Blender/C2/Types-of-Windows-Outliner/Kannada
From Script | Spoken-Tutorial
Revision as of 12:42, 13 October 2014 by Vasudeva ahitanal (Talk | contribs)
Time | Narration |
00:03 | ಬ್ಲೆಂಡರ್ ನ ಟ್ಯುಟೋರಿಯಲ್ಸ್ ಸರಣಿಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನಲ್ಲಿಯ ಔಟ್ಲೈನರ್ ವಿಂಡೋ ಕುರಿತು ಇರುತ್ತದೆ. |
00:16 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್. |
00:28 | ಈ ಟ್ಯುಟೋರಿಯಲ್ ನೋಡಿದ ನಂತರ, |
00:33 | ಔಟ್ಲೈನರ್ ವಿಂಡೋ ಎಂದರೆ ಏನು; |
00:36 | ಔಟ್ಲೈನರ್ ವಿಂಡೋನಲ್ಲಿ Eye, Arrow ಮತ್ತು Camera ಐಕಾನ್ ಗಳೆಂದರೆ ಏನು; |
00:43 | ಮತ್ತು ಔಟ್ಲೈನರ್ ವಿಂಡೋನಲ್ಲಿ ಡಿಸ್ಪ್ಲೇ ಮೆನ್ಯು ಎಂದರೇನು ಎನ್ನುವುದರ ಬಗೆಗೆ ನಾವು ಕಲಿಯುವೆವು. |
00:49 | ಬ್ಲೆಂಡರ್ ಇಂಟರ್ಫೇಸ್ ನ ಮೂಲಭೂತ ಅಂಶಗಳ ಬಗೆಗೆ ನೀವು ತಿಳಿದಿರುವಿರಿ ಎಂದು ನಾನು ಭಾವಿಸುತ್ತೇನೆ. |
00:54 | ಇಲ್ಲದಿದ್ದಲ್ಲಿ ದಯವಿಟ್ಟು ನಮ್ಮ ಮೊದಲಿನ ಟ್ಯುಟೋರಿಯಲ್- Basic Description of the Blender Interface (ಬೇಸಿಕ್ ಡಿಸ್ಕ್ರಿಪ್ಶನ್ ಆಫ್ ದ ಬ್ಲೆಂಡರ್ ಇಂಟರ್ಫೇಸ್) ಅನ್ನು ನೋಡಿರಿ. |
01:03 | ಈ ಔಟ್ಲೈನರ್ ಎನ್ನುವುದು ಬ್ಲೆಂಡರ್ ನಲ್ಲಿಯ ಡೇಟಾದ ಫ್ಲೋಚಾರ್ಟ್ ಲಿಸ್ಟ್ ಆಗಿದೆ. |
01:09 | ಇದು ಡಿಫಾಲ್ಟ್ ಆಗಿ ಬ್ಲೆಂಡರ್ ಇಂಟರ್ಫೇಸ್ ನ ಮೇಲಿನ ಬಲಮೂಲೆಯಲ್ಲಿ ಇರುತ್ತದೆ. |
01:15 | ಔಟ್ಲೈನರ್ ವಿಂಡೋವನ್ನು ನಾವು ರಿಸೈಜ್ ಮಾಡೋಣ. |
01:20 | ಕೆಳಗಿನ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಇನ್ನೂ ಕೆಳಗೆ ಎಳೆಯಿರಿ. |
01:26 | ಎಡ ಅಂಚಿನ ಮೇಲೆ ಲೆಫ್ಟ್ ಕ್ಲಿಕ್ ಮಾಡಿ ಇನ್ನೂ ಎಡಕ್ಕೆ ಎಳೆಯಿರಿ. |
01:36 | ಔಟ್ಲೈನರ್ ವಿಂಡೋನಲ್ಲಿಯ ಆಯ್ಕೆಗಳನ್ನು ಈಗ ಹೆಚ್ಚು ಸ್ಪಷ್ಟವಾಗಿ ನಾವು ಕಾಣಬಹುದು. |
01:41 | ಬ್ಲೆಂಡರ್ ನಲ್ಲಿ ವಿಂಡೋವನ್ನು ಹೇಗೆ ರಿಸೈಜ್ ಮಾಡುವುದು ಎಂಬುದನ್ನು
ತಿಳಿಯಲು ನಮ್ಮ ಟ್ಯುಟೋರಿಯಲ್- |
01:47 | How to Change Window Types in Blender (ಹೌ ಟು ಚೇಂಜ್ ವಿಂಡೋ ಟೈಪ್ಸ್ ಇನ್ ಬ್ಲೆಂಡರ್) ಎನ್ನುವುದನ್ನು ನೋಡಿರಿ. |
01:59 | View ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
02:03 | ಇಲ್ಲಿರುವ ಹಲವಾರು ಆಯ್ಕೆಗಳೆಂದರೆ- |
02:06 | Show Restriction Columns, |
02:09 | Show Active, |
02:11 | Show/Hide One Level, |
02:14 | Show Hierarchy, |
02:17 | Duplicate Area into New Window ಮತ್ತು Toggle Full Screen ಇತ್ಯಾದಿ. |
02:25 | Show Restriction columns ಅನ್ನು ನಿಷ್ಕ್ರಿಯಗೊಳಿಸಿ. |
02:30 | ಔಟ್ಲೈನರ್ ವಿಂಡೋದ ಬಲಮೂಲೆಯಲ್ಲಿರುವ ವೀಕ್ಷಿಸಬಹುದಾದ, ಆಯ್ಕೆಮಾಡಬಹುದಾದ ಮತ್ತು ರೆಂಡರ್ ಮಾಡಬಹುದಾದ ಎಲ್ಲ ಆಯ್ಕೆಗಳನ್ನು ಇದು ಮರೆಮಾಡುತ್ತದೆ. |
02:42 | ಮತ್ತೊಮ್ಮೆ View ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
02:46 | ವೀಕ್ಷಿಸಬಹುದಾದ, ಆಯ್ಕೆಮಾಡಬಹುದಾದ ಮತ್ತು ರೆಂಡರ್ ಮಾಡಬಹುದಾದ ಎಲ್ಲ ಆಯ್ಕೆಗಳನ್ನು ಮತ್ತೆ ಕಾಣಿಸಿಕೊಳ್ಳುವಂತೆ ಮಾಡಲು Show Restriction columns ಅನ್ನು ಸಕ್ರಿಯಗೊಳಿಸಿ. |
02:56 | ಔಟ್ಲೈನರ್ ವಿಂಡೋನಲ್ಲಿ, Cube ನ ಎಡಗಡೆ ಇರುವ plus sign ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
03:03 | ಒಂದು ಕ್ಯಾಸ್ಕೇಡ್ ಲಿಸ್ಟ್ ಕಾಣಿಸಿಕೊಳ್ಳುತ್ತದೆ. |
03:05 | ಇದು ನಿಮಗೆ ಆಯ್ಕೆಯಾದ ಆಬ್ಜೆಕ್ಟ್ ನ ಗುಣಲಕ್ಷಣಗಳನ್ನುಳ್ಳ ಲಿಸ್ಟ್ ಒಂದನ್ನು ತೋರಿಸುತ್ತದೆ. |
03:11 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ಇವುಗಳನ್ನು ನಾವು ವಿವರವಾಗಿ ಚರ್ಚಿಸೋಣ. |
03:16 | Eye ನಿಮ್ಮ ಆಬ್ಜೆಕ್ಟ್ ಅನ್ನು 3D ವ್ಯೂ ನಲ್ಲಿ ಕಾಣುವಂತೆ ಅಥವಾ ಕಾಣದಿರುವಂತೆ ಮಾಡುತ್ತದೆ. |
03:24 | ಉದಾಹರಣೆಗೆ, Cube ಗಾಗಿ Eye ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
03:29 | ಈ ಕ್ಯೂಬ್, 3D ವ್ಯೂ ನಲ್ಲಿ ಇನ್ನು ಮುಂದೆ ಕಾಣುವದಿಲ್ಲ. |
03:35 | ಮತ್ತೊಮ್ಮೆ, Cube ಗಾಗಿ Eye ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
03:41 | ಈಗ ಕ್ಯೂಬ್ ಅನ್ನು 3D ವ್ಯೂನಲ್ಲಿ ಕಾಣಬಹುದು. |
03:48 | Arrow, ನಿಮ್ಮ ಆಬ್ಜೆಕ್ಟ್ ಅನ್ನು 3D ವ್ಯೂನಲ್ಲಿ ಆಯ್ಕೆಮಾಡಬಹುದಾದ ಅಥವಾ ಆಯ್ಕೆಮಾಡಲಾಗದ ಆಬ್ಜೆಕ್ಟ್ ನ್ನಾಗಿ ಮಾಡುತ್ತದೆ. |
03:56 | ಉದಾಹರಣೆಗೆ, Cube ಗಾಗಿ Arrow ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
04:02 | 3D ವ್ಯೂನಲ್ಲಿಯ ಕ್ಯೂಬ್ ಮೇಲೆ ರೈಟ್ ಕ್ಲಿಕ್ ಮಾಡಿರಿ. ಈ ಕ್ಯೂಬ್ ಅನ್ನು ಆಯ್ಕೆಮಾಡಲು ಸಾಧ್ಯವಿಲ್ಲ. |
04:10 | ಮತ್ತೆ, ಔಟ್ಲೈನರ್ ವಿಂಡೋದಲ್ಲಿ Cube ಗಾಗಿ Arrow ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
04:17 | 3D ವ್ಯೂನಲ್ಲಿಯ ಕ್ಯೂಬ್ ಮೇಲೆ ರೈಟ್ ಕ್ಲಿಕ್ ಮಾಡಿರಿ. |
04:21 | ಈ ಕ್ಯೂಬ್ಅನ್ನು ಈಗ ಆಯ್ಕೆಮಾಡಬಹುದು. |
04:28 | Camera, ನಿಮ್ಮ ಆಬ್ಜೆಕ್ಟ್ ಅನ್ನು ರೆಂಡರ್ ಮಾಡಬಹುದಾದ ಅಥವಾ ರೆಂಡರ್ ಮಾಡಲಾಗದ ಆಬ್ಜೆಕ್ಟ್ ನ್ನಾಗಿ ಮಾಡುತ್ತದೆ. |
04:34 | Cube ಗಾಗಿ Camera ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
04:38 | ಸೀನ್ ಅನ್ನು ರೆಂಡರ್ ಮಾಡಲು ನಿಮ್ಮ ಕೀಬೋರ್ಡ್ ಮೇಲಿನ F12 ಅನ್ನು ಒತ್ತಿರಿ. |
04:46 | ಈ ಕ್ಯೂಬ್, ರೆಂಡರ್ ನಲ್ಲಿ ಕಾಣುತ್ತಿಲ್ಲ. |
04:51 | 3D ವ್ಯೂ ಗೆ ಮರಳಿ ಹೋಗಲು ನಿಮ್ಮ ಕೀಬೋರ್ಡ್ ಮೇಲಿನ Esc ಅನ್ನು ಒತ್ತಿರಿ. |
04:56 | ಮತ್ತೆ, ಔಟ್ಲೈನರ್ ವಿಂಡೋದಲ್ಲಿ Cube ಗಾಗಿ Camera ದ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
05:03 | ಸೀನ್ ಅನ್ನು ರೆಂಡರ್ ಮಾಡಲು F12 ಅನ್ನು ಒತ್ತಿರಿ. |
05:09 | ಈ ಕ್ಯೂಬ್ ಅನ್ನು ರೆಂಡರ್ ನಲ್ಲಿ ಈಗ ಕಾಣಬಹುದು. |
05:15 | 3D ವ್ಯೂ ಗೆ ಮರಳಿ ಹೋಗಲು Esc ಅನ್ನು ಒತ್ತಿರಿ. |
05:21 | ಔಟ್ಲೈನರ್ ವಿಂಡೋನಲ್ಲಿಯ Search bar ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
05:28 | ನಿಮ್ಮ ಸೀನ್ ನಲ್ಲಿ ಅನೇಕ ಆಬ್ಜೆಕ್ಟ್ ಗಳಿದ್ದರೆ ಆವಾಗ ಈ ಸರ್ಚ್ ಟೂಲ್, ಸದೃಶ ಗುಂಪಿನ ಆಬ್ಜೆಕ್ಟ್ ಗಳನ್ನು ಅಥವಾ ಸೀನ್ ನಲ್ಲಿಯ ಯಾವುದೇ ನಿರ್ದಿಷ್ಟ ಆಬ್ಜೆಕ್ಟ್ ಅನ್ನು ಶೋಧಿಸಲು ಸಹಾಯ ಮಾಡುತ್ತದೆ. |
05:40 | ಔಟ್ಲೈನರ್ ವಿಂಡೋದ ಮೇಲೆ ಎಡ ಮೂಲೆಯಲ್ಲಿರುವ Scene ಎನ್ನುವುದು ನಿಮ್ಮ ಬ್ಲೆಂಡರ್ ಸೀನ್ ನಲ್ಲಿಯ ಎಲ್ಲ ಆಬ್ಜೆಕ್ಟ್ ಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಅಂಶಗಳನ್ನು ಲಿಸ್ಟ್ ಮಾಡುತ್ತದೆ. |
05:51 | All scenes ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
05:55 | ಈ ಡ್ರಾಪ್ಡೌನ್ ಲಿಸ್ಟ್, ಡಿಸ್ಪ್ಲೇ ಮೆನ್ಯು ಆಗಿದೆ. |
05:59 | ಔಟ್ಲೈನರ್ ಪ್ಯಾನೆಲ್ ಗಾಗಿ ಇದು ಡಿಸ್ಪ್ಲೇ ಆಯ್ಕೆಗಳನ್ನು ಒಳಗೊಂಡಿದೆ. |
06:04 | Current scene ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
06:08 | ಈಗಿನ ಸೀನ್ ನಲ್ಲಿ ಪ್ರಸ್ತುತವಿರುವ, ಔಟ್ಲೈನರ್ ವಿಂಡೋನಲ್ಲಿ ಲಿಸ್ಟ್ ಮಾಡಿದ ಎಲ್ಲ ಆಬ್ಜೆಕ್ಟ್ ಗಳನ್ನು ನೀವು ನೋಡಬಹುದು. |
06:18 | ಡಿಸ್ಪ್ಲೇ ಮೆನ್ಯು ಓಪನ್ ಮಾಡಲು Current scene ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
06:26 | Visible layers ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
06:30 | ಆಕ್ಟಿವ್ ಲೇಯರ್ ಅಥವಾ ಲೇಯರ್ಸ್ ನಲ್ಲಿ ಇರುವ ಎಲ್ಲ ಆಬ್ಜೆಕ್ಟ್ ಗಳು ಔಟ್ಲೈನರ್ ವಿಂಡೋನಲ್ಲಿ ಲಿಸ್ಟ್ ಮಾಡಲ್ಪಟ್ಟಿವೆ. |
06:38 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಲೇಯರ್ಸ್ ಕುರಿತು ವಿವರವಾಗಿ ಕಲಿಯುವೆವು. |
06:44 | ಡಿಸ್ಪ್ಲೇ ಮೆನ್ಯು ಓಪನ್ ಮಾಡಲು Visible layers ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
06:52 | Selected ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
06:55 | 3D ವ್ಯೂ ನಲ್ಲಿ ಆಯ್ಕೆಯಾದ ಆಬ್ಜೆಕ್ಟ್ ಅನ್ನು ಮಾತ್ರ ಔಟ್ಲೈನರ್ ಲಿಸ್ಟ್ ಮಾಡುತ್ತದೆ. |
07:04 | ಡಿಸ್ಪ್ಲೇ ಮೆನ್ಯು ಓಪನ್ ಮಾಡಲು Selected ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
07:09 | Active ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
07:12 | 3D ವ್ಯೂ ನಲ್ಲಿ ಇತ್ತೀಚೆಗೆ ಆಯ್ಕೆಯಾದ ಆಬ್ಜೆಕ್ಟ್ ಅನ್ನು ಮಾತ್ರ ಔಟ್ಲೈನರ್ ಲಿಸ್ಟ್ ಮಾಡುತ್ತದೆ. |
07:22 | ಡಿಸ್ಪ್ಲೇ ಮೆನ್ಯು ಓಪನ್ ಮಾಡಲು Active ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
07:28 | Same types ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
07:31 | ಅದರ ಹೆಸರೇ ಸೂಚಿಸುವಂತೆ, Same types ಎನ್ನುವ ಆಯ್ಕೆಯು ಔಟ್ಲೈನರ್ ನಲ್ಲಿ ಒಂದೇ ವರ್ಗಕ್ಕೆ ಸೇರಿದ ಎಲ್ಲ ಆಬ್ಜೆಕ್ಟ್ ಗಳನ್ನು ಲಿಸ್ಟ್ ಮಾಡುತ್ತದೆ. |
07:41 | ಉದಾಹರಣೆಗೆ, 3D ವ್ಯೂ ನಲ್ಲಿ ಈ ಕ್ಯೂಬ್, ಡಿಫಾಲ್ಟ್ ಆಗಿ ಆಯ್ಕೆಯಾಗಿದೆ. |
07:47 | ಹೀಗಾಗಿ, ಸೀನ್ ನಲ್ಲಿಯ ಎಲ್ಲ ಮೆಶ್ ಆಬ್ಜೆಕ್ಟ್ ಗಳನ್ನು ಔಟ್ಲೈನರ್ ಲಿಸ್ಟ್ ಮಾಡುತ್ತದೆ. |
07:51 | ಈ ಸಂದರ್ಭದಲ್ಲಿ, ಕ್ಯೂಬ್ ಮಾತ್ರ ಸೀನ್ ನಲ್ಲಿರುವ ಮೆಶ್ ಆಬ್ಜೆಕ್ಟ್ ಆಗಿದೆ. |
07:58 | ಬ್ಲೆಂಡರ್ ನಲ್ಲಿ ಅನಿಮೇಶನ್ ಕುರಿತು ಇರುವ ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ ನಾವು ಮೆಶ್ ಆಬ್ಜೆಕ್ಟ್ ಗಳ ಬಗೆಗೆ ವಿವರವಾಗಿ ಕಲಿಯುವೆವು. |
08:08 | ಡಿಸ್ಪ್ಲೇ ಮೆನ್ಯು ಓಪನ್ ಮಾಡಲು Same types ನ ಮೇಲೆ ಲೆಫ್ಟ್ ಕ್ಲಿಕ್ ಮಾಡಿರಿ. |
08:14 | Groups ಎನ್ನುವುದು ಸೀನ್ ನಲ್ಲಿರುವ ಎಲ್ಲ ಗುಂಪುಗೊಂಡ ಆಬ್ಜೆಕ್ಟ್ ಗಳನ್ನು ಲಿಸ್ಟ್ ಮಾಡುತ್ತದೆ. |
08:20 | ಇಲ್ಲಿ ಇನ್ನೂ ಬೇರೆ ಹಲವು ಆಯ್ಕೆಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡುವೆವು. |
08:27 | ಹೀಗೆ, ಇದು ಔಟ್ಲೈನರ್ ವಿಂಡೋದ ವಿಶ್ಲೇಷಣೆ ಆಗಿದೆ. |
08:32 | ಅನೇಕ ಆಬ್ಜೆಕ್ಟ್ ಗಳನ್ನು ಹೊಂದಿದ ದೊಡ್ಡ ದೃಶ್ಯದೊಂದಿಗೆ ಕೆಲಸ ಮಾಡುವಾಗ, ಸೀನ್ ನಲ್ಲಿಯ ಪ್ರತಿಯೊಂದು ಆಬ್ಜೆಕ್ಟ್ ನೆಡೆಗೆ ಗಮನವಿಡಲು ಔಟ್ಲೈನರ್ ವಿಂಡೋ ತುಂಬಾ ಉಪಯುಕ್ತ ಟೂಲ್ ಆಗುತ್ತದೆ. |
08:45 | ಈಗ ಒಂದು ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡಿ, ಔಟ್ಲೈನರ್ ನಲ್ಲಿ ಆಯ್ಕೆಯಾದವುಗಳ ಲಿಸ್ಟ್ ಮಾಡಿ ಮತ್ತು ಕ್ಯೂಬ್ ಅನ್ನು ರೆಂಡರ್ ಮಾಡಲಾರದಂತಾಗಿಸಿ. |
08:58 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
09:07 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ಗಳ ಮೇಲೆ ಲಭ್ಯವಿದೆ. |
09:12 | oscar.iitb.ac.in, and spoken-tutorial.org/ NMEICT-Intro. |
09:28 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
09:30 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:34 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:38 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
09:45 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು. |