Scilab/C4/Calling-User-Defined-Functions-in-XCOS/Kannada
From Script | Spoken-Tutorial
Revision as of 12:42, 24 January 2018 by Anjana310312 (Talk | contribs)
Time | Narration |
00:01 | ಸೈಲ್ಯಾಬ್ ನ Calling user-defined functions in Xcos ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | * ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು, |
00:12 | * Xcos ನಲ್ಲಿ scifunc ಬ್ಲಾಕ್ ಅನ್ನು ಬಳಸುವುದು, |
00:15 | * ಮಲ್ಟಿಪಲ್ ಪ್ಲಾಟ್ ಗಳನ್ನು ಬರೆಯಲು MUX ಬ್ಲಾಕ್ ಅನ್ನು ಬಳಸುವುದು, |
00:19 | * ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು. |
00:24 | ನಾನು Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನುScilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:32 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಮತ್ತು |
00:35 | Xcos ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು. |
00:38 | ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು spoken-tutorial.org ವೆಬ್ಸೈಟ್ ನಲ್ಲಿ ನೋಡಿ. |
00:44 | ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ. |
00:47 | 'ಸೈಲ್ಯಾಬ್ ಕನ್ಸೋಲ್' ನಲ್ಲಿ, editor ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
00:53 | ನಂತರ ಈ ಕೋಡ್ ಅನ್ನು ಟೈಪ್ ಮಾಡಿ: |
00:55 | function space y is equal to squareit open bracket a close bracket. |
01:07 | Enter ಕೀಲಿಯನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ: |
01:10 | y is equal to a raise to 2 |
01:14 | ಕೊನೆಯಲ್ಲಿ ಸೆಮಿಕೋಲನ್ ಹಾಕಿ. |
01:17 | ಈ ಫಂಕ್ಷನ್ ಒಂದು ಇನ್ಪುಟ್ ವೇರಿಯೇಬಲ್ a ಯನ್ನು ಮತ್ತು ಒಂದು ಔಟ್ಪುಟ್ ವೇರಿಯೇಬಲ್ y ಯನ್ನು ಹೊಂದಿದೆ. |
01:24 | ಫಂಕ್ಷನ್ ನ ಹೆಸರು squareit ಆಗಿದೆ. |
01:27 | ಈ ಫಂಕ್ಷನ್ ವೇರಿಯೇಬಲ್ a ಯ ವರ್ಗ(ಸ್ಕ್ವೇರ್) ಅನ್ನು ಕಂಡುಹಿಡಿಯುವ ಕೆಲಸವನ್ನು ಮಾಡುತ್ತದೆ. |
01:31 | ಮತ್ತು ಅದು ಫಲಿತಾಂಶವನ್ನು y ನಲ್ಲಿ ಸ್ಟೋರ್ ಮಾಡುತ್ತದೆ. |
01:34 | ಈಗ ಈ ಫೈಲ್ ಅನ್ನು ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ. |
01:38 | ನಾನು ಈ ಫೈಲ್ ಅನ್ನು .sci ಎಕ್ಸ್ಟೆನ್ಷನ್ (extension) ಮತ್ತು squareit ಎಂಬ ಫೈಲ್ ನೇಮ್ ನೊಂದಿಗೆ ಸೇವ್ ಮಾಡುವೆನು. |
01:44 | ಇಲ್ಲಿ ನಾವು ಫಂಕ್ಷನ್ ಗಳನ್ನು .sci ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ. |
01:50 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
01:53 | ಈಗ, Xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
01:57 | ಎರಡು ವಿಂಡೋಗಳು ಓಪನ್ ಆಗುವವು- |
01:59 | ಒಂದು Palette browser ಮತ್ತು ಒಂದು Untitled Xcos ವಿಂಡೋಗಳಾಗಿವೆ. |
02:04 | ಈಗ ನಾವು Xcos ರೇಖಾಚಿತ್ರವನ್ನು ಬರೆಯುವೆವು. |
02:06 | ಇದು ನಾವು ಈಗಷ್ಟೇ ರಚಿಸಿದ squareit ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು. |
02:10 | ಇದನ್ನು scifunc ಬ್ಲಾಕ್ ಅನ್ನು ಬಳಸಿ ಮಾಡಬಹುದು. |
02:14 | Palette browser ವಿಂಡೋ ಗೆ ಹಿಂದಿರುಗಿ. |
02:17 | ಪ್ಯಾಲೆಟ್ ಬ್ರೌಸರ್ ನಲ್ಲಿ User-Defined function ನ ಮೇಲೆ ಕ್ಲಿಕ್ ಮಾಡಿ. |
02:21 | ಈ ವಿಭಾಗದಲ್ಲಿscifunc_block_m ಅನ್ನು ಹುಡುಕಿ. |
02:27 | ಈಗ ಇದನ್ನು untitled Xcos ವಿಂಡೋಗೆ ಎಳೆದು ತನ್ನಿ. |
02:32 | ಚೆನ್ನಾಗಿ ಕಾಣುವಂತೆ ಮಾಡಲು ನಾನು untitled Xcos ವಿಂಡೋವನ್ನು ಝೂಮ್ ಮಾಡುವೆನು. |
02:36 | ನೀವು ಇಲ್ಲಿ ಕಾಣುತ್ತಿರುವ Zoom ಬಟನ್ ಅನ್ನು ನಾನು ಬಳಸುವೆನು. |
02:40 | ಈಗ scifunc ಬ್ಲಾಕ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದನ್ನು ಕಾನ್ಫಿಗರ್ ಮಾಡಿ. |
02:44 | Scilab Multiple Values Request ಎಂಬ ಹೆಸರಿನ ವಿಂಡೋ ಓಪನ್ ಆಗುವುದು. |
02:49 | ಈ ವಿಂಡೋ scifunc ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಿಸಲು ಬಿಡುತ್ತದೆ. |
02:56 | ನಮ್ಮ squareit ಫಂಕ್ಷನ್ ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ. |
03:00 | ಆದ್ದರಿಂದ ನಾವು ಸೆಟ್ಟಿಂಗ್ಸ್ ಅನ್ನು ಬದಲಿಸುವುದಿಲ್ಲ. |
03:03 | OK ಯ ಮೇಲೆ ಕ್ಲಿಕ್ ಮಾಡಿ. |
03:05 | ಒಂದು ಹೊಸ Scilab Input Value Request ಓಪನ್ ಆಗುವುದು. |
03:09 | ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ. |
03:14 | ಈ ಫಂಕ್ಷನ್ ಅನ್ನು scifunc ಬ್ಲಾಕ್ ಕಾಲ್ ಮಾಡುತ್ತದೆ. |
03:18 | ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ, |
03:20 | ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ. |
03:22 | y1 equal to squareit open bracket u1 close the bracket ಎಂದು ಟೈಪ್ ಮಾಡಿ. |
03:31 | ಗಮನಿಸಿ: ಇಲ್ಲಿ u1 ಮತ್ತು y1 ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ. |
03:37 | ಇವುಗಳು u ಮತ್ತು y ರೂಪದಲ್ಲಿಯೇ ಇರಲೇಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ನೇಮ್ ಆಗಿರಬಾರದು. |
03:45 | OK ಯನ್ನು ಕ್ಲಿಕ್ ಮಾಡಿ. |
03:47 | ಇನ್ನೊಂದು Scilab Input Value Request ವಿಂಡೋ ಓಪನ್ ಆಗುವುದು. |
03:51 | ಮುಂದಿನ ಮೂರು ವಿಂಡೋ ಗಳಲ್ಲಿ OK ಯನ್ನು ಒತ್ತುವುದರಿಂದ ಅದು ಬರುವುದು. |
03:56 | ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ. |
04:00 | ನಂತರ ನಾವು sinusoid generator ಬ್ಲಾಕ್ ಸೇರಿಸುವೆವು. |
04:04 | Palette browser' ವಿಂಡೋದಲ್ಲಿ, Sources ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ. |
04:08 | Sinusoid generator ಬ್ಲಾಕ್ ಅನ್ನು Untitled Xcos ವಿಂಡೋಗೆ ಎಳೆದು ತನ್ನಿ. |
04:14 | ಅನುಕೂಲಕ್ಕಾಗಿ ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಎಡಭಾಗದಲ್ಲಿಡಿ. |
04:20 | ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲೋಟ್ ಮಾಡಲು ಒಂದು ಬ್ಲಾಕ್ ಬೇಕು. |
04:23 | Palette browser ವಿಂಡೋ ದಲ್ಲಿ, Sinks ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ. |
04:29 | CScope ಬ್ಲಾಕ್ ಅನ್ನು Untitled Xcos ವಿಂಡೋದಲ್ಲಿ ಎಳೆದು ತನ್ನಿ. |
04:34 | ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಬಲಭಾಗದಲ್ಲಿ ಇಡಿ. |
04:38 | ಅನುಕೂಲಕ್ಕಾಗಿ ಇದನ್ನು, scifunc ಬ್ಲಾಕ್ ನಿಂದ ಸ್ವಲ್ಪ ದೂರವಿಡಿ. |
04:43 | ಗಮನಿಸಿ: CScope ಬ್ಲಾಕ್ ರೆಡ್ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
04:47 | ಇದೊಂದು ಎವೆಂಟ್ ಇನ್ಪುಟ್ ಆಗಿದೆ. |
04:49 | ನಮಗೆ ಒಂದು ಎವೆಂಟ್ ಜನರೇಟರ್ ಬ್ಲಾಕ್ ಬೇಕು. |
04:52 | Palette browser window ದಲ್ಲಿ, Sources ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ. |
04:57 | CLOCK underscore c ಬ್ಲಾಕ್ ಅನ್ನು Untitled Xcos ವಿಂಡೋಗೆ ಎಳೆದು ತನ್ನಿ. |
05:05 | ಇದನ್ನು CScope ಬ್ಲಾಕ್ ನ ಮೇಲ್ಭಾಗದಲ್ಲಿಡಿ. |
05:08 | ಗಮನಿಸಿ: CScope ಬ್ಲಾಕ್ ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
05:13 | ಆದರೆ ನಾವು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ವಿಂಡೋ ದಲ್ಲಿ ಪ್ಲೋಟ್ ಮಾಡಲು ಬಯಸುತ್ತೇವೆ. |
05:18 | ಅದಕ್ಕಾಗಿ, ನಮಗೆ multiplexer ಬ್ಲಾಕ್ ಬೇಕು. |
05:22 | ಈ ಬ್ಲಾಕ್ ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಒಂದು ಔಟ್ಪುಟ್ ಪೋರ್ಟ್ ನಲ್ಲಿ ಔಟ್ಪುಟ್ ಅನ್ನು ಜನರೇಟ್ ಮಾಡುವುದು. |
05:28 | Palette browser window ದಲ್ಲಿ, Signal Routing ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ. |
05:33 | MUX ಬ್ಲಾಕ್ ಅನ್ನು Untitled Xcos ವಿಂಡೋಗೆ ಎಳೆದು ತನ್ನಿ. |
05:39 | ಈ ಬ್ಲಾಕ್ ಅನ್ನು scifunc ಬ್ಲಾಕ್ ಮತ್ತು CScope ಬ್ಲಾಕ್ ಗಳ ನಡುವೆ ಇಡಿ. |
05:43 | ಈಗ ನಾನು Mux ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ. |
05:47 | ಈಗ ಈ ಬ್ಲಾಕ್ ಗಳನ್ನು ಒಟ್ಟಿಗೆ ಕನೆಕ್ಟ್ ಮಾಡೋಣ. |
05:51 | Sinusoid generator ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು scifunc ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ. |
05:57 | ಈಗ scifunc ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು MUX ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ. |
06:04 | MUX ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು CScope ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ. |
06:10 | CLOCK underscore c ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು CScope ಬ್ಲಾಕ್ ನ ಇವೆಂಟ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ. |
06:19 | ನಾವು sine ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು. |
06:22 | ನಾವು Sinusoid generator ಬ್ಲಾಕ್ ಅನ್ನುMUX ಗೆ ಕನೆಕ್ಟ್ ಮಾಡಬೇಕು. |
06:26 | MUX ಬ್ಲಾಕ್ ನ ಅಪ್ಪರ್ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ. |
06:30 | ಮೌಸ್ ಅನ್ನು ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು Sinusoid generator ಬ್ಲಾಕ್ ಮತ್ತು scifunc ಬ್ಲಾಕ್ ನ ಹತ್ತಿರ ತನ್ನಿ. |
06:39 | ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಆ ಜಾಗದಲ್ಲಿ ಕ್ಲಿಕ್ ಮಾಡಿ. |
06:44 | ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ. |
06:49 | ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ. |
06:55 | ಈಗ ಉಳಿದ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ. |
06:59 | ನಾವು 'ಸಿನುಸೊಯಿಡ್ ಜನರೇಟರ್' ಬ್ಲಾಕ್ ನ 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಸ್' ಗಳನ್ನು ಬದಲಿಸಬಹುದು. |
07:04 | ಇದನ್ನು ಮಾಡಲು, Sinusoid generator ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ. |
07:09 | configuration window ಓಪನ್ ಆಗುವುದು. |
07:11 | ನಾವು, Magnitude ಮತ್ತು Frequency ಅನ್ನು 1 ಮತ್ತು Phase ಅನ್ನು 0 ಆಗಿ ಇಡೋಣ. |
07:18 | ಕಾನ್ಫಿಗರೇಷನ್ ವಿಂಡೋ ವನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ. |
07:21 | ಈಗ ನಾವು CScope ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ. |
07:25 | CScope ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ, ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಿ. |
07:30 | Ymin ಪ್ಯಾರಾಮೀಟರ್ ಅನ್ನು minus 2 ಎಂದು ಮತ್ತು Ymax ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ. |
07:37 | Refresh period ವ್ಯಾಲ್ಯುವನ್ನು 10 ಎಂದು ಬದಲಿಸಿ. |
07:41 | ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ. |
07:44 | Buffer size ವ್ಯಾಲ್ಯುವನ್ನು 2 ಎಂದು ಬದಲಿಸಿ. |
07:47 | OK ಯನ್ನು ಕ್ಲಿಕ್ ಮಾಡಿ. |
07:50 | ಈಗ ನಾವು CLOCK_c ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ. |
07:54 | ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಲು ಬ್ಲಾಕ್ ನ ಮೇಲೆ ಡಬಲ್ ಕ್ಲಿಕ್ ಮಾಡಿ. |
07:58 | Period ನ ವ್ಯಾಲ್ಯುವನ್ನು 0.1 ಎಂದು ಇಡಿ. |
08:02 | Initialisation Time ಅನ್ನು 0 ಎಂದು ಬದಲಿಸಿ. |
08:06 | OK ಯನ್ನು ಕ್ಲಿಕ್ ಮಾಡಿ. |
08:08 | ಈಗ Simulation ಪ್ಯಾರಾಮೀಟರ್ ಗಳನ್ನು ಬದಲಿಸೋಣ. |
08:12 | Untitled Xcos ವಿಂಡೋ ದಲ್ಲಿ, ಮೆನ್ಯುಬಾರ್ ನಲ್ಲಿ Simulation ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
08:17 | ಡ್ರಾಪ್ ಡೌನ್ ಮೆನ್ಯುವಿನಲ್ಲಿ Setup ಅನ್ನು ಕ್ಲಿಕ್ ಮಾಡಿ. |
08:22 | ಈಗ Final Integration time ಅನ್ನುCScope ಬ್ಲಾಕ್ ನ Refresh period ಗೆ ಹೊಂದಿಕೆಯಾಗುವಂತೆ ಬದಲಿಸಿ. |
08:28 | Refresh period ನ ವ್ಯಾಲ್ಯು 10 ಆಗಿತ್ತು. |
08:32 | ಆದ್ದರಿಂದ Final integration time ನ ವ್ಯಾಲ್ಯುವನ್ನು 10 ಎಂದು ಇಡಿ. |
08:36 | OK ಯನ್ನು ಕ್ಲಿಕ್ ಮಾಡಿ. |
08:38 | ಈಗ , Xcos ಡಯಾಗ್ರಾಮ್ ಅನ್ನು ಸೇವ್ ಮಾಡಲು, File ಅನ್ನು ಕ್ಲಿಕ್ ಮಾಡಿ ನಂತರ Save ನ ಮೇಲೆ ಕ್ಲಿಕ್ ಮಾಡಿ. |
08:44 | Xcos ಡಯಾಗ್ರಾಮ್ ಅನ್ನು ಸೇವ್ ಮಾಡಲು ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ. |
08:48 | ಆದರೆ, squareit.sci ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಸೇವ್ ಮಾಡಬೇಕು. |
08:56 | OK ಯ ಮೇಲೆ ಕ್ಲಿಕ್ ಮಾಡಿ. |
08:58 | ಗಮನಿಸಿ: scifunc ಬ್ಲಾಕ್, squareit ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ. |
09:02 | ಅಂದರೆ, ನಾವು Xcos diagram ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, squareit ಫಂಕ್ಷನ್ ಅನ್ನು ಲೋಡ್ ಮಾಡಬೇಕು. |
09:09 | squareit.sci ಫೈಲ್ ಓಪನ್ ಆಗಿರುವ 'ಸೈಲ್ಯಾಬ್ ಎಡಿಟರ್' ಗೆ ಹಿಂದಿರುಗಿ. |
09:16 | ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:21 | ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು. |
09:24 | ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
09:28 | Xcos diagram ಫೈಲ್ ಅನ್ನು ಓಪನ್ ಮಾಡಿ. |
09:31 | Xcos ವಿಂಡೋ ದ ಮೆನ್ಯುಬಾರ್ ನಲ್ಲಿರುವ ಲಭ್ಯವಿರುವ Start ಬಟನ್ ಅನ್ನು ಕ್ಲಿಕ್ ಮಾಡಿ. |
09:37 | ಗ್ರಾಫಿಕ್ ವಿಂಡೋ ಓಪನ್ ಆಗುವುದು. |
09:39 | ಈ ವಿಂಡೋ ಎರಡು ಪ್ಲೋಟ್ ಗಳನ್ನು ಹೊಂದಿರುವುದು. |
09:42 | ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ. |
09:47 | ಗಮನಿಸಿ: squareit ಫಂಕ್ಷನ್ ನಲ್ಲಿ ಇಂಪ್ಲಿಮೆಂಟ್ ಮಾಡಿದ ಸ್ಕ್ವೇರಿಂಗ್ ಫಂಕ್ಷನ್, ವಾಸ್ತವವಾಗಿ ಇನ್ಪುಟ್ ಸೈನ್ ವೇವ್ ಅನ್ನು ಸ್ಕ್ವೇರ್ ಮಾಡಿರುತ್ತದೆ. |
09:55 | ಹಾಗಾಗಿ, ಔಟ್ಪುಟ್ ಸೈನ್ ವೇವ್ ಅನ್ನು ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲಾಗಿದೆ. |
10:00 | plot ವಿಂಡೋ ವನ್ನು ಕ್ಲೋಸ್ ಮಾಡಿ. |
10:02 | ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು scifunc ಬ್ಲಾಕ್ ಅನ್ನು ಹೇಗೆ ಬದಲಿಸಬೇಕು ಎಂದು ನೋಡೋಣ. |
10:10 | 'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ. |
10:13 | squareit ಫಂಕ್ಷನ್ ಅನ್ನು ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ ಎಡಿಟ್ ಮಾಡಿ. |
10:19 | ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: open square bracket y comma z close the square bracket . |
10:28 | ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket a comma b close bracket. |
10:36 | ನಾವು ಫಂಕ್ಷನ್ ಅನ್ನು ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ಶಿಫ್ಟ್ ಆಗುವಂತೆ ಬದಲಿಸುವೆವು. |
10:41 | ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ: |
10:44 | y is equal to b plus a raise to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ. |
10:51 | ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಉಳ್ಳ ಔಟ್ಪುಟ್ ಅನ್ನು ಜನರೇಟ್ ಮಾಡಿ. |
10:56 | Enter ಕೀಲಿಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಹೀಗೆ ಟೈಪ್ ಮಾಡಿ: |
11:01 | z is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ. |
11:10 | ಈಗ ಫೈಲ್ ಅನ್ನು ಸೇವ್ ಮಾಡಿ. |
11:12 | Xcos ವಿಂಡೋ ಗೆ ಹಿಂದಿರುಗಿ. |
11:15 | scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ. |
11:19 | input port size ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ 1 comma 1 ಎಂದು ಟೈಪ್ ಮಾಡಿ. |
11:27 | ಇದೇ ರೀತಿ, output port size ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ 1 comma 1 ಎಂದು ಟೈಪ್ ಮಾಡಿ. |
11:36 | OK ಯನ್ನು ಒತ್ತಿ. |
11:38 | ಒಂದು ಹೊಸ Scilab Input Value Request ವಿಂಡೋ ಓಪನ್ ಆಗುವುದು. |
11:41 | ಟೆಕ್ಸ್ಟ್ ಬಾಕ್ಸ್ ನಲ್ಲಿ, |
11:43 | y1 ಆದ ನಂತರ ಒಂದು ಕೊಮಾ ವನ್ನು ಹಾಕಿ y2 ಎಂದು ಟೈಪ್ ಮಾಡಿ, |
11:48 | y1 ಮತ್ತು y2 ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ. |
11:52 | ಈಗ u1 ನ ನಂತರ ಒಂದು ಕೊಮಾ ವನ್ನು ಹಾಕಿ ಮತ್ತು u2 ಎಂದು ಟೈಪ್ ಮಾಡಿ. |
11:57 | OK ಯನ್ನು ಕ್ಲಿಕ್ ಮಾಡಿ. |
11:59 | ಇನ್ನೊಂದು Scilab Input Value Request ವಿಂಡೋ ಓಪನ್ ಆಗುವುದು. |
12:03 | ಈಗ ಮುಂದೆ ಬರುವ ಮೂರು ವಿಂಡೋ ಗಳಲ್ಲಿ OK ಯನ್ನು ಕ್ಲಿಕ್ ಮಾಡಿ. |
12:08 | ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ. |
12:11 | ಈಗ scifunc ಬ್ಲಾಕ್ ಅನ್ನು ರಿಅಲೈನ್ ಮಾಡೋಣ. |
12:14 | Palette browser ವಿಂಡೋ ಗೆ ಹಿಂದಿರುಗಿ. |
12:17 | Sources ವಿಭಾಗದಲ್ಲಿರುವ , Constant underscore m ಬ್ಲಾಕ್ ಅನ್ನು Xcos ವಿಂಡೋ ಗೆ ಎಳೆದು ತನ್ನಿ. |
12:24 | ಇದನ್ನು Sinusoid generator ಬ್ಲಾಕ್ ನ ಕೆಳಗೆ ಇಡಿ. |
12:28 | Constant underscore m ಬ್ಲಾಕ್ ಅನ್ನು, scifunc ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ. |
12:36 | ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು 1 ಆಗಿದೆ. |
12:39 | ಅದನ್ನು ಬದಲಿಸಬೇಡಿ. |
12:41 | MUX ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ. |
12:44 | input port size ಅನ್ನು 3 ಎಂದು ಬದಲಿಸಿ. |
12:47 | OK ಯ ಮೇಲೆ ಕ್ಲಿಕ್ ಮಾಡಿ. |
12:48 | ಈಗ ನಾನು MUX ಬ್ಲಾಕ್ಅನ್ನು ರಿಸೈಜ್ ಮಾಡಿ, MUX ಮತ್ತು CSCOPE ಬ್ಲಾಕ್ ಗಳನ್ನು ಸರಿಯಾಗಿ ಕನೆಕ್ಟ್ ಮಾಡುವೆನು. |
12:59 | scifunc ಬ್ಲಾಕ್ ನ ಲೋಯರ್ ಔಟ್ಪುಟ್ ಪೋರ್ಟ್ ಅನ್ನು, MUX ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ. |
13:07 | xcos ಫೈಲ್ ಅನ್ನು ಸೇವ್ ಮಾಡಲು, File ಅನ್ನು ಕ್ಲಿಕ್ ಮಾಡಿ ಮತ್ತುSave ಅನ್ನು ಆಯ್ಕೆ ಮಾಡಿಕೊಳ್ಳಿ. |
13:12 | squareit.sci ಫೈಲ್ ಓಪನ್ ಆಗಿರುವ ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. |
13:18 | ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ಅನ್ನು ಕ್ಲಿಕ್ ಮಾಡಿ. |
13:23 | ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು. |
13:26 | ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
13:30 | Xcos ವಿಂಡೋ ದ ಮೆನ್ಯುಬಾರ್ ನಲ್ಲಿರುವ Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
13:35 | ಒಂದು ಗ್ರಾಫಿಕ್ ವಿಂಡೋ ಕಾಣಿಸುವುದು. |
13:38 | ಈ ವಿಂಡೋ ಮೂರು ಪ್ಲಾಟ್ ಗಳನ್ನು ಹೊಂದಿರುವುದು. |
13:40 | ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ, |
13:43 | ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ, ಮತ್ತು |
13:45 | ಅಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್ ಕೆಂಪು ಬಣ್ಣದಲ್ಲಿದೆ. |
13:49 | ಗಮನಿಸಿ: ನಿರೀಕ್ಷಿಸಿದಂತೆ, ಫಂಕ್ಷನ್ ಇನ್ಪುಟ್ ಸೈನ್ ವೇವ್ ನ ಸ್ಕ್ವೇರ್ ಮಾಡಿ 1 ಯುನಿಟ್ ಆಫ್ಸೆಟ್ ಅನ್ನು ಷಿಫ್ಟ್ ಕೂಡ ಮಾಡಿದೆ. |
13:59 | ಮತ್ತು ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಅಂಪ್ಲಿಟ್ಯೂಡ್ ಅನ್ನು ಸಹ ಪಡೆದಿದ್ದೇವೆ. |
14:05 | plot window ವನ್ನು ಕ್ಲೋಸ್ ಮಾಡಿ. |
14:08 | ಸಂಕ್ಷಿಪ್ತವಾಗಿ, |
14:10 | ಈ ಟ್ಯುಟೋರಿಯಲ್ ನಲ್ಲಿ ನಾವು, |
14:12 | * ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು, |
14:15 | * Xcos ನಲ್ಲಿscifunc ಬ್ಲಾಕ್ ಅನ್ನು ಬಳಸುವುದು, |
14:19 | * ಮಲ್ಟಿಪಲ್ ಪ್ಲೋಟ್ ಗಳನ್ನು ಬರೆಯಲು MUX ಬ್ಲಾಕ್ ಅನ್ನು ಬಳಸುವುದು, |
14:22 | * ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ. |
14:26 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
14:29 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
14:33 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
14:37 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
14:40 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
14:43 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
14:47 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
14:53 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
14:57 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
15:05 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro. |
15:15 | ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. |
15:19 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |