
03:08 | ಡಿಫಾಲ್ಟ್ ಕನ್ಸ್-ಟ್ರಕ್ಟರ್ ಯಾವುದೇ ಪ್ಯಾರಾಮೀಟರ್ ಗಳನ್ನು ಹೊಂದಿರುವುದಿಲ್ಲ. |
03:11 | ಅದು ಇನ್ಸಟೆನ್ಸ್ ವೇರಿಯೇಬಲ್ ಗಳನ್ನು ಅವುಗಳ ಡಿಫಾಲ್ಟ್ ಬೆಲೆಗಳಿಗೆ ಇನಿಷಿಯಲೈಜ್ ಮಾಡುತ್ತದೆ. |
03:16 | ಈಗ ಒಂದು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ. |
03:18 | Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿರಿ. ಕರ್ಲೀ ಬ್ರ್ಯಾಕೆಟ್ ತೆರೆದು ಮುಚ್ಚಿರಿ. |
03:30 | ನೆನಪಿಡಿ, ಕನ್ಸ್-ಟ್ರಕ್ಟರ್ ಗಳು ಅವುಗಳು ಯಾವ ಕ್ಲಾಸ್ ಗೇ ಸೇರಿರುತ್ತವೋ ಅದೇ ಹೆಸರನ್ನು ಹೊಂದಿರುತ್ತವೆ. |
03:38 | ಕನ್ಸ್-ಟ್ರಕ್ಟರ್ ಗಳು ಮೆಥಡ್ ಗಳನ್ನು ಹೋಲುತ್ತವೆ ಆದರೆ ಕೆಲವು ವ್ಯತ್ಯಾಸಗಳೂ ಇವೆ. |
03:44 | ಸೇವ್ ಮಾಡಿ ರನ್ ಮಾಡಿರಿ. |
03:48 | ನಾವು ಮೊದಲಿನ ಫಲಿತಾಂಶವನ್ನೇ ಪಡೆಯುತ್ತೇವೆ. |
03:51 | ಏಕೆಂದರೆ ನಾವು ಡಿಫೈನ್ ಮಾಡಿದ ಕನ್ಸ್-ಟ್ರಕ್ಟರ್, ಕನ್ಸ್-ಟ್ರಕ್ಟರ್ ಇಲ್ಲದಿರುವುದಕ್ಕೆ ಸಮ. |
03:58 | ಆದರೆ ಇಲ್ಲಿ ನಾವು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಿರುವುದರಿಂದ ಡಿಫಾಲ್ಟ್ ಕನ್ಸ್-ಟ್ರಕ್ಟರ್ ರಚನೆ ಆಗುವುದಿಲ್ಲ. |
04:06 | ಈಗ ವೇರಿಯೇಬಲ್ ಗಳಿಗೆ ಬೆಲೆಗಳನ್ನು ಕೊಡೋಣ. |
04:11 | ಅದಕ್ಕಾಗಿ ಕನ್ಸ್-ಟ್ರಕ್ಟರ್ ನ ಒಳಗೆ roll_number ಸಮ 10 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
04:25 | ಮತ್ತು name ಸಮ ಡಬಲ್ ಕೋಟ್ಸ್ ನಲ್ಲಿ Raman ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
04:35 | ಸೇವ್ ಮಾಡಿ ರನ್ ಮಾಡಿರಿ. |
04:43 | ನಾವು ಫಲಿತದಲ್ಲಿ roll_number ನ ಬೆಲೆ ಹತ್ತು ಮತ್ತು name' ನ ಬೆಲೆ Raman ಆಗಿರುವುದನ್ನು ನೋಡುತ್ತೇವೆ. |
04:50 | ಕನ್ಸ್-ಟ್ರಕ್ಟರ್ ಇನ್ಸ್-ಟೆನ್ಸ್ ಫೀಲ್ಡ್ ಅನ್ನು ಇನಿಷಿಯಲೈಜ್ ಮಾಡಿದೆ. |
04:55 | ಈಗ ಮೆಥಡ್ ಹಾಗೂ ಕನ್ಸ್-ಟ್ರಕ್ಟರ್ ಗಳ ನಡುವಿನ ವ್ಯತ್ಯಾಸಗಳನ್ನು ನೋಡೋಣ. |
05:01 | ಕನ್ಸ್-ಟ್ರಕ್ಟರ್ ಗಳು ರಿಟರ್ನ್ ಟೈಪ್ ಅನ್ನು ಹೊಂದಿರುವುದಿಲ್ಲ. |
05:05 | ಆದರೆ ಮೆಥಡ್ ಗಳು ರಿಟರ್ನ್ ಟೈಪ್ ಅನ್ನು ಹೊಂದಿರುತ್ತದೆ. |
05:10 | ಕನ್ಸ್-ಟ್ರಕ್ಟರ್ ಗಳು 'new ಆಪರೇಟರ್ ಗಳನ್ನು ಬಳಸಿ ಕಾಲ್ ಆಗುತ್ತವೆ. |
05:16 | ಆದರೆ ಮೆಥಡ್ ಗಳು ಡಾಟ್ ಆಪರೇಟರ್ ಗಳನ್ನು ಬಳಸಿ ಕಾಲ್ ಆಗುತ್ತವೆ. |
05:21 | ಇವು ಮೆಥಡ್ ಹಾಗೂ ಕನ್ಸ್-ಟ್ರಕ್ಟರ್ ಗಳ ನಡುವಿನ ಕೆಲವು ವ್ಯತ್ಯಾಸಗಳು. |
05:29 | ಈ ಟ್ಯುಟೋರಿಯಲ್ ನಲ್ಲಿ ನಾವು |
05:32 | ಡಿಫಾಲ್ಟ್ ಕನ್ಸ್-ಟ್ರಕ್ಟರ್ ನ ಕುರಿತು |
05:34 | ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಲು ಮತ್ತು |
05:36 | ಮೆಥಡ್ ಹಾಗೂ ಕನ್ಸ್-ಟ್ರಕ್ಟರ್ ಗಳ ನಡುವಿನ ವ್ಯತ್ಯಾಸಗಳನ್ನು ಕಲಿತಿದ್ದೇವೆ. |
05:41 | ಸ್ವಂತ ಅಭ್ಯಾಸಕ್ಕಾಗಿ, Employee ಎಂಬ ಕ್ಲಾಸ್ ಅನ್ನು , ವೇರಿಯೇಬಲ್ ಗಳನ್ನು ಮತ್ತು ಆ ವೇರಿಯೇಬಲ್ ಗಳನ್ನು ಫಲಿತದಲ್ಲಿ ತೋರಿಸಲು ಮೆಥಡ್ ಗಳನ್ನು ರಚನೆ ಮಾಡಿ. |
05:47 | ಮತ್ತು ಈ ಕ್ಲಾಸ್ ಗೆ ಒಂದು ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಿ |
05:52 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
05:54 | ಮತ್ತು ವೀಡಿಯೋಗಾಗಿ [1] ಎಂಬ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
06:00 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಬಗ್ಗೆ ತಿಳಿಸುತ್ತದೆ. |
06:03 | ನೀವು ಒಳ್ಳೆಯ ಬ್ಯಾಂಡ್ವಿಯಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋrಡ್ ಮಾಡಿ ಕೂಡಾ ನೋಡಬಹುದು. |
06:06 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
06:08 | ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
06:11 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ. |
06:14 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
06:20 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
06:24 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
06:29 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro |
06:38 | ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
06:40 | ಧನ್ಯವಾದಗಳು.. |
06:42 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ.. |