PHP-and-MySQL/C4/MD5-Encryption/Kannada
From Script | Spoken-Tutorial
Revision as of 13:08, 12 May 2020 by Sandhya.np14 (Talk | contribs)
Time | Narration | ||
00:00 | ನಮಸ್ಕಾರ, ನೀವು ಪಿ.ಎಚ್.ಪಿ ಯ ಸುರಕ್ಷತೆ(ಸೆಕ್ಯುರಿಟಿ) ಯ ಕುರಿತು ಕಾಳಜಿ ಹೊಂದಿದ್ದರೆ ಇದು ನಿಮಗೆ ಸಹಾಯಕ ಮತ್ತು ಇದು MD5 function ನ ಕುರಿತು ತಿಳಿಸುತ್ತದೆ. | ||
00:09 | ಇದು ಒಂದು ಪ್ರಿಡಿಫೈನ್ಡ್ ಫಂಕ್ಷನ್ ಆಗಿದೆ ಮತ್ತು ಇದು ನಿಮ್ಮ string ಅನ್ನು MD5 hash ಗೆ ಪರಿವರ್ತಿಸುತ್ತದೆ ಮತ್ತು ಡಾಟಾವನ್ನು ರಕ್ಷಿಸಲು ಸಹಾಯಕವಾಗಿದೆ. | ||
00:16 | 'MD5 hash' ಇದು ಏಕಮುಖವಾಗಿದ್ದು, ಇದನ್ನು ಡಿ-ಕ್ರಿಪ್ಟ್ ಮಾಡಲು ಸಾಧ್ಯವಿಲ್ಲ, ಇದನ್ನು ಕೇವಲ ಎನ್ಕ್ರಿಪ್ಟ್ ಮಾಡಬಹುದು. | ||
00:21 | 'MD5 hash' ಅನ್ನು ಕಂಡುಹಿಡಿಯುವ ಏಕೈಕ ವಿಧಾನವೆಂದರೆ, ಸ್ಟ್ರಿಂಗ್ ಅನ್ನು ಕೂಡ 'MD5 hash' ಗೆ ಪರಿವರ್ತಿಸಿ, ಮೊದಲೆ ಹ್ಯಾಶ್ ಗೆ ಪರಿವರ್ತಿತವಾದ ಸ್ಟ್ರಿಂಗ್ ನೊಂದಿಗೆ ಹೋಲಿಕೆ ಮಾಡಬಹುದು. | ||
00:31 | ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗದಿದ್ದಲ್ಲಿ, ನಾನು ಈ ಟ್ಯುಟೋರಿಯಲ್ ನಲ್ಲಿ ಅದರ ಕುರಿತು ಹೇಳುವೆನು. | ||
00:38 | ನಾನು ಈಗ ಒಂದು ಸ್ಟ್ರಿಂಗ್ ಅನ್ನು ಡಿಫೈನ್ ಮಾಡುವುದರ ಮೂಲಕ ಆರಂಭಿಸುವೆನು ಮತ್ತು ಅದು ನನ್ನ ಪಾಸ್ವರ್ಡ್ ಆಗಿರುವುದು. | ||
00:45 | ನಾನು ಇದನ್ನು $user password ಎಂದು ಕರೆಯುವೆನು ಮತ್ತು ಅದು "abc" ಎಂಬ ವ್ಯಾಲ್ಯುವನ್ನು ಹೊಂದಿರುವುದು. | ||
00:55 | ನಂತರ ನಾನು ಇನ್ನೊಂದು ಹೊಸ ವೇರಿಯೇಬಲ್ '$user password e n c' ಯನ್ನು ರಚಿಸುವೆನು ಮತ್ತು ಇದು ಎನ್ಕ್ರಿಪ್ಷನ್ ಅನ್ನು ಸೂಚಿಸುತ್ತದೆ. ನಾನು ನನ್ನ 'MD5' ಫಂಕ್ಷನ್ ಅನ್ನು ಡಿಫೈನ್ ಮಾಡುವೆನು ಮತ್ತು ಅದು m,d ಮತ್ತು 5 ಎಂದಾಗಿರುತ್ತದೆ. | ||
01:09 | ಇದು ಏನನ್ನಾದರು ತೆಗೆದುಕೊಳ್ಳುತ್ತದೆ ಹಾಗಾಗಿ ನೀವು ಇಲ್ಲಿ ನೀವು ಏನನ್ನು ಎನ್ಕ್ರಿಪ್ಟ್ ಮಾಡಲು ಬಯಸುವಿರೋ ಅದನ್ನು ಕೊಡಬಹುದು. | ||
01:13 | ಆದರೆ ಈಗ ಸದ್ಯಕ್ಕೆ ನಾನು ಇಲ್ಲಿ ಮೇಲೆ ಡಿಫೈನ್ ಮಾಡಿದ ನನ್ನ $user password ವೇರಿಯೇಬಲ್ ಅನ್ನು ಕೊಡುವೆನು. | ||
01:18 | ಮತ್ತು ಈಗ ನಾವು ಇದನ್ನು ಎಕೋ ಮಾಡಿದರೆ, ನಾವು ಏನು ಪಡೆಯುವೆವು ಎಂದರೆ, | ||
01:27 | ನಮ್ಮ 'MD5' ಎನ್ಕ್ರಿಪ್ಟ್ ಆಗಿರುವ ಸ್ಕ್ರಿಪ್ಟ್ ನ ವ್ಯಾಲ್ಯುವನ್ನು ಪಡೆಯುವೆವು. | ||
01:32 | ಇದು ಒಂಬೈನೂರರಿಂದ ಆರಂಭವಾಗುವುದನ್ನು ನೀವು ನೋಡಬಹುದು, ಇಲ್ಲಿ ಸುಮಾರು ಇಪ್ಪತ್ತು ಸಾಮಾನ್ಯ ಅಕ್ಷರಗಳಿವೆ ಎಂದು ಕೊಳ್ಳುವೆನು. | ||
01:39 | ಆದರೆ ನಾನು ವ್ಯಾಲ್ಯುವನ್ನು ಬದಲಿಸದರೆ, ಇದರ ಅಳತೆಯು ಬಹುಮಟ್ಟಿಗೆ ಅಷ್ಟೆ ಇರುತ್ತದೆ. | ||
01:44 | ಆದರೆ ಕಂಟೆಂಟ್ ಮಾತ್ರ ಬದಲಾಗುವುದು. | ||
01:52 | ಹಾಗಾಗಿ ನಾವು ಇಲ್ಲಿ ಒಂದು ಎನ್ಕ್ರಿಪ್ಟ್ ಆಗಿರುವ ಸ್ಟ್ರಿಂಗ್, ಅಂದರೆ ಇಲ್ಲಿ ನೀವು ನೋಡುತ್ತಿರುವ ಹ್ಯಾಶ್ 'abc' ಗೆ ಸಮವಾಗಿದೆ. | ||
02:00 | ಈಗ ನಾನು ಒಂದು ಪ್ರೋಗ್ರಾಂ ಅಥವ ಸ್ಕ್ರಿಪ್ಟ್ ಅನ್ನು ತಯಾರಿಸುವೆನು ಮತ್ತು ಅದು ಬಳಕೆದಾರರಿಂದ ಇನ್ಪುಟ್ ಅನ್ನು ತೆಗೆದುಕೊಳ್ಳುವುದು ಮತ್ತು ಅದು ಪಾಸ್ವರ್ಡ್ 'abc' ಆಗಿದೆಯೇ ಎಂದು ಪರೀಕ್ಷಿಸುವುದು. | ||
02:10 | ನಾವು ಸಾಂಪ್ರದಾಯಿಕವಾಗಿ ಮಾಡಬಹುದಾದ ವಿಧಾನವೆಂದರೆ, ನಾವು ಈ ಎನ್ಕ್ರಿಪ್ಷನ್ ಅನ್ನು ತೆಗೆದು ಹಾಕುವುದು. | ||
02:17 | ನಾವು ಸರಳ ಪರೀಕ್ಷೆಯನ್ನು ಮಾಡಬಹುದು, POST password ಇದು ನಮ್ಮ $user password ಗೆ ಸಮವಾಗಿದ್ದರೆ, ಇಲ್ಲಿ ಏನನ್ನಾದರೂ ಮಾಡಿ, ಇಲ್ಲವಾದಲ್ಲಿ ಇನ್ನೆನಾದರೂ ಮಾಡಿ ಎಂದು ಹೇಳಬಹುದು. | ||
02:29 | ಉದಾಹರಣೆಗೆ ಇಲ್ಲಿ 'incorrect password' ಎಂಬ ಎರರ್ ಅನ್ನು ಹಾಕಬಹುದು ಮತ್ತು ಇಲ್ಲಿ ನೀವು 'your password has successfully matched the user password' ಎಂಬ ಮೆಸೇಜ್ ಅನ್ನು ಕೊಡಬಹುದು. | ||
02:38 | ಈಗ ನಾವು ಗಣನೆಗೆ ತೆಗೆದುಕೊಳ್ಳಬೇಕಾದ ವಿಷಯವೆಂದರೆ, ಡಾಟಾ ವು POST ವೇರಿಯೇಬಲ್ ಗಳಾಗಿರಬಹುದು ಅಥವಾ ಡಾಟಾಬೇಸ್ ನಲ್ಲಿ ಇರುವ ಡಾಟಾವೂ ಆಗಿರಬಹುದು. | ||
02:45 | ಈ ವ್ಯಾಲ್ಯುವು ಡಾಟಾಬೇಸ್ ನಿಂದ ಪಡೆದಿದ್ದಾಗಿರಬಹುದು ಮತ್ತು ದುರದೃಷ್ಟವಶಾತ್ ಡಾಟಾಬೇಸ್ ಅನ್ನು ಹಂಚಿಕೊಂಡಿದ್ದರೆ ಕಷ್ಟವಾಗುವುದು. | ||
02:51 | ಹಾಗಾಗಿ ಡಾಟಾಬೇಸ್ ಅನ್ನು ಬೇರೆ ಅಪ್ಲಿಕೇಷನ್ ನೊಂದಿಗೆ ಹಂಚಿಕೊಂಡಿದ್ದರೆ, ನಿಮ್ಮ ಬಳಕೆದಾರರ ಪ್ರತಿ ಪಾಸ್ವರ್ಡ್ ಎನ್ಕ್ರಿಪ್ಟ್ ಆಗಬೇಕಾಗುವುದು, ಹಾಗಾಗಿ ಅವುಗಳನ್ನು ಹುಡುಕುವುದು ತುಂಬ ಕಷ್ಟ. | ||
03:04 | 'abc' ಯನ್ನು ಕಂಡುಹಿಡಿಯುವುದು ತುಂಬ ಸರಳ ಏಕೆಂದರೆ ಇದು ಸಾಮಾನ್ಯವಾದ ಪಾಸ್ವರ್ಡ್ ಆಗಿದೆ. | ||
03:12 | 'abc' ಯನ್ನು MD5 ಹ್ಯಾಶ್ ಆಗಿ ಪರಿವರ್ತಿಸಿ, ನಂತರ ನೀವು ನಿಮ್ಮ ಡಾಟಾಬೇಸ್ ನಲ್ಲಿ ಈಗಾಗಲೇ ಸ್ಟೋರ್ ಆಗಿರುವ MD5 ಹ್ಯಾಶ್ ನೊಂದಿಗೆ ಹೋಲಿಕೆ ಮಾಡಿ, ಮತ್ತು ಈ ಎರಡೂ ಹ್ಯಾಶ್ ಗಳೂ ಹೋಲಿಕೆಯಾದಲ್ಲಿ, MD5 ಹ್ಯಾಶ್ 'abc' ಗೆ ಸಮವಾಗಿರುವುದು ಎಂದು ನೀವು ತಿಳಿದುಕೊಳ್ಳಬಹುದು, ಏಕೆಂದರೆ ಅವುಗಳು ಹ್ಯಾಶ್ ಆಗಿವೆ. | ||
03:29 | ಈಗ ನಾವು ಏನು ಮಾಡುವೆವೆಂದರೆ, ನಾವು ಇಲ್ಲಿ ಈ ವ್ಯಾಲ್ಯುವನ್ನು ತೆಗೆದುಕೊಳ್ಳುವೆವು, ಅಂದರೆ - 'user password encrypted' - ಮತ್ತು ನಾವು ಪೋಸ್ಟ್ ಆಗಿರುವ ಪಾಸ್ವರ್ಡ್ ನೊಂದಿಗೆ ನಮ್ಮ ಎನ್ಕ್ರಿಪ್ಟ್ ಪಾಸ್ವರ್ಡ್ ಅನ್ನು ಹೋಲಿಕೆ ಮಾಡಲಾಗುತ್ತದೆ. | ||
03:47 | ಈಗ ನಾವು ಏನು ಮಾಡಬೇಕೆಂದರೆ, $user password enc ಅನ್ನು ಹೋಲಿಕೆ ಮಾಡಲು ಸಾಧ್ಯವಾಗಬೇಕು. | ||
03:55 | ಈಗ ಇದು ಎನ್ಕ್ರಿಪ್ಟ್ ಆಗಿದೆ ಮತ್ತು ಪೋಸ್ಟ್ ಮಾಡಿದ ಪಾಸ್ವರ್ಡ್ ಎನ್ಕ್ರಿಪ್ಟ್ ಆಗಿಲ್ಲ. | ||
04:01 | ಹಾಗಾಗಿ ನೀವು ಪೋಸ್ಟ್ ಮಾಡಿದ ಪಾಸ್ವರ್ಡ್ ನ MD5 ಹ್ಯಾಶ್ ಅನ್ನು ತೆಗೆದುಕೊಂಡು, ಅದನ್ನು ಸ್ಟೋರ್ ಆಗಿರುವ ಪಾಸ್ವರ್ಡ್ ನ MD5 ಹ್ಯಾಶ್ ನೊಂದಿಗೆ ಹೋಲಿಕೆ ಮಾಡಿ, ನಾವು ಬಳಕೆದಾರ ಸರಿಯಾದ ಪಾಸ್ವರ್ಡ್ ಅನ್ನು ನಮೂದಿಸಿದ್ದಾರೋ, ಇಲ್ಲವೋ ಎಂದು ಕಂಡುಹಿಡಿಯಬಹುದು. | ||
04:14 | ಹಾಗಾಗಿ ನಾನು ಇಲ್ಲಿ ಈಗ ಪೋಸ್ಟ್ ಮಾಡಿದ ಪಾಸ್ವರ್ಡ್ ನ MD5 ಹ್ಯಾಶ್ ಇದು ಸ್ಟೋರ್ ಮಾಡಿದ ಪಾಸ್ವರ್ಡ್ ನ MD5 ಹ್ಯಾಶ್ ಗೆ ಸಮವಾಗಿದ್ದರೆ, ಈ ವೇರಿಯೇಬಲ್ ಅನ್ನು ನಾವು ಇಲ್ಲಿ ಬಳಸುತ್ತಿದ್ದೇವೆ, ಆಗ ನಾವು ಸರಿ ಎಂಬ ಮೆಸೇಜ್ ಅನ್ನು ತೋರಿಸಬಹುದು ಅಥವಾ ಎರರ್ ಮೆಸೇಜ್ ಅನ್ನು ತೋರಿಸಬಹುದು. | ||
04:33 | ಅವು ಹೋಲಿಕೆಯಾದರೆ ನಾನು die "Correct" ಎಂದೂ, ಇಲ್ಲವಾದಲ್ಲಿ die "Incorrect" ಎಂದೂ ಟೈಪ್ ಮಾಡುವೆನು. | ||
04:48 | ಈಗ ಸದ್ಯಕ್ಕೆ ನಾವು ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ವೇರಿಯೇಬಲ್ ಅನ್ನು ಪೋಸ್ಟ್ ಮಾಡಿಲ್ಲ. | ||
04:53 | ಇಲ್ಲಿ ಕೆಳಗೆ ನಾನು ಒಂದು form ಅನ್ನು ರಚಿಸುವೆನು. | ||
04:57 | Method ಇದು POST ಆಗಿರುವುದು ಏಕೆಂದರೆ ನಾವು ಇಲ್ಲಿ ಮೇಲೆ POST method ಅನ್ನು ಬಳಸಿದ್ದೇನೆ. | ||
05:01 | ಮತ್ತು action ಇದು ನನ್ನ ಪ್ರಸ್ತುತ ಪೇಜ್ ಅಂದರೆ 'md5 dot php' ಎಂದಾಗುವುದು. | ||
05:08 | ನಂತರ ನಾನು ಎರಡು ಎಲಿಮೆಂಟ್ ಗಳನ್ನು ರಚಿಸುವೆನು, ಮೊದಲನೆಯದು input text box ಮತ್ತು name ಇದು 'password' ಆಗಿರಲಿ. | ||
05:14 | ನಾನು ಇಲ್ಲಿ type 'text' ಎಂದು ಬಳಸಲು ಕಾರಣವೆಂದರೆ, ನೀವು ಕಂಟೆಂಟ್ ಅನ್ನು ನೋಡಬಹುದು ಇಲ್ಲವಾದಲ್ಲಿ, ನೀವು 'password' ಅನ್ನು ಬಳಸಿದರೆ ಖಾಲಿ ಅಕ್ಷರಗಳಾಗಿ ಕಾಣುವುದು. | ||
05:22 | ನಂತರ ನಾನು ಒಂದು input box ಅನ್ನು ಬಳಸುವೆನು ಈಗ ಇದನ್ನು 'Login' ಎಂದು ಕರೆಯೋಣ ಏಕೆಂದರೆ, ಲಾಗಿನ್ ಸ್ಕ್ರಿಪ್ಟ್ MD5 ನ ಬಹುಮುಖ್ಯ ಉಪಯೋಗವಾಗಿದೆ. | ||
05:34 | ನಾನು ರಿಫ್ರೆಶ್ ಮಾಡಿದಾಗ ಇದು ಈಗ Incorrect ಎಂದು ತೋರಿಸುತ್ತಿದೆ. | ||
05:38 | ಏಕೆಂದರೆ ನಾವು ಇಲ್ಲಿ POST ವೇರಿಯೇಬಲ್ ಅನ್ನು ಪರೀಕ್ಷಿಸಿಲ್ಲ. | ||
05:41 | ಇಲ್ಲಿ ನಾವು if 'password' ಎಂದು ಹೇಳಬಹುದು ಅಂದರೆ ಪಾಸ್ವರ್ಡ್ ಅಸ್ತಿತ್ವದಲ್ಲಿದ್ದರೆ, ನಾವು ಈ ಎಲ್ಲಾ ಕೋಡ್ ಅನ್ನು ಎಕೋ ಮಾಡಬಹುದು, ಮತ್ತು ಓದಲು ಸರಿಯಾಗಿ ಕಾಣುವಂತೆ ಇದನ್ನು ಸರಿಯಾಗಿ ಇಂಡೆಂಟ್ ಮಾಡೋಣ . ಈಗ ನಾನು ಹಿಂದಿರುಗುವೆನು. | ||
06:00 | ಈಗ ನಮ್ಮ ಪಾಸ್ವರ್ಡ್ ಸಬ್ಮಿಟ್ ಆದರೆ, ಅಂದರೆ ಫಾರ್ಮ್ ಸಬ್ಮಿಟ್ ಈ ವ್ಯಾಲ್ಯುವಿನೊಡನೆ ಸಬ್ಮಿಟ್ ಆದರೆ, ಆಗ ನಾವು ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನ MD5 ಹ್ಯಾಶ್ ಅಂದರೆ ಫಾರ್ಮ್ ನಲ್ಲಿ ನಮೂದಿತವಾದ ಪಾಸ್ವರ್ಡ್ ಅಂದರೆ ಇಲ್ಲಿ ನಮ್ಮ ಪೋಸ್ಟ್ ವೇರಿಯೇಬಲ್ ಇದು ಸ್ಟೋರ್ ಆಗಿರುವ ಪಾಸ್ವರ್ಡ್ ನ ಹ್ಯಾಶ್ ಗೆ ಸಮವಾಗಿದೆಯೇ? ಎಂದು ಪರೀಕ್ಷಿಸುವೆವು. | ||
06:18 | ಹಾಗಾಗಿ ನಾವು ಇಲ್ಲಿ ಈ if ಸ್ಟೇಟ್ಮೆಂಟ್ ನಲ್ಲಿ ಎನ್ಕ್ರಿಪ್ಟ್ ಆಗಿರುವ ಡಾಟಾದೊಂದಿಗೆ ಕಾರ್ಯನಿರ್ವಹಿಸುವೆವು. | ||
06:23 | ಇದು ಹೋಲಿಕೆಯಾದರೆ ನಾವು ಇದನ್ನು ತೋರಿಸುವೆವು, ಇಲ್ಲವಾದಲ್ಲಿ ನಾವು "Incorrect" ಎಂದು ತೋರಿಸುವೆವು. ಈಗ ಮತ್ತೊಮ್ಮೆ ರಿಫ್ರೆಶ್ ಮಾಡೋಣ. | ||
06:29 | ಈಗ ನನ್ನ ಪಾಸ್ವರ್ಡ್ 'abc' ಆಗಿದೆ. ಹಾಗಾಗಿ ನಾನು ನನ್ನ ಪಾಸ್ವರ್ಡ್ ಅನ್ನು 'Alex' ಎಂದು ಟೈಪ್ ಮಾಡಿದರೆ, ನಾವು 'Incorrect' ಎಂಬ ಎರರ್ ಮೆಸೇಜ್ ಅನ್ನು ಪಡೆಯುವೆವು. | ||
06:37 | ಈಗ ನಾವು ನನ್ನ ಸರಿಯಾದ ಪಾಸ್ವರ್ಡ್ ಅನ್ನು 'abc' ಎಂದು ಟೈಪ್ ಮಾಡಿದರೆ, ನಾವು "Correct" ಎಂಬ ಮೆಸೇಜ್ ಅನ್ನು ಪಡೆಯುವೆವು. | ||
06:43 | ಇದರ ಕುರಿತು ಇನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ನಾನು ಇಲ್ಲಿ "compared" ಎಂದು ಎಕೋ ಮಾಡುವೆನು, ಈಗ ನಮ್ಮ '$user password' –ಅಲ್ಲ – ನಮ್ಮ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಅನ್ನು ತೆಗೆದುಕೊಳ್ಳೋಣ. | ||
07:07 | compare "$user password enc to" – ಎಂದು ಟೈಪ್ ಮಾಡಿ ಇದನ್ನು ಜೋಡಿಸಿ ಮತ್ತು ನಂತರ ಪೋಸ್ಟ್ ಮಾಡಿದ ಪಾಸ್ವರ್ಡ್ | ||
07:14 | ಕ್ಷಮಿಸಿ ನಮಗೆ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಬೇಕು ಹಾಗಾಗಿ ನಾನು ಇಲ್ಲಿ 'md5' ಎಂದು ಟೈಪ್ ಮಾಡುವೆನು. | ||
07:20 | ಇನ್ನೊಂದು ಉತ್ತಮ ಮಾರ್ಗವೆಂದರೆ, ನಾವು ಇಲ್ಲಿಮೇಲೆ ಒಂದು ಹೊಸ ವೇರಿಯೇಬಲ್ ಅನ್ನು ರಚಿಸುವುದು, 'md5' – ಇದನ್ನು ಕಟ್ ಮಾಡಿ - enc ಅಥವಾ '$submitted enc' ಇಕ್ವಲ್ಸ್ ಎಂದು ಟೈಪ್ ಮಾಡಿ, ಅದನ್ನು ಪೇಸ್ಟ್ ಮಾಡಿ. | ||
07:37 | - | 07:49 | ಇದರ ಕಾರ್ಯದಲ್ಲಿ ಯಾವುದೇ ಬದಲಾವಣೆ ಗಳಿರುವುದಿಲ್ಲ. |
07:56 | ಈಗ ನಾವು ಇಲ್ಲಿ 'abc' ಅನ್ನು ಆಯ್ಕೆ ಮಾಡಿಕೊಂಡು, Login ಅನ್ನು ಕ್ಲಿಕ್ ಮಾಡಿದರೆ, ನಾವು ಒಂದು ಎರರ್ ಅನ್ನು ಪಡೆದಿದ್ದೇವೆ. | ||
08:01 | ಈಗ ಹಿಂದಿರುಗಿ ಪರೀಕ್ಷಿಸೋಣ. ಏಕೆಂದರೆ ನಾವು ಇವುಗಳನ್ನು ಕರ್ಲಿ ಬ್ರ್ಯಾಕೆಟ್ ನಲ್ಲಿ ಇಡಬೇಕು ಏಕೆಂದರೆ ನಾವು ಇಲ್ಲಿ ಎರಡು ಸಾಲು ಕೋಡ್ ಗಳನ್ನು ಹೊಂದಿದ್ದೇವೆ. | ||
08:16 | ಈಗ ಹಿಂದಿರುಗಿ, 'abc' ಯನ್ನು ಆಯ್ಕೆ ಮಾಡಿ. ನಾವು ಈಗ ಇಲ್ಲಿ ಇದನ್ನು ಇದರ ಜೊತೆಗೆ ಹೋಲಿಕೆ ಮಾಡುತ್ತಿದ್ದೇವೆ. | ||
08:26 | ಇಲ್ಲಿ ಮೇಲೆ ಒಂದು break ಅನ್ನು ಕೊಡೋಣ. ಈಗ ಏನಾಗುವುದೆಂದು ನೋಡಬಹುದು. | ||
08:34 | ಸರಿ, ನಾವು ಇದನ್ನು ಇದರೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ. | ||
08:38 | ನೀವು ಇವೆರಡು ಒಂದೇ MD5 hash ಆಗಿರುವುದನ್ನು ನೋಡಬಹುದು. ಇಲ್ಲಿ ಇದು ಸ್ಟೋರ್ ಆದ ಪಾಸ್ವರ್ಡ್ ಆಗಿದೆ ಮತ್ತು ಇದು ನಾವು ಸಬ್ಮಿಟ್ ಮಾಡಿದ ಪಾಸ್ವರ್ಡ್ ಆಗಿದೆ. | ||
08:46 | ಇಲ್ಲಿ ನಾವು ಸಬ್ಮಿಟ್ ಮಾಡಿದ ಎನ್ಕ್ರಿಪ್ಟ್ ಆಗಿರುವ ಪಾಸ್ವರ್ಡ್ ಅನ್ನು ನಮ್ಮ ಸ್ಟೋರ್ ಆಗಿದ್ದು ಎನ್ಕ್ರಿಪ್ಟ್ ಆಗಿರವ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ. | ||
08:51 | ಇದು ತುಂಬ ಉಪಯೋಗಗಳನ್ನು ಹೊಂದಿದೆ, ನೀವು ಡಾಟಾಬೇಸ್ ನಲ್ಲಿ ದಾಖಲಾಗುವಾಗ, ನೀವು ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಿ, ಸ್ಟೋರ್ ಮಾಡುವಿರಿ. | ||
08:59 | ಈಗ ನೀವು log-in form ನಲ್ಲಿ ಪಾಸ್ವರ್ಡ್ ಅನ್ನು ಪರೀಕ್ಷಿಸುತ್ತಿದ್ದರೆ, ಬಳಕೆದಾರ ಲಾಗಿನ್ ಫಾರ್ಮ್ ನಲ್ಲಿ ನಮೂದಿಸಿದ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಿ, ಅದನ್ನು ಡಾಟಾಬೇಸ್ ನಲ್ಲಿ ಸ್ಟೋರ್ ಆಗಿರುವ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಸಬೇಕು. | ||
09:08 | ಇದು ಹಲವಾರು ಉಪಯೋಗಗಳನ್ನು ಹೊಂದಿದೆ ಮತ್ತು ಇದನ್ನು ಡಿಕ್ಲೇರ್ ಮಾಡುವುದು ತುಂಬ ಸುಲಭವಾಗಿದೆ. ನೀವು ಒಂದು md5() ಫಂಕ್ಷನ್ ಅನ್ನು ಬಳಸಿದರೆ ಸಾಕು. | ||
09:16 | ಇವಿಷ್ಟು ನೀವು MD5 ಫಂಕ್ಷನ್ ನ ಕುರಿತು ಮತ್ತು ಅದನ್ನು ಬಳಸುವುದು ಹೇಗೆ ಮತ್ತು ಅವುಗಳನ್ನು ನಿಮ್ಮ ಫಾರ್ಮ್ ಗಳಿಗೆ ಅಳವಡಿಸುವುದು ಹೇಗೆ ಎಂದು ತಿಳಿಯಬೇಕಾದದ್ದಾಗಿದೆ. | ||
09:23 | ಧನ್ಯವಾದಗಳು. | ||
09:26 | ನಾನು ಇನ್ನಷ್ಟು ಸೆಕ್ಯುರಿಟಿಯ ಕುರಿತಾದ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇನೆ, ಅವುಗಳನ್ನು ನೋಡಿ, ಧನ್ಯವಾದಗಳು. | ||
09:29 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |