LibreOffice-Suite-Impress/C2/Viewing-a-Presentation-Document/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ವ್ಯೂವಿಂಗ್ ಅ ಪ್ರೆಸೆಂಟೇಷನ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ
00:05 ಈ ಟ್ಯುಟೋರಿಯಲ್ ನಲ್ಲಿ ನಾವು ವ್ಯೂ ಆಪ್ಶನ್ ಗಳ ಕುರಿತು ಮತ್ತು ಅವುಗಳ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಗಳ ಬಗ್ಗೆ ಕಲಿಯುತ್ತೇವೆ.
00:13 ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಮತ್ತು ಲಿಬ್ರೆ ಆಫೀಸ್ ಆವೃತ್ತಿ 3.3.4 ಅನ್ನು ಉಪಯೋಗಿಸುತ್ತಿದ್ದೇವೆ.
00:22 ನಾವು ಮೊದಲು ನಮ್ಮ ಪ್ರೆಸೆಂಟೇಶನ್ ಆದ “Sample Impress” ಅನ್ನು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುತ್ತ ತೆರೆಯೋಣ.
00:27 ಲಿಬ್ರೆ ಆಫೀಸ್ ಇಂಪ್ರೆಸ್ ಅನೇಕ ವ್ಯೂವಿಂಗ್ ಆಯ್ಕೆಯನ್ನು ಹೊಂದಿದೆ. ಅದು ನಿಮಗೆ ಉತ್ತಮ ಪ್ರೆಜೆಂಟೇಶನ್ ತಯಾರಿಸಲು ಸಹಾಯ ಮಾಡುತ್ತದೆ
00:34 ನೀವು ಲೈಬ್ರೆ ಆಫಿಸ್ ಇಂಪ್ರೆಸ್ ಪ್ರಾರಂಭಿಸಿದಾಗ ಡೀಫಾಲ್ಟ್ ಆಗಿ ಅದು ಹೀಗೆ ಕಾಣುತ್ತದೆ.
00:41 ಇದನ್ನು ನಾರ್ಮಲ್ ವ್ಯೂ ಎಂದು ಕರೆಯಲಾಗುತ್ತದೆ.
00:43 ಪ್ರೆಸೆಂಟೇಶನ್ ಬೇರೆ ಯಾವುದೇ ವ್ಯೂ ನಲ್ಲಿದ್ದರೆ ಆಗ
00:48 ನೀವು Normal ಟ್ಯಾಬ್ ಮೇಲೆ ಕ್ಲಿಕ್ ಮಾಡುವದರೊಂದಿಗೆ ನಾರ್ಮಲ್ ವ್ಯೂ ಗೆ ಹಿಂತಿರುಗಬಹುದು
00:53 ಅಥವಾ View ಮತ್ತು Narmal ಮೇಲೆ ಕ್ಲಿಕ್ ಮಾಡುವದರೊಂದಿಗೆ
00:57 ನಾರ್ಮಲ್ ವ್ಯೂ ನಲ್ಲಿ ನೀವು ಸ್ಲೈಡಗಳನ್ನು ರಚಿಸಬಹುದು ಮತ್ತು ಪರಿಷ್ಕರಿಸಬಹುದು
01:02 ಉದಾಹರಣೆಗೆ ನಾವು ಸ್ಲೈಡ್ ಗಳ ಡಿಸೈನ್ ಬದಲಿಸಬಹುದು
01:05 ಇದನ್ನು ಮಾಡಲು ಓವರ್ ವ್ಯೂ ಶಿರ್ಷಿಕೆಯ ಸ್ಲೈಡ್ ಗೆ ಹೋಗಿರಿ
01:09 ಬಲಬದಿಗೆ, Task ಪೈನ್ ನಲ್ಲಿ, Master Pages ಸೆಕ್ಶನ್ ನಲ್ಲಿ, Used in this presentation ನ ಕೆಳಗೆ
ನಾವು ಸ್ಲೈಡ್ ಡಿಸೈನನ್ನು ಪಿಆರ್ ಎಸ್. ಸ್ಟ್ರ್ಯಾಟಜಿಯಾಗಿ ಕಾಣಬಹುದು
01:21 ಇದರ ಕೆಳಗೆ, ನಾವು Recently Used ಮತ್ತು Available for Use ಎಂಬ ಸ್ಲೈಡ್ ಡಿಜೈನ್ ಗಳನ್ನು ಕಾಣಬಹುದು
01:27 ನೀವು ಯಾವುದೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ
01:31 ವರ್ಕಸ್ಪೇಸ್ ಪೇನ್ ನಲ್ಲಿ ಸ್ಲೈಡ್ ಡಿಸೈನ್ ಬದಲಾಗುವುದನ್ನು ಗುರುತಿಸಿರಿ
01:34 ನೋಡಿ, ಸ್ಲೈಡ್ ಡಿಸೈನ್ ಬದಲಿಸುವುದು ಎಷ್ಟು ಸುಲಭವಾಗಿದೆ?
01:39 ನೀವು ನಿಮ್ಮ ಸ್ಲೈಡ್ ಗಳಿಗೆ ನೀವು ರಚಿಸಿದ ಡಿಸೈನ್ ಗಳನ್ನು ಹಿಂಪರದೆಯಾಗಿಯೂ ಸಹ ಸೇರಿಸಬಹುದು
01:44

ನಂತರ ನಾವು ಔಟ್ ಲೈನ್ ವ್ಯೂ ನೋಡೋಣ

01:47 ನೀವು ಈ ವ್ಯೂ ಗೆ View ಮೇಲೆ ಅಥವಾ Outline ಮೇಲೆ ಕ್ಲಿಕ್ ಮಾಡಿ ಹೋಗಬಹುದು
01:54 ಅಥವಾ Outline ಟ್ಯಾಬ್ ಮೆಲೆ ಕ್ಲಿಕ್ ಮಾಡುವದರಿಂದಲೂ ಸಹ ಹೋಗಬಹುದು
01:57 ಈ ವ್ಯೂನಲ್ಲಿ, ಸ್ಲೈಡ್ ಗಳು ವಿಷಯ ಸೂಚಿಯ ಪಟ್ಟಿಯಂತೆ ಒಂದರ ಕೆಳಗೆ ಒಂದರಂತೆ ಕ್ರಮಪಡಿಸಿರುವುದನ್ನು ಕಾಣಬಹುದು


02:05 ಇವುಗಳು ಸ್ಲೈಡ್ ಹೆಡ್ಡಿಂಗ್ ಗಳು
02:08 ಸ್ಲೈಡ್ ಹೆಡ್ಡಿಂಗ್ ಆದ ಓವರ್ ವ್ಯೂ, ಹೈಲೈಟ್ ಆಗಿರುವುದನ್ನು ಗಮನಿಸಿ
02:12 ಇದು ಏಕೆಂದರೆ ನಾವು ಔಟ್ ಲೈನ್ ಟ್ಯಾಬ್ ಆಯ್ಕೆ ಮಾಡಿಕೊಂಡಾಗ ಓವರ್ ವ್ಯೂ ಸ್ಲೈಡ್ ಮೇಲೆ ಇರುತ್ತದೆ.
02:18 ನೀವು ಈ ಐಕಾನ್ ಗಳು ಬುಲೆಟ್ ಪಾಯಿಂಟ್ ಗಳಂತೆ ರೂಪಿಸಿರುವುದನ್ನು ಕಾಣಬಹುದು
02:23 ನೀವು ಈ ಬುಲೆಟ್ ಪಾಯಿಂಟುಗಳ ಮೇಲೆ ಮೌಸ್ ತಿರುಗಿಸುತ್ತಿರುವಂತೆ, ಕರ್ಜರ್ ಕೈಯಾಗಿ ಬದಲಾಗುತ್ತದೆ.
02:29 ನಾವು ನಂತರ ಈ ಲೈನ್ ಐಟಂಗಳನ್ನು ಸ್ಲೈಡನಲ್ಲಿ ಪುನಃ ಹೊಂದಿಸಲು ಮೇಲೆ ಅಥವಾ ಕೆಳಗೆ ಚಲಿಸಬಹುದು
02:38 ಅಥವಾ ಗೆರೆಗೆ ಅಡ್ಡವಾಗಿ ಚಲಿಸಬಹುದು
02:40 ನಾವೀಗ ಈ ಬದಲಾವಣೆಗಳನ್ನು CTRL ಮತ್ತು Z ಮೇಲೆ ಒತ್ತುವದರ ಮೂಲಕ undo ಮಾಡೋಣ, ಅಂದರೆ ನಮ್ಮ ಪ್ರೆಸೆಂಟೇಶನ್ ತನ್ನ ಮೂಲ ಸ್ವರೂಪದಲ್ಲಿ ಕಾಣುತ್ತದೆ.
02:53 ನಾವು ಸ್ಲೈಡ್ ಸಾರ್ಟರ್ ವ್ಯೂ ಅನ್ನು ವ್ಯೂ ಮತ್ತು ಸ್ಲೈಡ್ ಸಾರ್ಟರ್ ಮೇಲೆ ಕ್ಲಿಕ್ ಮಾಡುವದರ ಮೂಲಕ ಪಡೆಯ ಬಹುದು
03:00 ಅಥವಾ ಸ್ಲೈಡ್ ಸಾರ್ಟರ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರ ಮೂಲಕ
03:04 ಈ ವ್ಯೂ ಸ್ಲೈಡ್ ಗಳನ್ನು ಬೇಕಾದ ಕ್ರಮದಲ್ಲಿ ವಿಂಗಡಿಸಲು ನೆರವಾಗುತ್ತದೆ.
03:08 ಉದಾಹರಣೆಗೆ- ಸ್ಲೈಡ್ ಸಂಖ್ಯೆ 9 ಮತ್ತು 10 ಅನ್ನು ಆಂತರಿಕವಾಗಿ ಬದಲಾಯಿಸಲು ಸ್ಲೈಡ್ ಸಂಖ್ಯೆ 10 ರ ಮೇಲೆ ಕ್ಲಿಕ್ ಮಾಡಿರಿ
ಮತ್ತು ಸ್ಲೈಡನ್ನು ಸ್ಲೈಡ್ ಸಂಖ್ಯೆ 9 ಅನ್ನು ಮುಂದೆ ಎಳೆಯಿರಿ
03:18 ಈಗ ಮೌಸ್ ಬಟನ್ ಬಿಡುಗಡೆಗೊಳಿಸಿರಿ
03:22 ಸ್ಲೈಡ್ ಗಳು ಅದಲು ಬದಲಾಗುತ್ತವೆ !
03:26 ನೋಟ್ಸ ವ್ಯೂ ನಲ್ಲಿ, ನಿಮ್ಮ ಪ್ರೆಸೆಂಟೇಶನ್ ಸಮಯದಲ್ಲಿ ಸಹಯವಾಗುವಂತ ಟಿಪ್ಪಣಿಗಳನ್ನು ಬರೆಯಬಹುದು
03:31 ನೋಟ್ಸ ವ್ಯೂ ಗೆ ಹೋಗಲು View ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Notes Page ಮೆಲೆ ಕ್ಲಿಕ್ ಮಾಡಿರಿ
03:36 ನೀವು Notes Tab ಮೆಲೆ ಸಹಿತ ಕ್ಲಿಕ್ ಮಾಡಬಹುದು
03:39 “Development upto present” ಎಂಬ ಸ್ಲೈಡ್ ಅನ್ನು ಸ್ಲೈಡ್ ಪೇನ್ ದಿಂದ ಆಯ್ಕೆ ಮಾಡಿರಿ
03:44 ಕೆಲವು ಪಠ್ಯಗಳನ್ನು ನೋಟ್ಸ ಭಾಗದಲ್ಲಿ ಟೈಪ್ ಮಾಡಿರಿ
03:49 ನಿಮ್ಮ ಸ್ಲೈಡ್ಸಗಳು ಪ್ರೊಜೆಕ್ಟರ್ ಮೇಲೆ ಕಾಣಿಸಿದಾಗ
03:52 ನೀವು ನಿಮ್ಮ ನೋಟ್ಸಗಳನ್ನು ಈಗಲೂ ಕಾಣಲು ಸಾಧ್ಯವಾಗುತ್ತೀರಿ ಆದರೆ ನಿಮ್ಮ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ.
03:58 ನಾವೀಗ ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ
04:01 ನಾವು ಟಾಸ್ಕಗಳ ಪೇನ್ ನಲ್ಲಿ, ಲೇ ಔಟ್ ಸೆಕ್ಶನ್ ನಲ್ಲಿ ಪ್ರೆಸೆಂಟೇಶನ್ ಲೇಔಟನ್ನು ಬದಲಿಸಬಹುದು
04:08 ಟಾಸ್ಕ ಪೇನ್ ಕಾಣಲು ಮತ್ತು ಮುಚ್ಚಲು
04:12 View ಮತ್ತು Task ಪೇನ್ ಮೇಲೆ ಕ್ಲಿಕ್ ಮಾಡಿರಿ
04:14 ಇದು ಟಾಸ್ಕ್ ಪೇನನ್ನು ತೋರಿಸುತ್ತದೆ ಅಥವಾ ಮುಚ್ಚುತ್ತದೆ.
04:18 ಸ್ಲೈಡ್ ಲೇಔಟನ್ನು ಬದಲಿಸಲು ನಾವೀಗ ಲೇಔಟ್ ಸೆಕ್ಶನ್ ಉಪಯೋಗಿಸೋಣ
04:23 Development upto present, ಹೆಸರಿನ ಸ್ಲೈಡ್ ಆಯ್ಕೆ ಮಾಡಿರಿ
04:26 ಲೇಔಟ್ ಸೆಕ್ಶನ್ ದಿಂದ >> ವಿಷಯ ಸೂಚಿಯಲ್ಲಿನ ಟೈಟಲ್ ಕಂಟೆಂಟ್ ಆಯ್ಕೆ ಮಾಡಿರಿ
04:33 ಇದು ಸ್ಲೈಡ್ ಲೇಔಟನ್ನು ಬದಲಿಸುತ್ತದೆ.
04:37 ಈಗ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ.
04:40 ಸಾರಾಂಶವಾಗಿ ಹೇಳುವುದಾದರೆ, ನಾವು ವ್ಯೂ ಆಪ್ಶನ್ ಮತ್ತು ಅದರ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಕುರಿತು ಕಲಿತೆವು.
04:46 ಮಾಡಬೇಕಾದ ಅಭ್ಯಾಸಗಳು :
04:49 ಒಂದು ಹೊಸ ಪ್ರೆಸೆಂಟೇಶನ್ ರಚಿಸಿರಿ
04:52 ಗಾಢ ನೀಲಿ ಬ್ಯಾಗ್ರೌಂಡ್ ಮತ್ತು ತಿಳಿ ನೀಲಿ ಶಿರ್ಷಿಕೆ ಪ್ರದೇಶದ ಒಂದು ಮಾಸ್ಟರನ್ನು ರಚಿಸಿರಿ
04:58 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
05:02 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
05:05 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
05:09 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
05:15 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
05:19 ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ. contact@spoken-tutorial.org
05:26 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
05:30 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.


05:38 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ.
05:49 ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
05:55 ಧನ್ಯವಾದಗಳು

Contributors and Content Editors

PoojaMoolya, Udaya, Vasudeva ahitanal