Scilab/C4/Calling-User-Defined-Functions-in-XCOS/Kannada
From Script | Spoken-Tutorial
Time | Narration |
00:01 | ಸೈಲ್ಯಾಬ್ ನಲ್ಲಿ Calling user-defined functions in Xcos ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | ಸೈಲ್ಯಾಬ್ ನಲ್ಲಿ, ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವ ಫಂಕ್ಷನ್ (ಸ್ಕ್ವೇರಿಂಗ್ ಫಂಕ್ಷನ್) ಅನ್ನು ಬರೆಯುವುದು, |
00:12 | Xcos ನಲ್ಲಿ (ಎಕ್ಸ್ ಕಾಸ್) scifunc (ಸೈಫಂಕ್) ಬ್ಲಾಕ್ ಅನ್ನು ಬಳಸುವುದು, |
00:15 | ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಎಂಬ ಬ್ಲಾಕ್ ಅನ್ನು ಬಳಸುವುದು, |
00:19 | ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು. |
00:24 | ಇಲ್ಲಿ Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು, Scilab 5.3.3 ಆವೃತ್ತಿಯೊಂದಿಗೆ ಬಳಸಲಾಗಿದೆ. |
00:32 | ಇಲ್ಲಿ, ನೀವು ಸೈಲ್ಯಾಬ್ ನ ಬಗ್ಗೆ ಮತ್ತು |
00:35 | Xcos ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ. |
00:38 | ಇಲ್ಲವಾದಲ್ಲಿ, ಸೈಲ್ಯಾಬ್ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ.
spoken hyphen tutorial dot org |
00:44 | ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ. |
00:47 | 'ಸೈಲ್ಯಾಬ್ ಕನ್ಸೋಲ್' ನಲ್ಲಿ, editor ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
00:53 | ನಂತರ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ: |
00:55 | function, space, y is equal to, squareit, open bracket, a, close bracket. |
01:07 | Enter ಅನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ: |
01:10 | y is equal to, a raise to 2 |
01:14 | ಕೊನೆಯಲ್ಲಿ ಒಂದು ಸೆಮಿಕೋಲನ್ ಅನ್ನು ಸೇರಿಸಿ. |
01:17 | ಈ ಫಂಕ್ಷನ್, a ಎಂಬ ಒಂದು ಇನ್ಪುಟ್ ವೇರಿಯೇಬಲ್ ಅನ್ನು ಮತ್ತು y ಎಂಬ ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ. |
01:24 | ಈ ಫಂಕ್ಷನ್ ನ ಹೆಸರು squareit ಎಂದು ಇದೆ. |
01:27 | ಈ ಫಂಕ್ಷನ್, ವೇರಿಯೇಬಲ್ a ದ ವರ್ಗ (ಸ್ಕ್ವೇರ್) ವನ್ನು ಕಂಡುಹಿಡಿಯುತ್ತದೆ |
01:31 | ಮತ್ತು ಫಲಿತಾಂಶವನ್ನು y ನಲ್ಲಿ ಸ್ಟೋರ್ ಮಾಡುತ್ತದೆ. |
01:34 | ಈ ಫೈಲ್ ಅನ್ನು, ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ. |
01:38 | ನಾನು ಈ ಫೈಲ್ ಅನ್ನು, squareit (ಸ್ಕ್ವೇರಿಟ್) ಎಂಬ ಫೈಲ್ ನೇಮ್ ಮತ್ತು .sci ಎಕ್ಸ್ಟೆನ್ಷನ್ (“dot s c i” extension) ನೊಂದಿಗೆ ಸೇವ್ ಮಾಡುವೆನು. |
01:44 | ಇಲ್ಲಿ, ನಾವು ಫಂಕ್ಷನ್ ಗಳನ್ನು .sci(“dot s c i”) ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ರೂಢಿಯನ್ನು ಅನುಸರಿಸುತ್ತಿದ್ದೇವೆ. |
01:50 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
01:53 | ಈಗ, Xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
01:57 | Palette browser ಮತ್ತು Untitled Xcos ವಿಂಡೋ |
01:59 | ಎಂಬ ಎರಡು ವಿಂಡೋಗಳು ಓಪನ್ ಆಗುವವು. |
02:04 | ಈಗ ನಾವು Xcos ಡೈಗ್ರಾಮ್ ಅನ್ನು ರಚಿಸುವೆವು. |
02:06 | ಇದು, ಈಗಷ್ಟೇ ಕ್ರಿಯೇಟ್ ಮಾಡಿದ squareit (ಸ್ಕ್ವೇರಿಟ್) ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು. |
02:10 | scifunc (ಸೈಫಂಕ್) ಬ್ಲಾಕ್ ಅನ್ನು ಬಳಸಿ, ಇದನ್ನು ಮಾಡಬಹುದು. |
02:14 | Palette browser (ಪ್ಯಾಲೆಟ್ ಬ್ರೌಸರ್) ವಿಂಡೋಗೆ ಹಿಂದಿರುಗಿ. |
02:17 | ಪ್ಯಾಲೆಟ್ ಬ್ರೌಸರ್ ನಲ್ಲಿ, User-Defined Functions ನ ಮೇಲೆ ಕ್ಲಿಕ್ ಮಾಡಿ. |
02:21 | ಈ ವಿಭಾಗದಲ್ಲಿ, scifunc_block_m ಎಂಬ ಬ್ಲಾಕ್ ಅನ್ನು ಗುರುತಿಸಿ. |
02:27 | ಇದನ್ನು untitled Xcos ವಿಂಡೋದಲ್ಲಿ ಎಳೆದು ತನ್ನಿ (Drag and drop). |
02:32 | ಸರಿಯಾಗಿ ಕಾಣುವಂತೆ ಮಾಡಲು, ನಾನು untitled Xcos ವಿಂಡೋವನ್ನು ಝೂಮ್ ಮಾಡುವೆನು. |
02:36 | ಇದಕ್ಕಾಗಿ, ಇಲ್ಲಿ ಕಾಣುತ್ತಿರುವ Zoom ಬಟನ್ ಅನ್ನು ನಾನು ಬಳಸುವೆನು. |
02:40 | ಈಗ, scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
02:44 | Scilab Multiple Values Request (ಸೈಲ್ಯಾಬ್ ಮಲ್ಟಿಪಲ್ ವ್ಯಾಲ್ಯೂಸ್ ರಿಕ್ವೆಸ್ಟ್) ಎಂಬ ವಿಂಡೋ ತೆರೆದುಕೊಳ್ಳುವುದು. |
02:49 | ಈ ವಿಂಡೋ, scifunc ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಾಯಿಸಲು ನಿಮಗೆ ಅನುಮತಿಸುವುದು. |
02:56 | ನಮ್ಮ squareit ಫಂಕ್ಷನ್, ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಗಳನ್ನು ಮಾತ್ರ ಹೊಂದಿದೆ. |
03:00 | ಆದ್ದರಿಂದ, ನಾವು ಸೆಟ್ಟಿಂಗ್ ಗಳನ್ನು ಬದಲಾಯಿಸುವುದಿಲ್ಲ. |
03:03 | OK ಮೇಲೆ ಕ್ಲಿಕ್ ಮಾಡಿ. |
03:05 | ಒಂದು ಹೊಸ Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು. |
03:09 | ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ. |
03:14 | ಈ ಫಂಕ್ಷನ್ ಅನ್ನು scifunc ಬ್ಲಾಕ್ ಕಾಲ್ ಮಾಡುತ್ತದೆ. |
03:18 | ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ, |
03:20 | ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ. |
03:22 | ಹೀಗೆ ಟೈಪ್ ಮಾಡಿ: y1 equal to squareit open bracket u1 close the bracket |
03:31 | ಗಮನಿಸಿ: ಇಲ್ಲಿ u1 ಮತ್ತು y1 ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ. |
