Java/C2/Getting-started-java-Installation/Kannada
From Script | Spoken-Tutorial
Time | Narration
|
00:01 | ಜಾವಾ ಇನ್ಸ್ಟಾಲೇಶನ್ ಎಂಬ ಜಾವಾ ದ ಪ್ರಾರಂಭಿಕ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಸಹಾಯದಿಂದ JDK ಯ ಇನ್ಸ್ಟಾಲೇಶನ್ ಮಾಡುವುದು, |
00:13 | ಜಾವಾ ಏಕೆ? ಜಾವಾ ದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ. |
00:17 | ಇಲ್ಲಿ ನಾವು, |
00:19 | Ubuntu 11.10 ರಲ್ಲಿ, |
00:21 | Java Development Environment JDK 1.6 ಅನ್ನು ಉಪಯೋಗಿಸುತ್ತಿದ್ದೇವೆ. |
00:26 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. |
00:31 | ನಿಮ್ಮ ಸಿಸ್ಟಮ್ ನಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ. |
00:35 | ಹಾಗೂ ಲಿನಕ್ಸ್ ನಲ್ಲಿ ಟರ್ಮಿನಲ್, ಟೆಕ್ಸ್ಟ್ ಎಡಿಟರ್ ಮತ್ತು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಬಳಕೆಯೂ ಗೊತ್ತಿರುವುದು ಅನಿವಾರ್ಯವಾಗಿದೆ. |
00:43 | ಇಲ್ಲವಾದಲ್ಲಿ, ದಯವಿಟ್ಟು spoken-tutorial.org ಎಂಬ ಸೈಟ್ ನಲ್ಲಿ ಲಿನಕ್ಸ್ ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಿ. |
00:51 | ಜಾವಾ ಪ್ರೊಗ್ರಾಮ್ ಅನ್ನು ಉಪಯೋಗಿಸಲು ನಾವು JDK ಯನ್ನು ಅಂದರೆ Java Development Kit ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. |
00:57 | JDK ಯ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ಈ ಕೆಳಗಿರುವ ಲಿಂಕ್ ಗೆ ಭೇಟಿ ಕೊಡಿ. |
01:02 | ಈಗ ನಾವು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡೋಣ. |
01:07 | ಹೀಗೆ ಮಾಡಲು ನಿಮ್ಮಲ್ಲಿ ರೂಟ್ ನ ಅನುಮತಿ ಇರಬೇಕು. |
01:10 | ಹಾಗೂ ನಿಮಗೆ ರೆಪೊಸಿಟೋರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದೂ ಗೊತ್ತಿರಬೇಕು. |
01:14 | ಇವುಗಳೆಲ್ಲವೂ ಈ ಮೊದಲೇ ಲಿನಕ್ಸ್ ನ ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗಿದೆ. |
01:19 | ಈಗ, ನಿಮ್ಮ ಡೆಸ್ಕ್ಟಾಪ್ ನ ಬಲಬದಿಯಲ್ಲಿ ನೀವು ಟಾಸ್ಕ್ ಬಾರ್ ಅನ್ನು ಕಾಣುತ್ತೀರಿ. |
01:25 | ಅದರ ಮೇಲ್ಭಾಗದಲ್ಲಿ ನೀವು Dash home ಅನ್ನು ಕಾಣಬಹುದು. |
01:28 | Dash home ನ ಮೇಲೆ ಕ್ಲಿಕ್ ಮಾಡಿ. |
01:31 | ಸರ್ಚ್ ಬಾರ್ ನಲ್ಲಿ Synaptic ಎಂದು ಟೈಪ್ ಮಾಡಿ. |
01:35 | ನೀವೀಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಕಾಣುತ್ತೀರಿ. |
01:38 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮೇಲೆ ಕ್ಲಿಕ್ ಮಾಡಿ. |
01:42 | ದೃಢೀಕರಣಕ್ಕಾಗಿ ನಿಮ್ಮ ಪಾಸ್ವರ್ಡ್ ಅನ್ನು ಕೇಳುತ್ತದೆ. |
01:47 | ಹಾಗಾಗಿ ನಿಮ್ಮ ಪಾಸ್ವರ್ಡ್ ಅನ್ನು ಟೈಪ್ ಮಾಡಿ Authenticate ಎಂಬಲ್ಲಿ ಕ್ಲಿಕ್ ಮಾಡಿ. |
01:56 | ಈಗ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಒಪನ್ ಆಗುತ್ತದೆ. |
02:03 | ಈಗ Quick Filter ಎಂಬ ಬಾಕ್ಸ್ ನಲ್ಲಿ jdk ಎಂದು ಟೈಪ್ ಮಾಡಿ. |
02:08 | ನಾವು openjdk-6-jdk ಎಂಬ ಪ್ಯಾಕೇಜ್ ಅನ್ನು ನೋಡುತ್ತೇವೆ. |
02:13 | ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ Mark for Installation ನ ಮೇಲೆ ಕ್ಲಿಕ್ ಮಾಡಿ. |
02:17 | ನಂತರ Apply ನ ಮೇಲೆ ಕ್ಲಿಕ್ ಮಾಡಿ. |
02:20 | ಈಗ ಬದಲಾವಣೆಗಳನ್ನು ಖಚಿತಪಡಿಸಲು ಬದಲಾಯಿಸಿದವುಗಳ ಸೂಚಿಯನ್ನು ತೋರಿಸುತ್ತದೆ. |
02:24 | ಇಲ್ಲಿ To be Installed ಎಂಬಲ್ಲಿ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. |
02:30 | ಇನ್ಸ್ಟಾಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
02:38 | ಈಗ ನಾವು openjdk-6-jdk ಎಂಬುದು ಹಸಿರು ಬಣ್ಣದಲ್ಲಿದೆ ಎಂದು ನೋಡುತ್ತೇವೆ. |
02:48 | ಹಾಗಿದ್ದಲ್ಲಿ ನಮ್ಮ ಇನ್ಸ್ಟಾಲೇಶನ್ ಪೂರ್ತಿಯಾಯಿತೆಂದರ್ಥ. |
02:52 | ಈಗ ಇನ್ಸ್ಟಾಲೇಶನ್ ಅನ್ನು ಪರಿಶೀಲಿಸೋಣ. ಹೀಗೆ ಮಾಡಲು Ctrl, Alt ಮತ್ತು T ಯನ್ನು ಒಟ್ಟಿಗೆ ಒತ್ತುವುದರಿಂದ ಟರ್ಮಿನಲ್ ಅನ್ನು ಒಪನ್ ಮಾಡಿ. |
03:03 | ನಾನು ಟರ್ಮಿನಲ್ ಅನ್ನು ಈಗಾಗಲೇ ತೆರೆದಿದ್ದೇನೆ. |
03:06 | ಕಮಾಂಡ್ ಪ್ರಾಮ್ಪ್ಟ್ ನಲ್ಲಿ java space hyphen version ಎಂದು ಟೈಪ್ ಮಾಡಿ Enter ಒತ್ತಿ. |
03:15 | jdk ಯ ಆವೃತ್ತಿಯ ಸಂಖ್ಯೆ ಯನ್ನು ನಾವು ನೋಡುತ್ತೇವೆ. |
03:20 | ಡಿಸ್ಟ್ರಿಬ್ಯೂಟರ್ ಅನ್ನು ಅವಲಂಬಿಸಿ ನೀವು ಉಪಯೋಗಿಸುವ ಆವೃತ್ತಿಯ ಸಂಖ್ಯೆಯು ವಿಭಿನ್ನವಾಗಿರುತ್ತದೆ. |
03:26 | ಹಾಗಾದರೆ, ನಾವು ಸಫಲವಾಗಿ jdk ಯನ್ನು ಇನ್ಸ್ಟಾಲ್ ಮಾಡಿದ್ದೇವೆ. |
03:30 | ಈಗ, ಸರಳವಾದ Java program ಅನ್ನು ಒಪನ್ ಮಾಡೋಣ ಹಾಗೂ ಅದು ಕೆಲಸ ಮಾಡುತ್ತದೆಯೇ ಎಂದು ನೋಡೋಣ. |
03:35 | ಇಲ್ಲಿ ಕಾಣುತ್ತಿರುವ ಕೋಡ್ ಅನ್ನು ನಾನು ಈಗಾಗಲೇ TestProgram dot java ಎಂಬ ಫೈಲ್ ನಲ್ಲಿ ಸೇವ್ ಮಾಡಿದ್ದೇನೆ. |
03:42 | ಈಗ ನಾನು ಈ ಕೋಡ್ ಅನ್ನು ಕಂಪೈಲ್ ಮತ್ತು ರನ್ ಮಾಡುತ್ತೇನೆ. |
03:45 | ಈ ಕೋಡ್ ಟರ್ಮಿನಲ್ ನಲ್ಲಿ We have successfully run a Java Program ಎಂದು ಪ್ರದರ್ಶಿಸುತ್ತದೆ. |
03:53 | ಈಗ ಟರ್ಮಿನಲ್ ಗೆ ಹಿಂತಿರುಗೋಣ. |
03:57 | ನೆನಪಿಡಿ, ನಾನು TestProgram dot java ಎಂಬ ಫೈಲ್ ಅನ್ನು ಹೋಮ್ ಡೈರಕ್ಟರಿಯಲ್ಲಿ ಸೇವ್ ಮಾಡಿದ್ದೇನೆ. |
04:03 | ಮತ್ತು ಪ್ರಸ್ತುತ ನಾನು ಹೋಮ್ ಡೈರಕ್ಟರಿಯಲ್ಲಿ ಇದ್ದೇನೆ. |
04:07 | ಹಾಗಾಗಿ, ಕಮಾಂಡ್ ಪ್ರಾಮ್ಪ್ಟ್ ನಲ್ಲಿ javac space TestProgram dot java ಎಂದು ಟೈಪ್ ಮಾಡಿ. |
04:19 | ಇದು ಕೋಡ್ ಅನ್ನು ಕಂಪೈಲ್ ಮಾಡಲು ಆಗಿದೆ. |
04:21 | Enter ಒತ್ತಿ. |
04:25 | ಈಗ, ನಾನು ಕೋಡ್ ಅನ್ನು ರನ್ ಮಾಡುತ್ತೇನೆ. |
04:27 | java space TestProgram ಎಂದು ಟೈಪ್ ಮಾಡಿ Enter ಒತ್ತಿ. |
04:35 | We have successfully run a java program ಎಂಬ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ. |
04:44 | ಆದ್ದರಿಂದ ನಮ್ಮ ಇನ್ಸ್ಟಾಲೇಶನ್ ಸರಿಯಾಗಿ ಆಗಿದೆ ಎಂದರ್ಥ. |
04:48 | ಈಗ ನಾನು ಸ್ಲೈಡ್ ಗೆ ಹಿಂತಿರುಗುತ್ತೇನೆ. |
04:51 | ನಾನೀಗ ಜಾವಾ ಎಂಬುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿಸುತ್ತೇನೆ. |
04:55 | ಜಾವಾ ಎಂಬುದು ತುಂಬಾ ಸರಳವಾಗಿದೆ. |
04:57 | ಜಾವಾ ಎಂಬುದು ವಸ್ತು ಆಧಾರಿತವಾಗಿದೆ. |
04:59 | ಇದು platform independent ಆಗಿದೆ. |
05:01 | ಇದು ಸುರಕ್ಷಿತವಾಗಿದೆ.ಜಾವಾ ಎಂಬುದು ಅಧಿಕ ಕಾರ್ಯಕ್ಷಮತೆಯನ್ನು ಹೊಂದಿದೆ. |
05:04 | ಜಾವಾ ಎಂಬುದು multi – threaded ಆಗಿದೆ. |
05:07 | ನಾವೀಗ ಜಾವಾ ದ ಕೆಲವು ಬಗೆಗಳ ಬಗ್ಗೆ ಹಾಗೂ ಅದರ ಎಪ್ಲಿಕೇಶನ್ ಗಳ ಬಗ್ಗೆ ನೋಡೋಣ. |
05:11 | JSP, ಅಥವಾ Java Server Pages (ಜಾವಾ ಸರ್ವರ್ ಪೇಜಸ್): ಇದು ಕೋಡ್ ನ ಆಧಾರದ ಮೇಲೆ ಸಾಮಾನ್ಯವಾದ HTML ಟ್ಯಾಗ್ ನೊಂದಿಗೆ ಇರುತ್ತವೆ. |
05:18 | JSP ಎಂಬುದು ಡೈನಮಿಕ್ ವೆಬ್ ಪೇಜ್ ಗಳನ್ನು ರಚಿಸುವಲ್ಲಿ ಸಹಾಯ ಮಾಡುತ್ತದೆ. |
05:22 | Java Applets (ಜಾವಾ ಆಪ್ಲೆಟ್ಸ್) : ಇದು ವೆಬ್ ಎಪ್ಲಿಕೇಶನ್ ಗೆ ಸಂವಹನಕಾರಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. |
05:28 | J2EE ಅಥವಾ Java Enterprise Edition (ಜಾವಾ ಎಂಟರ್ಪ್ರೈಸ್ ಎಡಿಶನ್): ಕಂಪೆನಿಗಳು J2EE ಅನ್ನು ಉಪಯೋಗಿಸುತ್ತವೆ. |
05:33 | ಇದು XML ತರಹದ ಡಾಕ್ಯುಮೆಂಟ್ ಗಳನ್ನು ಟ್ರಾನ್ಸ್ಫರ್ ಮಾಡುವಲ್ಲಿ ಉಪಯೋಗಕಾರಿಯಾಗಿದೆ. |
05:38 | JavaBeans (ಜಾವಾ ಬೀನ್ಸ್): ಜಾವಾ ಬೀನ್ಸ್ ಎಂಬುದು ಪುನಃ ಮರುಬಳಕೆಯ ಸಾಫ್ಟ್ವೇರ್ ಕಂಪೋನೆಂಟ್ ಆಗಿದೆ. |
05:43 | ಇದನ್ನು ಹೊಸತಾದ ಹಾಗೂ ಮುಂದುವರಿದ ಎಪ್ಲಿಕೇಶನ್ ಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
05:47 | Mobile Java (ಮೊಬೈಲ್ ಜಾವಾ): ಇದು ಮೊಬೈಲ್ ನಂತಹ ವಿವಿಧ ಮನೋರಂಜನಾತ್ಮಕ ಸಾಧನಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. |
05:53 | ಹೀಗೆ ನಾವು ಈ ಟ್ಯುಟೋರಿಯಲ್ ನಲ್ಲಿ, |
05:56 | ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಬಳಸಿಕೊಂಡು JDK ಯನ್ನು ಇನ್ಸ್ಟಾಲ್ ಮಾಡುವುದು, |
05:59 | ಜಾವಾ ಪ್ರೊಗ್ರಾಮ್ ಅನ್ನು ಕಂಪೈಲ್ ಮತ್ತು ರನ್ ಮಾಡುವುದು, |
06:02 | ಜಾವಾ ದ ಬಳಕೆಯಿಂದಾಗುವ ಲಾಭಗಳು, |
06:04 | ಜಾವಾದಲ್ಲಿನ ವಿಧಗಳು ಹಾಗೂ ಎಪ್ಲಿಕೇಶನ್ ಗಳು ಎಂಬೀ ಮುಂತಾದವುಗಳ ಬಗ್ಗೆ ತಿಳಿದೆವು. |
06:08 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
06:14 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
06:17 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
06:22 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
06:27 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06:30 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
06:36 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06:41 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
06:47 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
06:58 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
07:01 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |