Java/C2/Getting-started-java-Installation/Kannada

From Script | Spoken-Tutorial
Jump to: navigation, search
Time Narration


00.01 ಜಾವಾ ಇನ್ಸ್ಟಾಲೇಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.


00.07 ಈ ಟ್ಯುಟೋರಿಯಲ್ ನಲ್ಲಿ ನಾವು,
00.09 ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು,
00.13 ಜಾವಾ ಏಕೆ?
00.14 ಜಾವಾ ದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ.
00.17 ಇಲ್ಲಿ ನಾವು,
00.19 Ubuntu 11.10 ರಲ್ಲಿ,
00.21 Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ.
00.26 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.


00.31 ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ.
00.35 ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ.
00.43 ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ.
00.51 ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.
00.57 JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ.
01.02 ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ.
01.07 ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು.
01.10 ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು.


01.14 ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ.
01.19 ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ.
01.25 ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು.
01.28 Dash home ನ ಮೇಲೆ ಕ್ಲಿಕ್ ಮಾಡಿ.
01.31 ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ.


01.35 ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ.
01.38 ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ.
01.42 ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ.
01.47 ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ.


01.56 ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ.
02.03 ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ.


02.08 ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ.


02.13 ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ.


02.17 ನಂತರ Apply ನ ಮೇಲೆ ಕ್ಲಿಕ್ ಮಾಡಿ.
02.20 ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ.
02.24 ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ.
02.30 ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
02.38 ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ.
02.48 ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ.
02.52 ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ.
03.03 ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ.
03.06 ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ.


03.15 jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ.


03.20 ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ.
03.26 ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ.
03.30 ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ.
03.35 ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ.
03.42 ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ.
03.45 ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ.
03.53 ಈಗ ಟರ್ಮಿನಲ್ ಗೆ ಹಿಂತಿರುಗೋಣ.
03.57 ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ.
04.03 ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ.
04.07 ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ.
04.19 ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ.
04.21 Enter ಒತ್ತಿ.
04.25 ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ.
04.27 java space TestProgram ಎಂದು ಟೈಪ್ ಮಾಡಿ Enter ಒತ್ತಿ.
04.35 We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ.
04.44 ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ.
04.48 ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ.
04.51 ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ.
04.55 ಜಾವಾ ಎಂಬುದು ತುಂಬಾ ಸರಳವಾಗಿದೆ.
04.57 ಜಾವಾ ಎಂಬುದು ವಸ್ತು ಆಧಾರಿತವಾಗಿದೆ.
04.59 ಇದು platform independent ಆಗಿದೆ.
05.01 ಇದು ಸುರಕ್ಷಿತವಾಗಿದೆ.
05.02 ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ.
05.04 ಜಾವಾ ಎಂಬುದು multi – threaded ಆಗಿದೆ.
05.07 ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ.
05.11 JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ.
05.18 JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ.
05.22 Java Applets (ಜಾವಾ ಆಪ್ಲೆಟ್ಸ್) : ಇದು It is used to provide interactive features to web applications.
05.28 J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಉಅನ್ನು ಉಪಯೋಗಿಸುತ್ತವೆ.
05.33 ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ.
05.38 JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ.
05.43 ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.
05.47 Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.
05.53 ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ,
05.56 ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು,
05.59 ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು,
06.02 ಜಾವಾ ದ ಬಳಕೆಯಿಂದಾಗುವ ಲಾಭಗಳು,
06.04 ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು.
06.08 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ.
06.14 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
06.17 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
06.22 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.


06.27 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
06.30 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.


06.36 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06.41 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.


06.47 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
06.58 ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ.
07.01 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal