Java/C3/Abstract-Classes/Kannada
From Script | Spoken-Tutorial
Revision as of 16:35, 4 April 2020 by Sandhya.np14 (Talk | contribs)
Time | Narration |
00:00 | ಅಬ್ಸ್ಟ್ರಾಕ್ಟ್ ಕ್ಲಾಸುಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು |
00:12 | ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು |
00:16 | ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ಹೇಗೆ ಬಳಸುವುದು ಎಂಬುದಾಗಿ ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04 ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. |
00:36 | ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ನ ಜ್ಞಾನವನ್ನು ಸಹ ಹೊಂದಿರಬೇಕು. |
00:40 | ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
00:46 | ಮೊದಲಿಗೆ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ನೋಡೋಣ. |
00:50 | ಅಬ್ಸ್ಟ್ರಾಕ್ಟ್ ಮೆಥಡ್ ಎಂದರೆ ಇಂಪ್ಲೆಮೆಂಟೇಶನ್ ಇಲ್ಲದೆ ಘೋಷಿಸಿದ ಮೆಥಡ್ ಆಗಿದೆ. |
00:55 | ಅಬ್ಸ್ಟ್ರಾಕ್ಟ್ ಕೀವರ್ಡ್ ಗಳನ್ನು ಬಳಸಿ ಇದನ್ನು ಘೋಷಿಸಲಾಗುತ್ತದೆ. |
00:59 | ಈ ಮೆಥಡ್ಗೆ ತೆರೆಯುವ ಮತ್ತು ಮುಚ್ಚುವ ಪ್ರಕ್ಷೇಪ ಚಿಹ್ನೆ ಇರಬಾರದು. |
01:04 | ಅಬ್ಸ್ಟ್ರಾಕ್ಟ್ ಕ್ಲಾಸ್ ನ ಬಳಕೆಯನ್ನು ನಾವು ಮಾದರಿ ಪ್ರೋಗ್ರಾಂ ಮೂಲಕ ಕಲಿಯೋಣ. |
01:09 | ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು AbstractDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ. |
01:16 | ಈ ಪ್ರಾಜೆಕ್ಟ್ ಒಳಗೆ, ಅಬ್ಸ್ಟ್ರಾಕ್ಟ್ ಕ್ಲಾಸಿನ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ರಚಿಸೋಣ. |
01:24 | ಈಗ src ಫೋಲ್ಡ್ ಮೇಲೆ ರೈಟ್ ಕ್ಲಿಕ್ ಮಾಡೊ ಮತ್ತು New > Class ಮೇಲೆ ಕ್ಲಿಕ್ ಮಾಡಿ. |
01:30 | ಕ್ಲಾಸಿನ ಹೆಸರನ್ನು Person ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:35 | ನಾವೀಗ ಪರ್ಸನ್ ನ ಹೆಸರು ಮತ್ತು ಪ್ರಾಯವನ್ನು ಪ್ರತಿನಿಧಿಸಲು ಫೀಲ್ಡ್ ಗಳನ್ನು ಸೇರಿಸಲಿದ್ದೇವೆ.
ಟೈಪ್ ಮಾಡಿ: String name ಅರ್ಧವಿರಾಮ ಚಿಹ್ನೆ |
01:44 | ಅಲ್ಲದೆ ಈ ರೀತಿಯೂ ಟೈಪ್ ಮಾಡಿ: int age ಅಲ್ಪವಿರಾಮ ಚಿಹ್ನೆ. |
01:48 | ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಆರಿಸಿ. |
01:55 | ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಅಳಿಸಿ. |
01:59 | ನೇಮ್ ಮತ್ತು ಏಜ್ ಫೀಲ್ಡ್ ಗಳ ಮೌಲ್ಯಗಳನ್ನು ಕನ್ಸ್ಟ್ರಕ್ಟರ್ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಬಹುದು. |
02:05 | ನಂತರ ನಾವು ಕಾಂಕ್ರೀಟ್ ಮೆಥಡ್ ಅನ್ನು ನೋಡಬಹುದು. |
02:08 | ಕಾಂಕ್ರೀಟ್ ಮೆಥಡ್ ಅನ್ನು ನಾವು ಸಂಪೂರ್ಣವಾಗಿ ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಕಾರ್ಯಗತಗೊಳಿಸಬಹುದು. |
02:14 | ಹೆಸರು ಮತ್ತು ಪ್ರಾಯವನ್ನು ಪ್ರಿಂಟ್ (ಮುದ್ರಿಸು) ಮಾಡುವುದಕ್ಕಾಗಿ ಈ ಕ್ಲಾಸ್ ಗೆ ನಾವು ಕಾಂಕ್ರೀಟ್ ಮೆಥಡ್ ಸೇರಿಸಲಿದ್ದೇವೆ. |
02:21 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡಿ. |
02:25 | ಇಲ್ಲಿ ವಿವರಿಸಿರುವ showBasicDetails() ವಿಧಾನವು ಕಾಂಕ್ರೀಟ್ ಮೆಥಡ್ ಗೆ ಉದಾಹರಣೆಯಾಗಿದೆ. |
02:32 | ಈ ಮೆಥಡ್ ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಗಮನಿಸಿ. |
02:36 | ನಾವೀಗ ಈ ಕ್ಲಾಸ್ ಗೆ ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ಸೇರಿಸಲಿದ್ದೇವೆ. |
02:41 | ಹೀಗಾಗಿ ಈ ರೀತಿ ಟೈಪ್ ಮಾಡಿ: public void showDetails( ) ಅರ್ಧವಿರಾಮ ಚಿಹ್ನೆ. |
02:46 | ನಾವು ಇನ್ನೂ abstract ಕೀವರ್ಡ್ ಅನ್ನು ಇನ್ನೂ ಸೇರಿಸದೆ ಇರುವುದರಿಂದ ಇಲ್ಲಿ ಎರರ್ (ದೋಷ) ಕಂಡುಬರುತ್ತದೆ. |
02:51 | ಹೀಗಾಗಿ ಈಗ abstract ಕೀವರ್ಡ್ ಅನ್ನು ಸೇರಿಸಿ. |
02:55 | ನಾವೀಗ ಇನ್ನೊಂದು ದೋಷವನ್ನು ಕಾಣಬಹುದು. |
02:58 | ಇದು ಏಕೆಂದರೆ ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಅಬ್ಸ್ಟ್ರಾಕ್ಟ್ ಕ್ಲಾಸುಗಳಿಗೆ ಮಾತ್ರ ಸೇರಿಸಬಹುದು. |
03:03 | ಹೀಗಾಗಿ ಅಬ್ಸ್ಟ್ರಾಕ್ಟ್ ಕ್ಲಾಸ್ ಮಾಡುವುದಕ್ಕಾಗಿ ಪರ್ಸನ್ ಕ್ಲಾಸ್ ಗೆ abstract ಕೀವರ್ಡ್ ಅನ್ನು ಸೇರಿಸಿ. |
03:10 | ಇಲ್ಲಿ ತೋರಿಸಲಾಗಿರುವ ಕ್ಲಾಸ್ ಪರ್ಸನ್, ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ. |
03:15 | ಇದು showDetails() ಎನ್ನುವ ಅಬ್ಸ್ಟ್ರಾಕ್ಟ್ ಮೆಥಡ್ ಹೊಂದಿರುತ್ತದೆ. |
03:15 | ಇಲ್ಲಿರುವ ಚಿತ್ರವು ಇನ್ ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. |
03:20 | ಇಲ್ಲಿರುವ ಚಿತ್ರವು ಇನ್ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. |
03:24 | ಇಲ್ಲಿ ಪರ್ಸನ್ ಕ್ಲಾಸ್, ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ. |
03:29 | ಎಂಪ್ಲೋಯೀ ಕ್ಲಾಸ್ ಮತ್ತು ಸ್ಟೂಡೆಂಟ್ ಕ್ಲಾಸ್ ಗಳು ಇಲ್ಲಿ ಪರ್ಸನ್ ಕ್ಲಾಸ್ ನ ಸ್ಟೂಡೆಂಟ್ ಕ್ಲಾಸ್ ಮತ್ತು ಸಬ್ ಕ್ಲಾಸ್ ಗಳು ಆಗಿವೆ. |
03:35 | ಈ ಸಬ್ ಕ್ಲಾಸ್ ಗಳು ತಮ್ಮದೇ ಆದ ವಿಭಿನ್ನ ಅಳವಡಿಕೆಗಳನ್ನು ಒದಗಿಸುತ್ತವೆ. |
03:40 | ಇವುಗಳನ್ನು ಪರ್ಸನ್ ಕ್ಲಾಸ್ ನಲ್ಲಿ ಇರುವ showDetails( ) ವಿಧಾನದ ಮೂಲಕ ಮಾಡಬಹುದು. |
03:45 | ಉದಾಹರಣೆಗೆ: ಎಂಪ್ಲೋಯೀ ಕ್ಲಾಸ್ ನ ShowDetails() ಮೆಥಡ್, ಎಂಪ್ಲೋಯೀ ಐ.ಡಿ ಮತ್ತು ಸ್ಯಾಲರಿಯನ್ನು ಪ್ರಿಂಟ್ ಮಾಡುತ್ತದೆ. ಇದೇ ವೇಳೆ ಸ್ಟೂಡೆಂಟ್ ಕ್ಲಾಸ್ ನ ShowDetails() ಮೆಥಡ್, ಸ್ಟೂಡೆಂಡ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ಅನ್ನು ಪ್ರಿಂಟ್ ಮಾಡುತ್ತದೆ. |
04:01 | ನಂತರ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಎಂಪ್ಲೋಯೀ ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚಿಸಿ. |
04:07 | ಈಗ, ಪರ್ಸನ್ ಕ್ಲಾಸ್ ನ ಸಬ್ ಕ್ಲಾಸ್ ಮಾಡಲು ಈ ರೀತಿ ಟೈಪ್ ಮಾಡಿ: extends Person. |
04:14 | ಈಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ ಬಂದಿರುವುದನ್ನು ನಾವು ಕಾಣಬಹುದು. |
04:19 | ನಾವು ಅಬ್ಸ್ಟ್ರಾಕ್ಟ್ ಮೆಥಡ್ showDetails( ) ಗೆ ಇಂಪ್ಲೆಮೆಂಟೇಷನ್ ಒದಗಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ. |
04:26 | ನಾವಿದನ್ನು ಸ್ವಲ್ಪ ನಂತರ ಮಾಡಲಿದ್ದೇವೆ. |
04:28 | ಈಗ ಎಂಪ್ಲೋಯೀ ಐ.ಡಿ ಮತ್ತು ಎಂಪ್ಲೋಯೀ ಸ್ಯಾಲರಿಯನ್ನು ಪ್ರತಿನಿಧಿಸಲು ಎರಡು ಫೀಲ್ಡ್ ಗಳನ್ನು ರಚಿಸಿ. |
04:34 | ಹೀಗೆ ಟೈಪ್ ಮಾಡಿ: String empid ಅರ್ಧವಿರಾಮ ಮತ್ತು int salary ಅರ್ಧವಿರಾಮ. |
04:42 | ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಅನ್ನು ಆರಿಸಿ. |
04:49 | ಈ ಕಂನ್ಸ್ಟ್ರಕ್ಟರ್ ಇಲ್ಲಿ ನೇಮ್, ಏಜ್, empid ಮತ್ತು ಸ್ಯಾಲರಿ ಯ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲಿದೆ. |
04:56 | ನಾವೀಗ showDetails ಮೆಥಡ್ ಅನ್ನು ನಿರೂಪಿಸೋಣ. ಇದಕ್ಕಾಗಿ ಈ ರೀತಿ ಟೈಪ್ ಮಾಡಿ: public void showDetails( ) |
05:04 | ಈ ಮೆಥಡ್ ಒಳಗೆ ನಾವು ಉದ್ಯೋಗಿಯ ವಿವರಗಳನ್ನು ಪ್ರಿಂಟ್ ಮಾಡಬೇಕಿದೆ. |
05:09 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ. |
05:13 | ಗಮನಿಸಿ, showDetails() ಮೆಥಡ್ ಅನ್ನು ಕಾರ್ಯಗತಗೊಳಿಸಿದ ನಂತರ ಎರರ್ ಕಾಣೆಯಾಗುತ್ತದೆ. |
05:19 | ನಂತರ ನಾವು ಪ್ರಾಜೆಕ್ಟ್ ನ ಸ್ಟೂಡೆಂಟ್ ಕ್ಲಾಸ್ ಅನ್ನು ನೋಡಲಿದ್ದೇವೆ. |
05:23 | ನಾನು ಈಗಲೇ ಸ್ಟೂಡೆಂಟ್ ಎನ್ನುವ ಸಬ್ ಕ್ಲಾಸ್ ಅನ್ನು ರಚಿಸಿದ್ದೇನೆ. |
05:28 | ಸ್ಟೂಡೆಂಟ್ ಕ್ಲಾಸ್ ನಲ್ಲಿ ಎರಡು ಫೀಲ್ಡ್ ಗಳಿವೆ, ಅವೆಂದರೆ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್. ಇವು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ. |
05:37 | ಈ ಕ್ಲಾಸ್ ನ ಒಳಗೆ ಕನ್ಸ್ಟ್ರಕ್ಟರ್ ಒಂದನ್ನು ಸಹ ರಚಿಸಲಾಗಿದೆ. |
05:42 | ನೇಮ್, ಏಜ್, ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಈ ಕನ್ಸ್ಟ್ರಕ್ಟರ್ ಅನ್ನು ಸಹ ಬಳಸಬಹುದು. |
05:50 | showDetails ಮೆಥಡ್ ಅನ್ನು ಈ ಕ್ಲಾಸ್ ನಲ್ಲಿ ಸಹ ಕಾರ್ಯಗತಗೊಳಿಸಬಹುದು. |
05:56 | ಇದು ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಪ್ರಿಂಟ್ ಮಾಡುತ್ತದೆ. |
06:00 | ಎಂಪ್ಲೋಯೀ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಮತ್ತು, |
06:08 | ಸ್ಟೂಡೆಂಟ್ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಎಂಬುದನ್ನು ಗಮನಿಸಿ. |
06:14 | ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ. |
06:17 | New > Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. |
06:23 | ಈ ಕ್ಲಾಸ್ ಒಳಗೆ, ನಾವು ಮೇನ್ ಮೆಥಡ್ ಅನ್ನು ಹೊಂದಲಿದ್ದೇವೆ. |
06:27 | ಈಗ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ಅನ್ನು ರಚಿಸಲು ctrl+space ಒತ್ತಿ. |
06:33 | ಈ ಮೂಲಕ Person p equals new Person ಎಂದು ಟೈಪ್ ಮಾಡಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ (ದೃಷ್ಟಾಂತೀಕರಣ) ಮಾಡಲು ಪ್ರಯತ್ನಿಸೋಣ. |
06:42 | ಆವರಣ ಚಿಹ್ನೆ ಮತ್ತು ಡಬಲ್ ಕೋಟ್ ಗಳ ಒಳಗಡೆ John ಎಂದು ಟೈಪ್ ಮಾಡಿ ಮತ್ತು ಅರ್ಧವಿರಾಮ ಚಿಹ್ನೆಯನ್ನು ಹಾಕಿ. |
06:48 | ನಾವೀಗ ಇಲ್ಲಿ ಎರರ್ ಒಂದನ್ನು ಕಾಣಬಹುದು. ಏಕೆಂದರೆ ಇಲ್ಲಿ ಪರ್ಸನ್ ಕ್ಲಾಸ್ ಎನ್ನುವುದು ಅಬ್ಸ್ಟ್ರಾಕ್ಟ್ ಆಗಿದೆ ಹಾಗೂ ಇದನ್ನು ಇನ್ಸ್ಟಾಂಶಿಯೇಟ್ ಮಾಡಲಾಗದು. |
06:58 | ಈ ಸಾಲನ್ನು ನಾವೀಗ ತೆಗೆಯೋಣ. |
07:00 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ನಾವು ಟೈಪ್ ಮಾಡೋಣ. |
07:04 | ಈಗ, ಎಂಪ್ಲೋಯೀ ಕ್ಲಾಸ್ ಅನ್ನು Person p1 equals new Employee ಎಂಬುದಾಗಿ ಬಳಸಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ. |
07:14 | ಮೊದಲ ಸಾಲಿನಲ್ಲಿ ನಾವು ವಿವಿಧ ಆರ್ಗ್ಯುಮೆಂಟ್ ಗಳ ಮೌಲ್ಯಗಳನ್ನು ತೆಗೆದುಕೊಳ್ಳುತ್ತೇವೆ. |
07:19 | ಜಾನ್ ಅನ್ನು ಎಂಪ್ಲೋಯೀ ನೇಮ್ ಆಗಿ ಮತ್ತು, |
07:22 | 40 ಅನ್ನು ಏಜ್ ನ ಮೌಲ್ಯವಾಗಿ, |
07:25 | E267 ಅನ್ನು ಎಂಪ್ಲೋಯೀ ಐ.ಡಿ ಯ ಮೌಲ್ಯವಾಗಿ ಮತ್ತು 10000 ವನ್ನು ಎಂಪ್ಲೋಯೀ ಸ್ಯಾಲರಿಯ ಮೌಲ್ಯವಾಗಿ ತೆಗೆದುಕೊಳ್ಳಲಾಗುತ್ತದೆ. |
07:33 | ನಾವೀಗ ಪರ್ಸನ್ ಕ್ಲಾಸ್ ನಲ್ಲಿ ಕಾಂಕ್ರೀಟ್ ಮೆಥಡ್ ಅನ್ನು p1.showBasicDetails() ಎಂದು ಇನ್ವೋಕ್ (ಜಾರಿ) ಮಾಡಬಹುದು. |
07:41 | ಅಲ್ಲದೆ, bject p1 ಅನ್ನು p1.showDetails() ಎಂದು ಬಳಸಿ ನಾವು showDetails() ಮೆಥಡ್ ಅನ್ನು ಸಹ ಆಮಂತ್ರಿಸಬಹುದು. |
07:50 | ಇದೇ ರೀತಿ, ಸ್ಟೂಡೆಂಟ್ ಕ್ಲಾಸ್ ಅನ್ನು ಬಳಸಿ, ಪರ್ಸನ್ ಕ್ಲಾಸ್ ಅನ್ನು ದೃಷ್ಟಾಂತೀಕರಿಸಿ. |
08:01 | ಇದನ್ನು, Person p2 equals new Student ಎಂಬುದಾಗಿ ಪ್ರತಿನಿಧಿಸಬಹುದು. |
08:06 | ಇದೇ ರೀತಿ, ಇಲ್ಲಿ ತೋರಿಸಿರುವಂತೆ ಅಬ್ಜೆಕ್ಟ್ ಅನ್ನು ಬಳಸಿ ನಾವು showBasicDetails() method ಮತ್ತು showDetails() ಮೆಥಡ್ ಅನ್ನು ಇನ್ವೋಕ್ ಮಾಡಬಹುದು. |
08:15 | ನಾವೀಗ ಈ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡೋಣ. |
08:18 | ಇದಕ್ಕಾಗಿ class Demo ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as > Java Application ಆರಿಸಿ. |
08:25 | ನಾವೀಗ ನೇಮ್ ಮತ್ತು ಏಜ್ ಮುಂತಾದ, ಉದ್ಯೋಗಿಯ ಅಗತ್ಯ ವಿವರಗಳೊಂದಿಗೆ ಔಟ್ಪುಟ್ ಅನ್ನು ನೋಡಬಹುದು. |
08:31 | ಇವುಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು. |
08:35 | ಎಂಪ್ಲೋಯಿ ಐ.ಡಿ ಮತ್ತು ಸ್ಯಾಲರಿಯಂತಹ ಉದ್ಯೋಗಿಯ ಇತರ ವಿವರಗಳನ್ನು showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು. |
08:43 | ಇದೇ ರೀತಿ, ನೇಮ್ ಮತ್ತು ಏಜ್ ನಂತಹ ವಿದ್ಯಾರ್ಥಿಯ ಅಗತ್ಯ ವಿವರಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು. |
08:52 | ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನಂತಹ ವಿದ್ಯಾರ್ಥಿಯ ಇತರ ವಿವರಗಳನ್ನು showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು. |
09:01 | ಈ ಮೂಲಕ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ. |
09:07 | ಈ ಟ್ಯುಟೋರಿಯಲ್ ನಲ್ಲಿ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು, |
09:14 | ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ರಚಿಸುವುದು ಮತ್ತು ಬಳಸುವುದನ್ನು ಕಲಿತೆವು. |
09:21 | ಅಸೈನ್ ಮೆಂಟ್ ಆಗಿ, ಒಂದು abstract method run() ಹೊಂದಿರುವ ಅಬ್ಸ್ಟ್ರಾಕ್ಟ್ ಕ್ಲಾಸ್ ವೆಹಿಕಲ್ ಅನ್ನು ರಚಿಸಿ. |
09:29 | ವೆಹಿಕಲ್ ಕ್ಲಾಸ್ ಅನ್ನು ವಿಸ್ತರಿಸುವ ಮತ್ತು ʻʻCar is running on 4 wheels’’ ಅನ್ನು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಕಾರ್ ಒಂದನ್ನು ರಚಿಸಿ. |
09:39 | ಅಲ್ಲದೆ ವೆಹಿಕಲ್ ಕ್ಲಾಸ್ ಅನ್ನು ಇನ್ನೊಮ್ಮೆ ವಿಸ್ತರಿಸುವ ಮತ್ತು “Bike is running on 2 wheels” ಎಂದು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಒಂದನ್ನು ರಚಿಸಿ. |
09:50 | ಇದರ ಜೊತೆಗೆ, ಫಲಿತಾಂಶಗಳನ್ನು ದೃಢೀಕರಿಸಲು, ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಅನ್ನು ಸಹ ರಚಿಸಿ. |
09:56 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:03 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು, |
10:09 | ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. |
10:13 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
10:16 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
10:23 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
10:28 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
10:35 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
ಧನ್ಯವಾದಗಳು. |