LibreOffice-Suite-Impress/C2/Viewing-a-Presentation-Document/Kannada
From Script | Spoken-Tutorial
Time | Narration |
00:00 | ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ವ್ಯೂವಿಂಗ್ ಅ ಪ್ರೆಸೆಂಟೇಷನ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ವ್ಯೂ ಆಪ್ಶನ್ ಗಳ ಕುರಿತು ಮತ್ತು ಅವುಗಳ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಗಳ ಬಗ್ಗೆ ಕಲಿಯುತ್ತೇವೆ. |
00:13 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಮತ್ತು ಲಿಬ್ರೆ ಆಫೀಸ್ ಆವೃತ್ತಿ 3.3.4 ಅನ್ನು ಉಪಯೋಗಿಸುತ್ತಿದ್ದೇವೆ. |
00:22 | ನಾವು ಮೊದಲು ನಮ್ಮ ಪ್ರೆಸೆಂಟೇಶನ್ ಆದ “Sample Impress” ಅನ್ನು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುತ್ತ ತೆರೆಯೋಣ. |
00:27 | ಲಿಬ್ರೆ ಆಫೀಸ್ ಇಂಪ್ರೆಸ್ ಅನೇಕ ವ್ಯೂವಿಂಗ್ ಆಯ್ಕೆಯನ್ನು ಹೊಂದಿದೆ. ಅದು ನಿಮಗೆ ಉತ್ತಮ ಪ್ರೆಜೆಂಟೇಶನ್ ತಯಾರಿಸಲು ಸಹಾಯ ಮಾಡುತ್ತದೆ |
00:34 | ನೀವು ಲೈಬ್ರೆ ಆಫಿಸ್ ಇಂಪ್ರೆಸ್ ಪ್ರಾರಂಭಿಸಿದಾಗ ಡೀಫಾಲ್ಟ್ ಆಗಿ ಅದು ಹೀಗೆ ಕಾಣುತ್ತದೆ. |
00:41 | ಇದನ್ನು ನಾರ್ಮಲ್ ವ್ಯೂ ಎಂದು ಕರೆಯಲಾಗುತ್ತದೆ. |
00:43 | ಪ್ರೆಸೆಂಟೇಶನ್ ಬೇರೆ ಯಾವುದೇ ವ್ಯೂ ನಲ್ಲಿದ್ದರೆ ಆಗ |
00:48 | ನೀವು Normal ಟ್ಯಾಬ್ ಮೇಲೆ ಕ್ಲಿಕ್ ಮಾಡುವದರೊಂದಿಗೆ ನಾರ್ಮಲ್ ವ್ಯೂ ಗೆ ಹಿಂತಿರುಗಬಹುದು |
00:53 | ಅಥವಾ View ಮತ್ತು Narmal ಮೇಲೆ ಕ್ಲಿಕ್ ಮಾಡುವದರೊಂದಿಗೆ |
00:57 | ನಾರ್ಮಲ್ ವ್ಯೂ ನಲ್ಲಿ ನೀವು ಸ್ಲೈಡಗಳನ್ನು ರಚಿಸಬಹುದು ಮತ್ತು ಪರಿಷ್ಕರಿಸಬಹುದು |
01:02 | ಉದಾಹರಣೆಗೆ ನಾವು ಸ್ಲೈಡ್ ಗಳ ಡಿಸೈನ್ ಬದಲಿಸಬಹುದು |
01:05 | ಇದನ್ನು ಮಾಡಲು ಓವರ್ ವ್ಯೂ ಶಿರ್ಷಿಕೆಯ ಸ್ಲೈಡ್ ಗೆ ಹೋಗಿರಿ |
01:09 | ಬಲಬದಿಗೆ, Task ಪೈನ್ ನಲ್ಲಿ, Master Pages ಸೆಕ್ಶನ್ ನಲ್ಲಿ, Used in this presentation ನ ಕೆಳಗೆ. ನಾವು ಸ್ಲೈಡ್ ಡಿಸೈನನ್ನು ಪಿಆರ್ ಎಸ್. ಸ್ಟ್ರ್ಯಾಟಜಿಯಾಗಿ ಕಾಣಬಹುದು |
01:21 | ಇದರ ಕೆಳಗೆ, ನಾವು Recently Used ಮತ್ತು Available for Use ಎಂಬ ಸ್ಲೈಡ್ ಡಿಜೈನ್ ಗಳನ್ನು ಕಾಣಬಹುದು |
01:27 | ನೀವು ಯಾವುದೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ |
01:31 | ವರ್ಕಸ್ಪೇಸ್ ಪೇನ್ ನಲ್ಲಿ ಸ್ಲೈಡ್ ಡಿಸೈನ್ ಬದಲಾಗುವುದನ್ನು ಗುರುತಿಸಿರಿ |
01:34 | ನೋಡಿ, ಸ್ಲೈಡ್ ಡಿಸೈನ್ ಬದಲಿಸುವುದು ಎಷ್ಟು ಸುಲಭವಾಗಿದೆ? |
01:39 | ನೀವು ನಿಮ್ಮ ಸ್ಲೈಡ್ ಗಳಿಗೆ ನೀವು ರಚಿಸಿದ ಡಿಸೈನ್ ಗಳನ್ನು ಹಿಂಪರದೆಯಾಗಿಯೂ ಸಹ ಸೇರಿಸಬಹುದು |
01:44 | ನಂತರ ನಾವು ಔಟ್ ಲೈನ್ ವ್ಯೂ ನೋಡೋಣ |
01:47 | ನೀವು ಈ ವ್ಯೂ ಗೆ View ಮೇಲೆ ಅಥವಾ Outline ಮೇಲೆ ಕ್ಲಿಕ್ ಮಾಡಿ ಹೋಗಬಹುದು |
01:54 | ಅಥವಾ Outline ಟ್ಯಾಬ್ ಮೆಲೆ ಕ್ಲಿಕ್ ಮಾಡುವದರಿಂದಲೂ ಸಹ ಹೋಗಬಹುದು |
01:57 | ಈ ವ್ಯೂನಲ್ಲಿ, ಸ್ಲೈಡ್ ಗಳು ವಿಷಯ ಸೂಚಿಯ ಪಟ್ಟಿಯಂತೆ ಒಂದರ ಕೆಳಗೆ ಒಂದರಂತೆ ಕ್ರಮಪಡಿಸಿರುವುದನ್ನು ಕಾಣಬಹುದು |
02:05 | ಇವುಗಳು ಸ್ಲೈಡ್ ಹೆಡ್ಡಿಂಗ್ ಗಳು |
02:08 | ಸ್ಲೈಡ್ ಹೆಡ್ಡಿಂಗ್ ಆದ ಓವರ್ ವ್ಯೂ, ಹೈಲೈಟ್ ಆಗಿರುವುದನ್ನು ಗಮನಿಸಿ |
02:12 | ಇದು ಏಕೆಂದರೆ ನಾವು ಔಟ್ ಲೈನ್ ಟ್ಯಾಬ್ ಆಯ್ಕೆ ಮಾಡಿಕೊಂಡಾಗ ಓವರ್ ವ್ಯೂ ಸ್ಲೈಡ್ ಮೇಲೆ ಇರುತ್ತದೆ. |
02:18 | ನೀವು ಈ ಐಕಾನ್ ಗಳು ಬುಲೆಟ್ ಪಾಯಿಂಟ್ ಗಳಂತೆ ರೂಪಿಸಿರುವುದನ್ನು ಕಾಣಬಹುದು |
02:23 | ನೀವು ಈ ಬುಲೆಟ್ ಪಾಯಿಂಟುಗಳ ಮೇಲೆ ಮೌಸ್ ತಿರುಗಿಸುತ್ತಿರುವಂತೆ, ಕರ್ಜರ್ ಕೈಯಾಗಿ ಬದಲಾಗುತ್ತದೆ. |
02:29 | ನಾವು ನಂತರ ಈ ಲೈನ್ ಐಟಂಗಳನ್ನು ಸ್ಲೈಡನಲ್ಲಿ ಪುನಃ ಹೊಂದಿಸಲು ಮೇಲೆ ಅಥವಾ ಕೆಳಗೆ ಚಲಿಸಬಹುದು |
02:38 | ಅಥವಾ ಗೆರೆಗೆ ಅಡ್ಡವಾಗಿ ಚಲಿಸಬಹುದು |
02:40 | ನಾವೀಗ ಈ ಬದಲಾವಣೆಗಳನ್ನು CTRL ಮತ್ತು Z ಮೇಲೆ ಒತ್ತುವದರ ಮೂಲಕ undo ಮಾಡೋಣ, ಅಂದರೆ ನಮ್ಮ ಪ್ರೆಸೆಂಟೇಶನ್ ತನ್ನ ಮೂಲ ಸ್ವರೂಪದಲ್ಲಿ ಕಾಣುತ್ತದೆ. |
02:53 | ನಾವು ಸ್ಲೈಡ್ ಸಾರ್ಟರ್ ವ್ಯೂ ಅನ್ನು ವ್ಯೂ ಮತ್ತು ಸ್ಲೈಡ್ ಸಾರ್ಟರ್ ಮೇಲೆ ಕ್ಲಿಕ್ ಮಾಡುವದರ ಮೂಲಕ ಪಡೆಯ ಬಹುದು |
03:00 | ಅಥವಾ ಸ್ಲೈಡ್ ಸಾರ್ಟರ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರ ಮೂಲಕ |
03:04 | ಈ ವ್ಯೂ ಸ್ಲೈಡ್ ಗಳನ್ನು ಬೇಕಾದ ಕ್ರಮದಲ್ಲಿ ವಿಂಗಡಿಸಲು ನೆರವಾಗುತ್ತದೆ. |
03:08 | ಉದಾಹರಣೆಗೆ- ಸ್ಲೈಡ್ ಸಂಖ್ಯೆ 9 ಮತ್ತು 10 ಅನ್ನು ಆಂತರಿಕವಾಗಿ ಬದಲಾಯಿಸಲು ಸ್ಲೈಡ್ ಸಂಖ್ಯೆ 10 ರ ಮೇಲೆ ಕ್ಲಿಕ್ ಮಾಡಿರಿ ಮತ್ತು ಸ್ಲೈಡನ್ನು ಸ್ಲೈಡ್ ಸಂಖ್ಯೆ 9 ಅನ್ನು ಮುಂದೆ ಎಳೆಯಿರಿ |
03:18 | ಈಗ ಮೌಸ್ ಬಟನ್ ಬಿಡುಗಡೆಗೊಳಿಸಿರಿ |
03:22 | ಸ್ಲೈಡ್ ಗಳು ಅದಲು ಬದಲಾಗುತ್ತವೆ ! |
03:26 | ನೋಟ್ಸ ವ್ಯೂ ನಲ್ಲಿ, ನಿಮ್ಮ ಪ್ರೆಸೆಂಟೇಶನ್ ಸಮಯದಲ್ಲಿ ಸಹಯವಾಗುವಂತ ಟಿಪ್ಪಣಿಗಳನ್ನು ಬರೆಯಬಹುದು |
03:31 | ನೋಟ್ಸ ವ್ಯೂ ಗೆ ಹೋಗಲು View ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Notes Page ಮೆಲೆ ಕ್ಲಿಕ್ ಮಾಡಿರಿ |
03:36 | ನೀವು Notes Tab ಮೆಲೆ ಸಹಿತ ಕ್ಲಿಕ್ ಮಾಡಬಹುದು |
03:39 | “Development upto present” ಎಂಬ ಸ್ಲೈಡ್ ಅನ್ನು ಸ್ಲೈಡ್ ಪೇನ್ ದಿಂದ ಆಯ್ಕೆ ಮಾಡಿರಿ |
03:44 | ಕೆಲವು ಪಠ್ಯಗಳನ್ನು ನೋಟ್ಸ ಭಾಗದಲ್ಲಿ ಟೈಪ್ ಮಾಡಿರಿ |
03:49 | ನಿಮ್ಮ ಸ್ಲೈಡ್ಸಗಳು ಪ್ರೊಜೆಕ್ಟರ್ ಮೇಲೆ ಕಾಣಿಸಿದಾಗ |
03:52 | ನೀವು ನಿಮ್ಮ ನೋಟ್ಸಗಳನ್ನು ಈಗಲೂ ಕಾಣಲು ಸಾಧ್ಯವಾಗುತ್ತೀರಿ ಆದರೆ ನಿಮ್ಮ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. |
03:58 | ನಾವೀಗ ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ |
04:01 | ನಾವು ಟಾಸ್ಕಗಳ ಪೇನ್ ನಲ್ಲಿ, ಲೇ ಔಟ್ ಸೆಕ್ಶನ್ ನಲ್ಲಿ ಪ್ರೆಸೆಂಟೇಶನ್ ಲೇಔಟನ್ನು ಬದಲಿಸಬಹುದು |
04:08 | ಟಾಸ್ಕ ಪೇನ್ ಕಾಣಲು ಮತ್ತು ಮುಚ್ಚಲು |
04:12 | View ಮತ್ತು Task ಪೇನ್ ಮೇಲೆ ಕ್ಲಿಕ್ ಮಾಡಿರಿ |
04:14 | ಇದು ಟಾಸ್ಕ್ ಪೇನನ್ನು ತೋರಿಸುತ್ತದೆ ಅಥವಾ ಮುಚ್ಚುತ್ತದೆ. |
04:18 | ಸ್ಲೈಡ್ ಲೇಔಟನ್ನು ಬದಲಿಸಲು ನಾವೀಗ ಲೇಔಟ್ ಸೆಕ್ಶನ್ ಉಪಯೋಗಿಸೋಣ |
04:23 | Development upto present, ಹೆಸರಿನ ಸ್ಲೈಡ್ ಆಯ್ಕೆ ಮಾಡಿರಿ |
04:26 | ಲೇಔಟ್ ಸೆಕ್ಶನ್ ದಿಂದ >> ವಿಷಯ ಸೂಚಿಯಲ್ಲಿನ ಟೈಟಲ್ ಕಂಟೆಂಟ್ ಆಯ್ಕೆ ಮಾಡಿರಿ |
04:33 | ಇದು ಸ್ಲೈಡ್ ಲೇಔಟನ್ನು ಬದಲಿಸುತ್ತದೆ. |
04:37 | ಈಗ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
04:40 | ಸಾರಾಂಶವಾಗಿ ಹೇಳುವುದಾದರೆ, ನಾವು ವ್ಯೂ ಆಪ್ಶನ್ ಮತ್ತು ಅದರ ಉಪಯೋಗಗಳು ಮತ್ತು ಮಾಸ್ಟರ್ ಪೇಜಸ್ ಕುರಿತು ಕಲಿತೆವು. |
04:46 | ಮಾಡಬೇಕಾದ ಅಭ್ಯಾಸಗಳು : |
04:49 | ಒಂದು ಹೊಸ ಪ್ರೆಸೆಂಟೇಶನ್ ರಚಿಸಿರಿ |
04:52 | ಗಾಢ ನೀಲಿ ಬ್ಯಾಗ್ರೌಂಡ್ ಮತ್ತು ತಿಳಿ ನೀಲಿ ಶಿರ್ಷಿಕೆ ಪ್ರದೇಶದ ಒಂದು ಮಾಸ್ಟರನ್ನು ರಚಿಸಿರಿ |
04:58 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
05:02 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
05:05 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
05:09 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
05:15 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
05:19 | ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ. contact@spoken-tutorial.org |
05:26 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
05:30 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
05:38 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ. |
05:49 | ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
05:55 | ಧನ್ಯವಾದಗಳು |