03:37 | ಇವುಗಳು u ಮತ್ತು y ರೂಪದಲ್ಲಿಯೇ ಇರಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ಗಳ ಹೆಸರು ಆಗಿರಬಾರದು. |
03:45 | OK ಯನ್ನು ಕ್ಲಿಕ್ ಮಾಡಿ. |
03:47 | ಇನ್ನೊಂದು Scilab Input Value Request (ಸೈಲ್ಯಾಬ್ ಇನ್ಪುಟ್ ವ್ಯಾಲ್ಯೂ ರಿಕ್ವೆಸ್ಟ್) ವಿಂಡೋ ಓಪನ್ ಆಗುವುದು. |
03:51 | ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ OK ಯನ್ನು ಒತ್ತುತ್ತಾ ಇರಿ. |
03:56 | ಈಗ scifunc ಬ್ಲಾಕ್ ಕಾನ್ಫಿಗರ್ ಆಗಿದೆ. |
04:00 | ನಂತರ, ನಾವು sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಸೇರಿಸುವೆವು. |
04:04 | Palette browser' ವಿಂಡೋದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ. |
04:08 | Sinusoid generator ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
04:14 | ನಿಮ್ಮ ಅನುಕೂಲಕ್ಕಾಗಿ, ಈ ಬ್ಲಾಕ್ ಅನ್ನು scifunc ಬ್ಲಾಕ್ ನ ಎಡಭಾಗದಲ್ಲಿಡಿ. |
04:20 | ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲಾಟ್ ಮಾಡಲು ಒಂದು ಬ್ಲಾಕ್ ಬೇಕು. |
04:23 | Palette browser ವಿಂಡೋ ದಲ್ಲಿ, Sinks ವಿಭಾಗದ ಮೇಲೆ ಕ್ಲಿಕ್ ಮಾಡಿ. |
04:29 | CScope ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
04:34 | ಈ ಬ್ಲಾಕ್ ಅನ್ನು, scifunc ಬ್ಲಾಕ್ ನ ಬಲಭಾಗದಲ್ಲಿ ಇರಿಸಿ. |
04:38 | ನಿಮ್ಮ ಅನುಕೂಲಕ್ಕಾಗಿ, ಇದನ್ನು scifunc ಬ್ಲಾಕ್ ನಿಂದ ಸ್ವಲ್ಪ ದೂರದಲ್ಲಿ ಇರಿಸಿ. |
04:43 | ಗಮನಿಸಿ: CScope ಬ್ಲಾಕ್, ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
04:47 | ಇದೊಂದು 'ಇವೆಂಟ್ ಇನ್ಪುಟ್' ಆಗಿದೆ. |
04:49 | ನಮಗೆ ಒಂದು 'ಇವೆಂಟ್ ಜನರೇಟರ್ ಬ್ಲಾಕ್' ಬೇಕು. |
04:52 | Palette browser window ದಲ್ಲಿ, Sources ವಿಭಾಗದ ಮೇಲೆ ಕ್ಲಿಕ್ ಮಾಡಿ. |
04:57 | CLOCK underscore c ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
05:05 | ಇದನ್ನು CScope ಬ್ಲಾಕ್ ನ ಮೇಲ್ಭಾಗದಲ್ಲಿಡಿ. |
05:08 | ಗಮನಿಸಿ: CScope ಬ್ಲಾಕ್, ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ. |
05:13 | ಆದರೆ, ನಮಗೆ ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ಪ್ಲಾಟ್ ವಿಂಡೋ ದಲ್ಲಿ, ಪ್ಲಾಟ್ ಮಾಡಬೇಕಾಗಿದೆ. |
05:18 | ಆದ್ದರಿಂದ ನಮಗೆ ಒಂದು multiplexer(ಮಲ್ಟಿಪ್ಲೆಕ್ಸರ್) ಬ್ಲಾಕ್ ಬೇಕು. |
05:22 | ಈ ಬ್ಲಾಕ್, ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಔಟ್ಪುಟ್ ಅನ್ನು ಒಂದು ಔಟ್ಪುಟ್ ಪೋರ್ಟ್ ನಲ್ಲಿ ಜನರೇಟ್ ಮಾಡುವುದು. |
05:28 | Palette browser window ದಲ್ಲಿ, Signal Routing ವಿಭಾಗದ ಮೇಲೆ ಕ್ಲಿಕ್ ಮಾಡಿ. |
05:33 | MUX ಬ್ಲಾಕ್ ಅನ್ನು, Untitled Xcos ವಿಂಡೋದಲ್ಲಿ ಎಳೆದು ತನ್ನಿ. |
05:39 | ಈ ಬ್ಲಾಕ್ ಅನ್ನು, scifunc ಬ್ಲಾಕ್ ಮತ್ತು CScope ಬ್ಲಾಕ್ ಗಳ ನಡುವೆ ಇರಿಸಿ. |
05:43 | ನಾನು Mux ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ. |
05:47 | ಈಗ ನಾವು ಈ ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸೋಣ. |
05:51 | Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, scifunc ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
05:57 | ಈಗ scifunc ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, MUX ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
06:04 | MUX ಬ್ಲಾಕ್ ನ 'ಔಟ್ಪುಟ್ ಪೋರ್ಟ್' ಅನ್ನು, CScope ಬ್ಲಾಕ್ ನ 'ಇನ್ಪುಟ್ ಪೋರ್ಟ್' ಗೆ ಜೋಡಿಸಿ. |
06:10 | CLOCK underscore c ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು, CScope ಬ್ಲಾಕ್ ನ 'ಇವೆಂಟ್ ಇನ್ಪುಟ್ ಪೋರ್ಟ್' ಗೆ ಜೋಡಿಸಿ. |
06:19 | ನಾವು sine ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು. |
06:22 | ನಾವು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಅನ್ನುMUX ಗೆ ಸೇರಿಸಬೇಕು. |
06:26 | MUX ಬ್ಲಾಕ್ ನ, ಮೇಲಿನ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ. |
06:30 | ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ಮತ್ತು scifunc ಬ್ಲಾಕ್ ಗಳ ನಡುವಿನ ಲಿಂಕ್ ನ ಹತ್ತಿರ ತನ್ನಿ. |
06:39 | ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಅಲ್ಲಲ್ಲಿ ಕ್ಲಿಕ್ ಮಾಡಿ. |
06:44 | ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ, ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ. |
06:49 | ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ. |
06:55 | ಈಗ ನಾವು ಇತರ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ. |
06:59 | ನಾವು ' ಸೈನ್ಯುಸೊಯಿಡ್ ಜನರೇಟರ್' ಬ್ಲಾಕ್ ನ, 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಜ್' ಗಳನ್ನು ಬದಲಾಯಿಸಬಹುದು. |
07:04 | ಇದನ್ನು ಮಾಡಲು, Sinusoid generator (ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
07:09 | ಕಾನ್ಫಿಗರೇಷನ್ ವಿಂಡೋ ತೆರೆದುಕೊಳ್ಳುವುದು. |
07:11 | ನಾವು, Magnitude ಮತ್ತು Frequency ಅನ್ನು 1 ಮತ್ತು Phase ಅನ್ನು 0 ಆಗಿ ಇಡುವೆವು. |
07:18 | 'ಕಾನ್ಫಿಗರೇಷನ್ ವಿಂಡೋ' ವನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ. |
07:21 | ಈಗ ನಾವು CScope ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ. |
07:25 | CScope ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
07:30 | Ymin ಪ್ಯಾರಾಮೀಟರ್ ಅನ್ನು 'ಮೈನಸ್ 2' ಎಂದು ಮತ್ತು Ymax ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ. |
07:37 | Refresh period ವ್ಯಾಲ್ಯುವನ್ನು 10 ಎಂದು ಬದಲಿಸಿ. |
07:41 | ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ. |
07:44 | Buffer size ವ್ಯಾಲ್ಯುವನ್ನು 2 ಎಂದು ಬದಲಿಸಿ. |
07:47 | OK ಯನ್ನು ಕ್ಲಿಕ್ ಮಾಡಿ. |
07:50 | ಈಗ ನಾವು CLOCK_c ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ. |
07:54 | ಬ್ಲಾಕ್ ನ ಕಾನ್ಫಿಗರೇಷನ್ ವಿಂಡೋ ವನ್ನು ತೆರೆಯಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
07:58 | Period ನ ವ್ಯಾಲ್ಯುವನ್ನು 0.1 ಎಂದು ಇಡಿ. |
08:02 | Initialisation Time ಅನ್ನು 0 ಎಂದು ಬದಲಿಸಿ. |
08:06 | OK ಯನ್ನು ಕ್ಲಿಕ್ ಮಾಡಿ. |
08:08 | ಈಗ Simulation ನ ಪ್ಯಾರಾಮೀಟರ್ ಗಳನ್ನು ಬದಲಿಸೋಣ. |
08:12 | Untitled Xcos ವಿಂಡೋ ದ ಮೆನ್ಯುಬಾರ್ ನಲ್ಲಿ, Simulation ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
08:17 | ಈಗ, ಡ್ರಾಪ್-ಡೌನ್ ಮೆನ್ಯುವಿನಲ್ಲಿ Setup ಮೇಲೆ ಕ್ಲಿಕ್ ಮಾಡಿ. |
08:22 | Final Integration time ಅನ್ನು, CScope ಬ್ಲಾಕ್ ನ Refresh period ಗೆ ಹೊಂದುವಂತೆ ಬದಲಾಯಿಸಿ. |
08:28 | Refresh period ನ ವ್ಯಾಲ್ಯು 10 ಆಗಿತ್ತು. |
08:32 | ಆದ್ದರಿಂದ, Final integration time ನ ವ್ಯಾಲ್ಯುವನ್ನು 10 ಎಂದು ಇಡಿ. |
08:36 | OK ಯನ್ನು ಕ್ಲಿಕ್ ಮಾಡಿ. |
08:38 | ಈಗ , Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ಕ್ರಮವಾಗಿ File ಮತ್ತು Save ಗಳ ಮೇಲೆ ಕ್ಲಿಕ್ ಮಾಡಿ. |
08:44 | Xcos ಡೈಗ್ರಾಮ್ ಅನ್ನು ಸೇವ್ ಮಾಡಲು, ನಿಮಗೆ ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ. |
08:48 | ಆದಾಗ್ಯೂ, squareit.sci ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಇದನ್ನು ಸೇವ್ ಮಾಡುವುದು ಉತ್ತಮ. |
08:56 | OK ಯ ಮೇಲೆ ಕ್ಲಿಕ್ ಮಾಡಿ. |
08:58 | scifunc ಬ್ಲಾಕ್, squareit ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ ಎಂಬುದನ್ನು ಗಮನಿಸಿ. |
09:02 | ಎಂದರೆ, ನಾವು Xcos diagram ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, squareit ಫಂಕ್ಷನ್ ಅನ್ನು ಲೋಡ್ ಮಾಡಬೇಕು. |
09:09 | 'ಸೈಲ್ಯಾಬ್ ಎಡಿಟರ್' ವಿಂಡೋಗೆ ಹಿಂದಿರುಗಿ. ಇದರಲ್ಲಿ squareit.sci ಫೈಲ್ ಓಪನ್ ಆಗಿದೆ. |
09:16 | ಎಡಿಟರ್ ನ ಮೆನ್ಯುಬಾರ್ ನಲ್ಲಿ ಲಭ್ಯವಿರುವ Execute ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:21 | ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು. |
09:24 | ಈಗ ನಾವು Xcos ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
09:28 | Xcos diagram ಫೈಲ್ ಅನ್ನು ಓಪನ್ ಮಾಡಿ. |
09:31 | Xcos ವಿಂಡೋದ ಮೆನ್ಯುಬಾರ್ ನಲ್ಲಿ ಲಭ್ಯವಿರುವ, Start ಬಟನ್ ಮೇಲೆ ಕ್ಲಿಕ್ ಮಾಡಿ. |
09:37 | ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು. |
09:39 | ಈ ವಿಂಡೋ, ಎರಡು ಪ್ಲಾಟ್ ಗಳನ್ನು ಹೊಂದಿರುವುದು. |
09:42 | ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ. |
09:47 | ಗಮನಿಸಿ: squareit ಫಂಕ್ಷನ್ ನಲ್ಲಿ ಕಾರ್ಯಗತ ಮಾಡಲಾದ (ಇಂಪ್ಲಿಮೆಂಟ್) ಸ್ಕ್ವೇರಿಂಗ್ ಫಂಕ್ಷನ್, ನಿಜವಾಗಿಯೂ ಇನ್ಪುಟ್ ಸೈನ್ ವೇವ್ ನ ವರ್ಗವನ್ನು (ಸ್ಕ್ವೇರ್) ಮಾಡಿರುತ್ತದೆ. |
09:55 | ಹಾಗಾಗಿ, ಔಟ್ಪುಟ್ ಸೈನ್ ವೇವ್, ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲ್ಪಟ್ಟಿದೆ. |
10:00 | plot ವಿಂಡೋ ವನ್ನು ಕ್ಲೋಸ್ ಮಾಡಿ. |
10:02 | ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು scifunc ಬ್ಲಾಕ್ ಅನ್ನು ಹೇಗೆ ಎಡಿಟ್ ಮಾಡಬೇಕು ಎಂದು ನಾವು ನೋಡೋಣ. |
10:10 | 'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ. |
10:13 | ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ squareit ಫಂಕ್ಷನ್ ಅನ್ನು ಎಡಿಟ್ ಮಾಡಿ. |
10:19 | ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: open square bracket y comma z close the square bracket . |
10:28 | ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket a comma b close bracket. |
10:36 | ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ನಿಂದ ವರ್ಗಾಯಿಸುವಂತೆ ನಾವು ಫಂಕ್ಷನ್ ಅನ್ನು ಬದಲಾಯಿಸುವೆವು. |
10:41 | ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ: |
10:44 | y is equal to b plus a raised to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ. |
10:51 | ಅಲ್ಲದೆ, ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಅನ್ನು ಹೊಂದಿರುವ ಒಂದು ಔಟ್ಪುಟ್ ಅನ್ನು ಜನರೇಟ್ ಮಾಡಿ. |
10:56 | Enter ಕೀಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಮತ್ತು ಹೀಗೆ ಟೈಪ್ ಮಾಡಿ: |
11:01 | z is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಸೇರಿಸಿ. |
11:10 | ಈಗ ಫೈಲ್ ಅನ್ನು ಸೇವ್ ಮಾಡಿ. |
11:12 | Xcos ವಿಂಡೋ ಗೆ ಹಿಂದಿರುಗಿ. |
11:15 | scifunc ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
11:19 | input ports sizes ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ, ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ. |
11:27 | ಇದೇ ರೀತಿ, output port size ಫೀಲ್ಡ್ ನಲ್ಲಿ, 1 ಕಾಮಾ 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತೊಮ್ಮೆ 1 ಕಾಮಾ 1 ಎಂದು ಟೈಪ್ ಮಾಡಿ. |
11:36 | OK ಯನ್ನು ಒತ್ತಿ. |
11:38 | ಒಂದು ಹೊಸ Scilab Input Value Request ವಿಂಡೋ ತೆರೆದುಕೊಳ್ಳುವುದು. |
11:41 | ಟೆಕ್ಸ್ಟ್ ಬಾಕ್ಸ್ ನಲ್ಲಿ, |
11:43 | y1 ಆದ ನಂತರ ಒಂದು ಕಾಮಾವನ್ನು (comma) ಹಾಕಿ ಮತ್ತು y2 ಎಂದು ಟೈಪ್ ಮಾಡಿ, |
11:48 | y1 ಮತ್ತು y2 ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ. |
11:52 | ಈಗ u1 ನ ನಂತರ ಒಂದು ಕಾಮಾವನ್ನು ಹಾಕಿ ಮತ್ತು u2 ಎಂದು ಟೈಪ್ ಮಾಡಿ. |
11:57 | OK ಯನ್ನು ಕ್ಲಿಕ್ ಮಾಡಿ. |
11:59 | ಇನ್ನೊಂದು Scilab Input Value Request ವಿಂಡೋ ತೆರೆದುಕೊಳ್ಳುವುದು. |
12:03 | ಇನ್ನುಮುಂದೆ ಕಾಣಿಸಿಕೊಳ್ಳುವ ಮೂರು ವಿಂಡೋ ಗಳಲ್ಲಿ, OK ಯನ್ನು ಕ್ಲಿಕ್ ಮಾಡುತ್ತಾ ಇರಿ. |
12:08 | scifunc ಬ್ಲಾಕ್ ಅನ್ನು ಈಗ ಕಾನ್ಫಿಗರ್ ಮಾಡಲಾಗಿದೆ. |
12:11 | scifunc ಬ್ಲಾಕ್ ಅನ್ನು ನಾನು ಮತ್ತೆ ಸಾಲುಗೂಡಿಸುತ್ತೇನೆ (ಅಲೈನ್). |
12:14 | Palette browser ವಿಂಡೋ ಗೆ ಹಿಂದಿರುಗಿ. |
12:17 | Sources ವಿಭಾಗದಲ್ಲಿರುವ Constant underscore m ಬ್ಲಾಕ್ ಅನ್ನು, Xcos ವಿಂಡೋ ದಲ್ಲಿ ಎಳೆದು ತನ್ನಿ. |
12:24 | ಇದನ್ನು Sinusoid generator(ಸೈನ್ಯುಸೊಯಿಡ್ ಜನರೇಟರ್) ಬ್ಲಾಕ್ ನ ಕೆಳಗೆ ಇರಿಸಿ. |
12:28 | Constant underscore m ಬ್ಲಾಕ್ ಅನ್ನು, scifunc ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಜೋಡಿಸಿ. |
12:36 | ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು, 1 ಆಗಿದೆ. |
12:39 | ಅದನ್ನು ಹಾಗೇ ಇಡಿ. |
12:41 | MUX ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
12:44 | input port size ಅನ್ನು 3 ಎಂದು ಬದಲಾಯಿಸಿ. |
12:47 | OK ಯ ಮೇಲೆ ಕ್ಲಿಕ್ ಮಾಡಿ. |
12:48 | ನಾನು MUX ಬ್ಲಾಕ್ಅನ್ನು ರಿಸೈಜ್ ಮಾಡುತ್ತೇನೆ ಮತ್ತು MUX ಹಾಗೂ CSCOPE ಬ್ಲಾಕ್ ಗಳನ್ನು ಸರಿಯಾಗಿ ಜೋಡಿಸುವೆನು. |
12:59 | scifunc ಬ್ಲಾಕ್ ನ, ಕೆಳಗಿನ ಔಟ್ಪುಟ್ ಪೋರ್ಟ್ ಅನ್ನು MUX ಬ್ಲಾಕ್ ನ ಕೆಳಗಿನ ಇನ್ಪುಟ್ ಪೋರ್ಟ್ ಗೆ ಸೇರಿಸಿ. |
13:07 | xcos ಫೈಲ್ ಅನ್ನು ಸೇವ್ ಮಾಡಲು, File ಮೇಲೆ ಕ್ಲಿಕ್ ಮಾಡಿ ಮತ್ತುSave ಅನ್ನು ಆಯ್ಕೆಮಾಡಿ. |
13:12 | ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ. ಇಲ್ಲಿ squareit.sci ಫೈಲ್ ಓಪನ್ ಆಗಿದೆ. |
13:18 | ಎಡಿಟರ್ ನ ಮೆನ್ಯುಬಾರ್ ನಲ್ಲಿರುವ Execute ಬಟನ್ ಅನ್ನು ಕ್ಲಿಕ್ ಮಾಡಿ. |
13:23 | ಇದು squareit ಫಂಕ್ಷನ್ ಅನ್ನು ಲೋಡ್ ಮಾಡುವುದು. |
13:26 | ಈಗ ನಾವು Xcos ಡೈಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು. |
13:30 | Xcos ವಿಂಡೋದ ಮೆನ್ಯುಬಾರ್ ನಲ್ಲಿರುವ Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
13:35 | ಒಂದು ಗ್ರಾಫಿಕ್ ವಿಂಡೋ ಕಾಣಿಸಿಕೊಳ್ಳುವುದು. |
13:38 | ಈ ವಿಂಡೋ, ಮೂರು ಪ್ಲಾಟ್ ಗಳನ್ನು ಹೊಂದಿರುವುದು. |
13:40 | ಇನ್ಪುಟ್ sine wave ಕಪ್ಪು ಬಣ್ಣದಲ್ಲಿದೆ, |
13:43 | ಔಟ್ಪುಟ್ sine wave ಹಸಿರು ಬಣ್ಣದಲ್ಲಿದೆ ಮತ್ತು |
13:45 | ಆಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್, ಕೆಂಪು ಬಣ್ಣದಲ್ಲಿದೆ. |
13:49 | ಗಮನಿಸಿ: ನಿರೀಕ್ಷಿಸಿದಂತೆ, ಈ ಫಂಕ್ಷನ್, ಇನ್ಪುಟ್ ಸೈನ್ ವೇವ್ ನ ವರ್ಗವನ್ನು ಮಾಡಿದೆ ಮತ್ತು ಅದನ್ನು 1 ಯುನಿಟ್ ಆಫ್ಸೆಟ್ ನಿಂದ ಸ್ಥಳಾಂತರ ಕೂಡ ಮಾಡಿದೆ. |
13:59 | ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಆಂಪ್ಲಿಟ್ಯೂಡ್ ಅನ್ನು ಸಹ ಪಡೆಯುತ್ತೇವೆ. |
14:05 | ಪ್ಲಾಟ್ ವಿಂಡೋವನ್ನು ಕ್ಲೋಸ್ ಮಾಡಿ. |
14:08 | ಸಂಕ್ಷಿಪ್ತವಾಗಿ, |
14:10 | ಈ ಟ್ಯುಟೋರಿಯಲ್ ನಲ್ಲಿ ನಾವು, |
14:12 | ಸೈಲ್ಯಾಬ್ ನಲ್ಲಿ, ಒಂದು ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು, |
14:15 | Xcos ನಲ್ಲಿ, scifunc ಬ್ಲಾಕ್ ಅನ್ನು ಬಳಸುವುದು, |
14:19 | ಅನೇಕ ಪ್ಲಾಟ್ ಗಳನ್ನು ರಚಿಸಲು, MUX ಬ್ಲಾಕ್ ಅನ್ನು ಬಳಸುವುದು, |
14:22 | ಅನೇಕ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ. |
14:26 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
14:29 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
14:33 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
14:37 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
14:40 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
14:43 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
14:47 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
14:53 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
14:57 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
15:05 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
15:15 | ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. |
15:19 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |