Linux/C2/Basic-Commands/Kannada

From Script | Spoken-Tutorial
Revision as of 14:47, 16 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search



Time Narration
0:00 ಆತ್ಮೀಯ ಸ್ನೇಹಿತರೆ, ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
0:05 ಈ ಟ್ಯುಟೋರಿಯಲ್ ನಲ್ಲಿ, ನಾವು ಕೆಲವು ಮೂಲಭೂತ ಕಮಾಂಡ್ ಗಳ ಬಗ್ಗೆ ಕಲಿಯುತ್ತೇವೆ.
0:10 ನಾನು ಉಬಂಟು 10.04 ಅನ್ನು ಬಳಸುತ್ತಿದ್ದೇನೆ.
0:12 ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ್ನು ಹೇಗೆ ಆರಂಭಿಸುವುದು ಎಂಬುದನ್ನು ತಿಳಿದಿರುವಿರಿ ಎಂದು ಭಾವಿಸುತ್ತೇವೆ.
0:17 ನೀವು ಆಸಕ್ತರಿದ್ದಲ್ಲಿ, http://spoken-tutorial.org ವೆಬ್ಸೈಟ್ ನಲ್ಲಿರುವ

ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಇದು ಲಭ್ಯವಿದೆ.

0:26 ಈ ಟ್ಯುಟೋರಿಯಲ್ ನಲ್ಲಿ, ನಾವು ಕಮಾಂಡ್ಮ ಗಳು ಮತ್ತು ಕಮಾಂಡ್ ನ ಇಂಟರ್ ಪ್ರೀಟರ್ ಎಂದರೇನು ಎಂಬುವುದನ್ನು ನೋಡುತ್ತೇವೆ.
0:33 ನಂತರ ನಾವು ಮ್ಯಾನ್ ಕಮಾಂಡ್ ನ್ನು ಬಳಸಿಕೊಂಡು ಲಿನಕ್ಸ್ ನಲ್ಲಿ ಸಹಾಯ ಪಡೆಯುವ ಬಗ್ಗೆ ಕಲಿಯೋಣ.
0:39 ಈಗ ಮೊದಲ ಪ್ರಶ್ನೆ "ಕಮಾಂಡ್ ಗಳು ಎಂದರೇನು?".
0:43 ಸರಳ ಪದಗಳಲ್ಲಿ ಹೇಳುವುದಾದರೆ, ಯಾವ ಆದೇಶಗಳನ್ನು ಉಪಯೋಗಿಸಿದಾಗ ಕೆಲವು ಕ್ರಿಯೆಗಳು ಕಾರ್ಯಗತಗೊಳ್ಳುತ್ತವೆಯೋ ಅವುಗಳೇ ಲಿನೆಕ್ಷ್ ಕಮಾಂಡ್ ಗಳು.
0:52 ls, who, ps ಮುಂತಾದವುಗಳಂತೆ, ಲಿನಕ್ಸ್ ಕಮಾಂಡ್ ಗಳು ನಾಲ್ಕು ಅಕ್ಷರಗಳಿಗಿಂತ ಹೆಚ್ಚಾಗಿರುವ ಸಾಧ್ಯತೆ ಕಡಿಮೆ.
0:59 ಕಮಾಂಡ್ ಗಳು ಲೋವರ್ ಕೇಸ್ ನಲ್ಲಿ ಇರುತ್ತವೆ ಮತ್ತು ಅವು ಕೇಸ್ ಸೆನ್ಸಿಟಿವ್ ಆಗಿರುತ್ತದೆ. ಈಗ ಒಂದು ಉದಾಹರಣೆ ನೋಡುವ.
1:05 ಅಪ್ಲಿಕೇಶನ್ಸ್ ಮೆನುವಿಗೆ ಹೋಗಿ.
1:08 ಆಕ್ಸಸರೀಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಲಭ್ಯವಿರುವ ಆಯ್ಕೆಗಳಲ್ಲಿ ಟರ್ಮಿನಲ್ ಅನ್ನು ಕ್ಲಿಕ್ ಮಾಡಿ.
1:14 ಅಥವಾ ಟರ್ಮಿನಲ್ ವಿಂಡೋವನ್ನು ತೆರೆಯಲು ನಿಮ್ಮ ಕೀಬೋರ್ಡ್ ನಲ್ಲಿ Ctrl Alt t ಅನ್ನು ಒತ್ತಿ.
1:20 ಈಗ ನಾವು ಪ್ರಾಂಪ್ಟ್ ($) ಮತ್ತು ಅದರ ಮುಂದೆ ಬ್ಲಿಂಕಿಂಗ್ ಕರ್ಸರ್ ನೋಡಬಹುದು. ಇಲ್ಲಿ ನಾವು ಕಮಾಂಡ್ ನ್ನು ಬರೆಯಬೇಕು.
1:29 Who ಎಂಬ ಪದವನ್ನು ಬರೆಯಿರಿ ಮತ್ತು ಎಂಟರ್ ಒತ್ತಿ.
1:34 ನಾವು ಲಾಗ್ ಇನ್ ಆಗಿರುವ ಯುಸರ್ ನ ಹೆಸರುಗಳನ್ನು ನೋಡಬಹುದು. ನಿಜವಾಗಿ ನಾವು ಕೇವಲ who ಎಂಬ ಕಮಾಂಡ್ ನ್ನು ಚಲಾಯಿಸಿರುತ್ತೇವೆ., ಇದು ಯಾರೆಲ್ಲ ಸಿಸ್ಟಮ್ ನಲ್ಲಿ ಲಾಗ್ ಇನ್ ಆಗಿರುತ್ತಾರೆ ಎಂಬ ಮಾಹಿತಿ ಯನ್ನು ತೋರಿಸುತ್ತದೆ.
1:47 ಆದರೆ ಕಮಾಂಡ್ ನ್ನು ಕನ್ವರ್ಟ್ ಮಾಡುವ ಘಟಕವು ಕೆಲವು ಅಕ್ಷರಗಳಿಗಿಂತ ಹೆಚ್ಚೇನೂ ಇಲ್ಲ.
1:54 ಇದು ಆದೇಶ ಇಂಟರ್ ಪ್ರೀಟರ್ ನ ಕೆಲಸ. ಇದನ್ನು ಶೆಲ್ ಎಂದು ಕೂಡ ಕರೆಯುತ್ತಾರೆ.
1:59 ನಾವು ಈ ಶೆಲ್ ಅನ್ನು ನಮ್ಮ ಮತ್ತು ಲಿನಕ್ಸ್ ವ್ಯವಸ್ಥೆಯ ನಡುವೆ ಸಂಪರ್ಕ ಏರ್ಪಡಿಸುವ ಒಂದು ಪ್ರೊಗ್ರಾಮ್ ಎಂದು ಹೇಳಬಹುದು.
2:08 ಕಮಾಂಡ್ ಗಳನ್ನು ಚಲಾಯಿಸಲು, ಆಪರೇಟಿಂಗ್ ಸಿಸ್ಟಂ ನಲ್ಲಿ ಅವುಗಳನ್ನು ಎಂಟರ್ ಮಾಡಲು ನಮಗೆ ಅವಕಾಶ ಮಾಡುತ್ತದೆ.
2:13 ಲಿನಕ್ಸ್ ನಲ್ಲಿ ವಿವಿಧ ಯುಸರ್ ಗಳು ತಮ್ಮ ಆದ್ಯತೆಯ ಆಯ್ಕೆಯೊಂದಿಗೆ ಅನೇಕ ಶೆಲ್ ಗಳನ್ನು ಇನ್ಸ್ಟಾಲ್ ಮಾಡಲು ಸಂಪೂರ್ಣವಾಗಿ ಸಾಧ್ಯವಿದೆ .
2:22 ಲಿನಕ್ಸ್ ನಲ್ಲಿ ಯಾವಾಗಲೂ ಸ್ಟ್ಯಾಂಡರ್ಡ್ ಶೆಲ್, /bin/sh ಈ ರೀತಿ ಇನ್ಸ್ಟಾಲ್ ಆಗುತ್ತದೆ, ಇದನ್ನು bash ಎಂದು ಕರೆಯಲಾಗುತ್ತದೆ. ಅಂದರೆ ಟೂಲ್ಸ್ ಮೆನುವಿನಲ್ಲಿರುವ GNU suite ನ GNU Bourne-Again SHell.
2:35 ನಾವು ಈ ಟ್ಯುಟೋರಿಯಲ್ ನಲ್ಲಿ ಕನ್ವರ್ಟ್ ಮಾಡಲು ಹೊರಟಿರುವ ಕಮಾಂಡ್ ಗಳು ವಿಶಿಷ್ಟವಾಗಿದ್ದು, ಮತ್ತು ಇದನ್ನು ನಾವು ಸ್ವಲ್ಪ ಬದಲಾವಣೆಯೊಂದಿಗೆ ಹೆಚ್ಚಿನ ಲಿನಕ್ಸ್ ಶೆಲ್ ನಲ್ಲಿ ಚಲಾವಣೆ ಮಾಡಬಹುದು.
2:44 ಆದರೂ ನಾವು ಈ ಟ್ಯುಟೋರಿಯಲ್ ಅಲ್ಲಿ ಬಾಶ್ ನ್ನು ಶೆಲ್ ನ ಡೆಮೊನ್ ಸ್ತ್ರೆಶನ್ ಗಾಗಿ ಉಪಯೋಗಿಸುತ್ತಿದ್ದೇವೆ.
2:51 ಏಕೆಂದರೆ ಬಾಶ್ ತುಂಬಾ ಜನಪ್ರಿಯವಾದ ಶೆಲ್ ಮತ್ತು ಬಹಳ ಮಟ್ಟಿಗೆ ಎಲ್ಲ UNIX ಗೆ ಪೋರ್ಟೆಬಲ್ ಆಗಿರುತ್ತದೆ.
2:58 Bourne ಶೆಲ್ ಅನ್ನು, ಒಳಗೊಂಡಿರುವ ಇತರ ಶೆಲ್ ಗಳೆಂದರೆ ಮೂಲ Unix ಶೆಲ್, C ಶೆಲ್ ಮತ್ತು Korn ಶೆಲ್.
3:08 ನಾವು ಯಾವ ಶೆಲ್ ಉಪಯೋಗಿಸುತ್ತಿದ್ದೇವೆ ಎಂದು ನೋಡಲು
3:11 ಟರ್ಮಿನಲ್ ಗೆ ಹೋಗಿ echo space dollar, ಮತ್ತು ಕ್ಯಾಪಿಟಲ್ ಅಕ್ಷರದಲ್ಲಿ, SHELL ಎಂದು ಕಮಾಂಡ್ ನ್ನು ಬರೆದು ಎಂಟರ್ ಒತ್ತಿ.
3:27 ಸಾಮಾನ್ಯವಾಗಿ ಫಲಿತಾಂಶ /bin/bash ಎಂದು ನಮಗೆ ಬಾಶ್ ಶೆಲ್ ನೀಡುತ್ತದೆ.
3:34 ವಿವಿಧ ಶೆಲ್ ಅನ್ನು ಕಾರ್ಯಗತ ಮಾಡಬಹುದಂತಹ ರೀತಿಗಳು ಇವೆ. ಅವುಗಳು
ಟ್ಯುಟೋರಿಯಲ್ ನ ಮುಂದುವರಿದ ಭಾಗದಲ್ಲಿ ನಾವು ನೋಡಬಹುದು.
3:42 ಕಮಾಂಡ್ ಗಳು ಸಾಮಾನ್ಯವಾಗಿ c ಯಲ್ಲಿ ಬರೆದಿರುವ ಪ್ರೊಗ್ರಾಮ್ ಫೈಲ್ ಗಳು.
3:47 ಈ ಫೈಲ್ಸ್ ಗಳು ಡೈರೆಕ್ಟರಿ ಗಳಲ್ಲಿ ಇರುತ್ತವೆ. ಕಮಾಂಡ್ ಗಳು ಎಲ್ಲಿ ಸಂಗ್ರಹವಾಗಿದೆ ಎಂದು ತಿಳಿಯಲು ನಾವು ಟೈಪ್ ಕಮಾಂಡ್ ನ್ನು ಉಪಯೋಗಿಸಬಹುದು.
3:55 ಕಮಾಂಡ್ ಪ್ರಾಂಪ್ಟ್ ನಲ್ಲಿ Type--space-- ps ಎಂದು ಟೈಪ್ ಮಾಡಿ ಎಂಟರ್ ಒತ್ತಿ
4:03 ps ನಿಜವಾಗಿ /bin directory ಯಲ್ಲಿ ಸಂಗ್ರಹವಾಗಿದೆ ಎಂದು ಇದು ತೋರಿಸುತ್ತದೆ.
4:09 ನಾವು ಕಮಾಂಡ್ ಪ್ರಾಂಪ್ಟ್ ನಲ್ಲಿ ಕಮಾಂಡ್ ನ್ನು ಬರೆಯುವಾಗ, ಡೈರೆಕ್ಟರಿ ಗಳ ಪಟ್ಟಿಯಲ್ಲಿ ಇರುವ, ಕಮಾಂಡ್ ಗೆ ಹೊಂದಾಣಿಕೆ ಆಗುವಂತಹ ಫೈಲ್ ಅನ್ನು ಶೆಲ್ ಹುಡುಕುತ್ತದೆ.
4:18 ಒಂದು ವೇಳೆ ಇದು ಕಂಡು ಬಂದ್ದಲ್ಲಿ ಫೈಲ್ ಗೆ ಅನುಗುಣವಾದ ಪ್ರೋಗ್ರಾಮ್ ಕಾರ್ಯನಿರ್ವಹಿಸುತ್ತದೆ., ಇಲ್ಲದಿದ್ದಲ್ಲಿ “command not found” ಎಂಬ ಎರರ್ ಕಾಣಿಸುತ್ತದೆ.
4:27 ಹುಡುಕಲ್ಪಟ್ಟ ಡೈರೆಕ್ಟರಿ ಗಳ ಪಟ್ಟಿಯು PATH variable ನಿಂದ ಸೂಚಿಸಲ್ಪಟ್ಟಿದೆ. ಇದನ್ನು ನಾವು ನಂತರ ನೋಡೋಣ.
4:34 ಈಗ ನಾವು ಲಿಸ್ಟ್ ನೋಡಲು ಬಯಸಿದ್ದಲ್ಲಿ , ಕೇವಲ echo space dollar PATH ಎಂದು ಕಮಾಂಡ್ ನ್ನು ಟೈಪ್ ಮಾಡಬೇಕು.
4:44 ಕ್ಯಾಪಿಟಲ್ ನಲ್ಲಿ ಬರೆದು ಎಂಟರ್ ಒತ್ತಿ.
4:52 ಕಮಾಂಡ್ ಗಳ ಬಗ್ಗೆ ಮಾತಾಡುವಾಗ, ನಾವು ತಿಳಿಯಬೇಕಾದ ಒಂದು ಮುಖ್ಯ ವಿಷಯವೆಂದರೆ.
4:57 ಲಿನಕ್ಸ್ ಕಮಾಂಡ್ ನಲ್ಲಿ ಎರಡು ವಿಧಗಳಿವೆ, ಎಕ್ಸ್ ಟರ್ನಲ್ ಕಮಾಂಡ್ ಮತ್ತು internal ಕಮಾಂಡ್ .
5:02 ಈಗ ಎಕ್ಸ್ ಟರ್ನಲ್ ಕಮಾಂಡ್ ಗಳು ಪ್ರತ್ಯೇಕ ಫೈಲ್ ಅಥವಾ ಪ್ರೊಗ್ರಾಮ್ ಗಳಂತೆ ಅಸ್ತಿತ್ವದಲ್ಲಿರುತ್ತದೆ.
5:07 ಲಿನಕ್ಸ್ ನಲ್ಲಿ ಹೆಚ್ಚಿನ ಕಮಾಂಡ್ ಗಳು ಇಂತಹ ಲಕ್ಷಣಗಳನ್ನು ಹೊಂದಿದೆ. ಆದರೆ ಕೆಲವು ಕಮಾಂಡ್ ಗಳ ಜಾರಿಗೆ ತರುವುದರ ಬಗ್ಗೆ ಶೆಲ್ ನ ಒಳಗೆಯೇ ಬರೆದಿರುತ್ತದೆ, ಮತ್ತು ಅವು ಪ್ರತ್ಯೇಕ ಫೈಲ್ ಗಳಾಗಿ ಆಸ್ತಿತ್ವದಲ್ಲಿರುವುದಿಲ್ಲ.
5:18 ಇವು ಇಂಟರ್ನಲ್ ಕಮಾಂಡ್ ಗಳು.
5:20 ಇಕೋ ಕಮಾಂಡ್, ಇದನ್ನು ನಾವು ನಂತರ ನೋಡೋಣ, ವಾಸ್ತವವಾಗಿ ಇದು ಇಂಟರ್ನಲ್ ಕಮಾಂಡ್ ಆಗಿದೆ.
5:25 ಟರ್ಮಿನಲ್ ಗೆ ಹೋಗಿ ಕಮಾಂಡ್ ಬರೆಯಿರಿ,
5:33 type space echo ಎಂದು ಬರೆದು ಎಂಟರ್ ಒತ್ತಿ.
5:40 ಫಲಿತಾಂಶವು ಇಕೋ ಅನ್ನು ಶೆಲ್ ಬುಲೆಟಿನ್ ಆಗಿ ತೋರಿಸುತ್ತದೆ.
5:43 ಆದ್ದರಿಂದ ಫೈಲ್ ನ ಹೆಸರಿನ ಬದಲಿಗೆ ಇದು ಇಕೋ ಕಮಾಂಡ್ ನ ಅನುಷ್ಠಾನವು ಶೆಲ್ ಗೆ ಆಂತರಿಕವಾಗಿರುವುದನ್ನು ತೋರಿಸುತ್ತದೆ.ಆದುದರಿಂದ ಇದನ್ನು ಇಂಟರ್ನಲ್ ಕಮಾಂಡ್ ಎಂದು ಕರೆಯುತ್ತೇವೆ.
5:56 ಮತ್ತೊಂದು ಮುಖ್ಯವಾದ ವಿಷಯ ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ, - ಕಮಾಂಡ್ ಗಳ ವಿಧಾನ.
6:01 ಕಮಾಂಡ್ ಗಳು ಒಂದು ಪದ ಅಥವಾ ಅನೇಕ ಪದಗಳನ್ನು ಹೊಂದಿದ್ದು ಖಾಲಿ ಸ್ಪೇಸ್ ನಿಂದ ಪ್ರತ್ಯೇಕಿಸಲ್ಪಟ್ಟಿವೆ.
6:08 ಎರಡನೆ ಸಂದರ್ಭದಲ್ಲಿ ಮೊದಲ ಪದ ನಿಜವಾದ ಕಮಾಂಡ್ ಆಗಿದ್ದು, ಬಾಕಿ ಉಳಿದ ಪದಗಳು ವಾದಗಳಾಗಿರುತ್ತವೆ.
6:16 ವಾದಗಳು, ಆಯ್ಕೆಗಳಾಗಿರಬಹುದು, ಅಥವಾ ಎಕ್ಸ್ ಪ್ರೆಶನ್ ಗಳಾಗಿರಬಹುದು ಅಥವಾ ಫೈಲ್ ನ ಹೆಸರಾಗಿರಬಹುದು.
6:20 ಒಂದು ಕಮಾಂಡ್ ಸೂಚಿತವಾದ ಆಯ್ಕೆಯ ಆಧಾರದ ಮೇಲೆ ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸುತ್ತದೆ.
6:26 ಅವು ಸಾಮಾನ್ಯವಾಗಿ ಸಿಂಗಲ್ ಅಥವಾ ಡಬಲ್ ಮೈನಸ್ ಚಿನ್ಹೆ ಇಂದ (-) ತೋರಿಸಲ್ಪಡುತ್ತದೆ ಅಂದರೆ ಅನುಕ್ರಮವಾಗಿ ಸಣ್ಣ ಮತ್ತು ದೊಡ್ಡ ಆಯ್ಕೆಗಳು.
6:35 ಟರ್ಮಿನಲ್ ವಿಂಡೋ ಗೆ ಹೋಗಿ ಕಮಾಂಡ್ ನ್ನು ಬರೆದು ಫಲಿತಾಂಶವನ್ನು ನೋಡಿ.
6:40 ಟರ್ಮಿನಲ್ ವಿಂಡೋ ಅನ್ನು ಕ್ಲಿಯರ್ ಮಾಡಲು "Clear" ಎಂದು ಬರೆಯಿರಿ.
6:44 Is ಎಂದು ಟೈಪ್ ಮಾಡಿ ಎಂಟರ್ ಒತ್ತಿ.
6:49 ಪುನಃ ಕ್ಲಿಯರ್ ಎಂದು ಟೈಪ್ ಮಾಡಿ ಎಂಟರ್ ಒತ್ತಿ
6:55 Is space minus ಎಂದು ಟೈಪ್ ಮಾಡಿ ಎಂಟರ್ ಒತ್ತಿ.
7:04 ಟರ್ಮಿನಲ್ ವಿಂಡೋ ಅನ್ನು ಕ್ಲಿಯರ್ ಮಾಡಲು "Clear" ಎಂದು ಬರೆಯಿರಿ.
7:11 ಈಗ ls space minus minus all ಎಂದು ಟೈಪ್ ಮಾಡಿ ಎಂಟರ್ ಒತ್ತಿ.
7:19 ಟರ್ಮಿನಲ್ ಅನ್ನು ಕ್ಲಿಯರ್ ಮಾಡಲು ಕ್ಲಿಯರ್ ಎಂದು ಟೈಪ್ ಮಾಡಿ.
7:23 ಈಗ ls space minus d ಎಂದು ಟೈಪ್ ಮಾಡಿ ಎಂಟರ್ ಒತ್ತಿ.
7:32 ಈ ಹಂತದಲ್ಲಿ ಆಯ್ಕೆಗಳ ಬದಲಾವಣೆಯೊಂದಿಗೆ ಹೇಗೆ ಕಮಾಂಡ್ ನ ವರ್ತನೆಯು ಬದಲಾಗುತ್ತದೆ ಎಂದು ಅರ್ಥಮಾಡಿ ಕೊಂಡರೆ ಸಾಕು.
7:40 ಲಿನಕ್ಸ್ ನಲ್ಲಿ ನಾವು ತುಂಬಾ ಕಮಾಂಡ್ ಗಳನ್ನು ಹೊಂದಿದ್ದೇವೆ.
7:45 ಪ್ರತಿಯೊಂದರಲ್ಲೂ ಬೇರೆ ಬೇರೆ ಆಯ್ಕೆಗಳಿವೆ.
7:48 ಆದೇಶಗಳು ಒಟ್ಟಿಗೆ ಸಂಯೋಜಿತವಾಗಿಯೂ ಕೂಡಾ ಇರಬಹುದು, ಅದನ್ನು ನಂತರ ನೋಡೋಣ. ಎಲ್ಲವನ್ನೂ ಹೇಗೆ ನೆನಪಲ್ಲಿ ಇಟ್ಟುಕೊಳ್ಳಲು ಸಾಧ್ಯ?
7:55 ವಾಸ್ತವವಾಗಿ ನೆನಪಿಡಬೇಕಾಗಿಲ್ಲ, ಏಕೆಂದೆರೆ ಲಿನಕ್ಸ್ ನಲ್ಲಿ ಅತ್ಯುತ್ತಮ ಆನ್ ಲೈನ್ ಸೌಕರ್ಯ ಲಭ್ಯವಿದೆ.
8:01 ಸಿಸ್ಟಂನಲ್ಲಿ ದೊರಕುವ ಪ್ರತಿಯೊಂದು ಕಮಾಂಡ್ ಗಳ ಮೇಲೆ ಮ್ಯಾನ್ ಕಮಾಂಡ್ ದಾಖಲೆಯನ್ನು ಅನ್ನು ಒದಗಿಸುತ್ತದೆ.
8:08 ಉದಾಹರಣೆಗೆ ಹೇಳಬೇಕೆಂದರೆ,ನಿಮಗೆ ls ಆದೇಶದ ಬಗ್ಗೆ ತಿಳಿಯ ಬೇಕಾಗಿದ್ದರೆ ಟರ್ಮಿನಲ್ ಗೆ ಹೋಗಬೇಕಾಗುತ್ತದೆ.
8:16 ಮತ್ತು man ಆದೇಶವನ್ನು ls ಆದೇಶದೊಂದಿಗೆ ವಾದ ಆಗಿ ಟೈಪ್ ಮಾಡಿ.ಅಂದರೆ man ಸ್ಪೇಸ್ ls ಬರೆದು ಎಂಟರ್ ಒತ್ತಿ.
8:30 ಹೊರಗೆ ಬರಲು q ಅನ್ನು ಒತ್ತಿ.
8:35 ಮ್ಯಾನ್ ಅಂದರೆ ಸಿಸ್ಟಂ ನ manual pager ಆಗಿದೆ. ಮ್ಯಾನ್ ಗೆ ಕೊಡುವ ಪ್ರತಿಯೊಂದು ವಾದವು ಸಾಮಾನ್ಯವಾಗಿ ಪ್ರೋಗ್ರಾಮ್ ಯುನಿಟಿ ಅಥವಾ ಕ್ರಿಯೆಯ ಹೆಸರು ಆಗಿರುತ್ತದೆ.
8:43 Manual page ಪ್ರತಿಯೊಂದು ವಾದದ ಜೊತೆಗೆ ಸಂಯೋಜಿತಗೊಂಡಿದ್ದು, ನಂತರ ಇದು ಕಾಣಿಸಿಕೊಳ್ಳುತ್ತದೆ.
8:49 A ವಿಭಾಗವು, ಒಂದು ವೇಳೆ ಒದಗಿದರೆ, manual ನ ಆ ವಿಭಾಗದಲ್ಲಿ ಮಾತ್ರ ನೋಡಲು ಮ್ಯಾನ್ ಗೆ ಆದೇಶಿಸುತ್ತದೆ.
8:55 ಡಿಫಾಲ್ಟ್ ಅಂದರೆ ಮೊದಲೇ ನಿರ್ಧರಿಸಿದ ಆಜ್ಞೆಗಳನ್ನು ಅನುಸರಿಸಿ, ದೊರಕುವ ಎಲ್ಲ ವಿಭಾಗಗಳನ್ನು ಹುಡುಕುವುದು ಮತ್ತು ಕೆಲವು ವಿಭಾಗದಲ್ಲಿ ಪೇಜ್ ಮೊದಲೇ ಅಸ್ತಿತ್ವದಲ್ಲಿದ್ದರೂ ದೊರಕಿದ ಮೊದಲ ಪೇಜ್ ಅನ್ನು ಮಾತ್ರ ತೋರಿಸುವುದು.
9:07 ನೀವು ಮ್ಯಾನ್ ಕಮಾಂಡ್ ನ್ನು ಉಪಯೋಗಿಸಿಕೊಂಡು ಮ್ಯಾನ್ ಕಮಾಂಡ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.
9:14 ಟರ್ಮಿನಲ್ ಗೆ ಹೋಗಿ man ಸ್ಪೇಸ್ man ಎಂದು ಬರೆದು ಎಂಟರ್ ಒತ್ತಿ.
9:23 ಹೊರಗೆ ಬರಲು q ಅನ್ನು ಪ್ರೆಸ್ ಮಾಡಿ.
9:26 ಮ್ಯಾನ್ ಕಮಾಂಡ್ ತುಂಬಾ ಆಯ್ಕೆಗಳನ್ನು ಹೊಂದಿದೆ.
9:30 ಇಲ್ಲಿ ನಾನು ಕೆಲವು ಮುಖ್ಯವಾದವುಗಳನ್ನು ತಿಳಿಸುತ್ತೇನೆ. ಕೆಲವೊಂದು ಸಲ ನಾವು ಏನು ಮಾಡಬೇಕು ಎಂದು ತಿಳಿದಿರುತ್ತೇವೆ. ಆದರೆ ಸರಿಯಾದ ಕಮಾಂಡ್ ತಿಳಿದಿರುವುದಿಲ್ಲ. ಆಗ ನಾವು ಏನು ಮಾಡಬಹುದು?
9:41 ಮ್ಯಾನ್, -k ಆಯ್ಕೆಯನ್ನು ಒದಗಿಸುತ್ತದೆ. ಇದು ಒಂದು ಕೀ ವರ್ಡ್ ಅನ್ನು ತೆಗೆದುಕೊಂಡು, ಕಮಾಂಡ್ ನ ಪಟ್ಟಿ ಮತ್ತು ಅದರ ಸಂಪೂರ್ಣ ಉದ್ದೇಶವನ್ನು ಮರಳಿಸುತ್ತದೆ.
9:50 ಉದಾಹರಣೆಗೆ ಒಂದು ಡೈರೆಕ್ಟರಿ ಯನ್ನು ರಚಿಸಲು ನಾವು ನಿಖರವಾದ ಕಮಾಂಡ್ ನ್ನು ತಿಳಿದಿರುವುದಿಲ್ಲ,
9:56 ಆಗ ನಾವು, ಕಮಾಂಡ್ ಪ್ರಾಂಪ್ಟ್ ಗೆ ಹೋಗಿ, man ಸ್ಪೇಸ್ minus k ಸ್ಪೇಸ್ directories ಎಂದು ಬರೆದು ಎಂಟರ್ ಒತ್ತಿ.
10:12 ಈಗ ನಾವು ನಮಗೆ ನಿಜವಾಗಿ ಏನು ಅಗತ್ಯವಿದೆಯೋ ಅದನ್ನು ನೋಡಲು ಈ ಪ್ರತಿಯೊಂದು ಕಮಾಂಡ್ ಗಳನ್ನು ಹುಡುಕಬಹುದು.
10:17 apropos ಕಮಾಂಡ್ ನ್ನು ಉಪಯೋಗಿಸಿಕೊಂಡು ಅದೇ ವಿಷಯವನ್ನು ಸಾಧಿಸಬಹುದು.
10:21 Output ಬರಲು, ಕಮಾಂಡ್ ಪ್ರಾಂಪ್ಟ್ ನಲ್ಲಿ apropos ಸ್ಪೇಸ್ directories ಎಂದು ಬರೆದು ಎಂಟರ್ ಅನ್ನು ಒತ್ತಿ.
10:36 ಕೆಲವೊಂದು ಸಲ ನಮಗೆ ಹೆಚ್ಚು ವಿವರಗಳು ಬೇಕಾಗಿರುವುದಿಲ್ಲ. ನಮಗೆ ಕಮಾಂಡ್ ಏನು ಮಾಡುತ್ತದೆ ಎಂಬುದನ್ನು ಮಾತ್ರ ತಿಳಿಯಬೇಕಾಗಿರುತ್ತದೆ.
10:40 ಇಂತಹ ಸಂದರ್ಭದಲ್ಲಿ ನಾವು whatis ಅಥವಾ man -f ಕಮಾಂಡ್ ನ್ನು ಉಪಯೋಗಿಸಬಹುದು. ಎರಡೂ, ಕಮಾಂಡ್ ಗಳ ಬಗ್ಗೆ ಒಂದು ಸಾಲಿನ ವಿವರವನ್ನು ನೀಡುತ್ತದೆ.
10:52 ಟರ್ಮಿನಲ್ ವಿಂಡೋ ಅನ್ನು ಕ್ಲಿಯರ್ ಮಾಡಲು "Clear" ಎಂದು ಬರೆಯಿರಿ.
10:58 ಈಗ whatis ಸ್ಪೇಸ್ ls ಎಂದು ಟೈಪ್ ಮಾಡಿ ಎಂಟರ್ ಒತ್ತಿ.
11:06 ಕೆಲವು ಕಮಾಂಡ್ ಗಳು ತುಂಬಾ ಆಯ್ಕೆಗಳನ್ನು ಹೊಂದಿರುತ್ತದೆ. ನಾವು ಒಂದು ಕಮಾಂಡ್ ನ ವಿವಿಧ ಆಯ್ಕೆಗಳ ಪಟ್ಟಿಯನ್ನು ಹೊಂದಲು ಬಯಸಬಹುದು.
11:13 ನಂತರ ನಾವು minus help ಆಯ್ಕೆಯನ್ನು ಉಪಯೋಗಿಸುತ್ತೇವೆ.
11:18 ಈಗ ಕಮಾಂಡ್ ಪ್ರಾಂಪ್ಟ್ ಗೆ ಹೋಗಿ, ls ಸ್ಪೇಸ್ minus minus help ಎಂದು ಬರೆದು ಎಂಟರ್ ಒತ್ತಿ.
11:29 ನಾನು scroll up ಮಾಡುವುದರಿಂದ, ನೀವು manual ಪೇಜ್ ನಲ್ಲಿರುವ ಎಲ್ಲಾ ಆಯ್ಕೆಗಳನ್ನು ನೋಡಬಹುದು.
11:45 ಈ ವಿಭಾಗದ ಲಿನಕ್ಸ್ ಸ್ಪೋಕನ್ ಟ್ಯುಟೋರಿಯಲ್ ಗೆ ಇಷ್ಟು ಸಾಕು. ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.
11:56 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
12:00 ಈ ಸ್ಕ್ರಿಪ್ಟ್ ಮಹಾಲಕ್ಷ್ಮಿ ಯ ಕೊಡುಗೆಯಾಗಿದ್ದು , ಇದಕ್ಕಾಗಿ ಕಂಠದಾನ ಮಾಡಿದವರು ------- ಧನ್ಯವಾದಗಳು, ಶುಭವಿದಾಯ.

Contributors and Content Editors

Gaurav, Udaya, Vasudeva ahitanal