Arduino/C2/Wireless-Connectivity-to-Arduino/Kannada

From Script | Spoken-Tutorial
Revision as of 20:34, 30 June 2020 by Sandhya.np14 (Talk | contribs)

Jump to: navigation, search
Time Narration
00:01 Wireless Connectivity to Arduino ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ESP8266-01 ಮಾಡ್ಯುಲ್ ನಲ್ಲಿ ಕೋಡ್ ಅನ್ನು ಕಾನ್ಫಿಗರ್ ಮತ್ತು ಅಪ್ಲೋಡ್ ಮಾಡಲು,

00:17 ESP ಮತ್ತು ಇತರ ಉಪಕರಣಗಳ ನಡುವೆ ವೈರ್-ಲೆಸ್ ಕಮ್ಯುನಿಕೇಶನ್ ಸಾಧಿಸಲು ಕಲಿಯಲಿದ್ದೇವೆ.
00:23 ಈ ಟ್ಯುಟೋರಿಯಲ್ ಅನುಸರಿಸಲು ನೀವು ಈ ಕೆಳಗಿನವುಗಳ ಮೂಲಭೂತ ಜ್ಞಾನ ಹೊಂದಿರಬೇಕು:

ಎಲೆಕ್ಟ್ರಾನಿಕ್ಸ್,

00:29 C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಮತ್ತು
00:33 ವೈರ್ಲೆಸ್ ಕಮ್ಯುನಿಕೇಶನ್.
00:36 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್,

00:41 ಉಬಂಟು ಲೀನಕ್ಸ್ 16.04 ಒ.ಎಸ್ ಮತ್ತು Arduino IDE ಬಳಸುತ್ತಿದ್ದೇನೆ.
00:48 ನಮಗೆ ಈ ಕೆಳಗಿನ ಎಕ್ಸ್ಟೆರ್ನಲ್ ಕಾಂಪೋನೆಂಟ್ ಗಳು ಬೇಕು:

ESP8266-01 ವೈಫೈ ಮಾಡ್ಯುಲ್,

00:59 ಬ್ರೆಡ್-ಬೋರ್ಡ್,
01:01 ಜಂಪರ್ ವೈರ್ ಗಳು ಮತ್ತು ಪುಶ್ ಬೋರ್ಡ್.
01:05 ಈ ಟ್ಯುಟೋರಿಯಲ್ ನಲ್ಲಿ ನಾವು ESP8266-01 ವೈಫೈ ಮಾಡ್ಯುಲ್ ಬಳಸಲಿದ್ದೇವೆ.
01:13 VCC, RST, CH_PD, Tx, ಗ್ರೌಂಡ್, GPIO2, GPIO0, Rx ಇತ್ಯಾದಿ ವೈಫೈ ಮಾಡ್ಯುಲ್ ನ ಪಿನ್ ಗಳಾಗಿವೆ.
01:27 ಮಾಡ್ಯುಲ್ ಆನ್ ಇದೆಯೇ ಅಥವಾ ಆಫ್ ಇದೆಯೇ ಎಂಬುದನ್ನು Power LED ಸೂಚಿಸುತ್ತದೆ.
01:32 COMM LED ಯು ವೈಫೈ ಮಾಡ್ಯುಲ್ ನ ಬಿಲ್ಟ್ ಇನ್ ಬ್ಲೂ ಎಲ್.ಇ.ಡಿ ಆಗಿದೆ.
01:37 ಈ ಟ್ಯುಟೋರಿಯಲ್ ನಲ್ಲಿ ನಾವು, ವೈಫೈ ಬಳಸಿ ಈ ಬಿಲ್ಟ್ ಇನ್ ಎಲ್.ಇ.ಡಿ ಯನ್ನು ಹೇಗೆ ನಿಯಂತ್ರಿಸಬಹುದು ಎಂದು ನೋಡಲಿದ್ದೇವೆ.
01:43 ಈ ವೈಫೈ ಮಾಡ್ಯುಲ್, ಇಂಟಿಗ್ರೇಟೆಡ್ TCP/IP ಜೊತೆ ಬಿಲ್ಟ್ ಇನ್ ಸಿಸ್ಟಂ ಆನ್ ಚಿಪ್ ಹೊಂದಿದೆ.
01:51 ಇದು UART ಮತ್ತು 2 GPIO ಪಿನ್ ಗಳನ್ನು (ಜನರಲ್ ಪರ್ಪೋಸ್ ಇನ್ಪುಟ್/ಔಟ್ಪುಟ್) ಹೊಂದಿದೆ.
01:57 ಇದನ್ನು ಸಾಮಾನ್ಯವಾಗಿ IoT (ಅಂದರೆ ಇಂಟರ್ ನೆಟ್ ಆಫ್ ಥಿಂಗ್ಸ್) ಆಪ್ಲಿಕೇಶನ್ ಗಳ ಅಭಿವೃದ್ಧಿಗೆ ಬಳಸಲಾಗುತ್ತದೆ.
02:04 ಇದು ಆರ್ಡುಯಿನೊ ಜೊತೆಗಿನ ESP8266 - 01 ಮಾಡ್ಯುಲ್ ನ ಸರ್ಕಿಟ್ ಸಂಪರ್ಕವಾಗಿದೆ.
02:12 ಗಮನಿಸಿ: ESP8266 - 01 ಮಾಡ್ಯುಲ್, 3.3 ವೋಲ್ಟ್ಸ್ ನಲ್ಲಿ ಮಾತ್ರ ಕೆಲಸ ಮಾಡುತ್ತದೆ.
02:20 ಇದನ್ನು 5 ವೋಲ್ಟ್ಸ್ ಗೆ ಸಂಪರ್ಕಿಸಿದರೆ ವೈಫೈ ಮಾಡ್ಯುಲ್ ಗೆ ಹಾನಿಯಾಗಬಹುದು.
02:24 ವೈಫೈ ಮಾಡ್ಯುಲ್ ನ ಗ್ರೌಂಡ್ ಪಿನ್ ಅನ್ನು ಆರ್ಡುಯಿನೊವಿನ ಗ್ರೌಂಡ್ ಪಿನ್ ಗೆ ಸಂಪರ್ಕಿಸಿ.
02:29 ವೈಫೈ ಮಾಡ್ಯುಲ್ ನ GPIO 0 ಪಿನ್ ಅನ್ನು ಆರ್ಡುಯಿನೊವಿನ ಗ್ರೌಂಡ್ ಗೆ ಸಂಪರ್ಕಿಸಿ.
02:35 ವೈಫೈ ಮಾಡ್ಯುಲ್ ನ Rx ಪಿನ್ ಅನ್ನು ಆರ್ಡುಯಿನೊವಿನ Rx ಪಿನ್ ಗೆ ಸಂಪರ್ಕಿಸಿ.
02:47 ವೈಫೈ ಮಾಡ್ಯುಲ್ ನ VCC ಮತ್ತು CH_PD ಪಿನ್ ಗಳನ್ನು ಆರ್ಡುಯಿನೊವಿನ 3.3V ಗೆ ಸಂಪರ್ಕಿಸಿ.
02:57 ಪುಶ್ ಬಟನ್ ಅನ್ನು ವೈಫೈ ಮಾಡ್ಯುಲ್ ನ RST ಪಿನ್ ಮತ್ತು ಆರ್ಡುಯಿನೊವಿನ ಗ್ರೌಂಡ್ ಪಿನ್ ನಡುವೆ ಸಂಪರ್ಕಿಸಿ.
03:05 ಇದು ಸರ್ಕಿಟ್ ಡಯಗ್ರಾಂನಲ್ಲಿ ತೋರಿಸಿರುವಂತೆ ಸಂಪರ್ಕದ ಲೈವ್ ಸೆಟಪ್ ಆಗಿದೆ.
03:10 ಇಲ್ಲಿ ತೋರಿಸಿರುವಂತೆ ಸಂಪರ್ಕ ನೀಡಿ.
03:13 ನಾವು ವೈಫೈ ಮಾಡ್ಯುಲ್ ಮತ್ತು ಲ್ಯಾಪ್ ಟಾಪ್ ಅಥವಾ ಮೊಬೈಲ್ ಫೋನ್ ನಡುವೆ ಸಂಪರ್ಕ ರಚಿಸಲಿದ್ದೇವೆ.
03:20 ನಾವು Arduino IDE ನಲ್ಲಿ ಪ್ರೋಗ್ರಾಂ ಬರೆಯಲಿದ್ದೇವೆ.

Arduino IDE ತೆರೆಯಿರಿ.

03:27 ನಿಮ್ಮ ಆರ್ಡುಯಿನೊ ಬೋರ್ಡ್ ಅನ್ನು ನಿಮ್ಮ ಪಿ.ಸಿ ಗೆ ಸಂಪರ್ಕಿಸಿ.
03:30 ಮೊದಲಿಗೆ, ಆರ್ಡುಯಿನೊ ಸಂಪರ್ಕಿಸಬೇಕಾದ ಪೋರ್ಟ್ ನ ಹೆಸರನ್ನು ನಾವು ತಿಳಿದುಕೊಳ್ಳಬೇಕು.
03:35 Tools ಮೆನುವಿಗೆ ಹೋಗಿ Port ಆಯ್ಕೆಯನ್ನು ಆರಿಸಿ.
03:40 ನನ್ನ ವಿಚಾರದಲ್ಲಿ, ttyUSB0 ಯು ಪೋರ್ಟ್ ಆಗಿದೆ. ನಿಮ್ಮ ಪೋರ್ಟ್ ಹೆಸರನ್ನು ಬರೆದಿಟ್ಟುಕೊಳ್ಳಿ.
03:49 ವಿಂಡೋಸ್ ಬಳಕೆದಾರರು ಈ ಹಂತವನ್ನು ಬಿಟ್ಟುಬಿಡಬಹುದು. ಏಕೆಂದರೆ ಇಲ್ಲಿ ಪೋರ್ಟ್ ಅನ್ನು ಸ್ವಯಂಚಾಲಿತವಾಗಿ ಗುರುತಿಸಲಾಗುತ್ತದೆ.
03:56 Ctrl+Alt+T ಕೀಗಳನ್ನು ಏಕಕಾಲದಲ್ಲಿ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
04:03 sudo space chmod space a+rw space slash dev slash ttyUSB0 ಎಂದು ಟೈಪ್ ಮಾಡಿ.
04:18 ನನ್ನ ವಿಚಾರದಲ್ಲಿ ಪೋರ್ಟ್ ಹೆಸರು: ttyUSB0
04:25 ನೀವು ಪೋರ್ಟ್ ಹೆಸರನ್ನು ನಿರೂಪಿಸಬೇಕು.

Enter ಒತ್ತಿ.

04:30 ಸಿಸ್ಟಂಗೆ ನಿಮ್ಮ ಪಾಸ್ವರ್ಡ್ ನಮೂದಿಸಿ ಮತ್ತು Enter ಒತ್ತಿ.
04:35 ಮೇಲಿನ ಕಮಾಂಡ್, ಯು.ಎಸ್.ಬಿ ಪೋರ್ಟ್ ಗೆ ರೀಡ್-ರೈಟ್ ಕಮಾಂಡ್ ನೀಡುತ್ತದೆ.
04:40 Arduino IDE ಗೆ ಮರಳಿ.
04:43 ನಂತರ ನಾವು, ಸಂವಹನಕ್ಕಾಗಿ ESP8266 ಮಾಡ್ಯುಲ್ ಅನ್ನು ಕಾನ್ಫಿಗರ್ ಮಾಡೋಣ.
04:49 ಮೆನು ಬಾರ್ ನಲ್ಲಿ, File ಮೆನು ಮೇಲೆ ಕ್ಲಿಕ್ ಮಾಡಿ.

Preferences ಆರಿಸಿ.

04:56 ಹೊಸ ವಿಂಡೋ ತೆರೆದುಕೊಳ್ಳುತ್ತದೆ.
04:58 Settings ಟ್ಯಾಬ್ ನಲ್ಲಿ Additional Boards Manager URLs ವಿಭಾಗಕ್ಕೆ ಹೋಗಿ.

json URL ಸೇರಿಸಿ.

05:09 Arduino IDE ಯಲ್ಲಿ ESP8266 ವೈಫೈ ಮಾಡ್ಯುಲ್ ಡೌನ್ ಲೋಡ್ ಮಾಡಲು ಇದು ಸಹಕರಿಸುತ್ತದೆ.
05:16 ವಿಂಡೋವಿನ ಕೆಳಭಾಗದಲ್ಲಿ OK ಬಟನ್ ಮೇಲೆ ಕ್ಲಿಕ್ ಮಾಡಿ.
05:20 ಮೆನು ಬಾರ್ ನಲ್ಲಿ Tools ಮೆನು ಮೇಲೆ ಕ್ಲಿಕ್ ಮಾಡಿ ಮತ್ತು Board ಆರಿಸಿ.
05:25 ನಂತರ Boards Manager ಆಯ್ಕೆಯನ್ನು ಆರಿಸಿ. ಹೊಸ ವಿಂಡೋ ಕಾಣಿಸಿಕೊಳ್ಳುತ್ತದೆ.
05:31 ಮೇಲ್ಗಡೆ ಬಲ ಮೂಲೆಯಲ್ಲಿ ನಾವು search ಟ್ಯಾಬ್ ಅನ್ನು ನೋಡಬಹುದು.
05:35 ಇಲ್ಲಿ ESP8266 ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
05:41 ESP8266 by ESP8266 Community ಆರಿಸಿ.
05:48 ವರ್ಶನ್ ಡ್ರಾಪ್ ಡೌನ್ ಬಾಕ್ಸ್ ನಲ್ಲಿ, ಮಾಡ್ಯುಲ್ ನ ಇತ್ತೀಚಿನ ಆವೃತ್ತಿಯನ್ನು ಆರಿಸಿ.
05:53 Install ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಮಾಡ್ಯಲ್ ಅನ್ನು ಅಳವಡಿಸಿ.
05:57 ಅಳವಡಿಕೆ ಪೂರ್ಣಗೊಳ್ಳಲು ಕೆಲವು ನಿಮಿಷಗಳು ಬೇಕಾಗಬಹುದು.
06:01 ಇದು ಯಶಸ್ವಿಯಾಗಿ ಅಳವಡಿಕೆಯಾಗುವ ತನಕ ಕಾಯಿರಿ.
06:05 ESP8266 ಮಾಡ್ಯುಲ್ ಈಗ Arduino IDE ಯಲ್ಲಿ ಅಳವಡಿಕೆಯಾಗಿದೆ.
06:09 ವಿಂಡೋವಿನ ಕೆಳಕ್ಕೆ ಬಲಭಾಗದಲ್ಲಿ Close ಬಟನ್ ಮೇಲೆ ಕ್ಲಿಕ್ ಮಾಡಿ.
06:14 ಈಗ, ಪ್ರೋಗ್ರಾಂ ಅಪ್ಲೋಡ್ ಮಾಡುವ ಮೊದಲು ನಾವು ESP8266 ಮಾಡ್ಯುಲ್ ಅನ್ನು ಆರಿಸಬೇಕು.
06:20 Tools ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು Board ಆರಿಸಿ.
06:25 ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು Generic ESP8266 Module ಆರಿಸಿ.
06:32 ನಂತರ ನಾವು ESP8266 ಮಾಡ್ಯುಲ್ ನ ಬಿಲ್ಟ್-ಇನ್ ಎಲ್.ಇ.ಡಿ ಯನ್ನು ಸೆಟ್ ಮಾಡಬೇಕು.

ಇನ್ನೊಮ್ಮೆ Tools ಆರಿಸಿ.

06:41 Builtin LED ಆಯ್ಕೆಗೆ ಹೋಗಿ. Builtin LED ಯನ್ನು 1 ಕ್ಕೆ ಸೆಟ್ ಮಾಡಿ.
06:48 ನಂತರ ನಾವು Reset ಆಯ್ಕೆಯನ್ನು ಸೆಟ್ ಮಾಡಲಿದ್ದೇವೆ.
06:52 ಮೆನು ಬಾರ್ ನಲ್ಲಿ Tools ಆರಿಸಿ. Reset Method ಗೆ ಹೋಗಿ.
06:58 Reset ಮೆಥಡ್ ಅನ್ನು no dtr in bracket aka ck ಗೆ ಆರಿಸಿ.
07:06 ಇದು, ವೈಫೈ ಮಾಡ್ಯುಲ್ ಅನ್ನು ಮ್ಯಾನುವಲ್ ಆಗಿ ರೀಸೆಟ್ ಮಾಡಲು ಸಹಕರಿಸುತ್ತದೆ.
07:10 ನಾವೀಗ ಕೋಡ್ ಅನ್ನು ಬರೆಯಲಿದ್ದೇವೆ. ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
07:16 ನಾವು ESP8266 library ಯನ್ನು ಸೇರಿಸಿದ್ದೇವೆ.
07:20 SSID ಎನ್ನುವುದು ವೈಫೈ ಮಾಡ್ಯುಲ್ ನ ನೇಮ್ ಆಗಿದೆ.
07:24 ಇಲ್ಲಿ, ನಾನು ವೈಫೈ ನೆಟ್ವರ್ಕ್ ಅನ್ನು WIFI_ESP8266_Pratik ಎಂದು ಹೆಸರಿಸಿದ್ದೇನೆ.
07:34 ವೈಫೈ ನೆಟ್ವರ್ಕ್ ಗೆ ಸೇರಲು passcode ಎನ್ನುವುದು ಪಾಸ್ವರ್ಡ್ ಆಗಿದೆ.

ಹಾಗೂ ಮಾಡ್ಯುಲ್ ನ ಪಾಸ್ವರ್ಡ್ 12345678 ಆಗಿದೆ.

07:47 ನಿಮ್ಮ ವಿಶಿಷ್ಟ ssid ಮತ್ತು ಪಾಸ್ವರ್ಡ್ ಅನ್ನು ನೀವು ನೀಡಬೇಕು.
07:52 ಪಾಸ್ವರ್ಡ್ ಪ್ಯಾರಾಮೀಟರ್ ಕಡ್ಡಾಯವಲ್ಲ.
07:56 ನೀವು ಪಾಸ್ವರ್ಡ್ ಪ್ಯಾರಾಮೀಟರ್ ನೀಡದಿದ್ದರೆ ವೈಫೈ ನೆಟ್ವರ್ಕ್ ತೆರೆದಿರುತ್ತದೆ.
08:01 ಇದನ್ನು ಸಮೀಪದಲ್ಲಿರುವ ಎಲ್ಲರೂ ಆಕ್ಸೆಸ್ ಮಾಡಬಹುದು.
08:05 ಈ ಕಮಾಂಡ್, ಮಾಡ್ಯುಲ್ ನ ಡೀಫಾಲ್ಟ್ ಐ.ಪಿ. ಅಡ್ರೆಸ್ ಅನ್ನು ಸಕ್ರಿಯಗೊಳಿಸುತ್ತದೆ.
08:10 ಮಾಡ್ಯುಲ್ ನ ಡೀಫಾಲ್ಟ್ ಐ.ಪಿ ಅಡ್ರೆಸ್ 192.168.4.1 ಆಗಿದೆ.
08:20 setup function ಒಳಗೆ, ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಬರೆಯಿರಿ.
08:25 ಈ ಕಮಾಂಡ್, ESP8266 ಮಾಡ್ಯುಲ್ ಗೆ SSID ಮತ್ತು ಪಾಸ್ವರ್ಡ್ ಅನ್ನು ಸಕ್ರಿಯಗೊಳಿಸುತ್ತದೆ.
08:33 server.begin ಎನ್ನುವುದು ಇಲ್ಲಿ ನೀಡಿರುವ SSID ಮತ್ತು ಪಾಸ್ವರ್ಡ್ ಗೆ ವೈಫೈ ನೆಟ್ವರ್ಕ್ ಅನ್ನು ಸಕ್ರಿಯಗೊಳಿಸುತ್ತದೆ.
08:40 ಮಾಡ್ಯುಲ್ ಅನ್ನು ಬೂಟ್ ಮಾಡಲು 2 ಸೆಕೆಂಡುಗಳ ಡಿಲೇ ಯನ್ನು ನೀಡಲಾಗುತ್ತದೆ.
08:44 ESP8266 ಮಾಡ್ಯುಲ್ ನ ಬಿಲ್ಟ್-ಇನ್ ಎಲ್.ಇ.ಡಿ ಯನ್ನು OUTPUT ಮೋಡ್ ಆಗಿ ಸೆಟ್ ಮಾಡಲಾಗುತ್ತದೆ.
08:51 void loop function ಒಳಗೆ ಕೋಡ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ.
08:56 ಈ ಕೋಡ್, ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಲಭ್ಯ. ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು.
09:04 ಇಲ್ಲಿ ತೋರಿಸಿರುವಂತೆ, HTML ಕೋಡ್, ವೆಬ್ಪೇಜ್ ಅನ್ನು ರಚಿಸುತ್ತದೆ.
09:10 LED ON ಅಥವಾ LED OFF ಗುಂಡಿಯನ್ನು ಒತ್ತಿದಾಗ, ಮೌಲ್ಯವನ್ನು ಪ್ರೋಗ್ರಾಂ ಗೆ ವರ್ಗಾಯಿಸಲಾಗುತ್ತದೆ.
09:17 ಈ ಪ್ರೋಗ್ರಾಂ, ಮೌಲ್ಯವನ್ನು ಪರಿಶೀಲಿಸುತ್ತದೆ ಮತ್ತು ESP8266-01 ಮಾಡ್ಯುಲ್ ನ ಬಿಲ್ಟ್-ಇನ್ ಎಲ್.ಇ.ಡಿ ಯನ್ನು ನಿಯಂತ್ರಿಸುತ್ತದೆ.
09:27 ಪ್ರೋಗ್ರಾಂ ಅನ್ನು ಪರಿಶೀಲಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ.
09:31 ಪ್ರಸ್ತುತ ಪ್ರೋಗ್ರಾಂ ಅನ್ನು ಸೇವ್ ಮಾಡಲು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
09:35 ಪ್ರೋಗ್ರಾಂ ಅನ್ನು WiFi_ESP8266 ಆಗಿ ಹೆಸರಿಸಿ.
09:43 ಮತ್ತು ಪ್ರೋಗ್ರಾಂ ಅನ್ನು ಸೇವ್ ಮಾಡಲು save ಬಟನ್ ಮೇಲೆ ಕ್ಲಿಕ್ ಮಾಡಿ.
09:48 ಈಗ, ESP8266-01 ರಲ್ಲಿ ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡಿ.
09:58 ಪ್ರೋಗ್ರಾಂ ಅಪ್ಲೋಡ್ ಆಗುತ್ತಿರುವುದನ್ನು ನಾವು ಸ್ಕ್ರೀನ್ ನ ಕೆಳಭಾಗದಲ್ಲಿ ನೋಡಬಹುದು.
10:03 ಸ್ಥಿತಿಯು Connecting ಗೆ ಬದಲಾದಾಗ, ಬ್ರೆಡ್-ಬೋರ್ಡ್ ನಲ್ಲಿ ಪುಶ್ ಬಟನ್ ಒತ್ತಿ.

2 ರಿಂದ 3 ಸೆಕೆಂಡುಗಳ ನಂತರ ಇದನ್ನು ರಿಲೀಸ್ ಮಾಡಿ.

10:13 ಇಲ್ಲಿ ತೋರಿಸಿರುವಂತೆ, ನಾವು Leaving…. Soft resetting ಸಂದೇಶವನ್ನು ನಾವು ನೋಡಬಹುದು.
10:20 ಪ್ರೋಗ್ರಾಂ ಯಶಸ್ವಿಯಾಗಿ ಅಪ್ಲೋಡ್ ಆಗಿದೆ ಎಂಬುದನ್ನು ಇದು ತೋರಿಸುತ್ತದೆ.
10:25 ನಿಮ್ಮ ಮೊಬೈಲ್ ಇಂಟರ್ನೆಟ್ ಅನ್ನು ಸ್ವಿಚ್ ಆಫ್ ಮಾಡಿ.
10:28 ನಿಮ್ಮ ಮೊಬೈಲ್ ಫೋನ್ ನ Wi-Fi ಆಪ್ಶನ್ ಅನ್ನು ತೆರೆಯಿರಿ.
10:32 ಸಂಪರ್ಕಿಸಲು, ಸಮೀಪದ ನೆಟ್ವರ್ಕ್ ಅನ್ನು ಹುಡುಕಿ.
10:35 ನನ್ನ ವಿಚಾರದಲ್ಲಿ ನಾನು WIFI_ESP8266_Pratik ಪಡೆಯುತ್ತಿದ್ದೇನೆ. ಏಕೆಂದರೆ ನಾವು ಈ ಹೆಸರನ್ನು ಕೋಡ್ ನಲ್ಲಿ ನೀಡಿದ್ದೇವೆ.

ವೈಫೈ ಯನ್ನು ಆರಿಸಿ.

10:52 ಪಾಸ್ವರ್ಡ್ ನಮೂದಿಸಿ ಮತ್ತು ಇದು ವೈಫೈಗೆ ಸಂಪರ್ಕ ಹೊಂದಿದೆಯೇ ಎಂದು ಪರಿಶೀಲಿಸಿ.
10:57 ನಿಮ್ಮ ಮೊಬೈಲ್ ಫೋನ್ ನಲ್ಲಿ ವೆಬ್ ಬ್ರೌಸರ್ ತೆರೆಯಿರಿ.

ಐ.ಪಿ ಅಡ್ರೆಸ್ 192.168.4.1 ಅನ್ನು ನಮೂದಿಸಿ.

11:11 ಇದು ಉತ್ಪಾದಕರ ESP8266-01 ವೈಫೈ ಮಾಡ್ಯುಲ್ ನ ಡೀಫಾಲ್ಟ್ ಐ.ಪಿ ಅಡ್ರೆಸ್ ಆಗಿದೆ.
11:22 HTML ಕೋಡ್ ಪ್ರಕಾರ ವೆಬ್ ಪೇಜ್ ತೆರೆದುಕೊಳ್ಳುತ್ತದೆ.
11:26 ESP8266-01 ಮಾಡ್ಯುಲ್ ನ ಎಲ್.ಇ.ಡಿ ಯು ಆಫ್ ಆಗಿರುವುದನ್ನು ನಾವು ನೋಡಬಹುದು.
11:34 LED ON ಬಟನ್ ಮೇಲೆ ಕ್ಲಿಕ್ ಮಾಡಿ. ಇದು ವೈಫೈ ಮಾಡ್ಯುಲ್ ನ ನೀಲಿ ಎಲ್.ಇ.ಡಿ ಯನ್ನು ಆನ್ ಮಾಡುತ್ತದೆ.
11:41 LED OFF ಬಟನ್ ನಾವು ಒತ್ತುವ ತನಕ ಇದು ʻಆನ್ʼ ಆಗಿರುತ್ತದೆ.
11:46 LED OFF ಬಟನ್ ಮೇಲೆ ಕ್ಲಿಕ್ ಮಾಡಿ. ಇದು ವೈಫೈ ಮಾಡ್ಯುಲ್ ನ ನೀಲಿ ಎಲ್.ಇ.ಡಿ ಯನ್ನು ಆಫ್ ಮಾಡುತ್ತದೆ.
11:52 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
11:58 ಈ ಟ್ಯುಟೋರಿಯಲ್ ನಲ್ಲಿ ನಾವು:

ESP8266-01 ಮಾಡ್ಯುಲ್ ನಲ್ಲಿ ಕಾನ್ಫಿಗರ್ ಮತ್ತು ಅಪ್ಲೋಡ್ ಮಾಡಲು,

12:09 ESP ಮತ್ತು ಇತರ ಸಾಧನಗಳ ನಡುವೆ ವೈರ್ಲೆಸ್ ಸಂವಹನವನ್ನು ಸಾಧಿಸಲು ಕಲಿತೆವು.
12:15 ಅಸೈನ್ಮೆಂಟ್ ಆಗಿ:

ನಿಮ್ಮ ಪಿ.ಸಿ ಅಥವಾ ಲ್ಯಾಪ್ ಟಾಪ್ ವೈರ್ಲೆಸ್ ಕನೆಕ್ಟಿವಿಟಿಯನ್ನು ಹೊಂದಿದೆಯೇ ಎಂದು ಪರಿಶೀಲಿಸಿ ಮತ್ತು ಕೆಳಗಿನ ಕ್ರಮಗಳನ್ನು ಅನುಸರಿಸಿ.

12:23 ಮೇಲ್ಗಡೆ ಬಲ ಮೂಲೆಯಲ್ಲಿ WiFi ಐಕಾನ್ ಮೇಲೆ ಕ್ಲಿಕ್ ಮಾಡಿ.
12:28 ನಿಮ್ಮ ವೈಫೈ ಯ ಹೆಸರನ್ನು ಆರಿಸಿ ಮತ್ತು ಪಾಸ್ವರ್ಡ್ ನಮೂದಿಸಿ.
12:32 ಬ್ರೌಸರ್ ತೆರೆಯಿರಿ ಮತ್ತು 192.168.4.1 ಗೆ ಹೋಗಿ.
12:41 ಬಟನ್ ಆರಿಸಿ ಮತ್ತು ESP8266-01 ಮಾಡ್ಯುಲ್ ನ ಔಟ್ಪುಟ್ ನೋಡಿ.
12:49 ಇಲ್ಲಿ ತೋರಿಸಿರುವಂತೆ ನಿಮಗೆ ಅಸೈನ್ಮೆಂಟ್ ನ ಔಟ್ಪುಟ್ ಕಾಣಬೇಕು.
13:03 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
13:11 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.
13:18 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
13:22 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
13.29 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, NaveenBhat, Sandhya.np14