C-and-Cpp/C2/First-C-Program/Kannada
From Script | Spoken-Tutorial
Revision as of 17:17, 20 August 2014 by Vasudeva ahitanal (Talk | contribs)
Time | Narration |
00:01 | ಮೊದಲನೇಯ ಸಿ ಪ್ರೊಗ್ರಾಮ್ ಎಂಬ ಈ ಸ್ಪೋಕನ್ ಟ್ಯುಟೊರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಿಂದ ನಾವು ತಿಳಿಯಬಹುದಾದ ಅಂಶಗಳು: |
00:08 | ಸಿ ಪ್ರೊಗ್ರಾಮ್ ಬರೆಯುವ ಬಗೆ, |
00:11 | ಕಂಪೈಲ್ ಮಾಡುವ ಬಗೆ, |
00:13 | ಎಕ್ಸಿಕ್ಯೂಟ್ ಮಾಡುವ ಬಗೆ, |
00:14 | ಸಾಮಾನ್ಯವಾಗಿ ಬರುವ ಎರರ್ ಗಳನ್ನೂ ಮತ್ತು ಅವುಗಳನ್ನು ಬಗೆಹರಿಸುವ ವಿಧಾನಗಳನ್ನೂ ನಾವು ವಿವರಿಸುತ್ತೇವೆ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ11.10 ನೇ ಆವೃತ್ತಿ ಮತ್ತು ಉಬುಂಟು ನಲ್ಲಿ gcc ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ. |
00:31 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, |
00:33 | ಉಬುಂಟು ಆಪರೇಟಿಂಗ್ ಸಿಸ್ಟಮ್ ಮತ್ತು ಒಂದು ಎಡಿಟರ್ ಅನ್ನು ಉಪಯೊಗಿಸಲು ನಿಮಗೆ ತಿಳಿದಿರಬೇಕು. |
00:38 | 'vim' ಮತ್ತು 'gedit' ಗಳು ಕೆಲವು ಎಡಿಟರ್ ಗಳು. |
00:42 | ಈ ಟ್ಯುಟೋರಿಯಲ್ ನಲ್ಲಿ ನಾನು gedit ಅನ್ನು ಉಪಯೋಗಿಸುತ್ತೇನೆ. |
00:45 | ಸಂಬಂಧಪಟ್ಟ ಟ್ಯುಟೋರಿಯಲ್ ಗಳಿಗಾಗಿ ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿ ಕೊಡಿ. |
00:51 | C ಪ್ರೊಗ್ರಾಮ್ ಅನ್ನು ಹೇಗೆ ಬರೆಯಬಹುದು ಎಂಬುದನ್ನು ಒಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ. |
00:55 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಒಪನ್ ಮಾಡಿ. |
01:07 | ಈಗ ಟೆಕ್ಸ್ಟ್ ಎಡಿಟರ್ ಅನ್ನು ಒಪನ್ ಮಾಡೊಣ. ಅದಕ್ಕಾಗಿ ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ, |
01:12 | “gedit” ಸ್ಪೇಸ್ “talk” ಡಾಟ್ “c” ಸ್ಪೇಸ್ “&” (ampersand) ಸೈನ್ |
01:20 | ampersand (&) ಅನ್ನು ನಾವು ಪ್ರಾಂಪ್ಟ್ ಅನ್ನು ಫ್ರೀ ಮಾಡಲು ಉಪಯೋಗಿಸುತ್ತೇವೆ. |
01:24 | ಎಲ್ಲಾ C ಫೈಲ್ ಗಳು “.c”ಎಂಬ ಎಕ್ಸ್ಟೆಂಶನ್ ಹೊಂದಿರುತ್ತವೆ ಎಂಬುದನ್ನು ಗಮನದಲ್ಲಿಡಿ. |
01:30 | ಈಗ “Enter” ಕೀ ಅನ್ನು ಪ್ರೆಸ್ ಮಾಡಿ. |
01:32 | ಈಗ ಟೆಕ್ಸ್ಟ್ ಎಡಿಟರ್ ಒಪನ್ ಆಗಿದೆ. |
01:36 | ಒಂದು ಪ್ರೊಗ್ರಾಮ್ ಬರೆಯಲು ಪ್ರಾರಂಭಿಸೋಣ. |
01:39 | (ಡಬಲ್ ಸ್ಲ್ಯಾಶ್) “//” ಸ್ಪೇಸ್ “My first C program” |
01:42 | ಎಂದು ಟೈಪ್ ಮಾಡಿ. |
01:48 | ಇಲ್ಲಿ, ಡಬಲ್ ಸ್ಲ್ಯಾಶ್ ಅನ್ನು ಲೈನ್ ಅನ್ನು ಕಮೆಂಟ್ ಮಾಡಲು ಉಪಯೋಗಿಸಲಾಗಿದೆ. |
01:52 | ಕಾಮೆಂಟ್ ಗಳನ್ನು, ಪ್ರೊಗ್ರಾಮ್ ಅನ್ನು ಅರ್ಥ ಮಾಡಿಕೊಳ್ಳಲು ಉಪಯೋಗಿಸುತ್ತೇವೆ. |
01:56 | ಡಾಕ್ಯುಮೆಂಟೇಶನ್ ನಲ್ಲಿಯೂ ಇದು ಸಹಾಯಕ. |
01:58 | ಇದು ಪ್ರೊಗ್ರಾಮ್ ನ ಬಗ್ಗೆ ಮಾಹಿತಿ ಕೊಡುತ್ತದೆ. |
02:01 | ಡಬಲ್ ಸ್ಲ್ಯಾಶ್ ಅನ್ನು (\\) ಸಿಂಗಲ್ ಲೈನ್ ಕಾಮೆಂಟ್ ಎನ್ನುತ್ತಾರೆ. |
02:07 | ಈಗ Enter ಒತ್ತಿ. |
02:09 | ಹ್ಯಾಶ್ “include” ಸ್ಪೇಸ್ ಒಪನಿಂಗ್ ಬ್ರಾಕೆಟ್, ಕ್ಲೋಸಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ. |
02:17 | ಯಾವಾಗಲೂ ಬ್ರಾಕೆಟ್ ಅನ್ನು ಮೊದಲು ಕಂಪ್ಲೀಟ್ ಮಾಡಿ ನಂತರ ಅದರೊಳಗೆ ಬರೆಯುವುದು ಒಳ್ಳೆಯ ಅಭ್ಯಾಸ. |
02:24 | ಈಗ ಬ್ರಾಕೆಟ್ ನ ಒಳಗೆ, “stdio” ಡಾಟ್ “h” ಎಂದು ಟೈಪ್ ಮಾಡಿ. |
02:30 | “stdio” ಡಾಟ್ “h” ಎಂಬುದು ಒಂದು ಹೆಡರ್ ಫೈಲ್ ಆಗಿದೆ. |
02:33 | ಸ್ಟಾಂಡರ್ಡ್ ಇನ್ ಪುಟ್ ಅಥವಾ ಔಟ್ ಪುಟ್ ಫಂಕ್ಷನ್ ಉಪಯೋಗಿಸುವ ಎಲ್ಲ ಪ್ರೊಗ್ರಾಮ್ ಗಳು ಈ ಹೆಡರ್ ಫೈಲ್ ಅನ್ನು ಹೊಂದಿರಲೇಬೇಕು. |
02:41 | ಈಗ Enter ಒತ್ತಿ. |
02:43 | “int” ಸ್ಪೇಸ್ “main” ಒಪನಿಂಗ್ ಬ್ರಾಕೆಟ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಅನ್ನು ಟೈಪ್ ಮಾಡಿ. |
02:50 | “main” ಎಂಬುದು ಒಂದು ವಿಶೇಷ ಫಂಕ್ಷನ್ ಆಗಿದೆ. |
02:52 | ಇದು, ಪ್ರೊಗ್ರಾಮ್, ಈ ಲೈನ್ ಇಂದ ಎಕ್ಸಿಕ್ಯೂಟ್ ಆಗಲು ಪ್ರಾರಂಭವಾಗುತ್ತದೆ, ಎಂಬುದನ್ನು ಸೂಚಿಸುತ್ತದೆ. |
02:58 | ಒಪನಿಂಗ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಅನ್ನು ಪ್ಯಾರಾಂಥೆಸಿಸ್ (parenthesis) ಎನ್ನುತ್ತಾರೆ. |
03:04 | ಮೈನ್ ನಂತರದ ಪ್ಯಾರಾಂಥೆಸಿಸ್, ಮೈನ್ ಎಂಬುದು ಒಂದು ಫಂಕ್ಷನ್ ಎಂಬುದನ್ನು ಸೂಚಿಸುತ್ತದೆ. |
03:11 | ಇಲ್ಲಿ, ಇಂಟ್ಮೈನ್ ಎಂಬ ಫಂಕ್ಷನ್, ಯಾವುದೇ ಆರ್ಗ್ಯುಮೆಂಟ್ ಗಳನ್ನು ಸ್ವೀಕರಿಸುವುದಿಲ್ಲ. |
03:15 | ಇದು ಒಂದು integer ವಿಧದ ಮೌಲ್ಯವನ್ನು ಕೊಡುತ್ತದೆ. |
03:18 | ಡೆಟಾ ಟೈಪ್ಸ್ ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
03:23 | ಈಗ, ಮೈನ್ ಫಂಕ್ಷನ್ ನ ಬಗ್ಗೆ ಇನ್ನಷ್ಟು ತಿಳಿಯಲು ಮುಂದಿನ ಸ್ಲೈಡನ್ನು ನೋಡೋಣ. |
03:29 | ಪ್ರತಿ ಪ್ರೊಗ್ರಾಮ್ ಕೂಡಾ, ಒಂದು ಮೈನ್ ಫಂಕ್ಷನ್ ಅನ್ನು ಹೊಂದಿರಲೇಬೇಕು. |
03:33 | ಒಂದಕ್ಕಿಂತ ಹೆಚ್ಚು ಮೈನ್ ಫಂಕ್ಷನ್ ಗಳು ಇರಬಾರದು. |
03:36 | ಇಲ್ಲದಿದ್ದಲ್ಲಿ, ಕಂಪೈಲರ್ ಗೆ ಪ್ರೋಗ್ರಾಮಿನ ಆರಂಭವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. |
03:41 | ಖಾಲಿ ಜೋಡಿ ಪ್ಯಾರಂಥೆಸಿಸ್, ಮೈನ್ ಫಂಕ್ಷನ್ ಗೆ ಆರ್ಗ್ಯುಮೆಂಟ್ ಇಲ್ಲ ಎಂಬುದನ್ನು ಸೂಚಿಸುತ್ತದೆ. |
03:46 | ಆರ್ಗ್ಯುಮೆಂಟ್ ಗಳ ಬಗ್ಗೆ ವಿವರವಾಗಿ ಮುಂಬರುವ ಟ್ಯುಟೋರಿಯಲ್ ನಲ್ಲಿ ಚರ್ಚಿಸೋಣ. |
03:52 | ಈಗ, ನಮ್ಮ ಪ್ರೋಗ್ರಾಮ್ ಗೆ ಹಿಂತಿರುಗೋಣ. |
03:55 | Enter ಒತ್ತಿ |
03:58 | ಓಪನಿಂಗ್ ಕರ್ಲಿ ಬ್ರಾಕೆಟ್ ( { ) ಅನ್ನು ಟೈಪ್ ಮಾಡಿ. |
04:00 | ಒಪನಿಂಗ್ ಕರ್ಲಿ ಬ್ರಾಕೆಟ್ ( { ), ಮೈನ್ ಫಂಕ್ಷನ್ ನ ಆರಂಭವನ್ನು ಸೂಚಿಸುತ್ತದೆ. |
04:04 | ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ) ಅನ್ನು ಟೈಪ್ ಮಾಡಿ. |
04:08 | ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ), ಮೈನ್ ಫಂಕ್ಷನ್ ನ ಅಂತ್ಯವನ್ನು ಸೂಚಿಸುತ್ತದೆ. |
04:13 | ಈಗ, ಬ್ರಾಕೆಟ್ ನ ಒಳಗೆ ಎರಡು ಬಾರಿ Enter ಒತ್ತಿ. |
04:16 | ಕರ್ಸರ್ ಅನ್ನು ಒಂದು ಲೈನ್ ಮೇಲೆ ತನ್ನಿ. |
04:20 | ಇಂಡೆಂಟೇಶನ್ (Indentation) ಇಂದ ಕೋಡ್ ಅನ್ನು ಒದಲು ಸುಲಭವಾಗುತ್ತದೆ. |
04:23 | ಇದು, ಎರರ್ ಅನ್ನು ಬೇಗ ಕಂಡುಹಿಡಿಯಲು ಕೂಡಾ, ಸಹಾಯ ಮಾಡುತ್ತದೆ. |
04:25 | ಹಾಗಾಗಿ, ಇಲ್ಲಿ ಮೂರು ಸ್ಪೇಸ್ ಕೊಡೋಣ. |
04:29 | ಮತ್ತು, printf ಒಪನಿಂಗ್ ಬ್ರಾಕೆಟ್, ಕ್ಲೋಸಿಂಗ್ ಬ್ರಾಕೆಟ್ ಅನ್ನು ಟೈಪ್ ಮಾಡಿ |
04:34 | printf ಎಂಬುದು, ಟರ್ಮಿನಲ್ ಗೆ ಔಟ್ ಪುಟ್ ಅನ್ನು ಪ್ರಿಂಟ್ ಮಾಡಲು ಇರುವ, ಒಂದು ಸ್ಟಾಂಡರ್ಡ್ C ಫಂಕ್ಷನ್ ಆಗಿದೆ. |
04:39 | ಇಲ್ಲಿ, ಬ್ರಾಕೆಟ್ ನ ಒಳಗೆ, ಡಬಲ್ ಕೋಟ್ಸ್ ಅನ್ನು ಟೈಪ್ ಮಾಡಿ, |
04:43 | printf ಸ್ಟೇಟ್ಮೆಂಟ್ ನ ಡಬಲ್ ಕೋಟ್ಸ್ ನ ಒಳಗೆ ಏನೇ ಇದ್ದರೂ, ಅದು ಟರ್ಮಿನಲ್ ಗೆ ಪ್ರಿಂಟ್ ಆಗುತ್ತದೆ. |
04:50 | ಡಬಲ್ ಕೋಟ್ಸ್ ಒಳಗೆ, “Talk to a teacher” ಬ್ಯಾಕ್ ಸ್ಲ್ಯಾಶ್ “n” ಎಂದು ಟೈಪ್ ಮಾಡಿ. |
04:59 | ಬ್ಯಾಕ್ ಸ್ಲ್ಯಾಶ್ “n” (\n) ಎನ್ನುವುದು ಹೊಸ ಲೈನ್ ಅನ್ನು ಸೂಚಿಸುತ್ತದೆ. |
05:03 | ಇದರಿಂದಾಗಿ, “printf” ಸ್ಟೇಟ್ಮೆಂಟ್ ನ ಎಕ್ಸಿಕ್ಯೂಶನ್ ನ ನಂತರ, ಕರ್ಸರ್ ಹೊಸ ಲೈನ್ ಗೆ ಹೋಗುತ್ತದೆ. |
05:10 | ಎಲ್ಲ C ಸ್ಟೇಟ್ಮೆಂಟ್ ಗಳೂ ಸೆಮಿಕೊಲನ್ (;) ಇಂದ ಕೊನೆಗೊಳ್ಳಬೇಕು. |
05:15 | ಹಾಗಾಗಿ, ಇದನ್ನು ಲೈನ್ ನ ಕೊನೆಗೆ ಟೈಪ್ ಮಾಡಿ. |
05:19 | ಸೆಮಿಕೊಲನ್, ಸ್ಟೇಟ್ಮೆಂಟ್ ಅನ್ನು ಕೊನೆಗೊಳಿಸುತ್ತದೆ. |
05:24 | ಈಗ, Enter ಒತ್ತಿ. ಇಲ್ಲಿ ಮೂರು ಸ್ಪೇಸ್ ಕೊಡಿ. |
05:27 | ಮತ್ತು, ರಿಟರ್ನ್ ಸ್ಪೇಸ್ ಝೀರೊ (zero) ಸೆಮಿಕೋಲನ್ ( ; )ಎಂದು ಟೈಪ್ ಮಾಡಿ. |
05:34 | ಈ ಸ್ಟೇಟ್ಮೆಂಟ್, ಪೂರ್ಣಾಂಕ ಝೀರೊ ಅನ್ನು ರಿಟರ್ನ್ ಮಾಡುತ್ತದೆ. |
05:38 | ಈ ಫಂಕ್ಷನ್ int ಟೈಪ್ ನದ್ದಾಗಿರುವುದರಿಂದ, integer ಮೌಲ್ಯವನ್ನೇ ರಿಟರ್ನ್ ಮಾಡಬೇಕು. |
05:45 | ರಿಟರ್ನ್ ಸ್ಟೇಟ್ಮೆಂಟ್, ಎಕ್ಸಿಕ್ಯೂಟ್ ಮಾಡಬಹುದಾದಂತಹ ಸ್ಟೇಟ್ಮೆಂಟ್ ಗಳ ಕೊನೆಯನ್ನು ಸೂಚಿಸುತ್ತದೆ. |
05:51 | ರಿಟರ್ನ್ ಆದ ಮೌಲ್ಯಗಳ ಬಗ್ಗೆ ಬೇರೆ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
05:55 | ಈಗ ಫೈಲ್ ಅನ್ನು ಸೇವ್ ಮಾಡಲು “Save” ಬಟನ್ ಅನ್ನು ಕ್ಲಿಕ್ ಮಾಡಿ. |
06:00 | ಆಗಾಗ್ಗೆ, ಫೈಲ್ ಗಳನ್ನು ಸೇವ್ ಮಾಡುವುದು ಒಳ್ಳೆಯ ಅಭ್ಯಾಸ. |
06:03 | ಇದು, ಹಠಾತ್ ವಿದ್ಯುತ್ ವ್ಯತ್ಯಯದಿಂದಾಗುವ ತೊಂದರೆಯನ್ನು ತಪ್ಪಿಸುತ್ತದೆ. |
06:05 | ಇದು, ಅಪ್ಲಿಕೇಶನ್ ಗಳು ಕ್ರ್ಯಾಶ್ ಆದ ಪರಿಸ್ಥಿತಿಯಲ್ಲೂ ಸಹಾಯಕವಾಗಿದೆ. |
06:10 | ಟರ್ಮಿನಲ್ ಗೆ ಬನ್ನಿ, ಈಗ, ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡೋಣ. |
06:15 | “gcc” ಸ್ಪೇಸ್ “talk.c” ಸ್ಪೇಸ್ ಹೈಫನ್ (-) ಒ (O) ಸ್ಪೇಸ್ “myoutput” ಎಂದು ಟೈಪ್ ಮಾಡಿ. |
06:24 | “gcc” ಎಂಬುದು ಒಂದು ಕಂಪೈಲರ್. |
06:27 | talk.c ಎಂಬುದು ನಮ್ಮ ಫೈಲ್ ಹೆಸರು. |
06:30 | ಹೈಫನ್ ಒ myoutput (-O myoutput), ಎಕ್ಸಿಕ್ಯೂಟ್ ಮಾಡಬಹುದಾದವುಗಳು myoutput ಎಂಬ ಫೈಲ್ ಗೆ ಹೋಗಬೇಕು ಎಂಬುದನ್ನು ಸೂಚಿಸುತ್ತದೆ. |
06:37 | ಈಗ Enter ಒತ್ತಿ. |
06:39 | ಪ್ರೊಗ್ರಾಮ್ ಕಂಪೈಲ್ ಆಗಿರುವುದನ್ನು ನಾವು ಕಾಣುತ್ತೇವೆ. |
06:42 | ls ಸ್ಪೇಸ್ (ಹೈಫನ್) -lrt ಎಂದು ಟೈಪ್ ಮಾಡಿ, Enter ಒತ್ತುವುದರಿಂದ myoutput ಎಂಬುದು ಕೊನೆಗೆ ಕ್ರಿಯೇಟ್ ಆದ ಫೈಲ್ ಎಂಬುದು ತಿಳಿಯುತ್ತದೆ. |
06:54 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು, ( ./ ) ಡಾಟ್ ಸ್ಲ್ಯಾಶ್ myoutput ಎಂದು ಟೈಪ್ ಮಾಡಿ Enter ಒತ್ತಿ. |
07:01 | ಇಲ್ಲಿ, “Talk to a teacher” ಎಂದು ಔಟ್ ಪುಟ್ ತೋರಿಸುತ್ತದೆ. |
07:06 | ಮೊದಲೇ ನಾನು ಹೇಳಿದಂತೆ, ರಿಟರ್ನ್ ಸ್ಟೇಟ್ಮೆಂಟ್, ಕಟ್ಟಕಡೆಗೆ ಎಕ್ಸಿಕ್ಯೂಟ್ ಆಗುವ ಸ್ಟೇಟ್ಮೆಂಟ್ ಆಗಿದೆ. |
07:10 | ಹಾಗಾಗಿ, ರಿಟರ್ನ್ ಸ್ಟೇಟ್ಮೆಂಟ್ ನಂತರ ಯಾವುದೂ ಎಕ್ಸಿಕ್ಯೂಟ್ ಆಗುವುದಿಲ್ಲ. ಇದನ್ನು ಪ್ರಯತ್ನಿಸೋಣ. |
07:15 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
07:17 | ರಿಟರ್ನ್ ಸ್ಟೇಟ್ಮೆಂಟ್ ನಂತರ, ಇನ್ನೊಂದು “printf” ಸ್ಟೇಟ್ಮೆಂಟ್ ಅನ್ನು ಸೇರಿಸೋಣ. |
07:22 | ಇಲ್ಲಿ, ಸ್ಪೇಸ್ ಕೊಟ್ಟು, printf ಓಪನಿಂಗ್ ಬ್ರಾಕೆಟ್, ಕ್ಲೊಸಿಂಗ್ ಬ್ರಾಕೆಟ್ ಅನ್ನು ಟೈಪ್ ಮಾಡಿ. |
07:27 | ಬ್ರಾಕೆಟ್ ನೊಳಗೆ, ಎರಡು ಡಬಲ್ ಕೋಟ್ಸ್ ಟೈಪ್ ಮಾಡಿ. ಅದರೊಳಗೆ welcome ಬ್ಯಾಕ್ ಸ್ಲ್ಯಾಶ್ n ಎಂದು ಟೈಪ್ ಮಾಡಿ, ಕೊನೆಗೆ ಸೆಮಿಕೊಲನ್ ಟೈಪ್ ಮಾಡಿ. |
07:35 | ಈಗ save ಮೇಲೆ ಕ್ಲಿಕ್ ಮಾಡಿ. |
07:37 | ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡಿ ನಮ್ಮ ಟರ್ಮಿನಲ್ ಗೆ ಹಿಂತಿರುಗೋಣ. |
07:41 | up arrow (ಅಪ್ ಆರೊ) ಕೀ ಉಪಯೊಗಿಸಿ, ಹಿಂದೆ ಉಪಯೋಗಿಸಿದ ಕಮಾಂಡ್ ಗಳನ್ನು ಮತ್ತೆ ಉಪಯೋಗಿಸಬಹುದು. |
07:46 | ನಾನೀಗ ಅದನ್ನೇ ಮಾಡಿದೆ. |
07:51 | “welcome” ಎಂಬ ಎರಡನೇ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗಿಲ್ಲದಿರುವುದನ್ನು ನೋಡುತ್ತೇವೆ. |
07:58 | ಈಗ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
08:00 | “Welcome” ಸ್ಟೇಟ್ಮೆಂಟ್ ಅನ್ನು ರಿಟರ್ನ್ ಸ್ಟೇಟ್ಮೆಂಟ್ ನ ಮೇಲೆ ಬರೆಯೋಣ. |
08:06 | Save ಮೇಲೆ ಕ್ಲಿಕ್ ಮಾಡಿ. |
08:09 | ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. |
08:15 | ಎರಡನೇ printf ಸ್ಟೇಟ್ಮೆಂಟ್ ಕೂಡಾ ಎಕ್ಸಿಕ್ಯೂಟ್ ಆಗಿರುವುದನ್ನು ನೋಡುತ್ತೇವೆ. |
08:23 | ಈಗ, ಸಾಮಾನ್ಯವಾಗಿ ಬರುವ ಎರರ್ ಗಳನ್ನು ಗಮನಿಸೋಣ. ನಮ್ಮ ಪ್ರೊಗ್ರಾಮ್ ಗೆ ಬನ್ನಿ. |
08:29 | “stdio.h” ನಲ್ಲಿ, ನಾನು ಡಾಟ್ ಅನ್ನು ಬಿಡುತ್ತೇನೆ ಎಂದೆಣಿಸಿ. Save ಮೇಲೆ ಕ್ಲಿಕ್ ಮಾಡಿ. |
08:36 | ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. |
08:41 | ನಮ್ಮ “talk.c” ಫೈಲ್ ನ |
08:42 | ಲೈನ್ ನಂಬರ್ ಎರಡರಲ್ಲಿ ಒಂದು ಫ್ಯಾಟಲ್ ಎರರ್ ಇರುವುದನ್ನು ನಾವು ಕಾಣುತ್ತೇವೆ. |
08:48 | “stdioh” ಎಂಬ ಹೆಡರ್ ಫೈಲ್ ಅನ್ನು ಕಂಪೈಲರ್ ಗೆ ಕಂಡುಹಿಡಿಯಲು ಆಗದಿರುವುದರಿಂದ “no such file or directory” ಎಂಬ ಎರರ್ ಅನ್ನು ಕೊಡುತ್ತದೆ. |
08:59 | ಮತ್ತು, ಕಂಪೈಲೇಶನ್ ಅಂತ್ಯಗೊಳ್ಳುತ್ತದೆ. |
09:03 | ಈಗ, ಈ ಎರರ್ ಅನ್ನು ಸರಿಪಡಿಸೋಣ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಪುನಃ ಡಾಟ್ ಸೇರಿಸೋಣ, Save ಮೇಲೆ ಕ್ಲಿಕ್ ಮಾಡಿ. |
09:11 | ಈಗ, ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. ಹೌದು, ಇದು ಕೆಲಸ ಮಾಡುತ್ತಿದೆ. |
09:19 | ನಾನು ಇನ್ನೊಂದು ಸಾಮಾನ್ಯ ಎರರ್ ಅನ್ನು ತೋರಿಸುತ್ತೇನೆ. |
09:22 | ಪ್ರೊಗ್ರಾಮ್ ಗೆ ಹಿಂತಿರುಗೋಣ. |
09:25 | ಈಗ, ಲೈನ್ ನ ಕೊನೆಯಲ್ಲಿ, ನಾನು ಸೆಮಿಕೊಲನ್ ಅನ್ನು ಬಿಡುತ್ತೇನೆ ಎಂದೆಣಿಸಿ. |
09:31 | Save ಮೇಲೆ ಕ್ಲಿಕ್ ಮಾಡಿ. ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. |
09:41 | ನಮ್ಮ talk.c ಫೈಲ್ ನ ಆರನೇ ಲೈನ್ ನಲ್ಲಿ ಒಂದು ಎರರ್ ಇರುವುದನ್ನು ಕಾಣುತ್ತೇವೆ. ಅದು “expected semicolon before printf” ಎಂದು. |
09:51 | ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. |
09:54 | ನಾನು ಮೊದಲೇ ಹೇಳಿದಂತೆ, ಸೆಮಿಕೊಲನ್, ಸ್ಟೇಟ್ಮೆಂಟ್ ನ ಟರ್ಮಿನೇಟರ್ ನಂತೆ ವರ್ತಿಸುತ್ತದೆ. |
09:58 | ಹಾಗಾಗಿ, ಅದು ಐದನೇ ಲೈನ್ ನ ಕೊನೆಗೆ ಮತ್ತು ಆರನೇ ಲೈನ್ ನ ಮೊದಲಿಗೆ ಸೆಮಿಕೊಲನ್ ಅನ್ನು ಹುಡುಕುತ್ತದೆ. |
10:06 | ಇದು ಆರನೇ ಲೈನ್. |
10:09 | ಇದೇ ನೀವು ಸೆಮಿಕೊಲನ್ ಹಾಕಬಹುದಾದ ಕೊನೆಯ ಸ್ಥಳ. |
10:12 | ಕಂಪೈಲರ್ ಕೂಡಾ ಆರನೇ ಲೈನ್ ನಲ್ಲಿ ಎರರ್ ಅನ್ನು ತೋರಿಸಿದ್ದನ್ನು ನೆನೆಯಬಹುದು. |
10:18 | ಇಲ್ಲಿ ಸೆಮಿಕೊಲನ್ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಪ್ರಯತ್ನಿಸೋಣ. |
10:23 | Save ಮೇಲೆ ಕ್ಲಿಕ್ ಮಾಡಿ. |
10:26 | ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. |
10:30 | ಹೌದು, ಇದು ಕೆಲಸ ಮಾಡುತ್ತಿದೆ. |
10:32 | ಈಗ ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಸೆಮಿಕೊಲನ್ ಅನ್ನು ಲೈನ್ ನ ಕೊನೆಗೆ ಟೈಪ್ ಮಾಡುವುದು ಸಂಪ್ರದಾಯ. |
10:40 | ಹಾಗಾಗಿ ಸೆಮಿಕೊಲನ್ ಅನ್ನು ಲೈನ್ ನ ಕೊನೆಗೆ ಟೈಪ್ ಮಾಡೋಣ. |
10:46 | ಈಗ Save ಮೇಲೆ ಕ್ಲಿಕ್ ಮಾಡಿ. |
10:49 | ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. ಹೌದು, ಇದು ಕೆಲಸ ಮಾಡುತ್ತಿದೆ. |
10:54 | ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
10:57 | “Welcome to the World of C” |
10:59 | ಎಂದು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ |
11:02 | ಸ್ಲ್ಯಾಶ್ N ಅನ್ನು printf ಸ್ಟೇಟ್ಮೆಂಟ್ ನಲ್ಲಿ ಸೇರಿಸದಿದ್ದರೆ ಏನಾಗುತ್ತದೆ ಎಂದು ನೋಡಿ. |
11:08 | ಇಲ್ಲಿಗೆ ನಾವು ಈ ಪಾಠದ ಕೊನೆಗೆ ಬಂದೆವು. |
11:12 | ಕೆಳಗೆ ತೋರಿಸಿದ ಲಿಂಕ್ ನಲ್ಲಿರುವ ವಿಡಿಯೋ ನೋಡಿ. |
11:15 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
11:18 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
11:22 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, |
11:24 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
11:28 | ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
11:31 | ಹೆಚ್ಚಿನ ಮಾಹಿತಿಗಾಗಿ, contact @ spoken-tutorial.org ಗೆ ಬರೆಯಿರಿ. |
11:38 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
11:42 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
11:47 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
11:51 | ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ. ಧನ್ಯವಾದಗಳು. |