C-and-Cpp/C2/First-C-Program/Kannada

From Script | Spoken-Tutorial
Jump to: navigation, search
Time Narration
00:01 ಮೊದಲನೇಯ ಸಿ ಪ್ರೊಗ್ರಾಮ್ ಎಂಬ ಈ ಸ್ಪೋಕನ್ ಟ್ಯುಟೊರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಿಂದ ನಾವು ತಿಳಿಯಬಹುದಾದ ಅಂಶಗಳು:
00:08 ಸಿ ಪ್ರೊಗ್ರಾಮ್ ಬರೆಯುವ ಬಗೆ,
00:11 ಕಂಪೈಲ್ ಮಾಡುವ ಬಗೆ,
00:13 ಎಕ್ಸಿಕ್ಯೂಟ್ ಮಾಡುವ ಬಗೆ, ಸಾಮಾನ್ಯವಾಗಿ ಬರುವ ಎರರ್ ಗಳನ್ನೂ ಮತ್ತು ಅವುಗಳನ್ನು ಬಗೆಹರಿಸುವ ವಿಧಾನಗಳನ್ನೂ ನಾವು ವಿವರಿಸುತ್ತೇವೆ.
00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ11.10 ನೇ ಆವೃತ್ತಿ ಮತ್ತು ಉಬುಂಟು ನಲ್ಲಿ gcc ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
00:31 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು,
00:33 ಉಬುಂಟು ಆಪರೇಟಿಂಗ್ ಸಿಸ್ಟಮ್ ಮತ್ತು ಒಂದು ಎಡಿಟರ್ ಅನ್ನು ಉಪಯೊಗಿಸಲು ನಿಮಗೆ ತಿಳಿದಿರಬೇಕು.
00:38 'vim' ಮತ್ತು 'gedit' ಗಳು ಕೆಲವು ಎಡಿಟರ್ ಗಳು.
00:42 ಈ ಟ್ಯುಟೋರಿಯಲ್ ನಲ್ಲಿ ನಾನು gedit ಅನ್ನು ಉಪಯೋಗಿಸುತ್ತೇನೆ.
00:45 ಸಂಬಂಧಪಟ್ಟ ಟ್ಯುಟೋರಿಯಲ್ ಗಳಿಗಾಗಿ ಇಲ್ಲಿ ತೋರಿಸಿರುವ ವೆಬ್ಸೈಟ್ ಗೆ ಭೇಟಿ ಕೊಡಿ.
00:51 C ಪ್ರೊಗ್ರಾಮ್ ಅನ್ನು ಹೇಗೆ ಬರೆಯಬಹುದು ಎಂಬುದನ್ನು ಒಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ.
00:55 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೆ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಒಪನ್ ಮಾಡಿ.
01:07 ಈಗ ಟೆಕ್ಸ್ಟ್ ಎಡಿಟರ್ ಅನ್ನು ಒಪನ್ ಮಾಡೊಣ. ಅದಕ್ಕಾಗಿ ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ,
01:12 “gedit” ಸ್ಪೇಸ್ “talk” ಡಾಟ್ “c” ಸ್ಪೇಸ್ “&” (ampersand) ಸೈನ್
01:20 ampersand (&) ಅನ್ನು ನಾವು ಪ್ರಾಂಪ್ಟ್ ಅನ್ನು ಫ್ರೀ ಮಾಡಲು ಉಪಯೋಗಿಸುತ್ತೇವೆ.
01:24 ಎಲ್ಲಾ C ಫೈಲ್ ಗಳು “.c”ಎಂಬ ಎಕ್ಸ್ಟೆಂಶನ್ ಹೊಂದಿರುತ್ತವೆ ಎಂಬುದನ್ನು ಗಮನದಲ್ಲಿಡಿ.
01:30 ಈಗ “Enter” ಕೀ ಅನ್ನು ಪ್ರೆಸ್ ಮಾಡಿ.
01:32 ಈಗ ಟೆಕ್ಸ್ಟ್ ಎಡಿಟರ್ ಒಪನ್ ಆಗಿದೆ.
01:36 ಒಂದು ಪ್ರೊಗ್ರಾಮ್ ಬರೆಯಲು ಪ್ರಾರಂಭಿಸೋಣ.
01:39 (ಡಬಲ್ ಸ್ಲ್ಯಾಶ್) “//” ಸ್ಪೇಸ್ “My first C program”
01:42 ಎಂದು ಟೈಪ್ ಮಾಡಿ.
01:48 ಇಲ್ಲಿ, ಡಬಲ್ ಸ್ಲ್ಯಾಶ್ ಅನ್ನು ಲೈನ್ ಅನ್ನು ಕಮೆಂಟ್ ಮಾಡಲು ಉಪಯೋಗಿಸಲಾಗಿದೆ.
01:52 ಕಾಮೆಂಟ್ ಗಳನ್ನು, ಪ್ರೊಗ್ರಾಮ್ ಅನ್ನು ಅರ್ಥ ಮಾಡಿಕೊಳ್ಳಲು ಉಪಯೋಗಿಸುತ್ತೇವೆ.
01:56 ಡಾಕ್ಯುಮೆಂಟೇಶನ್ ನಲ್ಲಿಯೂ ಇದು ಸಹಾಯಕ.
01:58 ಇದು ಪ್ರೊಗ್ರಾಮ್ ನ ಬಗ್ಗೆ ಮಾಹಿತಿ ಕೊಡುತ್ತದೆ.
02:01 ಡಬಲ್ ಸ್ಲ್ಯಾಶ್ ಅನ್ನು (\\) ಸಿಂಗಲ್ ಲೈನ್ ಕಾಮೆಂಟ್ ಎನ್ನುತ್ತಾರೆ.
02:07 ಈಗ Enter ಒತ್ತಿ.
02:09 ಹ್ಯಾಶ್ “include” ಸ್ಪೇಸ್ ಒಪನಿಂಗ್ ಬ್ರಾಕೆಟ್, ಕ್ಲೋಸಿಂಗ್ ಬ್ರಾಕೆಟ್ ಎಂದು ಟೈಪ್ ಮಾಡಿ.
02:17 ಯಾವಾಗಲೂ ಬ್ರಾಕೆಟ್ ಅನ್ನು ಮೊದಲು ಕಂಪ್ಲೀಟ್ ಮಾಡಿ ನಂತರ ಅದರೊಳಗೆ ಬರೆಯುವುದು ಒಳ್ಳೆಯ ಅಭ್ಯಾಸ.
02:24 ಈಗ ಬ್ರಾಕೆಟ್ ನ ಒಳಗೆ, “stdio” ಡಾಟ್ “h” ಎಂದು ಟೈಪ್ ಮಾಡಿ.
02:30 “stdio” ಡಾಟ್ “h” ಎಂಬುದು ಒಂದು ಹೆಡರ್ ಫೈಲ್ ಆಗಿದೆ.
02:33 ಸ್ಟಾಂಡರ್ಡ್ ಇನ್ ಪುಟ್ ಅಥವಾ ಔಟ್ ಪುಟ್ ಫಂಕ್ಷನ್ ಉಪಯೋಗಿಸುವ ಎಲ್ಲ ಪ್ರೊಗ್ರಾಮ್ ಗಳು ಈ ಹೆಡರ್ ಫೈಲ್ ಅನ್ನು ಹೊಂದಿರಲೇಬೇಕು.
02:41 ಈಗ Enter ಒತ್ತಿ.
02:43 “int” ಸ್ಪೇಸ್ “main” ಒಪನಿಂಗ್ ಬ್ರಾಕೆಟ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
02:50 “main” ಎಂಬುದು ಒಂದು ವಿಶೇಷ ಫಂಕ್ಷನ್ ಆಗಿದೆ.
02:52 ಇದು, ಪ್ರೊಗ್ರಾಮ್, ಈ ಲೈನ್ ಇಂದ ಎಕ್ಸಿಕ್ಯೂಟ್ ಆಗಲು ಪ್ರಾರಂಭವಾಗುತ್ತದೆ, ಎಂಬುದನ್ನು ಸೂಚಿಸುತ್ತದೆ.
02:58 ಒಪನಿಂಗ್ ಮತ್ತು ಕ್ಲೋಸಿಂಗ್ ಬ್ರಾಕೆಟ್ ಅನ್ನು ಪ್ಯಾರಾಂಥೆಸಿಸ್ (parenthesis) ಎನ್ನುತ್ತಾರೆ.
03:04 ಮೈನ್ ನಂತರದ ಪ್ಯಾರಾಂಥೆಸಿಸ್, ಮೈನ್ ಎಂಬುದು ಒಂದು ಫಂಕ್ಷನ್ ಎಂಬುದನ್ನು ಸೂಚಿಸುತ್ತದೆ.
03:11 ಇಲ್ಲಿ, ಇಂಟ್ಮೈನ್ ಎಂಬ ಫಂಕ್ಷನ್, ಯಾವುದೇ ಆರ್ಗ್ಯುಮೆಂಟ್ ಗಳನ್ನು ಸ್ವೀಕರಿಸುವುದಿಲ್ಲ.
03:15 ಇದು ಒಂದು integer ವಿಧದ ಮೌಲ್ಯವನ್ನು ಕೊಡುತ್ತದೆ.
03:18 ಡೆಟಾ ಟೈಪ್ಸ್ ಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
03:23 ಈಗ, ಮೈನ್ ಫಂಕ್ಷನ್ ನ ಬಗ್ಗೆ ಇನ್ನಷ್ಟು ತಿಳಿಯಲು ಮುಂದಿನ ಸ್ಲೈಡನ್ನು ನೋಡೋಣ.
03:29 ಪ್ರತಿ ಪ್ರೊಗ್ರಾಮ್ ಕೂಡಾ, ಒಂದು ಮೈನ್ ಫಂಕ್ಷನ್ ಅನ್ನು ಹೊಂದಿರಲೇಬೇಕು.
03:33 ಒಂದಕ್ಕಿಂತ ಹೆಚ್ಚು ಮೈನ್ ಫಂಕ್ಷನ್ ಗಳು ಇರಬಾರದು.
03:36 ಇಲ್ಲದಿದ್ದಲ್ಲಿ, ಕಂಪೈಲರ್ ಗೆ ಪ್ರೋಗ್ರಾಮಿನ ಆರಂಭವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.
03:41 ಖಾಲಿ ಜೋಡಿ ಪ್ಯಾರಂಥೆಸಿಸ್, ಮೈನ್ ಫಂಕ್ಷನ್ ಗೆ ಆರ್ಗ್ಯುಮೆಂಟ್ ಇಲ್ಲ ಎಂಬುದನ್ನು ಸೂಚಿಸುತ್ತದೆ.
03:46 ಆರ್ಗ್ಯುಮೆಂಟ್ ಗಳ ಬಗ್ಗೆ ವಿವರವಾಗಿ ಮುಂಬರುವ ಟ್ಯುಟೋರಿಯಲ್ ನಲ್ಲಿ ಚರ್ಚಿಸೋಣ.
03:52 ಈಗ, ನಮ್ಮ ಪ್ರೋಗ್ರಾಮ್ ಗೆ ಹಿಂತಿರುಗೋಣ.
03:55 Enter ಒತ್ತಿ
03:58 ಓಪನಿಂಗ್ ಕರ್ಲಿ ಬ್ರಾಕೆಟ್ ( { ) ಅನ್ನು ಟೈಪ್ ಮಾಡಿ.
04:00 ಒಪನಿಂಗ್ ಕರ್ಲಿ ಬ್ರಾಕೆಟ್ ( { ), ಮೈನ್ ಫಂಕ್ಷನ್ ನ ಆರಂಭವನ್ನು ಸೂಚಿಸುತ್ತದೆ.
04:04 ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ) ಅನ್ನು ಟೈಪ್ ಮಾಡಿ.
04:08 ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ( } ), ಮೈನ್ ಫಂಕ್ಷನ್ ನ ಅಂತ್ಯವನ್ನು ಸೂಚಿಸುತ್ತದೆ.
04:13 ಈಗ, ಬ್ರಾಕೆಟ್ ನ ಒಳಗೆ ಎರಡು ಬಾರಿ Enter ಒತ್ತಿ.
04:16 ಕರ್ಸರ್ ಅನ್ನು ಒಂದು ಲೈನ್ ಮೇಲೆ ತನ್ನಿ.
04:20 ಇಂಡೆಂಟೇಶನ್ (Indentation) ಇಂದ ಕೋಡ್ ಅನ್ನು ಒದಲು ಸುಲಭವಾಗುತ್ತದೆ.
04:23 ಇದು, ಎರರ್ ಅನ್ನು ಬೇಗ ಕಂಡುಹಿಡಿಯಲು ಕೂಡಾ, ಸಹಾಯ ಮಾಡುತ್ತದೆ.
04:25 ಹಾಗಾಗಿ, ಇಲ್ಲಿ ಮೂರು ಸ್ಪೇಸ್ ಕೊಡೋಣ.
04:29 ಮತ್ತು, printf ಒಪನಿಂಗ್ ಬ್ರಾಕೆಟ್, ಕ್ಲೋಸಿಂಗ್ ಬ್ರಾಕೆಟ್ ಅನ್ನು ಟೈಪ್ ಮಾಡಿ
04:34 printf ಎಂಬುದು, ಟರ್ಮಿನಲ್ ಗೆ ಔಟ್ ಪುಟ್ ಅನ್ನು ಪ್ರಿಂಟ್ ಮಾಡಲು ಇರುವ, ಒಂದು ಸ್ಟಾಂಡರ್ಡ್ C ಫಂಕ್ಷನ್ ಆಗಿದೆ.
04:39 ಇಲ್ಲಿ, ಬ್ರಾಕೆಟ್ ನ ಒಳಗೆ, ಡಬಲ್ ಕೋಟ್ಸ್ ಅನ್ನು ಟೈಪ್ ಮಾಡಿ,
04:43 printf ಸ್ಟೇಟ್ಮೆಂಟ್ ನ ಡಬಲ್ ಕೋಟ್ಸ್ ನ ಒಳಗೆ ಏನೇ ಇದ್ದರೂ, ಅದು ಟರ್ಮಿನಲ್ ಗೆ ಪ್ರಿಂಟ್ ಆಗುತ್ತದೆ.
04:50 ಡಬಲ್ ಕೋಟ್ಸ್ ಒಳಗೆ, “Talk to a teacher” ಬ್ಯಾಕ್ ಸ್ಲ್ಯಾಶ್ “n” ಎಂದು ಟೈಪ್ ಮಾಡಿ.
04:59 ಬ್ಯಾಕ್ ಸ್ಲ್ಯಾಶ್ “n” (\n) ಎನ್ನುವುದು ಹೊಸ ಲೈನ್ ಅನ್ನು ಸೂಚಿಸುತ್ತದೆ.
05:03 ಇದರಿಂದಾಗಿ, “printf” ಸ್ಟೇಟ್ಮೆಂಟ್ ನ ಎಕ್ಸಿಕ್ಯೂಶನ್ ನ ನಂತರ, ಕರ್ಸರ್ ಹೊಸ ಲೈನ್ ಗೆ ಹೋಗುತ್ತದೆ.
05:10 ಎಲ್ಲ C ಸ್ಟೇಟ್ಮೆಂಟ್ ಗಳೂ ಸೆಮಿಕೊಲನ್ (;) ಇಂದ ಕೊನೆಗೊಳ್ಳಬೇಕು.
05:15 ಹಾಗಾಗಿ, ಇದನ್ನು ಲೈನ್ ನ ಕೊನೆಗೆ ಟೈಪ್ ಮಾಡಿ.
05:19 ಸೆಮಿಕೊಲನ್, ಸ್ಟೇಟ್ಮೆಂಟ್ ಅನ್ನು ಕೊನೆಗೊಳಿಸುತ್ತದೆ.
05:24 ಈಗ, Enter ಒತ್ತಿ. ಇಲ್ಲಿ ಮೂರು ಸ್ಪೇಸ್ ಕೊಡಿ.
05:27 ಮತ್ತು, ರಿಟರ್ನ್ ಸ್ಪೇಸ್ ಝೀರೊ (zero) ಸೆಮಿಕೋಲನ್ ( ; )ಎಂದು ಟೈಪ್ ಮಾಡಿ.
05:34 ಈ ಸ್ಟೇಟ್ಮೆಂಟ್, ಪೂರ್ಣಾಂಕ ಝೀರೊ ಅನ್ನು ರಿಟರ್ನ್ ಮಾಡುತ್ತದೆ.
05:38 ಈ ಫಂಕ್ಷನ್ int ಟೈಪ್ ನದ್ದಾಗಿರುವುದರಿಂದ, integer ಮೌಲ್ಯವನ್ನೇ ರಿಟರ್ನ್ ಮಾಡಬೇಕು.
05:45 ರಿಟರ್ನ್ ಸ್ಟೇಟ್ಮೆಂಟ್, ಎಕ್ಸಿಕ್ಯೂಟ್ ಮಾಡಬಹುದಾದಂತಹ ಸ್ಟೇಟ್ಮೆಂಟ್ ಗಳ ಕೊನೆಯನ್ನು ಸೂಚಿಸುತ್ತದೆ.
05:51 ರಿಟರ್ನ್ ಆದ ಮೌಲ್ಯಗಳ ಬಗ್ಗೆ ಬೇರೆ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
05:55 ಈಗ ಫೈಲ್ ಅನ್ನು ಸೇವ್ ಮಾಡಲು “Save” ಬಟನ್ ಅನ್ನು ಕ್ಲಿಕ್ ಮಾಡಿ.
06:00 ಆಗಾಗ್ಗೆ, ಫೈಲ್ ಗಳನ್ನು ಸೇವ್ ಮಾಡುವುದು ಒಳ್ಳೆಯ ಅಭ್ಯಾಸ.
06:03 ಇದು, ಹಠಾತ್ ವಿದ್ಯುತ್ ವ್ಯತ್ಯಯದಿಂದಾಗುವ ತೊಂದರೆಯನ್ನು ತಪ್ಪಿಸುತ್ತದೆ.
06:05 ಇದು, ಅಪ್ಲಿಕೇಶನ್ ಗಳು ಕ್ರ್ಯಾಶ್ ಆದ ಪರಿಸ್ಥಿತಿಯಲ್ಲೂ ಸಹಾಯಕವಾಗಿದೆ.
06:10 ಟರ್ಮಿನಲ್ ಗೆ ಬನ್ನಿ, ಈಗ, ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡೋಣ.
06:15 “gcc” ಸ್ಪೇಸ್ “talk.c” ಸ್ಪೇಸ್ ಹೈಫನ್ (-) ಒ (O) ಸ್ಪೇಸ್ “myoutput” ಎಂದು ಟೈಪ್ ಮಾಡಿ.
06:24 “gcc” ಎಂಬುದು ಒಂದು ಕಂಪೈಲರ್.
06:27 talk.c ಎಂಬುದು ನಮ್ಮ ಫೈಲ್ ಹೆಸರು.
06:30 ಹೈಫನ್ ಒ myoutput (-O myoutput), ಎಕ್ಸಿಕ್ಯೂಟ್ ಮಾಡಬಹುದಾದವುಗಳು myoutput ಎಂಬ ಫೈಲ್ ಗೆ ಹೋಗಬೇಕು ಎಂಬುದನ್ನು ಸೂಚಿಸುತ್ತದೆ.
06:37 ಈಗ Enter ಒತ್ತಿ.
06:39 ಪ್ರೊಗ್ರಾಮ್ ಕಂಪೈಲ್ ಆಗಿರುವುದನ್ನು ನಾವು ಕಾಣುತ್ತೇವೆ.
06:42 ls ಸ್ಪೇಸ್ (ಹೈಫನ್) -lrt ಎಂದು ಟೈಪ್ ಮಾಡಿ, Enter ಒತ್ತುವುದರಿಂದ myoutput ಎಂಬುದು ಕೊನೆಗೆ ಕ್ರಿಯೇಟ್ ಆದ ಫೈಲ್ ಎಂಬುದು ತಿಳಿಯುತ್ತದೆ.
06:54 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಲು, ( ./ ) ಡಾಟ್ ಸ್ಲ್ಯಾಶ್ myoutput ಎಂದು ಟೈಪ್ ಮಾಡಿ Enter ಒತ್ತಿ.
07:01 ಇಲ್ಲಿ, “Talk to a teacher” ಎಂದು ಔಟ್ ಪುಟ್ ತೋರಿಸುತ್ತದೆ.
07:06 ಮೊದಲೇ ನಾನು ಹೇಳಿದಂತೆ, ರಿಟರ್ನ್ ಸ್ಟೇಟ್ಮೆಂಟ್, ಕಟ್ಟಕಡೆಗೆ ಎಕ್ಸಿಕ್ಯೂಟ್ ಆಗುವ ಸ್ಟೇಟ್ಮೆಂಟ್ ಆಗಿದೆ.
07:10 ಹಾಗಾಗಿ, ರಿಟರ್ನ್ ಸ್ಟೇಟ್ಮೆಂಟ್ ನಂತರ ಯಾವುದೂ ಎಕ್ಸಿಕ್ಯೂಟ್ ಆಗುವುದಿಲ್ಲ. ಇದನ್ನು ಪ್ರಯತ್ನಿಸೋಣ.
07:15 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
07:17 ರಿಟರ್ನ್ ಸ್ಟೇಟ್ಮೆಂಟ್ ನಂತರ, ಇನ್ನೊಂದು “printf” ಸ್ಟೇಟ್ಮೆಂಟ್ ಅನ್ನು ಸೇರಿಸೋಣ.
07:22 ಇಲ್ಲಿ, ಸ್ಪೇಸ್ ಕೊಟ್ಟು, printf ಓಪನಿಂಗ್ ಬ್ರಾಕೆಟ್, ಕ್ಲೊಸಿಂಗ್ ಬ್ರಾಕೆಟ್ ಅನ್ನು ಟೈಪ್ ಮಾಡಿ.
07:27 ಬ್ರಾಕೆಟ್ ನೊಳಗೆ, ಎರಡು ಡಬಲ್ ಕೋಟ್ಸ್ ಟೈಪ್ ಮಾಡಿ. ಅದರೊಳಗೆ welcome ಬ್ಯಾಕ್ ಸ್ಲ್ಯಾಶ್ n ಎಂದು ಟೈಪ್ ಮಾಡಿ, ಕೊನೆಗೆ ಸೆಮಿಕೊಲನ್ ಟೈಪ್ ಮಾಡಿ.
07:35 ಈಗ save ಮೇಲೆ ಕ್ಲಿಕ್ ಮಾಡಿ.
07:37 ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡಿ ನಮ್ಮ ಟರ್ಮಿನಲ್ ಗೆ ಹಿಂತಿರುಗೋಣ.
07:41 up arrow (ಅಪ್ ಆರೊ) ಕೀ ಉಪಯೊಗಿಸಿ, ಹಿಂದೆ ಉಪಯೋಗಿಸಿದ ಕಮಾಂಡ್ ಗಳನ್ನು ಮತ್ತೆ ಉಪಯೋಗಿಸಬಹುದು.
07:46 ನಾನೀಗ ಅದನ್ನೇ ಮಾಡಿದೆ.
07:51 “welcome” ಎಂಬ ಎರಡನೇ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗಿಲ್ಲದಿರುವುದನ್ನು ನೋಡುತ್ತೇವೆ.
07:58 ಈಗ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
08:00 “Welcome” ಸ್ಟೇಟ್ಮೆಂಟ್ ಅನ್ನು ರಿಟರ್ನ್ ಸ್ಟೇಟ್ಮೆಂಟ್ ನ ಮೇಲೆ ಬರೆಯೋಣ.
08:06 Save ಮೇಲೆ ಕ್ಲಿಕ್ ಮಾಡಿ.
08:09 ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ.
08:15 ಎರಡನೇ printf ಸ್ಟೇಟ್ಮೆಂಟ್ ಕೂಡಾ ಎಕ್ಸಿಕ್ಯೂಟ್ ಆಗಿರುವುದನ್ನು ನೋಡುತ್ತೇವೆ.
08:23 ಈಗ, ಸಾಮಾನ್ಯವಾಗಿ ಬರುವ ಎರರ್ ಗಳನ್ನು ಗಮನಿಸೋಣ. ನಮ್ಮ ಪ್ರೊಗ್ರಾಮ್ ಗೆ ಬನ್ನಿ.
08:29 “stdio.h” ನಲ್ಲಿ, ನಾನು ಡಾಟ್ ಅನ್ನು ಬಿಡುತ್ತೇನೆ ಎಂದೆಣಿಸಿ. Save ಮೇಲೆ ಕ್ಲಿಕ್ ಮಾಡಿ.
08:36 ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ.
08:41 ನಮ್ಮ “talk.c” ಫೈಲ್ ನ ಲೈನ್ ನಂಬರ್ ಎರಡರಲ್ಲಿ ಒಂದು ಫ್ಯಾಟಲ್ ಎರರ್ ಇರುವುದನ್ನು ನಾವು ಕಾಣುತ್ತೇವೆ.
08:48 “stdioh” ಎಂಬ ಹೆಡರ್ ಫೈಲ್ ಅನ್ನು ಕಂಪೈಲರ್ ಗೆ ಕಂಡುಹಿಡಿಯಲು ಆಗದಿರುವುದರಿಂದ “no such file or directory” ಎಂಬ ಎರರ್ ಅನ್ನು ಕೊಡುತ್ತದೆ.
08:59 ಮತ್ತು, ಕಂಪೈಲೇಶನ್ ಅಂತ್ಯಗೊಳ್ಳುತ್ತದೆ.
09:03 ಈಗ, ಈ ಎರರ್ ಅನ್ನು ಸರಿಪಡಿಸೋಣ, ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಪುನಃ ಡಾಟ್ ಸೇರಿಸೋಣ, Save ಮೇಲೆ ಕ್ಲಿಕ್ ಮಾಡಿ.
09:11 ಈಗ, ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. ಹೌದು, ಇದು ಕೆಲಸ ಮಾಡುತ್ತಿದೆ.
09:19 ನಾನು ಇನ್ನೊಂದು ಸಾಮಾನ್ಯ ಎರರ್ ಅನ್ನು ತೋರಿಸುತ್ತೇನೆ.
09:22 ಪ್ರೊಗ್ರಾಮ್ ಗೆ ಹಿಂತಿರುಗೋಣ.
09:25 ಈಗ, ಲೈನ್ ನ ಕೊನೆಯಲ್ಲಿ, ನಾನು ಸೆಮಿಕೊಲನ್ ಅನ್ನು ಬಿಡುತ್ತೇನೆ ಎಂದೆಣಿಸಿ.
09:31 Save ಮೇಲೆ ಕ್ಲಿಕ್ ಮಾಡಿ. ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ.
09:41 ನಮ್ಮ talk.c ಫೈಲ್ ನ ಆರನೇ ಲೈನ್ ನಲ್ಲಿ ಒಂದು ಎರರ್ ಇರುವುದನ್ನು ಕಾಣುತ್ತೇವೆ. ಅದು “expected semicolon before printf” ಎಂದು.
09:51 ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ.
09:54 ನಾನು ಮೊದಲೇ ಹೇಳಿದಂತೆ, ಸೆಮಿಕೊಲನ್, ಸ್ಟೇಟ್ಮೆಂಟ್ ನ ಟರ್ಮಿನೇಟರ್ ನಂತೆ ವರ್ತಿಸುತ್ತದೆ.
09:58 ಹಾಗಾಗಿ, ಅದು ಐದನೇ ಲೈನ್ ನ ಕೊನೆಗೆ ಮತ್ತು ಆರನೇ ಲೈನ್ ನ ಮೊದಲಿಗೆ ಸೆಮಿಕೊಲನ್ ಅನ್ನು ಹುಡುಕುತ್ತದೆ.
10:06 ಇದು ಆರನೇ ಲೈನ್.
10:09 ಇದೇ ನೀವು ಸೆಮಿಕೊಲನ್ ಹಾಕಬಹುದಾದ ಕೊನೆಯ ಸ್ಥಳ.
10:12 ಕಂಪೈಲರ್ ಕೂಡಾ ಆರನೇ ಲೈನ್ ನಲ್ಲಿ ಎರರ್ ಅನ್ನು ತೋರಿಸಿದ್ದನ್ನು ನೆನೆಯಬಹುದು.
10:18 ಇಲ್ಲಿ ಸೆಮಿಕೊಲನ್ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಪ್ರಯತ್ನಿಸೋಣ.
10:23 Save ಮೇಲೆ ಕ್ಲಿಕ್ ಮಾಡಿ.
10:26 ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ.
10:30 ಹೌದು, ಇದು ಕೆಲಸ ಮಾಡುತ್ತಿದೆ.
10:32 ಈಗ ನಮ್ಮ ಪ್ರೊಗ್ರಾಮ್ ಗೆ ಹಿಂತಿರುಗಿ. ಸೆಮಿಕೊಲನ್ ಅನ್ನು ಲೈನ್ ನ ಕೊನೆಗೆ ಟೈಪ್ ಮಾಡುವುದು ಸಂಪ್ರದಾಯ.
10:40 ಹಾಗಾಗಿ ಸೆಮಿಕೊಲನ್ ಅನ್ನು ಲೈನ್ ನ ಕೊನೆಗೆ ಟೈಪ್ ಮಾಡೋಣ.
10:46 ಈಗ Save ಮೇಲೆ ಕ್ಲಿಕ್ ಮಾಡಿ.
10:49 ಕಂಪೈಲ್ ಮತ್ತು ಎಕ್ಸಿಕ್ಯೂಟ್ ಮಾಡೋಣ. ಹೌದು, ಇದು ಕೆಲಸ ಮಾಡುತ್ತಿದೆ.
10:54 ನಮ್ಮ ಸ್ಲೈಡ್ ಗೆ ಹಿಂತಿರುಗೋಣ.
10:57 “Welcome to the World of C”
10:59 ಎಂದು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ
11:02 ಸ್ಲ್ಯಾಶ್ N ಅನ್ನು printf ಸ್ಟೇಟ್ಮೆಂಟ್ ನಲ್ಲಿ ಸೇರಿಸದಿದ್ದರೆ ಏನಾಗುತ್ತದೆ ಎಂದು ನೋಡಿ.
11:08 ಇಲ್ಲಿಗೆ ನಾವು ಈ ಪಾಠದ ಕೊನೆಗೆ ಬಂದೆವು.
11:12 ಕೆಳಗೆ ತೋರಿಸಿದ ಲಿಂಕ್ ನಲ್ಲಿರುವ ವಿಡಿಯೋ ನೋಡಿ.
11:15 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
11:18 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
11:22 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್,
11:24 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
11:28 ಆನ್ ಲೈನ್ ಟೆಸ್ಟ್ ನಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
11:31 ಹೆಚ್ಚಿನ ಮಾಹಿತಿಗಾಗಿ, contact @ spoken-tutorial.org ಗೆ ಬರೆಯಿರಿ.
11:38 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
11:42 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
11:47 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
11:51 ಈ ಟ್ಯುಟೋರಿಯಲ್ ನ ಅನುವಾದಕಿ ಚೇತನಾ ಮತ್ತು ಪ್ರವಾಚಕ ಐ ಐ ಟ್ ಬಾಂಬೆ ಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal